Linux/C2/Ubuntu-Desktop-16.04/Kannada
Time | Narration |
00:01 | Ubuntu Linux Desktop 16.04 ಎಂಬ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:09 | ಈ ಟ್ಯುಟೋರಿಯಲ್ ನಲ್ಲಿ, ನಾವು gnome environment ನಲ್ಲಿ (ಜಿನೋಮ್ ಎನ್ವಿರಾನ್ಮೆಂಟ್) ಉಬಂಟು ಲಿನಕ್ಸ್ ಡೆಸ್ಕ್-ಟಾಪ್ ಹಾಗೂ |
00:17 | ಉಬಂಟು ಡೆಸ್ಕ್ಟಾಪ್ ಮೇಲಿರುವ ಕೆಲವು ಸಾಮಾನ್ಯ ಅಪ್ಲಿಕೇಶನ್ ಗಳ ಬಗ್ಗೆ ಕಲಿಯುವೆವು. |
00:22 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು Ubuntu Linux 16.04 O S ಅನ್ನು ಬಳಸುತ್ತಿದ್ದೇನೆ. |
00:29 | ಉಬಂಟು ಡೆಸ್ಕ್ಟಾಪ್ ಹೀಗೆ ಕಾಣುತ್ತದೆ. |
00:33 | ಸ್ಕ್ರೀನ್ ನ ಎಡಭಾಗದಲ್ಲಿ ನೀವು 'ಲಾಂಚರ್' ಅನ್ನು ನೋಡುತ್ತೀರಿ. |
00:37 | ನಾವು ಈ 'ಲಾಂಚರ್' ಅನ್ನು ಹೇಗೆ ಮರೆಮಾಡಬಹುದು? |
00:40 | ಇದನ್ನು ಮಾಡಲು, ಎಡಭಾಗದಲ್ಲಿರುವ 'ಲಾಂಚರ್' ಗೆ ಹೋಗಿ.
System Settings ಐಕಾನ್ ಮೇಲೆ ಕ್ಲಿಕ್ ಮಾಡಿ. |
00:47 | System Settings ವಿಂಡೋದಲ್ಲಿ, Appearance ಮೇಲೆ ಕ್ಲಿಕ್ ಮಾಡಿ. |
00:51 | Appearance ವಿಂಡೋದಲ್ಲಿ, Behavior ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
00:56 | ಇಲ್ಲಿ, Auto-hide the Launcher ಅನ್ನು ON ಗೆ ಬದಲಾಯಿಸಿ. |
01:01 | ಈಗ 'ಲಾಂಚರ್' ಅನ್ನು ಅಡಗಿಸಲಾಗುತ್ತದೆ. |
01:04 | ಇಲ್ಲಿ ತೋರಿಸಿದಂತೆ 'ಲಾಂಚರ್' ಅನ್ನು ಮರೆಮಾಡಿದ್ದರೆ, ಅದನ್ನು ಮತ್ತೆ ಕಾಣುವಂತೆ ಮಾಡಬಹುದು. |
01:10 | ಹಾಗೆ ಮಾಡಲು, ಕರ್ಸರ್ ಅನ್ನು ಸ್ಕ್ರೀನ್ ನ ಎಡತುದಿಗೆ ಸರಿಸಿ. |
01:15 | 'ಲಾಂಚರ್' ಗೋಚರಿಸುತ್ತದೆ. |
01:18 | ಕರ್ಸರ್ ಅನ್ನು ದೂರ ಸರಿಸಿದಾಗ 'ಲಾಂಚರ್' ಮತ್ತೆ ಮರೆಯಾಗುತ್ತದೆ. |
01:23 | Appearance ವಿಂಡೋಗೆ ಹಿಂದಿರುಗಿ. Auto-hide the Launcher ಅನ್ನು OFF ಗೆ ಬದಲಾಯಿಸಿ. |
01:30 | ವಿಂಡೋದ ಮೇಲಿನ ಎಡಭಾಗದಲ್ಲಿರುವ ಸಣ್ಣ X ಐಕಾನ್ ಅನ್ನು ಕ್ಲಿಕ್ ಮಾಡಿ, ಈ ವಿಂಡೋವನ್ನು ಮುಚ್ಚಿ. |
01:37 | ಗಮನಿಸಿ, ಡೀಫಾಲ್ಟ್ ಆಗಿ 'ಲಾಂಚರ್' ನಲ್ಲಿ ಕೆಲವು ಐಕಾನ್‌ಗಳಿವೆ. |
01:42 | 'ಲಾಂಚರ್' ನ ಮೇಲ್ತುದಿಯಲ್ಲಿ, Dash home ಐಕಾನ್ ಅನ್ನು ನೀವು ನೋಡಬಹುದು. |
01:47 | Dash home ಒಂದು ಇಂಟರ್ಫೇಸ್ ಆಗಿದೆ. ಇದು ಒಂದು ಸ್ಕ್ರೀನ್ ನಲ್ಲಿ, ಉಬಂಟು ಲಿನಕ್ಸ್ ನಲ್ಲಿ ಎಲ್ಲ ಅಪ್ಲಿಕೇಶನ್ ಗಳಿಗೆ ಆಕ್ಸೆಸ್ ಅನ್ನು ಕೊಡುತ್ತದೆ. |
01:55 | Dash home ಅನ್ನು ತೆರೆಯಲು, ಅದರ ಮೇಲೆ ಕ್ಲಿಕ್ ಮಾಡಿ. |
01:59 | ಮೇಲ್ಭಾಗದಲ್ಲಿ ಪ್ರಮುಖವಾಗಿ ನೀವು 'ಸರ್ಚ್ ಬಾರ್' ಫೀಲ್ಡ್ ಅನ್ನು ನೋಡುತ್ತೀರಿ. |
02:04 | ಒಂದು ನಿರ್ದಿಷ್ಟ ಅಪ್ಲಿಕೇಶನ್ ಅನ್ನು ಗುರುತಿಸುವುದು ಹೇಗೆ? ನೀವು ಹುಡುಕುತ್ತಿರುವ ಅಪ್ಲಿಕೇಶನ್ ನ ಹೆಸರನ್ನು ಟೈಪ್ ಮಾಡಿ. ತಕ್ಷಣ ಅದನ್ನು ನೋಡುವಿರಿ.
ಇದು ಅಷ್ಟು ಸುಲಭವಾಗಿದೆ! |
02:16 | ನಾವು Calculator ಎಂಬ ಅಪ್ಲಿಕೇಶನ್ ಅನ್ನು ಹುಡುಕಲು ಪ್ರಯತ್ನಿಸೋಣ. |
02:20 | ಆದ್ದರಿಂದ, 'ಸರ್ಚ್ ಬಾರ್' ಫೀಲ್ಡ್ ನಲ್ಲಿ, C a l c (ಸಿ ಎ ಎಲ್ ಸಿ) ಎಂದು ಟೈಪ್ ಮಾಡಿ. |
02:26 | ತಮ್ಮ ಹೆಸರಿನಲ್ಲಿ c a l c ಯನ್ನು ಹೊಂದಿರುವ ಎಲ್ಲಾ ಅಪ್ಲಿಕೇಶನ್‌ಗಳನ್ನು ಪಟ್ಟಿ ಮಾಡಲಾಗುವುದು. |
02:32 | ಇಲ್ಲಿ ಗಮನಿಸಿ - LibreOffice Calc ಹಾಗೂ Calculator ಈ ಎರಡೂ ಲಿಸ್ಟ್ ನಲ್ಲಿವೆ. |
02:37 | Calculator ಐಕಾನ್ ಮೇಲೆ ಕ್ಲಿಕ್ ಮಾಡಿ.
ಈಗ Calculator ಅಪ್ಲಿಕೇಶನ್, ಸ್ಕ್ರೀನ್ ಮೇಲೆ ತೆರೆದುಕೊಳ್ಳುತ್ತದೆ. |
02:45 | ಅಂಕಗಣಿತ, ವೈಜ್ಞಾನಿಕ ಅಥವಾ ಆರ್ಥಿಕ ಲೆಕ್ಕಾಚಾರಗಳನ್ನು ಮಾಡಲು ಕ್ಯಾಲ್ಕ್ಯುಲೇಟರ್ ಸಹಾಯ ಮಾಡುತ್ತದೆ. |
02:52 | ನಾವು ಕೆಲವು ಸರಳವಾದ ಲೆಕ್ಕಗಳನ್ನು ಪ್ರಯತ್ನಿಸೋಣ. |
02:55 | 5 asterisk 8 ಎಂದು ಟೈಪ್ ಮಾಡಿ ಮತ್ತು ಸಮಾನಾರ್ಥಕ ಚಿಹ್ನೆಯ (=) ಮೇಲೆ ಕ್ಲಿಕ್ ಮಾಡಿ. Enter ಅನ್ನು ಒತ್ತಿ. |
03:02 | ಸಮಾನಾರ್ಥಕ ಚಿಹ್ನೆಯ (=) ಮೇಲೆ ಕ್ಲಿಕ್ ಮಾಡುವ ಬದಲು, ನೀವು ಕೀಬೋರ್ಡ್‌ನಲ್ಲಿ Enter ಕೀಯನ್ನು ಸಹ ಒತ್ತಬಹುದು. |
03:09 | ಉತ್ತರವನ್ನು 'ಕ್ಯಾಲ್ಕ್ಯುಲೇಟರ್' ನಲ್ಲಿ ಪ್ರದರ್ಶಿಸಲಾಗುತ್ತದೆ. |
03:13 | ಹೀಗೆಯೇ, ನಾವು Calculator ಅಪ್ಲಿಕೇಶನ್ ಅನ್ನು ಬಳಸಿಕೊಂಡು, ಎಲ್ಲಾ ರೀತಿಯ ಲೆಕ್ಕಾಚಾರಗಳನ್ನು ಮಾಡಬಹುದು. |
03:20 | ಈಗ ವಿಂಡೋದ ಮೇಲಿನ ಎಡಭಾಗದಲ್ಲಿರುವ ಸಣ್ಣ X ಐಕಾನ್ ಅನ್ನು ಕ್ಲಿಕ್ ಮಾಡಿ, ಈ Calculator ನಿಂದ ಹೊರಗೆ ಬನ್ನಿ (exit). |
03:28 | Ubuntu Linux OS ನಲ್ಲಿಯ ಕೆಲವು ಪ್ರಮುಖ ಅಪ್ಲಿಕೇಶನ್‌ಗಳ ಪರಿಚಯ ಮಾಡಿಕೊಳ್ಳೋಣ. |
03:34 | ಅದಕ್ಕಾಗಿ, ಮತ್ತೆ Dash home ಗೆ ಹೋಗುವೆವು. |
03:38 | 'ಸರ್ಚ್ ಬಾರ್' ನಲ್ಲಿ, gedit ಎಂದು ಟೈಪ್ ಮಾಡೋಣ. Ubuntu Linux OS ನಲ್ಲಿ, gedit ಡೀಫಾಲ್ಟ್ ಟೆಕ್ಸ್ಟ್-ಎಡಿಟರ್ ಆಗಿದೆ. |
03:48 | Text Editor ಐಕಾನ್, ಕೆಳಗೆ ಗೋಚರಿಸುತ್ತದೆ. ಅದನ್ನು ತೆರೆಯಲು, ಅದರ ಮೇಲೆ ಕ್ಲಿಕ್ ಮಾಡಿ. |
03:55 | ಸ್ಕ್ರೀನ್ ಮೇಲೆ ಈಗ ನೀವು ನೋಡುತ್ತಿರುವುದು gedit Text Editor ವಿಂಡೋ ಆಗಿದೆ. |
04:00 | ನಾನು ಸ್ವಲ್ಪ ಟೆಕ್ಸ್ಟ್ ಅನ್ನು ಇಲ್ಲಿ ಟೈಪ್ ಮಾಡುತ್ತೇನೆ.
ಉದಾಹರಣೆಗೆ, Hello World ಎಂದು ಟೈಪ್ ಮಾಡಿ. |
04:07 | ಫೈಲ್ ಅನ್ನು ಸೇವ್ ಮಾಡಲು, ಕೀಬೋರ್ಡ್ ಮೇಲೆ Ctrl ಹಾಗೂ S ಕೀಗಳನ್ನು ಒಟ್ಟಿಗೇ ಒತ್ತಿ. |
04:14 | ಪರ್ಯಾಯವಾಗಿ, ನಾವು File ಮೇಲೆ, ನಂತರ Save ಮೇಲೆ ಕ್ಲಿಕ್ ಮಾಡಬಹುದು. |
04:20 | ಈಗ, “Save as” ಎಂಬ ಒಂದು ಡೈಲಾಗ್-ಬಾಕ್ಸ್ ತೆರೆದುಕೊಳ್ಳುತ್ತದೆ.
ಅದು, filename ಹಾಗೂ ಈ ಫೈಲ್ ಅನ್ನು ಎಲ್ಲಿ ಸೇವ್ ಮಾಡಬೇಕೆಂದು (location) ಕೇಳುತ್ತದೆ. |
04:31 | ನಾವು filename ಅನ್ನು "Hello.txt" ಎಂದು ಟೈಪ್ ಮಾಡೋಣ. |
04:36 | .txt ಇದು text file ನ ಡೀಫಾಲ್ಟ್ ಎಕ್ಸ್ಟೆನ್ಶನ್ (extension) ಆಗಿದೆ. |
04:41 | ಲೊಕೇಷನ್ ಗಾಗಿ, ನಾವು Desktop ಅನ್ನು ಆಯ್ಕೆ ಮಾಡೋಣ. ಕೆಳಗೆ Save ಬಟನ್ ಮೇಲೆ ಕ್ಲಿಕ್ ಮಾಡಿ. |
04:49 | ಈಗ ವಿಂಡೋದ ಮೇಲಿನ ಎಡಭಾಗದಲ್ಲಿರುವ ಸಣ್ಣ X ಐಕಾನ್ ಅನ್ನು ಕ್ಲಿಕ್ ಮಾಡಿ, ಈ gedit ವಿಂಡೋವನ್ನು ನಾವು ಮುಚ್ಚೋಣ. |
04:57 | Desktop ಮೇಲೆ, ನಾವು Hello.txt ಫೈಲ್ ಅನ್ನು ನೋಡಬಹುದು.
ಇದರ ಅರ್ಥ, ನಮ್ಮ ಟೆಕ್ಸ್ಟ್-ಫೈಲ್ ಅನ್ನು ಯಶಸ್ವಿಯಾಗಿ ಸೇವ್ ಮಾಡಲಾಗಿದೆ. |
05:05 | ಈ ಫೈಲ್ ಮೇಲೆ ಡಬಲ್- ಕ್ಲಿಕ್ ಮಾಡಿ ನಾನು ಅದನ್ನು ತೆರೆಯುತ್ತೇನೆ. |
05:09 | ಇಲ್ಲಿ ನೋಡಿ, ನಾವು ಬರೆದ ಟೆಕ್ಸ್ಟ್ ನೊಂದಿಗೆ ನಮ್ಮ ಟೆಕ್ಸ್ಟ್-ಫೈಲ್ ತೆರೆದಿದೆ. |
05:14 | gedit Text Editor ಬಗ್ಗೆ ಇಂಟರ್ನೆಟ್ ಬಹಳಷ್ಟು ಮಾಹಿತಿಯನ್ನು ಹೊಂದಿದೆ. |
05:19 | ಈ ವೆಬ್‌ಸೈಟ್‌ನಲ್ಲಿ, ಈ ವಿಷಯದ ಬಗ್ಗೆ ಸಹ ಕೆಲವು ಸ್ಪೋಕನ್ ಟ್ಯುಟೋರಿಯಲ್ ಗಳು ಲಭ್ಯವಿದೆ. |
05:25 | ಈ ಟೆಕ್ಸ್ಟ್-ಎಡಿಟರ್ ಅನ್ನು ಮುಚ್ಚೋಣ ಮತ್ತು ಇನ್ನೊಂದು ಅಪ್ಲಿಕೇಶನ್, ಎಂದರೆ Terminal ಅನ್ನು ನೋಡೋಣ. |
05:32 | ಇದಕ್ಕಾಗಿ ನಾವು ಮತ್ತೊಮ್ಮೆ Dash home ಗೆ ಹೋಗೋಣ.
ಈಗ, 'ಸರ್ಚ್ ಬಾರ್' ಫೀಲ್ಡ್ ನಲ್ಲಿ terminal ಎಂದು ಟೈಪ್ ಮಾಡಿ. |
05:41 | ಕೆಳಗೆ ಕಾಣಿಸುವ Terminal ಐಕಾನ್ ಮೇಲೆ ಕ್ಲಿಕ್ ಮಾಡಿ. |
05:45 | Terminal ವಿಂಡೋ ಸ್ಕ್ರೀನ್ ಮೇಲೆ ತೆರೆದುಕೊಳ್ಳುತ್ತದೆ.
ದಯವಿಟ್ಟು ಗಮನಿಸಿ: Terminal ಅನ್ನು ತೆರೆಯಲು, Ctrl+Alt+T ಶಾರ್ಟ್ಕಟ್ ಕೀಗಳಾಗಿವೆ. |
05:55 | 'ಟರ್ಮಿನಲ್' ಅನ್ನು 'ಕಮಾಂಡ್ ಲೈನ್' ಎಂದು ಸಹ ಕರೆಯಲಾಗುತ್ತದೆ.
ಏಕೆಂದರೆ, ನೀವು ಇಲ್ಲಿಂದ ಕಂಪ್ಯೂಟರ್‌ಗೆ ಆದೇಶ ನೀಡಬಹುದು. |
06:02 | ವಾಸ್ತವವಾಗಿ, ಇದು GUI ಗಿಂತ ಹೆಚ್ಚು ಶಕ್ತಿಶಾಲಿಯಾಗಿದೆ. |
06:06 | ನಾನು ಮತ್ತೆ 'ಟರ್ಮಿನಲ್' ವಿಂಡೋಗೆ ಬದಲಾಯಿಸುತ್ತೇನೆ. |
06:09 | ಟರ್ಮಿನಲ್ ನ ಅನುಭವವನ್ನು ಪಡೆಯಲು, ಈಗ ನಾವು ಒಂದು ಸರಳವಾದ ಕಮಾಂಡ್ ಅನ್ನು ಟೈಪ್ ಮಾಡೋಣ.
'ls' ಎಂದು ಟೈಪ್ ಮಾಡಿ, Enter ಅನ್ನು ಒತ್ತಿ. |
06:18 | current directory ಯಲ್ಲಿಯ ಎಲ್ಲಾ ಫೈಲ್ ಗಳು ಮತ್ತು ಫೋಲ್ಡರ್ ಗಳ ಒಂದು ಲಿಸ್ಟ್ ಅನ್ನು ನೀವು ನೋಡಬಹುದು. |
06:23 | ಇಲ್ಲಿ, ಇದು Home folder ನಲ್ಲಿಯ ಫೈಲ್ ಗಳು ಮತ್ತು ಫೋಲ್ಡರ್ ಗಳನ್ನು ತೋರಿಸುತ್ತಿದೆ. |
06:28 | Home ಫೋಲ್ಡರ್ ಎಂದರೇನು? ಇದನ್ನು ನಾವು ಈ ಟ್ಯುಟೋರಿಯಲ್ ನಲ್ಲಿ ನಂತರ ನೋಡುತ್ತೇವೆ. |
06:33 | 'ಟರ್ಮಿನಲ್' ನೊಂದಿಗೆ ನಾವು ಇನ್ನು ಹೆಚ್ಚು ಸಮಯ ಕಳೆಯುವುದಿಲ್ಲ. |
06:37 | ವಿಂಡೋದ ಮೇಲಿನ ಎಡಭಾಗದಲ್ಲಿರುವ ಸಣ್ಣ X ಐಕಾನ್ ಅನ್ನು ಕ್ಲಿಕ್ ಮಾಡಿ, terminal ಅನ್ನು ಮುಚ್ಚಿ. |
06:43 | ಈ ವೆಬ್‌ಸೈಟ್‌ನಲ್ಲಿನ Linux ಸ್ಪೋಕನ್ ಟ್ಯುಟೋರಿಯಲ್ ಸರಣಿಯಲ್ಲಿ, ‘ಟರ್ಮಿನಲ್ ಕಮಾಂಡ್’ ಗಳನ್ನು ಚೆನ್ನಾಗಿ ವಿವರಿಸಲಾಗಿದೆ. |
06:49 | ಈಗ, ನಾವು ಇನ್ನೊಂದು ಅಪ್ಲಿಕೇಶನ್, ಎಂದರೆ Firefox Web Browser ಅನ್ನು ನೋಡೋಣ. |
06:55 | ಮತ್ತೊಮ್ಮೆ, Dash home ಅನ್ನು ತೆರೆಯಿರಿ. ಸರ್ಚ್-ಬಾರ್ ನಲ್ಲಿ Firefox ಎಂದು ಟೈಪ್ ಮಾಡಿ. |
07:01 | Firefox Web Browser ಐಕಾನ್ ಮೇಲೆ ಕ್ಲಿಕ್ ಮಾಡಿ. |
07:05 | world wide web ಅನ್ನು ಆಕ್ಸೆಸ್ (access) ಮಾಡಲು, Firefox Web Browser ಅನ್ನು ಬಳಸಲಾಗುತ್ತದೆ.
ಈಗ Firefox browser ವಿಂಡೋ ತೆರೆದಿರುವುದನ್ನು ನಾವು ನೋಡಬಹುದು. |
07:15 | ನಾವು spoken tutorial ವೆಬ್ಸೈಟ್ ಗೆ ಹೋಗೋಣ.
ಇದಕ್ಕಾಗಿ, ಅಡ್ರೆಸ್-ಬಾರ್ ಮೇಲೆ ಕ್ಲಿಕ್ ಮಾಡಿ ಅಥವಾ ಕೀಬೋರ್ಡ್ ಮೇಲೆ F6 ಅನ್ನು ಒತ್ತಿ. |
07:24 | ಈಗ ನಾವು "spoken-tutorial.org" ಎಂದು ಟೈಪ್ ಮಾಡಿ, Enter ಅನ್ನು ಒತ್ತೋಣ. |
07:31 | ನೀವು ಇಂಟರ್ನೆಟ್ ಸಂಪರ್ಕವನ್ನು ಹೊಂದಿದ್ದರೆ, ಸೂಚಿಸಲಾದ ವೆಬ್‌ಸೈಟ್‌ಗೆ 'ಫೈರ್‌ಫಾಕ್ಸ್', ಸಂಪರ್ಕವನ್ನು ಪಡೆಯುತ್ತದೆ. |
07:37 | ಬ್ರೌಸರ್ ನಲ್ಲಿ Spoken Tutorial Homepage ತೆರೆದುಕೊಳ್ಳುತ್ತದೆ. |
07:41 | ಈಮೊದಲು ವಿವರಿಸಿದಂತೆ ನಾವು ಇದನ್ನು ಮುಚ್ಚೋಣ ಮತ್ತು ಮುಂದಿನ ಅಪ್ಲಿಕೇಶನ್ ಗೆ ಹೋಗೋಣ. |
07:47 | ನಾವು ಮತ್ತೊಮ್ಮೆ Dash home ಗೆ ಹೋಗಿ, ಸರ್ಚ್-ಬಾರ್ ನಲ್ಲಿ office ಎಂದು ಟೈಪ್ ಮಾಡೋಣ. |
07:53 | ನೀವು Calc, Impress, Writer ಹಾಗೂ Draw ಗಳಂತಹ ವಿವಿಧ LibreOffice ಘಟಕಗಳನ್ನು ನೋಡುವಿರಿ. |
08:01 | Ubuntu Linux OS ನಲ್ಲಿ, LibreOffice ಡೀಫಾಲ್ಟ್ office ಅಪ್ಲಿಕೇಶನ್ ಆಗಿದೆ. |
08:07 | ಈ ಎಲ್ಲಾ ಘಟಕಗಳಿಗಾಗಿ ಅತ್ಯುತ್ತಮವಾದ ಟ್ಯುಟೋರಿಯಲ್ ಗಳು, 'ಸ್ಪೋಕನ್ ಟ್ಯುಟೋರಿಯಲ್' ವೆಬ್‌ಸೈಟ್‌ನಲ್ಲಿ ಲಭ್ಯವಿದೆ. |
08:13 | ಈಗ ನಾವು Video ಆಯ್ಕೆಯ ಬಗ್ಗೆ ತಿಳಿದುಕೊಳ್ಳೋಣ. |
08:17 | ಸರ್ಚ್-ಬಾರ್ ನಲ್ಲಿ video ಎಂದು ಟೈಪ್ ಮಾಡಿ. |
08:20 | ತೋರಿಸಲಾದ ಲಿಸ್ಟ್ ನಲ್ಲಿ, Videos ಎಂಬ ಒಂದು ಅಪ್ಲಿಕೇಶನ್ ಇದೆ. |
08:25 | ವೀಡಿಯೊಗಳು ಮತ್ತು ಹಾಡುಗಳನ್ನು ಪ್ಲೇ ಮಾಡಲು Videos ಅನ್ನು ಬಳಸಲಾಗುತ್ತದೆ. ಡೀಫಾಲ್ಟ್ ಆಗಿ, ಅದು open format ವೀಡಿಯೊ ಫೈಲ್ ಗಳನ್ನು ಮಾತ್ರ ಪ್ಲೇ ಮಾಡುತ್ತದೆ. |
08:34 | ನನ್ನ 'ಪೆನ್-ಡ್ರೈವ್' ನಿಂದ, ನಾನು ಒಂದು ಫೈಲ್ ಅನ್ನು ಪ್ಲೇ ಮಾಡುತ್ತೇನೆ. |
08:38 | ಈಗ ನನ್ನ ಮಷಿನ್ ನಲ್ಲಿ, ಪೆನ್-ಡ್ರೈವ್ ಅನ್ನು usb ಸ್ಲಾಟ್ ನಲ್ಲಿ ಸೇರಿಸುತ್ತಿದ್ದೇನೆ.
pen-drive ಫೋಲ್ಡರ್, ತಂತಾನೇ ತೆರೆದುಕೊಂಡಿದೆ. |
08:47 | ಅದು ತೆರೆಯದಿದ್ದರೆ, ನಾವು ಅದನ್ನು 'ಲಾಂಚರ್' ನಿಂದ ಆಕ್ಸೆಸ್ (access) ಮಾಡಬಹುದು. |
08:52 | ಲಾಂಚರ್ ನಲ್ಲಿ pen-drive ಐಕಾನ್ ಅನ್ನು ಗುರುತಿಸಿ. |
08:56 | ನಾವು ಇದರ ಮೇಲೆ ಕ್ಲಿಕ್ ಮಾಡಿದರೆ, ಇದು ಪೆನ್-ಡ್ರೈವ್ ನಲ್ಲಿ ಲಭ್ಯವಿರುವ ಫೈಲ್ ಗಳು ಮತ್ತು ಫೋಲ್ಡರ್ ಗಳನ್ನು ತೋರಿಸುತ್ತದೆ. |
09:02 | ಈಗ ಪ್ಲೇ ಮಾಡಲು ನಾನು big buck bunny.ogv ಎಂಬ ಮೂವೀ ಫೈಲ್ ಅನ್ನು ಆಯ್ಕೆ ಮಾಡುತ್ತೇನೆ. |
09:08 | ಇಲ್ಲಿ ನನ್ನ ಫೈಲ್ ಇದೆ. ಇದನ್ನು ತೆರೆಯಲು ನಾನು ಇದರ ಮೇಲೆ ಡಬಲ್-ಕ್ಲಿಕ್ ಮಾಡುವೆನು. |
09:14 | ಡೀಫಾಲ್ಟ್ ಆಗಿ, ಇದು Videos ನಲ್ಲಿ ತೆರೆಯುತ್ತದೆ. |
09:17 | ಈ ಮೂವಿ ತೋರಿಸುವುದನ್ನು ನಾವು ನಿಲ್ಲಿಸೋಣ. |
09:20 | Desktopಗೆ ಹೋಗಲು, Ctrl, Windows ಹಾಗೂ D ಕೀಗಳನ್ನು ಒತ್ತೋಣ. |
09:26 | ಈಗ ನಾವು ಈ Desktop ನ ಮೇಲೆ ಇನ್ನೂ ಕೆಲವು ಮುಖ್ಯವಾದ ವಿಷಯಗಳನ್ನು ನೋಡೋಣ. |
09:31 | Launcher ನಲ್ಲಿರುವ ಈ ಫೋಲ್ಡರ್ ಐಕಾನ್ ಅನ್ನು ಗಮನಿಸಿ. ಇದರ ಮೇಲೆ ಕ್ಲಿಕ್ ಮಾಡೋಣ. |
09:37 | Home ಫೋಲ್ಡರ್ ತೆರೆಯುತ್ತದೆ. |
09:39 | Ubuntu Linux ನಲ್ಲಿ, ಪ್ರತಿಯೊಬ್ಬ ಯೂಸರ್ ನು ಒಂದು ವಿಶಿಷ್ಟವಾದ Home ಫೋಲ್ಡರ್ ಅನ್ನು ಹೊಂದಿದ್ದಾನೆ. |
09:44 | 'ಹೋಮ್ ಫೋಲ್ಡರ್' ಅನ್ನು ನಮ್ಮ ಮನೆ ಎಂದು ನಾವು ಹೇಳಬಹುದು. ಇಲ್ಲಿ ನಾವು ನಮ್ಮ ಫೈಲ್ ಮತ್ತು ಫೋಲ್ಡರ್ ಗಳನ್ನು ಸಂಗ್ರಹಿಸಬಹುದು.
ನಾವು ಅನುಮತಿ ಕೊಡದಿದ್ದರೆ, ಇತರರು ಅವುಗಳನ್ನು ನೋಡಲು ಸಾಧ್ಯವಿಲ್ಲ. |
09:56 | 'ಫೈಲ್ ಪರ್ಮಿಷನ್ ಗಳ' ಬಗ್ಗೆ ಹೆಚ್ಚಿನ ಮಾಹಿತಿಯು Linux ಸ್ಪೋಕನ್-ಟ್ಯುಟೋರಿಯಲ್ ಸರಣಿಯಲ್ಲಿ ಲಭ್ಯವಿದೆ. |
10:03 | ನಾವು ಹಿಂದಿರುಗೋಣ.
ನಮ್ಮ Home ಫೋಲ್ಡರ್ ನಲ್ಲಿ, ನಾವು Desktop, Documents, Downloads ಗಳಂತಹ ಇತರ ಫೋಲ್ಡರ್‌ಗಳನ್ನು ನೋಡಬಹುದು. |
10:14 | Linux ನಲ್ಲಿ, ಎಲ್ಲವೂ ಫೈಲ್ ಆಗಿರುತ್ತದೆ.
ನಾವು Desktop ಫೋಲ್ಡರ್ ಮೇಲೆ ಡಬಲ್-ಕ್ಲಿಕ್ ಮಾಡಿ ಅದನ್ನು ತೆರೆಯೋಣ. |
10:21 | ಇಲ್ಲಿ, ನಾವು ಟೆಕ್ಸ್ಟ್-ಎಡಿಟರ್ ನಲ್ಲಿ ಸೇವ್ ಮಾಡಿದ ಅದೇ hello.txt ಫೈಲ್ ಅನ್ನು ನೋಡಬಹುದು. |
10:28 | ಆದ್ದರಿಂದ, ಈ ಫೋಲ್ಡರ್ ಹಾಗೂ Desktop ಒಂದೇ ಆಗಿವೆ. |
10:32 | ನಾನು ಈಗ ಈ ಫೋಲ್ಡರ್ ಅನ್ನು ಮುಚ್ಚುತ್ತೇನೆ.
ಈ ಟ್ಯುಟೋರಿಯಲ್ ನಲ್ಲಿರುವುದು ಇಷ್ಟೇ. ಸಂಕ್ಷಿಪ್ತವಾಗಿ, |
10:39 | ಈ ಟ್ಯುಟೋರಿಯಲ್ ನಲ್ಲಿ ನಾವು, ಉಬಂಟು ಡೆಸ್ಕ್-ಟಾಪ್, ಲಾಂಚರ್ ಮತ್ತು ಇದರಲ್ಲಿ ಲಭ್ಯವಿರುವ ಕೆಲವು ಐಕಾನ್ ಗಳು, |
10:49 | Calculator, Text Editor, Terminal, Firefox Web Browser, Videos ಗಳಂತಹ ಕೆಲವು ಸಾಮಾನ್ಯ ಅಪ್ಲಿಕೇಶನ್‌ಗಳು ಹಾಗೂ LibreOffice Suite ನ ಘಟಕಗಳು ಮತ್ತು Home ಫೋಲ್ಡರ್ ಬಗ್ಗೆ ಕಲಿತಿದ್ದೇವೆ. |
11:04 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋ, “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. |
11:12 | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು, 'ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣ ಪತ್ರವನ್ನು ಕೊಡುತ್ತದೆ.
ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ. |
11:25 | ಈ 'ಸ್ಪೋಕನ್ ಟ್ಯುಟೋರಿಯಲ್' ನಲ್ಲಿ ನಿಮಗೆ ಪ್ರಶ್ನೆಗಳಿವೆಯೇ?
ದಯವಿಟ್ಟು ಈ ಸೈಟ್ ಗೆ ಭೆಟ್ಟಿಕೊಡಿ: |
11:30 | ನೀವು ಪ್ರಶ್ನೆಯನ್ನು ಹೊಂದಿರುವ ನಿಮಿಷ ಮತ್ತು ಸೆಕೆಂಡ್ ಅನ್ನು ಆಯ್ಕೆ ಮಾಡಿ. ನಿಮ್ಮ ಪ್ರಶ್ನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ. ನಮ್ಮ ತಂಡದಿಂದ ಯಾರಾದರೂ ಉತ್ತರಿಸುತ್ತಾರೆ. |
11:40 | ಸ್ಪೋಕನ್ ಟ್ಯುಟೋರಿಯಲ್ ಫೋರಮ್, ಈ ಟ್ಯುಟೋರಿಯಲ್ ಬಗ್ಗೆ ನಿರ್ದಿಷ್ಟ ಪ್ರಶ್ನೆಗಳಿಗಾಗಿ ಇರುತ್ತದೆ.
ದಯವಿಟ್ಟು ಇದಕ್ಕೆ ಸಂಬಂಧಿಸದ ಮತ್ತು ಸಾಮಾನ್ಯ ಪ್ರಶ್ನೆಗಳನ್ನು ಪೋಸ್ಟ್ ಮಾಡಬೇಡಿ. |
11:50 | ಇದು ಗೊಂದಲವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಕಡಿಮೆ ಗೊಂದಲವಿದ್ದರೆ, ನಾವು ಈ ಚರ್ಚೆಗಳನ್ನು ಕಲಿಕೆಯ ವಸ್ತುವಿನಂತೆ ಬಳಸಬಹುದು. |
11:59 | "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ: |
12:11 | ಈ ಸ್ಕ್ರಿಪ್ಟ್, "ಸ್ಪೋಕನ್ ಟ್ಯುಟೋರಿಯಲ್” ತಂಡದ ಕೊಡುಗೆಯಾಗಿದೆ.
ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. ಧನ್ಯವಾದಗಳು. |