LibreOffice-Suite-Writer/C4/Using-track-changes/Kannada

From Script | Spoken-Tutorial
Jump to: navigation, search
Time Narration
00:02 ಎಲ್ಲರಿಗೂ ನಮಸ್ಕಾರ. ಲಿಬ್ರೆ ಆಫೀಸ್ ನಲ್ಲಿ ಡಾಕ್ಯುಮೆಂಟ್ ಅನ್ನು ಎಡಿಟ್ ಮಾಡುವಾಗ ಟ್ರ್ಯಾಕ್ ಬದಲಾಯಿಸುವುದರ ಬಗ್ಗೆ ಇರುವ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:09 ಈ ಟ್ಯುಟೋರಿಯಲ್ ನಲ್ಲಿ ನಾವು ಲಿಬ್ರೆ ಆಫೀಸ್ ರೈಟರ್ ನಲ್ಲಿ ಡಾಕ್ಯುಮೆಂಟ್ ಗಳ ಪರಿಶೀಲನೆಯು ಹೇಗೆ ಆಗುತ್ತವೆ ಎಂಬುದನ್ನು ಕಲಿಯಲಿದ್ದೇವೆ.
00:16 ನಾವು, 'Record Changes' ಎಂಬ ವಿಕಲ್ಪದ ಸಹಾಯದಿಂದ ಡಾಕ್ಯುಮೆಂಟ್ ನ ವಿಸ್ತೃತ ಪರಿಶೀಲನೆ ಹಾಗೂ ಪರಿಷ್ಕಾರವನ್ನು ಹೇಗೆ ಮಾಡುವುದೆಂಬುದನ್ನು ಈಗಾಗಲೇ ಇರುವ ಡಾಕ್ಯುಮೆಂಟ್ ಅನ್ನು ತೆರೆದು ವಿವರಿಸುತ್ತೇವೆ.
00:26 ಈ ವೈಶಿಷ್ಟ್ಯತೆಯ ಬಳಕೆಯಿಂದಾಗಿ ಪರಿಶೀಲಿಸುವಾತ ಟಿಪ್ಪಣಿ (Comments) ನೀಡಬಹುದು, ಟೆಕ್ಸ್ಟ್ ಅನ್ನು ಸೇರಿಸಬಹುದು, ಅಲ್ಲಿರುವ ಟೆಕ್ಸ್ಟ್ ಅನ್ನು ಡಿಲೀಟ್ ಅಥವಾ ಬದಲಾಯಿಸಬಹುದು, ಹಾಗೂ ಇವೆಲ್ಲವೂ ಆದೇ ಡಾಕ್ಯುಮೆಂಟ್ ನಲ್ಲಿ ಕಾಣಸಿಗುತ್ತವೆ.
00:40 ಇವುಗಳನ್ನು ಲೇಖಕನು ಸುಲಭವಾಗಿ ನೋಡಬಹುದು ಹಾಗೂ ಆ ಪರಿಷ್ಕಾರವನ್ನು ಸ್ವೀಕರಿಸುವುದಾಗಲಿ ಅಥವಾ ತಿರಸ್ಕರಿಸುವುದಾಗಲೀ ಮಾಡಬಹುದು, ಇದರಿಂದಾಗಿ ಎಲ್ಲವನ್ನೂ ಹಲವು ಬಾರಿ ಪರಿಶೀಲಿಸುವ ಕೆಲಸವು ತಪ್ಪುತ್ತದೆ.
00:53 ಹಾಗೂ ಯಾವಾಗ ಫೈಲ್ ಸೇವ್ ಆಗುತ್ತದೋ ಆಗ ಟಿಪ್ಪಣಿಗಳೂ ರಕ್ಷಿತವಾಗುತ್ತವೆ.
00:57 ಹಾಗಾಗಿ, ಈಗ ನಾವು ಇದನ್ನು ಹೇಗೆ ಮಾಡಬೇಕೆಂದು ಕಲಿಯೋಣ.
01:02 ಇಲ್ಲಿ ನಾವು ನಮ್ಮ ಆಪರೇಟಿಂಗ್ ಸಿಸ್ಟಮ್ ಆಗಿ ಉಬಂಟು ಲಿನಕ್ಸ್ 10.04 ಅನ್ನು ಹಾಗೂ ಲಿಬ್ರೆ ಆಫೀಸ್ ಸೂಟ್ ನ 3.3.4 ನೇ ಆವೃತ್ತಿಯನ್ನು ಉಪಯೋಗಿಸುತ್ತಿದ್ದೇವೆ.
01:10 ಈ ಟ್ಯುಟೋರಿಯಲ್ ನಲ್ಲಿ ನಾವು ಈಗಾಗಲೇ ರಕ್ಷಿಸಿದ ಕೆಲವು ಡಾಕ್ಯುಮೆಂಟ್ ಗಳನ್ನು ಉಪಯೋಗಿಸುತ್ತಿದ್ದೇವೆ. ಅವುಗಳು,
01:16 Seven-reasons-to-adopt-FOSS.odt, Government-support-for-FOSS-in-India.odt
01:24 ರೈಟರ್ ಅನ್ನು ಆರಂಭಿಸಲು ಕ್ರಮವಾಗಿ Applications - Office - LibreOffice Writer ಎಂಬಲ್ಲಿ ಕ್ಲಿಕ್ ಮಾಡಿ.
01:34 'Seven-reasons-to-adopt-FOSS.odt' ಎಂಬುದನ್ನು ತೆರೆಯಿರಿ.
01:41 'Record Changes' ಎಂಬ ವಿಕಲ್ಪವನ್ನು ಸೆಟ್ ಮಾಡಲು ಕ್ರಮವಾಗಿ EDIT ಹಾಗೂ CHANGES ಅನ್ನು ಕ್ಲಿಕ್ ಮಾಡಿ ಅಲ್ಲಿ Record ಎಂಬ ವಿಕಲ್ಪವನ್ನು ಆಯ್ಕೆಮಾಡಿ.
01:53 SHOW ಎಂಬ ವಿಕಲ್ಪವನ್ನೂ ಆಯ್ಕೆ ಮಾಡಿ. ಇದರಿಂದಾಗಿ ಪ್ರತಿಯೊಂದು ಪರಿಷ್ಕಾರವೂ ಕೂಡಾ ದಾಖಲಾಗುತ್ತದೆ.
02:01 ಡಾಕ್ಯುಮೆಂಟ್ ನಲ್ಲಿ ಎರಡನೇಯ ಅಂಶವನ್ನು ಸೇರಿಸೋಣ.
02:05 ನಾವು ಎರಡನೇಯ ಅಂಶಕ್ಕೆ ಹೋಗಿ “Linux is a virus resistant operating system since each user has a distinct data space and cannot directly access the program files” ಎಂದು ಟೈಪ್ ಮಾಡಿ.
02:36 Enter ಒತ್ತಿ, ಇದರಿಂದಾಗಿ ಈಗಾಗಲೇ ಇರುವ ಎರಡನೇಯ ಅಂಶವು ಮೂರನೇಯ ಅಂಶವಾಗುತ್ತದೆ.
02:42 ಗಮನಿಸಿ, ಈಗ ನಾವು ಬರೆದ ಬರಹವು ಬೇರೆ ಬಣ್ಣದಲ್ಲಿದೆ.
02:46 ಈ ಬರಹದ ಮೇಲೆ ಮೌಸ್ ಅನ್ನು ಇಡಿ. ನೀವು ಸಮಯ ಹಾಗೂ ದಿನಾಂಕದ ಜೊತೆಗೆ “Inserted: sriranjani” ಎಂಬ ಸಂದೇಶವನ್ನು ಕಾಣುತ್ತೀರಿ.
02:55 ಇದು ಟಿಪ್ಪಣಿ ಮಾಡಿದವರನ್ನು ಡಾಕ್ಯುಮೆಂಟ್ ನಲ್ಲಿ ಗುರುತಿಸುತ್ತದೆ. ಇಲ್ಲಿ ನಾವು ಲಿಬ್ರೆ ಆಫೀಸ್ ಅನ್ನು ಇನ್ಸ್ಟಾಲ್ ಮಾಡುವಾಗ ಯಾವ ಹೆಸರನ್ನು ಕೊಟ್ಟಿರುತ್ತೇವೆಯೋ ಆ ಹೆಸರು ಕಾಣಿಸುತ್ತದೆ.
03:08 ಮೊದಲನೇ ಸಾಲಿನಲ್ಲಿ “avalable” ಎಂಬುದರ ಸ್ಪೆಲ್ಲಿಂಗ್ ಅನ್ನು ಸರಿಪಡಿಸಿ. ನೀವು ಪರಿಷ್ಕಾರವನ್ನು ಗುರುತಿಸುತ್ತೀರಿ.
03:17 ಮೊದಲನೇಯ ಅಂಶದಲ್ಲಿರುವ “It can be installed on all computers without restriction or needing to pay license fees to vendors” ಎಂಬ ವಾಕ್ಯವನ್ನು ಡಿಲೀಟ್ ಮಾಡಿ.
03:31 ಗಮನಿಸಿ, ಇಲ್ಲಿ ಡಿಲೀಟ್ ಮಾಡಿದ ವಾಕ್ಯವು ಡಿಲೀಟ್ ಆಗಿಲ್ಲ, ಬದಲಾಗಿ ಡಿಲೀಟ್ ಮಾಡಲು ಸಲಹೆ ನೀಡುತ್ತಾ ಒಂದು ಗೆರೆಯನ್ನು ಎಳೆದಿರುತ್ತದೆ.
03:39 ಈಗ ಅದರ ಮೇಲೆ ಕರ್ಸರ್ ಅನ್ನು ಒಯ್ಯಿರಿ, ಇಲ್ಲಿ ನಾವು ದಿನಾಂಕ ಹಾಗೂ ಸಮಯದ ಜೊತೆಗೆ “Deleted Ranjani:” ಎಂಬ ಸಂದೇಶವನ್ನು ನೋಡುತ್ತೇವೆ.
03:49 ಹೀಗೆಯೇ, ಸೇರಿಸುವುದು, ಡೀಲೀಟ್ ಮಾಡುವುದು ಹಾಗೂ ಬದಲಾಯಿಸುವುದರ ಮೂಲಕ ನಾವು ಒಂದು ಡಾಕ್ಯುಮೆಂಟ್ ನಲ್ಲಿ ಪರಿವರ್ತನೆಗಳನ್ನು ಮಾಡಬಹುದು.
04:00 ಒಂದೇ ಡಾಕ್ಯುಮೆಂಟ್ ಅನ್ನು ಅನೇಕ ಜನರೂ ಕೂಡಾ ಪರಿಷ್ಕರಿಸಬಹುದು.
04:04 LO ರೈಟರ್ ಎಂಬುದು ಪ್ರತಿಯೊಂದು ಪರಿಷ್ಕಾರವನ್ನೂ ವಿವಿಧ ಬಣ್ಣಗಳಲ್ಲಿ ತೋರಿಸುತ್ತದೆ, ಇದರಿಂದಾಗಿ ಓದುವಾತ ವಿವಿಧ ವಿಮರ್ಶಕರಲ್ಲಿನ ವ್ಯತ್ಯಾಸವನ್ನು ಗುರುತಿಸಬಹುದು.
04:13 ಪರಿಷ್ಕೃತವಾದ ಬರಹದ ಮೇಲೆ ಕರ್ಸರ್ ಅನ್ನು ಒಯ್ಯುವುದರಿಂದಲೂ ನಾವು ವಿಮರ್ಶಕನ ಹೆಸರನ್ನು ನೋಡಬಹುದು.
04:19 ನಾನೀಗ ಗುರು ಎನ್ನುವವರಿಂದ ಈಗಾಗಲೇ ಪರಿಷ್ಕರಿಸಲ್ಪಟ್ಟ ಡಾಕ್ಯುಮೆಂಟ್ ಅನ್ನು ತೆರೆದು ಇದನ್ನು ವಿವರಿಸುತ್ತೇನೆ.
04:27 “Government-support-for-FOSS-in-India.odt” ಎಂಬ ಟೆಕ್ಸ್ಟ್ ಡಾಕ್ಯುಮೆಂಟ್ ಅನ್ನು ತೆರೆಯಿರಿ.
04:35 ಈ ಡಾಕ್ಯುಮೆಂಟ್ ನಲ್ಲಿ ನಾವು ಈಗಾಗಲೇ ಮಾಡಿರುವ ಹಲವು ಪರಿಷ್ಕಾರಗಳನ್ನು ನೋಡಬಹುದು.
04:42 ಅವುಗಳ ಮೇಲೆ ಕರ್ಸರ್ ಒಯ್ಯುವುದರಿಂದ ನಮಗೆ ಈ ಪರಿಷ್ಕಾರವು Guru ಎಂಬುವುವವರಿಂದ ಆಗಿದೆ ಎಂದು ತಿಳಿಯುತ್ತದೆ.
04:52 ಕೆಳಗೆ ಮತ್ತೊಂದು ಅಂಶವನ್ನು ಹೀಗೆ ಸೇರಿಸಿ, “CDAC, NIC, NRC-FOSS are institutions of Government of India which develop and promote FOSS”.
05:18 ಗಮನಿಸಿ, Guru ಎನ್ನುವವರು ಮಾಡಿದ ಪರಿಷ್ಕಾರಗಳ ಬಣ್ಣಕ್ಕಿಂತ ಈಗ ಮಾಡಿದ ಪರಿಷ್ಕಾರದ ಬಣ್ಣವು ಬೇರೆಯಾಗಿದೆ.
05:24 ಇದರ ಮೇಲೆ ಕರ್ಸರ್ ಒಯ್ಯುವುದರಿಂದ “Inserted: Ranjani” ಎಂಬ ಸಂದೇಶವನ್ನು ನಾವು ಕಾಣುತ್ತೇವೆ.
05:29 ಹೀಗೆ ಒಂದೇ ಡಾಕ್ಯುಮೆಂಟ್ ಅನ್ನು ಹಲವು ವಿಮರ್ಶಕರು ಪರಿಶೀಲಿಸಬಹುದಾಗಿದೆ.
05:34 ಈ ಡಾಕ್ಯುಮೆಂಟ್ ಅನ್ನು ಸೇವ್ ಮಾಡದೇ ಕ್ಲೋಸ್ ಮಾಡಿ.
05:45 ಈಗ ನಾವು ಲೇಖಕನು ವಿಮರ್ಶಕನು ಮಾಡಿದ ಪರಿಷ್ಕಾರವನ್ನು ಹೇಗೆ ಸ್ವೀಕರಿಸುತ್ತನೆ ಅಥವಾ ತಿರಸ್ಕರಿಸುತ್ತಾನೆ ಎಂಬುದನ್ನು ನೋಡೋಣ.
05:50 ಈಗ ನಾನೇ ಲೇಕಖನೆಂದುಕೊಳ್ಳಿ, ಮತ್ತು “Government-support-for-FOSS-in-India.odt” ಎಂಬ ಡಾಕ್ಯುಮೆಂಟ್ ನಲ್ಲಿ Guru ಮಾಡಿದ ಪರಿಷ್ಕಾರಗಳನ್ನು ಸ್ವೀಕರಿಸೋಣ ಅಥವಾ ತಿರಸ್ಕರಿಸೋಣ.
06:12 ಎರಡನೇ ಅಂಶಕ್ಕೆ ಹೋಗಿ ಹಾಗೂ reasons ಎಂಬ ಡೀಲೀಟ್ ಮಾಡಿದ ಟೆಕ್ಸ್ಟ್ ನ ಮೇಲೆ ರೈಟ್ ಕ್ಲಿಕ್ ಮಾಡಿ ಹಾಗೂ ಅಲ್ಲಿ Accept Changes ಅನ್ನು ಆಯ್ಕೆ ಮಾಡಿ.
06:22 ಗಮನಿಸಿ, ವಿಮರ್ಶಕನು ಸೂಚಿಸಿದ ಪರಿವರ್ತನೆಯು ಡಿಲೀಟ್ ಆಗಿದೆ.
06:28 ಸೇರಿಸಿದ ಟೆಕ್ಸ್ಟ್ ಆದ needs ನ ಮೇಲೆ ರೈಟ್ ಕ್ಲಿಕ್ ಮಾಡಿ ಹಾಗೂ Accept Change ಅನ್ನು ಆಯ್ಕೆ ಮಾಡಿ. ಗಮನಿಸಿ, ವಿಮರ್ಶಕನು ಸೂಚಿಸಿದ ಪರಿವರ್ತನೆಯು ಸಾಮಾನ್ಯ ಟೆಕ್ಸ್ಟ್ ಆಗಿ ಪರಿವರ್ತನೆಗೊಂಡಿದೆ.
06:39 ಹೀಗೆ ಲೇಖಕನು ವಿಮರ್ಶಕನು ಸೂಚಿಸಿದ ಪರಿಷ್ಕಾರಗಳನ್ನು ಸ್ವೀಕರಿಸಬಹುದು ಅಥವಾ ತಿರಸ್ಕರಿಸಬಹುದಾಗಿದೆ.
06:49 ಮೊದಲನೇ ಅಂಶಕ್ಕೆ ಹೋಗಿ ಹಾಗೂ ಡಿಲೀಟ್ ಮಾಡಿದ “The OpenOffice document standard (ODF) has been notified under this policy” ಎಂಬ ಟೆಕ್ಸ್ಟ್ ನ ಮೇಲೆ ರೈಟ್ ಕ್ಲಿಕ್ ಮಾಡಿ, ಹಾಗೂ ಅಲ್ಲಿ Reject change ಅನ್ನು ಆಯ್ಕೆ ಮಾಡಿ.
07:01 ಇದರಿಂದಾಗಿ ಆ ಟೆಕ್ಸ್ಟ್ ಸಾಮಾನ್ಯ ಟೆಕ್ಸ್ಟ್ ಆಗುತ್ತದೆ. ಅಂದರೆ ವಿಮರ್ಶಕನು ಸೂಚಿಸಿದ ಪರಿವರ್ತನೆಯು ಲೇಖಕನಿಂದ ತಿರಸ್ಕೃತವಾಗಿದೆ ಎಂದರ್ಥ.
07:09 ಐದನೇಯ ಅಂಶಕ್ಕೆ ಹೋಗಿ ಅಲ್ಲಿ “Government Schools in these states and in Orissa, Karnataka and Tamil Nadu learn Linux” ಎಂಬ ವಾಕ್ಯದ ಮೇಲೆ ರೈಟ್ ಕ್ಲಿಕ್ ಮಾಡಿ ಹಾಗೂ ಅಲ್ಲಿ Reject change ಎಂಬುದನ್ನು ಆಯ್ಕೆಮಾಡಿ.
07:24 ಇದರಿಂದಾಗಿ ವಿಮರ್ಶಕನು ಸೇರಿಸಿದ್ದ ವಾಕ್ಯವು ಡಿಲೀಟ್ ಆಗುತ್ತದೆ.
07:27 ಹೀಗೆ ಲೇಖಕನು ವಿಮರ್ಶಕನು ಸೂಚಿಸಿದ ಪ್ರತಿಯೊಂದು ಪರಿಷ್ಕಾರಗಳನ್ನು ಸ್ವೀಕರಿಸಬಹುದು ಅಥವಾ ತಿರಸ್ಕರಿಸಬಹುದಾಗಿದೆ.
07:34 ಕೊನೆಯಲ್ಲಿ, ಎಲ್ಲ ಬದಲಾವಣೆಗಳನ್ನು ಸ್ವೀಕರಿಸಿಯೋ ತಿರಸ್ಕರಿಸಿಯೋ ಆದಮೇಲೆ, ನಾವು ಕ್ರಮವಾಗಿ EDIT ಹಾಗೂ CHANGES ಎಂಬಲ್ಲಿಗೆ ಹೋಗಿ ಅಲ್ಲಿ Record ಮತ್ತು Show ಇವುಗಳೆರಡಕ್ಕೂ ಹಾಕಿರುವ ಗುರುತುಗಳನ್ನು ತೆಗೆಯಬೇಕು.
07:56 ಯಾವಾಗ ಗುರುತನ್ನು ತೆಗೆಯುತ್ತೇವೆಯೋ ಆಗ ಮುಂದಿನ ಯಾವುದೇ ಪರಿಷ್ಕಾರಗಳು ಪ್ರತ್ಯೇಕವಾಗಿ ಕಾಣಿಸುವುದಿಲ್ಲ.
08:00 ಎಲ್ಲಾ ಬದಲಾವಣೆಗಳನ್ನು ಪರಿಶೀಲಿಸಿದ ಮೇಲೆ ಫೈಲ್ ಅನ್ನು ಸೇವ್ ಮಾಡಿ. ಇದರಿಂದಾಗಿ ವಿಮರ್ಶಕನ ಎಲ್ಲಾ ಟಿಪ್ಪಣಿಗಳು ಡಾಕ್ಯುಮೆಂಟ್ ನಲ್ಲಿ ಅನ್ವಯಿಸುತ್ತವೆ.
08:09 ಇಲ್ಲಿಗೆ ನಾವೀಗ ಈ ಪಾಠದ ಕೊನೆಗೆ ಬಂದಿದ್ದೇವೆ. ಕೊನೆಯಲ್ಲಿ ಅಸೈನ್ಮೆಂಟ್.
08:16 ಒಂದು ಡಾಕ್ಯುಮೆಂಟ್ ಅನ್ನು ತೆರೆದು ಅಲ್ಲಿ Record Changes ಮೋಡ್ ನಲ್ಲಿ ಸ್ಪೆಲ್ಲಿಂಗ್ ತಪ್ಪುಗಳನ್ನು ಸರಿಪಡಿಸಿ.
08:25 ನಾನಿಲ್ಲಿ ಈಗಾಗಲೇ ಅಸೈನ್ಮೆಂಟ್ ಅನ್ನು ತಯಾರಿಸಿದ್ದೇನೆ.
08:31 ಕೆಳಗಿರುವ ಲಿಂಕ್ ನಲ್ಲಿರುವ ವೀಡಿಯೋ ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ.
08:36 ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ.
08:40 ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.
08:44 ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
08:48 ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
08:54 ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
09:03 ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
09:14 ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ.ಐ.ಟಿ. ಬಾಂಬೆಯಿಂದ ವಾಸುದೇವ.

ಧನ್ಯವಾದಗಳು.

Contributors and Content Editors

PoojaMoolya, Pratik kamble, Vasudeva ahitanal