LibreOffice-Suite-Writer/C2/Inserting-pictures-and-objects/Kannada

From Script | Spoken-Tutorial
Jump to: navigation, search
Time Narration
00:00 ಲಿಬ್ರೆ ಆಫೀಸ್ ಕ್ಯಾಲ್ಕ್ ನಲ್ಲಿ ಇನ್ಸರ್ಟಿಂಗ್ ಇಮೇಜಸ್ ಎಂಬ ವಿಷಯದ ಬಗ್ಗಿರುವ ಈ ಸ್ಪೋಕನ್ ಟ್ಯುಟೋರಿಲ್ ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ನಲ್ಲಿ ನಾವು,
00:09 ಡಾಕ್ಯುಮೆಂಟ್ ನಲ್ಲಿ ಇಮೇಜ್ ಫೈಲ್ ಒಂದನ್ನು ಹೇಗೆ ಸೇರಿಸುವುದು,
00:12 ರೈಟರ್ ನಲ್ಲಿ ಟೇಬಲ್ ಗಳನ್ನು ಹೇಗೆ ಸೇರಿಸುವುದು,
00:15 ರೈಟರ್ ನಲ್ಲಿ ಹೈಪರ್ ಲಿಂಕನ್ನು ಹೇಗೆ ಸೇರಿಸುವುದು ಎಂಬೀ ಮುಂತಾದವುಗಳನ್ನು ಕಲಿಯುತ್ತೇವೆ.
00:18 ಇಲ್ಲಿ ನಾವು ಆಪರೇಟಿಂಗ್ ಸಿಸ್ಟಮ್ ಆಗಿ Ubuntu Linux 10.04 ಅನ್ನು ಮತ್ತು ಲಿಬ್ರೆ ಆಫೀಸ್ ಸೂಟ್ ಆವೃತ್ತಿ 3.3.4 ಅನ್ನು ಬಳಸುತ್ತಿದ್ದೇವೆ.
00:29 ನಾವು ಲಿಬ್ರೆ ಆಫೀಸ್ ರೈಟರ್ ನಲ್ಲಿ ಒಂದು ಇಮೇಜನ್ನು ಹೇಗೆ ಸೇರಿಸಬೇಕೆಂಬುದನ್ನು ಕಲಿಯುವುದರೊಂದಿಗೆ ಈ ಪಾಠವನ್ನು ಆರಂಭಿಸೋಣ.
00:36 ಬನ್ನಿ, ನಮ್ಮ resume.odt ಫೈಲ್ ಅನ್ನು ಒಪನ್ ಮಾಡೋಣ.
00:39 ಡಾಕ್ಯುಮೆಂಟ್ ನಲ್ಲಿ ಒಂದು ಇಮೇಜ್ ಸೇರಿಸಲು ಮೊದಲು “resume.odt” ಎಂಬ ಡಾಕ್ಯುಮೆಂಟ್ ನ ಒಳಗೆ ಕ್ಲಿಕ್ ಮಾಡಿ.
00:47 ಈಗ ಮೆನ್ಯು ಬಾರ್ ನಲ್ಲಿ “Insert” ಎಂಬಲ್ಲಿ ಕ್ಲಿಕ್ ಮಾಡಿ ನಂತರ “Picture” ಎಂಬಲ್ಲಿ ಕ್ಲಿಕ್ ಮಾಡಿ ಮತ್ತು ಕೊನೆದಾಗಿ “From File” ಎಂಬಲ್ಲಿ ಕ್ಲಿಕ್ ಮಾಡಿ.
00:56 ನೀವು ಒಂದು “Insert picture” ಎಂಬ ಡಯಲಾಗ್ ಬಾಕ್ಸ್ ಅನ್ನು ನೋಡುವಿರಿ.
01:00 ಈಗ ನೀವು ಈ ಮೊದಲೇ ನಿಮ್ಮ ಸಿಸ್ಟಮ್ ನಲ್ಲಿ ಇಮೇಜನ್ನು ಸೇವ್ ಮಾಡಿದ್ದಲ್ಲಿ “Location” ನಲ್ಲಿ ಆ ಇಮೇಜ್ ನ ಹೆಸರು ಬರೆಯುವುದರ ಮೂಲಕ ಅದನ್ನು ಆಯ್ಕೆ ಮಾಡಬಹುದು. ಆದರೆ, ನಾವಿಲ್ಲಿ ಯಾವುದೇ ಇಮೇಜನ್ನು ಸೇವ್ ಮಾಡದೇ ಇರುವ ಕಾರಣ, ಸಾಮಾನ್ಯವಾಗಿ ಸಿಸ್ಟಮ್ ನಲ್ಲಿ ಇರುವ ಇಮೇಜನ್ನು ಇಲ್ಲಿ ಸೇರಿಸೋಣ.
01:16 ಅದಕ್ಕಾಗಿ, ಡಯಲಾಗ್ ಬಾಕ್ಸ್ ನ ಎಡಗಡೆಯಿರುವ “Pictures” ಎಂಬ ವಿಕಲ್ಪವನ್ನು ಕ್ಲಿಕ್ ಮಾಡಿ.
01:21 ಈಗ ಇಲ್ಲಿ ಯಾವುದಾದರೊಂದು ಇಮೇಜಿನ ಮೇಲೆ ಕ್ಲಿಕ್ ಮಾಡಿ ಮತ್ತು ಕೊನೆಯಲ್ಲಿ “Open” ಬಟನ್ ಮೇಲೆ ಕ್ಲಿಕ್ ಮಾಡಿ.
01:28 ಇಮೇಜ್ ನಿಮ್ಮ ಡಾಕ್ಯುಮೆಂಟ್ ನಲ್ಲಿ ಸೇರಿದೆ ಎಂಬುದನ್ನು ನೀವು ನೋಡಬಹುದು.
01:32 ನೀವು ಈ ಇಮೇಜಿನ ಆಕಾರವನ್ನೂ ಬದಲಿಸಬಹುದು ಮತ್ತು ಇದನ್ನು resume ಎನ್ನುವುದರ ಮೇಲ್ಗಡೆ ಬಲಕೋಣೆಯಲ್ಲಿ ಕೂಡಾ ಇರಿಸಬಹುದು.
01:38 ಅದಕ್ಕಾಗಿ ಮೊದಲು ಇಮೇಜ್ ನ ಮೇಲೆ ಕ್ಲಿಕ್ ಮಾಡಿ. ಇಮೇಜಿನ ಮೇಲೆ ವರ್ಣಯುತವಾದ ಹ್ಯಾಂಡಲ್ಸ್ ತೋರುತ್ತದೆ.
01:44 ಯಾವುದಾದರೊಂದು ಹ್ಯಾಂಡಲ್ ನ ಮೇಲೆ ಕರ್ಸರ್ ಇಟ್ಟು ಎಡ ಮೌಸ್ ಬಟನ್ ಅನ್ನು ಕ್ಲಿಕ್ ಮಾಡಿ.
01:50 ಕರ್ಸರ್ ಅನ್ನು ಡ್ರ್ಯಾಗ್ ಮಾಡಿ ಇಮೇಜಿನ ಆಕಾರವನ್ನು ಬದಲಿಸಿ. ಆಕಾರ ಬದಲಾದ ಮೇಲೆ ಇಮೇಜಿನ ಮೇಲೆ ಕ್ಲಿಕ್ ಮಾಡಿ ಅದನ್ನು ಎಡಿಟರ್ ನ ಬಲ ಮೇಲ್ಭಾಗದ ಕೋಣೆಗೆ ಎಳೆದೊಯ್ಯಿರಿ.
02:01 ಇಮೇಜನ್ನು ಸೇರಿಸಲು ಇರುವ ಇತರೆ ಪ್ರಸಿದ್ಧ ಪ್ರಕಾರಗಳೆಂದರೆ, clipboard ಅಥವಾ scanner ನ ಉಪಯೋಗದಿಂದ ಇಮೇಜನ್ನು ಸೇರಿಸುವುದು ಮತ್ತು ಗ್ಯಾಲರಿ ಯ ಮೂಲಕ ಇಮೇಜನ್ನು ಸೇರಿಸುವುದು ಇತ್ಯಾದಿ.
02:09 ಈಗ ನಾವು ರೈಟರ್ ನಲ್ಲಿ ಟೇಬಲ್ ಅನ್ನು ಹೇಗೆ ಸೇರಿಸುವುದೆಂದು ನೋಡೋಣ.
02:13 ಟೇಬಲ್ಸ್ ಎನ್ನುವುದು, ಲಿಬ್ರೆ ಆಫೀಸ್ ರೈಟರ್ ನಲ್ಲಿ ಬಳಕೆದಾರನಿಗೆ ಅವನಲ್ಲಿನ ಮಾಹಿತಿಗಳನ್ನು ಸಾರಿಣಿಯ ಕ್ರಮದಲ್ಲಿ ಜೋಡಿಸಲು ಸಹಾಯ ಮಾಡುತ್ತದೆ.
02:21 ನಿಮ್ಮ ಡಾಕ್ಯುಮೆಂಟನಲ್ಲಿ ಟೇಬಲ್ ಅನ್ನು ಸೇರಿಸಲು ಒಂದೇ, ಟೂಲ್ ಬಾರ್ ನಲ್ಲಿ “Table” ಎಂಬಲ್ಲಿ ಕ್ಲಿಕ್ ಮಾಡಿ ಅದರ ಆಕಾರವನ್ನು ಆಯ್ಕೆಮಾಡಬಹುದು ಅಥವಾ ಮೆನ್ಯು ಬಾರ್ ನಲ್ಲಿ “Insert” ಎಂಬ ವಿಕಲ್ಪದ ಮೂಲಕ ಸೇರಿಸಬಹುದಾಗಿದೆ.
02:36 ಹಾಗಾಗಿ, ”Education Details” ಎಂಬ ಹೆಡಿಂಗ್ ನ ಕೆಳಗೆ ಟೇಬಲ್ ಅನ್ನು ಸೇರಿಸಲು ಕರ್ಸರ್ ಅನ್ನು ಆ ಹೆಡಿಂಗ್ ನ ಕೆಳಗೆ ಇಡಿ.
02:44 ಈಗ ಮೆನ್ಯು ಬಾರ್ ನಲ್ಲಿ “Insert” ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ ಮತ್ತು “Tables” ಎಂಬುವುದರ ಮೇಲೆ ಕ್ಲಿಕ್ ಮಾಡಿ.
02:51 ಇದು ವಿವಿಧ ಸ್ಥಾನಗಳನ್ನೊಳಗೊಂಡ ಡಯಲಾಗ್ ಬಾಕ್ಸ್ ಒಂದನ್ನು ಒಪನ್ ಮಾಡುತ್ತದೆ.
02:55 ಅಲ್ಲಿ “Name” ಎಂಬ ಸ್ಥಾನದಲ್ಲಿ “resume table” ಎಂದು ಹೆಸರು ಕೊಡೋಣ.
03:01 “Size” ಎಂಬ ಹೆಡಿಂಗ್ ನ ಕೆಳಗೆ ಹೋಗಿ, ಅಲ್ಲಿ “Columns” ನ ಸಂಖ್ಯೆಯನ್ನು “2” ಎಂದು ಇಡಿ.
03:06 “Rows” ನ ಸ್ಥಾನದಲ್ಲಿ ಮೇಲ್ಬಾಣದ ಮೇಲೆ ಕ್ಲಿಕ್ ಮಾಡಿ, “4” ರ ತನಕ “Rows” ನ ಸಂಖ್ಯೆಯನ್ನು ಹೆಚ್ಚಿಸಿ. ಹೀಗೆ columns ಮತ್ತು rows ಗಳಲ್ಲಿ ಮೇಲ್ಬಾಣ (up arrow) ಮತ್ತು ಕೆಳಬಾಣ (down arrow) ವನ್ನು ಬಳಸಿ ನೀವು ಟೇಬಲ್ ನ ಆಕಾರವನ್ನು ಹೆಚ್ಚು-ಕಡಿಮೆ ಮಾಡಬಹುದು.
03:21 ಈಗ ಡಯಲಾಗ್ ಬಾಕ್ಸ್ ನಲ್ಲಿ “AutoFormat” ಬಟನ್ ಮೇಲೆ ಕ್ಲಿಕ್ ಮಾಡಿ.
03:25 ಇದು ಹೊಸ ಡಯಲಾಗ್ ಬಾಕ್ಸ್ ಅನ್ನು ಒಪನ್ ಮಾಡುತ್ತದೆ. ಅಲ್ಲಿ ನೀವು ಟೇಬಲ್ ನ ಯಾವ ಪ್ರಾರೂಪವನ್ನು ಇಡಬಯಸುವಿರೋ ಅದನ್ನು ಆಯ್ಕೆಮಾಡಬಹುದು.
03:33 ರೈಟರ್ ಪ್ರಾರೂಪವನ್ನು ಆಯ್ಕೆಮಾಡಲು ಹಲವು ವಿಕಲ್ಪಗಳನ್ನು ಕೊಡುತ್ತದೆ. ನಾವು “Format” ನ ಒಳಗೆ “None” ಎಂಬ ವಿಕಲ್ಪದ ಮೇಲೆ ಕ್ಲಿಕ್ ಮಾಡೋಣ ನಂತರ “OK” ಬಟನ್ ಮೇಲೆ ಕ್ಲಿಕ್ ಮಾಡೋಣ.
03:43 ಮತ್ತೊಮ್ಮೆ “OK” ಬಟನ್ ಮೇಲೆ ಕ್ಲಿಕ್ ಮಾಡಿ.
03:45 ನೋಡಿ, ಹೆಡಿಂಗ್ ನ ಕೆಳಗೆ ಎರಡು ಕಾಲಮ್ ಹಾಗೂ ನಾಲ್ಕು ರೋ ಇರುವ ಟೇಬಲ್ ಒಂದು ಸೇರಲ್ಪಟ್ಟಿದೆ.
03:53 ಈಗ ನಾವು ಸಾರಿಣಿಯ ಒಳಗೆ ಯಾವ ಮಾಹಿತಿಯನ್ನಾದರೂ ತುಂಬಿಸಬಹುದಾಗಿದೆ.
03:58 ಉದಾಹರಣೆಗಾಗಿ, ಟೇಬಲ್ ನ ಮೊದಲ ಕಾಲಮ್ ಹಾಗೂ ಮೊದಲ ರೋ ನಲ್ಲಿನ ಸೆಲ್ ನ ಒಳಗೆ ಕ್ಲಿಕ್ ಮಾಡಿ.
04:04 ನಾವಿಲ್ಲಿ “Secondary School Examination” ಎಂದು ಟೈಪ್ ಮಾಡೋಣ.
04:08 ಈಗ ಪಕ್ಕದ ಸೆಲ್ ಅನ್ನು ಕ್ಲಿಕ್ ಮಾಡಿ “93 percent” ಎಂದು ಟೈಪ್ ಮಾಡಿ. ಇದರಿಂದ ರಮೇಶನು ಮಾಧ್ಯಮಿಕ ಪರೀಕ್ಷೆಯಲ್ಲಿ 93 ಪ್ರತಿಶತ ಅಂಕವನ್ನು ಗಳಿಸಿದ್ದಾನೆಂದು ತಿಳಿಯುತ್ತದೆ.
04:20 ಹೀಗೆ, ನಾವು ಈ ಟೇಬಲ್ ನಲ್ಲಿ ಇನ್ನೂ ಹೆಚ್ಚಿನ ಶೈಕ್ಷಣಿಕ ವಿವರಗಳನ್ನು ಟೈಪ್ ಮಾಡಬಹುದು.
04:25 “Secondary School Examination” ಎಂದು ಟೈಪ್ ಮಾಡಿರುವ ಸೆಲ್ ನ ಸರಿಯಾಗಿ ಕೆಳಭಾಗದಲ್ಲಿರುವ ಸೆಲ್ ನಲ್ಲಿ ಕ್ಲಿಕ್ ಮಾಡಿ.
04:31 ಇಲ್ಲಿ ನಾವು “Higher Secondary School Examination” ಎಂದು ಟೈಪ್ ಮಾಡೋಣ ಹಾಗೂ ಪಕ್ಕದ ಸೆಲ್ ನಲ್ಲಿ “88 percent” ಎಂದು ಅಂಕವನ್ನು ಟೈಪ್ ಮಾಡೋಣ.
04:41 ಮುಂದಿನ ಸೆಲ್ ಗೆ ಹೊಗಲು ಮೂರನೇ ರೋ ನಲ್ಲಿನ ಮೊದಲನೇ ಸೆಲ್ ಮೇಲೆ ಕ್ಲಿಕ್ ಮಾಡಿ. ಪರ್ಯಾಯವಾಗಿ ಒಂದು ಸೆಲ್ ನಿಂದ ಮತ್ತೊಂದು ಸೆಲ್ ಗೆ ಹೋಗಲು ಟ್ಯಾಬ್ ಕೀ ಯನ್ನು ಒತ್ತಿ.


04:52 ಹೀಗಿರುವಾಗ, ಟ್ಯಾಬ್ ಒತ್ತಿ ಮತ್ತು ಅಲ್ಲಿ “Graduation” ಎಂದು ಟೈಪ್ ಮಾಡಿ. ಪಕ್ಕದ ಸೆಲ್ ನಲ್ಲಿ “75%” ಎಂದು ಅಂಕವನ್ನು ಟೈಪ್ ಮಾಡಿ.
05:01 ಕೊನೆಯದಾಗಿ, ಕೊನೆಯ ರೋ ನಲ್ಲಿನ ಮೊದಲ ಸೆಲ್ ನಲ್ಲಿ ಕ್ಲಿಕ್ ಮಾಡಿ. ಅಲ್ಲಿ “Post Graduation” ಎಂದು ಟೈಪ್ ಮಾಡಿ ಮತ್ತು ಪಕ್ಕದ ಸೆಲ್ ನಲ್ಲಿ “70%” ಎಂದು ಅಂಕವನ್ನು ಟೈಪ್ ಮಾಡಿ.
05:12 ಈಗ ನೋಡಿ, ಈ ಟೇಬಲ್ ಶೈಕ್ಷಣಿಕ ವಿವರಣೆಗಳೊಂದಿಗೆ ರೆಸ್ಯುಮೆಯಲ್ಲಿ ಸೇರಿಕೊಂಡಿದೆ.
05:18 ಸರಿ, ಈಗ ಟೇಬಲ್ ನ ಕೊನೆಯ ಸೆಲ್ ನಲ್ಲಿ ಕರ್ಸರ್ ಅನ್ನು ಇಡಿ,
05:24 ಎಲ್ಲಿಯಾದರೂ ನಮಗೆ ಟೇಬಲ್ ನ ಕೊನೆಯ ರೋ ನ ಸರಿಯಾಗಿ ಕೆಳ ಭಾಗದಲ್ಲಿ ಇನ್ನೊಂದು ರೋ ಅನ್ನು ಸೇರಿಸಬೇಕಾದಲ್ಲಿ ಕೀಬೋರ್ಡ್ ನಲ್ಲಿ “Tab” ಕೀಯನ್ನು ಒತ್ತಿ.
05:33 ಗಮನಿಸಿ, ಹೊಸ ರೋ ಸೇರಲ್ಪಟ್ಟಿದೆ.
05:37 ಟೇಬಲ್ ನ ಎಡಬದಿಯಲ್ಲಿ ನಾವು ಪ್ರಾಪ್ತವಾದ “Phd” ಡಿಗ್ರಿಯನ್ನು ಟೈಪ್ ಮಾಡೋಣ ಮತ್ತು ಬಲಬದಿಯಲ್ಲಿ “65%” ಎಂದು ಪ್ರಾಪ್ತಾಂಕವನ್ನು ಟೈಪ್ ಮಾಡೋಣ.
05:49 ಇದರಿಂದ ನಮಗೆ ತಿಳಿಯುವುದೇನೆಂದರೆ, ಕರ್ಸರ್ ಕೊನೆಯ ರೋ ನಲ್ಲಿ ಇದ್ದಾಗ ಒಂದು ಹೊಸ ರೋ ಅನ್ನು ಸೇರಿಸಲು “Tab” ಕೀ ತುಂಬಾ ಉಪಯುಕ್ತವಾಗಿದೆ ಎಂದು.
06:00 Tab ಮತ್ತು Shift+Tab ಕೀಗಳನ್ನುಉಪಯೋಗಿಸಿ ನಾವು ಟೇಬಲ್ ನ ಒಳಗೆ ಒಂದು ಸೆಲ್ ನಿಂದ ಇನ್ನೊಂದು ಸೆಲ್ ಗೆ ಚಲಿಸಬಹುದು.
06:07 ಟೇಬಲ್ ನ ಇನ್ನೊಂದು ವಿಶೇಷತೆ “Optimal Column Width” ಆಗಿದೆ. ಇದು ಸ್ವಯಂ ಸೆಲ್ ನಲ್ಲಿರುವ ಕಂಟೆಂಟ್ ನ ಅನುಸಾರವಾಗಿ ಕಾಲಮ್ ನ ಅಗಲವನ್ನು ನಿಶ್ಚಯಿಸುತ್ತದೆ.
06:18 ಟೇಬಲ್ ನ ಎರಡನೇಯ ಅಥವಾ ಬಲಗಡೆಯಿರುವ ಕಲಮ್ ನಲ್ಲಿ ಈ ವಿಶೇಷತೆಯನ್ನು ಸಾಧಿಸಲು ಮೊದಲು ಆ ಕಲಮ್ ನಲ್ಲಿ ಎಲ್ಲಾದರೂ ಕ್ಲಿಕ್ ಮಾಡುವುದರ ಮೂಲಕ ಕರ್ಸರ್ ಅನ್ನು ಇಡಿ.
06:30 ನಾವೀಗ ಕೊನೆಯ ಸೆಲ್ ನಲ್ಲಿ “65%” ಎಂಬುದರ ನಂತರ ಕರ್ಸರ್ ಇಡೋಣ.
06:35 ಈಗ ಮೆನ್ಯು ಬಾರ್ ನಲ್ಲಿ “Table” ಮೆನ್ಯು ವನ್ನು ಕ್ಲಿಕ್ ಮಾಡಿ ಮತ್ತು “Autofit” ಎಂಬ ವಿಕಲ್ಪಕ್ಕೆ ಹೋಗಿ.
06:42 ಅಲ್ಲಿ ಪರದೆಯ ಮೇಲೆ ತೋರುತ್ತಿರುವ “Optimal Column Width” ಎಂಬ ವಿಕಲ್ಪದ ಮೇಲೆ ಕ್ಲಿಕ್ ಮಾಡಿ.
06:49 ನೋಡಿ, ಕಲಮ್ ನಲ್ಲಿ ಸೆಲ್ಸ್ ನ ಕಂಟೆಂಟ್ ಗೆ ಅನುಸಾರವಾಗಿ ಕಲಮ್ ನ ಅಗಲವು ಸ್ವಯಂ ನಿಶ್ಚಯವಾಗಿದೆ.
06:58 ಹೀಗೆ ನಾವು ಟೇಬಲ್ ನಲ್ಲಿನ ಯಾವುದೇ ಕಲಂ ಅನ್ನು ವ್ಯವಸ್ಥಿತಗೊಳಿಸಬಹುದು.
07:02 ನೀವು ನಿಮ್ಮ ಟೇಬಲ್ ಗೆ ವಿವಿಧ ಪ್ರಕಾರದ ಅಂಚನ್ನು (Boarders) ಹಾಕಬಹುದು. ನೀವು ಟೇಬಲ್ ಗೆ ಅಂಚನ್ನು ಹಾಕದೆಯೇ ಕೂಡಾ ಇರಬಹುದು ಅಥವಾ, ಎಲ್ಲ ಒಳಗಿನ ಮತ್ತು ಹೊರಗಿನ ಅಂಚನ್ನು ಹಾಕಬಹುದು ಅಥವಾ, ಕೇವಲ ಹೊರಗಿನ ಅಂಚನಷ್ಟೇ ಹಾಕಬಹುದಾಗಿದೆ.
07:15 ಹೀಗೆ ಮಾಡಲು ಬೇಕಾದ ಸರಿಯಾದ ವಿಕಲ್ಪಗಳನ್ನು ಪಡೆಯಲು ಮುಖ್ಯಮೆನ್ಯುವಿನಲ್ಲಿ ಟೇಬಲ್ ಟ್ಯಾಬ್ ಅನ್ನು ಆಯ್ಕೆ ಮಾಡಿ ಅಲ್ಲಿ “Table Properties” ಎಂಬಲ್ಲಿ ಕ್ಲಿಕ್ ಮಾಡಿ ಅಲ್ಲಿ “Border Tab” ಅನ್ನು ಕ್ಲಿಕ್ ಮಾಡಿ.
07:25 ಮುಂದೆ ನಾವು ರೈಟರ್ ನಲ್ಲಿ ಹೈಪರ್ ಲಿಂಕ್ಸ್ ಹೇಗೆ ಸಂರಚಿತವಾಗುತ್ತದೆ ಎಂದು ಕಲಿಯೋಣ.
07:30 ಹೈಪರ್ ಲಿಂಕ್ ನ ಸಹಾಯದಿಂದ ಬಳಕೆದಾರರು ಹೈಪರ್ ಟೆಕ್ಸ್ಟನ್ನು ಬ್ರೌಸ್ ಮಾಡಬಹುದು ಅಥವಾ ಅದಿದ್ದಲ್ಲಿಗೆ ಹೋಗಬಹುದು.
07:35 ಹೈಪರ್ ಲಿಂಕ್ ಎನ್ನುವುದೊಂದು ಡಾಕ್ಯುಮೆಂಟಿಗೆ ಬೇಕಾದ ಆಕರದ ಕುಂಡಿಯಾಗಿದೆ, ಈ ಕುಂಡಿಯಿಂದ ಬಳಕೆದಾರನು ಆಕರವನ್ನು ನೇರವಾಗಿ ತಲುಪಬಹುದು .
07:43 ಹೈಪರ್ ಲಿಂಕ್ ಎನ್ನುವುದು ಸಂಪೂರ್ಣ ಡಾಕ್ಯುಮೆಂಟನ್ನು ಅಥವಾ ಅದರಲ್ಲಿರುವ ನಿರ್ದಿಷ್ಟವಾದ ಅಂಶವನ್ನು ತೋರಿಸುತ್ತದೆ.
07:49 ಫೈಲ್ ನಲ್ಲಿ ಹೈಪರ್ ಲಿಂಕ್ ಅನ್ನು ರಚಿಸುವ ಮೊದಲು ಹೈಪರ್ ಲಿಂಕ್ ಮಾಡಲು ಒಂದು ಡಕ್ಯುಮೆಂಟ್ ಅನ್ನು ರಚಿಸೋಣ.
07:56 ಅದಕ್ಕಾಗಿ ಟೂಲ್ ಬಾರ್ ನಲ್ಲಿ “New” ಎಂಬ ಐಕಾನ್ ಮೇಲೆ ಕ್ಲಿಕ್ ಮಾಡಿ.
08:00 ಒಂದು ಹೊಸ ಟೆಕ್ಸ್ಟ್ ಡಾಕ್ಯುಮೆಂಟ್ ಒಪನ್ ಆಗುತ್ತದೆ. ನಾವೀಗ ಈ ಹೊಸ ಡಾಕ್ಯುಮೆಂಟ್ ನಲ್ಲಿ “Hobbies” ಗಾಗಿ ಟೇಬಲ್ ರಚಿಸೋಣ.
08:06 ಅದಕ್ಕಾಗಿ ನಾವು “HOBBIES” ಎಂದು ಹೆಡಿಂಗ್ ಬರೆಯೋಣ.
08:09 ”Enter” ಕೀಯನ್ನು ಒತ್ತಿ.
08:11 ಈಗ ಕೆಲವು ಹವ್ಯಾಸಗಳನ್ನು ಒಂದರ ಕೆಳಗೆ ಒಂದರಂತೆ ಬರೆಯೋಣ, ಉದಾಹರಣೆಗೆ, “Listening to music”, ”Playing table tennis” ಮತ್ತು “Painting”.
08:20 ಈಗ ಈ ಫೈಲ್ ಅನ್ನು ಸೇವ್ ಮಾಡೋಣ.
08:24 ಟೂಲ್ ಬಾರ್ ನಲ್ಲಿ “Save” ಐಕಾನ್ ನ ಮೇಲೆ ಕ್ಲಿಕ್ ಮಾಡಿ. “Name” ಎಂಬ ಸ್ಥಾನದಲ್ಲಿ “hobby” ಎಂದು ಫೈಲ್ ನ ಹೆಸರಿಡಿ.
08:30 “Save in folder” ನಲ್ಲಿ ಡೌನ್ ಏರೋ ಮೇಲೆ ಕ್ಲಿಕ್ ಮಾಡಿ ಮತ್ತು “Desktop” ಎಂಬ ವಿಕಲ್ಪವನ್ನು ಕ್ಲಿಕ್ ಮಾಡಿ. ಈಗ “Save” ಬಟನ್ ಕ್ಲಿಕ್ ಮಾಡಿ.
08:40 ಹೀಗಾಗಿ, ಫೈಲ್ ಡೆಸ್ಕ್ಟಾಪ್ ನಲ್ಲಿ ಸೇವ್ ಆಗಿದೆ.
08:43 ಈಗ ನಾವು ಈ ಫೈಲ್ ಅನ್ನು ಕ್ಲೋಸ್ ಮಾಡೋಣ. ಬನ್ನಿ, ಈಗ “resume.odt” ಎಂಬ ಫೈಲ್ ನಲ್ಲಿ ಹೈಪರ್ ಲಿಂಕ್ ರಚಿಸೋಣ. ಅದು ಈ ಫೈಲ್ ಅನ್ನು ಒಪನ್ ಮಾಡುತ್ತದೆ.
08:53 ಈಗ ನಾವು ಶೈಕ್ಷಣಿಕ ವಿವರಣೆಯಿರುವ ಟೇಬಲ್ ನ ಕೆಳಗೆ “HOBBIES” ಎಂದು ಹೆಡಿಂಗ್ ಬರೆಯೋಣ.
09:00 “HOBBIES” ಎಂಬ ಟೆಕ್ಸ್ಟ್ ಅನ್ನು ಹೈಪರ್ ಲಿಂಕ್ ಮಾಡಲು ಮೊದಲು “HOBBIES” ಎಂಬ ಹೆಡಿಂಗ್ ಅನ್ನು ಕರ್ಸರ್ ಅನ್ನು ಅದರ ಮೇಲೆ ಎಳೆಯುವ ಮೂಲಕ ಆಯ್ಕೆ ಮಾಡಿ.
09:09 ಈಗ ಮೆನ್ಯು ಬಾರ್ ನಲ್ಲಿ “Insert” ಎಂಬ ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ ಮತ್ತು “Hyperlink” ಎಂಬ ವಿಕಲ್ಪದ ಮೇಲೆ ಕ್ಲಿಕ್ ಮಾಡಿ.
09:15 ಒಂದು ಡಯಲಾಗ್ ಬಾಕ್ಸ್ ತೆರೆಯುತ್ತದೆ. ಅದರಲ್ಲಿ, “Internet”, ”Mails and news”, ”Document” ಮತ್ತು “New Document” ಎಂಬ ವಿಕಲ್ಪಗಳಿರುತ್ತವೆ.
09:24 ನಾವು ಟೆಕ್ಸ್ಟ್ ಡಾಕ್ಯುಮೆಂಟ್ ಗೆ ಹೈಪರ್ ಲಿಂಕ್ ಮಾಡಲು ಹೊರಟಿರುವುದರಿಂದ ನಾವು “Document” ಎಂಬ ವಿಕಲ್ಪವನ್ನು ಕ್ಲಿಕ್ ಮಾಡೋಣ.
09:30 ಈಗ “Path” ನ ಸ್ಥಾನದಲ್ಲಿ “Open file” ಎಂಬ ಬಟನ್ ಕ್ಲಿಕ್ ಮಾಡಿ
09:36 ನಾವು ರಚಿಸಿದ ಹೊಸ ಡಾಕ್ಯುಮೆಂಟ್ ಅನ್ನು ತೆರೆಯಲು “Desktop” ಎಂಬಲ್ಲಿ ಕ್ಲಿಕ್ ಮಾಡಿ.
09:44 ಈಗ “hobby.odt” ಎಂಬಲ್ಲಿ ಕ್ಲಿಕ್ ಮಾಡಿ ಮತ್ತು “Open” ಬಟನ್ ಕ್ಲಿಕ್ ಮಾಡಿ.
09:52 ನೋಡಿ, ಆ ಫೈಲ್ ನ ಸ್ಥಾನ ಸೂಚಿಯು “Path” ಎಂಬಲ್ಲಿ ಕಾಣುತ್ತಿದೆ.
09:57 “Apply” ಎಂಬಲ್ಲಿ ಕ್ಲಿಕ್ ಮಾಡಿ ಮತ್ತು “Close” ಬಟನ್ ಕ್ಲಿಕ್ ಮಾಡಿ.
10:02 ಈಗ ನೋಡಿ, “HOBBIES” ಎಂಬ ಟೆಕ್ಸ್ಟ್ ರೇಖಾಂಕಿತವಾಗಿದೆ ಮತ್ತು ನೀಲಿ ಬಣ್ಣಕ್ಕೆ ತಿರುಗಿದೆ. ಈಗ ಈ ಟೆಕ್ಸ್ಟ್ ಹೈಪರ್ ಲಿಂಕ್ ಆಗಿದೆ.
10:11 “HOBBIES” ಎಂಬಲ್ಲಿ ಕರ್ಸರ್ ಇಟ್ಟು, “Control key” ಮತ್ತು ಬಲ ಮೌಸ್ ಬಟನ್ ಅನ್ನು ಒಟ್ಟಿಗೆ ಒತ್ತಿ.
10:19 ನೋಡಿ, hobbies ಇರುವ ಫೈಲ್ ಒಪನ್ ಆಗುತ್ತದೆ.
10:23 ಹೀಗೆಯೇ, ನೀವು ಚಿತ್ರಗಳಿಗೆ ಹಾಗೂ ವೆಬ್-ಸೈಟ್ ಗಳಿಗೆ ಕೂಡಾ ಹೈಪರ್ ಲಿಂಕ್ ಅನ್ನು ರಚಿಸಬಹುದು.
10:30 ಈಗ ನಾವು ಲಿಬ್ರೆ ಆಫೀಸ್ ರೈಟರ್ ನ ಈ ಪಾಠದ ಕೊನೆಗೆ ಬಂದಿದ್ದೇವೆ.
10:35 ಸಾರಾಂಶದಲ್ಲಿ ಹೇಳುವುದಾದರೆ, ನಾವು ಕಲಿತದ್ದು ಇಷ್ಟು,
10:37 ಡಾಕ್ಯುಮೆಂಟ್ ನಲ್ಲಿ ಚಿತ್ರದ ಫೈಲ್ ಅನ್ನು ಸೇರಿಸುವುದು.
10:39 ರೈಟರ್ ನಲ್ಲಿ ಟೇಬಲ್ ಅನ್ನು ಸೇರಿಸುವುದು.
10:42 ರೈಟರ್ ನಲ್ಲಿ ಹೈಪರ್ ಲಿಂಕ್ ಅನ್ನು ಸೇರಿಸುವುದು ಇತ್ಯಾದಿ.
10:48 ಮಾಡಬೇಕಾದ ಅಭ್ಯಾಸಗಳು :
10:50 “practice.odt” ಎಂಬುದನ್ನು ಒಪನ್ ಮಾಡಿ
10:53 ಫೈಲ್ ನಲ್ಲಿ ಒಂದು ಚಿತ್ರವನ್ನು ಸೇರಿಸಿ.
10:57 2 ಕಾಲಮ್ ಮತ್ತು 3 ರೋ ಗಳಿರುವ ಒಂದು ಟೇಬಲ್ ಸೇರಿಸಿ.
11:01 ಆ ಚಿತ್ರದ ಮೇಲೆ ಕ್ಲಿಕ್ ಮಾಡಿದರೆ “www.google.com” ಎಂಬ ವೆಬ್-ಸೈಟ್ ಒಪನ್ ಆಗಲು ಹೈಪರ್ ಲಿಂಕ್ ರಚಿಸಿ.
11:11 ಕೆಳಗಿರುವ ಲಿಂಕ್ ನಲ್ಲಿರುವ ವೀಡಿಯೋ ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ.
11:17 ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ.
11:22 ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.
11:27 ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
11:31 ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
11:37 ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
11:41 ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
11:50 ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
12:00 ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ.ಐ.ಟಿ. ಬಾಂಬೆಯಿಂದ ವಾಸುದೇವ. ಧನ್ಯವಾದಗಳು.

Contributors and Content Editors

Gaurav, Nancyvarkey, PoojaMoolya, Sneha, Vasudeva ahitanal