LibreOffice-Suite-Impress/C3/Custom-Animation/Kannada

From Script | Spoken-Tutorial
Jump to: navigation, search
Time Narration
00.00 LibreOffice Impress ನಲ್ಲಿ Custom Animation (ಕಸ್ಟಮ್ ಎನಿಮೇಶನ್) ನ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00.07 ಈ ಟ್ಯುಟೋರಿಯಲ್ ನಲ್ಲಿ ನಾವು, ಇಂಪ್ರೆಸ್- ನಲ್ಲಿCustom Animation ನ ಬಗ್ಗೆ ಕಲಿಯಲಿದ್ದೇವೆ.
00.12 ಇಲ್ಲಿ, ನಾವು ನಮ್ಮ ಆಪರೇಟಿಂಗ್ ಸಿಸ್ಟಮ್ ನ ರೂಪದಲ್ಲಿ Ubantu Linux 10.04 ಮತ್ತು ಲಿಬ್ರೆ ಆಫೀಸ್ ಸ್ಯೂಟ್ 3.3.4 ಅನ್ನು ಬಳಸುತ್ತಿದ್ದೇವೆ.
00.21 ಮೊದಲು, 'Sample-Impress.odp' ಎಂಬ ಪ್ರಸ್ತುತಿಯನ್ನು ತೆರೆಯೋಣ.
00.27 Slides ಪೇನ್ ನಿಂದ Potential Alternatives ಥಂಬನೈಲ್ ನ ಮೇಲೆ ಕ್ಲಿಕ್ ಮಾಡೋಣ.
00.33 ಈ ಸ್ಲೈಡ್ ಈಗ Main ಪೇನ್ ನಲ್ಲಿ ಕಾಣಿಸುತ್ತಿದೆ.
00.37 ನಮ್ಮ ಪ್ರಸ್ತುತಿಯನ್ನು ಹೆಚ್ಚು ಆಕರ್ಷಕವಾಗಿ ಮಾಡಲು custom animation ಅನ್ನು ಹೇಗೆ ಬಳಸುವುದು ಎಂಬುದನ್ನು ಕಲಿಯೋಣ.
00.43 ಸ್ಲೈಡ್ ನಲ್ಲಿ, ಎಡಗಡೆ ಇರುವ ಮೊದಲನೆಯ ಟೆಕ್ಸ್ಟ್ ಬಾಕ್ಸ್ ಅನ್ನು ಆಯ್ಕೆ ಮಾಡಿ.
00.48 ಇದಕ್ಕಾಗಿ, ಟೆಕ್ಸ್ಟ್ ನ ಮೇಲೆ ಕ್ಲಿಕ್ ಮಾಡಿ ಮತ್ತು ಕಾಣಿಸುತ್ತಿರುವ ಬಾರ್ಡರ್ ಮೇಲೆ ಕ್ಲಿಕ್ ಮಾಡಿ.
00.54 Tasks ಪೇನ್ ನಲ್ಲಿ, “ಇಂಪ್ರೆಸ್” ವಿಂಡೋದ ಬಲಭಾಗದಿಂದ, Custom Animation ಅನ್ನು ಕ್ಲಿಕ್ ಮಾಡಿ.
01.00 Add ನ ಮೇಲೆ ಕ್ಲಿಕ್ ಮಾಡಿ.
01.03 Custom Animation ಡೈಲಾಗ್ ಬಾಕ್ಸ್ ಕಾಣಿಸುತ್ತದೆ.
01.07 Entrance ಟ್ಯಾಬ್ ತೆರೆದಿರುವುದನ್ನು ಗಮನಿಸಿ.
01.10 Entrance ಟ್ಯಾಬ್, ಪರದೆಯ ಮೇಲೆ ವಸ್ತುವಿನ ಪ್ರದರ್ಶನದ ರೀತಿಯನ್ನು ನಿಯಂತ್ರಿಸುತ್ತದೆ.
01.16 ನಾವು ಈ ಸರಣಿಯ ಮುಂದಿನ ಟ್ಯುಟೋರಿಯಲ್ ಗಳಲ್ಲಿಇತರ ಟ್ಯಾಬ್ಸ್ ಗಳ ಬಗ್ಗೆ ಕಲಿಲಿಯಲಿದ್ದೇವೆ.
01.21 Basic ನ ಕೆಳಗೆ Diagonal Squares (ಡಯಾಗನಲ್ ಸ್ಕ್ವ್ಯಾರ್ಸ್) ಅನ್ನು ಆಯ್ಕೆ ಮಾಡಿ.
01.26 ಎಲ್ಲಿ ನಿಮ್ಮ ಎನಿಮೇಶನ್ ಕಾಣಿಸುತ್ತಿದೆಯೋ, ಅಲ್ಲಿ ನೀವು ಅದರ ವೇಗವನ್ನೂ ಸಹ ನಿಯಂತ್ರಿಸಬಹುದು.
01.31 Speed field ನಲ್ಲಿ, ಡ್ರಾಪ್-ಡೌನ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ. Slow ಅನ್ನು ಆಯ್ಕೆ ಮಾಡಿ ಮತ್ತು OK ಅನ್ನು ಕ್ಲಿಕ್ ಮಾಡಿ.
01.38 Effect ಫೀಲ್ಡ್ ನಿಮಗೆ ಎನಿಮೇಶನ್ ಆಪ್ಷನ್ಸ್ ಅನ್ನು ಸೆಟ್ ಮಾಡಲು ಅನುಮತಿಸುತ್ತದೆ.
01.43 Effect ಫೀಲ್ಡ್ ನ ಕೆಳಭಾಗದಲ್ಲಿರುವ ಬಾಕ್ಸ್, ಎನಿಮೇಶನ್ಸ್ ಅನ್ನು ತೋರಿಸುತ್ತದೆ. ಅದನ್ನು ನೀವು ಪ್ರೆಸೆಂಟೇಶನ್ ನ ಒಳಗೆ ಸೇರಿಸಿದ್ದೀರಿ.
01.51 ಎನಿಮೇಶನ್ ನ ಸೂಚಿಯಲ್ಲಿ, ಮೊದಲನೆಯ ಎನಿಮೇಶನ್ ಸೇರ್ಪಡೆಯಾಗಿದೆ ಎನ್ನುವುದನ್ನು ಗಮನಿಸಿ.
01.57 ಕೆಳಕ್ಕೆ ಸ್ಕ್ರೋಲ್ ಮಾಡಿ ಮತ್ತು Play ಅನ್ನು ಕ್ಲಿಕ್ ಮಾಡಿ.
02.00 ನೀವು ಆಯ್ಕೆ ಮಾಡಿದ ಎಲ್ಲಾ ಎನಿಮೇಶನ್ ಗಳ ಪ್ರಿವ್ಯೂ (ಮುನ್ನೋಟ) ಈಗ ಮುಖ್ಯ ಪೇನ್ ನಲ್ಲಿ ಪ್ಲೇ ಆಗುತ್ತಿದೆ.
02.08 ಈಗ, ಸ್ಲೈಡ್ ನಲ್ಲಿ, ಎರಡನೆಯ ಟೆಕ್ಸ್ಟ್ ಬಾಕ್ಸ್ ಅನ್ನು ಆಯ್ಕೆ ಮಾಡಿ. Custom Animation ನ ಕೆಳಗೆ Add ಅನ್ನು ಕ್ಲಿಕ್ ಮಾಡಿ.
02.18 Custom Animation ಡೈಲಾಗ್ ಬಾಕ್ಸ್ ನಲ್ಲಿ, Basic Animation ನ ಕೆಳಗಿರುವ Wedge ಅನ್ನು ಆಯ್ಕೆ ಮಾಡಿ.
02.26 ವೇಗವನ್ನು Medium ಆಗಿ ಸೆಟ್ ಮಾಡಿ. OK ಅನ್ನು ಕ್ಲಿಕ್ ಮಾಡಿ.
02.31 ಈ ಎನಿಮೇಶನ್, ಬಾಕ್ಸ್ ನ ಒಳಕ್ಕೆ ಸೇರ್ಪಡೆಯಾಗಿರುವುದನ್ನು ಗಮನಿಸಿ.
02.36 ನೀವು ಇದನ್ನು ತಯಾರಿಸಿರುವ ರೀತಿಯಲ್ಲೇ ಸೂಚಿಯಲ್ಲಿರುವ ಎನಿಮೇಶನ್ ಗಳು ಕ್ರಮಬದ್ಧವಾಗಿವೆ ಎಂಬುದನ್ನು ಪರಿಶೀಲಿಸಿ.
02.42 ಎರಡನೆಯ ಎನಿಮೇಶನ್ ಅನ್ನು ಆಯ್ಕೆ ಮಾಡಿ ಮತ್ತು Play ಬಟನ್ ಅನ್ನು ಒತ್ತಿ.
02.47 ನೀವು ಮುನ್ನೋಟಕ್ಕಾಗಿ ಒಂದಕ್ಕಿಂತ ಹೆಚ್ಚು ಎನಿಮೇಶನ್ ಗಳನ್ನು ಆಯ್ಕೆ ಮಾಡಬಹುದು.
02.51 ಇದಕ್ಕಾಗಿ, ಎನಿಮೇಶನ್ ಅನ್ನು ಆಯ್ಕೆ ಮಾಡುವಾಗ Shift ಬಟನ್ ಅನ್ನು ಹಿಡಿದುಕೊಳ್ಳಿ.
02.57 Play ಎಂಬಲ್ಲಿ ಕ್ಲಿಕ್ ಮಾಡಿ. ನೀವು ಆಯ್ಕೆ ಮಾಡಿದ ಎಲ್ಲಾ ಎನಿಮೇಶನ್ ಗಳ ಮುನ್ನೋಟ ಪ್ಲೇ ಆಗುತ್ತಿದೆ.
03.05 ಈಗ, ಮೂರನೆಯ ಬಾಕ್ಸ್ ಅನ್ನು ಆಯ್ಕೆ ಮಾಡಿ. Layouts ನಲ್ಲಿ, Add ಅನ್ನು ಕ್ಲಿಕ್ ಮಾಡಿ.
03.10 Entrance ಟ್ಯಾಬ್ ನಲ್ಲಿ, Basic ನ ಕೆಳಕ್ಕೆ Diamond ಅನ್ನು ಆಯ್ಕೆ ಮಾಡಿ.
03.17 ವೇಗವನ್ನು Slow ಆಗಿ ಸೆಟ್ ಮಾಡಿ. ಮತ್ತು OK ಕ್ಲಿಕ್ ಮಾಡಿ.
03.22 ಪ್ರತಿಯೊಂದು ಎನಿಮೇಶನ್ ಕೆಲವು ಡೀಫಾಲ್ಟ್ ಪ್ರಾಪರ್ಟಿಗಳೊಂದಿಗೆ ಆರಂಭವಾಗುತ್ತದೆ.
03.26 ನೀವು Change Order ಬಟನ್ಸ್ ಗಳನ್ನು ಬಳಸಿ ಎನಿಮೇಶನ್ ನ ಕ್ರಮವನ್ನು ಬದಲಿಸಬಹುದು.
03.32 ಪ್ರತಿಯೊಂದು ಎನಿಮೇಶನ್ ನ ಡೀಫಾಲ್ಟ್ ಪ್ರಾಪರ್ಟಿಯನ್ನು ನೋಡೋಣ. ಮತ್ತು ಅವುಗಳನ್ನು ಹೇಗೆ ಮಾರ್ಪಡಿಸಬಹುದೆಂಬುದನ್ನು ಕಲಿಯೋಣ.
03.39 ಸೂಚಿಯಲ್ಲಿರುವ ಮೊದಲನೆಯ ಎನಿಮೇಶನ್ ನ ಮೇಲೆ ಡಬಲ್ ಕ್ಲಿಕ್ ಮಾಡಿ. ಇದು Diagonal Squares ಎಂಬ ಆಪ್ಷನ್ ಆಗಿದೆ.
03.46 Effects Options ಡೈಲಾಗ್ ಬಾಕ್ಸ್ ಕಾಣಿಸುತ್ತದೆ.
03.50 ಡೀಫಾಲ್ಟ್ ರೂಪದಲ್ಲಿ Effects ಟ್ಯಾಬ್ ಕಾಣಿಸುತ್ತದೆ.
03.55 Settings ನಲ್ಲಿ, Direction ಡ್ರಾಪ್ ಡೌನ್ ನ ಮೇಲೆ ಕ್ಲಿಕ್ ಮಾಡಿ ಮತ್ತು From right to top ಅನ್ನು ಆಯ್ಕೆ ಮಾಡಿ.
04.01 ಇದರ ಪರಿಣಾಮವೆಂದರೆ, ಎನಿಮೇಷನ್ ಬಲಗಡೆಯಿಂದ ಪ್ರಾರಂಭವಾಗಿ ಕ್ರಮೇಣ ಮೇಲಕ್ಕೆ ಹೋಗುತ್ತದೆ.
04.09 ಡೈಲಾಗ್ ಬಾಕ್ಸ್ ಅನ್ನು ಮುಚ್ಚಲು (ಕ್ಲೋಸ್) OK ಅನ್ನು ಕ್ಲಿಕ್ ಮಾಡಿ.
04.12 ನೀವು ಸೇರಿಸಿದ ಎನಿಮೇಶನ್ ನ ಪರಿಶೀಲನೆಗಾಗಿ, Play ಬಟನ್ ಅನ್ನು ಕ್ಲಿಕ್ ಮಾಡಿ.
04.17 ಈ ಎನಿಮೇಶನ್ ನ ಮೇಲೆ ಪುನಃ ಡಬಲ್ ಕ್ಲಿಕ್ ಮಾಡಿ. Effect Options ಡೈಲಾಗ್ ಬಾಕ್ಸ್ ಕಾಣಿಸುತ್ತದೆ.
04.24 Timing ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ.
04.26 Delay ಫೀಲ್ಡ್ ನಲ್ಲಿ, ಡಿಲೇ ಅನ್ನು 1.0 sec ವರೆಗೆ ಹೆಚ್ಚಿಸಿ. ಇದರ ಪರಿಣಾಮದಿಂದ ಒಂದು ಸೆಕೆಂಡ್ ನ ನಂತರ ಎನಿಮೇಷನ್ ಆರಂಭವಾಗುತ್ತದೆ. OK ಕ್ಲಿಕ್ ಮಾಡಿ.
04.39 ಈಗ, ಮೊದಲನೆಯ ಎನಿಮೇಶನ್ ಅನ್ನು ಆಯ್ಕೆ ಮಾಡೋಣ.
04.43 Play ಬಟನ್ ನ ಮೇಲೆ ಕ್ಲಿಕ್ ಮಾಡಿ.
04.45 ಎನಿಮೇಶನ್ ನಲ್ಲಿ ನೀವು ಮಾಡಿದ ಬದಲಾವಣೆಯ ಪರಿಣಾಮವನ್ನು ನೀವು ನೋಡಬಹುದು.
04.50 ಸೂಚಿಯಲ್ಲಿರುವ ಎರಡನೆಯ ಎನಿಮೇಶನ್ ನ ಮೇಲೆ ಕ್ಲಿಕ್ ಮಾಡಿ. ಇದು ನಾವು ಸೆಟ್ ಮಾಡಿದ Wedges (ವೆಜೆಸ್) ಆಪ್ಷನ್ ಆಗಿದೆ.
04.54 Effect Options ಡೈಲಾಗ್ ಬಾಕ್ಸ್ ಕಾಣಿಸುತ್ತದೆ.
05.02 Text Animation ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ.
05.05 ಟೆಕ್ಸ್ಟ್ ಅನ್ನು ಎನಿಮೇಟ್ ಮಾಡಲು Text Animation ಟ್ಯಾಬ್, ವಿವಿಧ ಆಪ್ಷನ್ ಗಳನ್ನು ಕೊಡುತ್ತದೆ.
05.12 Group text ಫೀಲ್ಡ್ ನಲ್ಲಿ, By 1st level paragraphs ಅನ್ನು ಆಯ್ಕೆ ಮಾಡಿ.
05.16 ಈ ಆಯ್ಕೆಯು ಪ್ರತ್ಯೇಕ ಬುಲೆಟ್ ಪಾಯಿಂಟ್ (bullet point) ಅನ್ನು ಬೇರೆ ಬೇರೆಯಾಗಿ ತೋರಿಸುತ್ತದೆ.
05.20 ಒಂದು ಅಂಶವನ್ನು ವಿಸ್ತಾರವಾಗಿ ಚರ್ಚಿಸಲು ಬಯಸಿದಾಗ, ಮುಂದಕ್ಕೆ ಹೋಗುವ ಮೊದಲು ನೀವು ಈ ಆಪ್ಷನ್ ಅನ್ನು ಬಳಸಬಹುದು.
05.27 OK ಅನ್ನು ಕ್ಲಿಕ್ ಮಾಡಿ.
05.29 Play ಅನ್ನು ಕ್ಲಿಕ್ ಮಾಡಿ.
05.32 ಈ ಟ್ಯುಟೋರಿಯಲ್ ಅನ್ನು ನಿಲ್ಲಿಸಿ, ಮತ್ತು ಈ ಅಸೈನ್ಮೆಂಟ್ ಅನ್ನು ಮಾಡಿ.
05.36 ವಿವಿಧ ಎನಿಮೇಶನ್ ಗಳನ್ನು ತಯಾರಿಸಿ ಮತ್ತು ಪ್ರತಿಯೊಂದು ಎನಿಮೇಶನ್ ಗೆ Effect options ಅನ್ನು ಚೆಕ್ ಮಾಡಿ.
05.43 ಈಗ ನಾವು, ನಮ್ಮಿಂದ ಮಾಡಲ್ಪಟ್ಟ ಎನಿಮೇಶನ್ ನ ಪರಿಣಾಮಗಳನ್ನು ನೋಡಲು ಕಲಿಯೋಣ.
05.48 Slide Show ಬಟನ್ ನ ಮೇಲೆ ಕ್ಲಿಕ್ ಮಾಡಿ. ನಂತರ ಎನಿಮೇಶನ್ ಅನ್ನು ನೋಡುವುದಕ್ಕೆ ಸ್ಕ್ರೀನ್ ನ ಯಾವ ಭಾಗದಲ್ಲಿಯಾದರೂ ಕ್ಲಿಕ್ ಮಾಡಿ.
05.59 ಪ್ರೆಸೆಂಟೇಶನ್ ಅನ್ನು ಆಸಕ್ತಿದಾಯಕವಾಗಿಸಲು ಎನಿಮೇಷನ್ ಎಂಬುದು ಉತ್ತಮ ವಿಧಾನ ಮತ್ತು ಇದರಿಂದ ಕೆಲವು ಅಂಶಗಳನ್ನು ಸುಲಭವಾಗಿ ವಿವರಿಸಲು ಸಾಧ್ಯ. ಇಲ್ಲದಿದ್ದರೆ ಕಷ್ಟ.
06.09 ಆದರೆ, ಇದನ್ನು ಹೆಚ್ಚು ಉಪಯೋಗಿಸದಂತೆ ಎಚ್ಚರವಹಿಸಿ.
06.13 ಎನಿಮೇಶನ್ ನ ಹೆಚ್ಚಾದ ಉಪಯೋಗದಿಂದ, ಪ್ರೇಕ್ಷಕರ ಗಮನ ವಿಷಯ ಬಿಟ್ಟು ಬೇರೆಡೆ ಹೋಗಬಹುದು.
06.20 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯ ಹಂತಕ್ಕೆ ಬಂದಿದ್ದೇವೆ.
06.24 ಈ ಟ್ಯುಟೋರಿಯಲ್ ನಲ್ಲಿ, ನಾವು Custom animation ಮತ್ತು Effect options ಬಗ್ಗೆ ಕಲಿತಿದ್ದೇವೆ.
06.30 ಇಲ್ಲಿ ನಿಮಗೆ (ನೀವು ಮಾಡಬೇಕಾದ) ಒಂದು ಅಸೈನ್ ಮೆಂಟ್ ಇದೆ.
06.32 ಮೂರು ಬುಲೆಟ್ ಪಾಯಿಂಟ್ ನೊಂದಿಗೆ ಒಂದು ಟೆಕ್ಸ್ಟ್ ಬಾಕ್ಸ್ ಅನ್ನು ತಯಾರಿಸಿ.
06.36 ಟೆಕ್ಸ್ಟ್ ಅನ್ನು ಎನಿಮೇಟ್ ಮಾಡಿ. ಅದರಿಂದ ಅದು ಸಾಲು ಸಾಲಾಗಿ ಕಾಣಿಸುತ್ತದೆ.
06.41 ಈ ಎನಿಮೇಶನ್ ಅನ್ನು ಪ್ಲೇ ಮಾಡಿ.
06.44 ಕೆಳಗಿನ ಲಿಂಕ್ ನಲ್ಲಿ ಸಿಗುವ ವಿಡಿಯೋ-ಅನ್ನು ನೋಡಿ. http://spoken-tutorial.org/What is a Spoken Tutorial ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ತಿಳಿಸುತ್ತದೆ.
06.51 ಒಂದು ವೇಳೆ ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್-ವಿಡ್ತ್ ಇಲ್ಲದಿದ್ದಲ್ಲಿ, ನೀವು ಡೌನ್-ಲೋಡ್ ಮಾಡಿ ನೋಡಬಹುದು.
06.55 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟೀಮ್ :

ಸ್ಪೋಕನ್ ಟ್ಯುಟೋರಿಯಲ್-ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ನಡೆಸುತ್ತದೆ. ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.

07.04 ಹೆಚ್ಚಿನ ವಿವರಣೆಗಾಗಿ, contact@spoken-tutorial.org ಗೆ ಬರೆಯಿರಿ.
07.11 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗವಾಗಿದೆ. ಇದು ಭಾರತ ಸರ್ಕಾರದ MHRDಯ ICTಮಾಧ್ಯಮದ ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್-ನಿಂದ ಸಮರ್ಥಿತವಾಗಿದೆ.
07.22 ಈ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ಈ ಲಿಂಕ್-ನಲ್ಲಿ ಸಿಗುತ್ತದೆ - http://spoken-tutorial.org/NMEICT-Intro ]
07.33 ಈ ಸ್ಕ್ರಿಪ್ಟ್ನ ಅನುವಾದಕಿ ಬೆಂಗಳೂರಿನಿಂದ ನಾಗರತ್ನಾ ಹೆಗಡೆ ಹಾಗೂ ಪ್ರವಾಚಕ ವಾಸುದೇವ.
07.38 ಭಾಗವಹಿಸಿದ್ದಕ್ಕಾಗಿ ಧನ್ಯವಾದಗಳು.

Contributors and Content Editors

Pratik kamble, Vasudeva ahitanal