LibreOffice-Suite-Base/C4/Indexes-Table-Filter-SQL-Command-window/Kannada

From Script | Spoken-Tutorial
Jump to: navigation, search
Time Narration
00:00 ಲಿಬರ್ ಆಫಿಸ್ ಬೇಸ್ ನ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:03 ಈ ಟ್ಯುಟೋರಿಯಲ್ ನಲ್ಲಿ ನಾವು, ಇಂಡೆಕ್ಸ್ ಟೇಬಲ್ ಫಿಲ್ಟರ್ ಮತ್ತು SQL ಕಮಾಂಡ್ ವಿಂಡೋ ಇವುಗಳ ಬಗ್ಗೆ ಕಲಿಯಲಿದ್ದೇವೆ.
00:14 ಮೊದಲು ಇಂಡೆಕ್ಸ್ ಗಳ ಕುರಿತು ಕಲಿಯೋಣ.
00:16 ಇಂಡೆಕ್ಸ್ ಅಂದರೇನು?
00:18 ಇಂಡೆಕ್ಸ್, ಡೇಟಾಬೇಸ್ ಟೇಬಲ್ ನ ಒಳಗೆ ರೆಕಾರ್ಡ್ ಗಳನ್ನು ಶೀಘ್ರವಾಗಿ ಹುಡುಕಲು ಮತ್ತು ವರ್ಗೀಕರಿಸಲು ಇರುವ ವಿಧಾನವಾಗಿದೆ.
00:26 ರೆಕಾರ್ಡ್ ಗಳನ್ನು ಇಂಡೆಕ್ಸ್ ಮಾಡಬೇಕಾದ ಟೇಬಲ್ ನಲ್ಲಿ ನಾವು ಒಂದು ಅಥವಾ ಅನೇಕ ಫೀಲ್ಡ್ ಗಳನ್ನು ಆರಿಸಬಹುದು.
00:36 ಆರಿಸಿದ ಫೀಲ್ಡ್ ಗಳನ್ನು ಆಧರಿಸಿ, ಇಂಡೆಕ್ಸ್, ರೆಕಾರ್ಡ್ ಗಳ ಸ್ಥಾನವನ್ನು ಶೇಖರಿಸುತ್ತದೆ.
00:43 ಹೀಗೆ, ಡೇಟಾವನ್ನು ಮತ್ತೆ ಪಡೆದುಕೊಳ್ಳಲು, ಬೇಸ್, ಇಂಡೆಕ್ಸ್ ಅನ್ನು ಬಳಸಿ, ನೇರವಾಗಿ ಡೇಟಾ ಇರುವ ಸ್ಥಳಕ್ಕೆ ಹೋಗಬಹುದು.
00:51 ಡೇಟಾವನ್ನು ಹುಡುಕಲು, ಎಲ್ಲಾ ರೆಕಾರ್ಡ್ ಗಳನ್ನು ಜಾಲಾಡುವುದಕ್ಕಿಂತ, ಇದು ಅತ್ಯಂತ ಶೀಘ್ರವಾಗಿ ಆಗುತ್ತದೆ.
00:59 ಟೇಬಲ್ ನ ಪ್ರೈಮರಿ ಕೀಯನ್ನು ಸ್ವಯಂಚಾಲಿತವಾಗಿ ಇಂಡೆಕ್ಸ್ ಮಾಡಲಾಗಿದೆ.
01:03 ನಾವೀಗ ನಮ್ಮ ಉದಾಹರಣೆಯ Library ಡೇಟಾಬೇಸ್ ನಲ್ಲಿ, ಇಂಡೆಕ್ಸ್ ಒಂದನ್ನು ರಚಿಸೋಣ.
01:09 ನಾವು Books ಟೇಬಲ್ ನಲ್ಲಿಯ Title ಕಾಲಂಗಾಗಿ ಇಂಡೆಕ್ಸ್ ಅನ್ನು ರಚಿಸುವೆವು. ಇದು ಪುಸ್ತಕಗಳ ಶೀರ್ಷಿಕೆಯನ್ನು ಶೀಘ್ರವಾಗಿ ಹುಡುಕುವುದು.
01:18 'Library' ಡೇಟಾಬೇಸ್ ಈಗಾಗಲೆ ತೆರೆದಿರದಿದ್ದರೆ, ನಾವು ಅದನ್ನು ತೆರೆಯೋಣ.
01:34 ನಂತರ Books ಟೇಬಲ್ ಅನ್ನು Edit ಮೋಡ್ ನಲ್ಲಿ ತೆರೆಯೋಣ.
01:39 Table Design ವಿಂಡೋದಲ್ಲಿ, Tools ಮೆನುಗೆ ಹೋಗಿ Index Design ಆಯ್ಕೆಮಾಡೋಣ.
01:48 Indexes ವಿಂಡೋದಲ್ಲಿ, ಬೇಸ್ ಪ್ರೈಮರಿ ಕೀಯನ್ನು ಈಗಾಗಲೇ Unique (ಯುನಿಕ್) ಇಂಡೆಕ್ಸ್ ಆಗಿ ಸೇರಿಸಿರುವುದನ್ನು ಗಮನಿಸಿ.
01:57 ನಮ್ಮ ಇಂಡೆಕ್ಸ್ ಅನ್ನು ರಚಿಸಲು, ಎಡತುದಿಯಲ್ಲಿರುವ New Index ಎಂಬ ಐಕಾನ್ ಮೇಲೆ ಕ್ಲಿಕ್ ಮಾಡೋಣ.
02:05 ಹಾಗೂ ಬಲಗಡೆ ಇರುವ Index field ಅಡಿಯಲ್ಲಿ, ಡ್ರಾಪ್-ಡೌನ್ ಲಿಸ್ಟ್ ನಲ್ಲಿ Title ಅನ್ನು ಆರಿಸಿಕೊಳ್ಳೋಣ.
02:14 ಇಲ್ಲಿ ನಾವು, Ascending (ಏರಿಕೆ) ಅಥವಾ Descending (ಇಳಿಕೆ) ಕ್ರಮವನ್ನು ಸಹ ಆರಿಸಬಹುದು.
02:19 ಎಡಭಾಗದಲ್ಲಿ ಮೂರನೇ ಐಕಾನ್ ಮೇಲೆ ಕ್ಲಿಕ್ ಮಾಡಿ, ಈ ಇಂಡೆಕ್ಸ್ ಅನ್ನು ‘IDX_Title’ ಎಂದು ರಿನೇಮ್ ಮಾಡಿ. ಅದರ ಪಕ್ಕದಲ್ಲಿರುವ Save ಐಕಾನ್ ಬಳಸಿ ಇದನ್ನುಸೇವ್ ಮಾಡಿ.
02:37 ಹೀಗೆ, Title ಫೀಲ್ಡ್ ಗಾಗಿ ನಮ್ಮ ಇಂಡೆಕ್ಸ್ ಸಿದ್ಧವಾಗಿದೆ.
02:42 ಈ ರೀತಿ ಬೇಸ್ ಅನ್ನು ಬಳಸಿ, ನಾವು ಟೇಬಲ್ ಗಳಿಗಾಗಿ ಇಂಡೆಕ್ಸ್ ಗಳನ್ನು ರಚಿಸಬಹುದು, ಎಡಿಟ್, ರಿನೇಮ್ ಅಥವಾ ಡಿಲೀಟ್ ಮಾಡಬಹುದು.
02:51 ನಿಮಗಾಗಿ ಇಲ್ಲೊಂದು ಅಸೈನ್ಮೆಂಟ್ ಇದೆ:
02:54 Members ಟೇಬಲ್ ನಲ್ಲಿ ಹೆಸರುಗಳಿಗಾಗಿ ಇಂಡೆಕ್ಸ್ ಒಂದನ್ನು ರಚಿಸಿ. ಇದನ್ನು ‘IDX_MemberName’ ಎಂದು ಹೆಸರಿಸಿ.
03:03 ನಂತರ, ಟೇಬಲ್ ಫಿಲ್ಟರ್ ಏನಿದೆ ಎಂದು ನೋಡೋಣ.
03:07 `ಟೇಬಲ್ ಫಿಲ್ಟರ್’, ಬೇಸ್ ಡೇಟಾಬೇಸ್ ನಲ್ಲಿಯ ಟೇಬಲ್ ಗಳನ್ನು ಇತರ ಅಪ್ಲಿಕೇಶನ್ ಗಳಿಂದ ಅಡಗಿಸಿಡಲು ಸಹಾಯ ಮಾಡುತ್ತದೆ.
03:15 ಉದಾಹರಣೆಗೆ: 'Library' ಡೇಟಾಬೇಸ್ ನಲ್ಲಿ, Books ಟೇಬಲ್ ಅನ್ನು ಹೊರತುಪಡಿಸಿ ಉಳಿದೆಲ್ಲಾ ಟೇಬಲ್ ಗಳನ್ನು ನಾವು ಮರೆಮಾಡೋಣ.
03:22 ಈಗ, Tools ಮೆನುವಿನ ಅಡಿಯಲ್ಲಿ Table Filter ಲಭ್ಯವಿದೆ.
03:27 ನಾವಿಲ್ಲಿ All Views ಮತ್ತು Books ಟೇಬಲ್ ಅನ್ನು ಸಹ ಚೆಕ್ ಮಾಡೋಣ.
03:33 ಅಂದರೆ, ಇಲ್ಲಿ ಇತರ ಅಪ್ಲಿಕೇಶನ್ ಗಳಿಗೆ Books ಟೇಬಲ್ ಮಾತ್ರ ಕಾಣುವಂತೆ ಗುರುತಿಸುತ್ತೇವೆ.
03:39 ಈಗ ನಾವು OK ಬಟನ್ ಮೇಲೆ ಕ್ಲಿಕ್ ಮಾಡೋಣ.
03:43 ನಂತರ View ಮೆನು ಮೇಲೆ ಹಾಗೂ Refresh Tables ಮೇಲೆ ಕ್ಲಿಕ್ ಮಾಡೋಣ.
03:50 ಬುಕ್ಸ್ ಟೇಬಲ್ ಮಾತ್ರ ಇಲ್ಲಿ ಕಾಣುತ್ತಿರುವುದನ್ನು ಗಮನಿಸಿ.
03:54 ಜತೆಗೆ, ಲಿಬರ್ ಆಫಿಸ್ ರೈಟರ್ ಅಥವಾ ಕ್ಯಾಲ್ಕ್ ನಿಂದ ಈ ಡೇಟಾಬೇಸ್ ಅನ್ನು ಆಕ್ಸೆಸ್ ಮಾಡುವಾಗ, Books ಟೇಬಲ್ ಅನ್ನು ಮಾತ್ರ ನೋಡಬಹುದು.
04:04 ಇಲ್ಲಿ ಇನ್ನೊಂದು ಅಸೈನ್ಮೆಂಟ್ ಇದೆ:
04:06 ಲಿಬರ್ ಆಫಿಸ್ ರೈಟರ್ ತೆರೆಯಿರಿ. 'Library' ಡೇಟಾಬೇಸ್ ಅನ್ನು ಆಕ್ಸೆಸ್ ಮಾಡಿ ಮತ್ತು ಅಲ್ಲಿ ಲಭ್ಯವಿರುವ ಟೇಬಲ್ ಗಳನ್ನು ನೋಡಿ.
04:14 ಬೇಸ್ ನಲ್ಲಿ, ಎಲ್ಲಾ ಟೇಬಲ್ ಗಳನ್ನು ಮತ್ತೆ ಗೋಚರಿಸುವಂತೆ ಮಾಡಿ.
04:19 ಮತ್ತು, ಟೇಬಲ್ ಗಳ ಲಭ್ಯತೆಯನ್ನು ಇನ್ನೊಮ್ಮೆ ಪರಿಶೀಲಿಸಿಲು `ಲಿಬರ್ ಆಫಿಸ್ ರೈಟರ್’ ಅನ್ನು ಪುನಃ ತೆರೆಯಿರಿ.
04:26 ಕೊನೆಯದಾಗಿ ನಾವು, SQL ಕಮಾಂಡ್ ವಿಂಡೋ ಕುರಿತು ಕಲಿಯೋಣ.
04:31 Tools ಮೆನುವಿನಿಂದ SQL ಅನ್ನು ಆಯ್ಕೆಮಾಡಿ, ನಾವು 'SQL ಕಮಾಂಡ್ ವಿಂಡೋ' ಅನ್ನು ಆಕ್ಸೆಸ್ ಮಾಡಬಹುದು.
04:41 ಡೇಟಾಬೇಸ್ ಗೆ SQL ಸ್ಟೇಟ್ಮೆಂಟ್ ಗಳನ್ನು ಕೊಡಲು ನಾವು ಈ ವಿಂಡೋವನ್ನು ಬಳಸಬಹುದು.
04:47 ಈಗ, SQL ಕ್ವೆರಿಗಳನ್ನು ಎಕ್ಸೀಕ್ಯೂಟ್ ಮಾಡಲು, ನಾವು ಕ್ವೆರಿಗಳನ್ನು ಬಳಸಬಹುದು. ಆದರೆ ಇಲ್ಲಿ ಡೇಟಾಬೇಸ್ ನಿಂದ ಡೇಟಾವನ್ನು ಕೇಳಲು ಮಾತ್ರ ನಾವು ಸೀಮಿತವಾಗಿದ್ದೇವೆ.
04:59 ಅಂದರೆ, ನಾವು ಅಲ್ಲಿ SELECT ಸ್ಟೇಟ್ ಮೆಂಟ್ ಗಳನ್ನು ಮಾತ್ರ ಕೊಡಬಹುದು.
05:04 ಆದರೆ ಡೇಟಾ ಮತ್ತು ಟೇಬಲ್ ರಚನೆಗಳನ್ನು ಮಾರ್ಪಾಡು ಮಾಡುವ ಅಥವಾ ಅಲ್ಲಿ ಹೊಸ ಟೇಬಲ್ ಗಳನ್ನು ರಚಿಸುವ SQL ಸ್ಟೇಟ್ಮೆಂಟ್ ಗಳನ್ನು ಎಕ್ಸೀಕ್ಯೂಟ್ ಮಾಡಲಾಗದು.
05:14 ಇಂತಹ ಡೇಟಾ ಮ್ಯಾನಿಪುಲೇಶನ್ ಮತ್ತು ಡೇಟಾ ಡೆಫಿನಿಶನ್ ಸ್ಟೇಟ್ ಮೆಂಟ್ ಗಳು ಅಥವಾ ಲ್ಯಾಂಗ್ವೇಜ್ ಅನ್ನು ಬಳಸಲು 'SQL ಕಮಾಂಡ್ ವಿಂಡೋ’ ನಮಗೆ ಸಹಾಯ ಮಾಡುತ್ತದೆ.
05:24 ಡೇಟಾ ಮ್ಯಾನಿಪುಲೇಶನ್ ಲ್ಯಾಂಗ್ವೇಜ್ ಅಥವಾ DML (ಡಿ.ಎಂ.ಎಲ್) ನ ಉದಾಹರಣೆಗಳೆಂದರೆ:
05:31 INSERT, UPDATE ಮತ್ತು DELETE ಡೇಟಾ.
05:37 ಡೇಟಾ ಡೆಫಿನಿಶನ್ ಲ್ಯಾಂಗ್ವೇಜ್ ಅಥವಾ DDL (ಡಿ.ಡಿ.ಎಲ್) ನ ಕೆಲ ಉದಾಹರಣೆಗಳೆಂದರೆ:
05:45 CREATE TABLE, DROP TABLE ಮತ್ತು ALTER ಸ್ಟೇಟ್ ಮೆಂಟ್ ಗಳು.
05:51 ನಾವು ಮೊದಲಿಗೆ ಡಿ.ಎಂ.ಎಲ್ ನ ಉದಾಹರಣೆಯನ್ನು ನೋಡೋಣ.
05:55 ಬೇಸ್ ವಿಂಡೋದಲ್ಲಿ, Tools ಮೆನುವಿನಲ್ಲಿ SQL ಕಮಾಂಡ್ ವಿಂಡೋವನ್ನು ತೆರೆಯೋಣ.
06:02 Books ಟೇಬಲ್ ನಲ್ಲಿ ಒಂದು ಹೊಸ ರೆಕಾರ್ಡ್ ಅನ್ನು ಸೇರಿಸೋಣ. ಇದಕ್ಕಾಗಿ, “Command to execute” ಟೆಕ್ಸ್ಟ್ ಸ್ಥಾನದಲ್ಲಿ, ಹೀಗೆ ಟೈಪ್ ಮಾಡೋಣ.
06:12 INSERT INTO in double quotes Books open bracket in double quotes Title comma Author comma PublishYear comma Publisher comma Price close bracket

VALUES open bracket in single quotes The Hobbit J.R.R Tolkien 2002 Oxford 500 close bracket ;

06:45 Execute ಬಟನ್ ಮೇಲೆ ಕ್ಲಿಕ್ ಮಾಡುವ ಮೊದಲು, ಕಮಾಂಡ್ ಅನ್ನು ಸರಿಯಾಗಿ ನೋಡೋಣ.
06:52 INSERT ಸ್ಟೇಟ್ಮೆಂಟ್, ಇಲ್ಲಿ ಟೇಬಲ್ ಹೆಸರು ಮತ್ತು ಫೀಲ್ಡ್ ಹೆಸರುಗಳನ್ನು, ನಂತರ ಹೊಸ ರೆಕಾರ್ಡ್ ನಲ್ಲಿ ಹೋಗಬೇಕಾದ ವ್ಯಾಲ್ಯೂಗಳನ್ನು ಪಟ್ಟಿ ಮಾಡುತ್ತದೆ.
07:03 ಗಮನಿಸಿ, ಟೇಬಲ್ ನ ಹೆಸರು ಮತ್ತು ಫೀಲ್ಡ್ ಗಳ ಹೆಸರನ್ನು ಡಬಲ್ ಕೋಟ್ಸ್ ನಲ್ಲಿ ಇಡಲಾಗಿದೆ.
07:11 ಬೇಸ್, ಕೇಸ್ ಸೆನ್ಸಿಟಿವ್ ಆಗಿದೆ. ಡಬಲ್ ಕೋಟ್ಸ್ ನಲ್ಲಿ ಇಟ್ಟಾಗ ಹೆಸರುಗಳನ್ನು ನಾವು ರಚಿಸಿದಂತೆಯೇ ಬೇಸ್ ಸ್ವೀಕರಿಸುತ್ತದೆ.
07:22 ನಾವು ಕೋಟ್ ಗಳನ್ನು ಬಳಸದಿದ್ದರೆ, ಬೇಸ್, ಎಲ್ಲಾ ಹೆಸರುಗಳನ್ನು ತಂತಾನೇ ಅಪ್ಪರ್-ಕೇಸ್ ಗೆ ಪರಿವರ್ತಿಸುತ್ತದೆ.
07:31 ಡೇಟಾ-ಟೈಪ್ TEXT ಹೊಂದಿರುವ ವ್ಯಾಲ್ಯೂಗಳನ್ನು ಮಾಡಲು ಸಿಂಗಲ್-ಕೋಟ್ ಗಳಲ್ಲಿ ಇಡಬೇಕು.
07:37 NUMERIC (ಅಂಕಿಗಳ) ಫೀಲ್ಡ್ ಗಳನ್ನು ಯಾವುದೇ ಕೋಟ್ ಗಳಲ್ಲಿ ಇಡಬೇಕಾದ ಅಗತ್ಯವಿಲ್ಲ.
07:43 AutoNumber ಫೀಲ್ಡ್ ಆಗಿರುವ, BookId ಫೀಲ್ಡ್ ಅನ್ನು ನಾವು ಸೇರಿಸಬೇಕಾದ ಅಗತ್ಯವಿಲ್ಲ.
07:51 ತಂತಾನೇ ಸಂಖ್ಯೆಯ ಉತ್ಪಾದನೆಯನ್ನು ಬೇಸ್ ತಾನೇ ನೋಡಿಕೊಳ್ಳುತ್ತದೆ.
07:56 ನಾವೀಗ SQL ಅನ್ನು ಎಕ್ಸೀಕ್ಯೂಟ್ ಮಾಡೋಣ. ‘Command successfully executed’ ಎಂಬ ಸಂದೇಶವನ್ನು ಗಮನಿಸಿ.
08:05 ನಾವು ಬರೆದ SQL ನಲ್ಲಿ ಏನಾದರೂ ಎರರ್ ಗಳಿದ್ದಲ್ಲಿ, ಬೇಸ್ ಅವುಗಳನ್ನು ತೋರಿಸುತ್ತದೆ.
08:12 ಈಗ Books ಟೇಬಲ್ ಮೇಲೆ ಡಬಲ್-ಕ್ಲಿಕ್ ಮಾಡಿ, ಈಗಷ್ಟೇ ನಾವು ಸೇರಿಸಿದ ಹೊಸ ರೆಕಾರ್ಡ್ ಅನ್ನು ಹುಡುಕೋಣ.
08:18 ಇಲ್ಲಿದೆ ನೋಡಿ, ಕೊನೆಯ ಸಾಲಿನಲ್ಲಿ ಇದನ್ನು ಸೇರಿಸಲಾಗಿದೆ.
08:23 ನಂತರ, ಒಂದು DDL (ಡಿ.ಡಿ.ಎಲ್) ಉದಾಹರಣೆಯನ್ನು ನೋಡೋಣ.
08:27 AuthorId, Author ಮತ್ತು Country ಎಂಬ ಫೀಲ್ಡ್ ಗಳೊಂದಿಗೆ, Authors ಎಂಬ ಒಂದು ಹೊಸ ಟೇಬಲ್ ಅನ್ನು ರಚಿಸುವೆವು.
08:36 SQL command ವಿಂಡೋದಲ್ಲಿ, ಈ ಸ್ಕ್ರೀನ್ ನಲ್ಲಿ ತೋರಿಸಿರುವಂತೆ ಟೈಪ್ ಮಾಡೋಣ.
08:43 ನಂತರ ಇದನ್ನು ಎಕ್ಸೀಕ್ಯೂಟ್ ಮಾಡೋಣ.
08:47 ಈಗ Tables ಲಿಸ್ಟ್ ಗೆ ಹೋಗೋಣ ಮತ್ತು View ಮೆನುವಿನಿಂದ ಟೇಬಲ್ ಗಳನ್ನು ರಿಫ್ರೆಶ್ ಮಾಡೋಣ.
08:54 ನಾವು ಈಗಷ್ಟೇ ರಚಿಸಿದ Authors ಟೇಬಲ್ ಇಲ್ಲಿದೆ ನೋಡಿ.
08:59 DML (ಡಿ.ಎಂ.ಎಲ್) ಕುರಿತು ಹೆಚ್ಚಿನ ಮಾಹಿತಿಗಾಗಿ, ಸ್ಕ್ರೀನ್ ನಲ್ಲಿ ತೋರಿಸಿರುವ ವೆಬ್ ಸೈಟ್ ಗೆ ಭೇಟಿ ನೀಡಿ.
09:06 DDL (ಡಿ.ಡಿ.ಎಲ್) ಕುರಿತು ಹೆಚ್ಚಿನ ಮಾಹಿತಿಗಾಗಿ, ಸ್ಕ್ರೀನ್ ನಲ್ಲಿ ತೋರಿಸಿರುವ ವಿಕಿಪೀಡಿಯಾ ವೆಬ್ಸೈಟ್ ಗೆ ಭೇಟಿ ನೀಡಿ.
09:13 ನಿಮಗೆ ಇಲ್ಲಿ ಇನ್ನೊಂದು ಅಸೈನ್ಮೆಂಟ್ ಇದೆ:
09:16 BookId, 3 ಎಂದಿರುವ ಪುಸ್ತಕದ ಬೆಲೆಯನ್ನು Rs. 300 ಆಗಿ ಸೆಟ್ ಮಾಡಲು UPDATE ಸ್ಟೇಟ್ಮೆಂಟ್ ಬಳಸಿ.
09:26 'The Hobbit' ಎಂಬ ಶೀರ್ಷಿಕೆಯ ಪುಸ್ತಕವನ್ನು ಡಿಲೀಟ್ ಮಾಡಿ.
09:30 Authors ಟೇಬಲ್ ನಲ್ಲಿ, ಒಂದು ಹೊಸ ರೆಕಾರ್ಡ್ ಅನ್ನು ಸೇರಿಸಿ. ಇಲ್ಲಿ, author name ಅನ್ನು ‘J.R.R. Tolkien’ ಎಂದು, country ಅನ್ನು ‘England’ ಎಂದು ಸೇರಿಸಿ.
09:41 DROP ಸ್ಟೇಟ್ ಮೆಂಟ್ ಬಳಸಿ, Authors ಟೇಬಲ್ ಅನ್ನು ಡೇಟಾಬೇಸ್ ನಿಂದ ತೆಗೆದು ಹಾಕಿ.
09:47 ಇದರೊಂದಿಗೆ ನಾವು ಲಿಬರ್ ಆಫಿಸ್ ಬೇಸ್ ಕುರಿತ ಈ ಟ್ಯುಟೋರಿಯಲ್ ನ ಕೊನೆಯ ಹಂತಕ್ಕೆ ಬಂದಿದ್ದೇವೆ.
09:52 ಸಂಕ್ಷಿಪ್ತವಾಗಿ, ನಾವು ಇಂಡೆಕ್ಸ್ ಗಳು, ಟೇಬಲ್ ಫಿಲ್ಟರ್ ಮತ್ತು

SQL ಕಮಾಂಡ್ ವಿಂಡೋ ಮುಂತಾದ ವಿಷಯಗಳ ಕುರಿತು ಕಲಿತೆವು.

10:01 ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, ರಾಷ್ಟ್ರೀಯ ಸಾಕ್ಷರತಾ ಮಿಷನ್, ICT, MHRD ಮೂಲಕ ಭಾರತ ಸರ್ಕಾರದ ನೆರವು ಪಡೆದಿದೆ.
10:13 ಈ ಪ್ರೊಜೆಕ್ಟ್ ಅನ್ನು ಸಂಯೋಜಿಸಿದವರು:

http://spoken-tutorial.org.

10:18 ಕೆಳಗಿನ ಲಿಂಕ್ ನಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿದೆ.
10:22 ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Sandhya.np14