LibreOffice-Suite-Base/C2/Introduction/Kannada

From Script | Spoken-Tutorial
Jump to: navigation, search
Time Narration
00:00 ಲಿಬ್ರೆ ಆಫೀಸ್ ಬೇಸ್ ಬಗ್ಗೆ ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:04 ಈ ಟ್ಯುಟೋರಿಯಲ್ ನಲ್ಲಿ ನಾವು ಲಿಬ್ರೆ ಆಫೀಸ್ ಬೇಸ್ ಎಂದರೇನು? ಎನ್ನುವ ಬಗ್ಗೆ ಕಲಿಯುತ್ತೇವೆ.
00:10 ಬೇಸ್ ಬಳಸಲು ಬೇಕಾದ ಅವಶ್ಯಕವಾದ ಅಂಶಗಳು
00:12 ಬೇಸ್ ನಿಂದ ನೀವು ಏನನ್ನು ಮಾಡಬಹುದು?
00:14 ರಿಲೇಶನಲ್ ಡೇಟಾಬೇಸ್ ಬೇಸಿಕ್ ಗಳು ಕ್ರಿಯೇಟ್ ಎ ಟೇಬಲ್ ಎಂಬ ಒಂದು ಹೊಸ ಡೇಟಾಬೇಸ್ ನ್ನು ತಯಾರಿಸುತ್ತದೆ.
00:21 ಲಿಬ್ರೆ ಆಫೀಸ್ ಬೇಸ್ ಒಂದು ಲಿಬ್ರೆ ಆಫೀಸ್ ಸೂಟ್ ನ ಡೇಟಾಬೇಸ್ ಫ್ರಂಟ್- ಎಂಡ್ ಆಗಿದೆ.
00:26 ಬೇಸ್ ಮೈಕ್ರೋಸಾಫ್ಟ್ ಅಕ್ಸೆಸ್ ಗೆ ಸರಿಸಮಾನವಾಗಿದೆ.
00:30 ಬೇಸ್ ಒಂದು ಉಚಿತ ಓಪನ್ ಸೋರ್ಸ್ ಸಾಫ್ಟ್ ವೇರ್ ಆಗಿದ್ದು ಇದು ಬೆಲೆರಹಿತ ಮತ್ತು ಇದನ್ನುಉಚಿತವಾಗಿ ಬಳಸಿ ವಿತರಿಸಬಹುದಾಗಿದೆ
00:37 ಈಗ ನಾವು ಬೇಸ್ ಗೆ ಬೇಕಾಗಿರುವ ಅಂಶಗಳ ಬಗ್ಗೆ ತಿಳಿಯೋಣ.
00:41 ಈ ಕೆಳಗಿನವುಗಳು ಮೈಕ್ರೋಸಾಫ್ಟ್ ವಿಂಡೋಸ್ ಗೆ ಬೇಕಾಗಿರುವ ಅಗತ್ಯತೆಗಳು.
00:46 ಮೈಕ್ರೋಸಾಫ್ಟ್ ವಿಂಡೋಸ್ 2000 (ಸರ್ವಿಸ್ ಪ್ಯಾಕ್ 4 ಅಥವಾ ಹೆಚ್ಚಿನದು), XP ವಿಸ್ತಾ, ಅಥವಾ ವಿಂಡೋಸ್ 7; ಪೆಂಟಿಯಂ ಗೆ ಸರಿಹೊಂದುವ ಪಿಸಿ, 1.5 ಜಿಬಿ ತನಕ ಸ್ಥಳಾವಕಾಶ ಹೊಂದಿರುವ ಹಾರ್ಡ್ ಡಿಸ್ಕ್.
01:02 ಉಬುಂಟು ಲಿನಕ್ಸ್ ಗೆ ಬೇಕಾಗಿರುವ ಸಿಸ್ಟಂ ಅವಶ್ಯಕತೆಗಳು ಇಲ್ಲಿವೆ.
01:06 ಲಿನಕ್ಸ್ ಕರ್ನಲ್ ವರ್ಶನ್ 2.6.18 ಅಥವಾ ಹೆಚ್ಚಿನದು; ಪೆಂಟಿಯಂ ಗೆ ಸರಿಹೊಂದುವ ಪಿಸಿ.
01:15 ನಮಗೆ ವಿಂಡೋಸ್ ಮತ್ತು ಲಿನಕ್ಸ್ ಎರಡನ್ನೂ ಇನ್ ಸ್ಟಾಲ್ ಮಾಡಲು ನಮಗೆ ಕನಿಷ್ಠ 256 MB RAM ಬೇಕಾಗುತ್ತದೆ.(512 MB RAM ಇದ್ದರೆ ಒಳ್ಳೆಯದು.)
01:24 ಸಿಸ್ಟಂ ಅವಶ್ಯಕತೆಗಳ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ಇದಕ್ಕೆ ಬೇಟಿ ನೀಡಿ http://www.libreoffice.org/get-help/system-requirements/
01:30 ನಿಮಗೆ ಜಾವ ರನ್ ಟೈಮ್ ಎನ್ವಿರೋನ್ ಮೆಂಟ್ ನ್ನು ಕೂಡ ಇನ್ ಸ್ಟಾಲ್ ಮಾಡಬೇಕಾಗುತ್ತದೆ.ಅದನ್ನು ನೀವು ಈ ಲಿಂಕ್ ನಲ್ಲಿ ಡೌನ್ ಲೋಡ್ ಮಾಡಬಹುದು: http://www.java.com/en/download/index.jsp .
01:38 ಮಧ್ಯದಲ್ಲಿ 'Free Java Download' ಎನ್ನುವ ರೆಡ್ ಬಟನ್ ಮೇಲೆ ಕ್ಲಿಕ್ ಮಾಡಿ.
01:44 ಒಮ್ಮೆ ನೀವು ಫೈಲ್ ನ್ನು ಡೌನ್ ಲೋಡ್ ಮಾಡಿದ ಮೇಲೆ ಅದರ ಮೇಲೆ ಡಬಲ್ ಕ್ಲಿಕ್ ಮಾಡಿ ಸೂಚನೆಗಳನ್ನು ಅನುಸರಿಸಿ ಇನ್ ಸ್ಟಾಲ್ ಮಾಡಿ.
01:52 ಈಗ ನಾವು ಲಿಬ್ರೆ ಆಫೀಸ್ ಬೇಸ್ ನ್ನು ಇನ್ ಸ್ಟಾಲ್ ಮಾಡುವುದರ ಬಗ್ಗೆ ತಿಳಿಯೋಣ.
01:56 ನೀವು ಈಗಾಗಲೇ ಲಿಬ್ರೆ ಆಫೀಸ್ ಸೂಟ್ ನ್ನು complete installation ಆಯ್ಕೆಯ ಮೂಲಕ ಇನ್ ಸ್ಟಾಲ್ ಮಾಡಿದ್ದಲ್ಲಿ,
02:03 ನೀವು ಸ್ಕ್ರೀನ್ ನ ಎಡಬದಿಯ ಕೆಳಗೆ ಇರುವ ಸ್ಟಾರ್ಟ್ ಮೆನುವನ್ನು ಕ್ಲಿಕ್ ಮಾಡುವುದರ ಮೂಲಕ ಲಿಬ್ರೆ ಆಫೀಸ್ ಬೇಸ್ ಗೆ ಹೋಗಬಹುದು.
02:12 ಈಗ ಆಲ್ ಪ್ರೊಗ್ರಮ್ಸ್ ಗೆ ಕ್ಲಿಕ್ ಮಾಡಿ, ನಂತರ ಲಿಬ್ರೆ ಆಫೀಸ್ ಸೂಟ್ ನ್ನು ಕ್ಲಿಕ್ ಮಾಡಿ.
02:21 ನೀವು ಲಿಬ್ರೆ ಆಫೀಸ್ ಸೂಟ್ ನ್ನು ಇನ್ ಸ್ಟಾಲ್ ಮಾಡಿರದಿದ್ದಲ್ಲಿ,
02:24 ನೀವು http://www.libreoffice.org official ವೆಬ್ ಸೈಟ್ ಗೆ ಹೋಗಿ, 'Download LibreOffice' ಎಂದು ಬರೆದಿರುವ ಹಸಿರು ಪ್ರದೇಶದ ಮೇಲೆ ಕ್ಲಿಕ್ ಮಾಡುವುದರ ಮೂಲಕ ಬೇಸ್ ನ್ನು ಇನ್ ಸ್ಟಾಲ್ ಮಾಡಬಹುದು.
02:37 ಲಿಬ್ರೆ ಆಫೀಸ್ ಸೂಟ್ ನ ಮೊದಲ ಟ್ಯುಟೋರಿಯಲ್ ನಲ್ಲಿ ವಿವರವಾದ ಮಾಹಿತಿಗಳು ಸಿಗುತ್ತವೆ.
02:43 ನೆನಪಿಡಿ, ಬೇಸ್ ನ್ನು ಇನ್ ಸ್ಟಾಲ್ ಮಾಡುವಾಗ 'Complete' ಆಯ್ಕೆಯನ್ನು ಬಳಸಿ.
02:50 ಸರಿ, ನಾವು ಈಗ ಇನ್ನೊಂದು ವಿಚಾರಕ್ಕೆ ಬರೋಣ.
02:54 ಬೇಸ್ ನಿಂದ ನೀವು ಏನನ್ನು ಮಾಡಬಹುದು?
02:58 ಬೇಸ್ ಬಳಸಿ ನಿಮಗೆ ಸುಸಜ್ಜಿತವಾದ ಡಾಟಾವನ್ನು ಸಂಗ್ರಹಿಸಲು ಸಾಧ್ಯವಿದೆ.
03:03 ಡಾಟಾ ಎಂಟ್ರಿಗಳನ್ನು ಮಾಡಬಹುದು ಮತ್ತು ಡಾಟಾವನ್ನು ಫಾರ್ಮ್ ಗಳನ್ನು ಬಳಸಿ ಓದಬಹುದು.
03:08 queries ಬಳಸಿ ಮಾಹಿತಿಗಳನ್ನು ಹೊರತೆಗೆಯಬಹುದು ಮತ್ತು,
03:12 ಪ್ರಿಂಟರ್ - ರೆಡಿ ರಿಪೋರ್ಟ್ ಗಳನ್ನು ಸುಂದರವಾಗಿ ವಿನ್ಯಾಸಗೊಳಿಸಬಹುದು ಹಾಗೂ ಸೃಷ್ಟಿಸಬಹುದು.
03:17 ಬೇಸ್ ನಿಮಗೆ ಡಾಟಾಬೇಸ್ ನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.
03:21 ನಿಮಗೆ ತಿಳಿದಿರುವಂತೆ ಡಾಟಾಬೇಸ್ ಡಾಟಾ, ಫಾರ್ಮ್ ಗಳು, queries ಮತ್ತು ರಿಪೋರ್ಟ್ಸ್ ಗಳ ಗುಂಪು ಆಗಿದೆ.
03:29 ಉದಾಹರಣೆಗೆ, ಬೇಸ್ ನ್ನು ಕಸ್ಟಮರ್ ಮಾಹಿತಿಗಳ ಡಾಟಾಬೇಸ್ ನ್ನು ನಿರ್ವಹಿಸಲು ಬಳಸಲಾಗುತ್ತದೆ.
03:37 ಟ್ರಾಕ್ ಸೇಲ್ಸ್ ಆರ್ಡರ್ ಮತ್ತು ಇನ್ವಾಯ್ಸ್ ಗಳು ವಿದ್ಯಾರ್ಥಿಗಳ ಗ್ರೇಡ್ ಡಾಟಾಬೇಸ್ ನ್ನು ನಿರ್ವಹಿಸುತ್ತದೆ ಅಥವಾ ಲೈಬ್ರರಿ ಡಾಟಾಬೇಸ್ ನ್ನು ನಿರ್ಮಿಸುತ್ತದೆ.
03:46 ಈಗ ನಾವು ಡಾಟಾಬೇಸ್ ನ ಬೇಸಿಕ್ ಗಳ ಬಗ್ಗೆ ಕಲಿಯೋಣ.
03:51 ಒಂದು ಡಾಟಾಬೇಸ್ ಡಾಟಾವನ್ನು ಸಂಗ್ರಹಿಸಿಟ್ಟುಕೊಂಡಿರುತ್ತದೆ ಮತ್ತು ಟೇಬಲ್ ಗಳಿಗೆ ಸೇರಿಸುತ್ತದೆ.
03:56 ಟೇಬಲ್ ಗಳು ಡಾಟಾದ ಒಂದೊಂದೇ ಭಾಗಗಳನ್ನು ರೋ ಗಳಲ್ಲಿ ಮತ್ತು ಕಾಲಂಗಳಲ್ಲಿ ಸಂಗ್ರಹಿಸಿಟ್ಟುಕೊಂಡಿರುತ್ತದೆ.
04:03 ಅಂತಹ ಡಾಟಾಬೇಸ್ ನ್ನು ರಿಲೇಶನಲ್ ಡಾಟಾಬೇಸ್ ಎಂದು ಕರೆಯುತ್ತಾರೆ ಏಕೆಂದರೆ, ಅದರಲ್ಲಿ ಟೇಬಲ್ ಗಳು ಕಾಲಂಗಳೊಂದಿಗೆ ಒಂದಕ್ಕೊಂದು ಸಂಬಂಧಿತವಾಗಿರುತ್ತವೆ.
04:15 ಈಗ ನಾವು ಲೈಬ್ರರಿ ಗಾಗಿ ಒಂದು ಸಿಂಪಲ್ ಡಾಟಾಬೇಸ್ ನ್ನು ತೆಗೆದುಕೊಳ್ಳೋಣ.
04:20 ಲೈಬ್ರರಿ ಎಂದರೆ ಪುಸ್ತಕಗಳ ಒಂದು ಗುಂಪು.
04:23 ಮತ್ತು ಪುಸ್ತಕಗಳನ್ನು ಲೈಬ್ರರಿಯ ಸದಸ್ಯರಿಗೆ ಕೊಡಬಹುದು.
04:28 ಒಂದು ಪುಸ್ತಕವು, ಟೈಟಲ್, author, publisher, year of publication ಹಾಗೂ price ಹೊಂದಿರುತ್ತದೆ.
04:37 ಇವುಗಳನ್ನು ಗುಣಲಕ್ಷಣಗಳು ಅಥವಾ ವೈಶಿಷ್ಟ್ಯಗಳು ಎನ್ನುತ್ತಾರೆ.
04:42 ಅಂತೆಯೇ ಒಂದು ಲೈಬ್ರರಿ ಸದಸ್ಯನಿಗೆ ಹೆಸರು, ಫೋನ್ ನಂಬರ್ ಮತ್ತು ವಿಳಾಸ ಇರುತ್ತದೆ.
04:48 ಮತ್ತು ಲೈಬ್ರರಿಯು ಅದರ ಸದಸ್ಯನಿಗೆ ಮಾತ್ರ ಪುಸ್ತಕಗಳನ್ನು ಕೊಡುತ್ತದೆ.
04:54 ಈಗ ನಾವು ಈ ಡಾಟಾವನ್ನು ಹೇಗೆ ರೋ ಮತ್ತು ಕಾಲಂಗಳನ್ನೊಳಗೊಂಡ ಪ್ರತ್ಯೇಕ ಟೇಬಲ್ ಗಳಾಗಿ ಸಂಗ್ರಹಿಸಬಹುದು ಎಂದು ತಿಳಿಯೋಣ.
05:02 ಬುಕ್ಸ್ ಟೇಬಲ್ ನಲ್ಲಿ ಪ್ರತಿಯೊಂದು ಪುಸ್ತಕದ ಮಾಹಿತಿಯನ್ನು ಸಂಗ್ರಹಿಸಬಹುದು.
05:08 ಅದರ ಗುಣಲಕ್ಷಣಗಳಂತೆ ಈ ಕಾಲಂಗಳು ತಯಾರಾಗುತ್ತವೆ:ಬುಕ್ ಟೈಟಲ್, author, publisher, year of publication ಹಾಗೂ price.


05:19 ಪ್ರತೀ ಪುಸ್ತಕವನ್ನು ಪ್ರತ್ಯೇಕವಾಗಿ ಗುರುತಿಸಲು ಈಗ ನಾವು ಬುಕ್ ಐಡಿ ಎಂಬ ಒಂದು ವಿಶಿಷ್ಟವಾದ ಗುರುತಿನ ಕಾಲಂನ್ನು ಸೇರಿಸೋಣ.
05:27 ಹೀಗೆ ಮಾಡುವುದರಿಂದ ನಮಗೆ ಒಂದೇ ಹೆಸರಿನ ಎರಡು ಪುಸ್ತಕಗಳನ್ನು ಸಂಪೂರ್ಣವಾಗಿ ಪ್ರತ್ಯೇಕಿಸಬಹುದು.
05:33 ಅಂತೆಯೇ ಸದಸ್ಯರ ಟೇಬಲ್ ಗಳೂ ಕೂಡ ಹೆಸರು ಮತ್ತು ಫೋನ್ ಎಂಬ ಕಾಲಂ ಗಳನ್ನು ಹೊಂದಿದೆ.
05:40 ಹಾಗೆಯೇ ಮೆಂಬರ್ ಐಡಿ ಇರುವುದು ಪ್ರತ್ಯೇಕವಾಗಿ ಗುರುತಿಸಲು ಅಥವಾ ಪ್ರತೀ ಸದಸ್ಯರನ್ನು ಪ್ರತ್ಯೇಕಿಸಲು. <pause>
05:47 ಮತ್ತು ನಾವು ಬುಕ್ ಇಷ್ಯುಡ್ ಎಂಬ ಮೂರನೆಯ ಟೇಬಲ್ ನಲ್ಲಿ ಸದಸ್ಯರಿಗೆ ಕೊಟ್ಟ ಪುಸ್ತಕಗಳ ಬಗ್ಗೆ ನೋಡಬಹುದು.
05:55 ಈ ಟೇಬಲ್, ಪುಸ್ತಕ ಕೊಟ್ಟ ಬಗ್ಗೆ, ಸದಸ್ಯರ ಹೆಸರು, ಕೊಟ್ಟ ದಿನಾಂಕ, ಹಿಂತಿರುಗಿಸಿದ ದಿನಾಂಕ, ನಿಜವಾಗಿ ಹಿಂತಿರುಗಿಸಬೇಕಾದ ದಿನಾಂಕ, ಪರಿಶೀಲಿಸಿದೆಯೋ ಇಲ್ಲವೋ ಎಂದು ತೋರಿಸುತ್ತದೆ.
06:09 ಡಾಟಾವನ್ನು ಒಂದಕ್ಕೊಂದು ಸಂಬಂಧಿಸಲು ನಾವು ಈ ಫೈಲ್ ಗಳ ನಡುವೆ ಸಂಬಂಧವನ್ನು ಸ್ಥಾಪಿಸಬಹುದು.
06:16 ಈಗ ಇದು 'relational databases' ನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.
06:22 ರಿಲೇಶನಲ್ ಡಾಟಾಬೇಸ್ ಬಗ್ಗೆ ಹೆಚ್ಚಿನ ಮುಂದುವರಿದ ವಿಷಯಗಳಿಗೆ http://spoken-tutorial.org ವೆಬ್ ಸೈಟ್ ಗೆ ಹೋಗಿ ನಮ್ಮ ಇನ್ನಿತರ ಟ್ಯುಟೋರಿಯಲ್ ರೆಫರ್ ಮಾಡಿ.
06:35 ಸರಿ, ಈಗ ನಾವು “Library” ಎನ್ನುವ ಮೊದಲ ಬೇಸ್ ಡಾಟಾ ಬೇಸ್ ನಿಂದ ಶುರು ಮಾಡೋಣ.
06:43 ಒಂದು ಹೊಸ ಡಾಟಾಬೇಸ್ ನ್ನು ತಯಾರಿಸಲು ಮೊದಲು ಬೇಸ್ ಪ್ರೊಗ್ರಾಮ್ ನ್ನು ಓಪನ್ ಮಾಡಿ.
06:50 ಈಗ ಸ್ಕ್ರೀನ್ ನ ಎಡಬದಿಯ ಕೆಳಗೆ ಇರುವ ವಿಂಡೋಸ್ ಸ್ಟಾರ್ಟ್ ಮೆನು ಮೇಲೆ ಕ್ಲಿಕ್ ಮಾಡಿ ನಂತರ ಆಲ್ ಪ್ರೊಗ್ರಮ್ಸ್ ಮೇಲೆ ಕ್ಲಿಕ್ ಮಾಡಿ, ನಂತರ ಲಿಬ್ರೆ ಆಫೀಸ್ ಸೂಟ್ ಮೇಲೆ ಕೊನೆಯಲ್ಲಿ ಲಿಬ್ರೆ ಆಫೀಸ್ ಬೇಸ್ ಮೇಲೆ ಕ್ಲಿಕ್ ಮಾಡಿ.
07:08 ಡಾಟಾಬೇಸ್ ವಿಝಾರ್ಡ್ ಎಂದು ಟೈಟಲ್ ಇರುವ ಒಂದು ಪಾಪ್ ಅಪ್ ವಿಂಡೋ ಕಾಣಿಸುತ್ತದೆ.
07:13 ಹೊಸ ಡಾಟಾಬೇಸ್ ತಯಾರಿಸಲು ನೆಕ್ಸ್ಟ್ ಬಟನ್ ಕ್ಲಿಕ್ ಮಾಡಿ.
07:18 ಈಗ ಕಾಣಿಸುವ ವಿಂಡೋದಲ್ಲಿ ಫಿನಿಶ್ ಬಟನ್ ಮೇಲೆ ಕ್ಲಿಕ್ ಮಾಡಿ.
07:23 ಇದು ಒಂದು Save As ವಿಂಡೋ ವನ್ನು ಓಪನ್ ಮಾಡುತ್ತದೆ.
07:26 ನಾವು ಈಗ ಲೈಬ್ರರಿ ಡಾಟಾಬೇಸ್ ನ್ನು ತಯಾರಿಸುತ್ತಿರುವುದರಿಂದ ಫೈಲ್ ನೇಮ್ ಟೆಕ್ಸ್ಟ್ ಬಾಕ್ಸ್ ನಲ್ಲಿ ನಾವು "Library" ಎಂದು ಟೈಪ್ ಮಾಡೋಣ.
07:36 ನಂತರ ಸೇವ್ ಬಟನ್ ಕ್ಲಿಕ್ ಮಾಡಿ.
07:39 ಈಗ ನಾವು ಒಳಗಿದ್ದೇವೆ.
07:42 ನಂತರ ಈಗ ನಾವು ಡಾಟಾ ವನ್ನು ಶೇಖರಿಸಲು ಟೇಬಲ್ ಗಳನ್ನು ತಯಾರಿಸೋಣ.
07:46 ಹೊಸ ಟೇಬಲ್ ನ್ನು ತಯಾರಿಸಲು ಎಡಬದಿಯ ಡಾಟಾಬೇಸ್ ಲಿಸ್ಟ್ ನಲ್ಲಿ ಟೇಬಲ್ ಐಕಾನ್ ನ್ನು ಕ್ಲಿಕ್ ಮಾಡಿ.
07:54 ಬಲಬದಿಯ ಪೆನಲ್ ನ ಟಾಸ್ಕ್ ಲಿಸ್ಟ್ ನಲ್ಲಿ 'Create Table in Design View' ಮೇಲೆ ಕ್ಲಿಕ್ ಮಾಡಿ. ಇದು ಇನ್ನೊಂದು ವಿಂಡೋ ವನ್ನು ಓಪನ್ ಮಾಡುತ್ತದೆ.
08:05 ಇಲ್ಲಿ ಫೀಲ್ಡ್ ನೇಮ್ ಕೆಳಗೆ ಮೊದಲ ಕಾಲಂ ನ್ನು 'BookId' ಎಂದು ಬರೆಯಿರಿ.
08:13 ಫೀಲ್ಡ್ ಟೈಪ್ ಕಾಲಂ ಗೆ ಹೋಗಲು ಟ್ಯಾಬ್ ಕೀ ಯನ್ನು ಬಳಸಿ.
08:18 ಬುಕ್ ಐಡಿ ಯು ಪ್ರತಿಯೊಂದು ಪುಸ್ತಕಕ್ಕೂ ವಿಭಿನ್ನವಾಗಿರುವುದರಿಂದ ಫೀಲ್ಡ್ ಟೈಪ್ ಡ್ರಾಪ್ ಡೌನ್ ಲಿಸ್ಟ್ ನಲ್ಲಿ ಇಂಟಿಜರ್ ಸೆಲೆಕ್ಟ್ ಮಾಡಿ.
08:30 ಕೆಳಗಿನ ಸೆಕ್ಷನ್ ನಲ್ಲಿ ಫೀಲ್ಡ್ ಪ್ರಾಪರ್ಟಿಯನ್ನು ಬದಲಾಯಿಸಿ.
08:36 ಆಟೋ ವಾಲ್ಯೂ ವನ್ನು ನೋ ಇಂದ ಎಸ್ ಗೆ ಬದಲಾಯಿಸಿ.
08:41 ಈ ಫೀಲ್ಡ್ ಈಗ ಪ್ರತೀ ಪುಸ್ತಕವನ್ನೂ ಪ್ರತ್ಯೇಕವಾಗಿ ಗುರುತಿಸುತ್ತದೆ.
08:46 ಇನ್ನೊಂದು ಮಾತಲ್ಲಿ ಹೇಳುವುದಾದರೆ ಈ ಫೀಲ್ಡ್ ನ್ನು ಪ್ರೈಮರಿ ಕೀ ಎಂದೂ ಕರೆಯುತ್ತಾರೆ.
08:51 ಬುಕ್ ಐಡಿ ಯ ಎಡಬದಿಯಲ್ಲಿ ಒಂದು ಹಳದಿ ಕೀ ಗುರುತು ಇರುವುದನ್ನು ಗಮನಿಸಿ.
08:58 ಈಗ ನಾವು ಫೀಲ್ಡ್ ನೇಮ್ ಗೆ ಫೀಲ್ಡ್ ಟೈಪ್ ನ್ನು ಹೇಗೆ ಆಯ್ಕೆ ಮಾಡುವುದು ಎಂದು ತಿಳಿಯೋಣ.
09:05 ಫೀಲ್ಡ್ ಟೈಪ್ ಎಂದರೆ, ಟೆಕ್ಸ್ಟ್, ಇಂಟಿಜರ್, ಸಂಖ್ಯೆ, ಡೆಸಿಮಲ್ ಅಥವಾ ದಿನಾಂಕ.
09:13 ಸಾಮಾನ್ಯವಾದ ಮಾಹಿತಿಗಳಿರುವ ಫೀಲ್ಡ್ ಗೆ ಟೆಕ್ಸ್ಟ್ ನ್ನು ಬಳಸಿ.ಉದಾಹರಣೆಗೆ, ಹೆಸರು, ಟೈಟಲ್, ವಿಳಾಸ.
09:22 ಸಂಖ್ಯೆಗಳನ್ನು ಮಾತ್ರ ಹೊಂದಿರುವ ಫೀಲ್ಡ್ ನಲ್ಲಿ ಇಂಟಿಜರ್, ಸಂಖ್ಯೆ, ಡೆಸಿಮಲ್ ನ್ನು ಬಳಸಿ.
09:23 ಉದಾಹರಣೆಗೆ, ಪ್ರೈಸ್ ಮಾಹಿತಿಗಳಿಗೆ ಸಂಖ್ಯೆಗಳನ್ನು ಬಳಸಿ.ಮತ್ತು ವರ್ಷದ ಮಾಹಿತಿಗೆ ಇಂಟಿಜರ್ ನ್ನು ಬಳಸಿ.
09:39 ಈಗ ನಾವು ಉಳಿದ ಫೀಲ್ಡ್ ಗಳನ್ನು ತಯಾರಿಸೋಣ.
09:43 ಟೈಟಲ್ ಫೀಲ್ಡ್ ನಲ್ಲಿ Text Author.
09:52 ಫೀಲ್ಡ್ ಟೈಪ್ ನಲ್ಲಿ ಟೆಕ್ಸ್ಟ್ ಪಬ್ಲಿಶ್ಡ್ ಇಯರ್


10:00 ಫೀಲ್ಡ್ ಟೈಪ್ ನಲ್ಲಿ ಇಂಟಿಜರ್.
10:05 ಪಬ್ಲಿಶರ್ .
10:09 ಫೀಲ್ಡ್ ಟೈಪ್ ನಲ್ಲಿ ಟೆಕ್ಸ್ಟ್.
10:11 ಪ್ರೈಸ್
10:14 ಫೀಲ್ಡ್ ಟೈಪ್ ನಲ್ಲಿ ಸಂಖ್ಯೆ .
10:18 ಉದ್ದವನ್ನು 5 ಕ್ಕೆ ಹಾಗೂ ಡೆಸಿಮಲ್ ಪ್ಲೇಸ್ ನ್ನು 2 ಕ್ಕೆ ಬದಲಿಸಿ.
10:25 Format example ಬಟನ್ ಕ್ಲಿಕ್ ಮಾಡಿ.
10:30 ಇದು ಫೀಲ್ಡ್ ಫಾರ್ಮೆಟ್ ವಿಂಡೋವನ್ನು ಓಪನ್ ಮಾಡುತ್ತದೆ.
10:33 ಕೆಟಗರಿ ಲಿಸ್ಟ್ ನಿಂದ ಕರೆನ್ಸಿಯನ್ನು ಸೆಲೆಕ್ಟ್ ಮಾಡಿ ಮತ್ತು ಫಾರ್ಮೆಟ್ ಲಿಸ್ಟ್ ನಿಂದ INR ಸೆಲೆಕ್ಟ್ ಮಾಡಿ.
10:42 ಈಗ ನಾವು ರೂ.1234.00 ನ್ನು ಆಯ್ಕೆ ಮಾಡೋಣ.ಅದು ಎರಡು ಡೆಸಿಮಲ್ ಪ್ಲೇಸ್ ನ್ನು ಹೊಂದಿದೆ.
10:54 ಗಮನಿಸಿ, ಒಟ್ಟು ಉದ್ದ ಐದು ಮತ್ತು ಎರಡು ಡೆಸಿಮಲ್ ನ್ನು ಒಳಗೊಂಡಿರುತ್ತದೆ.
11:02 ಈಗ ಓಕೆ ಬಟನ್ ಕ್ಲಿಕ್ ಮಾಡಿ.ಈಗ ನಾವು ಬುಕ್ಸ್ ಟೇಬಲ್ ಗೆ ಎಲ್ಲಾ ಕಾಲಂ ಗಳನ್ನು ತಯಾರಿಸಿದ್ದೇವೆ.
11:11 ಈಗ ನಾವು ಟೇಬಲ್ ಅನ್ನು ಸೇವ್ ಮಾಡೋಣ.
11:14 ಫೈಲ್ ಮೆನುವಿನ ಕೆಳಗೆ ಇರುವ ಸೇವ್ ಬಟನ್ ಮೇಲೆ ಕ್ಲಿಕ್ ಮಾಡಿ.
11:20 ಟೇಬಲ್ ನೇಮ್ ಟೆಕ್ಸ್ಟ್ ಬಾಕ್ಸ್ ನಲ್ಲಿ 'ಬುಕ್ಸ್' ಎಂದು ಟೈಪ್ ಮಾಡಿ.
11:25 ಅದು ಅದೇ ಲೋಕೇಶನ್ ನಲ್ಲಿ ಸೇವ್ ಆಗುತ್ತದೆ. ಹಾಗೆ ’ Library’ ಡಾಟಾ ಬೇಸ್ ನಂತೆ ಟೇಬಲ್ ಗಳು ಡಾಟಾ ಬೇಸ್ ನ ಒಂದು ಭಾಗವಾಗಿದೆ. ಎಂಬುದನ್ನು ಗಮನಿಸಿ
11:36 and click on the ok button.


ಮತ್ತು ಓಕೆ ಬಟನ್ ಮೇಲೆ ಕ್ಲಿಕ್ ಮಾಡಿ.
11:39 ಮುಂದಿನ ಟ್ಯುಟೋರಿಯಲ್ ನಲ್ಲಿ ನಾವು ಬುಕ್ ಟೇಬಲ್ ಗೆ ಡಾಟಾವನ್ನು ಸೇರಿಸಲಿದ್ದೇವೆ ಮತ್ತು ಮೆಂಬರ್ ಮತ್ತು ಬುಕ್ ಇಶುಯ್ಡ್ ಟೇಬಲ್ ಗಳನ್ನು ತಯಾರಿಸಲಿದ್ದೇವೆ.
11:49 ಇದು ನಮ್ಮ ನ್ನು ಈ ಟ್ಯುಟೋರಿಯಲ್ ನ ಅಂತ್ಯಕ್ಕೆ ತರುತ್ತದೆ.
11:54 ಸಾರಾಂಶದಲ್ಲಿ ಹೇಳುವುದಾದರೆ, ನಾವು ಕಲಿತದ್ದು ಇಷ್ಟು,
11:58 ಲಿಬ್ರೆ ಆಫೀಸ್ ಬೇಸ್ ಎಂದರೇನು?
12:01 ಬೇಸ್ ನ್ನು ಬಳಸಲು ಬೇಕಾಗಿರುವ ಅವಶ್ಯಕತೆಗಳು.
12:03 ಬೇಸ್ ನಿಂದ ನಿಮಗೆ ಏನನ್ನು ಮಾಡಲು ಸಾಧ್ಯವಿದೆ?ರಿಲೇಶನಲ್ ಡಾಟಾ ಬೇಸಿಕ್ಸ್.
12:08 ಹೊಸ ಡಾಟಾ ಬೇಸ್ ನ್ನು ತಯಾರಿಸಿ.ಹೊಸ ಟೇಬಲ್ ನ್ನು ತಯಾರಿಸಿ.
12:13 ಈ ಸಾಲಿನ ಮುಂದಿನ ಟ್ಯುಟೋರಿಯಲ್ ಟೇಬಲ್ ಮತ್ತು ರಿಲೇಶನ್ ಶಿಪ್ ಗಳ ಬಗ್ಗೆ ಆಗಿದೆ.
12:18 ಸ್ಪೋಕನ್ ಟ್ಯುಟೋರಿಯಲ್ ಗಳು ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗವಾಗಿದೆ.
12:24 ಇದು ಭಾರತ ಸರ್ಕಾರದ ನ್ಯಾಷನಲ್ ಮಿಶನ್ ಆನ್ ಎಜುಕೇಶನ್ ತ್ರು ಐಸಿಟಿ, ಎಂಎಚ್ಆರ್ ಡಿ ಯಿಂದ ಸ್ಪೂರ್ತಿಗೊಂಡಿದೆ
12:32 ಈ ಪ್ರಾಜೆಕ್ಟ್ ಸ್ಪೋಕನ್ ಹೈಫನ್ ಟ್ಯುಟೋರಿಯಲ್ ಡಾಟ್ org http://spoken-tutorial.org ಯಿಂದ ಸಂಘಟಿತವಾಗಿ ಇರುತ್ತದೆ.
12:38 ಇದರ ಬಗ್ಗೆ ಹೆಚ್ಚಿನ ಮಾಹಿತಿಯು ಸ್ಪೋಕನ್ ಹೈಫನ್ ಟ್ಯುಟೋರಿಯಲ್ ಡಾಟ್ org ಸ್ಲಾಶ್ NMEICT ಹೈಫನ್ ಇಂಟ್ರೋ ನಲ್ಲಿ ಲಭ್ಯವಿದೆ.
12:44 ಈ ಟ್ಯುಟೋರಿಯಲ್ ದೇಸಿಕ್ರೂ ಸೊಲ್ಯುಶನ್ ಪ್ರೈವೇಟ್ ಲಿಮಿಟೆಡ್ ನ ಕೊಡುಗೆಯಾಗಿದೆ
12:54 ಸೇರಿರುವುದಕ್ಕಾಗಿ ವಂದನೆಗಳು.

Contributors and Content Editors

Udaya