LibreOffice-Suite-Base/C2/Create-queries-using-Design-View/Kannada
From Script | Spoken-Tutorial
Time | Narration |
00:00 | ‘ಲಿಬರ್ ಆಫಿಸ್ ಬೇಸ್’ ನ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:04 | ಈ ಟ್ಯುಟೋರಿಯಲ್ ನಲ್ಲಿ ನಾವು, |
00:06 | 'ಡಿಸೈನ್ ವ್ಯೂ' ಅನ್ನು ಬಳಸಿ 'ಕ್ವೆರಿ' ರಚಿಸಲು, |
00:10 | 'ಕ್ವೆರಿ ಡಿಸೈನ್' ವಿಂಡೋ ಗೆ ಟೇಬಲ್ ಗಳನ್ನು ಸೇರಿಸಲು, |
00:13 | 'ಫೀಲ್ಡ್'ಗಳನ್ನು ಆಯ್ಕೆಮಾಡಲು, 'ಏಲಿಯಸ್'ಗಳನ್ನು ರೂಪಿಸಲು,
ವರ್ಗೀಕರಿಸುವ ಕ್ರಮವನ್ನು ರೂಪಿಸಲು ಮತ್ತು 'ಕ್ವೆರಿ' ಗಾಗಿ ಸರ್ಚ್ ಮಾಡುವ ಬಗೆಯನ್ನು ಒದಗಿಸಲು ಕಲಿಯಲಿದ್ದೇವೆ. |
00:23 | ಇದಕ್ಕಾಗಿ, ನಮ್ಮ ಪರಿಚಿತ 'Library' ಡೇಟಾಬೇಸ್ನ ಉದಾಹರಣೆಯನ್ನು ನಾವು ತೆಗೆದುಕೊಳ್ಳೋಣ. |
00:29 | ಈ 'Library' ಡೇಟಾಬೇಸ್ ನಲ್ಲಿ, ನಾವು ಪುಸ್ತಕಗಳು ಮತ್ತು ಸದಸ್ಯರ ಬಗ್ಗೆ ಮಾಹಿತಿಯನ್ನು ಶೇಖರಿಸಿದ್ದೇವೆ. |
00:37 | ಅಲ್ಲದೆ, ಸದಸ್ಯರಿಗೆ ನೀಡಿರುವ ಪುಸ್ತಕಗಳನ್ನು ಟ್ರ್ಯಾಕ್ ಮಾಡಲು, ನಾವು ಒಂದು 'table' ಅನ್ನು ಸಹ ಹೊಂದಿದ್ದೇವೆ. |
00:45 | ಸದಸ್ಯರಿಗೆ ನೀಡಿರುವ ಎಲ್ಲಾ ಪುಸ್ತಕಗಳನ್ನು ಪಟ್ಟಿ ಮಾಡಲು ನಾವು ಈಗ ಒಂದು ಹೊಸ 'ಕ್ವೆರಿ' ಯನ್ನು ರಚಿಸಲಿದ್ದೇವೆ. |
00:54 | ಅಂದರೆ, ಸದಸ್ಯರಿಗೆ ನೀಡಿರುವ ಪುಸ್ತಕಗಳ 'history' ಯನ್ನು ನಾವು ರಚಿಸೋಣ. |
01:03 | ನಾವು 'Library' ಡೇಟಾಬೇಸ್ ಅನ್ನು ತೆರೆಯೋಣ. |
01:07 | ಎಡ ಪ್ಯಾನಲ್ ನಲ್ಲಿರುವ 'Queries' ಐಕಾನ್ ಮೇಲೆ ಕ್ಲಿಕ್ ಮಾಡೋಣ. |
01:13 | ಬಲ ಪ್ಯಾನೆಲ್ ನಲ್ಲಿ, ನಾವು ‘Create Query in Design view’ ಮೇಲೆ ಕ್ಲಿಕ್ ಮಾಡುವೆವು. ಈಗ ನಾವು ಒಂದು ಹೊಸ ವಿಂಡೋಅನ್ನು ನೋಡುತ್ತೇವೆ. ಇದನ್ನು 'Query Design' ವಿಂಡೋ ಎಂದು ಸಹ ಕರೆಯಲಾಗುತ್ತದೆ. |
01:28 | ಮೇಲ್ಗಡೆ, 'Add Table or Query' ಎಂಬ ಒಂದು ಸಣ್ಣ ಪಾಪ್ – ಅಪ್ ವಿಂಡೋವನ್ನು ಸಹ ನಾವು ನೋಡಬಹುದು. |
01:39 | ಇಲ್ಲಿಯೇ ನಾವು ಕ್ವೆರಿಗಾಗಿ ಡೇಟಾದ ಮೂಲವನ್ನು (source) ಹೇಳಲಿದ್ದೇವೆ. |
01:46 | ಸದಸ್ಯರಿಗೆ ಕೊಡಲಾದ ಪುಸ್ತಕಗಳ 'history' ರಚಿಸಲು, ನಮ್ಮ ಕ್ವೆರಿ ಗಾಗಿ ನಮಗೆ ಈ ಮೂರು ಟೇಬಲ್ ಗಳ ಅಗತ್ಯವಿದೆ. |
01:57 | ನಾವು ಲಿಸ್ಟ್ ನಲ್ಲಿರುವ 'Books' ಟೇಬಲ್ ಮೇಲೆ ಕ್ಲಿಕ್ ಮಾಡಿ, ನಂತರ ಪಾಪ್–ಅಪ್ ವಿಂಡೋನಲ್ಲಿ ಬಲಕ್ಕೆ ಇರುವ 'Add' ಬಟನ್ ಮೇಲೆ ಕ್ಲಿಕ್ ಮಾಡಿ ಇದನ್ನು ಮಾಡುವೆವು. |
02:11 | ಇದೇ ರೀತಿ ನಾವು 'BooksIssued' ಟೇಬಲ್ ಮತ್ತು 'Members' ಟೇಬಲ್ ಗಳನ್ನು ಸೇರಿಸುವೆವು. <pause> |
02:19 | “ಕ್ವೆರಿ ಡಿಸೈನ್” ವಿಂಡೋದ ಹಿನ್ನೆಲೆಯಲ್ಲಿ ಮೂರು ಟೇಬಲ್ ಗಳು ಕಾಣಿಸುತ್ತಿರುವುದನ್ನು ನಾವೀಗ ನೋಡಬಹುದು. |
02:26 | ನಾವೀಗ ಪಾಪ್ – ಅಪ್ ವಿಂಡೋ ಅನ್ನು ಮುಚ್ಚೋಣ. |
02:31 | ಇದು 'Query design ' ವಿಂಡೋಅನ್ನು ಮುಂದೆ ತರುತ್ತದೆ. |
02:39 | ಈ ಮೂರು ಟೇಬಲ್ ಗಳು, ವಿಂಡೋದ ಮೇಲಿನ ಅರ್ಧ ಭಾಗದಲ್ಲಿ ಇರುವುದನ್ನು ಗಮನಿಸಿ. |
02:46 | ಇಲ್ಲಿ, ಈ ಟೇಬಲ್ ಗಳ ನಡುವೆ ಒಂದಷ್ಟು ಸ್ಥಳಾವಕಾಶವನ್ನು ನೀಡೋಣ. |
02:53 | ನಾವೀಗ 'Members' ಟೇಬಲ್ ಅನ್ನು ಕ್ಲಿಕ್ ಮಾಡಿ, ಬಲತುದಿಗೆ, ಎಳೆದು ತರೋಣ (ಡ್ರಾಗ್ ಮತ್ತು ಡ್ರಾಪ್). |
03:01 | ನಂತರ 'BooksIssued' ಟೇಬಲ್ ಅನ್ನು ಕ್ಲಿಕ್ ಮಾಡಿ, ಮಧ್ಯದಲ್ಲಿ ಎಳೆದು ತರೋಣ, |
03:11 | ಈಗ, ಈ ಟೇಬಲ್ ಗಳನ್ನು ಸೇರಿಸುವ ಗೆರೆಗಳನ್ನು ನಾವು ನೋಡಬಹುದು. ಇವು ಈ ಹಿಂದೆ ನಾವು ನಿರ್ಧರಿಸಿದ್ದ 'relationships' ಆಗಿವೆ. |
03:23 | 'relationship' ವಿವರಗಳನ್ನು ನೋಡಲು ನಾವು ಈ ಗೆರೆಗಳ ಮೇಲೆ ಡಬಲ್–ಕ್ಲಿಕ್ ಮಾಡಬಹುದು. |
03:30 | ಈಗ ನಾವು, 'Query design' ವಿಂಡೋದ ಕೆಳಗಿನ ಅರ್ಧ ಭಾಗವನ್ನು ನೋಡೋಣ. |
03:37 | ಇಲ್ಲಿ 'cell' ಗಳ ಅನೇಕ ಸಾಲು (row) ಗಳಿವೆ. ನಾವು ಕ್ವೆರಿಯನ್ನು ರಚಿಸುವಾಗ ಇವುಗಳನ್ನು ತುಂಬಲಿದ್ದೇವೆ. |
03:48 | ಮೊದಲಿಗೆ, ನಾವು 'Field' ಕಾಲಂ ಅನ್ನು ಪರೀಕ್ಷಿಸಲಿದ್ದೇವೆ. |
03:53 | ಇದು ಫಲಿತಾಂಶದ ಸೆಟ್ ನಲ್ಲಿ ನಾವು ಡಿಸ್ಪ್ಲೇ ಮಾಡಬೇಕಾದ ಫೀಲ್ಡ್ ಗಳನ್ನು ಸೂಚಿಸಲು ಇರುತ್ತದೆ. |
04:01 | ಇದನ್ನು ಮಾಡಲು, ವಿಂಡೋದ ಮೇಲಿನ ಅರ್ಧದಲ್ಲಿಯ 'Books' ಟೇಬಲ್ ನಲ್ಲಿ 'Title' ಫೀಲ್ಡ್ ಮೇಲೆ, |
04:12 | ನಂತರ 'Members' ಟೇಬಲ್ ನಲ್ಲಿಯ 'Name' ಫೀಲ್ಡ್, |
04:17 | ತದನಂತರ, 'BooksIssued' ಟೇಬಲ್ ನಲ್ಲಿ 'Issue Date' ಫೀಲ್ಡ್, |
04:24 | ನಂತರ, 'Return date, actual return date' ಮತ್ತು ಕೊನೆಯಲ್ಲಿ 'checked in' ಫೀಲ್ಡ್ ಡಬಲ್-ಕ್ಲಿಕ್ ಮಾಡುವೆವು. |
04:34 | ವಿಂಡೋದ ಕೆಳಗಿನ ಅರ್ಧದಲ್ಲಿಯ ಈ ಫೀಲ್ಡ್ ಗಳು ಮೊದಲ ರೋ ನಲ್ಲಿ |
04:44 | ಮತ್ತು ಅವುಗಳಿಗೆ ಸಂಬಂಧಿಸಿದ 'ಟೇಬಲ್' ಗಳ ಹೆಸರುಗಳು ಮೂರನೇ ರೋ ನಲ್ಲಿ ಇರುವುದನ್ನು ಗಮನಿಸಿ. |
04:50 | ನಂತರ, ಎರಡನೇ ರೋ ನಲ್ಲಿಯ 'Alias' ಅನ್ನು ನೋಡೋಣ. |
04:57 | ಇಲ್ಲಿ ನಾವು ಆಯ್ದ ಫೀಲ್ಡ್ ಗಳಿಗೆ ವಿವರಣಾತ್ಮಕ ಹೆಸರುಗಳನ್ನು ನಮೂದಿಸಬಹುದು. |
05:04 | ಹೀಗೆ, ಚಿತ್ರದಲ್ಲಿ ತೋರಿಸಿರುವಂತೆ ನಾವು ಏಲಿಯಸ್ ಗಳನ್ನು ಟೈಪ್ ಮಾಡೋಣ. <pause> |
05:11 | ಹೀಗೆ ನಾವು ಏಲಿಯಸ್ ಗಳ ಕೆಲಸ ಮುಗಿಸಿದ್ದೇವೆ. |
05:15 | ನಂತರ, ನಾವು 'Sort' ಎಂಬ ರೋ ಅನ್ನು ನೋಡೋಣ. |
05:21 | ಇಲ್ಲಿ ನಾವು 'result set' ನ ಅನುಕ್ರಮವನ್ನು ಸೂಚಿಸಬಹುದು. |
05:26 | ನಮಗೆ ವಿತರಿಸಿದ ಪುಸ್ತಕಗಳ 'history' ಬೇಕಿರುವುದರಿಂದ, ನಾವಿದನ್ನು ಕಾಲಾನುಕ್ರಮದಲ್ಲಿ ಹೊಂದಿಸಲಿದ್ದೇವೆ. |
05:34 | ಅಂದರೆ, ನಾವು 'result set' ಅನ್ನು ಏರಿಕೆ ಕ್ರಮದಲ್ಲಿ 'Issue Date' ಮೂಲಕ ಹೊಂದಿಸಲಿದ್ದೇವೆ. |
05:43 | ಇದಕ್ಕಾಗಿ, ನಾವು 'Sort' ರೋ ನಲ್ಲಿ 'Issuedate' ಫೀಲ್ಡ್ ನ ಅಡಿಯಲ್ಲಿ ಖಾಲಿ ಇರುವ 'cell' ನಲ್ಲಿ ಕ್ಲಿಕ್ ಮಾಡುವೆವು. ಮತ್ತು 'Ascending' ಮೇಲೆ ಕ್ಲಿಕ್ ಮಾಡೋಣ. |
05:56 | ಸರಿ, ಮುಂದಿನ ರೋ ‘Visible’ ನತ್ತ ಹೋಗೋಣ. |
06:02 | ಇಲ್ಲಿ, ನಾವು ಆಯ್ಕೆಮಾಡಿದ ಫೀಲ್ಡ್ ಗಳ ಗೋಚರತೆಯನ್ನು, ಅವುಗಳನ್ನು ಚೆಕ್ ಅಥವಾ ಅನ್-ಚೆಕ್ ಮಾಡುವ ಮೂಲಕ ನಿರ್ಧರಿಸೋಣ. |
06:11 | ಡಿಫಾಲ್ಟ್ ಆಗಿ, ಅವೆಲ್ಲವೂ ಚೆಕ್ ಆಗಿರುವುದನ್ನು ಗಮನಿಸಿ. |
06:17 | ನಂತರ, ನಾವು ‘Function’ ರೋ ಅನ್ನು ನೋಡುವೆವು. ಜಟಿಲವಾದ ಕ್ವೆರಿಗಳನ್ನು ರಚಿಸಲು ಇದನ್ನು ಬಳಸಲಾಗುತ್ತದೆ. ಸದ್ಯಕ್ಕೆ ನಾವಿದನ್ನು ಇಲ್ಲಿಯೇ ಬಿಟ್ಟು |
06:27 | ‘Criterion’ ರೋ ಗೆ ಹೋಗೋಣ. |
06:32 | ಇಲ್ಲಿ ನಾವು result set ಅನ್ನು ಸರಳ ಅಥವಾ ಜಟಿಲ ಮಾನದಂಡಗಳ ಸೆಟ್ ಗೆ ಸೀಮಿತಗೊಳಿಸಬಹುದು. |
06:40 | ಉದಾಹರಣೆಗೆ, ವಿತರಿಸಲಾದ ಆದರೆ ಸದಸ್ಯರು ಹಿಂದಿರುಗಿಸದೇ ಇರುವ ಪುಸ್ತಕಗಳಿಗಾಗಿ ಮಾತ್ರ ನಾವು 'ಕ್ವೆರಿ' ಮಾಡಬಹುದು. |
06:49 | ಅಂದರೆ, ಚೆಕ್-ಇನ್ ಆಗದೇ ಇರುವ ಪುಸ್ತಕಗಳು ಮಾತ್ರ. |
06:54 | ನಾವು ಈ ರೋ ನಲ್ಲಿ 'CheckedIn' ಫೀಲ್ಡ್ ನ ಅಡಿಯಲ್ಲಿ, ಖಾಲಿ 'cell' ಮೇಲೆ ಕ್ಲಿಕ್ ಮಾಡೋಣ ಮತ್ತು ‘Equals Zero’ ಎಂದು ಟೈಪ್ ಮಾಡೋಣ. |
07:06 | ಆಯಿತು. ಈ ಕ್ವೆರಿಯನ್ನು ನಾವೀಗ 'ರನ್' ಮಾಡೋಣ. |
07:10 | ನಾವು ಕೀಬೋರ್ಡ್ ಶಾರ್ಟ್ಕಟ್ 'F5' ಬಳಸಬಹುದು ಅಥವಾ ವಿಂಡೋದ ಮೇಲ್ಗಡೆ ಇರುವ 'Edit' ಮೆನ್ಯು ಮೇಲೆ ಕ್ಲಿಕ್ ಮಾಡಬಹುದು.
ನಂತರ ಕೆಳಗಡೆ 'Run Query' ಮೇಲೆ ಕ್ಲಿಕ್ ಮಾಡೋಣ. |
07:27 | ವಿಂಡೋದ ಮೇಲಿನ ಅರ್ಧಭಾಗದಲ್ಲಿ ನಿಮಗೆ ಸ್ವಲ್ಪ ಡೇಟಾ ಕಾಣುತ್ತಿದೆಯೇ? |
07:32 | ಇವು ನಿಮ್ಮ ಕ್ವೆರಿಯ ಫಲಿತಾಂಶಗಳಾಗಿವೆ. |
07:36 | ಗಮನಿಸಿ- ಸದಸ್ಯರಿಗೆ ನೀಡಿದ ಪುಸ್ತಕಗಳ 'history' ಯನ್ನು ಇಲ್ಲಿ ನಾವು ನೋಡಬಹುದು. ಇವುಗಳನ್ನು 'Issue Date' ಮೂಲಕ ಹೊಂದಿಸಲಾಗಿದೆ. ಅಲ್ಲದೇ, ಯಾವುದೇ ಪುಸ್ತಕವು ಚೆಕ್-ಇನ್ ಆಗಿಲ್ಲ. |
07:51 | ನಾವೀಗ ಕೆಳಗಿನ ‘ಕ್ವೆರಿ ಡಿಸೈನ್ ಏರಿಯಾ’ಕ್ಕೆ ಹೋಗಿ, ಅದನ್ನು ನಮಗೆ ಬೇಕಾದಂತೆ ಬದಲಾಯಿಸಬಹುದು. |
08:00 | ಉದಾಹರಣೆಗೆ, 'Checked In' ಮಾನದಂಡವನ್ನು ತೆಗೆದು ಬಿಡೋಣ. <pause> |
08:07 | ಈಗ 'F5' ಇನ್ನೊಮ್ಮೆ ಒತ್ತಿ ಕ್ವೆರಿಯನ್ನು 'ರನ್' ಮಾಡೋಣ. |
08:15 | ಈ ಬಾರಿ ನಾವು, ಕ್ವೆರಿಯು ಹಿಂದಿರುಗಿಸಿದ ಡೇಟಾದ ದೀರ್ಘ ಪಟ್ಟಿಯನ್ನು ನೋಡಬಹುದು. |
08:23 | ನಂತರ, 'Control, S' ಒತ್ತಿ ಈ ಕ್ವೆರಿಯನ್ನು 'ಸೇವ್' ಮಾಡೋಣ. ಇದು ಒಂದು ಸಣ್ಣ ಪಾಪ್-ಅಪ್ ವಿಂಡೋಅನ್ನು ತೆರೆಯುತ್ತದೆ. |
08:34 | ಇಲ್ಲಿ ನಮ್ಮ ಕ್ವೆರಿಗೆ ಒಂದು ವಿವರಣಾತ್ಮಕ ಹೆಸರನ್ನು ನೀಡೋಣ. |
08:38 | ‘History of Books Issued to Members’ ಎಂದು ಟೈಪ್ ಮಾಡೋಣ. |
08:46 | 'OK' ಬಟನ್ ಮೇಲೆ ಕ್ಲಿಕ್ ಮಾಡಿ ನಂತರ ಈ ವಿಂಡೋವನ್ನು ಮುಚ್ಚೋಣ. |
08:52 | ಸೇವ್ ಮಾಡಿರುವ ಈ ಕ್ವೆರಿಯನ್ನು, ಮುಖ್ಯ Base ವಿಂಡೋ ದಲ್ಲಿ ಅದರ ಹೆಸರಿನ ಮೇಲೆ ಡಬಲ್-ಕ್ಲಿಕ್ ಮಾಡಿ ತೆರೆಯಬಹುದು. |
09:01 | ಹೀಗೆ, ನಾವು 'ಡಿಸೈನ್ ವ್ಯೂ' ಅನ್ನು ಬಳಸಿ ಕ್ವೆರಿಯನ್ನು ಯಶಸ್ವಿಯಾಗಿ ರಚಿಸಿದ್ದೇವೆ. |
09:09 | ಇಲ್ಲೊಂದು ಅಸೈನ್ಮೆಂಟ್ ಇದೆ: |
09:12 | ನಿಶಾ ಶರ್ಮ ಎಂಬ ಸದಸ್ಯರಿಗೆ ಕೊಟ್ಟಿರುವ ಪುಸ್ತಕಗಳ ಪಟ್ಟಿಯನ್ನು ಪಡೆಯಿರಿ. ಈ ಪಟ್ಟಿಯು 'Issue date' ಪ್ರಕಾರ ಕಾಲಾನುಕ್ರಮದಲ್ಲಿ ಇರಬೇಕು. |
09:24 | ಇಲ್ಲಿಗೆ ನಾವು, ‘ಲಿಬರ್ ಆಫಿಸ್ ಬೇಸ್’ ನಲ್ಲಿ Creating queries in Design View, ಎಂಬ ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
09:31 | ಸಂಕ್ಷಿಪ್ತವಾಗಿ, ನಾವು ಡಿಸೈನ್ ವ್ಯೂ ಬಳಸಿ, |
09:33 | ಕ್ವೆರಿಯನ್ನು ರಚಿಸಲು, ‘ಕ್ವೆರಿ ಡಿಸೈನ್ ವಿಂಡೋ’ಗೆ ಟೇಬಲ್ ಗಳನ್ನು ಸೇರಿಸಲು, ಫೀಲ್ಡ್ ಗಳನ್ನು ಆರಿಸಲು, |
09:41 | ಏಲಿಯಸ್ ಗಳನ್ನು ನಿರೂಪಿಸಲು, ವರ್ಗೀಕರಣದ ಕ್ರಮವನ್ನು ರೂಪಿಸಲು ಮತ್ತು ಕ್ವೆರಿಗಾಗಿ ಸರ್ಚ್ ಬಗೆಯನ್ನು ಒದಗಿಸಲು ಕಲಿತೆವು. |
09:49 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, ರಾಷ್ಟ್ರೀಯ ಸಾಕ್ಷರತಾ ಮಿಷನ್, ICT, MHRD
ಮೂಲಕ ಭಾರತ ಸರ್ಕಾರದ ನೆರವು ಪಡೆದಿದೆ. ಈ ಪ್ರೊಜೆಕ್ಟ್ ಅನ್ನು ಸಂಯೋಜಿಸಿದವರು: http://spoken-tutorial.org. ಕೆಳಗಿನ ಲಿಂಕ್ ನಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿದೆ. |
10:10 | ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
ಧನ್ಯವಾದಗಳು. |