LibreOffice-Suite-Base/C2/Create-a-simple-form/Kannada

From Script | Spoken-Tutorial
Jump to: navigation, search
Visual Cues Narration
00:00 ಲಿಬ್ರೆ ಆಫೀಸ್ ಬೇಸ್ ನ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:04 ಈ ಟ್ಯುಟೋರಿಯಲ್ ನಲ್ಲಿ ನಾವು ಲಿಬ್ರೆ ಆಫೀಸ್ ಬೇಸ್ ನ ಸರಳ ಫಾರ್ಮ್ ಗಳ ಬಗ್ಗೆ ತಿಳಿಯೋಣ.
00:09 ನಾವಿಲ್ಲಿ ಈ ಕೆಳಗಿನವುಗಳನ್ನು ಕಲಿಯುತ್ತೇವೆ.
00:12 1. ಫಾರ್ಮ್ ಎಂದರೇನು?
00:13 2.ವಿಜಾರ್ಡ್ ಅನ್ನು ಬಳಸಿ ಫಾರ್ಮ್ ಕ್ರಿಯೇಟ್ ಮಾಡುವುದು ಹೇಗೆ?
00:17 ಲಿಬ್ರೆ ಆಫೀಸ್ ಬೇಸ್ ಅನ್ನು ಬಳಸಿ, ನಾವು ಇವರೆಗೂ, ಡಾಟಾ ಬೇಸ್ ಕ್ರಿಯೇಟ್ ಮಾಡುವುದು, ಡಾಟಾ ಸ್ಟೋರ್ ಮಾಡುವ ಟೇಬಲ್ ಕ್ರಿಯೇಟ್ ಮಾಡುವ ಬಗ್ಗೆ ತಿಳಿದೆವು.
00:27 ಆದರೆ, ಡಾಟಾ ಬೇಸ್ ಟೇಬಲ್ಸ್ ನಲ್ಲಿ ಡಾಟಾ ವನ್ನು ಎಂಟರ್ ಮಾಡುವ ಬಗೆ ಹೇಗೆ?
00:33 ಹಿಂದಿನ ಟ್ಯುಟೋರಿಯಲ್ ನಲ್ಲಿ ನಾವು ಕಲಿತ ಹಾಗೆ, ಡಾಟಾ ವನ್ನು ಟೇಬಲ್ ನ ಸೆಲ್ ನಲ್ಲಿ ನೇರವಾಗಿ ಟೈಪ್ ಮಾಡುವುದು ಒಂದು ವಿಧಾನ.
00:42 ಕನಿಷ್ಠ ಎರರ್ಸ್ ಹಾಗು ಅತಿ ಸುಲಭವಾಗಿ ಡಾಟಾ ಎಂಟರ್ ಮಾಡಲು ಇನ್ನೊಂದು ವಿಧಾನ ವಿದೆ.
00:49 ಮತ್ತು ಅದು, ಫಾರ್ಮ್ ಗಳನ್ನು ಬಳಸಿ. ಡಾಟಾ ಎಂಟ್ರಿ ಅಥವಾ ಡಾಟಾ ವನ್ನು ಎಡಿಟ್ ಮಾಡಲು, ಒಂದು ಫಾರ್ಮ್ ಫ್ರಂಟ್ ಎಂಡ್ ಇಲ್ಲವೇ ಯುಸರ್ ಇಂಟರ್ ಫೇಸ್ ನ ಹಾಗೆ ಬಳಕೆಯಾಗುತ್ತದೆ.
01:00 ಉದಾಹರಣೆಗೆ, ಒಂದು ಸರಳ ಫಾರ್ಮ್ ನಲ್ಲಿ ಟೇಬಲ್ ನಲ್ಲಿರುವ ಫೀಲ್ಡ್ ಇರಬಹುದು.
01:06 ಹಿಂದಿನ ಟ್ಯುಟೋರಿಯಲ್ ನಲ್ಲಿ ನಾವು ಕ್ರಿಯೇಟ್ ಮಾಡಿದ್ದ ಲೈಬ್ರರಿ ಡಾಟಾ ಬೇಸ್ ಅನ್ನೇ ಇಲ್ಲಿ ಉಪಯೋಗಿಸೋಣ
01:15 ಒಂದು ಸರಳ ಫಾರ್ಮ್ ಬುಕ್ ಟೇಬಲ್ ನಲ್ಲಿನ ಫೀಲ್ಡ್ ಗಳನ್ನು ಒಳಗೊಂಡಿರಬಹುದು.
01:21 ಹಾಗು ಈ ಫಾರ್ಮ್ ಬುಕ್ಸ್ ಟೇಬಲ್ ನಲ್ಲಿ ಡಾಟಾ ಎಂಟರ್ ಮಾಡಲು ಬಳಸ ಬಹುದು.
01:27 ಈಗ, ನಾವು ಫಾರ್ಮ್ ಹೇಗೆ ಕ್ರಿಯೇಟ್ ಮಾಡುವುದು ಎಂದು ಕಲಿಯೋಣ.
01:33 ಮೊದಲಿಗೆ, ಲಿಬ್ರೆ ಆಫೀಸ್ ಬೇಸ್ ಪ್ರೊಗ್ರಾಮ್ ನನ್ನು ಕರೆಯೋಣ
01:38 ಒಂದು ವೇಳೆ, ಬೇಸ್ ಪ್ರೊಗ್ರಾಮ್ ಓಪನ್ ಇಲ್ಲದ ಪಕ್ಷದಲ್ಲಿ, ಕೆಲ ಎಡ ಭಾಗದಲ್ಲಿರುವ ಸ್ಟಾರ್ಟ್ ಬಟನ್ ಮೇಲೆ ಕ್ಲಿಕ್ ಮಾಡೋಣ. ಮತ್ತು ಆಲ್ ಪ್ರೊಗ್ರಾಮ್ ಮೇಲೆ ಕ್ಲಿಕ್ ಮಾಡಿ, ಲಿಬ್ರೆ ಆಫೀಸ್ ಸೂಟ್ ಮೇಲೆ ಕ್ಲಿಕ್ ಮಾಡಿ ನಂತರ, ಲಿಬ್ರೆ ಆಫೀಸ್ ಬೇಸ್ ನ ಮೇಲೆ ಕ್ಲಿಕ್ ಮಾಡಿ.
01:57 ಈಗ ‘open an existing database file’ ಒಪ್ಶನ್ ಮೇಲೆ ಕ್ಲಿಕ್ ಮಾಡೋಣ.
02:04 'Recently Used' ಡ್ರಾಪ್ ಡೌನ್ ಬಾಕ್ಸ್ ನಲ್ಲಿ, ನಮ್ಮ ಲೈಬ್ರರಿ ಡಾಟಾ ಬೇಸ್ ನಮಗೆ ಕಾಣಲು ಸಿಗಬೇಕು.
02:12 ಈಗ ಅದನ್ನು ಆಯ್ಕೆ ಮಾಡಿ, ಫಿನಿಶ್ ಬಟನ್ ಮೇಲೆ ಕ್ಲಿಕ್ ಮಾಡೋಣ.
02:17 ಒಂದು ವೇಳೆ, ಲಿಬ್ರೆ ಆಫೀಸ್ ಬೇಸ್ ಈಗಾಗಲೇ, ಓಪನ್ ಆಗಿದ್ದರೆ,
02:22 ಆಗ ನಾವು ಲೈಬ್ರರಿ ಡಾಟಾ ಬೇಸ್ ಫೈಲ್ Library.odb ವನ್ನು ಮೇಲಿರುವ ಫೈಲ್ ಮೆನು ಮೇಲೆ ಕ್ಲಿಕ್ ಮಾಡುವ ಮೂಲಕ ಓಪನ್ ಮಾಡಬಹುದು.
02:36 ಪರ್ಯಾಯವಾಗಿ, ಕ್ಲಿಕ್ ಮಾಡಿ ಫೈಲ್ ಮೆನುವಿನ ರೀಸೇಂಟ್ ಡಾಕ್ಯುಮೆಂಟ್ಸ್ ಮತ್ತು Library.odb ಆಯ್ಕೆಮಾಡಿ.
02:48 ನಾವೀಗ ಲೈಬ್ರರಿ ಡಾಟಾ ಬೇಸ್ ನಲ್ಲಿದ್ದೇವೆ.
02:52 ಎಡ ಪ್ಯಾನೆಲ್ ನ , ಡಾಟಾ ಬೇಸ್ ಲಿಸ್ಟ್ ನಲ್ಲಿರುವ ಫಾರ್ಮ್ಸ್ ಐಕಾನ್ ಮೇಲೆ ಕ್ಲಿಕ್ ಮಾಡಿ.
03:01 ಹೊಸ ಫಾರಂ ಕ್ರಿಯೇಟ್ ಮಾಡಲು, 2 ವಿಧಾನವಿರುವುದನ್ನು ಗಮನಿಸಿ: ಕ್ರಿಯೇಟ್ ಫಾರ್ಮ್ ಇನ್ ಡಿಸೈನ್ ವ್ಯೂ ಮತ್ತು ಯುಸ್ Wizard ಟು ಕ್ರಿಯೇಟ್ ಫಾರ್ಮ್
03:12 ಎರಡನೇ ಒಪ್ಶನ್ ಮೇಲೆ ಕ್ಲಿಕ್ ಮಾಡೋಣ: ಯುಸ್ Wizard ಟು ಕ್ರಿಯೇಟ್ ಫಾರ್ಮ್
03:19 ಲಿಬ್ರೆ ಆಫೀಸ್ ರೈಟರ್ ವಿಂಡೋವಿಗೆ ಹೋಲುವ ಇನ್ನೊಂದು ಹೊಸ ವಿಂಡೋ ಕಾಣುವಿರಿ.
03:26 ಅದರ ಮೇಲೆ, ‘Form Wizard’ಎನ್ನುವ ಒಂದು ಪಾಪ್ ಅಪ್ ವಿಂಡೋ ಕಾಣುತ್ತದೆ.
03:33 ಬುಕ್ಸ್ ಟೇಬಲ್ ಆಧಾರದ ಮೇಲೆ, ನಾವು Wizard ನ ಬಳಸಿ ನಮ್ಮ ಮೊದಲ ಫಾರ್ಮ್ ಕ್ರಿಯೇಟ್ ಮಾಡೋಣ.
03:40 ಎಡ ಭಾಗದಲ್ಲಿ, ನಾವು ಅನುಸರಿಸಬೇಕಾದ 8 ಸ್ಟೆಪ್ ಗಳಿರುವುದನ್ನು ಗಮನಿಸಿ.
03:46 ನಾವು ಮೊದಲ ಸ್ಟೆಪ್ ಆದ 'Field Selection’ ನಲ್ಲಿದ್ದೇವೆ.


03:53 ಮತ್ತು ಬಲ ಭಾಗದಲ್ಲಿರುವ 0Tables:Books ಚೂಸ್ ಮಾಡೋಣ. ಇಲ್ಲಿರುವ ಡ್ರಾಪ್ ಡೌನ್ ನಲ್ಲಿ Tables or Queries ಎಂದಿರುತ್ತದೆ.
04:03 ಇದರ ಕೆಳಗೆ, ಎಡ ಭಾಗದಲ್ಲಿ, ನಾವು ಲಭ್ಯವಿರುವ ಫೀಲ್ಡ್ ಗಳ ಲಿಸ್ಟ್ ನೋಡಬಹುದು.
04:09 ನಮ್ಮ ಬಲ ಭಾಗದಲ್ಲಿ, ನಾವು ಫಾರ್ಮ್ ನಲ್ಲಿರುವ ಫೀಲ್ಡ್ ನೋಡುತ್ತೇವೆ.
04:14 ನಮಗೆ ಫಾರ್ಮ್ ನಲ್ಲಿ ಬೇಕಾಗಿರುವ ಫೀಲ್ಡ್ ಗಳನ್ನಷ್ಟೇ ನಾವು move ಮಾಡಬೇಕು.
04:21 ಸಧ್ಯಕ್ಕೆ, ನಾವು ಡಬಲ್ ಏರೋ ಮಾರ್ಕ್ ಚಿಹ್ನೆ ಇರುವ ಬಟನ್ ಮೇಲೆ ಕ್ಲಿಕ್ ಮಾಡೋಣ.
04:27 ಗಮನಿಸಿ, ನಾವು ಎಲ್ಲ ಫೀಲ್ಡ್ ಗಳನ್ನು ಎಡ ದಿಂದ ಬಲಕ್ಕೆ ಸರಿಸಿದ್ದೇವೆ.
04:35 ನಾವು ಬುಕ್ ಐಡಿ ಫೀಲ್ಡ್ ನಲ್ಲಿ ಸಂಖ್ಯೆಗಳು, ಆಟೋ ಜೆನರೇಟ್ ಆಗುವಂತೆ ಸೆಟ್ ಮಾಡಿರುವುದರಿಂದ, ನಮಗೆ ಫಾರ್ಮ್ ನಲ್ಲಿ ಅದರ ಅಗತ್ಯವಿಲ್ಲ.
04:46 So let us move this field back to the left hand side.


04:46` ಹಾಗಾಗಿ, ನಾವು ಈ ಫೀಲ್ಡ್ ಅನ್ನು ಎಡ ಭಾಗಕ್ಕೆ ಮತ್ತೆ ಸರಿಸೋಣ.
04:51 ಬಲ ಭಾಗದಲ್ಲಿರುವ ಬುಕ್ಸ್ ಐಡಿ ಮೇಲೆ ಕ್ಲಿಕ್ ಮಾಡಿ, ಹಾಗು ‘Less than’ ಚಿಹ್ನೆ ಇರುವ ಬಟನ್ ಮೇಲೆ ಕ್ಲಿಕ್ ಮಾಡಿ.
05:02 ಓಕೆ, ಈಗ ಕೆಳಗೆ ಇರುವ ನೆಕ್ಸ್ಟ್ ಬಟನ್ ಕ್ಲಿಕ್ ಮಾಡಿ ಮುಂದಿನ ಸ್ಟೆಪ್ ಗೆ ಹೋಗೋಣ.
05:10 ಸ್ಟೆಪ್ 2, ನಾವು ಒಂದು ಸರಳ ಫಾರ್ಮ್ ನನ್ನು ಕ್ರಿಯೇಟ್ ಮಾಡುತ್ತಿರುವುದರಿಂದ, ಸಧ್ಯಕ್ಕೆ, ಈ ಸ್ಟೆಪ್ ನನ್ನು ಸ್ಕಿಪ್ ಮಾಡೋಣ ಮತ್ತು ನೆಕ್ಸ್ಟ್ ಬಟನ್ ಮೇಲೆ ಕ್ಲಿಕ್ ಮಾಡಿ.
05:21 ನಾವೀಗ, ಸ್ಟೆಪ್ 5 ನಲ್ಲಿದ್ದೇವೆ. ‘Arrage Controls’
05:26 ಹಾಗೆಯೇ ಗಮನಿಸಿ, ಬ್ಯಾಕ್ ಗ್ರೌಂಡ್ ವಿಂಡೋ ನಲ್ಲಿ, ಬುಕ್ಸ್ ಟೇಬಲ್ ಓರೆಂಜೆ ಬಣ್ಣದ ಬ್ಯಾಕ್ ಗ್ರೌಂಡ್ ನಲ್ಲಿರುತ್ತದೆ.
05:35 ‘Arrangement of the Main form’ ಎನ್ನುವ ಲೇಬಲ್ ನಡಿಯಲ್ಲಿರುವ 4 ಐಕಾನ್ ಗಳ ಮೇಲೆ ಕ್ಲಿಕ್ ಮಾಡಿ.
05:44 ನಾವು ಕ್ಲಿಕ್ ಮಾಡುತ್ತಿರುವ ಹಾಗೆ, ಬ್ಯಾಕ್ ಗ್ರೌಂಡ್ ವಿಂಡೋ arrangement ಲೇಬಲ್ ಗಳ , ಮತ್ತು ಟೈಟಲ್, author ಇತರೆ ಗಳಿರುವ ಟೆಕ್ಸ್ಟ್ ಬಾಕ್ಸ್ ಬದಲಾಗುವುದನ್ನು ನೋಡುವೆವು.
05:57 ನಾವು ಮೊದಲು ಇರುವ arrangement ‘Columnar – Labels left’ ನ ಮೊದಲ ಐಕಾನ್ ಮೇಲೆ ಕ್ಲಿಕ್ ಮಾಡೋಣ.
06:08 ಇಲ್ಲಿ, ಒಂದು ನಮೂನೆಯ ಪೇಪರ್ ಫಾರ್ಮ್ ನ ಹಾಗೆ, ಲೇಬಲ್ ಗಳು ಎಡ ಭಾಗದಲ್ಲಿಯೂ, ಹಾಗು ಟೆಕ್ಸ್ಟ್ ಬಾಕ್ಸ್ ಗಳು ಬಲ ಭಾಗದಲ್ಲಿಯೂ ಇರುತ್ತದೆ.
06:17 ಮುಂದುವರೆಯಲು, ನೆಕ್ಸ್ಟ್ ಬಟನ್ ಮೇಲೆ ಕ್ಲಿಕ್ ಮಾಡಿ.
06:22 ನಾವೀಗ ‘Set Data Entry’ಎನ್ನುವ 6ನೇ ಸ್ಟೆಪ್ ನಲ್ಲಿದ್ದೇವೆ.
06:29 ಸಧ್ಯಕ್ಕೆ, ಈ ಸ್ಟೆಪ್ ನನ್ನು ಸ್ಕಿಪ್ ಮಾಡೋಣ ಮತ್ತು ನೆಕ್ಸ್ಟ್ ಬಟನ್ ಮೇಲೆ ಕ್ಲಿಕ್ ಮಾಡಿ.
06:34 ಸ್ಟೆಪ್ 7. ‘Apply Styles’.
06:36 ನಾವು ಲಿಸ್ಟ್ ಬಾಕ್ಸ್ ನಲ್ಲಿರುವ ಪ್ರತಿಯೊಂದು ಬಣ್ಣದ ಮೇಲೆ ಕ್ಲಿಕ್ ಮಾಡುತ್ತಿದ್ದ ಹಾಗೆ, ನಮ್ಮ ವಿಂಡೋ ನ ಬ್ಯಾಕ್ ಗ್ರೌಂಡ್ ಬಣ್ಣ ಬದಲಾಗುವುದನ್ನು ಗಮನಿಸಿ.
06:45 Ice Blue ವನ್ನು ಕ್ಲಿಕ್ ಮಾಡುವ ಮೂಲಕ ಆಯ್ಕೆ ಮಾಡೋಣ.
06:50 ಈಗ ನಾವು ಕೊನೆಯ ಸ್ಟೆಪ್ ಗೆ ಹೋಗೋಣ.
06:53 ಸ್ಟೆಪ್ 8. ನಮ್ಮ ಫಾರ್ಮ್ ಗೆ ಒಂದು ಹೆಸರು ಕೊಡೋಣ.
06:59 ನಮ್ಮ ಸ್ವಂತ naming conventions ಅನ್ನು ನಾವು ಅನುಸರಿಸಬಹುದು.
07:03 ಆದರೆ ಸಧ್ಯಕ್ಕೆ, ನಾವು ‘Name of the form’ ಲೇಬಲ್ ಅಡಿಯಲ್ಲಿ ಇರುವ ಟೆಕ್ಸ್ಟ್ ಬಾಕ್ಸ್ ನಲ್ಲಿ ‘Books Data Entry Form’ ಎನ್ನುವ ಒಂದು descriptive ಹೆಸರನ್ನು ಕೊಡೋಣ.
07:16 ಈಗ ನಾವು, ಫಾರ್ಮ್ ಅನ್ನು ಕ್ರಿಯೇಟ್ ಮಾಡಿದ ಮೇಲೆ, ಹೇಗೆ ಮುಂದುವರೆಯುವುದು?
07:21 ನಾವು 'Work with the form' ಮೊದಲು ಮಾಡೋಣ.
07:24 ಇದರ ಅರ್ಥ, ನಾವು ಡಾಟಾ ಎಂಟ್ರಿ ಗೆ ಫಾರ್ಮ್ ಅನ್ನು ಬಳಸಲು, ಪ್ರಾರಂಭಿಸೋಣ.
07:29 ಫಾರ್ಮ್ ಡಿಸೈನ್ ಅನ್ನು ಬದಲಿಸಲು, ನಾವು 'Modify the form' ಅನ್ನು ಆಯ್ಕೆ ಮಾಡೋಣ. ಇದನ್ನು ನಂತರ ನೋಡೋಣ.
07:37 ಈಗ ಸಧ್ಯಕ್ಕೆ ನಾವು ಇದನ್ನು ಮುಗಿಸೋಣ. ಹಾಗಾಗಿ, ಕೆಳಗಡೆ ಇರುವ ಫಿನಿಶ್ ಬಟನ್ ಮೇಲೆ ಕ್ಲಿಕ್ ಮಾಡಿ.
07:11 ನಾವು ಈಗ ನಮ್ಮ ಮೊದಲ ಸರಳ ಫಾರ್ಮ್ ಅನ್ನು ಕ್ರಿಯೇಟ್ ಮಾಡಿದ್ದೇವೆ. ವಿಂಡೋ ಟೈಟಲ್ ಮೇಲೆ ಇದು ‘Books Data Entry Form’ ಎಂದು ಇರುತ್ತದೆ.
07:54 ಟೆಕ್ಸ್ಟ್ ಬಾಕ್ಸ್ ನ ತುಂಬಾ ‘Anautobiography,’,‘JawaharlalNehru’ಇತ್ಯಾದಿ,ವ್ಯಾಲ್ಯು ಗಳಿರುವುದನ್ನು

ಗಮನಿಸಿ.

08:05 ಈ ವ್ಯಾಲ್ಯುಗಳು ಎಲ್ಲಿಂದ ಬಂದವು?
08:08 ಬೇಸ್ ಟ್ಯುಟೊರಿಯಲ್ ನ ಹಿಂದಿನ ಭಾಗದಲ್ಲಿ, ನಾವು ಬುಕ್ಸ್ ಟೇಬಲ್ ನಡಿಯಲ್ಲಿ ಈ ವ್ಯಾಲ್ಯುಗಳನ್ನು ನೇರವಾಗಿ ಟೈಪ್ ಮಾಡಿದ್ದೇವೆ.
08:17 ಈಗ ಈ ಫಾರ್ಮ್ ಡಾಟಾ ಎಂಟ್ರಿ ಮಾಡಲು ತಯಾರಿದೆ.
08:22 Let us click on the tab keys to go through each value.


08:22` ಪ್ರತಿಯೊಂದು ವ್ಯಾಲ್ಯು ಮುಖಾಂತರ ಹೋಗಲು, ನಾವು ಟ್ಯಾಬ್ ಕೀ ಗಳನ್ನು ಕ್ಲಿಕ್ ಮಾಡೋಣ.
08:27 ಗಮನಿಸಿ, ಫಾರ್ಮ್ ಎರಡನೇ ಪುಸ್ತಕದ ಮಾಹಿತಿಯನ್ನು ಕೊಡುತ್ತಿದೆ. ಮತ್ತು ಅದರ ಟೈಟಲ್ ಈಗ ‘Conquest of Self’.
08:37 ನಾವೀಗ ಪ್ರತಿಯೊಂದು ಪುಸ್ತಕದ ಮಾಹಿತಿಗೆ ಹೋಗಬಹುದು, ಇದನ್ನು ರೆಕಾರ್ಡ್ ಅನ್ನುವರು. ಕೆಳಗಡೆ ಇರುವ Forms Navigation toolbar ನಲ್ಲಿ ಬಲಕ್ಕೆ ಪಾಯಿಂಟ್ ಆಗಿರುವ ಕಪ್ಪು ಟ್ರೈ ಯಂಗಲ್ ಮೇಲೆ ಕ್ಲಿಕ್ ಮಾಡುವ ಮೂಲಕ.
08:54 ಗಮನಿಸಿ, ರೆಕಾರ್ಡ್ ನಂಬರ್ 3 of 5 ಇಲ್ಲಿ ಡಿಸ್ ಪ್ಲೇ ಆಗಿದೆ.
09:01 ನಾವು ಕರ್ಸರ್ ಅನ್ನು ಬ್ಲಾಕ್ ಏರೋ ಐಕಾನ್ ಗಳ ಮೇಲೆ ಪಾಯಿಂಟ್ ಮಾಡಿದಾಗ, ಬೇಸ್ ಟೂಲ್ ಟಿಪ್ ಗಳನ್ನು ತೋರಿಸುತ್ತದೆ.
09:09 ಫಸ್ಟ್ ರೆಕಾರ್ಡ್, ಪ್ರಿವಿಯಸ್ ರೆಕಾರ್ಡ್, ನೆಕ್ಸ್ಟ್ ರೆಕಾರ್ಡ್ ಮತ್ತು ಲಾಸ್ಟ್ ರೆಕಾರ್ಡ್.
09:16 ರೆಕಾರ್ಡ್ ಗಳ ಮೂಲಕ traverse ಮಾಡಲು ಕೂಡ ಇವುಗಳನ್ನು ಬಳಸಬಹುದು.
09:21 ಇದು ನಮ್ಮನ್ನು ಲಿಬ್ರೆ ಆಫೀಸ್ ಬೇಸ್ ನ ಸರಳ ಫಾರ್ಮ್ ಗಳ ಟ್ಯುಟೋರಿಯಲ್ ನ ಕೊನೆಯ ಹಂತಕ್ಕೆ ತರುತ್ತದೆ.
09:28 ನಾವು ಕಲಿತದ್ದನ್ನು ಸಂಕ್ಷಿಪ್ತವಾಗಿ ಹೇಳಬೇಕೆಂದರೆ: ಫಾರ್ಮ್ ಎಂದರೇನು? Wizard ಅನ್ನು ಬಳಸಿ, ಫಾರ್ಮ್ ಕ್ರಿಯೇಟ್ ಮಾಡುವುದು ಹೇಗೆ?
09:35 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ , ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗವಾಗಿದೆ.

ನ್ಯಾಷನಲ್ಮಿಶನ್ ಆನ್ ಎಜುಕೇಶನ್ ICT , MHRD, ಭಾರತ ಸರ್ಕಾರ ದ ಸಹಕಾರದೊಂದಿಗೆ ನಡೆಸಲಾಗುತ್ತಿದೆ

09:47 ಈ ಪ್ರಾಜೆಕ್ಟ್ ಅನ್ನು ಏರ್ಪಡಿಸಿದವರು http://spoken-tutorial.org.
09:52 ಹೆಚ್ಚಿನ ಮಾಹಿತಿ ಈ ಕೆಳಕಂಡ ಲಿಂಕ್ ನಲ್ಲಿ ಲಭ್ಯವಿರುತ್ತದೆ. http://spoken-tutorial.org/NMEICT-Intro.


09:56 ಈ ಸ್ಕ್ರಿಪ್ಟ್ ಅನ್ನು ಸಾದರಪಡಿಸಿದವರು ಪ್ರಿಯ ಸುರೇಶ ದೇಸಿ ಕ್ರೆವ್ ಸೊಲ್ಯುಶನ್. ಹಾಗು ಧ್ವನಿ ದೇಸಿ ಕ್ರೆವ್ ಸೊಲ್ಯುಶನ್ಸ ವತಿಯಿಂದ ವಿದಾಯ ಹೇಳುತ್ತೇನೆ.
10:05 ಸೇರಿದಕ್ಕೆ ಧನ್ಯವಾದಗಳು.

Contributors and Content Editors

Udaya