LibreOffice-Suite-Base/C2/Add-List-Box-form-control-to-a-form/Kannada
From Script | Spoken-Tutorial
Time | Narration |
00:03 | ‘ಲಿಬರ್ ಆಫಿಸ್ ಬೇಸ್’ ನ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ, ನಾವು ಫಾರ್ಮ್ ಗೆ List Box form control ಅನ್ನು ಸೇರಿಸುವುದರ ಬಗ್ಗೆ ಕಲಿಯುವೆವು. |
00:14 | ಹಿಂದಿನ ಟ್ಯುಟೋರಿಯಲ್ ನಲ್ಲಿ ನಾವು, ‘ಲಿಬರ್ ಆಫಿಸ್ ಬೇಸ್’ ಅನ್ನು ಬಳಸಿ ಫಾರ್ಮ್ ಅನ್ನು ಮಾರ್ಪಡಿಸಲು ಕಲಿತೆವು. |
00:20 | ಕಳೆದ ಟ್ಯುಟೋರಿಯಲ್ ನಲ್ಲಿ ರಚಿಸಿ, ಮಾರ್ಪಡಿಸಲು ಶುರು ಮಾಡಿದ್ದ ಫಾರ್ಮ್ ನ ಈ ಇಮೇಜ್ ಅನ್ನು ಸಹ ನಾವು ನೋಡಿದೆವು. |
00:34 | ವಿನ್ಯಾಸವನ್ನು ನಾವು ಪೂರ್ಣಗೊಳಿಸಿದ ನಂತರ, ನಮ್ಮ ಫಾರ್ಮ್ ಈ ರೀತಿ ಕಾಣುತ್ತದೆ. |
00:45 | ಗಮನಿಸಿ: ನಾವು ಇಲ್ಲಿ Books Issued ಟೇಬಲ್ ನಲ್ಲಿ, ಮೊದಲನೆಯ ರೆಕಾರ್ಡ್ ಅನ್ನು ನೋಡುತ್ತಿದ್ದೇವೆ. |
00:52 | ಹಾಗೂ ‘book Ids’ ಮತ್ತು ‘member Ids’ ಗಳ ಬದಲಾಗಿ, ನಿಜವಾದ ‘book titles’ ಮತ್ತು ‘member names’ ಗಳೊಂದಿಗೆ ಲಿಸ್ಟ್-ಬಾಕ್ಸ್ ಗಳನ್ನು ನೋಡುತ್ತಿದ್ದೇವೆ. |
01:01 | ರೆಕಾರ್ಡ್ ಅನ್ನು ಸೇವ್ ಮಾಡುವುದು, ಬದಲಾವಣೆಗಳನ್ನು ಅನ್-ಡು ಮಾಡುವುದು ಇತ್ಯಾದಿ ಕ್ರಿಯೆಗಳಿಗಾಗಿ ಇಲ್ಲಿ ಕೆಳಗಡೆ ಕೆಲವು ಪುಶ್- ಬಟನ್ ಗಳಿವೆ. |
01:11 | ನಾವು ಈ ಟ್ಯುಟೋರಿಯಲ್ ನಲ್ಲಿ, ನಮ್ಮ ಫಾರ್ಮ್ ಗೆ List box form control ಅನ್ನು ಸೇರಿಸುವುದನ್ನು ಕಲಿಯಲಿದ್ದೇವೆ. |
01:20 | ‘ಲಿಬರ್ ಆಫಿಸ್ ಬೇಸ್’ ಪ್ರೋಗ್ರಾಂ ಅನ್ನು ಈಗಾಗಲೇ ತೆರೆದಿರದಿದ್ದರೆ, ನಾವು ಅದನ್ನು ಆರಂಭಿಸೋಣ. |
01:32 | ನಮ್ಮ Library ಡೇಟಾಬೇಸ್ ಅನ್ನು ತೆರೆಯೋಣ. |
01:35 | ಒಂದುವೇಳೆ ಬೇಸ್ ಈಗಾಗಲೇ ತೆರೆದಿದ್ದಲ್ಲಿ, ನಾವು ಇಲ್ಲಿ File ಮೆನುವಿನ ಅಡಿಯಲ್ಲಿ Open ಅನ್ನು ಕ್ಲಿಕ್ ಮಾಡಿ |
01:45 | ಅಥವಾ File ಮೆನುವಿನ ಅಡಿಯಲ್ಲಿ Recent Documents ಅನ್ನು ಕ್ಲಿಕ್ ಮಾಡುವ ಮೂಲಕ Library ಡೇಟಾಬೇಸ್ ಅನ್ನು ತೆರೆಯಬಹುದು. |
01:50 | ನಾವೀಗ Library ಡೇಟಾಬೇಸ್ ನಲ್ಲಿ ಇದ್ದೇವೆ. |
01:54 | ನಾವು ಕಳೆದ ಟ್ಯುಟೋರಿಯಲ್ ನಲ್ಲಿ, ರಚಿಸಿದ 'Books Issued to Members' ಎಂಬ ಫಾರ್ಮ್ ಅನ್ನು ತೆರೆಯೋಣ. |
02:01 | ಇದನ್ನು ಮಾಡಲು, ನಾವು ಎಡ ಪ್ಯಾನಲ್ ನಲ್ಲಿರುವ Forms ಐಕಾನ್ ಮೇಲೆ ಕ್ಲಿಕ್ ಮಾಡೋಣ. |
02:07 | ಬಲ ಪ್ಯಾನಲ್ ನಲ್ಲಿರುವ 'Books Issued to Members' ಫಾರ್ಮ್ ಮೇಲೆ ರೈಟ್ ಕ್ಲಿಕ್ ಮಾಡಿ. ನಂತರ edit ಮೇಲೆ ಕ್ಲಿಕ್ ಮಾಡೋಣ. |
02:17 | ನಾವೀಗ Form Design ವಿಂಡೋದಲ್ಲಿದ್ದೇವೆ. |
02:21 | ನಾವು ಮೊದಲಿಗೆ 'Book Title' ಲೇಬಲ್ ಅನ್ನು ನೋಡೋಣ. |
02:25 | ಗಮನಿಸಿ, ಇಲ್ಲಿರುವ ಟೆಕ್ಸ್ಟ್-ಬಾಕ್ಸ್ ಕೇವಲ BookId ಸಂಖ್ಯೆಗಳನ್ನಷ್ಟೇ ಪ್ರದರ್ಶಿಸುತ್ತದೆ. ಇವು ನಮಗೆ ಅಷ್ಟೊಂದು ಚೆನ್ನಾಗಿ ಕಾಣುವುದಿಲ್ಲ. |
02:33 | ನಮಗೆ books titles ಗಳೇ ಸರಿಯಾಗಿವೆ. |
02:37 | ಈ title ಗಳನ್ನು ಪ್ರದರ್ಶಿಸಲು, ಬೇಸ್ ಕೆಲವು ವಿಧಾನಗಳನ್ನು ಹೊಂದಿದೆ. List box form control ಅನ್ನು ಬಳಸುವುದು ಇವುಗಳಲ್ಲಿ ಒಂದು ವಿಧಾನವಾಗಿದೆ. |
02:48 | ಇದು ಹೇಗೆ ಎನ್ನುವುದನ್ನು ನೋಡೋಣ. |
02:51 | ಇದಕ್ಕಾಗಿ ಮೊದಲಿಗೆ Book Title ಲೇಬಲ್ ನ ಪಕ್ಕದಲ್ಲಿರುವ ಟೆಕ್ಸ್ಟ್ ಬಾಕ್ಸ್ ಅನ್ನು ತೆಗೆದುಬಿಡೋಣ. |
02:59 | ನಾವು ಟೆಕ್ಸ್ಟ್-ಬಾಕ್ಸ್ ಮೇಲೆ ಕ್ಲಿಕ್ ಮಾಡಿದಾಗ, ಪರಿಚಿತ ಗ್ರೀನ್ ಬಾಕ್ಸ್ ಗಳೊಂದಿಗೆ ಇದನ್ನು ಆಯ್ಕೆಮಾಡಲಾಗುತ್ತದೆ. |
03:09 | ನಂತರ ರೈಟ್-ಕ್ಲಿಕ್ ಮಾಡಿ, ಕೆಳಗೆ Cut ಮೇಲೆ ಕ್ಲಿಕ್ ಮಾಡಿ. |
03:16 | ನೋಡಿ, ನಾವು ಟೆಕ್ಸ್ಟ್-ಬಾಕ್ಸ್ ಅನ್ನು ತೆಗೆದುಬಿಟ್ಟಿದ್ದೇವೆ. |
03:20 | ನಾವೀಗ ಇಲ್ಲಿ List box form control ಅನ್ನು ಇಡುವೆವು. |
03:26 | ಇದನ್ನು Form Controls ಟೂಲ್ ಬಾರ್ ನಲ್ಲಿ ಆಕ್ಸೆಸ್ ಮಾಡಬಹುದು. |
03:31 | View ಮೆನು ಬಳಸಿ, Form Controls ಮೇಲೆ ಕ್ಲಿಕ್ ಮಾಡಿ ನಾವು ಇದನ್ನು ಮೇಲಕ್ಕೆ ತರಬಹುದು. |
03:39 | ಗಮನಿಸಿ, ಬೇಸ್ ನಮಗೆ ಸಾಕಷ್ಟು form controls ಗಳನ್ನು ಒದಗಿಸುತ್ತದೆ; ಟೂಲ್ ಗಳ ಬಗ್ಗೆ ಮಾಹಿತಿಯನ್ನು ಪಡೆಯಲು ನಾವು ನಮ್ಮ ಕರ್ಸರ್ ಅನ್ನು ಈ ಐಕಾನ್ ಗಳ ಮೇಲೆ ಇಡೋಣ. |
04:01 | ಈಗ ನಮ್ಮ list box ಐಕಾನ್ ಅನ್ನು ನೋಡೋಣ. |
04:04 | ಇಲ್ಲಿದೆ ನೋಡಿ, ಈ ಐಕಾನ್ ಮೇಲೆ ಒಮ್ಮೆ ಕ್ಲಿಕ್ ಮಾಡೋಣ. |
04:11 | ಮೌಸ್ ಪಾಯಿಂಟರ್ ಅನ್ನು ಫಾರ್ಮ್ ಮೇಲೆ ಸರಿಸೋಣ; ಇದು ತೆಳುವಾದ ಅಧಿಕ ಚಿಹ್ನೆಯಾಗಿ ಬದಲಾಗಿರುವುದನ್ನು ಗಮನಿಸಿ. |
04:21 | ನಾವೀಗ ನಮ್ಮ ಫಾರ್ಮ್ ನಲ್ಲಿ 'ಲಿಸ್ಟ್ ಬಾಕ್ಸ್ ಫಾರ್ಮ್ ಕಂಟ್ರೋಲ್' ಅನ್ನು ಡ್ರಾ ಮಾಡಬಹುದು. |
04:26 | ಹೀಗೆ ಮಾಡಲು, ನಮ್ಮ ಫಾರ್ಮ್ ನಲ್ಲಿ ಇದನ್ನು ಈ ರೀತಿ ಕ್ಲಿಕ್, ಡ್ರಾಗ್ ಮತ್ತು ಡ್ರಾಪ್ ಮಾಡುವೆವು. |
04:34 | ಈ ಹಿಂದೆ ನಾವು ಟೆಕ್ಸ್ಟ್-ಬಾಕ್ಸ್ ಅನ್ನು ತೆಗೆದುಹಾಕಿದ ಜಾಗದಲ್ಲಿ ಇದನ್ನು ಇಡೋಣ. |
04:39 | Form design ವಿಂಡೋದಲ್ಲಿ, 'List Box Wizard' ಎಂಬ ಹೊಸ ವಿಜಾರ್ಡ್ ಕಾಣುತ್ತಿರುವುದನ್ನು ಗಮನಿಸಿ. |
04:48 | ಈಗ ಈ ವಿಜಾರ್ಡ್, ಲಿಸ್ಟ್ ಬಾಕ್ಸ್ ಅನ್ನು Book title ಲೇಬಲ್ ಗೆ ಸೇರಿಸಲು ನಮಗೆ ಸಹಾಯಮಾಡುವುದು. |
04:56 | ಇದು ಹೇಗೆ ಎನ್ನುವುದನ್ನು ನೋಡೋಣ. |
04:58 | ಈ ವಿಜಾರ್ಡ್ ನಲ್ಲಿ, ನಾವು book titles ಅನ್ನು ಪಡೆಯಬಹುದಾದ ಟೇಬಲ್ ಅನ್ನು ಮೊದಲಿಗೆ ಆರಿಸೋಣ. |
05:07 | ನಾವು ಲಿಸ್ಟ್ ನಿಂದ Books table ಅನ್ನು ಆರಿಸಿಕೊಂಡು Next ಬಟನ್ ಮೇಲೆ ಕ್ಲಿಕ್ ಮಾಡುವೆವು. |
05:15 | ಈಗ, List box ನಲ್ಲಿ ತೋರಿಸಲಾಗುವ ಫೀಲ್ಡ್ ಅನ್ನು ಈ ವಿಂಡೋದಲ್ಲಿ ನಾವು ಆರಿಸಬೇಕು. |
05:24 | book titles ಅನ್ನು Title ಫೀಲ್ಡ್ ನಲ್ಲಿ ಇಡಲಾಗಿದೆ ಎಂಬುದು ನಮಗೆ ತಿಳಿದಿದೆ. |
05:29 | ಈಗ ನಾವು ಮುಂದಿನ ಹಂತದತ್ತ ಸಾಗೋಣ. |
05:32 | ಈ ಕೊನೆಯ ವಿಂಡೋದಲ್ಲಿಯೇ ನಾವು ಚಮತ್ಕಾರವನ್ನು ಮಾಡಲಿದ್ದೇವೆ. |
05:37 | ಸಂಬಂಧಿತ ಟೇಬಲ್ ಗಳು ಮತ್ತು ಫೀಲ್ಡ್ ಗಳನ್ನು ನಾವು ಜೋಡಿಸಲಿದ್ದೇವೆ. |
05:41 | ಫೀಲ್ಡ್ ಹೆಸರುಗಳನ್ನು ಗಮನಿಸಿ. ಎಡಗಡೆಯಲ್ಲಿರುವ 'Fields in the Value table', ‘books Issued’ ಟೇಬಲ್ ನಲ್ಲಿರುವ ಫೀಲ್ಡ್ ಗಳಾಗಿವೆ. |
05:52 | ಮತ್ತು ಬಲಗಡೆಯಲ್ಲಿರುವ 'Fields in the list table', Books ಟೇಬಲ್ ನಲ್ಲಿರುವ ಫೀಲ್ಡ್ ಗಳಾಗಿವೆ. |
05:59 | books ಟೇಬಲ್ ನಲ್ಲಿರುವ book id ಯು ಕೀ ಫೀಲ್ಡ್ ಆಗಿದೆ ಹಾಗೂ ಇದನ್ನು Books Issued table ನಲ್ಲಿ ತೋರಿಸಲಾಗಿದೆ ಎಂದು ಸಹ ತಿಳಿದಿದ್ದೇವೆ. |
06:10 | 'Field from the value table' ಎಂಬ ಎಡಬದಿಯ ಪಟ್ಟಿಯಲ್ಲಿರುವ Book id ಮೇಲೆ ನಾವು ಕ್ಲಿಕ್ ಮಾಡೋಣ. |
06:19 | ನಂತರ, 'Field from the list table' ಎಂಬ ಬಲಗಡೆಯ ಪಟ್ಟಿಯಲ್ಲಿರುವ Book id ಮೇಲೆ ಕ್ಲಿಕ್ ಮಾಡೋಣ. |
06:29 | ಈ ವಿಜಾರ್ಡ್ ಅನ್ನು ಮುಚ್ಚಲು Finish ಬಟನ್ ಮೇಲೆ ಕ್ಲಿಕ್ ಮಾಡಿ. |
06:34 | ನೋಡಿ, ನಾವು ಸಂಬಂಧಿತ ಟೇಬಲ್ ಗಳು ಮತ್ತು ಫೀಲ್ಡ್ ಗಳನ್ನು ಸೇರಿಸಿದ್ದೇವೆ. |
06:40 | ಈಗ ಬೇಸ್, ಈ List box ನಲ್ಲಿ ಎಲ್ಲಾ Book titles ಅನ್ನು ತಂತಾನೇ ಪ್ರದರ್ಶಿಸಲಿದೆ. |
06:46 | ನಾವೀಗ ಫಾರ್ಮ್ ಅನ್ನು ಸೇವ್ ಮಾಡೋಣ. |
06:49 | ಹಾಗೂ ಈ ವಿಂಡೋವನ್ನು ಮುಚ್ಚೋಣ. |
06:52 | ಬೇಸ್ ಟ್ಯುಟೋರಿಯಲ್ ನ ಮುಂದಿನ ಭಾಗದಲ್ಲಿ, ಉಳಿದ ಫಾರ್ಮ್ ಕಂಟ್ರೋಲ್ಸ್ ಅನ್ನು ನಮ್ಮ ಫಾರ್ಮ್ ಗೆ ಸೇರಿಸುವೆವು. |
07:00 | ನಮ್ಮ ಕೆಲಸ ಪೂರ್ಣಗೊಂಡ ನಂತರ, ಫಾರ್ಮ್ ಹೀಗೆ ಕಾಣುವುದು. |
07:06 | ಇಲ್ಲಿ ಒಂದು ಅಸೈನ್ ಮೆಂಟ್ ಇದೆ. |
07:08 | ಅಷ್ಟು ಅನುಕೂಲವಲ್ಲದ member Ids ಗೆ ಬದಲಾಗಿ, member names ಅನ್ನು ಪಟ್ಟಿಮಾಡಲು ಎರಡನೇ ಲಿಸ್ಟ್ ಬಾಕ್ಸ್ ಅನ್ನು ಸೇರಿಸಿ. |
07:17 | ಲಿಸ್ಟ್ ಬಾಕ್ಸ್ ಅನ್ನು ಇರಿಸುವ ಬಗ್ಗೆ ಈಗ ಚಿಂತಿಸಬೇಡಿ. ಹೀಗೆ, Member name ಲೇಬಲ್ ನ ಎಡಗಡೆಗೆ ಇದನ್ನು ಎಳೆಯಿರಿ. |
07:27 | ಮುಂದಿನ ಟ್ಯುಟೋರಿಯಲ್ ನಲ್ಲಿ, ನಾವು ಇದನ್ನು Member Name ನ ಪಕ್ಕದಲ್ಲಿ ಮತ್ತೆ ಸರಿಯಾಗಿ ಇರಿಸುವೆವು. |
07:34 | ಇಲ್ಲಿಗೆ ನಾವು ‘ಲಿಬರ್ ಆಫಿಸ್ ಬೇಸ್’ ನಲ್ಲಿ, ‘ಲಿಸ್ಟ್ ಬಾಕ್ಸ್ ಕಂಟ್ರೋಲ್’ ಕುರಿತ ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
07:40 | ಸಂಕ್ಷಿಪ್ತವಾಗಿ, ಫಾರ್ಮ್ ನಲ್ಲಿ ‘ ಲಿಸ್ಟ್ ಬಾಕ್ಸ್ ಫಾರ್ಮ್ ಕಂಟ್ರೋಲ್’ ಅನ್ನು ಸೇರಿಸುವುದನ್ನು ನಾವು ಕಲಿತೆವು. |
07:47 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, ‘ಟಾಕ್ ಟು ಎ ಟೀಚರ್’ ಪ್ರೊಜೆಕ್ಟ್ ನ ಒಂದು ಭಾಗವಾಗಿದೆ. ಇದು ರಾಷ್ಟ್ರೀಯ ಸಾಕ್ಷರತಾ ಮಿಷನ್, ICT, MHRD, ಭಾರತ ಸರ್ಕಾರದ ನೆರವು ಪಡೆದಿದೆ. |
07:58 | ಈ ಪ್ರೊಜೆಕ್ಟ್ ಅನ್ನು ಸಂಯೋಜಿಸಿದವರು: |
08:04 | ಕೆಳಗಿನ ಲಿಂಕ್ ನಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿದೆ. |
08:08 | ಈ ಸ್ಕ್ರಿಪ್ಟ್ ನ ಅನುವಾದಕ ಮೆಲ್ವಿನ್, ಮಂಗಳೂರು ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
ಧನ್ಯವಾದಗಳು. |