Koha-Library-Management-System/C3/Installation-of-MarcEditor/Kannada
From Script | Spoken-Tutorial
Time | Narration |
00:01 | Installation of MarcEditor on Windows ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:08 | ಈ ಟ್ಯುಟೋರಿಯಲ್ ನಲ್ಲಿ, ನಾವು 64-bit Windows ಮಷಿನ್ ನಲ್ಲಿ MarcEditor ಅನ್ನು ಇನ್ಸ್ಟಾಲ್ ಮಾಡಲು ಕಲಿಯುವೆವು. |
00:16 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
Windows 10 Pro Operating System ಮತ್ತು Firefox ವೆಬ್-ಬ್ರೌಸರ್ ಇವುಗಳನ್ನು ಬಳಸುತ್ತಿದ್ದೇನೆ. |
00:27 | ಈ ಟ್ಯುಟೋರಿಯಲ್, ಲೈಬ್ರರಿ ಸಿಬ್ಬಂದಿಗೆ ಬಹಳ ಉಪಯುಕ್ತವಾಗಿದೆ. |
00:32 | ಮುಂದುವರಿಯುವ ಮುನ್ನ, ನಿಮ್ಮ ಮಷಿನ್ ನಲ್ಲಿ ಈ ಕೆಳಗಿನವುಗಳು ಇರುವುದನ್ನು ದಯವಿಟ್ಟು ಖಚಿತಪಡಿಸಿಕೊಳ್ಳಿ. -
Windows 10, 8 ಅಥವಾ 7 ಮತ್ತು |
00:43 | ಯಾವುದೇ ವೆಬ್-ಬ್ರೌಸರ್.
ಉದಾಹರಣೆಗೆ: Internet Explorer, Firefox ಅಥವಾ Google Chrome. |
00:51 | ಈಗ ಅಸ್ತಿತ್ವದಲ್ಲಿರುವ ನಿಮ್ಮ ಲೈಬ್ರರಿಯಲ್ಲಿ, ನೀವು ಲೈಬ್ರರಿಯ ದಾಖಲೆಗಳನ್ನು 'ಎಕ್ಸೆಲ್ ಸ್ಪ್ರೆಡ್-ಶೀಟ್' ನಲ್ಲಿ ಹೊಂದಿರಬಹುದು. |
00:58 | ಮತ್ತು, ನಿಮ್ಮ ಲೈಬ್ರರಿಯು ಈಗ Koha Library Management System ಗೆ ಸ್ಥಳಾಂತರವಾಗುತ್ತಿದೆ. |
01:05 | ಆದ್ದರಿಂದ, ಎಲ್ಲಾ ದಾಖಲೆಗಳನ್ನು 'ಎಕ್ಸೆಲ್' ನಿಂದ 'MARC' ಫಾರ್ಮ್ಯಾಟ್ ಗೆ ಪರಿವರ್ತಿಸಬೇಕು. |
01:12 | 'ಎಕ್ಸೆಲ್ ಸ್ಪ್ರೆಡ್-ಶೀಟ್' ನಲ್ಲಿನ ದಾಖಲೆಗಳನ್ನು ಮೊದಲು MARC ಫಾರ್ಮ್ಯಾಟ್ ಗೆ ಪರಿವರ್ತಿಸಬೇಕು. ನಂತರ 'ಕೋಹಾ' ದಲ್ಲಿ ಇಂಪೋರ್ಟ್ ಮಾಡಿಕೊಳ್ಳಬೇಕು. ಇದನ್ನು ತಿಳಿದಿರುವುದು ಬಹಳ ಮುಖ್ಯವಾಗಿದೆ. |
01:26 | ಏಕೆಂದರೆ, 'ಎಕ್ಸೆಲ್ ' ಫಾರ್ಮ್ಯಾಟ್ ನಲ್ಲಿರುವ ಡೇಟಾವನ್ನು ನೇರವಾಗಿ ಇಂಪೋರ್ಟ್ ಮಾಡಿಕೊಳ್ಳಲು ಕೋಹಾ ಗೆ ಅವಕಾಶವಿಲ್ಲ. |
01:35 | ನಾವು ಈಗ ಆರಂಭಿಸೋಣ. |
01:37 | Excel ಡೇಟಾವನ್ನು MARC ಫೈಲ್ ಆಗಿ ಎಂದರೆ (dot) mrc ಫಾರ್ಮ್ಯಾಟ್ ಗೆ ಪರಿವರ್ತಿಸಲು, ನಾವು MarcEdit ಸಾಫ್ಟ್ವೇರ್ ಅನ್ನು ಬಳಸುವವರಿದ್ದೇವೆ. |
01:48 | ಈ ಸಾಫ್ಟ್ವೇರ್ ಅನ್ನು ಇನ್ಸ್ಟಾಲ್ ಮಾಡಲು, ಬ್ರೌಸರ್ ಗೆ ಹೋಗಿ ಮತ್ತು ಈ URL ಅನ್ನು ಟೈಪ್ ಮಾಡಿ. |
01:55 | Downloads ಎಂಬ ಶೀರ್ಷಿಕೆಯೊಂದಿಗೆ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ. |
02:00 | Current Development ನ ಅಡಿಯಲ್ಲಿ, MarcEdit 7.0.x/MacOS 3.0.x ಗೆ ಹೋಗಿ.
Windows 64-bit download ಅನ್ನು ಗುರುತಿಸಿ. |
02:17 | ಆದಾಗ್ಯೂ, ನಿಮ್ಮ ಹತ್ತಿರ 32-bit ಮಷಿನ್ ಇದ್ದರೆ, ಆಗ ನೀವು Windows 32-bit download ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. |
02:26 | ನಿಮ್ಮ ಮಷಿನ್ 32-bit ಅಥವಾ 64-bit ಆಗಿದೆಯೇ ಎಂದು ಪರಿಶೀಲಿಸಲು, ಮಷಿನ್ ನ ಕೆಳಗಿನ ಎಡಮೂಲೆಗೆ ಹೋಗಿ. |
02:35 | Start ಐಕಾನ್ ಮೇಲೆ ಕ್ಲಿಕ್ ಮಾಡಿ. |
02:38 | ಮೇಲ್ಗಡೆ ಸ್ಕ್ರೋಲ್ ಮಾಡಿ ಮತ್ತು Settings ಮೇಲೆ ಕ್ಲಿಕ್ ಮಾಡಿ. |
02:43 | ಈ ಐಕಾನ್ ಗಳಿಂದ, System- Display, notifications, apps, power ಗಳ ಮೇಲೆ ಕ್ಲಿಕ್ ಮಾಡಿ. |
02:51 | ಇದು ಎಡಭಾಗದಲ್ಲಿ ಕೆಲವು ಆಯ್ಕೆಗಳೊಂದಿಗೆ ಮತ್ತೊಂದು ವಿಂಡೋವನ್ನು ತೆರೆಯುತ್ತದೆ. |
02:56 | About ಎಂಬ ಟ್ಯಾಬ್ ಅನ್ನು ಗುರುತಿಸಿ ಮತ್ತು ಅದನ್ನು ಕ್ಲಿಕ್ ಮಾಡಿ. |
03:00 | ಇದೇ ಪೇಜ್ ನಲ್ಲಿ, ಬಲಗಡೆಯಲ್ಲಿ, PC ಎಂಬ ವಿಭಾಗದ ಅಡಿಯಲ್ಲಿ, System type ಅನ್ನು ಗುರುತಿಸಿ. |
03:08 | ನಿಮ್ಮ ಮಷಿನ್ ನ 'ಆಪರೇಟಿಂಗ್ ಸಿಸ್ಟಂ' ನ ವಿವರಗಳನ್ನು ತೋರಿಸಲಾಗುವುದು. |
03:13 | ನನ್ನ ಮಷಿನ್ ಗಾಗಿ, ಇದು 64-bit operating system, x64-based processor ಎಂದು ಹೇಳುತ್ತದೆ. |
03:21 | ವಿವರಗಳನ್ನು ಓದಿದ ನಂತರ, ವಿಂಡೋಅನ್ನು ಕ್ಲೋಸ್ ಮಾಡಿ. |
03:25 | ಹೀಗೆ ಮಾಡಲು, ಮೇಲಿನ ಬಲಮೂಲೆಗೆ ಹೋಗಿ ಮತ್ತು ಕ್ರಾಸ್ ಗುರುತಿನ ಮೇಲೆ ಕ್ಲಿಕ್ ಮಾಡಿ. |
03:31 | ನಾವು ಮತ್ತೆ ಅದೇ Downloads ಪೇಜ್ ಗೆ ಹಿಂತಿರುಗುತ್ತೇವೆ, |
03:36 | ನನ್ನ ಮಷಿನ್ 64-bit ಇರುವುದರಿಂದ, ನಾನು 64-bit download ಮೇಲೆ ಕ್ಲಿಕ್ ಮಾಡುವೆನು. |
03:42 | 64-bit download ಎಂಬ ಶೀರ್ಷಿಕೆಯ ಇನ್ನೊಂದು ಹೊಸ ವಿಂಡೋ, ಎರಡು ವಿಭಾಗಗಳೊಂದಿಗೆ ತೆರೆದುಕೊಳ್ಳುತ್ತದೆ -
Non-Administrator ಮತ್ತು Administrator. |
03:53 | ಆಮೇಲೆ, ನಾನು Administrator ವಿಭಾಗದ ಕೆಳಗೆ, Download MarcEdit 7 ಲಿಂಕ್ ಮೇಲೆ ಕ್ಲಿಕ್ ಮಾಡುವೆನು. |
04:02 | ಏಕೆಂದರೆ, ನಾನು ನನ್ನ ಲೈಬ್ರರಿಯ ಗೊತ್ತುಪಡಿಸಿದ Koha administrator ಆಗಿದ್ದೇನೆ. |
04:09 | MarcEdit_Setup64Admin.msi ಎಂಬ ಒಂದು ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ. |
04:16 | ನಾವು ಇಲ್ಲಿ 2 ಆಯ್ಕೆಗಳನ್ನು ನೋಡಬಹುದು -
Save File ಮತ್ತು Cancel. |
04:22 | ಕೆಳಗೆ ಇರುವ Save File ಬಟನ್ ಮೇಲೆ ಕ್ಲಿಕ್ ಮಾಡಿ. |
04:26 | ಹಾಗೆ ಮಾಡಿದ ನಂತರ, ನಿಮ್ಮ ಮಷಿನ್ ನ Downloads ಫೋಲ್ಡರ್ ಗೆ ಹೋಗಿ. |
04:31 | ಇಲ್ಲಿ, MarcEdit_Setup64Admin.msi ಫೈಲ್, ಸೇವ್ ಆಗಿರುವುದನ್ನು ನೀವು ನೋಡಬಹುದು. |
04:40 | ಈಗ, ಸೇವ್ ಮಾಡಿದ ಫೈಲ್ ಮೇಲೆ ರೈಟ್-ಕ್ಲಿಕ್ ಮಾಡಿ. ಮತ್ತು ಇಲ್ಲಿ ಕಾಣಿಸುತ್ತಿರುವ ಆಯ್ಕೆಗಳಿಂದ Install ಮೇಲೆ ಕ್ಲಿಕ್ ಮಾಡಿ. |
04:48 | User Account Control ಡೈಲಾಗ್-ಬಾಕ್ಸ್ ನಲ್ಲಿ, Yes ಮೇಲೆ ಕ್ಲಿಕ್ ಮಾಡಿ. |
04:56 | Welcome to the MarcEdit 7 Setup Wizard ಎಂಬ ಹೆಸರಿನ ಇನ್ನೊಂದು ವಿಂಡೋ ಕಾಣಿಸಿಕೊಳ್ಳುತ್ತದೆ. |
05:04 | ಪೇಜ್ ನ ಕೆಳಗಡೆ ಇರುವ Next ಬಟನ್ ಮೇಲೆ ಕ್ಲಿಕ್ ಮಾಡಿ. |
05:08 | License Agreement ಎಂಬ ಟೈಟಲ್ ನೊಂದಿಗೆ, ಇನ್ನೊಂದು ಹೊಸ ವಿಂಡೋ ಕಾಣಿಸಿಕೊಳ್ಳುತ್ತದೆ. |
05:14 | License Agreement ಅನ್ನು ಎಚ್ಚರಿಕೆಯಿಂದ ಓದಿ. |
05:18 | ಮತ್ತು, I do not agree ಹಾಗೂ I agree ಈ ಎರಡು ಆಯ್ಕೆಗಳಿಂದ, I Agree ರೇಡಿಯೊ- ಬಟನ್ ಮೇಲೆ ಕ್ಲಿಕ್ ಮಾಡಿ. |
05:28 | ನಂತರ, ವಿಂಡೋದ ಕೆಳಗಡೆ ಇರುವ Next ಬಟನ್ ಮೇಲೆ ಕ್ಲಿಕ್ ಮಾಡಿ. |
05:33 | Select Installation Folder ಎಂಬ ಒಂದು ಹೊಸ ವಿಂಡೋ ತೆರೆದುಕೊಳ್ಳುತ್ತದೆ. |
05:39 | ಇನ್ಸ್ಟಾಲ್ ಮಾಡಿದ ಸಾಫ್ಟ್ವೇರ್ ಅನ್ನು, ಸೇವ್ ಮಾಡುವ ಫೋಲ್ಡರ್ ನ 'ಪಾಥ್' ಅನ್ನು ಇದು ತೋರಿಸುತ್ತದೆ. |
05:45 | ಪರ್ಯಾಯವಾಗಿ, ನೀವು ಈ ಸಾಫ್ಟ್ವೇರ್ ಅನ್ನು ನಿಮ್ಮ ಆಯ್ಕೆಯ ಬೇರೆ ಫೋಲ್ಡರ್ ನಲ್ಲಿ ಇನ್ಸ್ಟಾಲ್ ಮಾಡಬಹುದು.
Folder ಫೀಲ್ಡ್ ನಲ್ಲಿ, ಅಗತ್ಯವಿರುವ 'ಪಾಥ್' ಅನ್ನು ಟೈಪ್ ಮಾಡುವ ಮೂಲಕ ಅದನ್ನು ಮಾಡಿ. |
05:56 | ನೀವು Browse ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ, ಬೇಕಾದ path ಅನ್ನು ಸಹ ಆಯ್ಕೆಮಾಡಬಹುದು. |
06:03 | ಆದಾಗ್ಯೂ, ನಾನು Folder ಫೀಲ್ಡ್ ನಲ್ಲಿ, ಫೋಲ್ಡರ್ ಪಾಥ್ ಅನ್ನು ಹಾಗೇ ಇಡುತ್ತೇನೆ. |
06:09 | ಈಗ ವಿಂಡೋದ ಕೆಳಗಡೆ, Next ಬಟನ್ ಮೇಲೆ ಕ್ಲಿಕ್ ಮಾಡಿ. |
06:14 | ಇನ್ನೊಂದು ಹೊಸ ವಿಂಡೋ, Confirm Installation ತೆರೆದುಕೊಳ್ಳುತ್ತದೆ. |
06:19 | ಈಗ ಇದೇ ವಿಂಡೋದ ಕೆಳಗಡೆ, Next ಬಟನ್ ಮೇಲೆ ಕ್ಲಿಕ್ ಮಾಡಿ. |
06:25 | Installing MarcEdit 7 ವಿಂಡೋ ತೆರೆದುಕೊಳ್ಳುತ್ತದೆ. |
06:30 | ಇದಾದ ನಂತರ, ನಾವು ಒಂದು ಸಕ್ಸೆಸ್ ಮೆಸೇಜ್ ವಿಂಡೋವನ್ನು ನೋಡುತ್ತೇವೆ.
ಇದು - Installation Complete. MarcEdit 7 has been successfully installed ಎಂದು ಹೇಳುತ್ತದೆ. |
06:42 | ಈ ವಿಂಡೋದಿಂದ ಹೊರಬರಲು, Close ಬಟನ್ ಮೇಲೆ ಕ್ಲಿಕ್ ಮಾಡಿ. |
06:47 | ಒಂದು ವಿಂಡೋ, MarcEdit 7.0.250 By Terry Reese ಟೈಟಲ್ ನೊಂದಿಗೆ ತೆರೆದುಕೊಳ್ಳುತ್ತದೆ. |
06:56 | ಈಗ, ತೆರೆದಿದ್ದ ಎಲ್ಲಾ ವಿಂಡೋಗಳನ್ನು ಮಿನಿಮೈಜ್ ಮಾಡಿ. |
07:01 | ಡೆಸ್ಕ್ಟಾಪ್ ನಲ್ಲಿ, ಒಂದು ಶಾರ್ಟ್ಕಟ್ ಅನ್ನು ರಚಿಸಲಾಗಿದೆ ಎಂದು ನೀವು ನೋಡುವಿರಿ. |
07:06 | ಇದರೊಂದಿಗೆ, ನಾವು MarcEditor ಅನ್ನು 64-bit Windows ಮಷಿನ್ ನ ಡೆಸ್ಕ್ಟಾಪ್ (Desktop) ಮೇಲೆ ಯಶಸ್ವಿಯಾಗಿ ಇನ್ಸ್ಟಾಲ್ ಮಾಡಿದ್ದೇವೆ. |
07:14 | ಈ ಲಿಂಕ್ ನಲ್ಲಿರುವ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಡೌನ್ಲೋಡ್ ಮಾಡಿ ವೀಕ್ಷಿಸಿ. |
07:22 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣ ಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ. |
07:32 | ನಿಮ್ಮ ಪ್ರಶ್ನೆಗಳನ್ನು ನಿಮಿಷ ಮತ್ತು ಸೆಕೆಂಡ್ ಗಳೊಂದಿಗೆ ಈ ಫೋರಮ್ ನಲ್ಲಿ ಪೋಸ್ಟ್ ಮಾಡಿ. |
07:36 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಧನಸಹಾಯವನ್ನು ಪಡೆದಿದೆ.
ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಲಿಂಕ್ ನಲ್ಲಿ ಲಭ್ಯವಿದೆ. |
07:48 | ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನಪಟ್ಟಣ.
ಧನ್ಯವಾದಗಳು. |