Koha-Library-Management-System/C3/Copy-cataloging-using-Z39.50/Kannada
| 00:01 | Copy Cataloging using Z39.50 ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
| 00:09 | ಈ ಟ್ಯುಟೋರಿಯಲ್ ನಲ್ಲಿ ನಾವು, Z39.50ಅನ್ನು ಬಳಸಿ catalog ನಲ್ಲಿ ರೆಕಾರ್ಡ್ ಗಳನ್ನು ಹೇಗೆ ಸೇರಿಸುವುದೆಂದು ಕಲಿಯುವೆವು. |
| 00:20 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
Ubuntu Linux operating system 16.04 |
| 00:28 | ಮತ್ತು Koha ಆವೃತ್ತಿ 16.05 ಇವುಗಳನ್ನು ಬಳಸುತ್ತಿದ್ದೇನೆ. |
| 00:33 | ನೀವು ಇಂಟರ್ನೆಟ್ ಗೆ ಸಂಪರ್ಕ ಹೊಂದಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ. |
| 00:38 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು- ಲೈಬ್ರರಿ ಸೈನ್ಸ್, |
| 00:45 | 'ಕ್ಯಾಟಲಾಗಿಂಗ್ ಸ್ಟ್ಯಾಂಡರ್ಡ್' ಗಳು, AACR2 ಮತ್ತು MARC21 ಇವುಗಳನ್ನು ತಿಳಿದಿರಬೇಕು. |
| 00:54 | ಇದನ್ನು ಅಭ್ಯಾಸ ಮಾಡಲು, ನೀವು Koha ಅನ್ನು ನಿಮ್ಮ ಸಿಸ್ಟಂ ನಲ್ಲಿ ಇನ್ಸ್ಟಾಲ್ ಮಾಡಿರಬೇಕು. |
| 01:00 | ಮತ್ತು, Koha ದಲ್ಲಿ Admin ಆಕ್ಸೆಸ್ ಅನ್ನು ಸಹ ನೀವು ಹೊಂದಿರಬೇಕು. |
| 01:05 | ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಈ ವೆಬ್ಸೈಟ್ ನಲ್ಲಿ Koha spoken tutorial ಸರಣಿಯನ್ನು ನೋಡಿ. |
| 01:13 | Z39.50 ಎಂದರೇನು? |
| 01:18 | Z39.50 - ಇದು, ರಿಮೋಟ್ ಕಂಪ್ಯೂಟರ್ ಡೇಟಾಬೇಸ್ ಗಳಿಂದ ಮಾಹಿತಿಯನ್ನು ಹುಡುಕುವ ಮತ್ತು ಪುನಃ ಪಡೆದುಕೊಳ್ಳುವ client–server protocol ಆಗಿದೆ.
ಸಂಕ್ಷಿಪ್ತವಾಗಿ, ಇದು ಕ್ಯಾಟಲಾಗಿಂಗ್ ಅನ್ನು ನಕಲು ಮಾಡಲು ಬಳಸುವ ಒಂದು ಸಾಧನವಾಗಿದೆ. |
| 01:37 | ಈಗ ಆರಂಭಿಸೋಣ.
ಮೊದಲು ನಾನು Koha ಇಂಟರ್ಫೇಸ್ ಗೆ ಬದಲಾಯಿಸುತ್ತೇನೆ ಮತ್ತು Superlibrarian, Bella ಎಂದು ಲಾಗ್-ಇನ್ ಮಾಡುತ್ತೇನೆ. |
| 01:47 | Koha Home ಪೇಜ್ ನಲ್ಲಿ, Koha administration ಮೇಲೆ ಕ್ಲಿಕ್ ಮಾಡಿ. |
| 01:53 | ಈ ಪೇಜ್ ನಲ್ಲಿ, ಕೆಳಗೆ ಸ್ಕ್ರೋಲ್ ಮಾಡಿ ಮತ್ತು Additional parameters ಅನ್ನು ಗುರುತಿಸಿ. |
| 01:59 | ಆಮೇಲೆ, Z39.50/SRU servers ಮೇಲೆ ಕ್ಲಿಕ್ ಮಾಡಿ. |
| 02:07 | Z39.50/SRU servers administration ಎಂಬ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ. |
| 02:16 | ಇಲ್ಲಿ, +New Z39.50 server ಮತ್ತು+New SRU server ಎಂಬ ಎರಡು ಟ್ಯಾಬ್ ಗಳಿವೆ. |
| 02:26 | +New Z39.50 server ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
| 02:32 | New Z39.50 server ಎಂಬ ಶೀರ್ಷಿಕೆಯೊಂದಿಗೆ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ. |
| 02:40 | ಗಮನಿಸಿ target Z39.50 Server ಅನ್ನು ಸೇರಿಸಲು, ನಾವು ಟಾರ್ಗೆಟ್ ಸರ್ವರ್ ನ ವಿವರಗಳನ್ನು ತಿಳಿದಿರಬೇಕು. |
| 02:51 | ನಿಮಗೆ Z39.50 server ನ ಯಾವುದೇ ವಿವರಗಳು ತಿಳಿದಿರದಿದ್ದರೆ, ಈ URL ನಲ್ಲಿ ನೀವು Z39.50 servers ನ ಲಿಸ್ಟ್ ಅನ್ನು ನೋಡಬಹುದು. |
| 03:05 | IRSpy ಎಂಬ ಪೇಜ್ ತೆರೆದುಕೊಳ್ಳುತ್ತದೆ. ಇದು ಕೆಲವು ವಿವರಗಳನ್ನು ತುಂಬಲು ನಮಗೆ ಸೂಚಿಸುತ್ತಿದೆ. |
| 03:12 | ಈಗ ಆರಂಭಿಸೋಣ. |
| 03:14 | (Anywhere) ಫೀಲ್ಡ್ ಅನ್ನು ಖಾಲಿ ಬಿಡಿ. |
| 03:18 | Name ಗಾಗಿ, ನಾನು Library of Congress ಎಂದು ಟೈಪ್ ಮಾಡುವೆನು. |
| 03:23 | ಏಕೆಂದರೆ, ಇದು ದೊಡ್ಡ ಲೈಬ್ರರಿಗಳಲ್ಲಿ ಒಂದಾಗಿದೆ ಮತ್ತು ಗ್ರಂಥಸೂಚಿಯ ದೊಡ್ಡ ಡೇಟಾವನ್ನು ಹೊಂದಿದೆ. |
| 03:31 | ಆಮೇಲೆ, Country ಯ ಫೀಲ್ಡ್ ನಲ್ಲಿ, ಡ್ರಾಪ್-ಡೌನ್ ನಿಂದ United States ಅನ್ನು ಆಯ್ಕೆಮಾಡಿ. |
| 03:38 | Protocol ಗಾಗಿ, ಡ್ರಾಪ್-ಡೌನ್ ನಿಂದ Z39.50 ಅನ್ನು ಆಯ್ಕೆಮಾಡಿ. |
| 03:46 | ನಿಮ್ಮ ಅವಶ್ಯಕತೆಗಳ ಪ್ರಕಾರ, ನೀವು ಉಳಿದ ವಿವರಗಳನ್ನು ತುಂಬಬಹುದು. |
| 03:51 | ನಂತರ ಪೇಜ್ ನ ಕೆಳಗಿರುವ Search ಬಟನ್ ಮೇಲೆ ಕ್ಲಿಕ್ ಮಾಡಿ. |
| 03:57 | ಹುಡುಕಾಟದ ಫಲಿತಾಂಶಗಳೊಂದಿಗೆ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ. |
| 04:01 | 9 ಲೈಬ್ರರಿಗಳ ಪಟ್ಟಿಯನ್ನು, ಈಕೆಳಗಿನ ಶೀರ್ಷಿಕೆಗಳ ಅಡಿಯಲ್ಲಿ ಪ್ರದರ್ಶಿಸಲಾಗಿದೆ -
Title, Host Connection Reliability, Host, Port ಮತ್ತು DB. |
| 04:16 | Koha ದಲ್ಲಿ, New Z39.50 server ನಲ್ಲಿ ವಿವರಗಳನ್ನು ತುಂಬಲು ಈ ವಿವರಗಳನ್ನು ಬಳಸಲಾಗುತ್ತದೆ. |
| 04:26 | ಗಮನಿಸಿ: 10 ಕ್ಕಿಂತ ಹೆಚ್ಚು ಲೈಬ್ರರಿಗಳು ಇರುವ ಬೇರೆ ಲಿಸ್ಟ್ ಅನ್ನು ನೀವು ನೋಡಬಹುದು. |
| 04:32 | ನೆನಪಿಡಿ, ಯಾವುದೇ ಟಾರ್ಗೆಟ್ Z39.50 server ಅನ್ನು ಸೇರಿಸುವ ಮೊದಲು, ದಯವಿಟ್ಟು Host Connection Reliability ಯನ್ನು ಖಚಿತಪಡಿಸಿಕೊಳ್ಳಿ. |
| 04:43 | ನಾನು Title : Library of Congress ಮೇಲೆ ಕ್ಲಿಕ್ ಮಾಡುವೆನು. |
| 04:48 | Library of Congress ಎಂಬ ಶೀರ್ಷಿಕೆಯೊಂದಿಗೆ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ. |
| 04:54 | ಸ್ವಲ್ಪ ಸಮಯದ ನಂತರ ನಮಗೆ ಈ ಪೇಜ್ ನಲ್ಲಿಯ ವಿವರಗಳು ಬೇಕಾಗುವುದು. ಆದ್ದರಿಂದ ಈ ಪೇಜ್ ಅನ್ನು ತೆರೆದಿಡಿ. |
| 05:01 | ಈಗ, ನಾವು New Z39.50 server ಪೇಜ್ ಗೆ ಹಿಂತಿರುಗಿ ಹೋಗೋಣ. ಇದನ್ನು ಈ ಟ್ಯುಟೋರಿಯಲ್ ನಲ್ಲಿ ನಾವು ಮೊದಲು ತೆರೆದು ಇಟ್ಟಿದ್ದೆವು. |
| 05:12 | ಈ ಪೇಜ್ ನಲ್ಲಿ, ಅವಶ್ಯಕ ವಿವರಗಳನ್ನು ತುಂಬಲು ಪ್ರಾರಂಭಿಸೋಣ. |
| 05:17 | ಈ ವಿವರಗಳು ನಾವು ತೆರೆದಿಟ್ಟ Library of Congress ಪೇಜ್ ನಲ್ಲಿವೆ. |
| 05:23 | ಹೀಗಾಗಿ ನಾವು ಇದನ್ನು ಆರಂಭಿಸೋಣ. |
| 05:25 | New Z39.50 server ಪೇಜ್ ನಲ್ಲಿ, Server name ಗಾಗಿ, Library of Congress ಎಂದು ಟೈಪ್ ಮಾಡಿ. |
| 05:34 | ಈ ವಿವರವು Library of Congress ಪೇಜ್ ನಲ್ಲಿ Name ಎಂಬ ವಿಭಾಗದಿಂದ ಇದೆ. |
| 05:41 | ನಾನು New Z39.50 server ಪೇಜ್ ನಲ್ಲಿ, ಬೇರೆ ಕೆಲವು ವಿವರಗಳನ್ನು ತುಂಬಿದ್ದೇನೆ. ಇವುಗಳನ್ನು ನಾನು Library of Congress ಪೇಜ್ ನಿಂದ ಪಡೆದಿದ್ದೇನೆ. |
| 05:54 | ನೀವು ವೀಡಿಯೊವನ್ನು ನಿಲ್ಲಿಸಬಹುದು ಮತ್ತು ನಿಮ್ಮ ಅವಶ್ಯಕತೆಯ ಪ್ರಕಾರ ವಿವರಗಳನ್ನು ತುಂಬಬಹುದು. |
| 06:01 | ದಯವಿಟ್ಟು ಗಮನಿಸಿ, ಕೆಂಪು ಬಣ್ಣದಲ್ಲಿ ಗುರುತಿಸಲಾದ ಫೀಲ್ಡ್ ಗಳು ಕಡ್ಡಾಯವಾಗಿವೆ. |
| 06:06 | ನಂತರ, ನಾವು Preselected (searched by default) ಎಂಬ ಚೆಕ್-ಬಾಕ್ಸ್ ಅನ್ನು ನೋಡುತ್ತೇವೆ. |
| 06:12 | ನೀವು ಈ ನಿರ್ದಿಷ್ಟ ಲೈಬ್ರರಿಯ ಡೇಟಾಬೇಸ್ ಅನ್ನು ಯಾವಾಗಲೂ ಡೀಫಾಲ್ಟ್ ಆಗಿ ಹುಡುಕಬೇಕೆಂದು ಬಯಸಿದರೆ, ಇದನ್ನು ಕ್ಲಿಕ್ ಮಾಡಿ. ನಾನು ಅದನ್ನು ಚೆಕ್ ಮಾಡದೆ ಹಾಗೇ ಬಿಡುತ್ತೇನೆ. |
| 06:23 | ಈಗ ನಾವು Rank (display order) ನ ಫೀಲ್ಡ್ ಗೆ ಬರುತ್ತೇವೆ.
ನೀವು ಲೈಬ್ರರಿಗಳ ಲಿಸ್ಟ್ ನಲ್ಲಿ ಎಲ್ಲಕ್ಕಿಂತ ಮೊದಲು ಈ ಲೈಬ್ರರಿಯನ್ನು ಲಿಸ್ಟ್ ಮಾಡಲು ಬಯಸಿದರೆ, ಆಗ ಇಲ್ಲಿ 1 ಅನ್ನು ನಮೂದಿಸಿ. |
| 06:37 | ಗಮನಿಸಿ: ನೀವು ಅನೇಕ 'z39.50 ಟಾರ್ಗೆಟ್' ಗಳನ್ನು ಸೇರಿಸಲು ಬಯಸಿದರೆ, ನೀವು ಶ್ರೇಣಿಯ ಪ್ರಕಾರ ಅವುಗಳನ್ನು ಹೊಂದಿಸಬಹುದು. |
| 06:47 | Syntax ಗಾಗಿ, ಡ್ರಾಪ್-ಡೌನ್ ನಿಂದ ನಾನು MARC21/USMARC ಅನ್ನು ಆಯ್ಕೆಮಾಡುವೆನು.
ನಿಮ್ಮ ಅವಶ್ಯಕತೆಗೆ ಅನುಗುಣವಾಗಿ, ನೀವು ಯಾವುದೇ ಸಿಂಟ್ಯಾಕ್ಸ್ ಅನ್ನು ಆಯ್ಕೆ ಮಾಡಬಹುದು. |
| 07:00 | Encoding ಗಾಗಿ, ಕೋಹಾ ಡೀಫಾಲ್ಟ್ ಆಗಿ utf8 ಅನ್ನು ಆಯ್ಕೆಮಾಡುತ್ತದೆ. ನಾನು ಅದನ್ನು ಇದ್ದಂತೆಯೇ ಇಡುತ್ತೇನೆ. |
| 07:08 | ಆದರೆ ನಿಮ್ಮ ಅವಶ್ಯಕತೆಗೆ ಅನುಗುಣವಾಗಿ, ನೀವು ಬೇರೆ ಯಾವುದೇ ವ್ಯಾಲ್ಯೂವನ್ನು ಆಯ್ಕೆ ಮಾಡಬಹುದು. |
| 07:14 | ನಂತರ Time out (0 its like not set) ಇದೆ. |
| 07:20 | ಇಲ್ಲಿ, ಫಲಿತಾಂಶಗಳು ಕಾಣಿಸಿಕೊಳ್ಳಲು ನೀವು ನಿರೀಕ್ಷಿಸಲು ಬಯಸುವ ಸೆಕೆಂಡುಗಳ ಸಂಖ್ಯೆಯನ್ನು ಟೈಪ್ ಮಾಡಿ.
240ಅನ್ನು ನಮೂದಿಸುತ್ತೇನೆ. |
| 07:32 | Record type ಗಾಗಿ, ಕೋಹಾ ಡೀಫಾಲ್ಟ್ ಆಗಿ, Bibliographicಅನ್ನು ತಾನೇ ಆಯ್ಕೆಮಾಡುತ್ತದೆ.
ಹಾಗೆ ಮಾಡಿದಾಗ, ಪ್ರತಿ ದಾಖಲೆಯು 'ಬಿಬ್ಲಿಯೋಗ್ರಾಫಿಕ್' ವಿವರವನ್ನು ಹೊಂದಿರುತ್ತದೆ. |
| 07:44 | ಎಲ್ಲ ವಿವರಗಳನ್ನು ತುಂಬಿದ ನಂತರ, ಪೇಜ್ ನ ಕೆಳಗಿರುವ Save ಬಟನ್ ಮೇಲೆ ಕ್ಲಿಕ್ ಮಾಡಿ. |
| 07:51 | Z39.50/SRU servers administration . ಎಂಬ ಪೇಜ್ ಮತ್ತೆ ತೆರೆದುಕೊಳ್ಳುತ್ತದೆ. |
| 08:00 | ಈ ಪೇಜ್ ನಲ್ಲಿ, ವಿಭಿನ್ನ ಶೀರ್ಷಿಕೆಗಳ ಅಡಿಯಲ್ಲಿ ಸೇರಿಸಲಾದ ವಿವರಗಳನ್ನು ನಾವು ನೋಡಬಹುದು. |
| 08:06 | ಈಗ, ಈ ಲೈಬ್ರರಿಯಿಂದ ದಾಖಲೆಗಳನ್ನು ಹುಡುಕಲು,Koha home ಪೇಜ್ ಗೆ ಹೋಗಿ. ಮತ್ತು Cataloging ಮೇಲೆ ಕ್ಲಿಕ್ ಮಾಡಿ. |
| 08:16 | +New record ಮತ್ತು
New from Z39.50/SRU ಎಂಬ ಎರಡು ಆಯ್ಕೆಗಳೊಂದಿಗೆ, ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ. |
| 08:29 | New from Z39.50/SRU ಗೆ ಹೋಗಿ ಮತ್ತು ಡ್ರಾಪ್-ಡೌನ್ ನಿಂದ BOOKS ಅನ್ನು ಆಯ್ಕೆಮಾಡಿ. |
| 08:40 | Z39.50/SRU search ಎಂಬ ಒಂದು ಹೊಸ ವಿಂಡೋ ತೆರೆದುಕೊಳ್ಳುತ್ತದೆ. |
| 08:48 | ಪೇಜ್ ನ ಬಲತುದಿಯಲ್ಲಿ Search targets ಎಂಬ ಫೀಲ್ಡ್ ಅನ್ನು ಗುರುತಿಸಿ. |
| 08:54 | ಮೊದಲು ಈ ಟ್ಯುಟೋರಿಯಲ್ ನಲ್ಲಿ ನಾವು ಸೇರಿಸಿದ್ದ Z39.50 target ಅನ್ನು, ಎಂದರೆ, LIBRARY OF CONGRESS ಅನ್ನು ಇಲ್ಲಿ ನೀವು ನೋಡಬಹುದು. |
| 09:07 | ಈಗ, LIBRARY OF CONGRESS ನ ಬದಿಯಲ್ಲಿರುವ ಚೆಕ್-ಬಾಕ್ಸ್ ಮೇಲೆ ಕ್ಲಿಕ್ ಮಾಡಿ. |
| 09:14 | ಇದೇ ಪೇಜ್ ನ ಎಡಭಾಗದಲ್ಲಿ, ವಿವಿಧ ಫೀಲ್ಡ್ ಗಳೊಂದಿಗೆ Z39.50/SRU search ಇದೆ. |
| 09:25 | ಈ ಫೀಲ್ಡ್ ಗಳಲ್ಲಿ Title ಅನ್ನು ಗುರುತಿಸಿ ಮತ್ತು Clinical Microbiology ಎಂದು ಟೈಪ್ ಮಾಡಿ. |
| 09:33 | ನಿಮಗೆ ಬೇಕಾದರೆ, ಉಳಿದ ಫೀಲ್ಡ್ ಗಳನ್ನು ನೀವು ತುಂಬಬಹುದು. ನಾನು ಅವುಗಳನ್ನು ಖಾಲಿಯಾಗಿ ಬಿಡುತ್ತೇನೆ. |
| 09:40 | ಈಗ ಪೇಜ್ ನ ಕೆಳಗಿರುವ Search ಬಟನ್ ಮೇಲೆ ಕ್ಲಿಕ್ ಮಾಡಿ. |
| 09:46 | ಆದಾಗ್ಯೂ, ಕ್ಲಿಕ್ ಮಾಡುವ ಮೊದಲು, ನೀವು ಇಂಟರ್ನೆಟ್ ಗೆ ಸಂಪರ್ಕ ಹೊಂದಿದ್ದೀರಿ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ. |
| 09:52 | Results ಎಂಬ ಇನ್ನೊಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ. ಇದು -
Server, Title, Author, Date, Edition, ISBN, LCCN, MARC ಮತ್ತು Card ಎಂಬ ಶೀರ್ಷಿಕೆಗಳೊಂದಿಗೆ ವಿವರಗಳನ್ನು ತೋರಿಸುತ್ತದೆ. |
| 10:11 | ಈಗ, ಪೇಜ್ ನ ಬಲತುದಿಗೆ ಹೋಗಿ ಮತ್ತು Import ಎಂಬ ಫೀಲ್ಡ್ ಅನ್ನು ಗುರುತಿಸಿ. |
| 10:18 | Title: Clinical Microbiology ಫೀಲ್ಡ್ ಗಾಗಿ, ನಾನು Import ಮೇಲೆ ಕ್ಲಿಕ್ ಮಾಡುವೆನು. |
| 10:25 | ನಿಮ್ಮ ಅವಶ್ಯಕತೆಯ ಪ್ರಕಾರ, ಬೇರೆ ಯಾವುದೇ Title ಗಾಗಿ, ನೀವು Import ಮೇಲೆ ಕ್ಲಿಕ್ ಮಾಡಬಹುದು. |
| 10:32 | Import ಅನ್ನು ಕ್ಲಿಕ್ ಮಾಡಿದಾಗ, Add MARC record ಎಂಬ ಒಂದು ಹೊಸ ವಿಂಡೋ ತೆರೆದುಕೊಳ್ಳುತ್ತದೆ. |
| 10:39 | 'ಲೈಬ್ರರಿ ಆಫ್ ಕಾಂಗ್ರೆಸ್' ಡೇಟಾಬೇಸ್ ನಿಂದ ಇಂಪೋರ್ಟ್ ಮಾಡಲಾದ ಕೆಲವು ಟ್ಯಾಗ್ ಗಳನ್ನು ನೀವು ನೋಡುತ್ತೀರಿ. |
| 10:47 | ಆದರೆ ನಿಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ, ಆಯಾ ಟ್ಯಾಗ್ ಗಳಿಗಾಗಿ ಖಾಲಿ ಫೀಲ್ಡ್ ಗಳನ್ನು ನೀವು ತುಂಬಬೇಕು. |
| 10:55 | ಹಿಂದಿನ ಒಂದು ಟ್ಯುಟೋರಿಯಲ್ ನಲ್ಲಿ, ಈ ಪೇಜ್ ನ ವಿವರಗಳನ್ನು ನಾವು ತುಂಬಿದ್ದೇವೆ ಎಂದು ನೆನಪಿಸಿಕೊಳ್ಳಿ. |
| 11:02 | ವೀಡಿಯೊವನ್ನು ನಿಲ್ಲಿಸಿ ಮತ್ತು ವಿವರಗಳನ್ನು ತುಂಬಿ. |
| 11:06 | ವಿವರಗಳನ್ನು ತುಂಬಿದ ನಂತರ, ಪೇಜ್ ನ ಮೇಲ್ತುದಿಯಲ್ಲಿರುವ Save ಬಟನ್ ಮೇಲೆ ಕ್ಲಿಕ್ ಮಾಡಿ. |
| 11:13 | Items for Clinical microbiology by Ross, Philip W. ಎಂಬ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ. |
| 11:22 | ಈಗ, ಪೇಜ್ ನ ಕೆಳಭಾಗದಲ್ಲಿರುವ Add item ಬಟನ್ ಮೇಲೆ ಕ್ಲಿಕ್ ಮಾಡಿ. |
| 11:28 | Items for Clinical microbiology by Ross, Philip W. ಎಂಬ ಪೇಜ್ ತೆರೆದುಕೊಳ್ಳುತ್ತದೆ. |
| 11:36 | ಇದರೊಂದಿಗೆ, ನಾವು Library of Congress ನಿಂದ, Clinical microbiology ಎಂಬ ಪುಸ್ತಕದ ವಿವರಗಳನ್ನು Koha ದಲ್ಲಿ ಯಶಸ್ವಿಯಾಗಿ ಇಂಪೋರ್ಟ್ ಮಾಡಿಕೊಂಡಿದ್ದೇವೆ. |
| 11:48 | ಸಂಕ್ಷಿಪ್ತವಾಗಿ, |
| 11:50 | ಈ ಟ್ಯುಟೋರಿಯಲ್ ನಲ್ಲಿ ನಾವು, Z39.50. ಅನ್ನು ಬಳಸಿ Catalog ನಲ್ಲಿ ರೆಕಾರ್ಡ್ ಗಳನ್ನು ಹೇಗೆ ಸೇರಿಸುವುದೆಂದು ಕಲಿತಿದ್ದೇವೆ. |
| 12:00 | ಅಸೈನ್ಮೆಂಟ್ –
Z39.50 ಅನ್ನು ಬಳಸಿ, ಒಂದು ಸೀರಿಯಲ್ ನ ರೆಕಾರ್ಡ್ ಗಳನ್ನು Catalog ನಲ್ಲಿ ಸೇರಿಸಿ. |
| 12:10 | ಈ ಲಿಂಕ್ ನಲ್ಲಿರುವ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಡೌನ್ಲೋಡ್ ಮಾಡಿ ವೀಕ್ಷಿಸಿ. |
| 12:18 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣ ಪತ್ರಗಳನ್ನು ಕೊಡುತ್ತದೆ.
ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ. |
| 12:28 | ನಿಮ್ಮ ಪ್ರಶ್ನೆಗಳನ್ನು ನಿಮಿಷ ಮತ್ತು ಸೆಕೆಂಡ್ ಗಳೊಂದಿಗೆ ಈ ಫೋರಮ್ ನಲ್ಲಿ ಪೋಸ್ಟ್ ಮಾಡಿ. |
| 12:32 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಧನಸಹಾಯವನ್ನು ಪಡೆದಿದೆ.
ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಲಿಂಕ್ ನಲ್ಲಿ ಲಭ್ಯವಿದೆ. |
| 12:45 | ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನಪಟ್ಟಣ.
ಧನ್ಯವಾದಗಳು. |