Koha-Library-Management-System/C2/OPAC/Kannada
From Script | Spoken-Tutorial
|
|
00:01 | How to use OPAC ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು: Search ಅನ್ನು ಬಳಸಿ, ಒಂದು item ಅನ್ನು ಹೇಗೆ ಹುಡುಕುವುದು |
00:13 | ಮತ್ತು Advance Search ಅನ್ನು ಬಳಸಿ ಒಂದು item ಹೇಗೆ ಹುಡುಕುವುದು ಇವುಗಳನ್ನು ಕಲಿಯುವೆವು. |
00:18 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
Ubuntu Linux OS 16.04 ಮತ್ತು Koha ಆವೃತ್ತಿ 16.05 ಇವುಗಳನ್ನು ಬಳಸುತ್ತಿದ್ದೇನೆ. |
00:32 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು ಲೈಬ್ರರಿ ಸೈನ್ಸ್ ಅನ್ನು ತಿಳಿದಿರಬೇಕು. |
00:38 | ಇದನ್ನು ಅಭ್ಯಾಸ ಮಾಡಲು, ನೀವು Koha ಅನ್ನು ನಿಮ್ಮ ಸಿಸ್ಟಂ ನಲ್ಲಿ ಇನ್ಸ್ಟಾಲ್ ಮಾಡಿರಬೇಕು. |
00:44 | ಮತ್ತು, Koha ದಲ್ಲಿ ನೀವು Admin ಆಕ್ಸೆಸ್ ಅನ್ನು (access) ಸಹ ಹೊಂದಿರಬೇಕು. |
00:49 | ಇಲ್ಲದಿದ್ದಲ್ಲಿ, ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಈ ವೆಬ್ಸೈಟ್ ನಲ್ಲಿ Koha spoken tutorial ಸರಣಿಯನ್ನು ನೋಡಿ. |
00:56 | ಮೊಟ್ಟಮೊದಲು, ನಾನು ಇನ್ನೂ ಎರಡು Microbiologyಯ ಪುಸ್ತಕಗಳನ್ನು ಸೇರಿಸಿದ್ದೇನೆ. |
01:02 | ಇವುಗಳಲ್ಲಿ, ಒಂದು ಪುಸ್ತಕದ ಲೇಖಕರು Powar and Daginawala ಮತ್ತು ಇನ್ನೊಂದು Heritage ಅವರದ್ದು. |
01:12 | ಈಗ, ನನ್ನ ಲೈಬ್ರರಿಯಲ್ಲಿ ಒಟ್ಟು 3 ಪುಸ್ತಕಗಳು ಇರುತ್ತವೆ. |
01:17 | ಮುಂದಕ್ಕೆ ಹೋಗುವ ಮೊದಲು, ಹಿಂದಿನ ಟ್ಯುಟೋರಿಯಲ್ ನಲ್ಲಿ ವಿವರಿಸಿದಂತೆ, ದಯವಿಟ್ಟು ನಿಮ್ಮ ಆಯ್ಕೆಯ ಇನ್ನೂ 2 ಪುಸ್ತಕಗಳನ್ನು ನಿಮ್ಮ ಲೈಬ್ರರಿಗೆ ಸೇರಿಸಿ. |
01:27 | ನಿಮ್ಮ 'ವೆಬ್ ಬ್ರೌಸರ್' ಅನ್ನು ತೆರೆಯಿರಿ ಮತ್ತು ಹೀಗೆ ಟೈಪ್ ಮಾಡಿ: 127.0.1.1/8000 |
01:39 | ಈ 'URL', ಇನ್ಸ್ಟಾಲ್ಲೇಶನ್ ಸಮಯದಲ್ಲಿ ನೀಡಲಾದ 'ಪೋರ್ಟ್ ನಂಬರ್' ಮತ್ತು 'ಡೊಮೇನ್' ಹೆಸರನ್ನು ಆಧರಿಸಿದೆ. |
01:47 | ದಯವಿಟ್ಟು ನೀವು ಮೊದಲು ಹೇಳಿದಂತೆಯೇ ಟೈಪ್ ಮಾಡಿ. ಈಗ Enter ಅನ್ನು ಒತ್ತಿ. |
01:54 | ಹೋಮ್-ಪೇಜ್ Welcome to Spoken Tutorial Library ತೆರೆದುಕೊಳ್ಳುತ್ತದೆ. |
02:00 | ಮೇಲ್ಗಡೆ ಎಡಭಾಗದಲ್ಲಿ, Library catalog ಡ್ರಾಪ್-ಡೌನ್ ನಿಂದ, ನಾವು ಕೆಳಗಿನ ಆಯ್ಕೆಗಳ ಮೂಲಕ ಹುಡುಕಬಹುದು: |
02:09 | Title, Author , Subject, ISBN , Series ಮತ್ತು Call number. |
02:22 | ಇಲ್ಲಿ, ಬಲಭಾಗದ ಫೀಲ್ಡ್ ನಲ್ಲಿ ನಾನು Microbiology ಎಂದು ಟೈಪ್ ಮಾಡುತ್ತೇನೆ ಮತ್ತು ಫೀಲ್ಡ್ ನ ಬಲಭಾಗದಲ್ಲಿ Go ಮೇಲೆ ಕ್ಲಿಕ್ ಮಾಡುತ್ತೇನೆ. |
02:33 | Microbiology ಎಂಬ ಪದವನ್ನು ಹೊಂದಿರುವ ಎಲ್ಲಾ ಲೈಬ್ರರಿ ಐಟಂಗಳನ್ನು ಫಲಿತಾಂಶದಲ್ಲಿ ಪಟ್ಟಿಮಾಡಲಾಗಿದೆ. |
02:40 | ಈ ಹುಡುಕಬೇಕಾದ ಪದದೊಂದಿಗೆ ಪಟ್ಟಿಮಾಡಲಾದ 'ಐಟಂ' ಗಳನ್ನು, ಬಳಕೆದಾರರ ಆಯ್ಕೆಗೆ ಅನುಗುಣವಾಗಿ ಮತ್ತೆ ವಿಂಗಡಿಸಬಹುದು. |
02:47 | ಹಾಗೆ ಮಾಡಲು, ಲಿಸ್ಟ್ ನ ಬಲಭಾಗಕ್ಕೆ ಹೋಗಿ ಮತ್ತು Relevance ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
02:54 | ಡ್ರಾಪ್-ಡೌನ್ ನಿಂದ, ನಾನು Author (A-Z) ಅನ್ನು ಆಯ್ಕೆಮಾಡುತ್ತೇನೆ. |
03:00 | ನಿಮ್ಮ ಅವಶ್ಯಕತೆಗೆ ಅನುಗುಣವಾಗಿ, ಇತರ ಯಾವುದೇ ಸೂಕ್ತ ಆಯ್ಕೆಯನ್ನು ನೀವು ಆರಿಸಿಕೊಳ್ಳಬಹುದು. |
03:06 | Author (A-Z) ಅನ್ನು ಆಯ್ಕೆಮಾಡಿದ ನಂತರ, Authors ನ ಒಂದು ಲಿಸ್ಟ್ ಅನ್ನು ವರ್ಣಮಾಲೆಯ ಕ್ರಮದಲ್ಲಿ ತೋರಿಸಲಾಗುತ್ತದೆ. |
03:14 | ಪಟ್ಟಿ ಮಾಡಿದ ಐಟಂಗಳ ಶೀರ್ಷಿಕೆಯ ಕೆಳಗೆ ನೋಡಿ. ಇಲ್ಲಿ, ಎಲ್ಲಾ ಲೈಬ್ರರಿಗಳಲ್ಲಿ ಆ ನಿರ್ದಿಷ್ಟ ಐಟಂ ಲಭ್ಯವಿದೆಯೇ ಎಂದು ನಾವು ನೋಡಬಹುದು. |
03:26 | ಇಲ್ಲಿ ಉತ್ತಮ ಫಲಿತಾಂಶಗಳಿಗಾಗಿ ನಮ್ಮ ಹುಡುಕಾಟವನ್ನು ನಾವು ಹೇಗೆ ಸುಧಾರಿಸಬಹುದು? |
03:31 | ಎಡತುದಿಯಲ್ಲಿರುವ ‘Refine Your Search' ಎಂಬ ಟ್ಯಾಬ್ ಅನ್ನು ಕ್ಲಿಕ್ ಮಾಡುವ ಮೂಲಕ ನಾವು ಹಾಗೆ ಮಾಡಬಹುದು. |
03:39 | ನಂತರ, Availability, Authors, Item Types ಮತ್ತು Topics ಗಳಂತಹ ವಿಭಾಗಗಳ ಅಡಿಯಲ್ಲಿ, ವಿವಿಧ ಟ್ಯಾಬ್ ಗಳಿಗೆ ಹೋಗಿ. |
03:52 | ಈಗ, ಸಾಮಾನ್ಯವಾಗಿ ಹುಡುಕುವಾಗ, ಒಂದುವೇಳೆ ನಮಗೆ ಬೇಕಾಗಿರುವ ವಸ್ತು ದೊರೆಯದಿದ್ದಲ್ಲಿ ಏನು ಮಾಡಬೇಕೆಂದು ನಾವು ನೋಡೋಣ. |
04:01 | Search Catalog ಪೇಜ್ ನಲ್ಲಿ, Advanced Search ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ. |
04:07 | Search for ಎಂಬ ಶೀರ್ಷಿಕೆಯೊಂದಿಗೆ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ. |
04:13 | ಅನೇಕ ಡ್ರಾಪ್-ಡೌನ್ ಆಯ್ಕೆಗಳನ್ನು ಬಳಸಿ, ಬೇಕಾದ ವಸ್ತುವಿಗಾಗಿ ನಾವು ನಮ್ಮ ಹುಡುಕಾಟವನ್ನು ಪರಿಷ್ಕರಿಸಬಹುದು. |
04:21 | ಎಡಭಾಗದ ಮೊದಲನೆಯ ಡ್ರಾಪ್-ಡೌನ್ ನಿಂದ:
Keyword, Subject , Title , Author , Publisher, Publisher Location, ISBN ಮತ್ತು Barcode ನಂತಹ ಸೂಕ್ತವಾದ ಆಯ್ಕೆಯನ್ನು ಆರಿಸಿಕೊಳ್ಳಿ. |
04:40 | ನಾನು Subject ಅನ್ನು ಆಯ್ಕೆಮಾಡುತ್ತೇನೆ. ಮತ್ತು, ಬಲಭಾಗದ ಫೀಲ್ಡ್ ನಲ್ಲಿ, ಎಡಭಾಗದ ಡ್ರಾಪ್-ಡೌನ್ ನಿಂದ ಆರಿಸಿಕೊಂಡ ಆಯ್ಕೆಯ ವಿವರಗಳನ್ನು ಟೈಪ್ ಮಾಡುತ್ತೇನೆ. |
04:51 | ಇಲ್ಲಿ Microbiology ಎಂದು ಟೈಪ್ ಮಾಡುವೆನು. |
04:55 | ಎರಡನೆಯ ಡ್ರಾಪ್-ಡೌನ್ ಆಯ್ಕೆಯನ್ನು ಬಳಸಿ, Author ಅನ್ನು Patel ಎಂದು ಆಯ್ಕೆಮಾಡುವೆನು. |
05:03 | ಮೂರನೆಯ ಡ್ರಾಪ್-ಡೌನ್ ಆಯ್ಕೆಯನ್ನು ಬಳಸಿ, Publisher ಅನ್ನು Pearson ಎಂದು ಆಯ್ಕೆಮಾಡುವೆನು. |
05:11 | ಇದೇ ಪೇಜ್ ನಲ್ಲಿ, Item Type ವಿಭಾಗದ ಅಡಿಯಲ್ಲಿರುವ ಇತರ ಆಯ್ಕೆಗಳನ್ನು ಗಮನಿಸಿ - |
05:18 | Book, Reference ಮತ್ತು Serial. |
05:23 | ನಂತರ- Publication date range, Language ಹಾಗೂ Sorting ಗಳಂತಹ ಆಯ್ಕೆಗಳಿವೆ. |
05:34 | Item Type ವಿಭಾಗದ ಅಡಿಯಲ್ಲಿ, Books ಗಾಗಿ ಇರುವ ರೇಡಿಯೊ ಬಟನ್ ಅನ್ನು ಕ್ಲಿಕ್ ಮಾಡುವೆನು. |
05:41 | Publication date range ಅನ್ನು ನಾನು ಖಾಲಿ ಬಿಡುತ್ತೇನೆ. |
05:46 | Language ಗಾಗಿ, ಡ್ರಾಪ್-ಡೌನ್ ನಿಂದ English ಅನ್ನು ಆಯ್ಕೆಮಾಡಿ. |
05:52 | Sorting ವಿಭಾಗದ ಅಡಿಯಲ್ಲಿ, Sort by: ಗಾಗಿ Author (A-Z) ಅನ್ನು ಆಯ್ಕೆಮಾಡುವೆನು. |
06:00 | ಎಲ್ಲಾ ವಿವರಗಳನ್ನು ತುಂಬಿದ ನಂತರ, ಪೇಜ್ ನ ಕೆಳಗಿರುವ Search ಮೇಲೆ ಕ್ಲಿಕ್ ಮಾಡಿ. |
06:07 | ಈ ಪೇಜ್,
Subject ಅನ್ನು Microbiology ಎಂದು, |
06:16 | Author ಅನ್ನು Patel Arvind H. ಎಂದು, |
06:20 | Publisher ಅನ್ನು Pearson ಎಂದು ಇರುವ ಎಲ್ಲಾ ಐಟಂಗಳ ಲಿಸ್ಟ್ ಅನ್ನು ಹೊಂದಿರುತ್ತದೆ. |
06:23 | ಈಗ, ನಾವು Advanced Search ಪೇಜ್ ಗೆ ಹಿಂತಿರುಗಿ, Search for ವಿಭಾಗದ ಅಡಿಯಲ್ಲಿರುವ More Options ಬಟನ್ ಮೇಲೆ ಕ್ಲಿಕ್ ಮಾಡೋಣ. |
06:36 | ಹೀಗೆ ಮಾಡಿದಾಗ, Advanced search ಪೇಜ್ ನ ವಿನ್ಯಾಸವು ಬದಲಾಗುತ್ತದೆ. |
06:42 | ಮತ್ತೊಮ್ಮೆ, ಮೊದಲನೆಯ ಡ್ರಾಪ್-ಡೌನ್ ನಲ್ಲಿ, ನಾನು Subject ಅನ್ನು ಆಯ್ಕೆಮಾಡುವೆನು. |
06:48 | ನಂತರ Microbiology ಎಂದು ಟೈಪ್ ಮಾಡುತ್ತೇನೆ. |
06:52 | ಈಗ, ಆಯ್ಕೆಗಳ ಎರಡನೇ ಸಾಲಿಗೆ ಬನ್ನಿ. |
06:56 | ಮೊದಲನೆಯ ಡ್ರಾಪ್-ಡೌನ್ ನಲ್ಲಿ, ನಾನು “and” ಎಂಬ ಆಯ್ಕೆಯನ್ನು ಹಾಗೇ ಇಡುತ್ತೇನೆ. |
07:03 | ಮತ್ತು, ಬಲಗಡೆಯಿರುವ ಡ್ರಾಪ್-ಡೌನ್ ನಲ್ಲಿ, “Author” ಅನ್ನು ಆಯ್ಕೆಮಾಡುವೆನು. |
07:08 | ನಂತರ, ಇದರ ಬಲಗಡೆಗೆ, “Patel” ಎಂದು ಟೈಪ್ ಮಾಡುತ್ತೇನೆ. |
07:13 | ನಂತರ, ಆಯ್ಕೆಗಳ ಮೂರನೇ ಸಾಲಿಗೆ ಬನ್ನಿ.
ಮೊದಲನೆಯ ಡ್ರಾಪ್-ಡೌನ್ ನಲ್ಲಿ, “or” ಎಂಬ ಆಯ್ಕೆಯನ್ನು ಆರಿಸಿಕೊಳ್ಳುವೆನು. |
07:22 | ಮತ್ತು, ಬಲಗಡೆಯಿರುವ ಡ್ರಾಪ್-ಡೌನ್ ನಲ್ಲಿ, ನಾನು “Author” ಅನ್ನು ಆಯ್ಕೆಮಾಡುವೆನು. |
07:28 | ನಂತರ, ಇದರ ಬಲಗಡೆಗೆ, “Heritage” ಎಂದು ಟೈಪ್ ಮಾಡುತ್ತೇನೆ. |
07:33 | ಅಗತ್ಯವಿದ್ದರೆ, Item type ವಿಭಾಗದ ಅಡಿಯಲ್ಲಿಯ search ಆಯ್ಕೆಗಳನ್ನು ಅಥವಾ ಉಳಿದ ಆಯ್ಕೆಗಳನ್ನು ಬಳಸಿಕೊಂಡು ನೀವು ಹುಡುಕಾಟವನ್ನು ಮತ್ತೆ ಮುಂದುವರೆಸಬಹುದು. |
07:45 | ಎಲ್ಲಾ ವಿವರಗಳನ್ನು ತುಂಬಿದ ನಂತರ, ವಿಭಾಗದ ಕೆಳಗೆ ಇರುವ Search ಬಟನ್ ಮೇಲೆ ಕ್ಲಿಕ್ ಮಾಡಿ. |
07:52 | OPAC ಅನ್ನು ಬಳಸಿ, ಲೈಬ್ರರಿಯಲ್ಲಿರುವ ಐಟಂ ಗಳಿಗಾಗಿ ನಾವು ಹೀಗೆ ಹುಡುಕಬಹುದು. |
07:58 | ಈ ಟ್ಯುಟೋರಿಯಲ್ ನಲ್ಲಿ, ಬಳಕೆದಾರನು ಲೈಬ್ರರಿ ಐಟಂಅನ್ನು ಸುಲಭವಾಗಿ ಹೇಗೆ ಹುಡುಕಬಹುದು ಎಂಬುದನ್ನು ನೀವು ಈಗ ಕಲಿತಿದ್ದೀರಿ. |
08:05 | ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
08:08 | ಸಂಕ್ಷಿಪ್ತವಾಗಿ -
ಈ ಟ್ಯುಟೋರಿಯಲ್ ನಲ್ಲಿ ನಾವು, Search ಅನ್ನು ಬಳಸಿ |
08:17 | ಹಾಗೂ Advance Search ಅನ್ನು ಬಳಸಿ ಒಂದು ಐಟಂಅನ್ನು ಹುಡುಕುವ ಬಗ್ಗೆ ಕಲಿತಿದ್ದೇವೆ. |
08:22 | ಅಸೈನ್ಮೆಂಟ್ ಗಾಗಿ -
Biology ಯನ್ನು ಕೀವರ್ಡ್ ಎಂದು ಬಳಸಿ, OPAC ನಲ್ಲಿ ಜರ್ನಲ್ ಗಳ ಲಿಸ್ಟ್ ಗಾಗಿ ಹುಡುಕಿ. |
08:30 | ಈ ಲಿಂಕ್ ನಲ್ಲಿರುವ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಡೌನ್ಲೋಡ್ ಮಾಡಿ ವೀಕ್ಷಿಸಿ. |
08:37 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣ ಪತ್ರಗಳನ್ನು ಕೊಡುತ್ತದೆ.
ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ. |
08:47 | ನಿಮ್ಮ ಪ್ರಶ್ನೆಗಳನ್ನು ನಿಮಿಷ ಮತ್ತು ಸೆಕೆಂಡ್ ಗಳೊಂದಿಗೆ ಈ ಫೋರಮ್ ನಲ್ಲಿ ಪೋಸ್ಟ್ ಮಾಡಿ. |
08:51 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಧನಸಹಾಯವನ್ನು ಪಡೆದಿದೆ.
ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಲಿಂಕ್ ನಲ್ಲಿ ಲಭ್ಯವಿದೆ. |
09:03 | ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನಪಟ್ಟಣ.
ಧನ್ಯವಾದಗಳು. |