Koha-Library-Management-System/C2/Access-to-Library-Account-on-Web/Kannada
From Script | Spoken-Tutorial
|
|
00:01 | Access your Library Account on the Web ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ, ನಿಮ್ಮ Library ಅಕೌಂಟ್ ಅನ್ನು patron ಎಂದು, ವೆಬ್ ಮೇಲೆ ಆಕ್ಸೆಸ್ ಹೇಗೆ ಮಾಡುವುದು ಮತ್ತು |
00:15 | ಅದರ ಪ್ರಯೋಜನಗಳ ಬಗ್ಗೆ ನಾವು ಕಲಿಯುವೆವು. |
00:18 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು Firefox ವೆಬ್-ಬ್ರೌಸರ್ ಅನ್ನು ಬಳಸುತ್ತಿದ್ದೇನೆ. |
00:24 | ನಿಮ್ಮ 'ಸಿಸ್ಟಮ್ ಅಡ್ಮಿನಿಸ್ಟ್ರೇಟರ್', ಸರ್ವರ್ ನಲ್ಲಿ ಕೋಹಾ ಲೈಬ್ರರಿ ಅನ್ನು ಇನ್ಸ್ಟಾಲ್ ಮಾಡಿದ್ದಾರೆ ಮತ್ತು |
00:32 | SuperLibrarian ಅಥವಾ Library Staff, ಕೆಲವು Item types ಅನ್ನು ಈ ಕೋಹಾ ಲೈಬ್ರರಿಯಲ್ಲಿ ಕ್ರಿಯೇಟ್ ಮಾಡಿದ್ದಾರೆ ಎಂದು ಈ ಟ್ಯುಟೋರಿಯಲ್ ಭಾವಿಸುತ್ತದೆ. |
00:40 | ಈ ಕೋಹಾ ಲೈಬ್ರರಿ ಯ URL ನಿಮಗೆ ಗೊತ್ತಿದೆ |
00:46 | ಮತ್ತು ನೀವು ಈ ಲೈಬ್ರರಿಯ ಪೇಟ್ರನ್ ಆಗಿದ್ದೀರಿ ಎಂದು ಈ ಟ್ಯುಟೋರಿಯಲ್ ಭಾವಿಸುತ್ತದೆ. |
00:50 | ಇಲ್ಲದಿದ್ದಲ್ಲಿ, ದಯವಿಟ್ಟು ನಿಮ್ಮ ಲೈಬ್ರೇರಿಯನ್ (Librarian) ಅಥವಾ 'ಸಿಸ್ಟಮ್ ಅಡ್ಮಿನಿಸ್ಟ್ರೇಟರ್' ಅನ್ನು (system administrator) ಅದಕ್ಕಾಗಿ ಸಂಪರ್ಕಿಸಿ. |
00:57 | ಈಗ ಆರಂಭಿಸೋಣ. ನಿಮ್ಮ 'ವೆಬ್ ಬ್ರೌಸರ್' ಅನ್ನು ತೆರೆಯಿರಿ ಮತ್ತು ಹೀಗೆ ಟೈಪ್ ಮಾಡಿ: http://127.0.1.1/8000 |
01:12 | ಈ URL, ಇನ್ಸ್ಟಾಲ್ಲೇಶನ್ ಸಮಯದಲ್ಲಿ sys-ad ನಿಂದ ಕೊಡಲಾದ port ನಂಬರ್ ಹಾಗೂ domain ಹೆಸರನ್ನು ಆಧರಿಸಿದೆ. |
01:21 | ಈಗ Enter ಅನ್ನು ಒತ್ತಿ. |
01:24 | Welcome to Spoken Tutorial Library ಎಂಬ ಶೀರ್ಷಿಕೆಯೊಂದಿಗೆ, ಒಂದು ಹೊಸ OPAC ಪೇಜ್ ತೆರೆದುಕೊಳ್ಳುತ್ತದೆ. |
01:32 | OPAC ಪೇಜ್ ನ ಮೇಲಿನ ಬಲಮೂಲೆಯಲ್ಲಿ, Login to your account ಮೇಲೆ ಕ್ಲಿಕ್ ಮಾಡಿ. |
01:40 | ಈ ಲಾಗ್-ಇನ್, ಲೈಬ್ರರಿಯ patrons ಗಾಗಿ ಇರುತ್ತದೆ. |
01:44 | ಇಲ್ಲಿ ತೆರೆದುಕೊಳ್ಳುವ ಹೊಸ ವಿಂಡೋದಲ್ಲಿ, ನಮ್ಮ patron Login: ಮತ್ತು Password ಗಳನ್ನು ನಾವು ನಮೂದಿಸಬೇಕು. |
01:52 | ನೆನಪಿಸಿಕೊಳ್ಳಿ- ಹಿಂದಿನ ಒಂದು ಟ್ಯುಟೋರಿಯಲ್ ನಲ್ಲಿ, ನಾವು Ms. Reena Shah ಎಂಬ ಒಂದು Patron ಅನ್ನು ಕ್ರಿಯೇಟ್ ಮಾಡಿದ್ದೆವು. |
02:00 | ನಾನು Reena ಎಂದು ಲಾಗ್-ಇನ್ ಮಾಡಿ, ಇಲ್ಲಿ ಅವಳ ಪಾಸ್ವರ್ಡ್ ಅನ್ನು ಟೈಪ್ ಮಾಡುವೆನು. |
02:05 | ನೀವು ಬೇರೊಂದು 'ಪೇಟ್ರನ್' ಅನ್ನು ಕ್ರಿಯೇಟ್ ಮಾಡಿದ್ದರೆ, ಆ ಲಾಗ್-ಇನ್ ವಿವರಗಳನ್ನು ಇಲ್ಲಿ ಬಳಸಿ. |
02:11 | Hello, Reena Shah ಎಂಬ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ. |
02:15 | ಈ ಪೇಜ್, 'ಪೇಟ್ರನ್' ನ ಸಾರಾಂಶದ ವಿವರಗಳನ್ನು ಪ್ರತಿಫಲಿಸುತ್ತದೆ. |
02:20 | ಈ ಪೇಜ್: |
02:25 | Title- Exploring Biology, |
02:28 | Sharma, Sanjay, |
02:30 | Due- 10/08/2018, |
02:36 | Barcode- 00002, |
02:41 | Fines- No ಗಳಂತಹ Checked out (1) items ಗಾಗಿ ವಿವರಗಳನ್ನು ತೋರಿಸುತ್ತದೆ. |
02:44 | ನೆನಪಿಡಿ, ಹಿಂದಿನ ಒಂದು ಟ್ಯುಟೋರಿಯಲ್ ನ ಅಸೈನ್ಮೆಂಟ್ ನಲ್ಲಿ, ಈ ನಮೂದನ್ನು ಮಾಡಲಾಗಿತ್ತು. |
02:50 | ಪೇಜ್ ನ ಎಡಭಾಗದಲ್ಲಿರುವ ಇತರ ಟ್ಯಾಬ್ ಗಳನ್ನು ಗಮನಿಸಿ. |
02:55 | your summary, your fines, |
02:59 | your personal details, your tags, |
03:04 | change your password, your search history, |
03:08 | your reading history, your privacy, |
03:12 | your purchase suggestions, your messaging ಮತ್ತು your lists. |
03:20 | ಈ ಟ್ಯಾಬ್ ಗಳನ್ನು ಕ್ಲಿಕ್ ಮಾಡಿದಾಗ, Patron ನ ವಿವರಗಳು ಗೋಚರಿಸುತ್ತವೆ.
ಈ ಟ್ಯಾಬ್ ಗಳ ಬಗ್ಗೆ, ಈ ಟ್ಯುಟೋರಿಯಲ್ ನಲ್ಲಿ ನಂತರ ನಾನು ವಿವರಿಸುತ್ತೇನೆ. |
03:30 | OPAC ಇಂಟರ್ಫೇಸ್ ನ ಮೇಲಿನ ಎಡಮೂಲೆಯಲ್ಲಿ, Cart ಮತ್ತು Lists ಎಂಬ ಎರಡು ಟ್ಯಾಬ್ ಗಳಿರುವುದನ್ನು ಗಮನಿಸಿ. |
03:39 | ನೀವು ಯಾವುದೇ ಲೈಬ್ರರಿ ಐಟಂ ಅನ್ನು ಕಾರ್ಟ್ ಗೆ ಸೇರಿಸಲು ಬಯಸಿದರೆ, ಆಗ ಇಲ್ಲಿ ಹೇಳಿದಂತೆ ಮಾಡಿ- |
03:45 | ಈ ಸರಣಿಯಲ್ಲಿ ಮೊದಲು ವಿವರಿಸಿದಂತೆ, OPAC ನಲ್ಲಿ ಆ ಐಟಂಅನ್ನು ಹುಡುಕಿ. |
03:51 | ನಾನು Microbiology ಪುಸ್ತಕವನ್ನು ಹುಡುಕುತ್ತೇನೆ. ನಿಮ್ಮ ಲೈಬ್ರರಿಯಿಂದ, ನಿಮಗೆ ಬೇಕಾದ ಐಟಂ ಅನ್ನು ನೀವು ಹುಡುಕಬಹುದು. |
04:00 | ಆ ಕೀವರ್ಡ್ ನ ಹುಡುಕಾಟದ ಫಲಿತಾಂಶಗಳು ಕಾಣಿಸಿಕೊಳ್ಳುತ್ತವೆ. |
04:04 | ಪ್ರತಿಯೊಂದು ಶೀರ್ಷಿಕೆಯ ಕೆಳಗೆ, ಈ ಕೆಳಗಿನ ಆಯ್ಕೆಗಳು ಕಾಣಿಸಿಕೊಳ್ಳುತ್ತವೆ –
Place Hold, Save to Lists , Add to cart. |
04:15 | ಗಮನಿಸಿ: ಲೈಬ್ರರಿ ಯಿಂದ ಕೊಡಬಹುದಾದ (issue) ಐಟಂಗಳಿಗಾಗಿ ಮಾತ್ರ Place Hold ಎಂಬ ಆಯ್ಕೆಯು ಕಾಣಿಸಿಕೊಳ್ಳುತ್ತದೆ. |
04:23 | ಯಾವುದೇ ಒಂದು ನಿರ್ದಿಷ್ಟ ಐಟಂ ಅನ್ನು cart ಗೆ ಸೇರಿಸಲು, Add to cart ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
04:30 | ಒಂದುವೇಳೆ, ಅನೇಕ ಐಟಂಗಳನ್ನು ಕಾರ್ಟ್ ಗೆ ಸೇರಿಸಬೇಕಾದರೆ, ಕೆಳಗೆ ಹೇಳಿದಂತೆ ಮಾಡಿ. |
04:37 | items ನ ಲಿಸ್ಟ್ ನ ಮೇಲಿರುವ Select titles to: ಎಂಬ ಟ್ಯಾಗ್ ಅನ್ನು ಗುರುತಿಸಿ. |
04:45 | ಕಾರ್ಟ್ ಗೆ ಅನೇಕ ಐಟಂಗಳನ್ನು ಸೇರಿಸಲು, ಆಯಾ ಐಟಂಗಳ ಎಡಭಾಗದಲ್ಲಿರುವ ರೇಡಿಯೋ ಬಟನ್ ಮೇಲೆ ಕ್ಲಿಕ್ ಮಾಡಿ. |
04:53 | ಈಗ, ಮೇಲೆ ಹೋಗಿ. Select titles to ಟ್ಯಾಗ್, With selected titles ಎಂದು ಕಾಣಿಸಿಕೊಳ್ಳುವುದು. |
05:04 | ಡ್ರಾಪ್-ಡೌನ್ ನಿಂದ, Cart ಮೇಲೆ ಕ್ಲಿಕ್ ಮಾಡಿ. ಆಯ್ಕೆಮಾಡಲಾದ ಎಲ್ಲಾ ಐಟಂ ಗಳು cart ಗೆ ಹೋಗುತ್ತವೆ. |
05:12 | ನಂತರ, ಇಂಟರ್ಫೇಸ್ ನ ಮೇಲಿನ ಎಡಮೂಲೆಗೆ ಹೋಗಿ ಮತ್ತು Cart ಎಂಬ ಟ್ಯಾಬ್ ಅನ್ನು ಗುರುತಿಸಿ. |
05:20 | ಡ್ರಾಪ್-ಡೌನ್ ನಿಂದ, Items in your cart:2 ಮೇಲೆ ಕ್ಲಿಕ್ ಮಾಡಿ. |
05:25 | ದಯವಿಟ್ಟು ಗಮನಿಸಿ: ಸಂಖ್ಯೆ 2, ಆಯ್ಕೆಮಾಡಿದ ಐಟಂಗಳ ಒಟ್ಟು ಸಂಖ್ಯೆಯನ್ನು ಪ್ರತಿನಿಧಿಸುತ್ತದೆ. |
05:31 | ನಾನು 2 ಐಟಂಗಳನ್ನು ಆಯ್ಕೆಮಾಡಿದ್ದರಿಂದ, ಇಲ್ಲಿರುವ ಸಂಖ್ಯೆ 2 ಆಗಿದೆ. |
05:36 | ನೀವು ಐಟಂಗಳ ಬೇರೆ ಸಂಖ್ಯೆಯನ್ನು ಆಯ್ಕೆ ಮಾಡಿದರೆ, ಆಗ ಆ ಸಂಖ್ಯೆಯು ನಿಮ್ಮ ಇಂಟರ್ಫೇಸ್ ನಲ್ಲಿ ಕಾಣಿಸುವುದು. |
05:44 | ಕ್ಲಿಕ್ ಮಾಡಿದಾಗ, ಕೆಳಗಿನ ಆಯ್ಕೆಗಳೊಂದಿಗೆ Your cart ಎಂಬ ಒಂದು ಹೊಸ ವಿಂಡೋ ತೆರೆದುಕೊಳ್ಳುತ್ತದೆ:
More details , Send, |
05:54 | Download , Print, |
05:58 | Empty and close. |
06:01 | ಇವುಗಳನ್ನು ನೀವು ಸ್ವತಃ ಕಲಿತುಕೊಳ್ಳಿ. |
06:04 | ನಂತರ, ವಿಂಡೋ ಅನ್ನು ಮುಚ್ಚಿ. |
06:08 | ಇದನ್ನು ಮಾಡಲು, ಪೇಜ್ ನಲ್ಲಿ ಮೇಲಿನ ಎಡಮೂಲೆಗೆ ಹೋಗಿ ಮತ್ತು ಕ್ರಾಸ್ ಬಟನ್ ಮೇಲೆ ಕ್ಲಿಕ್ ಮಾಡಿ. |
06:15 | ಈಗ ನಾವು OPAC ಇಂಟರ್ಫೇಸ್ ನಲ್ಲಿದ್ದೇವೆ. |
06:19 | ಒಂದು ವೇಳೆ, ಒಂದು ಐಟಂ ಅನ್ನು ಲಿಸ್ಟ್ ಗಳಿಗೆ ಸೇರಿಸಬೇಕಾಗಿದ್ದರೆ, ಆಗ ಐಟಂನ ಕೆಳಗಿರುವ Save to Lists ಮೇಲೆ ಕ್ಲಿಕ್ ಮಾಡಿ. |
06:31 | ಕ್ಲಿಕ್ ಮಾಡಿದಾಗ, ಆ ನಿರ್ದಿಷ್ಟ ಐಟಂನ ಟೈಟಲ್ ನೊಂದಿಗೆ Add to a list: ಎಂಬ ಹೊಸ ವಿಂಡೋ ತೆರೆದುಕೊಳ್ಳುತ್ತದೆ. |
06:39 | ಇಲ್ಲಿ ಇದು, Industrial Microbiology, Patel, Arvind H. ಎಂದಿದೆ. |
06:45 | Add to a new list: ವಿಭಾಗದ ಕೆಳಗೆ List name: ನ ಫೀಲ್ಡ್ ನಲ್ಲಿ, ಲಿಸ್ಟ್ ನ ಹೆಸರನ್ನು ಟೈಪ್ ಮಾಡಿ. |
06:55 | ಇದು ಕೇವಲ ನಿಮ್ಮ ರೆಫರೆನ್ಸ್ ಗಾಗಿ ಮಾತ್ರ ಆಗಿದೆ. |
06:58 | ನಾನು ಇಲ್ಲಿ Microbiology ಎಂದು ಟೈಪ್ ಮಾಡುವೆನು. |
07:02 | ನೀವು, ನಿಮ್ಮ ಅವಶ್ಯಕತೆಗೆ ಅನುಸಾರವಾಗಿ ಹೆಸರನ್ನು ಕೊಡಬಹುದು. |
07:07 | ಆಮೇಲೆ, Category: ವಿಭಾಗದ ಅಡಿಯಲ್ಲಿ, ಈಗಾಗಲೇ ಕೋಹಾ ದಿಂದ ಆಯ್ಕೆ ಆಗಿರದಿದ್ದರೆ, ಡ್ರಾಪ್-ಡೌನ್ ನಿಂದ Private ಮೇಲೆ ಕ್ಲಿಕ್ ಮಾಡಿ. |
07:19 | ಲಿಸ್ಟ್ ನಿಮಗೆ ಮಾತ್ರ ಗೋಚರಿಸುತ್ತದೆ ಎಂದು ಇದು ಖಚಿತಪಡಿಸುತ್ತದೆ. |
07:24 | ಆಮೇಲೆ, ಪೇಜ್ ನ ಕೆಳಗಿರುವ Save ಮೇಲೆ ಕ್ಲಿಕ್ ಮಾಡಿ. |
07:30 | ನಾವು ಮತ್ತೆ OPAC ಇಂಟರ್ಫೇಸ್ ನಲ್ಲಿದ್ದೇವೆ. |
07:34 | ಈಗ, OPAC ಇಂಟರ್ಫೇಸ್ ನ ಮೇಲಿನ ಎಡಮೂಲೆಯಲ್ಲಿರುವ Lists ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
07:42 | ಡ್ರಾಪ್-ಡೌನ್ ನಿಂದ, ನಾನು Microbiology ಮೇಲೆ ಕ್ಲಿಕ್ ಮಾಡುವೆನು. |
07:46 | ನಿಮ್ಮ ಲಿಸ್ಟ್ ಗೆ ನೀವು ಬೇರೆ ಹೆಸರನ್ನು ಕೊಟ್ಟಿದ್ದರೆ, ಆ ಹೆಸರಿನ ಮೇಲೆ ಕ್ಲಿಕ್ ಮಾಡಿ. |
07:53 | ಸೇವ್ ಮಾಡಲಾದ ಐಟಂಗಳು, ಈಗ ಲಿಸ್ಟ್ ನಲ್ಲಿ ಕಾಣಿಸಿಕೊಳ್ಳುತ್ತವೆ. |
07:58 | ಈಗ ನಾವು ಎಡಭಾಗದಲ್ಲಿರುವ ಟ್ಯಾಬ್ ಗಳನ್ನು ನೋಡೋಣ. |
08:03 | ಮೊದಲು, ನಾನು your personal details ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡುವೆನು. |
08:09 | Ms. Reena Shah ನ ವಿವರಗಳೊಂದಿಗೆ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ. |
08:16 | ಆಮೇಲೆ, ಅದೇ ಪೇಜ್ ನ ಎಡಭಾಗದಲ್ಲಿ your reading history ಮೇಲೆ ಕ್ಲಿಕ್ ಮಾಡಿ. |
08:24 | ಈ ಕೆಳಗಿನ ವಿವರಗಳೊಂದಿಗೆ Checkout history ಎಂಬ ಒಂದು ಪೇಜ್ ತೆರೆದುಕೊಳ್ಳುತ್ತದೆ:
Title, Item type, |
08:33 | Call no ಮತ್ತು Date. |
08:38 | ಈಗ, ಅದೇ ಪೇಜ್ ನ ಎಡಭಾಗದಲ್ಲಿ your purchase suggestions ಮೇಲೆ ಕ್ಲಿಕ್ ಮಾಡಿ. |
08:46 | Your purchase suggestions ಎಂಬ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ. |
08:51 | ಈಗ New purchase suggestion ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
08:57 | Enter a new purchase suggestion ಎಂಬ ಶೀರ್ಷಿಕೆಯೊಂದಿಗೆ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ. |
09:04 | ಇಲ್ಲಿ, ಕೆಲವು ವಿವರಗಳನ್ನು ತುಂಬಲು ನಮಗೆ ಸೂಚಿಸಲಾಗುತ್ತದೆ: |
09:09 | Title, Author, Copyright date, |
09:15 | Standard number (ISBN, ISSN or other), |
09:21 | Publisher, Collection title, |
09:26 | Publication place, Item type, |
09:31 | Reason for suggestion: ಮತ್ತು Notes. |
09:35 | ಗಮನಿಸಿ: ಕೆಂಪು ಬಣ್ಣದಲ್ಲಿ ಗುರುತಿಸಲಾದ Title ಫೀಲ್ಡ್ ಅನ್ನು ತುಂಬುವುದು ಕಡ್ಡಾಯವಾಗಿದೆ. |
09:41 | ನಾನು Title ಅನ್ನು, Genetics ಎಂದು ನಮೂದಿಸುವೆನು. |
09:45 | ನಂತರ, Standard number (ISBN, ISSN or other) number ಅನ್ನು - 1234567891 ಎಂದು ನಮೂದಿಸುವೆನು. |
10:00 | ಪೇಜ್ ನ ಕೆಳಗಿರುವ Submit your suggestion ಮೇಲೆ ಕ್ಲಿಕ್ ಮಾಡಿ. |
10:05 | ಮತ್ತೊಮ್ಮೆ Your purchase suggestions ಎಂಬ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ. |
10:11 | ಇದರೊಂದಿಗೆ, ಪೇಟ್ರನ್ ನು ಕೋಹಾ ಲೈಬ್ರರಿಯಲ್ಲಿ ಒಂದು ಪುಸ್ತಕವನ್ನು ಹುಡುಕಲು, OPAC ಅನ್ನು ಹೇಗೆ ಬಳಸಬಹುದೆಂದು ನಾವು ಕಲಿತಿದ್ದೇವೆ. |
10:20 | ಕೊನೆಯದಾಗಿ, ಪೇಜ್ ನಲ್ಲಿ ಮೇಲಿನ ಬಲಮೂಲೆಯಲ್ಲಿರುವ Logout ಮೇಲೆ ಕ್ಲಿಕ್ ಮಾಡುವ ಮೂಲಕ, OPAC ಅಕೌಂಟ್ ನಿಂದ ಲಾಗ್ಔಟ್ ಮಾಡಿ. |
10:29 | ಇಲ್ಲಿಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
10:33 | ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ, ನಿಮ್ಮ Library Account ಅನ್ನು patron ಎಂದು ವೆಬ್ ಮೇಲೆ ಹೇಗೆ ಆಕ್ಸೆಸ್ ಮಾಡುವುದು ಮತ್ತು ಅದರ ಪ್ರಯೋಜನಗಳ ಬಗ್ಗೆ ನಾವು ಕಲಿತಿದ್ದೇವೆ. |
10:48 | ಅಸೈನ್ಮೆಂಟ್ - ಇನ್ನೊಂದು ಪುಸ್ತಕಕ್ಕಾಗಿ, purchase suggestion ಅನ್ನು ಮಾಡಿ. |
10:54 | ಈ ಲಿಂಕ್ ನಲ್ಲಿರುವ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಡೌನ್ಲೋಡ್ ಮಾಡಿ ವೀಕ್ಷಿಸಿ. |
11:02 | ಸ್ಪೋಕನ್-ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣ ಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ. |
11:12 | ನಿಮ್ಮ ಪ್ರಶ್ನೆಗಳನ್ನು ನಿಮಿಷ ಮತ್ತು ಸೆಕೆಂಡ್ ಗಳೊಂದಿಗೆ ಈ ಫೋರಮ್ ನಲ್ಲಿ ಪೋಸ್ಟ್ ಮಾಡಿ. |
11:16 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಧನಸಹಾಯವನ್ನು ಪಡೆದಿದೆ. ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಲಿಂಕ್ ನಲ್ಲಿ ಲಭ್ಯವಿದೆ. |
11:28 | ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನಪಟ್ಟಣ.
ಧನ್ಯವಾದಗಳು. |