KiCad/C2/Electric-rule-checking-and-Netlist-generation/Kannada

From Script | Spoken-Tutorial
Jump to: navigation, search
Time Narration
00.01 ಪ್ರಿಯ ಮಿತ್ರರೇ,
00.03 ಕೀಕ್ಯಾಡ್ ನಲ್ಲಿ ಎಲೆಕ್ಟ್ರಿಕ್ ರೂಲ್ ಆಂಡ್ ನೆಟ್-ಲಿಸ್ಟ್ ಜನರೇಷನ್ ಎಂಬ ಈ ಸ್ಪೋಕನ್ ಟ್ಯುಟೋರಿಯಲ್-ಗೆ ಸ್ವಾಗತ.
00.09 ಈ ಟ್ಯುಟೋರಿಯಲ್-ನಲ್ಲಿ ನಾವು,
00.12 ಕಂಪೋನೆಂಟಿನ ವಾಲ್ಯೂಸ್-ಗಳನ್ನು ಅಸೈನ್ ಮಾಡುವುದು,
00.14 ಎಲೆಕ್ಟ್ರಿಕ್ ರೂಲ್ ಚೆಕ್ ಮಾಡುವುದು,
00.17 ತಯಾರಾಗಿರುವ ಸ್ಕಿಮಾಟಿಕ್-ನ ನೆಟ್-ಲಿಸ್ಟ್ ಜೆನೆರೇಟ್ ಮಾಡುವುದು ಇತ್ಯಾದಿಗಳನ್ನು ತಿಳಿಯಲಿದ್ದೇವೆ.
00.21 ನಾವು ನಮ್ಮ ಆಪರೇಟಿಂಗ್ ಸಿಸ್ಟಂ ಆಗಿ ಉಬುಂಟುವಿನ 12.04 ನೇ ಆವೃತ್ತಿಯನ್ನು ಹಾಗೂ,
00.25 ಕೀಕ್ಯಾಡ್ ನ 2011 ಹೈಫನ್ 05 ಹೈಫನ್ 25 ನೇ ಆವೃತ್ತಿಯನ್ನು ಈ ಟ್ಯುಟೋರಿಯಲ್ ಗಾಗಿ ಉಪಯೋಗಿಸುತ್ತಿದ್ದೇವೆ.
00.33 ಇಲ್ಲಿರುವ ಟ್ಯುಟೋರಿಯಲ್-ಗೆ ಎಲೆಕ್ಟ್ರೋನಿಕ್ ಸರ್ಕ್ಯೂಟ್-ನ ಸಾಮಾನ್ಯ ಜ್ಞಾನದ ಅತ್ಯಗತ್ಯವಿದೆ.
00.38 ಯೂಸರ್-ಗೆ ಕಿಕ್ಯಾಡ್-ನಲ್ಲಿ ಸರ್ಕ್ಯೂಟ್ ಸ್ಕಿಮಾಟಿಕ್-ನ್ನು ತಯಾರಿಸುವ ಜ್ಞಾನವೂ ಇರಬೇಕು.
00.42 ಸಂಭದಿತ ಟ್ಯುಟೋರಿಯಲ್-ಗಳಿಗಾಗಿ spoken ಹೈಫನ್ (-) tutorial.org ಎಂಬ ಲಿಂಕ್ ಅನ್ನು ವೀಕ್ಷಿಸಿ.
00.49 ಕಿಕ್ಯಾಡ್-ನ್ನು ಆರಂಭಿಸಲು,ಉಬುಂಟು ಡೆಸ್ಕ್-ಟಾಪ್ ನಲ್ಲಿ ಸ್ಕ್ರೀನ್-ನ ಎಡ ಮೇಲ್ಭಾಗಕ್ಕೆ ಹೋಗಿ,
00.56 Dash Home (ಡಾಷ್ ಹೋಮ್) ಎನ್ನುವ ಮೊದಲ ಐಕಾನ್-ಅನ್ನು ಕ್ಲಿಕ್ ಮಾಡಿ.
01.01 ಸರ್ಚ್ ಟ್ಯಾಬ್-ನಲ್ಲಿ kicad (ಕಿಕ್ಯಾಡ್) ಎಂದು ಟೈಪ್ ಮಾಡಿ ಎಂಟರ್ ಒತ್ತಿರಿ.
01.10 ಈಗ kicad (ಕಿಕ್ಯಾಡ್) ನ ಮೈನ್ ವಿಂಡೊ ತೆರೆಯುತ್ತದೆ.
01.13 EEschema(ಇಇಸ್ಕೀಮಾ) ಟ್ಯಾಬ್-ನ ಮೇಲೆ ಕ್ಲಿಕ್ ಮಾಡಿ.
01.17 Schematic (ಸ್ಕಿಮ್ಯಾಟಿಕ್) ಎಂಬುದು ಕಾಣಿಸುತ್ತಿಲ್ಲ ಎಂದು ಹೇಳುವ ಒಂದು Info ಎಂಬ ಡಯಲಾಗ್ ಬಾಕ್ಸ್ ಕಾಣಲ್ಪಡುತ್ತದೆ.
01.21 OK ಯ ಮೇಲೆ ಕ್ಲಿಕ್ ಮಾಡಿ.
01.23 ನಾವು ಈ ಹಿಂದೆ ತಯಾರಿಸಿದ project1.sch ಫೈಲ್-ನ್ನು ಉಪಯೋಗಿಸೋಣ.
01.29 File (ಫೈಲ್) ಮೆನು-ವಿಗೆ ಹೋಗಿ Open (ಓಪನ್) ಅನ್ನು ಕ್ಲಿಕ್ ಮಾಡಿ.
01.33 ಡೈರೆಕ್ಟರಿಯಿಂದ project1.sch ಫೈಲ್ ಅನ್ನು ಸೆಲೆಕ್ಟ್ ಮಾಡಿ.
01.44 ಈಗ ನಾವು ಕಂಪೋನೆಂಟ್-ಗಳಿಗೆ ವಾಲ್ಯೂ ಅನ್ನು ನಿರ್ಧರಿಸೋಣ.
01.49 ಇನ್ನು ನಾವು R2 ಕಂಪೋನೆಂಟ್-ಗೆ ವಾಲ್ಯೂ ಅನ್ನು ನಿರ್ಧರಿಸೋಣ.
01.54 ರೆಸಿಸ್ಟರ್ R ನ ಮೇಲೆ ಕರ್ಸರ್-ನ್ನು ಇಡಿ.
02.01 ರೈಟ್ ಕ್ಲಿಕ್ ಮಾಡಿ ಹಾಗೂ ಫೀಲ್ಡ್ ವಾಲ್ಯೂನ್ನು ಆಯ್ದುಕೊಳ್ಳಿ.
02.05 ಇದು Edit value field (ಎಡಿಟ್ ವಾಲ್ಯೂ ಫೀಲ್ಡ್) ಎಂಬ ವಿಂಡೋವನ್ನು ತೆರೆಯುತ್ತದೆ.
02.11 1M ಅನ್ನು ಟೈಪ್ ಮಾಡಿ ಹಾಗೂ OK ಕ್ಲಿಕ್ ಮಾಡಿ.
02.17 ನಿಮಗೆ ಕಂಡು ಬಂದತೆ ರಿಸಿಸ್ಟರ್ R2 ವಿನ ವಾಲ್ಯೂವನ್ನು 1M(=1 ಮೆಗಾ ohm) ಎಂದು ನಿರ್ಧರಿಸಲಾಗಿದೆ.
02.24 ನಾನು ಈಗಾಗಲೇ ಉಳಿದ ಕಾಂಪೋನೆಂಟ್ ಗಳ ವಾಲ್ಯೂಗಳನ್ನು ಇದೇ ರೀತಿಯಲ್ಲಿ ನಿರ್ಧರಿಸಿದ್ದೇನೆ.
02.29 ಮುಂದಿನ ಹಂತ ಈ ಸರ್ಕ್ಯೂಟ್ ನ ಎಲೆಕ್ಟ್ರಿಕ್ ರೂಲ್ ಅನ್ನು ಚೆಕ್ ಮಾಡುವುದು.
02.36 EEschema (ಈಈಸ್ಕೀಮಾ) ದ ಮೇಲಿರುವ ವಿಂಡೊಗೆ ಹೋಗಿ.
02.39 Perform Electric Rule Check (ಪರ್ಫಾರ್ಮ್ ಎಲೆಕ್ಟ್ರಿಕ್ ರೂಲ್ ಚೆಕ್) ಎಂಬ ಬಟನ್ ಅನ್ನು ಕ್ಲಿಕ್ ಮಾಡಿ.
02.44 ಇದು EEschema Erc (ಈಈಸ್ಕೀಮಾ ಇಅರ್ ಸಿ) ಎಂಬ ವಿಂಡೋವನ್ನು ತೆರೆಯುತ್ತದೆ.
02.48 Test Erc (ಟೆಸ್ಟ್ ಇಆರ್ ಸಿ ) ಬಟನ್ ಅನ್ನು ಕ್ಲಿಕ್ ಮಾಡಿ.
02.52 ನಾವಿಲ್ಲಿ ಎರಡು ಎರರ್ ಗಳನ್ನು ನೋಡುತ್ತೇವೆ.
02.56 ಎರಡೂ ಎರರ್ ಗಳು ಟರ್ಮಿನಲ್ಸ್ ಗಳಲ್ಲಿ ಪವರ್ ಸೋರ್ಸ್ ಗಳು ಇಲ್ಲವೆಂದು ಹೇಳುತ್ತವೆ.
03.00 Close ಬಟನ್ ಮೇಲೆ ಕ್ಲಿಕ್ ಮಾಡಿ.
03.03 ಸ್ಕಿಮಾಟಿಕ್ ನಲ್ಲಿ ಎರರ್ ನೋಡ್ ಗಳು ಎರೋ ಚಿಹ್ನೆಗಳ ಮೂಲಕ ತೋರಿಸಲಾಗುತ್ತದೆ.
03.12 ಇಲ್ಲಿ ಪವರ್ ಫ್ಲಾಗ್ ನ್ನು ಕನೆಕ್ಟ್ ಮಾಡೋಣ. ಇದರಿಂದಾಗಿ ನಾವು ಇಲ್ಲಿ ಪವರ್ ಸಪ್ಲೈ ಅನ್ನು ಕನೆಕ್ಟ್ ಮಾಡಲಿದ್ದೇವೆ ಎಂದು ಕೀಕ್ಯಾಡ್ ಗೆ ತಿಳಿಯುತ್ತದೆ.
03.22 ಇದಕ್ಕಾಗಿ,
03.24 ಪಾನಲ್ ನ ಬಲಭಾಗದಲ್ಲಿರುವ power port button (ಪವರ್ ಪೋರ್ಟ್ ಬಟನ್) ಅನ್ನು ಕ್ಲಿಕ್ ಮಾಡಿ.
03.29 ಈಗ component selection (ಕಂಪೋನೆಂಟ್ ಸೆಲೆಕ್ಷನ್) ವಿಂಡೊ ತೆರೆಯಲು EEschema (ಈಈಸ್ಕೀಮಾ) ವಿಂಡೊ ಮೇಲೆ ಕ್ಲಿಕ್ ಮಾಡಿ.
03.34 List All (ಲಿಸ್ಟ್ ಆಲ್) ಬಟನ್ ಅನ್ನು ಕ್ಲಿಕ್ ಮಾಡಿ ಹಾಗೂ ನೀವು list of power notations (ಲಿಸ್ಟ್ ಆಫ್ ಪವರ್ ನೊಟೇಷನ್ಸ್) ಅನ್ನು ನೋಡುತ್ತೀರಿ.
03.40 PWR_(underscore)FLAG ಅನ್ನು ಆಯ್ದುಕೊಳ್ಳಿ ಹಾಗೂ OK ಮೇಲೆ ಕ್ಲಿಕ್ ಮಾಡಿ.
03.49 Power flag ಅನ್ನು Vcc ಟರ್ಮಿನಲ್ ಹತ್ತಿರ ಇಡುತ್ತೇವೆ.
03.55 ಇದನ್ನು ಇಡಲು EEschema ಮೇಲೆ ಕ್ಲಿಕ್ ಮಾಡಿ.
03.59 ಒಂದೇ ರೀತಿಯ ಎರಡು ಎರರ್ ಗಳು ಇರುವುದರಿಂದ ನಮಗೆ ಒಂದೇ ರೀತಿಯ ಎರಡು ಪವರ್ ಫ್ಲಾಗ್ ಗಳು ಬೇಕಾಗಿವೆ.
04.05 ಕರ್ಸರ್ ಅನ್ನು ಪವರ್ ಫ್ಲಾಗ್ ನ ಮೇಲೆ ಇಡಿ ಹಾಗೂ copy ಮಾಡಲು c ಅನ್ನು ಒತ್ತಿ.
04.10 ಈ ಪವರ್ ಫ್ಲಾಗ್ ಅನ್ನು ಗ್ರೌಂಡ್ ಟರ್ಮಿನಲ್ ಹತ್ತಿರ ಇಡಿ.
04.15 ನಾವು ಪವರ್ ಫ್ಲ್ಯಾಗ್ ಗಳನ್ನು ವೈರ್ ಗಳ ಮೂಲಕ ಜೋಡಿಸಲಿದ್ದೇವೆ. ಬಲಭಾಗದ ಪಾನಲ್ ಗೆ ಹೋಗಿ place a wire button (ಪ್ಲೇಸ್ ಅ ವೈರ್ ಬಟನ್) ಅನ್ನು ಕ್ಲಿಕ್ ಮಾಡಿ.
04.24 ಈಗ ಪವರ್ ಫ್ಲ್ಯಾಗ್ ಅನ್ನು Vcc ಟರ್ಮಿನಲ್ ಗೆ ಕನೆಕ್ಟ್ ಮಾಡಿ.
04.35 ಇದರಂತೆ ಪವರ್ ಫ್ಲ್ಯಾಗ್ ಅನ್ನು ಗ್ರೌಂಡ್ ಟರ್ಮಿನಲ್ ಗೆ ಕನೆಕ್ಟ್ ಮಾಡಿ.
04.44 ಈಗ ನಾವು Schematic ERC ಅನ್ನು ರನ್ ಮಾಡಲಿದ್ದೇವೆ. ಧೃಡೀಕರಿಸಲು ಒಂದು ಬಾರಿ ಚೆಕ್ ಮಾಡಿ.
04.49 ಇದಕ್ಕಾಗಿ, EEschema ವಿಂಡೊವಿನ ಮೇಲಿನ ಪಾನಲ್ ನಲ್ಲಿರುವ Perform Electric Rules Check ನ ಮೇಲೆ ಕ್ಲಿಕ್ ಮಾಡಿ.
04.55 ಇದು EEshema Erc ವಿಂಡೊವನ್ನು ತೆರೆಯುತ್ತದೆ.
04.58 Test Erc ಬಟನ್ ಅನ್ನು ಕ್ಲಿಕ್ ಮಾಡಿ.
05.01 ಎರರ್ ಗಳು ನಮಗೆ ಕಾಣುವುದಿಲ್ಲ.
05.04 Close ನ ಮೇಲೆ ಕ್ಲಿಕ್ ಮಾಡಿ.
05.07 ಈಗ ನಾವು ನೆಟ್ ಲಿಸ್ಟ್ ಅನ್ನು ಹೇಗೆ ಜೆನರೇಟ್ ಮಾಡುವುದೆಂದು ನೋಡೋಣ.
05.10 ಕಂಪೋನೆಂಟ್ಸ್ ಹಾಗೂ ನೋಡ್ಸ್ ಗಳು ಒಂದನ್ನೊಂದು ಕನೆಕ್ಟ್ ಮಾಡುತ್ತದೆ, ಇದರ ಲಿಸ್ಟ್ ನ್ನು ನೆಟ್ ಲಿಸ್ಟ್ ಕೊಡುತ್ತದೆ.
05.16 ನಾವು ನೆಟ್ ಲಿಸ್ಟ್ ನ ಉಪಯೋಗವನ್ನು ಟ್ಯುಟೋರಿಯಲ್ ನಲ್ಲಿ ಇನ್ನು ಮುಂದೆ ನೋಡೋಣ.
05.20 ಜೆನರೇಟಿಂಗ್ ಲಿಸ್ಟ್ ಗಾಗಿ ಪಾನಲ್ ನ ಮೇಲ್ಭಾಗಕ್ಕೆ ಹೋಗಿ, netlist generation button ಅನ್ನು ಕ್ಲಿಕ್ ಮಾಡಿ.
05.27 ಇದು Netlist ವಿಂಡೋವನ್ನು ತೆರೆಯುತ್ತದೆ.
05.31 ಈ ವಿಂಡೋದಲ್ಲಿ ಬೇರೆ ಬೇರೆ ರೀತಿಯ ಟ್ಯಾಬ್ ಗಳಿವೆ. ಇವು ಬೇರೆ ಬೇರೆ ಫಾರ್ಮೇಟ್ ನಲ್ಲಿ netlist ಅನ್ನು ಜೆನರೇಟ್ ಮಾಡಿಸುತ್ತದೆ.
05.38 ಕೀಕ್ಯಾಡ್ ಗಾಗಿ ನಾವು Pcbnew tab ಅನ್ನು ಉಪಯೋಗಿಸುತ್ತೇವೆ.
05.42 Default format ಆಯ್ದುಕೊಂಡಿದ್ದ ಮೇಲೆ, ನೆಟ್ ಲಿಸ್ಟ್ ಬಟನ್ ಅನ್ನು ಕ್ಲಿಕ್ ಮಾಡಿ.
05.48 ನೆಟ್ ಲಿಸ್ಟ್ ನ ಫೈಲ್ project1.net ಎಂಬ ಹೆಸರಿನಲ್ಲಿ ರಕ್ಷಿಸಬೇಕೆಂಬುದನ್ನು ಗಮನದಲ್ಲಿರಲಿ.
05.54 ನೆಟ್ ಲಿಸ್ಟ್ ಜೆನರೇಟ್ ಆದಾಗ ಫೈಲ್ ಅನ್ನು .net extension ನಲ್ಲಿ ರಕ್ಷಿಸಬೇಕೆಂಬುದನ್ನು ಗಮನದಲ್ಲಿರಲಿ.
06.00 Save ಬಟನ್ ನ ಮೇಲೆ ಕ್ಲಿಕ್ ಮಾಡಿ.
06.02 ವಿಂಡೋ ಸೈಜ್ ಅನ್ನು ಸರಿಪಡಿಸುತ್ತೇನೆ.
06.04 ರಕ್ಷಿಸಬೇಕೆಂಬುದನ್ನು ಗಮನದಲ್ಲಿರಲಿ.
06.06 ನೆಟ್ ಲಿಸ್ಟ್ ಫೈಲ್ ನಲ್ಲಿ ಪ್ರಿಂಟೆಟ್ ಸರ್ಕ್ಯೂಟ್ ಬೋರ್ಡ್ ಡಿಸೈನ್ ಗೆ ಬೇಕಾಗುವ ಸರ್ಕ್ಯೂಟ್ ನ ಕಂಪೊನೆಂಟ್ ನ ಮಾಹಿತಿ ಹೊಂದಿರುತ್ತದೆ.
06.14 ನಾವು ಈ ನೆಟ್ ಲಿಸ್ಟ್ ನ ಉಪಯೋಗವನ್ನು ಇನ್ನೊಂದು ಟ್ಯುಟೋರಿಯಲ್ ನಲ್ಲಿ ನೋಡಲಿದ್ದೇವೆ.
06.20 ಈ ಸ್ಕಿಮಾಟಿಕ್ ಅನ್ನು ರಕ್ಷಿಸಲು File ಮೆನುವಿಗೆ ಹೋಗಿ Save Whole Schematic Project ಅನ್ನು ಆಯ್ದುಕೊಳ್ಳಿ.
06.27 EEschema ವಿಂಡೋ ಅನ್ನು ಕ್ಲೋಸ್ ಮಾಡಲು File ಮೆನುವಿಗೆ ಹೋಗಿ Quit ಅನ್ನು ಆಯ್ದುಕೊಳ್ಳಿ.
06.32 ಕೀಕ್ಯಾಡ್ ನ ಮುಖ್ಯ ವಿಂಡೊದಲ್ಲಿ,
06.34 File ಮೆನುವಿಗೆ ಹೋಗಿ Quit ಅನ್ನು ಆಯ್ದುಕೊಳ್ಳಿ. ಇದು ಕೀಕ್ಯಾಡ್ ನ ಮುಖ್ಯ ವಿಂಡೊ ಅನ್ನು ಕ್ಲೋಸ್ ಮಾಡುತ್ತದೆ.
06.40 ಈ ಟ್ಯುಟೋರಿಯಲ್ ನಲ್ಲಿ ನಾವು,
06.44 ಕಂಪೋನೆಂಟ್ ನ ವಾಲ್ಯೂಗಳನ್ನು ನಿರ್ಧಾರಿಸುವುದು,
06.46 ಸರ್ಕ್ಯೂಟ್ ಸ್ಕಿಮಾಟಿಕ್ ಅನ್ನು ಚೆಕ್ ಹಾಗೂ ಎರರ್ ಗಳನ್ನು ಸರಿಪಡಿಸುವುದು,
06.50 ಹಾಗೂ ಸರ್ಕ್ಯೂಟ್ ಗಾಗಿ ನೆಟ್ ಲಿಸ್ಟ್ ಅನ್ನು ಜೆನರೇಟ್ ಮಾಡುವುದನ್ನು ಕಲಿತಿದ್ದೇವೆ.
06.53 ಕೆಳಗಿರುವ ಲಿಂಕ್ ನ ಮೂಲಕ ವಿಡಿಯೋವನ್ನು ನೋಡಿರಿ.
06.56 ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ.
06.58 ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ನೀವು ಇದನ್ನು ಡೌನ್ ಲೋಡ್ ಮಾಡಿ ವೀಕ್ಷಿಸಿ.
07.02 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಗಣವು,
07.04 ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಕಾರ್ಯಶಾಲೆಯನ್ನು ನಡೆಸುತ್ತದೆ.
07.07 ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
07.10 ಹೆಚ್ಚಿನ ಮಾಹಿತಿಗಾಗಿ, spoken-tutorial.org (ಸ್ಪೋಕನ್ ಹೈಫನ್ ಟ್ಯುಟೋರಿಯಲ್ ಡಾಟ್ ಒಆರ್ ಜಿ) ಅನ್ನು ಸಂಪರ್ಕಿಸಿ.
07.16 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, ಟಾಕ್ ಟು ಎ ಟೀಚರ್ ಪರಿಯೋಜನೆಯ ಒಂದು ಭಾಗವಾಗಿದೆ.
07.19 ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
07.25 ಈ ಮಿಷನ್ ಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು,
07.28 spoken hyphen tutorial dot org slash NMEICT hyphen Intro ಎಂಬಲ್ಲಿಂದ ಪಡೆಯಬಹುದು.
07.34 ಈ ಪಾಠದ ಅನುವಾದಕ ಬೆಂಗಳೂರಿನಿಂದ ಜ್ಞಾನೇಶ ಮರಾಠೆ ಮತ್ತು ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ.

ಧನ್ಯವಾದಗಳು.

Contributors and Content Editors

PoojaMoolya, Vasudeva ahitanal