KiCad/C2/Designing-circuit-schematic-in-KiCad/Kannada

From Script | Spoken-Tutorial
Jump to: navigation, search
Time Narration
00.01 ಕಿಕ್ಯಾಡ್ ನಲ್ಲಿ ಸರ್ಕ್ಯೂಟ್ ಸ್ಕಿಮೇಟಿಕ್ ನ ಡಿಸೈನ್ ಮಾಡುವುದರ ಬಗೆಗಿನ ಈ ಸ್ಪೊಕನ್ ಟ್ಯುಟೋರಿಯಲ್-ಗೆ ಸ್ವಾಗತ.
00.08 ಈಗ PCB ಡಿಸೈನ್-ನಲ್ಲಿ ಒಳಗೊಂಡಿರುವ ಹಂತಗಳನ್ನು ನೋಡೋಣ.
00.12 ಮೊದಲ ಹಂತ, ನಮಗೆ ಬೇಕಾಗಿರುವ ಸ್ಕಿಮಾಟಿಕ್ ಸರ್ಕ್ಯೂಟ್ ಅನ್ನು ತಯಾರುಮಾಡುವುದು.
00.16 ಎರಡನೆಯ ಹಂತ, ನೆಟ್ ಲಿಸ್ಟ್ ಅನ್ನು ಜೆನೆರೇಟ್ ಮಾಡುವುದು.
00.19 ಮೂರನೆಯ ಹಂತ, ಕಂಪೋನೆಂಟ್ ಗೆ ಸಂಬಂಧಿಸಿದ ಫುಟ್ಪ್ರಿಂಟ್ ನ ಚಿತ್ರಣ,
00.22 ಮತ್ತು ನಾಲ್ಕನೆಯ ಹಂತ, ಸರ್ಕ್ಯೂಟ್ ನ ಬೊರ್ಡ್ ಲೇಔಟ್ ಅನ್ನು ತಯಾರಿಸುವುದು.
00.27 ಈ ಟ್ಯುಟೋರಿಯಲ್-ನ ಮೊದಲನೆಯ ಹಂತದಲ್ಲಿ ನಾವು ಕಲಿಯುವುದೇನೆಂದರೆ,
00.32 ನಮಗೆ ಬೇಕಾಗಿರುವ ಸ್ಕಿಮಾಟಿಕ್ ಸರ್ಕ್ಯೂಟ್ ಅನ್ನು ತಯಾರುಮಾಡುವುದು.
00.35 ನಾವು ಉಬಂಟು 12.04 ಆಪರೇಟಿಂಗ್ ಸಿಸ್ಟಂ ನಲ್ಲಿ
00.40 ಕೀಕ್ಯಾಡ್ ನ 2011 ಹೈಫನ್ 05 ಹೈಫನ್ 25 ನೇ ಆವೃತ್ತಿಯನ್ನು ಈ ಟ್ಯುಟೋರಿಯಲ್ ಗಾಗಿ ಉಪಯೋಗಿಸುತ್ತಿದ್ದೇವೆ.
00.49 ಇಲ್ಲಿರುವ ಟ್ಯುಟೋರಿಯಲ್-ಗೆ ಎಲೆಕ್ಟ್ರೋನಿಕ್ ಸರ್ಕ್ಯೂಟ್-ನ ಸಾಮಾನ್ಯ ಜ್ಞಾನದ ಅತ್ಯಗತ್ಯವಿದೆ.
00.56 ಇಲ್ಲಿರುವ ಟ್ಯುಟೋರಿಯಲ್-ನಲ್ಲಿ Astable Multivibrator (ಏಸ್ಟೆಬಲ್ ಮಲ್ಟಿವೈಬ್ರೇಟರ್) ಅನ್ನು ಉದಾಹರಣೆಯಾಗಿ ತೆಗೆದುಕೊಳ್ಳಲ್ಲಿದ್ದೇವೆ.
01.04 ಕೀಕ್ಯಾಡ್ ಅನ್ನು ಆರಂಭಿಸಲು,ಉಬುಂಟು ಡೆಸ್ಕ್-ಟಾಪ್ ಸ್ಕ್ರೀನ್-ನ ಮೇಲಿನ ಎಡ ಬದಿಗೆ ಹೋಗಿ
01.08 Dash home (ಡ್ಯಾಶ್ ಹೋಮ್) ಅನ್ನು ಕ್ಲಿಕ್ ಮಾಡಿ
01.12 ಸರ್ಚ್ ಬಾರ್-ನಲ್ಲಿ Kicad (ಕೀಕ್ಯಾಡ್) ಎಂದು ಟೈಪ್ ಮಾಡಿ enter (ಎಂಟರ್) ಅನ್ನು ಒತ್ತಿರಿ.
01.19 ಕೀಕ್ಯಾಡ್ ನ ಮುಖ್ಯ ಪರದೆಯು ಕಂಡುಬರುವುದು.
01.22 ಉಬಂಟು 12.04 ರಲ್ಲಿ, ಕೀಕ್ಯಾಡ್ ನ ಮೆನು ಬಾರ್ ಉಬುಂಟು ಡೆಸ್ಕ್-ಟಾಪ್ ನ ಮೇಲಿನ ಪಾನಲ್-ನಲ್ಲಿ ಇರುತ್ತದೆ ಎಂದು ಗಮನದಲ್ಲಿಟ್ಟುಕೊಳ್ಳಿ.
01.30 ಹೊಸ ಪ್ರಾಜೆಕ್ಟ್ ಅನ್ನು ಆರಂಭಿಸಲು, File (ಫೈಲ್) ನ ಮೇಲೆ ಕ್ಲಿಕ್ ಮಾಡಿ ನಂತರ New (ನ್ಯೂ) ಎನ್ನುವುದರ ಮೇಲೆ ಕ್ಲಿಕ್ ಮಾಡಿ.
01.35 ನಿಮ್ಮ ಪ್ರಾಜೆಕ್ಟ್-ಗೆ ಒಂದು ಹೆಸರು ಕೊಡಿ. ಉದಾಹರಣೆಗಾಗಿ, Project 1.
01.42 .pro extension ನಲ್ಲಿ ಪ್ರಾಜೆಕ್ಟ್ ಸುರಕ್ಷಿತವಾಗಿದೆಯೆಂದು ಗಮನದಲ್ಲಿರಲಿ.
01.47 ಸರಿಯಾಗಿ ತೋರಲು ಪರದೆಯ ಆಕಾರವನ್ನು ಬದಲಿಸುತ್ತೇನೆ.
01.52 ನಿಮ್ಮ ಪ್ರಾಜೆಕ್ಟ್ ಎಲ್ಲಿ ರಕ್ಷಿಸಲ್ಪಡುತ್ತಿದೆಯೆಂದು ಗಮನಿಸಿ ಹಾಗೂ ಬೇಕಾದಲ್ಲಿ ಡೈರಕ್ಟರಿಯನ್ನು ಬದಲಾಯಿಸಿಕೊಳ್ಳಿ.
01.58 Save (ಸೇವ್) ಎಂಬಲ್ಲಿ ಕ್ಲಿಕ್ ಮಾಡಿ.
02.01 ಕೀಕ್ಯಾಡ್ ನಲ್ಲಿ EESchema (ಈಈಸ್ಕೀಮಾ) ವನ್ನು ಬಳಸಿ ಸರ್ಕ್ಯೂಟ್ ಸ್ಕಿಮಾಟಿಕ್-ಗಳನ್ನು ಮಾಡಲಾಗಿದೆ.
02.06 ಕೀಕ್ಯಾಡ್ ನಲ್ಲಿ EESchema (ಈಈಸ್ಕೀಮಾ) ವನ್ನು ಹೇಗೆ ಆರಂಭಿಸುವುದೆಂದು ತೋರಿಸುತ್ತೇನೆ.
02.10 ಕೀಕ್ಯಾಡ್ ನ ಮುಖ್ಯ ಪರದೆಯ ಮೇಲಿನ ಪಾನಲ್-ನ ಮೊದಲ ಟ್ಯಾಬ್ ಅನ್ನು EESchema (ಈಈಸ್ಕೀಮಾ) ಅಥವಾ Schematic Editor (ಸ್ಕೀಮ್ಯಾಟಿಕ್ ಎಡಿಟರ್) ಎಂದು ಕರೆಯುತ್ತಾರೆ
02.19 EESchema (ಈಈಸ್ಕೀಮಾ) ಟ್ಯಾಬ್-ನ ಮೇಲೆ ಕ್ಲಿಕ್ ಮಾಡಿದಾಗ Schematic Editor (ಸ್ಕೀಮ್ಯಾಟಿಕ್ ಎಡಿಟರ್) ತೆರೆಯಲ್ಪಡುತ್ತದೆ.
02.23 Schematic (ಸ್ಕಿಮ್ಯಾಟಿಕ್) ಎಂಬುದು ಕಾಣಿಸುತ್ತಿಲ್ಲ ಎಂದು ಹೇಳುವ ಒಂದು Info ಎಂಬ ಡಯಲಾಗ್ ಬಾಕ್ಸ್ ಕಾಣಲ್ಪಡುತ್ತದೆ.
02.28 Ok ಎಂಬಲ್ಲಿ ಕ್ಲಿಕ್ ಮಾಡಿ.
02.32 ನಾವಿಲ್ಲಿ ಸರ್ಕ್ಯೂಟ್ ಸ್ಕಿಮಾಟಿಕ್ಸ್ ಅನ್ನು ತಯಾರಿಸುತ್ತೇವೆ.
02.35 EESchema (ಈಈಸ್ಕೀಮಾ) ಪರದೆಯ ಬಲಭಾಗದ ಪಾನಲ್-ಗೆ ಹೋಗಿ.
02.38 Place a component (ಪ್ಲೇಸ್ ಅ ಕಾಂಪೋನೆಂಟ್) ಎಂಬ ಬಟನ್ ಅನ್ನು ಕ್ಲಿಕ್ ಮಾಡಿ.
02.42 ಈಗ EESchema (ಈಈಸ್ಕೀಮಾ) ಪರದೆಯ ಖಾಲೀ ಜಾಗದಲ್ಲಿ ಕ್ಲಿಕ್ ಮಾಡಿ.
02.46 component selection (ಕಂಪೋನೆಂಟ್ ಸೆಲೆಕ್ಶನ್) ಎಂಬ ವಿಂಡೋ ತೆರೆಯುತ್ತದೆ.
02.49 ಈಗ EESchema (ಈಈಸ್ಕೀಮಾ) ವಿಂಡೋನಲ್ಲಿ 555 timer IC ಸ್ಕಿಮಾಟಿಕ್ ಅನ್ನು ಇಡೋಣ.
02.56 component selection ವಿಂಡೋ ದ Name ಎಂಬಲ್ಲಿ 555 ಎಂದು ಟೈಪ್ ಮಾಡಿ ಹಾಗೂ OK ಕ್ಲಿಕ್ ಮಾಡಿ.
03.05 ಅದು ಹುಡುಕಿದ ಫಲಿತಾಂಶವನ್ನು LM555N ಎಂಬುದಾಗಿ ತೋರಿಸುತ್ತದೆ.
03.11 ಫಲಿತಾಂಶವನ್ನು ಆಯ್ದುಕೊಳ್ಳಿ ಹಾಗೂ OK ಕ್ಲಿಕ್ ಮಾಡಿ.
03.14 EESchema (ಈಸ್ಕೀಮಾ) ಪರದೆಯಲ್ಲಿ ಕಂಪೊನೆಂಟ್-ನ ಸ್ಕಿಮಾಟಿಕ್ ಕಾಣುವುದು.
03.19 ಅದು ನಿಮ್ಮ ಕರ್ಸರ್-ನೊಂದಿಗೆ ಅಂಟಿಕೊಂಡಿರುತ್ತದೆ.
03.22 ಪರದೆಯ ಮಧ್ಯದಲ್ಲಿ ಒಂದು ಬಾರಿ ಕ್ಲಿಕ್ ಮಾಡಿ ಕಂಪೋನೆಂಟ್ ಅನ್ನು ಇರಿಸಿ.
03.27 ಸರಿಯಾದ ವೀಕ್ಷಣೆಗಾಗಿ ಜೂಮ್ ಇನ್ ಹಾಗೂ ಔಟ್ ಮಾಡಲು ಮೌಸ್-ನ ಸ್ಕ್ರೊಲ್ ಬಟನ್ ಅನ್ನು ಉಪಯೋಗಿಸಿಕೊಳ್ಳಿ.
03.35 ಕರ್ಸರ್ ಅನ್ನು ಕಂಪೋನೆಂಟ್ ನ ಮೇಲಿಟ್ಟು ನೀವಿಚ್ಛಿಸಿದ್ದನ್ನು ಜೂಮ್ ಇನ್ ಹಾಗೂ ಜೂಮ್ ಔಟ್ ಮಾಡಬಹುದು.
03.39 f1 ಹಾಗೂ f2 ಕೀಗಳನ್ನು ಕ್ರಮವಾಗಿ ಜೂಮ್ ಇನ್ ಹಾಗೂ ಜೂಮ್ ಔಟ್ ಮಾಡಲು ಬಳಸಬಹುದು.
03.46 555 IC ಯ ಗ್ರೌಂಡ್ ಟರ್ಮಿನಲ್ ಆದ VCC ಹಾಗೂ GND ಯು ಕಾಣುವ ಅಥವಾ ಕಾಣದಿರುವ ಸಾಧ್ಯತೆಗಳಿವೆ.
03.56 ಒಂದು ವೇಳೆ ಇದು ಕಾಣದೆ ಇದ್ದಲ್ಲಿ, EESchema ಪರದೆಯ ಎಡ ಪಾನಲ್-ಗೆ ಹೋಗಿ.
04.00 Show hidden pins (ಶೋ ಹಿಡ್ಡನ್ ಪಿನ್ಸ್) ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.
04.04 ಈಗ ನಾವು EESchema ಪರದೆಯ ಮೇಲೆ ರೆಸಿಸ್ಟರ್ ಅನ್ನು ಇಡಲಿದ್ದೇವೆ.
04.09 Place a component ಎಂಬ ವಿಕಲ್ಪವನ್ನು ನಾವು ಮುಂಚಿತವಾಗಿಯೇ ಆಯ್ದುಕೊಂಡಿದ್ದೇವೆ.
04.13 ಆದ್ದರಿಂದ, ಕೇವಲ EESchema ಮೇಲೆ ಕ್ಲಿಕ್ ಮಾಡುವುದರಿಂದ ನೀವು component selection (ಕಂಪೊನೆಂಟ್ ಸೆಲೆಕ್ಷನ್) ಎಂಬ ವಿಂಡೋವನ್ನು ಕಾಣುತ್ತೀರಿ.
04.21 Name ಫೀಲ್ಡ್-ನಲ್ಲಿ r ಎಂದು ಟೈಪ್ ಮಾಡಿ ಹಾಗೂ OK ಕ್ಲಿಕ್ ಮಾಡಿ.
04.26 EESchema ದಲ್ಲಿ ರೆಸಿಸ್ಟರ್ ಸ್ಕಿಮಾಟಿಕ್ ಕರ್ಸರ್-ನೊಂದಿಗೆ ಅಂಟಿಕೊಂಡಂತೆ ಕಾಣುತ್ತದೆ.
04.32 EESchema ದಲ್ಲಿ ರೆಸಿಸ್ಟರ್ ಅನ್ನು ಎಲ್ಲಾದರೂ ಒಂದು ಬಾರಿ ಕ್ಲಿಕ್ ಮಾಡುವುದರ ಮೂಲಕ ಇಡಿ.
04.37 ನಮಗೆ ಇನ್ನೆರಡು ರೆಸಿಸ್ಟರ್-ಗಳು ಬೇಕಾಗಿವೆ.
04.39 Place a component (ಪ್ಲೇಸ್ ಅ ಕಂಪೋನೆಂಟ್) ಎಂಬ ಬಟನ್ ಉಪಯೋಗಿಸಿ ನಾವು ಇನ್ನೆರಡು ರೆಸಿಸ್ಟರ್-ಗಳನ್ನು ತೆಗೆದುಕೊಳ್ಳಬಹುದು.
04.42 ಆದರೆ ಈಗಾಗಲೆ ನಮ್ಮಲ್ಲಿ ಒಂದು ರೆಸಿಸ್ಟರ್ ಇರುವುದರಿಂದ, ನಾವೀಗ ಒಂದು ಕಾಂಪೊನೆಂಟ್-ನ ಪ್ರತಿಕೃತಿಯನ್ನು ತೆಗೆಯುವ ರೀತಿಯನ್ನು ನೋಡೋಣ.
04.48 ಕಾಂಪೊನೆಂಟ್-ನ ಪ್ರತಿಕೃತಿಗಾಗಿ ಕಾಂಪೊನೆಂಟ್-ನ ಮೇಲೆ ರೈಟ್ ಕ್ಲಿಕ್ ಮಾಡಿ ಹಾಗೂ Copy Component (ಕಾಪಿ ಕಂಪೋನೆಂಟ್) ಅನ್ನು ಆಯ್ದುಕೊಳ್ಳಿ.
05.01 ಕಾಂಪೊನೆಂಟ್-ನ ಪ್ರತಿಕೃತಿ ನಿಮ್ಮ ಕರ್ಸರ್-ನೊಂದಿಗೆ ಅಂಟಿಕೊಂಡಿರುತ್ತದೆ.
05.05 EESchema ದಲ್ಲಿ ರೆಸಿಸ್ಟರ್ ಅನ್ನು ಎಲ್ಲಾದರೂ ಒಂದು ಬಾರಿ ಕ್ಲಿಕ್ ಮಾಡುವುದರ ಮೂಲಕ ಇಡಿ.
05.11 ಇದನ್ನು ಕಿಬೊರ್ಡ್-ನ ಶಾರ್ಟ್-ಕಟ್ ಕೀ ಆದ c ಯನ್ನು ಉಪಯೋಗಿಸಿ ಇನ್ನೂ ತ್ವರಿತಗತಿಯಲ್ಲಿ ಮಾಡಬಹುದು.
05.16 ಇದಕ್ಕಾಗಿ, ಕರ್ಸರ್-ಅನ್ನು ಕಂಪೊನೆಂಟ್-ನ ಮೇಲಿಟ್ಟು c ಯನ್ನು ಒತ್ತಿರಿ.
05.22 ಮತ್ತೊಮ್ಮೆ ಇದು ಕರ್ಸರ್-ನೊಂದಿಗೆ ಅಂಟಿಕೊಂಡಿರುತ್ತದೆ.
05.27 ಇದನ್ನಿಡಲು ಒಂದು ಬಾರಿ ಕ್ಲಿಕ್ ಮಾಡಿ.
05.30 Shift ಮತ್ತು ? (ಪ್ರಶ್ನಾರ್ಥಕಚಿಹ್ನೆಯ) ಕೀಯನ್ನು ಒತ್ತಿದರೆ ಶಾರ್ಟ್-ಕಟ್-ನ ಪಟ್ಟಿಯು ಕಾಣುತ್ತದೆ.
05.36 ಕೀಬೋರ್ಡ್-ನ ಶಾರ್ಟ್-ಕಟ್-ಗಳ ಪಟ್ಟಿ ಇಲ್ಲಿದೆ.
05.40 ಈ ಪರದೆಯನ್ನು ಕ್ಲೋಸ್ ಮಾಡಿ.
05.43 component selection ಪರದೆಯನ್ನು ತೆರೆಯಲು EESchema ಪರದೆಯ ಮೇಲೆ ಕ್ಲಿಕ್ ಮಾಡಿ.
05.49 ಅನಂತರ ನಮಗೆ ಎಲೆಕ್ಟ್ರೋಲೈಟಿಕ್ ಹಾಗೂ ಸಿರಮಿಕ್ ಎಂಬ ಎರಡು ಕೆಪಾಸಿಟರ್-ಗಳು ಬೇಕಾಗಿವೆ.
05.53 ಎಲೆಕ್ಟ್ರೋಲೈಟಿಕ್ ಕೆಪಾಸಿಟರ್ ಅನ್ನು ಸೇರಿಸಲು cp1 ಎಂದು ಟೈಪ್ ಮಾಡಿ ಹಾಗೂ OK ಕ್ಲಿಕ್ ಮಾಡಿ.
06.00 ಸಿರಮಿಕ್ ಕೆಪಾಸಿಟರ್ ಅನ್ನು ಸೇರಿಸಲು c ಎಂದು ಟೈಪ್ ಮಾಡಿ ಹಾಗೂ OK ಕ್ಲಿಕ್ ಮಾಡಿ.
06.06 LED ಎಂದು ಖ್ಯಾತಿಯಲ್ಲಿರುವ ಲೈಟ್ ಎಮಿಟಿಂಗ್ ಡೈಯೋಡ್ ಕೂಡಾ ನಮಗೆ ಬೇಕು.
06.10 component selection ಪರದೆಯಲ್ಲಿ LED ಎಂದು ಟೈಪ್ ಮಾಡಿ OK ಕ್ಲಿಕ್ ಮಾಡಿ.
06.17 ಈಗ ನಮಗೆ ವಿದ್ಯುತ್ ಸರಬರಾಜು ಬೇಕಾಗಿದೆ ಅಂದರೆ Vcc ಹಾಗೂ Ground terminals.
06.22 EESchema ದ ಬಲಭಾಗದ ಪಾನಲ್-ನಲ್ಲಿ Place a power port (ಪ್ಲೇಸ್ ಅ ಪವರ್ ಪೋರ್ಟ್) ಎಂಬ ಬಟನ್ ಅನ್ನು ಕ್ಲಿಕ್ ಮಾಡಿ.
06.29 component selection ಪರದೆಯನ್ನು ತೆರೆಯಲು EESchema ದಲ್ಲಿ ಕ್ಲಿಕ್ ಮಾಡಿ.
06.34 List All ಬಟನ್ ಕ್ಲಿಕ್ ಮಾಡಿ ಹಾಗೂ ವೇರಿಯಸ್ ಪವರ್ ನೊಟೇಷನ್ ಪಟ್ಟಿಯು ಕಾಣುತ್ತದೆ.
06.40 +5V (ಪ್ಲಸ್ ೫ ವೋಲ್ಟ್) ಆಯ್ದುಕೊಳ್ಳಿ OK ಕ್ಲಿಕ್ ಮಾಡಿ.
06.48 ಕಂಪೊನೆಂಟ್ ಅನ್ನು EESchema ಪರದೆಯ ಮೇಲೆ ಒಂದು ಬಾರಿ ಕ್ಲಿಕ್ ಮಾಡಿ ಇಡಿ.
06.52 ground terminal ಗಾಗಿ ಹೀಗೆಯೇ ಮಾಡಬೇಕು,
06.54 ಪಟ್ಟಿಯಲ್ಲಿ ಗ್ರೌಂಡ್ ಅನ್ನು ಆಯ್ದುಕೊಂಡು OK ಕ್ಲಿಕ್ ಮಾಡಿ
07.01 ground terminal (ಗ್ರೌಂಡ್ ಟರ್ಮಿನಲ್) ಅನ್ನು ಆಯ್ದುಕೊಳ್ಳುತ್ತಿದ್ದೇನೆ.
07.08 ಹೊರಗಿನ ವಿದ್ಯುತ್ ಸರಬರಾಜಿಗಾಗಿ ನಮಗೀಗ ಕನೆಕ್ಟರ್ ಬೇಕಾಗಿದೆ.
07.14 component selection ಪರದೆ ತೆರೆಯಲು EESchema ಮೇಲೆ ಕ್ಲಿಕ್ ಮಾಡಿ.
07.19 List All ಬಟನ್ ಕ್ಲಿಕ್ ಮಾಡಿ ಹಾಗೂ ನಿಮಗೆ ಪಟ್ಟಿಯು ಕಾಣುತ್ತದೆ.
07.24 ಆಯ್ಕೆಯಲ್ಲಿ conn ಆಯ್ದುಕೊಳ್ಳಿ OK ಕ್ಲಿಕ್ ಮಾಡಿ.
07.31 ಸ್ಕ್ರೋಲ್ ಡೌನ್ ಮಾಡಿ ಪಟ್ಟಿಯಲ್ಲಿರುವ CONN_2 ಆಯ್ದುಕೊಳ್ಳಿ ಹಾಗೂ OK ಕ್ಲಿಕ್ ಮಾಡಿ.
07.41 ಎರಡು ಟರ್ಮಿನಲ್ ಇರುವ ಒಂದು ಕನೆಕ್ಟರ್ ಕಾಣುತ್ತದೆ. ಅದು ನಿಮ್ಮ ಮೌಸ್-ನ ಪಾಯಿಂಟರ್-ನೊಂದಿಗೆ ಅಂಟಿಕೊಂಡಿರುತ್ತದೆ.
07.48 ಅದನ್ನಿಡಲು ಒಮ್ಮೆ ಕ್ಲಿಕ್ ಮಾಡಿ.
07.56 ಈಗ ನಾವು ಕಂಪೊನೆಂಟ್-ಗಳನ್ನು ಸರಿಯಾಗಿ ಜೋಡಿಸಿಡಲು ಸರಿಯಾದ ಸ್ಥಳಕ್ಕೆ ಸ್ಥಾನಾಂತರ ಮಾಡೋಣ.
08.01 ಕಂಪೊನೆಂಟ್ ಅನ್ನು ಸ್ಥಾನಾಂತರಿಸಲು ಶಾರ್ಟ್-ಕಟ್ m ಅನ್ನು ಉಪಯೋಗಿಸಬೇಕು.
08.04 ಕಂಪೊನೆಂಟ್ ಅನ್ನು ಸ್ಥಾನಾಂತರಿಸಲು ಮೌಸ್ ಪಾಯಿಂಟರ್ ಅನ್ನು ಕಂಪೊನೆಂಟ್-ನ ಮೇಲೆ ಇಡಿ, ಉದಾಹರಣೆಗೆ ರೆಸಿಸ್ಟರ್, m ಅನ್ನು ಒತ್ತಿ.
08.15 ರೆಸಿಸ್ಟರ್ ಅನ್ನು EESchema ದಲ್ಲಿರುವ IC 555 ನ ಬಲಬದಿಯಲ್ಲಿ ಒಂದು ಬಾರಿ ಕ್ಲಿಕ್ ಮಾಡಿ ಇಡೋಣ.
08.28 LED ಅನ್ನು ತಿರುಗಿಸಿ ಲಂಬವಾಗಿ ಜೋಡಿಸಲು ಕೀಬೋರ್ಡ್-ನ ಶಾರ್ಟ್-ಕಟ್ ಕೀ r ಅನ್ನು ಉಪಯೋಗಿಸಿ.
08.40 ಈಗ ನಾವು ಸರ್ಕ್ಯೂಟ್ ಡೈಯಾಗ್ರಾಮ್-ನಲ್ಲಿರುವಂತೆ ಜೋಡಿಸುವಿಕೆ ಅಥವಾ ವೈರ್ ಮಾಡುವುದು ಹೇಗೆಂದು ನೋಡೋಣ.
08.45 ನಾವೀಗ ಕಂಪೊನೆಂಟ್-ಗಳ ಜೋಡಣೆಯನ್ನು ಪ್ರಾರಂಭಿಸೋಣ.
08.48 EESchema ದ ಬಲಭಾಗದ ಪಾನಲ್-ನಲ್ಲಿ Place a wire (ಪ್ಲೇಸ್ ಅ ವೈರ್) ಎಂಬ ಬಟನ್ ಅನ್ನು ಕ್ಲಿಕ್ ಮಾಡಿ.
08.56 ಈಗ ನಾವು ಎರಡು ರೆಸಿಸ್ಟರ್-ಗಳನ್ನು ಜೋಡಿಸಲಿದ್ದೇವೆ.
08.58 ರೆಸಿಸ್ಟರ್-ಗಳ ಎರಡು ಬದಿಯ ನೋಡ್-ಗಳನ್ನು ಕ್ಲಿಕ್ ಮಾಡುವುದರ ಮೂಲಕ ವೈರ್ ಜೋಡಣೆ ಮಾಡಬೇಕು.
09.11 ಈಗ ನಾವು IC 555 ನ ಏಳನೆಯ ಪಿನ್ ಅನ್ನು ಎರಡು ರೆಸಿಸ್ಟರ್-ನ ವೈರ್ ಜೋಡಣೆಯಾಗುವಲ್ಲಿ ಜೋಡಿಸಬೇಕು.
09.18 IC 555 ನ ಏಳನೆಯ ಪಿನ್-ನ ಮೇಲೆ ಹಾಗೂ ಎರಡು ರೆಸಿಸ್ಟರ್-ನ ವೈರ್ ಜೋಡಣೆಯ ಮೇಲೆ ಕ್ಲಿಕ್ ಮಾಡಿ.
09.30 ಇದು ಸಹಜವಾಗಿ ಒಂದು ಜಂಕ್ಷನ್-ನಂತೆ ಸೃಷ್ಟಿಯಾಗಿ ನೋಡ್-ನ ಹಾಗೆ ಕಾಣುವುದನ್ನು ಗಮನಿಸಬೇಕು.
09.35 ನಾನೀಗಾಗಲೇ ಕಂಪೊನೆಂಟ್-ಗಳನ್ನು ಜೋಡಿಸಿದ್ದೇನೆ ಹಾಗೂ ರಕ್ಷಿಸಿದ್ದೇನೆ.
09.39 ಸಮಯವನ್ನು ರಕ್ಷಿಸಲು ನಾನು ಈಗಾಗಲೇ ತಯಾರಿಸಿದ ಸ್ಕಿಮಾಟಿಕ್ ಅನ್ನು ತೆರೆದು ಉಪಯೋಗಿಸುತ್ತೇನೆ.
09.44 ನಾನೀಗ file ಎಂಬಲ್ಲಿಗೆ ಹೋಗಿ Open ಅನ್ನು ಕ್ಲಿಕ್ ಮಾಡುತ್ತೇನೆ.
09.53 Confirmation (ಕನ್ಫರ್ಮೇಶನ್) ಎಂಬ ವಿಂಡೋ ತೆರೆಯುತ್ತದೆ. Yes ಕ್ಲಿಕ್ ಮಾಡಿ.
10.04 ನಾನು ಡೈರೆಕ್ಟರಿಯಲ್ಲಿರುವ project1.sch (ಪ್ರೊಜೆಕ್ಟ್ ೧ ಡಾಟ್ ಎಸ್ ಸೀ ಎಚ್) ಅನ್ನು ಆಯ್ದುಕೊಳ್ಳುತ್ತೇನೆ.
10.18 ಮೊದಲು ನಾನೀಗ ಈ ಪರದೆಯ ಆಕೃತಿಯನ್ನು ಬದಲಿಸುತ್ತೇನೆ.
10.22 ಹಾಗೂ ನಂತರ ನಾನು Open ಅನ್ನು ಕ್ಲಿಕ್ ಮಾಡುತ್ತೇನೆ.
10.29 ನಾನು Open ಅನ್ನು ಕ್ಲಿಕ್ ಮಾಡುತ್ತೇನೆ.
10.33 ಹಿಂದೆ ನಾವು ತಯಾರಿಸಿದ ಸ್ಕಿಮಾಟಿಕ್ ಇಲ್ಲಿದೆ.
10.36 ನಾವೀಗ ಕಂಪೊನೆಂಟ್-ಗಳನ್ನು ಹೇಗೆ ಆನೊಟೇಟ್ ಮಾಡುವುದೆಂದು ನೋಡೋಣ.
10.39 ಆನೊಟೇಷನ್ ಕಂಪೊನೆಂಟ್-ಗೆ ವಿಭಿನ್ನವಾದ ಗುರುತನ್ನು ಕೊಡುತ್ತದೆ.
10.43 ಆನೊಟೇಟಿಂಗ್-ನಿಂದಾಗಿ ಕಂಪೊನೆಂಟ್-ನ ಪ್ರಶ್ನಾರ್ಥಕ ಚಿಹ್ನೆಗಳ ಸ್ಥಾನದಲ್ಲಿ ವಿಭಿನ್ನವಾದ ಸಂಖ್ಯೆಗಳು ಬರುತ್ತವೆ.
10.50 EESchema ದ ಮೇಲಿನ ಪಾನಲ್-ನಲ್ಲಿ Annotate schematic (ಅನೋಟೇಟ್ ಸ್ಕೀಮಾಟಿಕ್) ಬಟನ್ ಕ್ಲಿಕ್ ಮಾಡಿ.
10.58 ಇದು Annotate Schematic ವಿಂಡೋವನ್ನು ತೆರೆಯುತ್ತದೆ.
11.02 ಈ ವಿಂಡೋದಲ್ಲಿ ಕನ್ಫಿಗರೇಷನ್ ಇದ್ದ ಹಾಗೇ ಇರಲಿ.
11.05 Annotation ಬಟನ್ ಕ್ಲಿಕ್ ಮಾಡಿ.
11.09 ಆನೊಟೇಟ್ ಮಾಡಿಲ್ಲದ ಕಂಪೊನೆಂಟ್-ಗಳನ್ನು ಮಾತ್ರ ಇದು ಆನೊಟೆಟ್ ಮಾಡುವುದೆಂದು ಇದು ನಿಮ್ಮನ್ನು ಎಚ್ಚರಿಸುತ್ತದೆ.
11.13 OK ಕ್ಲಿಕ್ ಮಾಡಿ.
11.15 Annotate schematic ವಿಂಡೋನಲ್ಲಿ Close ಬಟನ್ ಕ್ಲಿಕ್ ಮಾಡಿ.
11.20 ಕಂಪೊನೆಂಟ್-ನ ಪ್ರಶ್ನಾರ್ಥಕ ಚಿಹ್ನೆಗಳ ಸ್ಥಾನದಲ್ಲಿ ವಿಭಿನ್ನವಾದ ಸಂಖ್ಯೆಗಳು ಬಂದಿರುವುದನ್ನು ಗಮನಿಸಿ.
11.30 File ಕ್ಲಿಕ್ ಮಾಡಿ
11.37 ಹಾಗೂ ಈ ಸ್ಕಿಮಾಟಿಕ್ ಅನ್ನು ರಕ್ಷಿಸಲು Save whole schematic project (ಸೇವ್ ಹೋಲ್ ಸ್ಕೀಮಾಟಿಕ್ ಪ್ರೊಜೆಕ್ಟ್) ಎಂದು ಆಯ್ದುಕೊಳ್ಳಿ.
11.43 File ಕ್ಲಿಕ್ ಮಾಡಿ ಹಾಗೂ Quit ಆಯ್ದುಕೊಳ್ಳಿ.
11.48 ಇದು EESchema ಪರದೆಯನ್ನು ಮುಚ್ಚುತ್ತದೆ.
11.50 ಈಗ ಕೀಕ್ಯಾಡ್-ನ ಮುಖ್ಯ ಪರದೆಗೆ ಹೋಗಿ.
11.53 File ಕ್ಲಿಕ್ ಮಾಡಿ ಹಾಗೂ Quit ಆಯ್ದುಕೊಳ್ಳಿ.
11.56 ಇಲ್ಲಿಗೆ ಕೀಕ್ಯಾಡ್ನ creating circuit schematic (ಕ್ರಿಯೇಟಿಂಗ್ ಸರ್ಕಿಟ್ ಸ್ಕೀಮಾಟಿಕ್) ನ ಟ್ಯುಟೋರಿಯಲ್ ಸಂಪೂರ್ಣಗೊಳ್ಳುತ್ತದೆ.
12.01 ನಾವೀಗ ಈ ಟ್ಯುಟೋರಿಯಲ್-ನಲ್ಲಿ ಕಲಿತಿದ್ದೇನೆಂದು ಅವಲೋಕಿಸೋಣ.
12.05 ಈ ಟ್ಯುಟೋರಿಯಲ್-ನಲ್ಲಿ ಕಲಿತಿದ್ದೇನೆಂದರೆ,
12.07 ಕೀಕ್ಯಾಡ್ ನಲ್ಲಿ ಸರ್ಕಿಟ್ ಸ್ಕೀಮಾಟಿಕ್ ಅನ್ನು ರಚಿಸಲು EESchema ಅನ್ನು ಹೇಗೆ ಉಪಯೋಗಿಸುವುದು,
12.11 ಹಾಗೂ ಸರ್ಕ್ಯೂಟ್ ಸ್ಕಿಮಾಟಿಕ್-ನ ಆನೊಟೇಷನ್.
12.15 ಇಲ್ಲಿ ಹೇಳಿದ ಎಸೈನ್ಮೆಂಟ್ ಅನ್ನು ಮಾಡಿ ನೋಡಿ,
12.17 component selection ವಿಂಡೋವನ್ನು ಉಪಯೋಗಿಸಿ EESchema ದಲ್ಲಿ ಇಂಡಕ್ಟರ್ ಕಂಪೊನೆಂಟ್ ಅನ್ನು ಇಡಿ.
12.24 ಶಾರ್ಟ್-ಕಟ್ ಕೀಗಳಾದ a, x ಹಾಗೂ y ಗಳನ್ನು ಹುಡುಕಿ.
12.31 ಕೆಳಗಿರುವ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ.
12.35 ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ.
12.37 ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ.
12.43 ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.
12.48 ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
12.52 ಹೆಚ್ಚಿನ ಮಾಹಿತಿಗಾಗಿ, spoken hyphen tutorial dot org ಅನ್ನು ಸಂಪರ್ಕಿಸಿ
12.59 ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
13.03 ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
13.09 ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
13.20 ಈ ಪಾಠದ ಅನುವಾದಕ ಬೆಂಗಳೂರಿನಿಂದ ಜ್ಞಾನೇಶ ಮರಾಠೆ ಮತ್ತು ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ.

ಧನ್ಯವಾದಗಳು.

Contributors and Content Editors

PoojaMoolya, Vasudeva ahitanal