KTurtle/C2/Introduction-to-KTurtle/Kannada

From Script | Spoken-Tutorial
Jump to: navigation, search
Time Narration
00:01 ಎಲ್ಲರಿಗೂ ನಮಸ್ಕಾರ. Introduction to KTurtle ಎಂಬ ಈ ಟ್ಯುಟೋರಿಯಲ್-ಗೆ ಸ್ವಾಗತ.
00:07 ಈ ಟ್ಯುಟೋರಿಯಲ್- ನಲ್ಲಿ, ನಾನು ನಿಮಗೆ KTurtle ಆರಂಭಿಸಲು ಬೇಕಾದ ಪ್ರಾಥಮಿಕ ಪರಿಚಯವನ್ನು ಮಾಡಿಕೊಡುತ್ತೇನೆ.
00:14 ಈ ಟ್ಯುಟೋರಿಯಲ್- ನಲ್ಲಿ ನಾವು,
00:17 KTurtle ವಿಂಡೋ
00:19 Editor , Canvas
00:21 Menu Bar, ಮತ್ತು Toolbar ಗಳನ್ನು ಕಲಿಯಲಿದ್ದೇವೆ.
00:24 ನಾವು,
00:26 Turtle ನ ಚಾಲನೆ (moving)
00:28 ರೇಖೆಗಳನ್ನು ಚಿತ್ರಿಸುವುದು ಹಾಗೂ ದಿಕ್ಕುಗಳ ಬದಲಾವಣೆ ಮತ್ತು
00:32 ತ್ರಿಭುಜವನ್ನು ರಚಿಸುವುದು ಇತ್ಯಾದಿಗಳ ಬಗ್ಗೆಯೂ ಕಲಿಯಲಿದ್ದೇವೆ.
00:34 ಈ ಟ್ಯುಟೋರಿಯಲ್-ನಲ್ಲಿ ನಾನು,

ಉಬಂಟು ಲಿನಕ್ಸ್ OS ನ 12.04 ನೇ ಆವೃತ್ತಿಯನ್ನು ಮತ್ತು KTurtle 0.8.1 ಬೀಟಾ ಎಂಬ ಆವೃತ್ತಿಯನ್ನು ಉಪಯೋಗಿಸುತ್ತಿದ್ದೇನೆ.

00:47 KTurtle ಎಂದರೇನು ?
00:49 KTurtle ಎಂಬುದು ಪ್ರಾಥಮಿಕ ಪ್ರೋಗ್ರಾಮಿಂಗ್ ಅನ್ನು ಕಲಿಯಲಿರುವ ಉಚಿತ ಸಾಧನವಾಗಿದೆ.
00:53 ಇದು ಕಂಪ್ಯೂಟರ್ ನ ಸಹಾಯದಿಂದ interactive ಕಲಿಕೆಗೆ ಉಪಯುಕ್ತವಾಗಿದೆ.
00:59 KTurtle ಅನ್ನು ಈ ಲಿಂಕ್-ನಲ್ಲಿ ಡೌನ್-ಲೋಡ್ ಮಾಡಬಹುದು: http://edu.kde.org/kturtle/
01:12 'KTurtle' ಎನ್ನುವುದು ಪ್ರೋಗ್ರಾಮಿಂಗ್ ಅನ್ನು ಸರಳ ಮತ್ತು ಸುಲಭ ಸಾಧ್ಯವಾಗಿಸುತ್ತದೆ.
01:18 * ಮಕ್ಕಳಿಗೆ ಗಣಿತದ ಪ್ರಾಥಮಿಕ ಪಾಠ ಮಾಡಲು ಸಹಾಯ ಮಾಡುತ್ತದೆ.
01:22 ಕಮಾಂಡ್-ಗಳನ್ನು ಪ್ರೋಗ್ರಾಮರ್-ನ ಆಡುಭಾಷೆಗೆ ಅನುವಾದಿಸುತ್ತದೆ.
01:27 * ಕಮಾಂಡ್-ಗಳನ್ನು ದೃಶ್ಯಗಳನ್ನಾಗಿ ಅನುವಾದಿಸುತ್ತದೆ.
01:31 ನಾವು Synaptic Package Manager ಅನ್ನು ಉಪಯೋಗಿಸಿ KTurtle ಅನ್ನು ಇನ್ಸ್ಟಾಲ್( install) ಮಾಡಬಹುದು.
01:36 Synaptic Package Manager ನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ,
01:40 ದಯವಿಟ್ಟು ನಮ್ಮ ಈ ವೆಬ್-ಸೈಟ್ ನಲ್ಲಿರುವ Ubuntu Linux ಟ್ಯುಟೋರಿಯಲ್-ಗಳನ್ನು ನೋಡಿ: http://spoken-tutorial.org
01:46 ಒಂದು ಹೊಸ KTurtle ನ ಅಪ್ಲಿಕೇಶನ್ ಅನ್ನು ತೆರೆಯೋಣ.
01:50 Dash home ನ ಮೇಲೆ ಕ್ಲಿಕ್ ಮಾಡಿ.
01:52 ಸರ್ಚ್ ಬಾರ್ ನಲ್ಲಿ, KTurtle ಎಂದು ಟೈಪ್ ಮಾಡಿ.
01:55 ಮತ್ತು KTurtle ನ ಐಕಾನ್ ನ ಮೇಲೆ ಕ್ಲಿಕ್ ಮಾಡಿ.
01:59 ಒಂದು ವಿಶಿಷ್ಟವಾದ KTurtle window ಹೀಗೆ ಕಾಣಿಸುತ್ತದೆ.
02:02 ಇದು Menu-bar ಆಗಿದೆ.
02:04 ಮೆನು ಬಾರ್ ನ, ಮೇಲ್ಭಾಗದಲ್ಲಿ,
02:06 ನಿಮಗೆ ಈ ಮೆನು ಐಟಮ್ಸ್ ಕಾಣಿಸುತ್ತವೆ-
02:08 File, Edit, Canvas, Run, Tools, Settings ಮತ್ತು Help ಆಯ್ಕೆಗಳು.
02:17 ಟೂಲ್ ಬಾರ್ ನಲ್ಲಿ, ನೀವು ಬಹಳವಾಗಿ ಉಪಯೋಗಿಸಲ್ಪಡುವ ಕಾರ್ಯಗಳನ್ನು ಪಡೆಯಬಹುದು.
02:23 Editor ಎಡಭಾಗದಲ್ಲಿದೆ. ಇಲ್ಲಿ ನೀವು TurtleScript ನ ಕಮಾಂಡ್ ಗಳನ್ನು ಟೈಪ್ ಮಾಡಬಹುದು.
02:30 ಎಡಿಟರ್ ನ ಬಹಳಷ್ಟು functionಗಳು File ಮತ್ತು Edit ಮೆನುಗಳಲ್ಲಿ ಕಾಣಸಿಗುತ್ತವೆ.
02:37 ಎಡಿಟರ್ ನಲ್ಲಿ ಕೋಡ್ ಅನ್ನು ನಮೂದಿಸಲು ಬಹಳಷ್ಟು ಮಾರ್ಗಗಳಿವೆ.
02:42 ಬಹಳ ಸರಳವಾದ ಮಾರ್ಗವೆಂದರೆ ಉದಾಹರಣೆಯನ್ನು ಉಪಯೋಗಿಸುವುದು.
02:46 File ಮೆನು ಗೆ ಹೋಗಿ > Examples ಅನ್ನು ಆರಿಸಿ.
02:50 ಇಲ್ಲಿ ನಾನು flower ಅನ್ನು ಆಯ್ಕೆ ಮಾಡುತ್ತೇನೆ.
02:53 ಆಯ್ಕೆ ಮಾಡಿದ ಉದಾಹರಣೆಯ ಕೋಡ್, ಎಡಿಟರ್ ನಲ್ಲಿ ತೆರೆದುಕೊಳ್ಳುತ್ತದೆ.
02:58 ಕೋಡ್ ರನ್ ಮಾಡಲು Menu bar ಅಥವಾ Tool barನಲ್ಲಿಯ ರನ್ ಬಟನ್ ನ ಮೇಲೆ ಕ್ಲಿಕ್ ಮಾಡಿ.
03:04 ಇನ್ನೊಂದು ವಿಧಾನವೆಂದರೆ, ನೇರವಾಗಿ ಎಡಿಟರ್ ನಲ್ಲಿ ನಿಮ್ಮ ಸ್ವಂತ ಕೋಡ್ ಅನ್ನು ಬರೆಯುವುದು.
03:10 ಅಥವಾ ಯಾವುದಾದರೂ ಕೋಡ್ ಅನ್ನು ಎಡಿಟರ್ ನಲ್ಲಿ copy/paste ಮಾಡುವುದು.
03:13 ಉದಾಹರಣೆಗೆ, ಬೇರೆ KTurtle ಫೈಲ್ ಗಳಿಂದ.
03:18 ಕ್ಯಾನ್ವಾಸ್ ಬಲಭಾಗದಲ್ಲಿದೆ. ಇಲ್ಲಿ Turtle ನಿಮ್ಮ ಚಿತ್ರಗಳನ್ನು ರಚಿಸುತ್ತದೆ.
03:24 Turtle, ತನಗೆ ಎಡಿಟರ್ ನಲ್ಲಿ ಸಿಕ್ಕಿರುವ ಕಮಾಂಡ್ ಗಳಿಗನುಗುಣವಾಗಿ, ಕ್ಯಾನ್ವಾಸ್ ನಲ್ಲಿ ರಚನೆಯನ್ನು ಮಾಡುತ್ತದೆ.
03:32 ಟೂಲ್ ಬಾರ್ ನಲ್ಲಿನ Run ಆಯ್ಕೆಯು, ಎಡಿಟರ್ ನಲ್ಲಿಯ ಕಮಾಂಡ್ ಗಳ ಎಕ್ಸಿಕ್ಯೂಶನ್ ಅನ್ನು ಆರಂಭಿಸುತ್ತದೆ.
03:39 ಇದು ಎಕ್ಸಿಕ್ಯೂಶನ್ ವೇಗಗಳ ಒಂದು ಪಟ್ಟಿಯನ್ನು ಪ್ರಸ್ತುತಪಡಿಸುತ್ತದೆ.
03:43 Full speed (No highlighting and inspector),
03:46 Full speed,
03:48 Slow, Slower,
03:51 Slowest ಮತ್ತು Step-by-Step.
03:55 Abort ಮತ್ತು Pause ಆಯ್ಕೆಗಳು ನಿಮಗೆ ಕ್ರಮವಾಗಿ ಎಕ್ಸಿಕ್ಯೂಶನ್ ಅನ್ನು ನಿಲ್ಲಿಸಲು ಮತ್ತು ಪಾಸ್ ಮಾಡಲು ಅನುಮತಿಸುತ್ತವೆ.
04:03 ಈಗ, ಈ ಕೋಡ್ ಅನ್ನು ರನ್ ಮಾಡೋಣ.
04:06 ಕ್ಯಾನ್ವಾಸ್ ನಲ್ಲಿ Turtle ಒಂದು ಹೂವನ್ನು ಚಿತ್ರಿಸುತ್ತದೆ.
04:11 ನೀವು ಹೊಸ KTurtle ಅಪ್ಲಿಕೇಶನ್ ಅನ್ನು ತೆರೆದಾಗ,
04:15 ಡಿಫಾಲ್ಟ್ ಆಗಿ Turtle ಕ್ಯಾನ್ವಾಸ್ ನ ಮಧ್ಯದಲ್ಲಿ ಇರುತ್ತದೆ.
04:19 ಈಗ ನಾವು Turtle ನ ಸ್ಥಳ ಬದಲಾವಣೆ ಮಾಡೋಣ.
04:22 Turtle ಮೂರು ರೀತಿಯ ಚಲನೆಗಳನ್ನು ಮಾಡಬಲ್ಲದು.
04:25 ಇದು ಮುಂದೆ ಅಥವಾ ಹಿಂದೆ ಚಲಿಸಬಲ್ಲದು.
04:29 ಇದು ಎಡಕ್ಕೆ ಅಥವಾ ಬಲಕ್ಕೆ ಚಲಿಸಬಲ್ಲದು.
04:32 ಇದು ಪರದೆಯಲ್ಲಿನ ಯಾವುದಾದರೂ ಸ್ಥಳಕ್ಕೆ ನೇರವಾಗಿ ಜಿಗಿಯಬಲ್ಲದು.
04:38 ಈಗ ನಾನು ಪ್ರೋಗ್ರಾಮ್ ಟೆಕ್ಸ್ಟ್ ಅನ್ನು ಝೂಮ್ ಮಾಡುತ್ತೇನೆ, ಅದು ಬಹುಶಃ ಸ್ವಲ್ಪ ಅಸ್ಪಷ್ಟವಾಗಿರಬಹುದು.
04:44 ಒಂದು ಸರಳವಾದ ಉದಾಹರಣೆಯನ್ನು ನೋಡೋಣ.
04:48 ನಿಮ್ಮ ಎಡಿಟರ್ ನಲ್ಲಿ, ಈ ಮುಂದಿನ ಕಮಾಂಡ್ ಗಳನ್ನು ಬರೆಯಿರಿ:
04:52 reset
04:55 forward 100
04:58 turnright 120
05:02 forward 100
05:07 turnright 120
05:11 forward 100
05:15 turnright 120
05:18 ನಾವು ಬರೆಯುತ್ತಿರುವಂತೆ ಕೋಡ್ ನ ಬಣ್ಣ ಬದಲಾಗುವುದನ್ನು ಗಮನಿಸಿ.
05:23 ಈ ಲಕ್ಷಣವನ್ನು highlighting ಎಂದು ಕರೆಯುತ್ತಾರೆ.
05:26 ಬೇರೆ ಬೇರೆ ವಿಧದ ಕಮಾಂಡ್ ಗಳು ಬೇರೆ ಬೇರೆ ರೀತಿಯಲ್ಲಿ ಹೈಲೈಟ್ ಮಾಡಲ್ಪಟ್ಟಿವೆ.
05:31 ಇದು, ಕೋಡ್ ನ ದೊಡ್ಡ ಬ್ಲಾಕ್ ಗಳ ಓದುವಿಕೆಯನ್ನು ಸುಲಭವಾಗಿಸುತ್ತದೆ.
05:36 ಈಗ ನಾನು ಕೋಡ್ಗಳನ್ನು ಅನ್ನು ವಿವರಿಸುತ್ತೇನೆ.
05:38 reset ಕಮಾಂಡ್, Turtle ಅನ್ನು ಡಿಫಾಲ್ಟ್ ಸ್ಥಿತಿಯಲ್ಲಿ ಸೆಟ್ ಮಾಡುತ್ತದೆ.
05:42 forward 100 ಎನ್ನುವುದು Turtle ಗೆ 100 ಪಿಕ್ಸೆಲ್ ಗಳಷ್ಟು ಮುಂದೆ ಚಲಿಸುವಂತೆ ಆಜ್ಞಾಪಿಸುತ್ತದೆ.
05:49 turnright 120 ಎನ್ನುವುದು Turtle ಗೆ 120 ಡಿಗ್ರಿಗಳಷ್ಟು ಅಪ್ರದಕ್ಷಿಣವಾಗಿ ತಿರುಗಲು ಆಜ್ಞಾಪಿಸುತ್ತದೆ.
05:56 ಒಂದು ತ್ರಿಭುಜವನ್ನು ರಚಿಸಲು ಈ ಎರಡು ಕಮಾಂಡ್ ಗಳು ಮೂರುಬಾರಿ ಪುನರಾವರ್ತಿತವಾಗಿವೆ ಎಂಬುದನ್ನು ಗಮನಿಸಿ.
06:03 ಈಗ ಕೋಡ್ ಅನ್ನು ಎಕ್ಸಿಕ್ಯೂಟ್ ಮಾಡೋಣ.
06:06 ನಾನು Slow ಸ್ಟೆಪ್ ಅನ್ನು ಆಯ್ಕೆ ಮಾಡುತ್ತೇನೆ. ಇದರಿಂದ ನಾವು, ಯಾವ ಕಮಾಂಡ್ ಗಳು ಎಕ್ಸಿಕ್ಯೂಟ್ ಆಗುತ್ತಿವೆಯೆಂಬುದನ್ನು ಅರ್ಥ ಮಾಡಿಕೊಳ್ಳಬಹುದು.
06:16 ಇಲ್ಲಿ ತ್ರಿಭುಜವನ್ನು ರಚಿಸಲಾಗಿದೆ.
06:19 ಈಗ ಇನ್ನೊಂದು ಉದಾಹರಣೆಯನ್ನು ನೋಡೋಣ ಮತ್ತು ನಮ್ಮ ಕ್ಯಾನ್ವಾಸ್ ಅನ್ನು ಹೇಗೆ ಸುಂದರಗೊಳಿಸಬಹುದೆನ್ನುವುದನ್ನೂ ಕಲಿಯೋಣ.
06:26 ನಾವು repeat ಕಮಾಂಡ್ ಅನ್ನು ಬಳಸಿ ಒಂದು ತ್ರಿಭುಜವನ್ನು ರಚಿಸೋಣ.
06:30 ಈಗಿನ ಪ್ರೋಗ್ರಾಮ್ ಅನ್ನು ನಾನು ಅಳಿಸುತ್ತೇನೆ.
06:33 ನಾನು ಸ್ಪಷ್ಟವೀಕ್ಷಣೆಗಾಗಿ ಪ್ರೋಗ್ರಾಮ್ ಟೆಕ್ಸ್ಟ್ ಅನ್ನುಝೂಮ್ ಮಾಡುತ್ತೇನೆ.
06:38 ನಿಮ್ಮ ಎಡಿಟರ್ ನಲ್ಲಿ ಈ ಕಮಾಂಡ್ ಗಳನ್ನು ಬರೆಯಿರಿ :
06:41 reset
06:44 canvassize space 200, 200
06:51 canvascolor space 0, 255, 0
07:00 pencolor space 0, 0, 255
07:08 penwidth space 2
07:12 repeat space 3 ಕರ್ಲೀ ಬ್ರಾಕೆಟ್ಸ್ ನಲ್ಲಿ {
07:19 forward 100
07:23 turnleft 120 }
07:27 ಈಗ ನಾನು ನಿಮಗೆ ಕೋಡ್ ಅನ್ನು ವಿವರಿಸುತ್ತೇನೆ.
07:30 reset ಕಮಾಂಡ್ Turtle ಅನ್ನು ಅದರ ಡಿಫಾಲ್ಟ್ ಸ್ಥಿತಿಯಲ್ಲಿ ಸೆಟ್ ಮಾಡುತ್ತದೆ.
07:34 canvassize 200, 200 ಇದು ಕ್ಯಾನ್ವಾಸ್ ನ ಅಗಲ ಮತ್ತು ಎತ್ತರಗಳನ್ನು 200 ಪಿಕ್ಸೆಲ್ ಗಳಾಗಿ ಸೆಟ್ ಮಾಡುತ್ತದೆ.
07:42 canvascolor 0, 255, 0 ಇದು ಕ್ಯಾನ್ವಾಸನ್ನು ಹಸಿರಾಗಿಸುತ್ತದೆ.
07:48 0, 255 ,0 ಇದೊಂದು RGB ಸಂಯೋಜನೆಯಾಗಿದೆ. ಇಲ್ಲಿ ಗ್ರೀನ್ ವ್ಯಾಲ್ಯೂವನ್ನು ಮಾತ್ರ 255 ಕ್ಕೆ, ಬೇರೆಯವನ್ನು 0 ಗೆ ಸೆಟ್ ಮಾಡಲಾಗಿದೆ.
08:03 ಇದು ಕ್ಯಾನ್ವಾಸನ್ನು ಹಸಿರು ಬಣ್ಣದ್ದನ್ನಾಗಿ ಮಾಡುತ್ತದೆ.
08:07 pencolor 0, 0, 255 ಪೆನ್ ನ ಬಣ್ಣವನ್ನು ನೀಲಿಯಾಗಿ ಸೆಟ್ ಮಾಡುತ್ತದೆ.
08:14 RGB ಸಂಯೋಜನೆಯಲ್ಲಿ ಬ್ಲೂ ವ್ಯಾಲ್ಯೂ 255 ಎಂದು ಸೆಟ್ ಆಗಿದೆ.
08:20 penwidth 2 ಇದು ಪೆನ್ ನ ಅಗಲವನ್ನು 2 ಪಿಕ್ಸೆಲ್ ಗಳಾಗಿ ಸೆಟ್ ಮಾಡುತ್ತದೆ.
08:27 repeat ಕಮಾಂಡ್ ನ ಅನಂತರ ಒಂದು ಸಂಖ್ಯೆ ಹಾಗೂ ಕರ್ಲೀ ಬ್ರಾಕೆಟ್ಸ್ ನ ಒಳಗೆ ಕಮಾಂಡ್ ಗಳ ಒಂದು ಪಟ್ಟಿ ಇವೆ.
08:33 ಇದು ಪುಷ್ಪಾವರಣದಲ್ಲಿ (ಕರ್ಲೀ ಬ್ರಾಕೆಟ್ಸ್ ಒಳಗೆ) ಕೊಟ್ಟಿರುವ ಕಮಾಂಡ್ ಗಳನ್ನು ಸಂಖ್ಯೆಯ ಮೂಲಕ ಸೂಚಿಸಿರುವಷ್ಟು ಸಲ ಪುನರಾವರ್ತಿಸುತ್ತದೆ.
08:39 ಇಲ್ಲಿ forward 100 ಮತ್ತು turnleft 120 ಕಮಾಂಡ್ ಗಳು ಕರ್ಲಿ ಬ್ರಾಕೆಟ್ ನ ಒಳಗಿವೆ.
08:47- repeat ಕಮಾಂಡ್ ನ ಅನಂತರ ಸಂಖ್ಯೆ 3 ಇದೆ. ಏಕೆಂದರೆ ಒಂದು ತ್ರಿಕೋನವು ಮೂರು ಭುಜಗಳನ್ನು ಹೊಂದಿದೆ.
08:54 ಈ ಕಮಾಂಡ್ ಗಳನ್ನು loop ನಲ್ಲಿ ಮೂರು ಬಾರಿ ರನ್ ಮಾಡಲಾಗುತ್ತದೆ.
08:59 ಹೀಗೆ ತ್ರಿಭುಜದ 3 ಭುಜಗಳನ್ನು ರಚಿಸಲಾಗಿದೆ.
09:02 ಈಗ ಕೋಡ್ ಅನ್ನು ರನ್ ಮಾಡೋಣ.
09:05 ನಾನು ಪ್ರೋಗ್ರಾಮ್ ಎಕ್ಸಿಕ್ಯೂಟ್ ಮಾಡಲು slow ಆಯ್ಕೆಯನ್ನು ಉಪಯೋಗಿಸುವೆನು.
09:09 ಕ್ಯಾನ್ವಾಸ್ ನ ಬಣ್ಣ ಹಸಿರಾಗುತ್ತದೆ. ಮತ್ತು Turtle ತ್ರಿಭುಜವನ್ನು ರಚಿಸುತ್ತದೆ.
09:20 ಈಗ ಫೈಲನ್ನು ಸೇವ್ ಮಾಡೋಣ.
09:23 File ಮೆನುವಿನಲ್ಲಿ Save As ಅನ್ನು ಆಯ್ಕೆ ಮಾಡಿ.
09:27 Save As ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
09:30 ನಾನು ಫೈಲ್ ಅನ್ನು ಸೇವ್ ಮಾಡಲು Document ಫೋಲ್ಡರ್ ಅನ್ನು ಆರಿಸುತ್ತೇನೆ.
09:34 ನಾನು ಫೈಲ್ ಹೆಸರನ್ನು "Triangle" ಎಂದು ಟೈಪ್ ಮಾಡುತ್ತೇನೆ. ಮತ್ತು Save ಬಟನ್ ನ ಮೇಲೆ ಕ್ಲಿಕ್ ಮಾಡುತ್ತೇನೆ.
09:41 ಫೈಲ್ ನ ಹೆಸರು ಮೇಲಿನ ಫಲಕದಲ್ಲಿ ಕಾಣಿಸಿಕೊಳ್ಳುತ್ತದೆಂಬುದನ್ನು ಗಮನಿಸಿ. ಮತ್ತು ಇದು ಎಲ್ಲಾ Turtle ಫೈಲ್ ಗಳಂತೆ ಒಂದು dot turtle ಫೈಲ್ ಆಗಿ ಸೇವ್ ಆಗಿದೆ.
09:53 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯ ಹಂತಕ್ಕೆ ಬಂದಿದ್ದೇವೆ.
09:57 ಸಂಕ್ಷೇಪವಾಗಿ,
09:59 ಈ ಟ್ಯುಟೋರಿಯಲ್ ನಲ್ಲಿ ನಾವು:
10:02 KTurtle ನ ಎಡಿಟರ್, ಕ್ಯಾನ್ವಾಸ್, ಮೆನು ಬಾರ್ ಮತ್ತು ಟೂಲ್ ಬಾರ್,
10:07 Turtle ನ ಚಾಲನೆ (moving)
10:09 ರೇಖೆಗಳನ್ನೆಳೆಯುವುದು ಹಾಗೂ ದಿಕ್ಕುಗಳ ಬದಲಾವಣೆ ಮತ್ತು
10:13 ತ್ರಿಭುಜವನ್ನು ರಚಿಸುವುದನ್ನು ಕಲಿತಿದ್ದೇವೆ.
10:15 ಅಸೈನ್- ಮೆಂಟ್ ಗಾಗಿ, ನೀವು *forward, backward, turnleft, turnright ಮತ್ತು repeat ಕಮಾಂಡ್ ಗಳನ್ನು ಉಪಯೋಗಿಸಿ ಒಂದು ಚತುರ್ಭುಜಾಕೃತಿಯನ್ನು ರಚಿಸಿ,
10:26 ನಿಮ್ಮಿಷ್ಟದ background color, penwidth ಮತ್ತು pencolor ಗಳನ್ನು ಸೆಟ್ ಮಾಡಿ ಹಾಗೂ,
10:32 RGB ಸಂಯೋಜನೆಯ ವ್ಯಾಲ್ಯೂಗಳನ್ನು ಬದಲಿಸಿ.
10:37 ಈ URLನಲ್ಲಿ ಸಿಗುವ ವಿಡಿಯೋ-ಅನ್ನು ನೋಡಿ. http://spoken-tutorial.org/What_is_a_Spoken-Tutorial
10:40 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ತಿಳಿಸುತ್ತದೆ.
10:44 ಒಂದು ವೇಳೆ ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್-ವಿಡ್ತ್ ಇಲ್ಲದಿದ್ದಲ್ಲಿ, ನೀವು ಡೌನ್-ಲೋಡ್ ಮಾಡಿ ನೋಡಬಹುದು.
10:48 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟೀಮ್ :
10:50 ಸ್ಪೋಕನ್ ಟ್ಯುಟೋರಿಯಲ್-ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ನಡೆಸುತ್ತದೆ.
10:53 *ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
10:56 ಹೆಚ್ಚಿನ ವಿವರಣೆಗಾಗಿ, contact@spoken-tutorial.org ಗೆ ಬರೆಯಿರಿ.
11:03 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗವಾಗಿದೆ.
11:08 ಇದು ಭಾರತ ಸರ್ಕಾರದ MHRDಯ ICTಮಾಧ್ಯಮದ ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್-ನಿಂದ ಸಮರ್ಥಿತವಾಗಿದೆ.
11:15 ಈ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ಈ ಲಿಂಕ್-ನಲ್ಲಿ ಸಿಗುತ್ತದೆ - http://spoken-tutorial.org/NMEICT-Intro ].
11:20 ಈ ಸ್ಕ್ರಿಪ್ಟ್ IT for Change Bangaluru ಇವರ ಕೊಡುಗೆಯಾಗಿದೆ.
11:24 ಈ ಸ್ಕ್ರಿಪ್ಟ್ ನ ಅನುವಾದಕಿ ಬೆಂಗಳೂರಿನಿಂದ ನಾಗರತ್ನಾ ಹೆಗಡೆ ಹಾಗೂ ಇದರ ಪ್ರವಾಚಕ ಐ ಐ ಟಿ ಬಾಂಬೆ ಇಂದ ವಾಸುದೇವ.ಧನ್ಯವಾದಗಳು.

Contributors and Content Editors

NHegde, PoojaMoolya, Pratik kamble, Vasudeva ahitanal