Jmol-Application/C3/Surfaces-and-Orbitals/Kannada
From Script | Spoken-Tutorial
|
|
---|---|
00:01 | Jmol Application (ಜೆ-ಮೊಲ್ ಅಪ್ಲಿಕೇಶನ್) ನಲ್ಲಿ, Surfaces and Orbitals (ಸರ್ಫೇಸಸ್ ಆಂಡ್ ಆರ್ಬಿಟಲ್ಸ್) ಎಂಬ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ, ನಾವು: |
00:10 | 'Alicyclic' (ಅಲಿಸೈಕ್ಲಿಕ್) ಹಾಗೂ 'Aromatic' (ಆರೋಮ್ಯಾಟಿಕ್) ಅಣುಗಳ ಮಾಡೆಲ್ ಗಳನ್ನು ರಚಿಸುವುದು |
00:14 | ಅಣುಗಳ ವಿವಿಧ ಮೇಲ್ಮೈಗಳನ್ನು ಪ್ರದರ್ಶಿಸುವುದು |
00:18 | ಅಟೊಮಿಕ್ ಮತ್ತು ಮೊಲೆಕ್ಯೂಲರ್ ಆರ್ಬಿಟಾಲ್ ಗಳನ್ನು ಪ್ರದರ್ಶಿಸುವುದು ಇತ್ಯಾದಿಗಳನ್ನು ಕಲಿಯುವೆವು. |
00:22 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು ಜೆ-ಮೊಲ್ ಅಪ್ಲಿಕೇಶನ್ ನಲ್ಲಿ ಮೊಲೆಕ್ಯುಲರ್ ಮಾಡೆಲ್ ಗಳನ್ನು ರಚಿಸುವುದನ್ನು ಮತ್ತು ಎಡಿಟ್ ಮಾಡುವುದನ್ನು ತಿಳಿದಿರಬೇಕು. |
00:29 | ಇಲ್ಲದಿದ್ದರೆ, ಸಂಬಂಧಪಟ್ಟ ಟ್ಯುಟೋರಿಯಲ್ ಗಳನ್ನು ನಮ್ಮ ವೆಬ್ಸೈಟ್ ನಲ್ಲಿ ನೋಡಿ. |
00:35 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು: |
00:38 | Ubuntu OS ಆವೃತ್ತಿ 12.04 |
00:42 | Jmol ಆವೃತ್ತಿ 12.2.2 ಹಾಗೂ |
00:45 | Java (JRE) ಆವೃತ್ತಿ 7 ಇವುಗಳನ್ನು ಬಳಸುತ್ತಿದ್ದೇನೆ. |
00:48 | ನಾನು ಒಂದು ಹೊಸ ‘ಜೆ-ಮೊಲ್ ಅಪ್ಲಿಕೇಶನ್’ ವಿಂಡೋಅನ್ನು ತೆರೆದಿದ್ದೇನೆ. |
00:52 | ಮೊದಲು, ‘ಸೈಕ್ಲೋಹೆಕ್ಸೇನ್’ನ ಒಂದು ಮಾಡೆಲ್ ಅನ್ನು ನಾವು ರಚಿಸೋಣ. |
00:56 | ಮಾಡೆಲ್-ಕಿಟ್ ಮೆನ್ಯುದ ಮೇಲೆ (modelkit menu) ಕ್ಲಿಕ್ ಮಾಡಿ. |
00:59 | ಪ್ಯಾನೆಲ್ ನ ಮೇಲೆ ಮೀಥೇನ್ ನ ಒಂದು ಮಾಡೆಲ್ ಕಾಣಿಸಿಕೊಳ್ಳುತ್ತದೆ. |
01:03 | ‘ಸೈಕ್ಲೋಹೆಕ್ಸೇನ್’ಅನ್ನು ರಚಿಸಲು, ನಾವು ಆರು ಕಾರ್ಬನ್ ಪರಮಾಣುಗಳ ಒಂದು ‘ಹೈಡ್ರೋಕಾರ್ಬನ್ ಚೈನ್’ಅನ್ನು ಮಾಡಬೇಕು. |
01:09 | ಮಾಡೆಲ್ ನಲ್ಲಿಯ ಹೈಡ್ರೋಜನ್ ಗೆ ಬದಲಾಗಿ ನಾವು 'ಮಿಥೈಲ್ ಗ್ರುಪ್'ಅನ್ನು ಸೇರಿಸುವೆವು. |
01:13 | ಹೀಗೆ ಮಾಡಲು, ನಾವು ಕರ್ಸರ್ ಅನ್ನು ಹೈಡ್ರೋಜನ್ ನ ಮೇಲೆ ಇರಿಸಿ ಅದರ ಮೇಲೆ ಕ್ಲಿಕ್ ಮಾಡುವೆವು. |
01:18 | ಸ್ಕ್ರೀನ್ ನ ಮೇಲಿರುವುದು ‘ಇಥೇನ್’ನ ಒಂದು ಮಾಡೆಲ್ ಆಗಿದೆ. |
01:21 | ಈ ಹಂತವನ್ನು ಇನ್ನೂ ಎರಡು ಸಲ ಪುನರಾವರ್ತಿಸಿ. ಮತ್ತು, ಒಂದು ಸಮಯದಲ್ಲಿ ಒಂದು ಹೈಡ್ರೋಜನ್ ಅನ್ನು ಒಂದು 'ಮಿಥೈಲ್ ಗ್ರುಪ್'ನಿಂದ ಬದಲಾಯಿಸಿ. |
01:28 | ರಚನೆಯು ಒಂದು ವರ್ತುಲದ ಹಾಗೆ ಆಗುವಂತೆ ಹೈಡ್ರೋಜನ್ ಗಳ ಮೇಲೆ ಕ್ಲಿಕ್ ಮಾಡಿ. |
01:33 | ಈಗ, ಸ್ಕ್ರೀನ್ ನ ಮೇಲಿನ ರಚನೆಯನ್ನು 'Rotate molecule' (ರೊಟೇಟ್ ಮೊಲೆಕ್ಯೂಲ್) ಎಂಬ ಟೂಲನ್ನು ಬಳಸಿ ತಿರುಗಿಸಿ (rotate). |
01:38 | ಪ್ಯಾನೆಲ್ ನ ಮೇಲಿರುವುದು 'ಬ್ಯುಟೇನ್'ನ ರಚನೆಯಾಗಿದೆ. |
01:41 | ಮಾಡೆಲ್-ಕಿಟ್ ಮೆನ್ಯುದ ಮೇಲೆ ಕ್ಲಿಕ್ ಮಾಡಿ. |
01:45 | ಚೈನ್ ನ ಕೊನೆಯಲ್ಲಿರುವ 'ಕಾರ್ಬನ್' ಪರಮಾಣುಗಳಲ್ಲಿ, ಯಾವುದೇ ಒಂದರ ಮೇಲಿರುವ ಹೈಡ್ರೋಜನ್ ನ ಮೇಲೆ ಕ್ಲಿಕ್ ಮಾಡಿ. |
01:52 | ಇಲ್ಲಿ, ಪ್ಯಾನೆಲ್ ನ ಮೇಲೆ 'ಪೆಂಟೇನ್'ನ ಒಂದು ಮಾಡೆಲ್ ಇದೆ. |
01:55 | 'ಕಾರ್ಬನ್' ಚೈನ್ ನ ಕೊನೆಗೆ ಹತ್ತಿರವಿರುವ ಹೈಡ್ರೋಜನ್ ಗಳಲ್ಲಿ, ಒಂದರ ಮೇಲೆ ಕ್ಲಿಕ್ ಮಾಡಿ. |
02:00 | ‘ಸೈಕ್ಲೋಹೆಕ್ಸೇನ್’ನ ಒಂದು ಮಾಡೆಲ್, ಪ್ಯಾನೆಲ್ ನ ಮೇಲೆ ರಚಿಸಲ್ಪಟ್ಟಿದೆ. |
02:04 | ರಚನೆಯನ್ನು ಅತ್ಯುತ್ತಮವಾಗಿಸಲು, ಮಾಡೆಲ್-ಕಿಟ್ ಮೆನ್ಯು ನಲ್ಲಿಯ 'minimize' ಎಂಬ ಆಯ್ಕೆಯನ್ನು ಬಳಸಿ. |
02:09 | ಈಗ, ‘ಸೈಕ್ಲೋಹೆಕ್ಸೇನ್’ನ ಮಾಡೆಲ್, ತನ್ನ ಅತ್ಯಂತ 'ಸ್ಟೇಬಲ್ “chair” ಕನ್ಫರ್ಮೇಶನ್'ನಲ್ಲಿದೆ. |
02:15 | ಪರ್ಯಾಯವಾಗಿ, 'ಸೈಕ್ಲಿಕ್ ಸ್ಟ್ರಕ್ಚರ್'ಗಳನ್ನು ರಚಿಸಲು, ನಾವು ಮಾಡೆಲ್-ಕಿಟ್ ಮೆನ್ಯುನಲ್ಲಿಯ 'Drag to bond' ಎಂಬ ಆಯ್ಕೆಯನ್ನು ಸಹ ಬಳಸಬಹುದು. |
02:24 | ಈ ವೈಶಿಷ್ಟ್ಯವನ್ನು ಮಾಡಿ ತೋರಿಸಲು, ನಾನು 'ಪೆಂಟೇನ್'ನ ಮಾಡೆಲ್ ಅನ್ನು ಬಳಸುವೆನು. |
02:29 | ಇದು, ಪ್ಯಾನೆಲ್ ನ ಮೇಲೆ 'ಪೆಂಟೇನ್'ನ ಮಾಡೆಲ್ ಆಗಿದೆ. |
02:32 | ಇದನ್ನು 'ಸೈಕ್ಲೋಪೆಂಟೇನ್'ಗೆ ಪರಿವರ್ತಿಸಲು, ಮಾಡೆಲ್-ಕಿಟ್ ಮೆನ್ಯುನಿಂದ 'Drag to bond' ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ. |
02:40 | ಚೈನ್ ನ ಒಂದು ಕೊನೆಯಲ್ಲಿ ಇರುವ ಕಾರ್ಬನ್ ನ ಮೇಲೆ ಕರ್ಸರನ್ನು ಇರಿಸಿ. |
02:45 | ಮೌಸ್ ಬಟನ್ ಅನ್ನು ಒತ್ತಿ ಹಿಡಿಯಿರಿ. |
02:47 | ಮೌಸ್ ಬಟನ್ ಅನ್ನು ಬಿಡದೆ, ಕರ್ಸರನ್ನು ಚೈನ್ ನ ಇನ್ನೊಂದು ಕೊನೆಯಲ್ಲಿ ಇರುವ ಕಾರ್ಬನ್ ನೆಡೆಗೆ ತನ್ನಿ. |
02:54 | ಈಗ ಮೌಸ್-ಬಟನ್ ಅನ್ನು ಬಿಡಿ. |
02:57 | ಪ್ಯಾನೆಲ್ ನ ಮೇಲೆ, ನಮ್ಮ ಹತ್ತಿರ 'ಸೈಕ್ಲೊಪೆಂಟೇನ್'ನ ಮಾಡೆಲ್ ಇದೆ. |
03:01 | ಈಗ, ನಾವು ‘ಸೈಕ್ಲೋಹೆಕ್ಸೇನ್’ನ ಮಾಡೆಲ್ ನೊಂದಿಗೆ 'Jmol ಪ್ಯಾನೆಲ್'ಗೆ ಹಿಂದಿರುಗೋಣ. |
03:06 | ನಾವು ಈಗ ‘ಸೈಕ್ಲೋಹೆಕ್ಸೇನ್’ಅನ್ನು 'ಬೆಂಜೀನ್' ರಿಂಗ್ ಗೆ ಪರಿವರ್ತಿಸೋಣ. |
03:10 | ‘ಸೈಕ್ಲೋಹೆಕ್ಸೇನ್’ ರಿಂಗ್ ನಲ್ಲಿ, ಒಂದು ಬಿಟ್ಟು ಮತ್ತೊಂದು ಸ್ಥಾನದಲ್ಲಿ (alternate) ನಾವು ಡಬಲ್-ಬಾಂಡ್ ಗಳನ್ನು ಸೇರಿಸಬೇಕು. |
03:16 | ಮಾಡೆಲ್-ಕಿಟ್ ಮೆನ್ಯುಅನ್ನು ಓಪನ್ ಮಾಡಿ. |
03:19 | ಯಾವುದೇ ಎರಡು 'ಕಾರ್ಬನ್' ಪರಮಾಣುಗಳ ನಡುವೆ, ಬಾಂಡ್ ನ ಮೇಲೆ ಕರ್ಸರನ್ನು ಇರಿಸಿ ಮತ್ತು ಅದರ ಮೇಲೆ ಕ್ಲಿಕ್ ಮಾಡಿ. |
03:25 | ಈಗ ನಮ್ಮ ಹತ್ತಿರ ಪ್ಯಾನೆಲ್ ನ ಮೇಲೆ ‘ಸೈಕ್ಲೋಹೆಕ್ಸೇನ್’ ಇದೆ. |
03:29 | ನಂತರ, ಇದನ್ನು 'ಬೆಂಜೀನ್'ಗೆ ಪರಿವರ್ತಿಸಲು, ರಚನೆಯಲ್ಲಿ ಇನ್ನೂ ಎರಡು ಡಬಲ್-ಬಾಂಡ್ ಗಳನ್ನು ನಾವು ಸೇರಿಸಬೇಕಾಗಿದೆ. |
03:36 | ಮುಂದಿನ ಎರಡು ಜೊತೆ 'ಕಾರ್ಬನ್' ಪರಮಾಣುಗಳ ನಡುವಿನ ಬಾಂಡ್ ನ ಮೇಲೆ ಕ್ಲಿಕ್ ಮಾಡಿ. |
03:41 | ನಮ್ಮ ಹತ್ತಿರ, ಪ್ಯಾನೆಲ್ ನ ಮೇಲೆ 'ಬೆಂಜೀನ್'ನ ಮಾಡೆಲ್ ಇದೆ. |
03:44 | 'ಸ್ಟೇಬಲ್ ಕನ್ಫರ್ಮೇಶನ್' (stable conformation) ಅನ್ನು ಪಡೆಯಲು ಎನರ್ಜೀ ಮಿನಿಮೈಜೇಶನ್ ಮಾಡಿ. |
03:49 | 'Jmol' ಅಪ್ಲಿಕೇಶನ್ ಅನ್ನು ಬಳಸಿ, ಅಣುಗಳ 'ಸರ್ಫೇಸ್ ಟೊಪಾಲಜಿ'ಯನ್ನು (Surface topology) ಪ್ರದರ್ಶಿಸಬಹುದು. |
03:56 | ವಿವಿಧ ಮೇಲ್ಮೈಗಳನ್ನು (surfaces) ವೀಕ್ಷಿಸಲು, ಪಾಪ್-ಅಪ್ ಮೆನ್ಯುಅನ್ನು ಓಪನ್ ಮಾಡಿ. |
04:01 | ಒಂದುವೇಳೆ ಮಾಡೆಲ್-ಕಿಟ್ ಮೆನ್ಯು ಓಪನ್ ಇದ್ದರೆ, ಕ್ಲೋಸ್ ಮಾಡಿರುವುದನ್ನು ಖಚಿತಪಡಿಸಿಕೊಳ್ಳಿ. |
04:06 | ಈಗ, ಪಾಪ್-ಅಪ್ ಮೆನ್ಯುಅನ್ನು ಓಪನ್ ಮಾಡಲು ಪ್ಯಾನೆಲ್ ನ ಮೇಲೆ ರೈಟ್-ಕ್ಲಿಕ್ ಮಾಡಿ. |
04:10 | ಕೆಳಗೆ ಸ್ಕ್ರೋಲ್ ಮಾಡಿ ಮತ್ತು 'Surfaces' ಅನ್ನು ಆಯ್ಕೆಮಾಡಿ. |
04:14 | ಅನೇಕ ಆಯ್ಕೆಗಳಿರುವ ಒಂದು ಸಬ್-ಮೆನ್ಯು ತೆರೆದುಕೊಳ್ಳುತ್ತದೆ. |
04:18 | "Dot Surface" |
04:20 | "vander Waal's" |
04:21 | ಮತ್ತು ಇನ್ನೂ ಹಲವು. |
04:23 | ಇದನ್ನು ಮಾಡಿತೋರಿಸಲು, ನಾನು 'Molecular surface' ಅನ್ನು ಆಯ್ಕೆಮಾಡುವೆನು. |
04:28 | 'ಬೆಂಜೀನ್'ನ ಮಾಡೆಲ್ ಅನ್ನು 'ಮೊಲೆಕ್ಯೂಲರ್ ಸರ್ಫೇಸ್' ನೊಂದಿಗೆ ತೋರಿಸಲಾಗಿದೆ. |
04:33 | ನಾವು ಇದನ್ನು 'Dot Surface' (ಡಾಟ್ ಸರ್ಫೇಸ್) ಎಂಬ ಬೇರೊಂದು ಸರ್ಫೇಸ್ ಗೆ ಬದಲಾಯಿಸೋಣ. |
04:38 | ಆದ್ದರಿಂದ, ಮತ್ತೊಮ್ಮೆ ಪಾಪ್-ಅಪ್ ಮೆನ್ಯುಅನ್ನು ಓಪನ್ ಮಾಡಿ ಮತ್ತು 'Dot Surface' ಅನ್ನು ಆರಿಸಿಕೊಳ್ಳಿ. |
04:44 | ನಾವು ಸರ್ಫೇಸ್ ಗಳನ್ನು ಅಪಾರದರ್ಶಕ ಅಥವಾ ಅರೆಪಾರದರ್ಶಕವನ್ನಾಗಿ ಸಹ ಮಾಡಬಹುದು. |
04:48 | ಹೀಗೆ ಮಾಡಲು, ಪಾಪ್-ಅಪ್ ಮೆನ್ಯುಅನ್ನು ಓಪನ್ ಮಾಡಿ. |
04:52 | ಕೆಳಗೆ, 'Surfaces' ಎಂಬಲ್ಲಿಗೆ ಸ್ಕ್ರೋಲ್ ಮಾಡಿ ಮತ್ತು 'Make Opaque' ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ. |
04:59 | 'ಬೆಂಜೀನ್'ನ ಮಾಡೆಲ್, ಅಪಾರದರ್ಶಕವಾಗಿರುವುದನ್ನು ಗಮನಿಸಿ. |
05:03 | 'Surface' ಆಯ್ಕೆಯನ್ನು ಸ್ಥಗಿತಗೊಳಿಸಲು, ಪಾಪ್-ಅಪ್ ಮೆನ್ಯುಅನ್ನು ಓಪನ್ ಮಾಡಿ, Surfaces' ಅನ್ನು ಆಯ್ದುಕೊಳ್ಳಿ. |
05:10 | ಕೆಳಗೆ, 'Off' ಎಂಬಲ್ಲಿಗೆ ಸ್ಕ್ರೋಲ್ ಮಾಡಿ ಮತ್ತು ಅದರ ಮೇಲೆ ಕ್ಲಿಕ್ ಮಾಡಿ. |
05:15 | ಈಗ, ಯಾವುದೇ ಸರ್ಫೇಸ್ ಗಳಿಲ್ಲದ 'ಬೆಂಜೀನ್'ನ ಒಂದು ಮಾಡೆಲ್ ನಮ್ಮ ಹತ್ತಿರ ಇದೆ. |
05:20 | 'Jmol', ಅಣುಗಳ 'ಅಟಾಮಿಕ್' (atomic) ಹಾಗೂ 'ಮೊಲೆಕ್ಯೂಲರ್ ಆರ್ಬಿಟಲ್' ಗಳನ್ನು ತೋರಿಸಲು ಸಾಧ್ಯವಿದೆ. |
05:25 | 'ಕಾನ್ಸೊಲ್'ನ ಮೇಲೆ ಕಮಾಂಡ್ ಗಳನ್ನು ಬರೆಯುವುದರ ಮೂಲಕ, ಸ್ಕ್ರೀನ್ ನ ಮೇಲೆ 'ಅಟಾಮಿಕ್ ಆರ್ಬಿಟಾಲ್' ಗಳನ್ನು ತೋರಿಸಬಹುದು. |
05:32 | 'File' ಹಾಗೂ 'New' ಗಳ ಮೇಲೆ ಕ್ಲಿಕ್ ಮಾಡಿ ಒಂದು ಹೊಸ 'Jmol' ವಿಂಡೋಅನ್ನು ಓಪನ್ ಮಾಡಿ. |
05:37 | ಈಗ 'File', ಆನಂತರ ' Console' ಗಳ ಮೇಲೆ ಕ್ಲಿಕ್ ಮಾಡಿ ಕಾನ್ಸೊಲ್ ವಿಂಡೋಅನ್ನು ಓಪನ್ ಮಾಡಿ. |
05:43 | ಸ್ಕ್ರೀನ್ ನ ಮೇಲೆ 'ಕಾನ್ಸೊಲ್' ವಿಂಡೋ ತೆರೆದುಕೊಳ್ಳುತ್ತದೆ. |
05:47 | 'ಕಾನ್ಸೊಲ್' ವಿಂಡೋಅನ್ನು ದೊಡ್ಡದನ್ನಾಗಿಸಲು ನಾನು 'KMag Screen magnifier' ಅನ್ನು ಬಳಸುತ್ತಿದ್ದೇನೆ. |
05:53 | 'ಅಟಾಮಿಕ್ ಆರ್ಬಿಟಾಲ್' ಗಳಿಗಾಗಿ ಕಮಾಂಡ್ ಲೈನ್, “isosurface phase atomicorbital” ನೊಂದಿಗೆ ಪ್ರಾರಂಭವಾಗುತ್ತದೆ. |
06:00 | ($) ಡಾಲರ್ ಪ್ರಾಂಪ್ಟ್ ಇರುವಲ್ಲಿ ಹೀಗೆ ಟೈಪ್ ಮಾಡಿ: “isosurface phase atomic orbital” |
06:06 | ನಂತರ, ಕ್ವಾಂಟಂ-ನಂಬರ್ಸ್ n, l ಹಾಗೂ m. ಇವು ಪ್ರತಿಯೊಂದು 'ಅಟಾಮಿಕ್ ಆರ್ಬಿಟಾಲ್'ಗಾಗಿ ನಿರ್ದಿಷ್ಟವಾಗಿರುತ್ತವೆ. |
06:14 | 's' ಆರ್ಬಿಟಾಲ್ ಅನ್ನು ತೋರಿಸಲು, ಹೀಗೆ ಟೈಪ್ ಮಾಡಿ: 2 0 0 |
06:20 | 2, 0, 0 ಈ ಸಂಖ್ಯೆಗಳು ಕ್ರಮವಾಗಿ ' n, l ' ಹಾಗೂ 'm' ಕ್ವಾಂಟಂ-ನಂಬರ್ ಗಳನ್ನು ಪ್ರತಿನಿಧಿಸುತ್ತವೆ. |
06:27 | ಕಮಾಂಡನ್ನು ಎಕ್ಸೀಕ್ಯೂಟ್ ಮಾಡಲು, 'Enter' ಕೀಯನ್ನು ಒತ್ತಿ. |
06:31 | ನಮ್ಮ ಪ್ಯಾನೆಲ್ ನ ಮೇಲೆ 's' ಆರ್ಬಿಟಾಲ್ ಅನ್ನು ತೋರಿಸಲಾಗಿದೆ. |
06:35 | ಇಲ್ಲಿ, 'ಅಟಾಮಿಕ್ ಆರ್ಬಿಟಾಲ್'ಗಳ ಮತ್ತು ಅವುಗಳಿಗೆ ಸಂಬಂಧಿಸಿದ ಸ್ಕ್ರಿಪ್ಟ್ ಕಮಾಂಡ್ ಗಳ ಇನ್ನೂ ಕೆಲವು ಉದಾಹರಣೆಗಳಿವೆ. |
06:41 | ಎಲ್ಲ 'ಅಟಾಮಿಕ್ ಆರ್ಬಿಟಾಲ್'ಗಳಿಗಾಗಿ ಕಮಾಂಡ್ ಲೈನ್ ಒಂದೇ ಆಗಿದೆ. |
06:45 | 'ಕಾನ್ಸೊಲ್'ನ ಮೇಲೆ ಹಿಂದಿನ ಕಮಾಂಡ್ ಅನ್ನು ತೋರಿಸಲು, ಕೀಬೋರ್ಡ್ ನ ಮೇಲೆ ಅಪ್-ಆರೋ (up-arrow) ಕೀಯನ್ನು ಒತ್ತಿ. |
06:51 | 'n, l ' ಹಾಗೂ 'm ' ಈ ಕ್ವಾಂಟಂ-ನಂಬರ್ ಗಳನ್ನು 2 1 1 ಎಂದು ಎಡಿಟ್ ಮಾಡಿ. |
06:58 | 'Enter' ಕೀಯನ್ನು ಒತ್ತಿ ಮತ್ತು 'Jmol' ಪ್ಯಾನೆಲ್ ನ ಮೇಲೆ 'px' ಆರ್ಬಿಟಾಲ್ ಅನ್ನು ನೋಡಿ. |
07:05 | ಮತ್ತೊಮ್ಮೆ ಅಪ್-ಆರೋ (up-arrow) ಕೀಯನ್ನು ಒತ್ತಿ ಮತ್ತು 'n, l ' ಹಾಗೂ 'm ' ಗಳನ್ನು 3 2 ಹಾಗೂ -1 ಎಂದು ಎಡಿಟ್ ಮಾಡಿ. |
07:13 | 'Enter' ಕೀಯನ್ನು ಒತ್ತಿ ಮತ್ತು 'Jmol' ಪ್ಯಾನೆಲ್ ನ ಮೇಲೆ 'dxy' ಆರ್ಬಿಟಾಲ್ ಅನ್ನು ನೋಡಿ. |
07:19 | ನಾವು ಈ ಇಮೇಜ್ ಗಳನ್ನು 'jpg, png' ಅಥವಾ 'pdf' ಗಳಂತಹ ವಿವಿಧ ಫೈಲ್ ಫಾರ್ಮ್ಯಾಟ್ ಗಳಲ್ಲಿ ಸೇವ್ ಮಾಡಲು ಸಹ ಸಾಧ್ಯವಿದೆ. |
07:27 | ಇಲ್ಲಿ, ಎಲ್ಲ 'ಅಟಾಮಿಕ್ ಆರ್ಬಿಟಾಲ್' ಗಳಿಗಾಗಿ (s, p, d, ಹಾಗೂ f) ಕಮಾಂಡ್ ಗಳ ಒಂದು ಲಿಸ್ಟ್ ಇದೆ. |
07:35 | ಈ ಸ್ಲೈಡ್ ನ ಮೇಲೆ ತೋರಿಸಿರುವುದು, 'ಅಟಾಮಿಕ್ ಆರ್ಬಿಟಾಲ್'ಗಳ ಮಾಡೆಲ್ ಗಳಾಗಿವೆ. |
07:40 | ಇವುಗಳನ್ನು 'ಕಾನ್ಸೊಲ್'ನ ಮೇಲೆ ಬರೆದ ಸ್ಕ್ರಿಪ್ಟ್ ಕಮಾಂಡ್ ಗಳ ಸಹಾಯದಿಂದ ರಚಿಸಲಾಗಿತ್ತು. |
07:45 | ಇಲ್ಲಿ, 'ಮೊಲೆಕ್ಯುಲರ್ ಆರ್ಬಿಟಾಲ್ಸ್'ಅನ್ನು ಹೇಗೆ ಪ್ರದರ್ಶಿಸುವುದು ಎಂಬುದನ್ನು ತೋರಿಸಲು, ನಾನು ಒಂದು ಹೊಸ 'Jmol ಪ್ಯಾನೆಲ್' ಹಾಗೂ 'ಕಾನ್ಸೊಲ್'ಅನ್ನು ಓಪನ್ ಮಾಡಿದ್ದೇನೆ. |
07:53 | 'Jmol' ಅನ್ನು ಬಳಸಿ, sp3, sp2 ಹಾಗೂ sp ಗಳಂತಹ 'ಹೈಬ್ರಿಡೈಜ್ಡ್ ಮೊಲೆಕ್ಯುಲರ್ ಆರ್ಬಿಟಾಲ್ಸ್' ಗಳನ್ನು ಪ್ರದರ್ಶಿಸಬಹುದು. |
08:02 | ನಾವು ಪ್ಯಾನೆಲ್ ನ ಮೇಲೆ, 'ಮಿಥೇನ್'ನ ಮಾಡೆಲ್ ಅನ್ನು ಹೊಂದಿದ್ದೇವೆ. |
08:06 | 'ಮಿಥೇನ್', sp3 ಪ್ರಕಾರದ 'ಮೊಲೆಕ್ಯುಲರ್ ಆರ್ಬಿಟಾಲ್ಸ್' ಅನ್ನು ಹೊಂದಿದೆ. |
08:11 | 'ಮೊಲೆಕ್ಯುಲರ್ ಆರ್ಬಿಟಾಲ್ಸ್'ಅನ್ನು ರಚಿಸಲು, 'Linear Combination of Atomic Orbitals ಅರ್ಥಾತ್ LCAO' (ಲೀನಿಯರ್ ಕಾಂಬಿನೇಶನ್ ಆಫ್ 'ಅಟಾಮಿಕ್ ಆರ್ಬಿಟಾಲ್ಸ್') ವಿಧಾನವನ್ನು ಬಳಸಲಾಗುತ್ತದೆ. |
08:21 | ಹೀಗಾಗಿ, ಕಮಾಂಡ್ ಲೈನ್, 'lcaocartoon' ನೊಂದಿಗೆ ಪ್ರಾರಂಭವಾಗುತ್ತದೆ. ಆನಂತರ 'create' ಮತ್ತು ಆರ್ಬಿಟಾಲ್ ನ ಹೆಸರುಗಳು ಇರುತ್ತವೆ. |
08:30 | ($) ಡಾಲರ್ ಪ್ರಾಂಪ್ಟ್ ಇರುವಲ್ಲಿ ಹೀಗೆ ಟೈಪ್ ಮಾಡಿ: “lcaocartoon create sp3” (l c a o ಕಾರ್ಟೂನ್ ಕ್ರಿಯೇಟ್ s p 3) |
08:36 | 'Enter' ಅನ್ನು ಒತ್ತಿ. |
08:38 | 'ಮಿಥೇನ್'ನ ಮಾಡೆಲ್ ಅನ್ನು, 's p 3 ಹೈಬ್ರಿಡೈಜ್ಡ್ ಮೊಲೆಕ್ಯುಲರ್ ಆರ್ಬಿಟಾಲ್ಸ್' ನೊಂದಿಗೆ ಗಮನಿಸಿ. |
08:45 | 's p 2 ಹೈಬ್ರಿಡೈಜ್ಡ್ ಮೊಲೆಕ್ಯುಲರ್ ಆರ್ಬಿಟಾಲ್ಸ್'ಅನ್ನು ಪ್ರದರ್ಶಿಸಲು ನಾವು 'ಇಥೀನ್' ಅನ್ನು ಉದಾಹರಣೆಗೆ ತೆಗೆದುಕೊಳ್ಳುವೆವು. |
08:52 | ಪ್ಯಾನೆಲ್ ನ ಮೇಲೆ ಇರುವುದು 'ಇಥೀನ್' (ethene) ನ ಅಣು ಆಗಿದೆ. |
08:56 | 'ಇಥೀನ್' ಅಣು, ಮೂರು 'sp2 ಹೈಬ್ರಿಡೈಜ್ಡ್ ಮೊಲೆಕ್ಯುಲರ್ ಆರ್ಬಿಟಾಲ್ಸ್'ಅನ್ನು ಹೊಂದಿದೆ. ಇವುಗಳನ್ನು 'sp2a, sp2b ' ಹಾಗೂ 'sp2c' ಎಂದು ಹೆಸರಿಸಲಾಗಿದೆ. |
09:08 | ($) ಡಾಲರ್ ಪ್ರಾಂಪ್ಟ್ ಇರುವಲ್ಲಿ ಹೀಗೆ ಟೈಪ್ ಮಾಡಿ: “lcao cartoon create sp2a”, 'Enter' ಅನ್ನು ಒತ್ತಿ. |
09:17 | ಪ್ಯಾನೆಲ್ ನ ಮೇಲಿನ 'ಇಥೀನ್' ಮಾಡೆಲ್ ನ ಮೇಲೆ 'sp2 ' ಆರ್ಬಿಟಾಲ್ ಅನ್ನು ಗಮನಿಸಿ. |
09:22 | ಅಪ್-ಆರೋ (up-arrow) ಕೀಯನ್ನು ಒತ್ತಿ ಮತ್ತು 'sp2a' ಅನ್ನು 'sp2b'ಗೆ ಬದಲಾಯಿಸಿ. 'Enter' ಅನ್ನು ಒತ್ತಿ. |
09:31 | ಮತ್ತೊಮ್ಮೆ, ಅಪ್-ಆರೋ ಕೀಯನ್ನು ಒತ್ತಿ ಹಾಗೂ 'sp2b' ಯನ್ನು 'sp2c' ಗೆ ಬದಲಾಯಿಸಿ. 'Enter' ಅನ್ನು ಒತ್ತಿ. |
09:41 | ಕೊನೆಯದಾಗಿ, 'pi ಬಾಂಡ್'ಗಾಗಿ, ಆರ್ಬಿಟಾಲ್ ನ ಹೆಸರನ್ನು 'pz' ಎಂದು ಎಡಿಟ್ ಮಾಡಿ. |
09:48 | ನಮ್ಮ ಹತ್ತಿರ, ಪ್ಯಾನೆಲ್ ನ ಮೇಲೆ ಎಲ್ಲ 'ಮೊಲೆಕ್ಯುಲರ್ ಆರ್ಬಿಟಾಲ್'ಗಳೊಂದಿಗೆ 'ಇಥೀನ್' ನ (ethene) ಅಣು ಇದೆ. |
09:55 | ಈ ಸ್ಲೈಡ್, 'ಮೊಲೆಕ್ಯುಲರ್ ಆರ್ಬಿಟಾಲ್'ಗಳೊಂದಿಗೆ ಇನ್ನೂ ಹಲವು ಅಣುಗಳ ಉದಾಹರಣೆಗಳನ್ನು ತೋರಿಸುತ್ತದೆ. |
10:01 | ಹೆಚ್ಚಿನ ಮಾಹಿತಿಗಾಗಿ, 'Jmol Script documentation' ವೆಬ್ಸೈಟನ್ನು ನೋಡಿ. |
10:08 | ಸಂಕ್ಷಿಪ್ತವಾಗಿ, |
10:10 | ಈ ಟ್ಯುಟೋರಿಯಲ್ ನಲ್ಲಿ, ನಾವು: |
10:12 | ‘ಸೈಕ್ಲೋಹೆಕ್ಸೇನ್’ ಮತ್ತು 'ಸೈಕ್ಲೋಪೆಂಟೇನ್'ನ ಮಾಡೆಲ್ ಅನ್ನು ರಚಿಸಲು |
10:17 | 'ಬೆಂಜೀನ್'ನ ಮಾಡೆಲ್ ಅನ್ನು ರಚಿಸಲು |
10:19 | ಅಣುಗಳ 'ಸರ್ಫೇಸ್ ಟೊಪಾಲಜಿ'ಯನ್ನು (surface topology) ಪ್ರದರ್ಶಿಸಲು ಕಲಿತಿದ್ದೇವೆ. |
10:23 | ನಾವು, |
10:24 | 'ಅಟಾಮಿಕ್ ಆರ್ಬಿಟಾಲ್'ಗಳನ್ನು (s, p, d, f) ಪ್ರದರ್ಶಿಸಲು ಮತ್ತು |
10:29 | 'ಕಾನ್ಸೊಲ್'ನ ಮೇಲೆ ಸ್ಕ್ರಿಪ್ಟ್ ಕಮಾಂಡ್ ಗಳನ್ನು ಬರೆದು 'ಮೊಲೆಕ್ಯೂಲರ್ ಆರ್ಬಿಟಲ್'ಗಳನ್ನು (sp3, sp2 ಮತ್ತು sp) ಪ್ರದರ್ಶಿಸಲು ಸಹ ಕಲಿತಿದ್ದೇವೆ. |
10:38 | ಇಲ್ಲಿ ಒಂದು ಅಸೈನ್ಮೆಂಟ್ ಇದೆ. |
10:40 | '2-Butene' (2-ಬ್ಯುಟೇನ್) ನ ಒಂದು ಮಾಡೆಲ್ ಅನ್ನು ರಚಿಸಿ ಮತ್ತು ‘ಮೊಲೆಕ್ಯುಲರ್ ಆರ್ಬಿಟಾಲ್’ಗಳನ್ನು ಪ್ರದರ್ಶಿಸಿ. |
10:45 | ‘ಮೊಲೆಕ್ಯುಲರ್ ಆರ್ಬಿಟಾಲ್’ಗಳ ಕಲರ್ ಹಾಗೂ ಸೈಜ್ ಗಳನ್ನು ಬದಲಾಯಿಸಲು 'lcaocartoon' (l c a o ಕಾರ್ಟೂನ್) ಕಮಾಂಡನ್ನು ಕಲಿತುಕೊಳ್ಳಿ. |
10:52 | ಕಮಾಂಡ್ ಗಳ ಲಿಸ್ಟ್ ಗಾಗಿ ಈ ಕೆಳಗಿನ ಲಿಂಕ್ ಅನ್ನು ನೋಡಿ. |
10:57 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋಅನ್ನು ನೋಡಿ. |
11:01 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ನ ಸಾರಾಂಶವಾಗಿದೆ. |
11:04 | ನಿಮ್ಮಲ್ಲಿ ಸರಿಯಾದ ಬ್ಯಾಂಡ್ವಿಡ್ತ್ ಇಲ್ಲದಿದ್ದಲ್ಲಿ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
11:09 | ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್’ ತಂಡವು: |
11:11 | ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ |
11:15 | ‘ಆನ್ ಲೈನ್ ಟೆಸ್ಟ್’ ನಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡಲಾಗುತ್ತದೆ. |
11:19 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಬರೆಯಿರಿ:
contact@spoken-tutorial.org |
11:26 | ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್’, ‘ಟಾಕ್ ಟು ಎ ಟೀಚರ್ ಪ್ರೊಜೆಕ್ಟ್’ ನ ಒಂದು ಭಾಗವಾಗಿದೆ. |
11:30 | ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದಿಂದ ಬೆಂಬಲಿಸಲ್ಪಟ್ಟಿದೆ. |
11:37 | ಈ ಮಿಷನ್ನಿನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ: |
11:42 | IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕಿ ಗ್ಲೋರಿಯಾ.
ವಂದನೆಗಳು. |