Jmol-Application/C3/Structures-from-Database/Kannada
From Script | Spoken-Tutorial
Time | Narration |
00:01 | Jmol ನಲ್ಲಿ Structures from Databases ಎಂಬ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ, ನಾವು: |
00:10 | * 'PubChem' ಡೇಟಾಬೇಸ್ ನಿಂದ ರಸಾಯನಿಕ ಸ್ಟ್ರಕ್ಚರ್ ಗಳನ್ನು ಲೋಡ್ ಮಾಡುವುದು ಮತ್ತು |
00:14 | * 'GChemPaint' ನಲ್ಲಿ ರಚಿಸಲಾದ 2D ಸ್ಟ್ರಕ್ಚರ್ ಗಳನ್ನು 'Jmol' ನಲ್ಲಿ 3D ಮಾಡೆಲ್ ಗಳಿಗೆ ಪರಿವರ್ತಿಸುವುದು
ಇತ್ಯಾದಿಗಳನ್ನು ಕಲಿಯುವೆವು. |
00:21 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು Jmol (ಜೆ-ಮೊಲ್) ಅಪ್ಲಿಕೇಶನ್ ಅನ್ನು ತಿಳಿದಿರಬೇಕು. |
00:27 | ಇಲ್ಲದಿದ್ದರೆ, ನಮ್ಮ ವೆಬ್ಸೈಟ್ ನಲ್ಲಿ ಲಭ್ಯವಿರುವ ಸಂಬಂಧಿತ ಟ್ಯುಟೋರಿಯಲ್ ಗಳನ್ನು ನೋಡಿ. |
00:33 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು: |
00:35 | Ubuntu Linux OS (ಉಬಂಟು ಲಿನಕ್ಸ್ ಆಪರೇಟಿಂಗ್ ಸಿಸ್ಟಂ) ಆವೃತ್ತಿ 12.04, |
00:40 | Jmol (ಜೆ ಮೊಲ್) ಆವೃತ್ತಿ 12.2.2, |
00:44 | Java (ಜಾವಾ) ಆವೃತ್ತಿ 7, |
00:46 | GChemPaint (ಜಿ ಕೆಮ್ ಪೇಂಟ್) ಆವೃತ್ತಿ 0.12.10, |
00:51 | Mozilla Firefox ಬ್ರೌಸರ್ 22.0 ಇವುಗಳನ್ನು ಬಳಸುತ್ತಿದ್ದೇನೆ. |
00:56 | ನಾನು ಒಂದು ಹೊಸ ‘ಜೆ-ಮೊಲ್ ಅಪ್ಲಿಕೇಶನ್’ ವಿಂಡೋಅನ್ನು ತೆರೆದಿದ್ದೇನೆ. |
01:00 | 'Jmol', ಡೇಟಾಬೇಸ್ ನಲ್ಲಿ ಪಟ್ಟಿಮಾಡಲಾದ ಸಂಯುಕ್ತಗಳ ರಚನೆಗಳನ್ನು ಲೋಡ್ ಮಾಡಲು ಒಂದು ವೈಶಿಷ್ಟ್ಯವನ್ನು ಹೊಂದಿದೆ. |
01:07 | ಮೆನ್ಯು ಬಾರ್ ನ ಮೇಲಿರುವ 'File' ಮೆನ್ಯು, 'Get MOL' ಎಂಬ ಒಂದು ಆಯ್ಕೆಯನ್ನು ಹೊಂದಿದೆ. |
01:12 | ಇದು, 'PubChem' ಎಂಬ ರಸಾಯನಿಕ ಸ್ಟ್ರಕ್ಚರ್ ಗಳ (chemical structure) ಡೇಟಾಬೇಸ್ ನಿಂದ ಅಣುಗಳನ್ನು ಲೋಡ್ ಮಾಡುತ್ತದೆ. |
01:17 | ಇದು, 'Protein Data Bank' (ಪ್ರೊಟೀನ್ ಡೇಟಾ ಬ್ಯಾಂಕ್) ನಿಂದ ಪ್ರೊಟೀನ್ ಸ್ಟ್ರಕ್ಚರ್ ಗಳನ್ನು ಲೋಡ್ ಮಾಡಲು 'Get PDB' ಎಂಬ ಇನ್ನೊಂದು ಆಯ್ಕೆಯನ್ನು ಸಹ ಹೊಂದಿದೆ. |
01:26 | ಇನ್ನೊಂದು ಟ್ಯುಟೋರಿಯಲ್ ನಲ್ಲಿ ಈ ವೈಶಿಷ್ಟ್ಯವನ್ನು ವಿಸ್ತಾರವಾಗಿ ವಿವರಿಸಲಾಗುವುದು. |
01:31 | ಒಂದು ರಸಾಯನಿಕ ರಚನೆಯನ್ನು ಪ್ಯಾನೆಲ್ ನ ಮೇಲೆ ಲೋಡ್ ಮಾಡಲು, 'Get Mol' ನ ಮೇಲೆ ಕ್ಲಿಕ್ ಮಾಡಿ. |
01:36 | ಸ್ಕ್ರೀನ್ ನ ಮೇಲೆ ಒಂದು 'Input' ಡೈಲಾಗ್-ಬಾಕ್ಸ್ ತೆರೆದುಕೊಳ್ಳುತ್ತದೆ. |
01:40 | ಟೆಕ್ಸ್ಟ್-ಬಾಕ್ಸ್ ನಲ್ಲಿ ಈ ಕೆಳಗಿನಂತೆ ಟೈಪ್ ಮಾಡುವುದರ ಮೂಲಕ, ಡೇಟಾಬೇಸ್ ನಲ್ಲಿ ಲಿಸ್ಟ್ ಮಾಡಲಾದ ಯಾವುದೇ ಅಣುವನ್ನು ಲೋಡ್ ಮಾಡಬಹುದು. |
01:48 | ಸಾಮಾನ್ಯ ಹೆಸರು ಅಥವಾ 'IUPAC' (ಐ ಯು ಪ್ಯಾಕ್) ಹೆಸರು |
01:51 | 'CAS ' (ಸಿ ಎ ಎಸ್) ನಂಬರ್ |
01:54 | 'CID' (ಸಿ ಐ ಡಿ) ನಂಬರ್ |
01:56 | 'InChi identifier' (ಇಂಚಿ ಐಡೆಂಟಿಫೈರ್) ಅಥವಾ |
01:58 | 'SMILES identifier' (ಸ್ಮೈಲ್ಸ್ ಐಡೆಂಟಿಫೈರ್). |
02:01 | ಯಾವುದೇ ಒಂದು ಕೆಮಿಕಲ್ ನ ಐಡೆಂಟಿಫಿಕೇಶನ್ ನಂಬರ್ ಗಳ ಮಾಹಿತಿಗಾಗಿ 'Pubchem' ಡೇಟಾಬೇಸ್ ವೆಬ್ಸೈಟ್ ಅನ್ನು ನೋಡಿ. |
02:09 | ನಾವು 'Phenol' (ಫಿನಾಲ್) ಅನ್ನು ಸ್ಕ್ರೀನ್ ನ ಮೇಲೆ ಪ್ರದರ್ಶಿಸೋಣ. |
02:13 | ಇದಕ್ಕಾಗಿ, 'Input' ಟೆಕ್ಸ್ಟ್-ಬಾಕ್ಸ್ ನಲ್ಲಿ “phenol” ಎಂದು ಟೈಪ್ ಮಾಡಿ. |
02:16 | 'OK' ಬಟನ್ ನ ಮೇಲೆ ಕ್ಲಿಕ್ ಮಾಡಿ. |
02:20 | ಪ್ಯಾನೆಲ್ ನ ಮೇಲೆ, 'phenol' ನ ಒಂದು ಮಾಡೆಲ್ ಅನ್ನು ತೋರಿಸಲಾಗಿದೆ. |
02:24 | ರೆಂಡರಿಂಗ್ ನ ವಿವಿಧ ಆಯ್ಕೆಗಳನ್ನು ಬಳಸಿ, 'phenol' ನ ಡಿಸ್ಪ್ಲೇಯನ್ನು ನಾವು ಮಾರ್ಪಡಿಸಬಹುದು. |
02:30 | ಈ ಆಯ್ಕೆಗಳನ್ನು ಮೆನ್ಯು ಬಾರ್ ನಲ್ಲಿ ಮತ್ತು ಪಾಪ್-ಅಪ್ ಮೆನ್ಯುನಲ್ಲಿ ಪಟ್ಟಿಮಾಡಲಾಗಿದೆ. |
02:36 | ನಾವು ಸಬ್ಸ್ಟಿಟ್ಯುಯೆಂಟ್ ಗಳನ್ನು (substituents) ಫಿನಾಲ್ ನ (phenol) 'ಬೆಂಜೀನ್ ರಿಂಗ್' ಗೆ ಸೇರಿಸಬಹುದು. |
02:41 | ಮೊದಲು ನಾವು ಮಾಡೆಲ್ ನಲ್ಲಿಯ ಪರಮಾಣುಗಳನ್ನು ಲೇಬಲ್ ಮಾಡೋಣ. |
02:45 | 'Display' ಮೆನ್ಯೂದ ಮೇಲೆ ಕ್ಲಿಕ್ ಮಾಡಿ ಮತ್ತು 'Label' ಅನ್ನು ಆಯ್ಕೆಮಾಡಿ. 'Number ' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
02:52 | ಈಗ, ನಾವು 'carbon atom number 4' ಗೆ ಸೇರಿಕೊಂಡ 'hydrogen number 10' ಅನ್ನು ಒಂದು ಅಮಿನೋ ಗ್ರುಪ್ ನಿಂದ ಬದಲಾಯಿಸೋಣ. |
03:00 | 'modelkit' ಮೆನ್ಯುವನ್ನು ಓಪನ್ ಮಾಡಿ. ಆಯ್ಕೆಗಳಿಂದ 'nitrogen' ಅನ್ನು ಆರಿಸಿಕೊಳ್ಳಿ. |
03:06 | 'hydrogen number 10' ನ ಮೇಲೆ ಕ್ಲಿಕ್ ಮಾಡಿ. |
03:09 | ಪ್ಯಾನೆಲ್ ನ ಮೇಲೆ ಇರುವುದು 'Para-Amino Phenol' ನ ಅಣು ಆಗಿದೆ. |
03:14 | ನಾವು ಡಿಸ್ಪ್ಲೇಯನ್ನು 'Sticks' ಡಿಸ್ಪ್ಲೇ ಎಂದು ಬದಲಾಯಿಸುವೆವು. |
03:18 | 'modelkit' (ಮಾಡೆಲ್ ಕಿಟ್) ಮೆನ್ಯುನಿಂದ Exit ಮಾಡಿ. |
03:21 | ಪಾಪ್-ಅಪ್ ಮೆನ್ಯೂಅನ್ನು ಓಪನ್ ಮಾಡಿ. ಕೆಳಗೆ, 'Style' ಗೆ ಸ್ಕ್ರೋಲ್ ಮಾಡಿ. 'Scheme' ಅನ್ನು ಆಯ್ಕೆಮಾಡಿ ಮತ್ತು 'Sticks' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
03:30 | ಪ್ಯಾನೆಲ್ ನ ಮೇಲೆ, “sticks” ಡಿಸ್ಪ್ಲೇ ಯಲ್ಲಿ 'Para-Amino-phenol' (ಪ್ಯಾರಾ-ಅಮಿನೋ-ಫಿನಾಲ್) ನ ಒಂದು ಮಾಡೆಲ್ ಇದೆ. |
03:36 | ರಚಿಸಲು ಕಠಿನವಾಗಿರುವ ಕಾಂಪ್ಲೆಕ್ಸ್ ಸ್ಟ್ರಕ್ಚರ್ ಗಳನ್ನು ಪ್ಯಾನೆಲ್ ನ ಮೇಲೆ ಸುಲಭವಾಗಿ ಲೋಡ್ ಮಾಡಬಹುದು. |
03:42 | ಉದಾಹರಣೆಗೆ: 'cholesterol' |
03:45 | 'File' ಮೆನ್ಯುದ ಮೇಲೆ ಕ್ಲಿಕ್ ಮಾಡಿ. |
03:47 | 'Get Mol' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ಟೆಕ್ಸ್ಟ್-ಬಾಕ್ಸ್ ನಲ್ಲಿ “Cholesterol” (ಕೊಲೆಸ್ಟೆರಾಲ್) ಎಂದು ಟೈಪ್ ಮಾಡಿ. |
03:54 | 'OK' ಬಟನ್ ನ ಮೇಲೆ ಕ್ಲಿಕ್ ಮಾಡಿ. |
03:57 | ಪ್ಯಾನೆಲ್ ನ ಮೇಲೆ ಕೊಲೆಸ್ಟೆರಾಲ್ ನ ಒಂದು ಅಣುವನ್ನು ತೋರಿಸಲಾಗಿದೆ. |
04:02 | ಅಣುವಿನಲ್ಲಿಯ ಡಬಲ್-ಬಾಂಡ್ ಮತ್ತು 'ಸೈಡ್-ಚೈನ್' (side-chain) ಗಳಂತಹ ವೈಶಿಷ್ಟ್ಯಗಳನ್ನು ನಾವು ಹೈಲೈಟ್ ಮಾಡಬಹುದು. |
04:08 | ಡಬಲ್-ಬಾಂಡ್ ಅನ್ನು ಹೈಲೈಟ್ ಮಾಡಲು, ಮೊದಲು ನಾವು ಡಬಲ್-ಬಾಂಡ್ ನ 'carbon' ಪರಮಾಣುಗಳ ಬಣ್ಣವನ್ನು ಬದಲಾಯಿಸೋಣ. |
04:15 | ಟೂಲ್-ಬಾರ್ ನಲ್ಲಿ, 'Select atoms' ಐಕಾನ್ ಮೇಲೆ ಕ್ಲಿಕ್ ಮಾಡಿ. |
04:19 | ಆಮೇಲೆ, ಡಬಲ್-ಬಾಂಡ್ ಅನ್ನು ಹೊಂದಿರುವ 'ಕಾರ್ಬನ್' ಪರಮಾಣುಗಳ ಮೇಲೆ ಕ್ಲಿಕ್ ಮಾಡಿ. |
04:24 | ಪರಮಾಣುಗಳ ಸುತ್ತಲೂ ಹಳದಿ ಬಣ್ಣದ ಒಂದು ಹ್ಯಾಲೋ (halo) ಕಾಣಿಸಿಕೊಳ್ಳುತ್ತದೆ. |
04:28 | ಪಾಪ್-ಅಪ್ ಮೆನ್ಯುವನ್ನು ಓಪನ್ ಮಾಡಿ. |
04:30 | 'Color' ಎಂಬಲ್ಲಿಗೆ ಸ್ಕ್ರೋಲ್-ಡೌನ್ ಮಾಡಿ. 'Atoms' ಅನ್ನು ಆಯ್ಕೆಮಾಡಿ ಮತ್ತು 'Orange' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
04:37 | ಈಗ, ಟೂಲ್-ಬಾರ್ ನಲ್ಲಿ “Rotate molecule” ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
04:42 | 'cholesterol' ಮಾಡೆಲ್ ನಲ್ಲಿಯ ಡಬಲ್-ಬಾಂಡ್, ಈಗ ’ಆರೇಂಜ್’ ಬಣ್ಣದಲ್ಲಿದೆ. |
04:49 | ಹೀಗೆಯೇ, ನಾವು ಸೈಡ್-ಚೈನ್ (side-chain) ನಲ್ಲಿಯ 'Carbon' ಗಳನ್ನು ಹೈಲೈಟ್ ಮಾಡಬಹುದು. |
04:54 | ಪಾಪ್-ಅಪ್ ಮೆನ್ಯುವನ್ನು ಬಳಸಿ ಬಣ್ಣವನ್ನು (color) 'violet' ಗೆ (ನೇರಳೆ ಬಣ್ಣ) ಬದಲಾಯಿಸಿ. |
04:59 | ಪ್ಯಾನೆಲ್ ನ ಮೇಲೆ, ಕೊಲೆಸ್ಟೆರಾಲ್ (Cholesterol) ನ ಒಂದು ಮಾಡೆಲ್ ಇದೆ. ಇದರಲ್ಲಿ ಪ್ರಮುಖ ವೈಶಿಷ್ಟ್ಯಗಳನ್ನು ಹೈಲೈಟ್ ಮಾಡಲಾಗಿದೆ. |
05:06 | ಒಂದು ಅಸೈನ್ಮೆಂಟ್ - |
05:08 | 'Pubchem' ಡೇಟಾಬೇಸ್ ನಿಂದ, ಕೆಫೀನ್ ನ ಸ್ಟ್ರಕ್ಚರ್ ಅನ್ನು ಲೋಡ್ ಮಾಡಿ. |
05:11 | ಅಣುವಿನಲ್ಲಿಯ ಪ್ರಮುಖ ವೈಶಿಷ್ಟ್ಯಗಳನ್ನು ಹೈಲೈಟ್ ಮಾಡಿ. |
05:15 | ಡಿಸ್ಪ್ಲೇಯನ್ನು 'wireframe' ಗೆ ಬದಲಾಯಿಸಿ. |
05:19 | ಈಗ ನಾನು 'Jmol' ನ ಇನ್ನೊಂದು ಮುಖ್ಯ ವೈಶಿಷ್ಟ್ಯವನ್ನು ಚರ್ಚಿಸುವೆನು. |
05:24 | ಬೇರೊಂದು ಸಾಫ್ಟ್ವೇರ್ ನಲ್ಲಿ ರಚಿಸಲಾದ ಅಣುಗಳ 2D ಸ್ಟ್ರಕ್ಚರ್ ಗಳನ್ನು 3D ಮಾಡೆಲ್ ಗಳಿಗೆ ನಾವು ಪರಿವರ್ತಿಸಬಹುದು. |
05:31 | ಇಲ್ಲಿ, ಪ್ಯಾನೆಲ್ ನ ಮೇಲೆ 'amino acid Alanine' (ಅಮಿನೋ ಆಸಿಡ್ ಅಲನೀನ್) ನ ಮಾಡೆಲ್ ಇದೆ. |
05:36 | ಈ ಅಣುವಿನ 2D ಸ್ಟ್ರಕ್ಚರ್ ಅನ್ನು 'GChemPaint' ಎಂಬ ಸಾಫ್ಟ್ವೇರ್ ನಲ್ಲಿ ರಚಿಸಲಾಗಿತ್ತು. |
05:42 | ಈ ಸ್ಟ್ರಕ್ಚರ್ ಅನ್ನು “.mol” ಫೈಲ್ ಎಂದು ಸೇವ್ ಮಾಡಲಾಗಿತ್ತು. |
05:46 | GchemPaint, 2D ಕೆಮಿಕಲ್ ಸ್ಟ್ರಕ್ಚರ್ ಗಳನ್ನು ರಚಿಸುವುದಕ್ಕಾಗಿ ಇರುವ ಒಂದು ಓಪನ್ ಸೋರ್ಸ್ ಸಾಫ್ಟ್ವೇರ್ ಆಗಿದೆ. |
05:51 | GChemPaint ನ ಟ್ಯುಟೋರಿಯಲ್ ಗಳು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತವೆ. |
05:56 | ಸ್ಟ್ರಕ್ಚರ್ ಗಳನ್ನು ರಚಿಸಲು ಮತ್ತು “.mol” ಫಾರ್ಮ್ಯಾಟ್ ನಲ್ಲಿ ಸೇವ್ ಮಾಡಲು, Analysis of Compounds ಎಂಬ ಟ್ಯುಟೋರಿಯಲ್ ಅನ್ನು ನೋಡಿ. |
06:05 | ಇಲ್ಲಿ, Gchempaint ನ ಡಿಸ್ಪ್ಲೇ ಏರಿಯಾದಲ್ಲಿ ತೋರಿಸಿರುವುದು |
06:10 | 'Amino acid -Alanine' (ಅಮಿನೋ ಆಸಿಡ್ - ಅಲನೀನ್), |
06:12 | 'Nuclioside -Adenosine' (ನ್ಯೂಕ್ಲಿಯೋಸೈಡ್ - ಅಡಿನೋಸಿನ್) ಮತ್ತು |
06:14 | 'Saccharide -Alpha-D glucopyranose' (ಸ್ಯಾಕ್ಕರೈಡ್-ಅಲ್ಫಾ-ಡಿ-ಗ್ಲುಕೋಪೈರನೋಸ್) ಇವುಗಳ 2D ರಚನೆಗಳಾಗಿವೆ. |
06:19 | ನಾನು ಅವುಗಳನ್ನು “.mol” ಫಾರ್ಮ್ಯಾಟ್ ನಲ್ಲಿ, 'Desktop' (ಡೆಸ್ಕ್ಟಾಪ್) ನ ಮೇಲೆ ಸೇವ್ ಮಾಡಿದ್ದೇನೆ. |
06:24 | ಮೊದಲು, ನಾವು 'Alanine' ನ 2D ಸ್ಟ್ರಕ್ಚರ್ ಅನ್ನು 'Jmol' ಅಪ್ಲಿಕೇಶನ್ ನಲ್ಲಿ 3D ಮಾಡೆಲ್ ನ ಹಾಗೆ ನೋಡೋಣ. |
06:32 | ಆದ್ದರಿಂದ, ನಾನು ಒಂದು ಹೊಸ 'Jmol' ವಿಂಡೋಅನ್ನು ಓಪನ್ ಮಾಡುವೆನು. |
06:36 | ಟೂಲ್-ಬಾರ್ ನಲ್ಲಿ, 'Open a file' ಎಂಬ ಐಕಾನ್ ಮೇಲೆ ಕ್ಲಿಕ್ ಮಾಡಿ. |
06:40 | ನಾನು 'Desktop' ಫೋಲ್ಡರ್ ಅನ್ನು ಆರಿಸಿಕೊಳ್ಳುತ್ತೇನೆ ಮತ್ತು Open ನ ಮೇಲೆ ಕ್ಲಿಕ್ ಮಾಡುವೆನು . 'Alanine.mol' ಎಂಬ ಫೈಲನ್ನು ಆಯ್ಕೆಮಾಡಿ, 'Open' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. |
06:51 | 'Alanine' ನ ಒಂದು 3D ಮಾಡೆಲ್, ಸ್ಕ್ರೀನ್ ನ ಮೇಲೆ ಓಪನ್ ಆಗುತ್ತದೆ. |
06:55 | 'modelkit' ಮೆನ್ಯುಅನ್ನು ಓಪನ್ ಮಾಡಿ ಮತ್ತು 'fix hydrogens and minimize' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
07:03 | ಸ್ಟ್ರಕ್ಚರ್ ಗೆ 'ಹೈಡ್ರೋಜನ್' ಗಳನ್ನು ಸೇರಿಸಲಾಗಿದೆ ಮತ್ತು ಎನರ್ಜೀ ಮಿನಿಮೈಸ್ ಮಾಡಲಾಗಿದೆ. |
07:08 | ಯಾವುದೇ “.mol” ಫೈಲ್ ನ ಹಾಗೆ, ಮೆನ್ಯು ಬಾರ್ ಮತ್ತು 'ಪಾಪ್-ಅಪ್' ಮೆನ್ಯುಗಳನ್ನು ಬಳಸಿ ನಾವು ಡಿಸ್ಪ್ಲೇಯನ್ನು ಬದಲಾಯಿಸಬಹುದು. |
07:15 | ಇಲ್ಲಿರುವುದು, 'Jmol' ನಲ್ಲಿ 'Adenosine.mol ' ನ 3D ಮಾಡೆಲ್ ಆಗಿದೆ. |
07:19 | ಮತ್ತು, ಇದು 'Jmol' ನಲ್ಲಿ 'Alpha-D-glucopyranose.mol' ನ 3D ಮಾಡೆಲ್ ಆಗಿದೆ. |
07:25 | ಸಂಕ್ಷಿಪ್ತವಾಗಿ, |
07:27 | ಈ ಟ್ಯುಟೋರಿಯಲ್ ನಲ್ಲಿ, ನಾವು: |
07:32 | 'Pubchem' ಡೇಟಾಬೇಸ್ ನಿಂದ ರಸಾಯನಿಕ ಸ್ಟ್ರಕ್ಚರ್ ಗಳನ್ನು ಲೋಡ್ ಮಾಡುವುದು, |
07:34 | 'Phenol' (ಫಿನಾಲ್) ಮತ್ತು 'Cholesterol' (ಕೊಲೆಸ್ಟೆರಾಲ್) ಗಳ ಡಿಸ್ಪ್ಲೇಯನ್ನು ಬದಲಾಯಿಸುವುದು, |
07:38 | 'GChemPaint' ನಲ್ಲಿ ರಚಿಸಲಾದ 2D ಸ್ಟ್ರಕ್ಚರ್ ಗಳನ್ನು, 'Jmol' ನಲ್ಲಿ 3D ಮಾಡೆಲ್ ಗಳಿಗೆ ಪರಿವರ್ತಿಸುವುದು, |
07:44 | 'Alanine, Adenosine' ಹಾಗೂ 'Alpha-D-glucopyranose' ಗಳ 2D ಸ್ಟ್ರಕ್ಚರ್ ಗಳನ್ನು 3D ಮಾಡೆಲ್ ಗಳಿಗೆ ಪರಿವರ್ತಿಸುವುದು
ಇವುಗಳನ್ನು ಕಲಿತಿದ್ದೇವೆ. |
07:53 | ಇಲ್ಲಿ ನಿಮಗಾಗಿ ಇನ್ನೊಂದು ಅಸೈನ್ಮೆಂಟ್ ಇದೆ. |
07:56 | 'GChemPaint' ನಲ್ಲಿ ಈ ಕೆಳಗಿನ 'ಅಮಿನೋ ಆಸಿಡ್' ಗಳ (Amino acids) 2D ಸ್ಟ್ರಕ್ಚರ್ ಗಳನ್ನು ರಚಿಸಿ. |
08:01 | 'Cysteine' (ಸಿಸ್ಟೀನ್) |
08:03 | 'Histidine' (ಹಿಸ್ಟಿಡಿನ್) |
08:04 | 'Phenylalanine' (ಫಿನೈಲಲನೀನ್) |
08:06 | “.mol” ಫೈಲ್ ನಂತೆ ಸೇವ್ ಮಾಡಿ. |
08:09 | 'Jmol' ನಲ್ಲಿ ಫೈಲ್ ಗಳನ್ನು ಓಪನ್ ಮಾಡಿ ಮತ್ತು ಡಿಸ್ಪ್ಲೇಯನ್ನು ಮಾರ್ಪಡಿಸಿ. |
08:12 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋಅನ್ನು ನೋಡಿ. |
08:16 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ನ ಸಾರಾಂಶವಾಗಿದೆ. |
08:19 | ನಿಮ್ಮಲ್ಲಿ ಸರಿಯಾದ ಬ್ಯಾಂಡ್ವಿಡ್ತ್ ಇಲ್ಲದಿದ್ದಲ್ಲಿ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
08:23 | ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್’ ತಂಡವು: |
08:26 | ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ |
08:29 | ‘ಆನ್ ಲೈನ್ ಟೆಸ್ಟ್’ ನಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡಲಾಗುತ್ತದೆ. |
08:33 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಬರೆಯಿರಿ:
contact@spoken-tutorial.org |
08:40 | ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್’, ‘ಟಾಕ್ ಟು ಎ ಟೀಚರ್ ಪ್ರೊಜೆಕ್ಟ್’ ನ ಒಂದು ಭಾಗವಾಗಿದೆ. |
08:45 | ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದಿಂದ ಬೆಂಬಲಿಸಲ್ಪಟ್ಟಿದೆ. |
08:52 | ಈ ಮಿಷನ್ನಿನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ: |
08:57 | IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕಿ ಗ್ಲೋರಿಯಾ.
ವಂದನೆಗಳು. |