Java/C2/Strings/Kannada

From Script | Spoken-Tutorial
Jump to: navigation, search
Time Narration
00:01 ಜಾವದಲ್ಲಿ Strings (ಸ್ಟ್ರಿಂಗ್ಸ್) ಬಗೆಗಿನ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:05 ಈ ಟ್ಯುಟೋರಿಯಲ್ ನಲ್ಲಿ ನೀವು,
00:08 ಸ್ಟ್ರಿಂಗ್ಸನ್ನು ಕ್ರಿಯೇಟ್ ಮಾಡುವುದು, ಆಡ್ ಮಾಡುವುದು ಮತ್ತು ಲೋವರ್ ಕೇಸ್ ಮತ್ತು ಅಪ್ಪರ್ ಕೇಸ್ ಗಳಿಗೆ ಕನ್ವರ್ಟ್ ಮಾಡುವುದೇ ಮುಂತಾದ ಬೇಸಿಕ್ ಸ್ಟ್ರಿಂಗ್ ಆಪರೇಷನ್ ಗಳನ್ನು ಕಲಿಯಲಿದ್ದೀರಿ.
00:18 ಈ ಟ್ಯುಟೋರಿಯಲ್ ನಲ್ಲಿ ನಾವು,

ಉಬುಂಟು 11.10 (ಹನ್ನೊಂದು ಬಿಂದು ಹತ್ತು), ಜೆಡಿಕೆ 1.6 (ಒಂದು ಬಿಂದು ಆರು) ಮತ್ತು ಎಕ್ಲಿಪ್ಸ್ 3.7 (ಮೂರು ಬಿಂದು ಏಳು) ಅನ್ನು ಉಪಯೋಗಿಸುತ್ತಿದ್ದೇವೆ.

00:26 ಈ ಟ್ಯುಟೋರಿಯಲ್ ಅನ್ನು ಅರ್ಥಮಾಡಿಕೊಳ್ಳಲು ನೀವು ಜಾವಾದಲ್ಲಿನ ಡಾಟಾ ಟೈಪ್ಸ್ ಗಳ ಬಗ್ಗೆ ತಿಳಿದಿರಬೇಕು.
00:32 ತಿಳಿಯದಿದ್ದಲ್ಲಿ, ಸಂಬಂಧಿಸಿದ ಟ್ಯುಟೋರಿಯಲ್ ಗಾಗಿ ಈ ಕೆಳಗಿನ ಟ್ಯುಟೋರಿಯಲ್ ಗೆ ಭೇಟಿ ಕೊಡಿ.
00:40 ಜಾವಾದಲ್ಲಿ ಸ್ಟ್ರಿಂಗ್ ಎಂದರೆ, ಕ್ಯಾರಕ್ಟರ್ ಗಳ ಸೀಕ್ವೆನ್ಸ್ ಗಳು.
00:44 ಸ್ಟ್ರಿಂಗ್ ನೊಂದಿಗೆ ಆರಂಭಿಸುವ ಮೊದಲು, ನಾವು ಕ್ಯಾರಕ್ಟರ್ ಗಳ ಡಾಟ ಟೈಪ್ ಗಳನ್ನು ನೋಡೋಣ.
00:50 ನಾವೀಗ ಎಕ್ಲಿಪ್ಸನ್ನು ಪ್ರಾರಂಭಿಸೋಣ
00:55 ನಾವೀಗ ಎಕ್ಲಿಪ್ಸ್ IDE (ಐಡಿಇ) ಮತ್ತು ಉಳಿದ ಕೋಡ್ ಗಳಿಗೆ ಅವಶ್ಯಕವಿರುವ ಸ್ಕೆಲಿಟನ್ ಅನ್ನು ಹೊಂದಿದ್ದೇವೆ.
01:00 ನಾವು StringDemo (ಸ್ಟ್ರಿಂಗ್ ಡೆಮೋ) ಕ್ಲಾಸನ್ನು ತಯಾರಿಸಿ ಮೈನ್ ಮೆಥಡ್ ಅನ್ನು ಸೇರಿಸಿದ್ದೇವೆ.
01:07 ಮೈನ್ ಮೆಥಡ್ ನ ಒಳಗೆ, ಟೈಪ್ ಮಾಡಿ - char star (ಕ್ಯಾರ್ ಸ್ಟಾರ್) ಸಮ ಸಿಂಗಲ್ ಕೋಟ್ಸ್ ನೊಳಗೆ ಆಸ್ಟ್ರಿಕ್ಸ್
01:19 ಈ ಸ್ಟೇಟ್ಮೆಂಟ್ star (ಸ್ಟಾರ್) ಹೆಸರಿನ ವೇರಿಯೇಬಲ್ ಮತ್ತು char (ಕ್ಯಾರ್) ಟೈಪನ್ನು ಕ್ರಿಯೇಟ್ ಮಾಡುತ್ತದೆ.
01:25 ಇದು ಸರಿಯಾಗಿ ಒಂದು ಕ್ಯಾರಕ್ಟರನ್ನು ಮಾತ್ರ ಸ್ಟೋರ್ ಮಾಡಬಲ್ಲದು.
01:28 ಕೆಲವು ಕ್ಯಾರಕ್ಟರ್ ಗಳನ್ನು ಉಪಯೋಗಿಸಿ ಒಂದು ಪದವನ್ನು ಪ್ರಿಂಟ್ ಮಾಡೋಣ.
01:33 ಕ್ಯಾರ್ ಲೈನನ್ನು ತೆಗೆಯಿರಿ ಮತ್ತು ಟೈಪ್ ಮಾಡಿ,
01:36 char c1 (ಕ್ಯಾರ್ ಸಿ ಒಂದು) ಸಮ ಸಿಂಗಲ್ ಕೋಟ್ಸ್ ನ ಒಳಗೆ c
01:43 char c2 (ಕ್ಯಾರ್ ಸಿ ಎರಡು) ಸಮ ಸಿಂಗಲ್ ಕೋಟ್ಸ್ ನ ಒಳಗೆ a
01:49 char c3 (ಕ್ಯಾರ್ ಸಿ ಮೂರು) ಸಮ ಸಿಂಗಲ್ ಕೋಟ್ಸ್ ನ ಒಳಗೆ r
01:55 ನಾವು Car (ಕಾರ್) ಎಂಬ ಪದವನ್ನುಮಾಡಲು ಮೂರು ಕ್ಯಾರಕ್ಟರನ್ನು ಕ್ರಿಯೇಟ್ ಮಾಡಿದ್ದೇವೆ.
01:59 ನಾವೀಗ ಪದವನ್ನು ಪ್ರಿಂಟ್ ಮಾಡಲು ಅವನ್ನು ಉಪಯೋಗಿಸೋಣ.
02:02 ಟೈಪ್,
02:04 System.out.print (ಸಿಸ್ಟಮ್ ಡಾಟ್ ಔಟ್ ಡಾಟ್ ಪ್ರಿಂಟ್) (c1 (ಸಿ ಒಂದು));
02:12 System.out.print(ಸಿಸ್ಟಮ್ ಡಾಟ್ ಔಟ್ ಡಾಟ್ ಪ್ರಿಂಟ್) (c2 (ಸಿ ಎರಡು));
02:22 System.out.print(ಸಿಸ್ಟಮ್ ಡಾಟ್ ಔಟ್ ಡಾಟ್ ಪ್ರಿಂಟ್) (c3 (ಸಿ ಮೂರು));
02:31 ದಯವಿಟ್ಟು ಗಮನಿಸಿ, ನಾನೀಗ println (ಪ್ರಿಂಟ್ ಎಲ್ಎನ್) ನ ಬದಲಿಗೆ print (ಪ್ರಿಂಟ್) ಅನ್ನು ಉಪಯೋಗಿಸುತ್ತಿದ್ದೇನೆ ಆದ್ದರಿಂದ ಎಲ್ಲಾ ಕ್ಯಾರಕ್ಟರ್ ಗಳು ಒಂದೇ ಸಾಲಿನಲ್ಲಿ ಪ್ರಿಂಟ್ ಆಗಿವೆ.
02:39 ಫೈಲನ್ನು ಸೇವ್ ಮಾಡಿ ರನ್ ಮಾಡಿ.
02:43 ನಾವು ನೋಡುವ ಹಾಗೆ, ಔಟ್ ಪುಟ್ ನಿರೀಕ್ಷಿಸಿದ್ದೇ ಬಂದಿದೆ.
02:46 ಆದರೆ ಈ ವಿಧಾನ ಪದವನ್ನು ಪ್ರಿಂಟ್ ಮಾಡುತ್ತದೆಯೇ ಹೊರತು ಕ್ರಿಯೇಟ್ ಮಾಡುವುದಿಲ್ಲ.
02:50 ಪದವನ್ನು ಕ್ರಿಯೇಟ್ ಮಾಡಲು, String ಡಾಟ ಟೈಪನ್ನು ಉಪಯೋಗಿಸುತ್ತೇವೆ.
02:54 ನಾವೀಗ ಅದನ್ನು ಪ್ರಯತ್ನಿಸೋಣ.
02:57 ಮೈನ್ ಮೆಥಡ್ ನ ಒಳಗೆ ಇರುವುದನ್ನೆಲ್ಲ ತೆಗೆಯಿರಿ ನಂತರ,
03:03 String greet (ಸ್ಟ್ರಿಂಗ್ ಗ್ರೀಟ್) ಸಮ Hello Learner (ಹಲೋ ಲರ್ನರ್): ಎಂದು ಟೈಪ್ ಮಾಡಿ.
03:16 ಗಮನಿಸಿ, String (ಸ್ಟ್ರಿಂಗ್) ಪದದಲ್ಲಿರುವ S (ಎಸ್) ಅಪ್ಪರ್ ಕೇಸ್ನಲ್ಲಿದೆ.
03:19 ಮತ್ತು ನಾವು ಸಿಂಗಲ್ ಕೋಟ್ಸ್ ನ ಬದಲಿಗೆ delimiters (ಡೀಲಿಮಿಟರ್ಸ್) ನಂತೆ ಡಬಲ್ ಕೋಟ್ಸನ್ನು ಉಪಯೋಗಿಸುತ್ತಿದ್ದೇವೆ.
03:25 ಈ ಸ್ಟೇಟ್ಮೆಂಟ್ String (ಸ್ಟ್ರಿಂಗ್) ಟೈಪ್ ನ ವೆರಿಯೇಬಲ್ greet (ಗ್ರೀಟ್)ಅನ್ನು ಕ್ರಿಯೇಟ್ ಮಾಡುತ್ತದೆ.
03:31 ನಾವೀಗ ಸಂದೇಶವನ್ನು ಪ್ರಿಂಟ್ ಮಾಡೋಣ.
03:33 System.out.println(greet) (ಸಿಸ್ಟಮ್ ಡಾಟ್ ಔಟ್ ಡಾಟ್ ಪ್ರಿಂಟ್ ಎಲ್ಎನ್ (ಗ್ರೀಟ್));
03:44 ಫೈಲನ್ನು ಸೇವ್ ಮಾಡಿ ರನ್ ಮಾಡಿ
03:51 ನಾವು ನೋಡುವ ಹಾಗೆ, ಸಂದೇಶವು ವೇರಿಯೆಬಲ್ ನಲ್ಲಿ ಸಂಗ್ರಹಗೊಂಡಿದೆ ಮತ್ತು ಅದು ಪ್ರಿಂಟ್ ಆಗಿದೆ.
03:57 ಸ್ಟ್ರಿಂಗ್ಸನ್ನು ಜಾವಾದಲ್ಲಿಯೂ ಸಹ ಸೇರಿಸಬಹುದು.
04:00 ಹಾಗೆ ಮಾಡುವುದು ಹೇಗೆಂದು ನೋಡೋಣ.
04:04 ಸಂದೇಶದಿಂದ Learner (ಲರ್ನರ್) ಪದವನ್ನು ತೆಗೆಯುತ್ತಿದ್ದೇನೆ.
04:08 ನಾವೀಗ name (ನೇಮ್)ಅನ್ನು ಬೇರೆಯ ವೇರಿಯೇಬಲ್ ನಲ್ಲಿ ಸ್ಟೋರ್ ಮಾಡೋಣ.
04:14 String name (ಸ್ಟ್ರಿಂಗ್ ನೇಮ್) ಸಮ “Java” (“ಜಾವ”);
04:22 ಈಗ ಸಂದೇಶವನ್ನು ಮಾಡಲು ಸ್ಟ್ರಿಂಗ್ಸನ್ನು ಸೇರಿಸೋಣ
04:28 String msg (ಸ್ಟ್ರಿಂಗ್ ಎಮ್ಎಸ್ ಜಿ) ಸಮ greet (ಗ್ರೀಟ್) ಕೂಡಿಸು name (ನೇಮ್) ;
04:42 ಪ್ರಿಂಟ್ ಸ್ಟೇಟ್ ಮೆಂಟ್ ನಲ್ಲಿರುವ ಗ್ರೀಟನ್ನು println(greet) ಮೆಸೇಜ್ println(msg) ಗೆ ಬದಲಿಸಿ. ಫೈಲನ್ನು ಸೇವ್ ಮಾಡಿ ರನ್ ಮಾಡಿ.
04:56 ನಾವೀಗ ಔಟ್ ಪುಟ್ ಗ್ರೀಟಿಂಗ್ ಮತ್ತು ಹೆಸರನ್ನು ತೋರಿಸುತ್ತಿರುವುದನ್ನು ನೋಡಬಹುದು
05:00 ಆದರೆ ಅವನ್ನು ಬೇರ್ಪಡಿಸಿ ತೋರಿಸಲು ಮಧ್ಯೆ ಸ್ಪೇಸ್ (ಜಾಗ) ಇಲ್ಲ.
05:02 ಆದ್ದರಿಂದ ನಾವೀಗ ಸ್ಪೇಸ್ ಕ್ಯಾರಕ್ಟರನ್ನು ಕ್ರಿಯೇಟ್ ಮಾಡೋಣ
05:08 char SPACE (ಕ್ಯಾರ್ ಸ್ಪೇಸ್) ಸಮ ಸಿಂಗಲ್ ಕೋಟ್ಸ್ ನ ಒಳಗೆ ಸ್ಪೇಸ್.
05:17 ಗಮನಿಸಿ, ಸ್ಪಷ್ಟವಾಗಲು ನಾನು ವೇರಿಯೇಬಲ್ ನೇಮ್ ನಲ್ಲಿ ಎಲ್ಲಾ ಅಪ್ಪರ್ ಕೇಸ್ ಲೆಟರ್ ಅನ್ನು ಉಪಯೋಗಿಸಿದ್ದೇನೆ.
05:23 ಇದನ್ನು ನಿಮಗೆ ಬೇಕಾದಂತೆ ಬದಲಿಸಬಹುದು
05:26 ನಾವೀಗ ಮೆಸೇಜ್ ಗೆ ಸ್ಪೇಸನ್ನು ಸೇರಿಸೋಣ.
05:29 greet ಕೂಡಿಸು SPACE ಕೂಡಿಸು name
05:36 ಫೈಲನ್ನು ಸೇವ್ ಮಾಡಿ ರನ್ ಮಾಡಿ
05:40 ಈಗ ಔಟ್ ಪುಟ್ ಸ್ಪಷ್ಟವಾಗಿ ನಿರೀಕ್ಷಿಸಿದಂತೆ ಬಂದಿರುವುದನ್ನು ನೋಡಬಹುದು.
05:45 ನಾವು ಕೆಲವು ಸ್ಟ್ರಿಂಗ್ ಆಪರೇಷನ್ಸ್ ಗಳನ್ನು ನೋಡೋಣ.
05:50 ನಾನೀಗ “Hello” (ಹಲೋ) ಪದದಲ್ಲಿನ ಮತ್ತು “java” (ಜಾವಾ) ಪದಲ್ಲಿನ ಕ್ಯಾರಕ್ಟರ್ ಗಳನ್ನು ಅಪ್ಪರ್ ಕೇಸ್ ಗೆ ಬದಲಿಸುತ್ತಿದ್ದೇನೆ.
06:05 ಆಗಾಗ, ಯೂಸರ್ ಗಳು ಇನ್ಪುಟ್ ಕೊಡುವಾಗ, ಮಿಕ್ಸ್ ಕೇಸ್ ಗಳಲ್ಲಿ ವ್ಯಾಲ್ಯೂ ಗಳನ್ನು ಕೊಡುತ್ತಾರೆ.
06:11 ಔಟ್ ಪುಟ್ ಅನ್ನು ನೋಡಲು ಫೈಲನ್ನು ರನ್ ಮಾಡೋಣ.
06:18 ನಾವು ನೋಡುವ ಹಾಗೆ ಔಟ್ ಪುಟ್ ಸ್ಪಷ್ಟವಾಗಿಲ್ಲ.
06:22 ಇನ್ ಪುಟ್ ಅನ್ನು ಸ್ಪಷ್ಟಪಡಿಸಲು ಸ್ಟ್ರಿಂಗ್ ಮೆಥಡ್ ಅನ್ನು ಉಪಯೋಗಿಸೋಣ.
06:27 greet (ಗ್ರೀಟ್) ಸಮ greet.to LowerCase (ಗ್ರೀಟ್ ಡಾಟ್ ಟು ಲೋಅರ್ ಕೇಸ್)(); ಎಂದು ಟೈಪ್ ಮಾಡಿ.
06:41 Name (ನೇಮ್) ಸಮ name.toUpperCase (ನೇಮ್ ಡಾಟ್ ಟು ಅಪ್ಪರ್ ಕೇಸ್)();

ಈ ಸ್ಟೇಟ್ಮೆಂಟ್ ಸ್ಟ್ರಿಂಗ್ greet (ಗ್ರೀಟ್) ನಲ್ಲಿರುವ ಎಲ್ಲಾ ಕ್ಯಾರಕ್ಟರ್ ಗಳನ್ನು ಲೋವರ್ ಕೇಸ್ ಗೆ ಬದಲಿಸುತ್ತದೆ.

06:47 Name (ನೇಮ್) ಸಮ name.toUpperCase (ನೇಮ್ ಡಾಟ್ ಟು ಅಪ್ಪರ್ ಕೇಸ್)();
06:58 ಈ ಸ್ಟೇಟ್ಮೆಂಟ್ ಸ್ಟ್ರಿಂಗ್ name (ನೇಮ್) ನಲ್ಲಿರುವ ಪ್ರತಿ ಕ್ಯಾರಕ್ಟರನ್ನು ಅಪ್ಪರ್ ಕೇಸ್ ಗೆ ಬದಲಿಸುತ್ತದೆ.
07:03 ಫೈಲನ್ನು ಸೇವ್ ಮಾಡಿ ರನ್ ಮಾಡಿ.
07:08 ನಾವೀಗ ನೋಡುವ ಹಾಗೆ, ಸ್ಟ್ರಿಂಗ್ ಮೆಥಡ್ ಅನ್ನು ಉಪಯೋಗಿಸಿದ ನಂತರ ಔಟ್ ಪುಟ್ ಸ್ಪಷ್ಟವಾಗಿರುತ್ತದೆ.
07:13 ಹೀಗೆ ನಾವು ಸ್ಟ್ರಿಂಗನ್ನು ಕ್ರಿಯೇಟ್ ಮಾಡಿ ಸ್ಟ್ರಿಂಗ್ ಆಪರೇಷನ್ಸ್ ಗಳನ್ನು ಮಾಡುತ್ತೇವೆ.
07:18 ಇನ್ನು ಹೆಚ್ಚಿನ ಸ್ಟ್ರಿಂಗ್ ಮೆಥೆಡ್ ಗಳಿವೆ ಮತ್ತು, ಅವುಗಳ ಬಗ್ಗೆ ಕಾಂಪ್ಲೆಕ್ಸ್ ಟಾಪಿಕ್ ನ ಬಗ್ಗೆ ತಿಳಿಯುವಾಗ ಚರ್ಚಿಸೋಣ.
07:26 ಇಲ್ಲಿಗೆ ಈ ಟ್ಯುಟೋರಿಯಲ್ ನ ಕೊನೆ ತಲುಪಿದೆವು.
07:29 ಈ ಟ್ಯುಟೋರಿಯಲ್ ನಲ್ಲಿ ನಾವು,
07:31 ಸ್ಟ್ರಿಂಗನ್ನು ಕ್ರಿಯೇಟ್ ಮಾಡುವುದು ಹೇಗೆ, ಮತ್ತು ಆಡ್ ಮಾಡುವುದು ಹೇಗೆ
07:33 ಮತ್ತು ಲೋವರ್ ಕೇಸ್, ಅಪ್ಪರ್ ಕೇಸ್ ಗಳಿಗೆ ಬದಲಿಸುವುದೇ ಮುಂತಾದ ಸ್ಟ್ರಿಂಗ್ ಆಪರೇಷನ್ಸ್ ಗಳನ್ನು ಕಲಿತೆವು.
07:39 ಈ ಟ್ಯುಟೋರಿಯಲ್ ನ ಅಸೈನ್ಮೆಂಟ್ ಏನೆಂದರೆ
07:41 ಜಾವಾದಲ್ಲಿ ಸ್ಟ್ರಿಂಗ್ ನ concat (ಕಾಂಕೇಟ್) ಮೆಥೆಡ್ ನ ಬಗ್ಗೆ ಓದಿ. ಮತ್ತು ಅದು ಸ್ಟ್ರಿಂಗನ್ನು ಆಡ್ ಮಾಡುವುದಕ್ಕಿಂತ ಹೇಗೆ ಬೇರೆಯಾಗಿದೆಯೆಂದು ಕಂಡು ಹಿಡಿಯಿರಿ.
07:50 ಈ ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಬಗ್ಗೆ ಹೆಚ್ಚು ತಿಳಿಯಲು ದಯವಿಟ್ಟು ಈ ಲಿಂಕ್ ನಲ್ಲಿ ಸಿಗುವ ವೀಡಿಯೋ ವನ್ನು ನೋಡಿ.
07:55 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ಹೇಳುತ್ತದೆ.
07:58 ನಿಮ್ಮಲ್ಲಿ ಉತ್ತಮ ಬ್ಯಾಂಡ್ವಿಡ್ಥ್ ಇಲ್ಲವಾದಲ್ಲಿ ನೀವಿದನ್ನು ಡೌನ್ಲೋಡ್ ಮಾಡಿ ಕೂಡಾ ನೋಡಬಹುದು.
08:03 ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.
08:07 ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
08:17 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
08:21 ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
08:28 ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
08:33 ಈ ಪಾಠದ ಅನುವಾದಕ ಬೆಂಗಳೂರಿನಿಂದ ರುಕ್ಮಾಂಗದ ಆರ್ಯ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. ಧನ್ಯವಾದಗಳು.

Contributors and Content Editors

PoojaMoolya, Vasudeva ahitanal