Java/C2/Parameterized-constructors/Kannada

From Script | Spoken-Tutorial
Jump to: navigation, search
Time Narration
00:02 ಜಾವಾದಲ್ಲಿ parameterized constructor ( ಪ್ಯಾರಾಮೀಟರೈಜ್ಡ್ ಕನ್ಸ್-ಟ್ರಕ್ಟರ್)’ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:08 ಈ ಟ್ಯುಟೋರಿಯಲ್ ನಲ್ಲಿ ನಾವು
00:10 ಪ್ಯಾರಾಮೀಟರೈಜ್ಡ್ ಕನ್ಸ್-ಟ್ರಕ್ಟರ್ ನ ಕುರಿತು,
00:13 ಮತ್ತು ಪ್ಯಾರಾಮೀಟರೈಜ್ಡ್ ಕನ್ಸ್-ಟ್ರಕ್ಟರ್ ಅನ್ನು ರಚನೆ ಮಾಡಲು ಕಲಿಯುತ್ತೇವೆ.
00:17 ಇಲ್ಲಿ ನಾವು

Ubuntu version 11.10 OS ( ಉಬಂಟು ವರ್ಶನ್ ೧೧.೧೦ ಓ.ಎಸ್) Java Development kit 1.6 (ಜಾವಾ ಡೆವೆಲೊಪ್ಮೆಂ ಟ್ ಕಿಟ್ ೧.೬) And Eclipse 3.7.0 ಮತ್ತು (ಎಕ್ಲಿಪ್ಸ್ ೩.೭.೦) ಗಳನ್ನು ಉಪಯೋಗಿಸುತ್ತೇವೆ.

00:29 ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು
00:32 ಜಾವಾದಲ್ಲಿ ಎಕ್ಲಿಪ್ಸ್ ಅನ್ನು ಉಪಯೋಗಿಸಿ ಡಿಫಾಲ್ಟ್ ಕನ್ಸ್-ಟ್ರಕ್ಟರ್ ಅನ್ನು ರಚಿಸಲು ತಿಳಿದಿರಬೇಕು.
00:37 ತಿಳಿದಿರದಿದ್ದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಾಗಿ ಕೆಳಕಂಡ ಅಂತರ್ಜಾಲ ತಾಣವನ್ನು ಭೇಟಿಕೊಡಿ.

(http://www.spoken-tutorial.org)

00:44 ಪ್ಯಾರಾಮೀಟರೈಜ್ಡ್ ಕನ್ಸ್-ಟ್ರಕ್ಟರ್ ಎಂದರೇನು? ಎಂದು ನೋಡೋಣ.
00:48 ಪ್ಯಾರಾಮೀಟರ್ ಗಳನ್ನು ಹೊಂದಿರುವ ಕನ್ಸ್-ಟ್ರಕ್ಟರ್ ಅನ್ನು ಪ್ಯಾರಾಮೀಟರೈಜ್ಡ್ ಕನ್ಸ್-ಟ್ರಕ್ಟರ್ ಎನ್ನುತ್ತಾರೆ.
00:55 ಇದು ಒಂದು ಅಥವಾ ಹೆಚ್ಚು ಪ್ಯಾರಾಮೀಟರ್ ಗಳನ್ನು ಹೊಂದಿರಬಹುದು.
00:59 ಈಗ ನಾವು ಒಂದು ಪ್ಯಾರಾಮೀಟರೈಜ್ಡ್ ಕನ್ಸ್-ಟ್ರಕ್ಟರ್ ಅನ್ನು ರಚನೆ ಮಾಡೋಣ.
01:03 ಎಕ್ಲಿಪ್ಸ್ ನಲ್ಲಿ ನಾನು Student.java ಎಂಬ ಫೈಲ್ ಅನ್ನು ತೆರೆಯುತ್ತೇನೆ.
01:09 ಈ ಫೈಲ್ ಅನ್ನು ನಾವು ಹಿಂದಿನ ಟ್ಯುಟೋರಿಯಲ್ ನಲ್ಲಿ ರಚನೆ ಮಾಡಿದ್ದೇವೆ.
01:15 ಈಗ ಕನ್ಸ್-ಟ್ರಕ್ಟರ್ ನಲ್ಲಿ ವೇರಿಯೇಬಲ್ ಗಳಿಗೆ ಅವುಗಳ ಡಿಫಾಲ್ಟ್ ಬೆಲೆಗಳನ್ನು ನೀಡೋಣ.
01:21 roll_number ಸಮ( ಹತ್ತರ ಬದಲು ) 0(ಸೊನ್ನೆ) ಎಂದು ಟೈಪ್ ಮಾಡೋಣ.
01:27 ಮತ್ತು name ಸಮ (Raman ಬದಲು ) null ಎಂದು ಟೈಪ್ ಮಾಡೋಣ.
01:33 System ಡಾಟ್out ಡಾಟ್ println “I am a default constructor.” ಎಂದು ಟೈಪ್ ಮಾಡಿ.
01:55 ನಾವು ಪ್ಯಾರಾಮೀಟರ್ ಗಳಿಲ್ಲದ ಕನ್ಸ್-ಟ್ರಕ್ಟರ್ ಅನ್ನು ರಚನೆ ಮಾಡಿದ್ದೇವೆ.
02:00 ಜಾವಾದಲ್ಲಿ ಇಂತಹ ಕನ್ಸ್-ಟ್ರಕ್ಟರ್ ಗಳಿಗೆ ಡಿಫಾಲ್ಟ್ ಕನ್ಸ್-ಟ್ರಕ್ಟರ್ ಎಂದೂ ಕರೆಯುತ್ತಾರೆ.
02:07 ಈಗ ಇನ್ನೊಂದು ಕನ್ಸ್-ಟ್ರಕ್ಟರ್ ಅನ್ನು ರಚನೆ ಮಾಡೋಣ.
02:11 Student ಎಂದು ಟೈಪ್ ಮಾಡಿ
02:17 ಬ್ರ್ಯಾಕೆಟ್ ನಲ್ಲಿ int the_roll_number ಅಲ್ಪವಿರಾಮ String the_name ಎಂದು ಟೈಪ್ ಮಾಡಿ.
02:36 ನಾವೀಗ ಪ್ಯಾರಾಮೀಟರ್ ಗಳನ್ನೊಳಗೊಂಡ ಕನ್ಸ್-ಟ್ರಕ್ಟರ್ ಅನ್ನು ರಚಿಸಿದ್ದೇವೆ.
02:43 ಕನ್ಸ್-ಟ್ರಕ್ಟರ್ ಗೆ ಕ್ಲಾಸ್ ನ ಹೆಸರಾದ Student ಎಂದೇ ಹೆಸರು ಕೊಡಬೇಕು.
02:49 ಬ್ರ್ಯಾಕೆಟ್ ನಲ್ಲಿ ಕನ್ಸ್-ಟ್ರಕ್ಟರ್ ಗೆ ಎರಡು ಪ್ಯಾರಾಮೀಟರ್ ಗಳನ್ನು ಕೊಟ್ಟಿದ್ದೇವೆ.
02:57 ಕನ್ಸ್-ಟ್ರಕ್ಟರ್ ಗೆ ಎಷ್ಟು ಬೇಕಾದರೂ ಪ್ಯಾರಾಮೀಟರ್ ಗಳನ್ನು ಕೊಡಬಹುದು.
03:02 ಈಗ ಕರ್ಲೀ ಬ್ರ್ಯಾಕೆಟ್ ನಲ್ಲಿ
03:05 System ಡಾಟ್ out ಡಾಟ್ println “I am a parameterized constructor” ಎಂದು ಟೈಪ್ ಮಾಡಿ.
03:29 ನಂತರ roll_number ಸಮ the_roll_number ಸೆಮಿಕೋಲನ್
03:43 ಮತ್ತು name ಸಮ the_name ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ.
03:53 ಪ್ಯಾರಾಮೀಟರ್ ಗಳನ್ನೊಳಗೊಂಡ ಕನ್ಸ್-ಟ್ರಕ್ಟರ್ ಅನ್ನು ರಚಿಸಿದ್ದೇವೆ.
03:58 ಈಗ ಈ ಕನ್ಸ್-ಟ್ರಕ್ಟರ್ ಅನ್ನು ಕಾಲ್ ಮಾಡೋಣ.
04:02 ಅದಕ್ಕಾಗಿ ಮೇನ್ ಮೆಥಡ್ ನಲ್ಲಿ student stu2 ಸಮ new student ಎಂದು ಟೈಪ್ ಮಾಡಿ ಬ್ರ್ಯಾಕೆಟ್ ನಲ್ಲಿ 11 ಅಲ್ಪವಿರಾಮ ಡಬಲ್ ಕೋಟ್ಸ್ ನಲ್ಲಿ Raju ಎಂದು ಟೈಪ್ ಮಾಡಿ.
04:28 ಈಗ studentDetail ಮೆಥಡ್ ಅನ್ನು ಕಾಲ್ ಮಾಡೋಣ.
04:31 ಅದಕ್ಕಾಗಿ stu2.studentDetail() ಎಂದು ಟೈಪ್ ಮಾಡಿ.
04:38 ಸೇವ್ ಮಾಡಿ ರನ್ ಮಾಡಿರಿ.
04:44 ನಾವು ಪರದೆಯ ಮೇಲೆ ಫಲಿತವನ್ನು ನೋಡುತ್ತಿದ್ದೇವೆ.
04:48 ಮೊದಲು ಡಿಫಾಲ್ಟ್ ಕನ್ಸ್-ಟ್ರಕ್ಟರ್ ಕಾಲ್ ಆಗುತ್ತದೆ.
04:52 ಇದು ವೇರಿಯೇಬಲ್ ಗಳನ್ನು ಅವುಗಳ ಡಿಫಾಲ್ಟ್ ಬೆಲೆಗೆ ಇನಿಷಿಯಲೈಜ್ ಮಾಡುತ್ತದೆ.
04:56 ನಂತರ ಪ್ಯಾರಾಮೀಟರೈಜ್ಡ್ ಕನ್ಸ್-ಟ್ರಕ್ಟರ್ ಕಾಲ್ ಆಗುತ್ತದೆ.
05:00 ಇದು ವೇರಿಯೇಬಲ್ ಗಳನ್ನು ನಾವು ಆರ್ಗ್ಯುಮೆಂಟ್ ಆಗಿ ಪಾಸ್ ಮಾಡಿದ ಬೆಲೆಗಳಿಗೆ ಇನಿಷಿಯಲೈಜ್ ಮಾಡುತ್ತದೆ.
05:05 ಅಂದರೆ 11 ಮತ್ತು Raju .
05:08 ಈಗ ಪ್ಯಾರಾಮೀಟರೈಜ್ಡ್ ಕನ್ಸ್-ಟ್ರಕ್ಟರ್ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂದು ನೋಡೋಣ.
05:12 ನಾವು ಈ ಪ್ಯಾರಾಮೀಟರೈಜ್ಡ್ ಕನ್ಸ್-ಟ್ರಕ್ಟರ್ ಅನ್ನು ಕಾಲ್ ಮಾಡುವಾಗ ಎರಡು ಬೆಲೆಗಳನ್ನು ಪಾಸ್ ಮಾಡುತ್ತೇವೆ.
05:18 ಇವುಗಳನ್ನು ಆರ್ಗ್ಯುಮೆಂಟ್ ಗಳೆಂದು ಕರೆಯುತ್ತಾರೆ.
05:22 the_roll_number ಎಂಬ ಪ್ಯಾರಾಮೀಟರ್ ಗೆ 11 ಎಂಬ ಬೆಲೆಯು ನಕಲಾಗುತ್ತದೆ.
05:31 ಮತ್ತು 'the_name' ಎಂಬ ಪ್ಯಾರಾಮೀಟರ್ ಗೆ Raju ಎಂಬ ಬೆಲೆಯು ನಕಲಾಗುತ್ತದೆ.
05:41 the_roll_number ನ ಬೆಲೆಯು roll_number ಗೆ ಅಸೈನ್ ಆಗುತ್ತದೆ..
05:50 ಮತ್ತುthe_name ನ ಬೆಲೆಯು name ಗೆ ಅಸೈನ್ ಆಗುತ್ತದೆ.
05:55 ಹಾಗಾಗಿ ನಾವು ಫಲಿತದಲ್ಲಿ 11 ಮತ್ತು Raju ಎಂದು ನೋಡುತ್ತೇವೆ.
06:00 ಈಗ ನಾವು ಪ್ಯಾರಾಮೀಟರೈಜ್ಡ್ ಕನ್ಸ್-ಟ್ರಕ್ಟರ್ ಅನ್ನು ಕಾಲ್ ಮಾಡಿದಾಗ ಸಾಮಾನ್ಯವಾಗಿ ಕಂಡುಬರುವ ದೋಷಗಳನ್ನು ನೋಡೋಣ.
06:07 ಒಂದು ವೇಳೆ ನಾವು ಕನ್ಸ್-ಟ್ರಕ್ಟರ್ ಗೆ ಒಂದೇ ಆರ್ಗ್ಯುಮೆಂಟ್ ಅನ್ನು ಪಾಸ್ ಮಾಡಿದರೆ ಏನಾಗುತ್ತದೆಂದು ನೋಡೋಣ.
06:11 'Raju' ಎನ್ನುವುದನ್ನು ಅಳಿಸಿ.
06:15 ನಾವು The constructor Student with parameter (int) is undefined. ಎಂಬ ದೋಷವನ್ನು ನೋಡುತ್ತೇವೆ.
06:24 ಅಂದರೆ ಆರ್ಗ್ಯುಮೆಂಟ್ ಗಳ ಸಂಖ್ಯೆ ಪ್ಯಾರಾಮೀಟರ್ ಗಳ ಸಂಖ್ಯೆಗೆ ಸಮವಾಗಿರಬೇಕು.
06:30 ಇಲ್ಲಿ ನಾವು ಪುನಃ Raju ಎಂದು ಟೈಪ್ ಮಾಡಿ ದೋಷವನ್ನು ಪರಿಹರಿಸಬಹುದು.
06:36 ಈಗ ಒಂದೇ ಪ್ಯಾರಾಮೀಟರ್ ಅನ್ನು ಹೊಂದಿರುವ ಇನ್ನೊಂದು ಕನ್ಸ್-ಟ್ರಕ್ಟರ್ ಅನ್ನು ಮಾಡಬಹುದು.
06:42 ಈಗ ಅದನ್ನು ಮಾಡೋಣ.
06:45 Student ಬ್ರ್ಯಾಕೆಟ್ ನಲ್ಲಿ int r_no (r ನಂಬರ್) ಎಂದು ಟೈಪ್ ಮಾಡಿ.
07:01 ಕರ್ಲೀ ಬ್ರ್ಯಾಕೆಟ್ ನಲ್ಲಿ System ಡಾಟ್ out ಡಾಟ್ printl
07:13 I am a constructor with a single parameter ಎಂದು ಟೈಪ್ ಮಾಡಿ.
07:29 ನಂತರ roll_number ಸಮ r_no (r ನಂಬರ್) ಎಂದು ಟೈಪ್ ಮಾಡಿ.
07:48 ಫೈಲ್ ಅನ್ನು ಸೇವ್ ಮಾಡಿರಿ.
07:51 ನಾವು ಕನ್ಸ್-ಟ್ರಕ್ಟರ್ ಅನ್ನು ಡಿಫೈನ್ ಮಾಡಿದ ನಂತರ ದೋಷ ಪರಿಹಾರವಾದದ್ದನ್ನು ನೋಡುತ್ತೇವೆ.
07:58 ಪ್ರೋಗ್ರಾಮ್ ಅನ್ನು ರನ್ ಮಾಡಿ.
08:02 ಪರದೆಯ ಮೇಲೆ ನಾವು ರೋಲ್ ನಂಬರ್ ನ ಬೆಲೆ 11 ಕ್ಕೆ ಅಸೈನ್ ಆಗಿದ್ದನ್ನು ನೋಡಬಹುದು.
08:08 ಕನ್ಸ್-ಟ್ರಕ್ಟರ್ ಒಂದೇ ಆರ್ಗ್ಯುಮೆಂಟ್ ಅನ್ನು ತೆಗೆದುಕೊಳ್ಳುವುದರಿಂದ (ನೇಮ್) name ನ ಬೆಲೆಯು 'null' ಆಗಿರುತ್ತದೆ.
08:18 ನಾವೀಗ ಎರಡು ಪ್ಯಾರಾಮೀಟರ್ ಗಳಿರುವ ಕನ್ಸ್-ಟ್ರಕ್ಟರ್ ಅನ್ನು ಪುನಃ ಕಾಲ್ ಮಾಡೋಣ.
08:23 Student stu3 ಸಮ new Student
08:40 ಬ್ರ್ಯಾಕೆಟ್ ನಲ್ಲಿ 11 ಅಲ್ಪವಿರಾಮ Raju ಎಂದು ಟೈಪ್ ಮಾಡಿ.
08:46 ನಂತರ Stu3 ಡಾಟ್ studentDetail ಎಂದು ಟೈಪ್ ಮಾಡಿ.
08:58 ಒಂದುವೇಳೆ ಇಲ್ಲಿ ನಾವು 11 ಅನ್ನು String ಆರ್ಗ್ಯುಮೆಂಟ್ ಆಗಿ ಪಾಸ್ ಮಾಡಿದರೆ ಅಂದರೆ ಡಬಲ್ ಕೋಟ್ಸ್ ಹಾಕಿದ್ದರೆ,
09:08 ನಾವು
09:10 The constructor Student String ,String is undefined. ಎಂಬ ದೋಷವನ್ನು ಪಡೆಯುತ್ತೇವೆ.
09:17 ಅಂದರೆ ಆರ್ಗ್ಯುಮೆಂಟ್ ಮತ್ತು ಪ್ಯಾರಾಮೀಟರ್ ಗಳ ಡೇಟಾಟೈಪ್ ಒಂದೇ ಆಗಿರಬೇಕು.
09:25 ಹಾಗಾಗಿ ಡಬಲ್ ಕೋಟ್ಸ್ ಅನ್ನು ಅಳಿಸಿ ಸೇವ್ ಮಾಡಿರಿ.
09:32 ಈಗ ದೋಷ ಪರಿಹಾರವಾಗುತ್ತದೆ.
09:35 ಪ್ರೋಗ್ರಾಮ್ ಅನ್ನು ರನ್ ಮಾಡಿ.
09:38 ಫಲಿತದಲ್ಲಿ ಮೂರು ಕನ್ಸ್-ಟ್ರಕ್ಟರ್ ಗಳನ್ನು ನೋಡುತ್ತೇವೆ.
09:42 ಮೊದಲನೆಯದು ಡಿಫಾಲ್ಟ್ ಕನ್ಸ್-ಟ್ರಕ್ಟರ್.
09:45 ಎರಡನೆಯದು ಒಂದು ಪ್ಯಾರಾಮೀಟರನ್ನೊಳಗೊಂಡ ಕನ್ಸ್-ಟ್ರಕ್ಟರ್.
09:50 ಮತ್ತು ಮೂರನೆಯದು ಎರಡು ಪ್ಯಾರಾಮೀಟರಗಳನ್ನೊಳಗೊಂಡ ಕನ್ಸ್-ಟ್ರಕ್ಟರ್.
09:56 ಈ ರೀತಿ ನಾವು ಜಾವಾದಲ್ಲಿ ಪ್ಯಾರಾಮೀಟರೈಜ್ಡ್ ಕನ್ಸ್-ಟ್ರಕ್ಟರ್ ಅನ್ನು ರಚಿಸುತ್ತೇವೆ.
10:05 ಕನ್ಸ್-ಟ್ರಕ್ಟರ್ ಗಳನ್ನು ಯಾಕೆ ಉಪಯೋಗಿಸುತ್ತೇವೆ ಎಂದು ನೋಡೋಣ.
10:07 ಪ್ರತಿ ಬಾರಿ ಇನ್ಸ್-ಟೆನ್ಸ್ ಗಳು ರಚನೆಯಾದಾಗಲೂ ಕ್ಲಾಸ್ ನಲ್ಲಿ ವೇರಿಯೇಬಲ್ ಗಳನ್ನು ಇನಿಷಿಯಲೈಜ್ ಮಾಡಬೇಕು.
10:13 ಎಲ್ಲಾ ವೇರಿಯೇಬಲ್ ಗಳನ್ನು ಪ್ರತಿಬಾರಿಯೂ ಇನಿಷಿಯಲೈಜ್ ಮಾಡುವುದು ಕಷ್ಟಕರ ಕೆಲಸ.
10:18 ಹಾಗಾಗಿ ಜಾವಾದಲ್ಲಿ ಒಬ್ಜೆಕ್ಟ್ ಗಳು ಅವುಗಳು ರಚನೆಯಾದಾಗಲೇ ಇನಿಷಿಯಲೈಜ್ ಆಗಲು ಅವಕಾಶವಿದೆ.
10:25 ಈ ಕ್ರಿಯೆಯು ಕನ್ಸ್-ಟ್ರಕ್ಟರ್ ಗಳ ಮೂಲಕ ನಡೆಯುತ್ತದೆ.
10:30 ಈ ಟ್ಯುಟೋರಿಯಲ್ ನಲ್ಲಿ ನಾವು
10:33 ಪ್ಯಾರಾಮೀಟರೈಜ್ಡ್ ಕನ್ಸ್-ಟ್ರಕ್ಟರ್ ಅನ್ನು ರಚನೆ ಮಾಡಲು,
10:36 ಪ್ಯಾರಾಮೀಟರೈಜ್ಡ್ ಕನ್ಸ್-ಟ್ರಕ್ಟರ್ ನ ಕಾರ್ಯ ವಿಧಾನದ ಕುರಿತು
10:39 ಮತ್ತು ಕನ್ಸ್-ಟ್ರಕ್ಟರ್ ಗಳ ಉಪಯುಕ್ತತೆ ಗಳ ಕುರಿತು ಕಲಿತಿದ್ದೇವೆ.
10:44 ಸ್ವಂತ ಅಭ್ಯಾಸಕ್ಕಾಗಿ, Employee ಎಂಬ ಕ್ಲಾಸ್ ಅನ್ನು ರಚನೆ ಮಾಡಿ.
10:48 ಅದಕ್ಕೆ ಬೇರೆ ಬೇರೆ ಪ್ಯಾರಾಮೀಟರ್ ಗಳನ್ನು ಹೊಂದಿರುವ ಕನ್ಸ್-ಟ್ರಕ್ಟರ್ ಅನ್ನು ರಚನೆ ಮಾಡಿ.
10:53 ಸ್ಪೋಕನ್ ಟ್ಯುಟೋರಿಯಲ್ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ,
10:56 ಮತ್ತು ದೃಶ್ಯಾವಳಿಗಳಿಗಾಗಿ [1] ಎಂಬ ಅಂತರ್ಜಾಲ ತಾಣವನ್ನು ಭೇಟಿಕೊಡಿ.
11:02 ಇದು ಈ ಸ್ಪೋಕನ್ ಟ್ಯುಟೋರಿಯಲ್ ಯೋಜನೆಯ ಬಗ್ಗೆ ತಿಳಿಸುತ್ತದೆ.
11:06 ನೀವು ಒಳ್ಳೆಯ ಬ್ಯಾಂಡ್ವಿಿಡ್ತ್ ಹೊಂದಿರದಿದ್ದಲ್ಲಿ ವಿಡಿಯೋ ವನ್ನು ಡೌನ್ಲೋhಡ್ ಮಾಡಿ ನೋಡಬಹುದು.
11:10 ಸ್ಪೋಕನ್ ಟ್ಯುಟೋರಿಯಲ್ ಯೋಜನಾ ತಂಡವು
11:12 ಸ್ಪೋಕನ್ ಟ್ಯುಟೋರಿಯಲ್ ಗಳ ಕಾರ್ಯಾಗಾರಗಳನ್ನು ಏರ್ಪಡಿಸುತ್ತದೆ.
11:14 ಓನ್ಲೈನನ್ ಪರೀಕ್ಷೆ ಯಲ್ಲಿ ತೇರ್ಗಡೆಯಾದವರಿಗೆ ಪ್ರಮಾಣವನ್ನು ನೀಡುತ್ತದೆ.
11:18 ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಗೆ ಬರೆಯಿರಿ
11:24 ಸ್ಪೋಕನ್ ಟ್ಯುಟೋರಿಯಲ್ ಯೋಜನೆಯು ಟಾಕ್ ಟು ಎ ಟೀಚರ್ ಯೋಜನೆಯ ಒಂದು ಭಾಗವಾಗಿದೆ.
11:28 ಇದು ICT ದ್ವಾರಾ ರಾಷ್ಟ್ರೀಯ ಸಾಕ್ಷರತಾ ಮಿಶನ್ MHRD, ಭಾರತ ಸರ್ಕಾರ ದಿಂದ ಸಮರ್ಥಿತವಾಗಿದೆ.
11:34 ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಅಂತರ್ಜಾಲ ತಾಣವನ್ನು ಭೇಟಿಕೊಡಿ.

http://spoken-tutorial.org/NMEICT-Intro

11:43 ನಾವು ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
11:46 ಧನ್ಯವಾದಗಳು.
11:47 ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್, ಉಪ್ಪಿನಪಟ್ಟಣ. ನಮಸ್ಕಾರ..

Contributors and Content Editors

Pratik kamble, Vasudeva ahitanal