Java-Business-Application/C2/Java-servlets-and-JSPs/Kannada
From Script | Spoken-Tutorial
Time | Narration |
00:01 | Java Servlets and JSPs ಎನ್ನುವ ‘ಸ್ಪೋಕನ್ ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ. |
00:06 | ಈ ‘ಟ್ಯುಟೋರಿಯಲ್’ನಲ್ಲಿ ನಾವು, |
00:09 | ‘ವೆಬ್-ಸರ್ವರ್ ಹಾಗೂ‘ವೆಬ್-ಕಂಟೇನರ್’ ಗಳ ಬಗ್ಗೆ ಕಲಿಯುವೆವು. |
00:12 | ಸರಳವಾದ ಒಂದು Java Servlet ಮತ್ತು JSP ಯನ್ನು ತಯಾರಿಸಲು ಸಹ ನಾವು ಕಲಿಯುವೆವು. |
00:18 | ಇಲ್ಲಿ, ನಾವು |
00:20 | * Ubuntu (ಉಬಂಟು) ಆವೃತ್ತಿ 12.04 (ಹನ್ನೆರಡು ಪಾಯಿಂಟ್ ಸೊನ್ನೆ ನಾಲ್ಕು), |
00:23 | * Netbeans IDE 7.3 (ನೆಟ್ ಬೀನ್ಸ್ ಐ-ಡಿ-ಇ ಏಳು ಪಾಯಿಂಟ್ ಮೂರು), |
00:27 | * JDK 1.7 (ಜೆ-ಡಿ-ಕೆ ಒಂದು ಪಾಯಿಂಟ್ ಏಳು) ಹಾಗೂ |
00:29 | * Firefox web-browser 21.0 (ಫೈರ್ ಫಾಕ್ಸ್ ವೆಬ್ ಬ್ರೌಸರ್ ಇಪ್ಪತ್ತೊಂದು ಪಾಯಿಂಟ್ ಸೊನ್ನೆ) ಇವುಗಳನ್ನು ಬಳಸುತ್ತಿದ್ದೇವೆ. |
00:33 | ನೀವು, ನಿಮಗೆ ಇಷ್ಟವಾದ ಯಾವುದೇ ವೆಬ್-ಬ್ರೌಸರ್ ಅನ್ನು ಉಪಯೋಗಿಸಬಹುದು. |
00:37 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನಿಮಗೆ - |
00:41 | Netbeans IDE ಯನ್ನು ಬಳಸಿ Core Java ಹಾಗೂ |
00:45 | HTML ಇವುಗಳು ತಿಳಿದಿರಬೇಕು. |
00:47 | ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಗೆ ಭೇಟಿಕೊಡಿ. |
00:52 | ಸರ್ವ್ಲೆಟ್ಸ್ (servlets) ಹಾಗೂ JSP (ಜೆ-ಎಸ್-ಪಿ) ಗಳನ್ನು ನೋಡುವ ಮೊದಲು, ನಾವು ವೆಬ್-ಸರ್ವರ್ ಬಗ್ಗೆ ತಿಳಿದುಕೊಳ್ಳೋಣ. |
00:58 | ವೆಬ್-ಸರ್ವರ್, ಅಂತಿಮ ಬಳಕೆದಾರರಿಗೆ (end-users) ಇಂಟರ್ನೆಟ್ ಮೇಲೆ ವಿಷಯವನ್ನು ಒದಗಿಸುವ ಒಂದು ವ್ಯವಸ್ಥೆಯಾಗಿದೆ. |
01:05 | ಇದು ‘ಇಂಟರ್ನೆಟ್ ಸರ್ವರ್ ಎಂದು ಸಹ ಪರಿಚಿತವಾಗಿದೆ. |
01:10 | ವೆಬ್-ಕಂಟೇನರ್, ವೆಬ್-ಸರ್ವರ್ ನ ಒಂದು ಅಂಗವಾಗಿದ್ದು ಜಾವಾ-ಸರ್ವ್ಲೆಟ್ ಗಳೊಂದಿಗೆ ವ್ಯವಹರಿಸುತ್ತದೆ. |
01:18 | ಇದು ‘ಸರ್ವ್ಲೆಟ್ ಕಂಟೇನರ್’ ಎಂದು ಸಹ ಪರಿಚಿತವಾಗಿದೆ. |
01:22 | ಸರ್ವ್ಲೆಟ್ ಗಳು ಅದರ ಒಳಗಡೆ ಎಕ್ಸಿಕ್ಯೂಟ್ ಆಗಲು ‘ಸರ್ವ್ಲೆಟ್ ಕಂಟೇನರ್’, ಅನುಮತಿಸುತ್ತದೆ. |
01:28 | ನಾವು ಈಗ ಸರಳವಾದ ಒಂದು ‘ಸರ್ವ್ಲೆಟ್’ ಅನ್ನು ಹೇಗೆ ಬರೆಯುವುದೆಂದು ಕಲಿಯೋಣ. |
01:32 | Netbeans IDE ಗೆ ಬದಲಾಯಿಸಿ. |
01:35 | ‘IDE’ ಯ ಎಡಭಾಗದಲ್ಲಿರುವ Project ಎಂಬ ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ. |
01:40 | ಈ ಮೊದಲು, ‘MyFirstProject’ ಎಂಬ ಹೆಸರಿನ ಒಂದು ಸರಳವಾದ ಪ್ರೊಜೆಕ್ಟ್ ಅನ್ನು ನಾವು ತಯಾರಿಸಿದ್ದೆವು. |
01:46 | ನೀವು ಅದನ್ನು ಇಲ್ಲಿ, IDE ಯ ಎಡಭಾಗದಲ್ಲಿ, ನೋಡಬಹುದು. |
01:50 | ಈಗ ಈ Project (ಪ್ರೊಜೆಕ್ಟ್) ನ ಒಳಗೆ, ನಾವು ಒಂದು ಸರಳವಾದ ಸರ್ವ್ಲೆಟ್ ಅನ್ನು ಕ್ರಿಯೇಟ್ ಮಾಡೋಣ. |
01:55 | ಹೀಗೆ ಮಾಡಲು, ‘MyFirstProject’ ನ ಮೇಲೆ ರೈಟ್-ಕ್ಲಿಕ್ ಮಾಡಿ. |
01:59 | New ಎನ್ನುವಲ್ಲಿಗೆ ಹೋಗಿ, Servlet ನ ಮೇಲೆ ಕ್ಲಿಕ್ ಮಾಡಿ. |
02:03 | ‘New Servlet’ ಎಂಬ ಒಂದು ವಿಂಡೋ ತೆರೆದುಕೊಳ್ಳುತ್ತದೆ. |
02:05 | Class Name ಅನ್ನು “MyServlet” ಎಂದು ಟೈಪ್ ಮಾಡಿ. |
02:09 | Package ಹೆಸರನ್ನು “org.spokentutorial” ಎಂದು ಟೈಪ್ ಮಾಡಿ. |
02:16 | ಆಮೇಲೆ Next ನ ಮೇಲೆ ಕ್ಲಿಕ್ ಮಾಡಿ. |
02:18 | 'Add information to deployment descriptor (web.xml) ಎಂಬುದರ ಮೇಲೆ ಕ್ಲಿಕ್ ಮಾಡಿ. |
02:23 | Class Name, 'org.spokentutorial.MyServlet’ ಆಗಿದೆ ಎನ್ನುವುದನ್ನು ನಾವು ನೋಡಬಹುದು. |
02:30 | Servlet Name ಹಾಗೂ Class Name ಗಳೆರಡೂ ಒಂದೇ ಆಗಿದ್ದು, ‘MyServlet’ ಎಂದು ಇರುವುದನ್ನು ನಾವು ನೋಡಬಹುದು. |
02:37 | URL ಪ್ಯಾಟರ್ನ್, Class Name ಗಳೆರಡೂ ಒಂದೇ ಆಗಿವೆ ಎಂದರೆ ‘MyServlet’ ಆಗಿದೆ ಎನ್ನುವುದನ್ನು ಗಮನಿಸಿ. |
02:45 | ನಾವು ಇದನ್ನು MyServletPath ಎಂದು ಬದಲಾಯಿಸಬಹುದು. |
02:50 | ಆಮೇಲೆ Finish ನ ಮೇಲೆ ಕ್ಲಿಕ್ ಮಾಡಿ. |
02:53 | MyServlet.java ಗಾಗಿ IDE ಯಿಂದ ತಯಾರಿಸಲ್ಪಟ್ಟ ‘ಸೋರ್ಸ್-ಕೋಡ್’, ‘Source ಎಡಿಟರ್ ವಿಂಡೋ’ನಲ್ಲಿ ಕಾಣಿಸುತ್ತದೆ. |
03:01 | ‘org.spokentutorial’ ಎಂಬ ಪ್ಯಾಕೇಜ್ ನಲ್ಲಿ, ‘MyServlet.java’ ರಚಿತವಾಗಿರುವುದನ್ನು ನಾವು ನೋಡುತ್ತೇವೆ. |
03:09 | ಸರ್ವ್ಲೆಟ್, main() ಮೆಥಡ್ ಅನ್ನು ಮಾತ್ರ ಹೊಂದಿಲ್ಲ. ಇದರ ಹೊರತಾಗಿ ಸರ್ವ್ಲೆಟ್, ಬೇರೆ ಯಾವುದೇ Java ಕ್ಲಾಸ್ ನಂತೆಯೇ ಆಗಿದೆ ಎನ್ನುವುದನ್ನು ಗಮನಿಸಿ. |
03:19 | ಈಗ ನಾವು, Glassfish Server ನ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ. |
03:24 | ಸರ್ವ್ಲೆಟ್ ಅನ್ನು, ‘ಸರ್ವ್ಲೆಟ್ ಕಂಟೇನರ್’ನಲ್ಲಿ ನಿಯೋಜಿಸಲಾಗಿದೆ (ಡಿಪ್ಲಾಯ್ ಮಾಡಲಾಗಿದೆ). |
03:28 | ನಾವು ‘Glassfish’ ಅನ್ನು ನಮ್ಮ ‘ಸರ್ವರ್’ ಎಂದು ಬಳಸುತ್ತಿದ್ದೇವೆ. |
03:32 | ‘ಸರ್ವ್ಲೆಟ್ ಕಂಟೇನರ್’, ಸರ್ವ್ಲೆಟ್ ಗಳೊಡನೆ ವ್ಯವಹರಿಸುವ Glassfish ನ ಒಂದು ಭಾಗವಾಗಿದೆ. |
03:39 | ಈಗ ನಾವು Netbeans IDE ಗೆ ಹಿಂದಿರುಗೋಣ. |
03:42 | MyServlet, HttpServlet ಅನ್ನು ‘ಎಕ್ಸ್ಟೆಂಡ್’ (extend) ಮಾಡುತ್ತದೆ ಎಂದು ಗಮನಿಸಿ. |
03:48 | ‘ಕೋಡ್’ ನ ಕೆಳತುದಿಯಲ್ಲಿ, ‘HttpServlet methods’ ಎಂದು ಇರುವುದನ್ನು ನಾವು ನೋಡಬಹುದು. |
03:54 | ಈ ಮೆಥಡ್ ಗಳನ್ನು ನೋಡಲು, ಎಡಗಡೆಯ ಪ್ಲಸ್ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ. |
03:59 | ‘doGet’, ‘doPost’ ಹಾಗೂ ‘getServletInfo’ ಎನ್ನುವ ಮೆಥಡ್ ಗಳನ್ನು ನಾವು ನೋಡುತ್ತೇವೆ. |
04:09 | ನಾವು ಈ ಮೆಥಡ್ ಗಳನ್ನು ‘ಓವರ್ ರೈಡ್’ ಮಾಡಬಹುದು. |
04:12 | ಮೇಲ್ತುದಿಯಲ್ಲಿ, ‘processRequest’ ಎಂಬ ಇನ್ನೊಂದು ಮೆಥಡ್ ಇರುವುದನ್ನು ನಾವು ನೋಡಬಹುದು. |
04:18 | ಗೊಂದಲ ಆಗುವುದನ್ನು ತಪ್ಪಿಸಲು, ನಾವು ‘processRequest’ ಹಾಗೂ ‘getServletInfo’ ಮೆಥಡ್ ಗಳನ್ನು ತೆಗೆದುಹಾಕುವೆವು (delete). |
04:25 | ಹೀಗಾಗಿ, ನಮ್ಮ ಹತ್ತಿರ ‘doGet’ ಮತ್ತು ‘doPost’ ಈ ಎರಡು ಮೆಥಡ್ ಗಳು ಉಳಿದಿವೆ. |
04:31 | ಸಧ್ಯಕ್ಕೆ, ನಾವು ‘doGet’ ಮೆಥಡ್ ಅನ್ನು ನೋಡುವೆವು. |
04:35 | ಯಾವುದೇ ಒಂದು ಸರಳವಾದ URL ‘ರಿಕ್ವೆಸ್ಟ್’ಗೆ, ‘doGet’ ಎನ್ನುವುದು ಡೀಫಾಲ್ಟ್ ಮೆಥಡ್ ಆಗಿದೆ. |
04:41 | ಆದ್ದರಿಂದ, ನಾವು doGet ಮೆಥಡ್ ನಲ್ಲಿ ಸ್ವಲ್ಪ ಕೋಡನ್ನು ಟೈಪ್ ಮಾಡುವೆವು. |
04:45 | ‘processRequest’ ಎಂಬ ಮೆಥಡ್ ಅನ್ನು ನಾವು ಈಗಾಗಲೇ ಡಿಲೀಟ್ ಮಾಡಿದ್ದೆವು. |
04:49 | ಆದ್ದರಿಂದ, processRequest ಮೆಥಡ್ ನ ‘ಮೆಥಡ್ ಕಾಲ್’ ಅನ್ನು ತೆಗೆದುಹಾಕಿ. |
04:54 | ‘doPost’ ಮೆಥಡ್ ನಿಂದ ಸಹ ಇದನ್ನು ತೆಗೆದುಹಾಕಿ. |
04:58 | ಈಗ, ನಾವು doGet ಎನ್ನುವ ಮೆಥಡ್ ಗೆ ಬರೋಣ. |
05:01 | ಇಲ್ಲಿ, doGet ಮೆಥಡ್ ಗೆ ರವಾನಿಸಲಾದ (passed) ಎರಡು ಪ್ಯಾರಾಮೀಟರ್ ಗಳು ಇರುವುದನ್ನು ನಾವು ನೋಡಬಹುದು. |
05:07 | ಇವುಗಳು request ಮತ್ತು response ಎನ್ನುವ ಎರಡು ಆಬ್ಜೆಕ್ಟ್ ಗಳಾಗಿವೆ. |
05:12 | ಅಲ್ಲದೆ, Request ಎನ್ನುವುದು HttpServletRequest ನ ‘ಟೈಪ್’ನದ್ದು ಆಗಿದೆ ಎಂದು ಗಮನಿಸಿ. |
05:18 | ಮತ್ತು response ಎಂಬ ಆಬ್ಜೆಕ್ಟ್, HttpServletResponse ನ ‘ಟೈಪ್’ನದು ಆಗಿದೆ. |
05:22 | client (ಕ್ಲೈಂಟ್)ನ ಬದಿಗೆ, ‘HTML response’ ಅನ್ನು ಮರಳಿ ಕಳಿಸಲು, ನಾವು response ಆಬ್ಜೆಕ್ಟ್ ಅನ್ನು ಬಳಸುವೆವು. |
05:30 | ಇದಕ್ಕಾಗಿ, ನಮಗೆ PrintWriter (ಪ್ರಿಂಟ್ ರೈಟರ್) ಎಂಬ ಒಂದು ಆಬ್ಜೆಕ್ಟ್ ಅನ್ನು ಕ್ರಿಯೇಟ್ ಮಾಡಬೇಕಾಗುವುದು. |
05:35 | PrintWriter class ಅನ್ನು ಈಗಾಗಲೇ ಇಂಪೋರ್ಟ್ ಮಾಡಲಾಗಿದೆ ಎನ್ನುವುದನ್ನು ಗಮನಿಸಿ. |
05:40 | ಆದ್ದರಿಂದ, doGet ಮೆಥಡ್ ನ ಒಳಗಡೆ ಹೀಗೆ ಟೈಪ್ ಮಾಡಿ: PrintWriter ಸ್ಪೇಸ್ writer ಇಕ್ವಲ್ ಟು response ಡಾಟ್ getWriter ಓಪನ್ ಮತ್ತು ಕ್ಲೋಸ್ ಬ್ರಾಕೆಟ್ಸ್ ಸೆಮಿಕೋಲನ್. |
05:57 | Enter ಅನ್ನು ಒತ್ತಿ. |
05:59 | ಮುಂದಿನ ಲೈನ್ ನಲ್ಲಿ ಹೀಗೆ ಟೈಪ್ ಮಾಡಿ: |
06:02 | writer ಡಾಟ್ println ಬ್ರಾಕೆಟ್ಸ್ ಮತ್ತು ಡಬಲ್ ಕೋಟ್ಸ್ ನಲ್ಲಿ Welcome. |
06:09 | ಆಮೇಲೆ, ಫೈಲನ್ನು ಸೇವ್ ಮಾಡಲು ‘Ctrl S’ ಒತ್ತಿ. |
06:14 | ಈಗ, ನಾವು ಸರ್ವ್ಲೆಟ್ ಅನ್ನು ‘ರನ್’ ಮಾಡೋಣ. |
06:17 | ಹೀಗೆ ಮಾಡಲು, ಎಡಭಾಗದಲ್ಲಿ, Projects ಟ್ಯಾಬ್ ನಲ್ಲಿ, ‘MyServlet ಡಾಟ್ java’ ದ ಮೇಲೆ ರೈಟ್-ಕ್ಲಿಕ್ ಮಾಡಿ. |
06:24 | ನಂತರ, Run File ನ ಮೇಲೆ ಕ್ಲಿಕ್ ಮಾಡಿ. |
06:27 | ನಮಗೆ ಒಂದು ‘Set Servlet Execution URI’ ಡೈಲಾಗ್ ಬಾಕ್ಸ್ ಸಿಗುತ್ತದೆ. |
06:32 | OK ಯ ಮೇಲೆ ಕ್ಲಿಕ್ ಮಾಡಿ. |
06:35 | ಬ್ರೌಸರ್ ವಿಂಡೋ ತೆರೆದುಕೊಂಡಾಗ, URL ನತ್ತ ನೋಡಿ. |
06:39 | ಅದು ‘localhost ಕೋಲನ್ 8080 ಸ್ಲ್ಯಾಶ್ MyFirstProject ಸ್ಲ್ಯಾಶ್ MyServletPath’ ಎಂದು ಇದೆ. |
06:47 | ಇಲ್ಲಿ, MyFirstProject ಎನ್ನುವುದು ಕಾಂಟೆಕ್ಸ್ಟ್ ನೇಮ್ (context name) ಆಗಿದ್ದು, MyServletPath, ನಾವು ಸೆಟ್ ಮಾಡಿದ URL ಪ್ಯಾಟರ್ನ್ ಆಗಿದೆ. |
06:55 | “Welcome” ಎನ್ನುವ ಟೆಕ್ಸ್ಟ್, ಬ್ರೌಸರ್ ನ ಮೇಲೆ ಪ್ರಿಂಟ್ ಆಗಿರುವುದನ್ನು ನಾವು ನೋಡುತ್ತೇವೆ. |
07:00 | ಈಗ ‘Netbeans IDE’ ಗೆ ಹಿಂದಿರುಗಿ. |
07:03 | ‘println’ ಮೆಥಡ್ ನಲ್ಲಿ, ನಾವು ‘html ಕೋಡ್’ಅನ್ನು ‘ಪಾಸ್’ ಮಾಡಬಹುದು. |
07:07 | ಉದಾಹರಣೆಗೆ, ‘Welcome’ ಅನ್ನು ‘h3’ ಟ್ಯಾಗ್ ನಲ್ಲಿ ಇರಿಸಿ. |
07:12 | ಈಗ ಫೈಲನ್ನು ಸೇವ್ ಮಾಡಿ. |
07:14 | ನಾವು ಈ ‘ಸರ್ವ್ಲೆಟ್’ ಅನ್ನು, ಈ ಮೊದಲೇ ಡಿಪ್ಲಾಯ್ (ಸಜ್ಜುಮಾಡು) ಮಾಡಿದ್ದರಿಂದ, ನಮಗೆ ಇದನ್ನು ಮತ್ತೊಮ್ಮೆ ರನ್ ಮಾಡಬೇಕಾದ ಅಗತ್ಯವಿಲ್ಲ. |
07:20 | ಅದನ್ನು ‘ವೆಬ್ ಕಂಟೇನರ್’, ತಾನೇ ಕಂಡುಹಿಡಿಯುವುದು. |
07:23 | ಹೀಗಾಗಿ, ನಾವು ಬ್ರೌಸರ್ ಗೆ ಹಿಂದಿರುಗಬಹುದು. |
07:27 | ರಿಫ್ರೆಶ್ ಮಾಡಿ. |
07:28 | ನಾವು ‘Welcome’ ಸಂದೇಶವನ್ನು ಬೇರೆ ಫಾರ್ಮ್ಯಾಟ್ (ರೂಪ) ನಲ್ಲಿ ನೋಡುತ್ತೇವೆ. |
07:32 | ಈಗ IDE ಗೆ ಹಿಂದಿರುಗಿ. |
07:35 | ಹೀಗೆ, ನಾವು ಒಂದು ಸರ್ವ್ಲೆಟ್ ಅನ್ನು ಯಶಸ್ವಿಯಾಗಿ ತಯಾರಿಸಿದ್ದೇವೆ. |
07:39 | ಸರ್ವ್ಲೆಟ್ ಗಳನ್ನು ಬಳಸಿ, ನಾವು ಯಾವುದೇ ವೆಬ್-ಅಪ್ಲಿಕೇಶನ್ ಅನ್ನು ತಯಾರಿಸಬಹುದು. |
07:45 | ಒಂದು ‘HTML ಕೋಡ್’ಅನ್ನು ಪ್ರದರ್ಶಿಸಲು, ನಾವು ಸರ್ವ್ಲೆಟ್ ಅನ್ನು ಬಳಸಿದೆವು. |
07:49 | ಇಲ್ಲಿ, Java ಕೋಡ್ ನ ಒಳಗಡೆ HTML ಕೋಡ್ ಇದೆ ಎನ್ನುವುದನ್ನು ಗಮನಿಸಿ. |
07:54 | ಇದು ಸಾಧ್ಯವಿದ್ದರೂ, ದೊಡ್ಡ ವೆಬ್-ಅಪ್ಲಿಕೇಶನ್ ಗಳಿಗಾಗಿ ಇದನ್ನು ಮಾಡಲು ಕಷ್ಟವಾಗುತ್ತದೆ. |
08:00 | ಆದ್ದರಿಂದ ಈ ಪದ್ಧತಿಯನ್ನು ಶಿಫಾರಸು ಮಾಡಲಾಗಿಲ್ಲ. |
08:03 | JSP (ಜಾವಾ ಸರ್ವರ್ ಪೇಜ್) ಯನ್ನು ಬಳಸಿ ಇದನ್ನು ಬದಲಾಯಿಸುವುದು ಒಳಿತು. |
08:10 | ನಾವು ಸರ್ವ್ಲೆಟ್ ಹಾಗೂ JSP ಗಳ ಉಪಯೋಗವನ್ನು ನೋಡುವೆವು. |
08:13 | ನಿರೂಪಣೆಯನ್ನು ವಿಷಯದಿಂದ ಬೇರ್ಪಡಿಸಲು ಸರ್ವ್ಲೆಟ್ ಹಾಗೂ JSP ಗಳು ಒಟ್ಟಿಗೇ ಬಳಸಲ್ಪಡುತ್ತವೆ. |
08:20 | ಸರ್ವ್ಲೆಟ್ ಗಳು ಕಂಟ್ರೋಲರ್ ನ ಹಾಗೆ ಮತ್ತು JSP ಗಳು ವ್ಯೂದ ಹಾಗೆ ಕೆಲಸಮಾಡುತ್ತವೆ. |
08:25 | ಸರ್ವ್ಲೆಟ್ ಗಳು, Java ಕೋಡ್ ನಲ್ಲಿ HTML ಕೋಡ್ ಅನ್ನು ಒಳಗೊಂಡಿರುತ್ತವೆ. |
08:30 | JSP ಗಳು, ‘HTML ಕೋಡ್’ ನಲ್ಲಿ ‘Java ಕೋಡ್’ ಅನ್ನು ಒಳಗೊಂಡಿರುತ್ತವೆ. |
08:35 | ನಾವು ಮುಂದಿನ ಟ್ಯುಟೋರಿಯಲ್ ಗಳಲ್ಲಿ, ಇವುಗಳ ಬಗ್ಗೆ ಇನ್ನಷ್ಟು ಕಲಿಯುವೆವು. |
08:39 | ಈಗ Netbeans IDE ಗೆ ಹಿಂದಿರುಗಿ. |
08:42 | ನಾವು ಈಗ ಸರಳವಾದ ಒಂದು JSP ಪೇಜನ್ನು ತಯಾರಿಸೋಣ. |
08:47 | ಆದ್ದರಿಂದ, MyFirstProject ನ ಮೇಲೆ ರೈಟ್-ಕ್ಲಿಕ್ ಮಾಡಿ. |
08:50 | New ಎನ್ನುವಲ್ಲಿಗೆ ಹೋಗಿ. ಮತ್ತು ‘JSP’ ಯ ಮೇಲೆ ಕ್ಲಿಕ್ ಮಾಡಿ. |
08:54 | ‘New JSP’ ಎಂಬ ಒಂದು ವಿಂಡೋ ತೆರೆದುಕೊಳ್ಳುತ್ತದೆ. |
08:57 | Filename ಅನ್ನು ‘welcome’ ಎಂದು ಟೈಪ್ ಮಾಡಿ. |
09:01 | ಆಮೇಲೆ Finish ನ ಮೇಲೆ ಕ್ಲಿಕ್ ಮಾಡಿ. |
09:04 | ಎಡಭಾಗದಲ್ಲಿರುವ Projects ಎಂಬ ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ. |
09:07 | 'Welcome.jsp’, ‘Web Pages’ ಎಂಬ ಫೋಲ್ಡರ್ ನ ಅಡಿಯಲ್ಲಿ ಇರುವುದನ್ನು ನಾವು ನೋಡಬಹುದು. |
09:13 | ಈಗ, ಎಡಿಟರ್ ನಲ್ಲಿ, ‘Hello World’ ಅನ್ನು ‘Welcome’ ಎಂದು ಬದಲಾಯಿಸಿ. |
09:19 | ‘Welcome’ ಎನ್ನುವುದು ‘h1’ಟ್ಯಾಗ್’ ಗಳಲ್ಲಿ ಇರುವುದನ್ನು ಗಮನಿಸಿ. |
09:23 | ಈಗ ಫೈಲನ್ನು ಸೇವ್ ಮಾಡಿ. |
09:25 | ಬ್ರೌಸರ್ ಗೆ ಹಿಂತಿರುಗಿ. |
09:27 | URL ನಲ್ಲಿ, MyFirstProject ಸ್ಲ್ಯಾಶ್ ನ ನಂತರ welcome.jsp ಎಂದು ಟೈಪ್ ಮಾಡಿ. |
09:35 | ನಾವು ‘Welcome’ ಎಂಬ ಔಟ್ಪುಟ್ ಅನ್ನು ನೋಡುತ್ತೇವೆ. |
09:38 | ಆದ್ದರಿಂದ, ಪ್ರದರ್ಶನದ ಉದ್ದೇಶಕ್ಕಾಗಿ, JSP ಗೆ ಆದ್ಯತೆ ನೀಡಲಾಗುತ್ತದೆ. |
09:42 | ಸಂಕ್ಷಿಪ್ತವಾಗಿ, |
09:44 | ಈ ‘ಟ್ಯುಟೋರಿಯಲ್’ನಲ್ಲಿ ನಾವು - |
09:47 | * ವೆಬ್-ಸರ್ವರ್ ಮತ್ತು ವೆಬ್-ಕಂಟೇನರ್ ಗಳ ಬಗ್ಗೆ |
09:49 | * ಸರಳವಾದ ಒಂದು Servlet ಅನ್ನು ತಯಾರಿಸಲು ಹಾಗೂ |
09:52 | * ಸರಳವಾದ ಒಂದು JSP ಯನ್ನು ತಯಾರಿಸಲು ಕಲಿತಿದ್ದೇವೆ. |
09:55 | ಇನ್ನಷ್ಟು ಮುಂದುವರಿಯುವ ಮೊದಲು, ನೀವು ಈ ಟ್ಯುಟೋರಿಯಲ್ ಅನ್ನು ಪೂರ್ಣಗೊಳಿಸಿರುವುದನ್ನು ದಯವಿಟ್ಟು ಖಚಿತಪಡಿಸಿಕೊಳ್ಳಿ. |
10:01 | ಈ ಕೆಳಗಿನ ಲಿಂಕ್ನಲ್ಲಿ ಲಭ್ಯವಿರುವ ವೀಡಿಯೋವನ್ನು ನೋಡಿ.http://spoken-tutorial.org/What_is_a_Spoken_Tutorial |
10:04 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ. |
10:08 | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
10:13 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ತಂಡವು: |
10:15 | ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
10:19 | ಆನ್-ಲೈನ್ ಪರೀಕ್ಷೆಯಲ್ಲಿ ಪಾಸಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
10:22 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ.contact@spoken-tutorial.org |
10:28 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರಕಲ್ಪವು, ‘ಟಾಕ್ ಟು ಎ ಟೀಚರ್’ ಪ್ರಕಲ್ಪದ ಒಂದು ಭಾಗವಾಗಿದೆ. |
10:32 | ಇದು ಭಾರತ ಸರ್ಕಾರದ ICT, MHRD ಮೂಲಕ ‘ರಾಷ್ಟ್ರೀಯ ಸಾಕ್ಷರತಾ ಮಿಶನ್’ನ ಆಧಾರವನ್ನು ಪಡೆದಿದೆ. |
10:40 | ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ. http://spoken-tutorial.org/NMEICT-Intro |
10:50 | ಒಂದು ಪ್ರಮುಖ ಸಾಫ್ಟ್ವೇರ್ MNC, ತಮ್ಮ Corporate Social Responsibility programme ನ ಮೂಲಕ ಈ Library Management System ಅನ್ನು ಕೊಡುಗೆಯಾಗಿ ನೀಡಿದ್ದಾರೆ. |
11:00 | ಈ ಸ್ಪೋಕನ್ ಟ್ಯುಟೋರಿಯಲ್ ಗಾಗಿ ಅವರು ವಿಷಯವನ್ನು ಸಹ ಮೌಲ್ಯಾಂಕಿತಗೊಳಿಸಿದ್ದಾರೆ (validate). |
11:04 | IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ ವಂದನೆಗಳು. |
Contributors and Content Editors
Chaithanyarao, Pratik kamble, Sandhya.np14, Vasudeva ahitanal