Java-Business-Application/C2/Issuing-and-Returning-a-book/Kannada

From Script | Spoken-Tutorial
Jump to: navigation, search
Time Narration
00:00 Issuing and returning a book ಎನ್ನುವ ‘ಸ್ಪೋಕನ್ ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ.
00:05 ಈ ‘ಟ್ಯುಟೋರಿಯಲ್’ನಲ್ಲಿ ನಾವು,
00:08 * ‘ಯೂಸರ್’ನ ಎಲ್ಲ ವಿವರಗಳನ್ನು ತರಲು,
00:11 * ಪುಸ್ತಕವನ್ನು (ಬುಕ್) ‘ಇಶ್ಯೂ’ ಮಾಡಲು ಹಾಗೂ
00:13 * ಪುಸ್ತಕವನ್ನು ಹಿಂದಿರುಗಿಸಲು (ರಿಟರ್ನ್) ಕಲಿಯುವೆವು.
00:15 ಇಲ್ಲಿ ನಾವು,
00:17 'Ubuntu'12.04 (ಉಬಂಟು ಆವೃತ್ತಿ ಹನ್ನೆರಡು ಪಾಯಿಂಟ್ ಸೊನ್ನೆ ನಾಲ್ಕು),
00:20 Netbeans IDE 7.3 (ನೆಟ್ ಬೀನ್ಸ್ ಐ-ಡಿ-ಇ, ಏಳು ಪಾಯಿಂಟ್ ಮೂರು),
00:23 JDK 1.7 (ಜೆ-ಡಿ-ಕೆ ಒಂದು ಪಾಯಿಂಟ್ ಏಳು) ಹಾಗೂ
00:25 Firefox ವೆಬ್ ಬ್ರೌಸರ್ 21.0 (ಫೈರ್ ಫಾಕ್ಸ್ ವೆಬ್ ಬ್ರೌಸರ್ ಇಪ್ಪತ್ತೊಂದು ಪಾಯಿಂಟ್ ಸೊನ್ನೆ) ಇವುಗಳನ್ನು ಬಳಸುತ್ತಿದ್ದೇವೆ.
00:29 ನೀವು, ನಿಮಗೆ ಇಷ್ಟವಾದ ಯಾವುದೇ ವೆಬ್-ಬ್ರೌಸರ್ ಅನ್ನು ಉಪಯೋಗಿಸಬಹುದು.
00:33 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನಿಮಗೆ -
00:37 * ‘ಜಾವಾ ಸರ್ವ್ಲೆಟ್’ಗಳು ಹಾಗೂ ಜೆ-ಎಸ್-ಪಿ ಗಳು (JSP),
00:40 * ‘ಇನ್ವೆಂಟರೀ’ಯನ್ನು ‘ಕ್ರಿಯೇಟ್’ ಮತ್ತು ‘ವ್ಯೂ’ ಮಾಡುವುದು, ಇವುಗಳ ಪರಿಚಯವಿರಬೇಕು.
00:44 ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಗೆ ಭೆಟ್ಟಿಕೊಡಿ.
00:48 ನಾವು ಹಿಂದಿನ ಟ್ಯುಟೋರಿಯಲ್ ನಲ್ಲಿ, 'Admin Section' ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ನೋಡಿದ್ದೆವು.
00:53 ಇಲ್ಲಿ, ಈ ಟ್ಯುಟೋರಿಯಲ್ ನಲ್ಲಿ ನಾವು 'Admin Section' ಗೆ ಹೆಚ್ಚು ಕ್ರಿಯಾತ್ಮಕತೆಯನ್ನು ಸೇರಿಸಿದ್ದೇವೆ.
00:59 ಆದ್ದರಿಂದ, ನಾವು ಬ್ರೌಸರ್ ಗೆ ಬದಲಾಯಿಸೋಣ.
01:02 ನಾವು ಮತ್ತೊಮ್ಮೆ ‘admin’ ಎಂದು ಲಾಗ್-ಇನ್ ಮಾಡೋಣ.
01:05 ‘Admin Section’ ಪೇಜ್ನಲ್ಲಿ, ನಮಗೆ ‘List Users’ ಹಾಗೂ ‘Checkout/Return Book’ ಎಂಬ ಇನ್ನೂ ಎರಡು ಆಯ್ಕೆಗಳಿವೆ ಎನ್ನುವುದನ್ನು ನಾವು ನೋಡಬಹುದು.
01:14 ಈಗ, ನಾವು ‘IDE’ ಗೆ ಬರೋಣ.
01:18 ‘adminsection.jsp’ ಯಲ್ಲಿ, ಇನ್ನೂ ಎರಡು ‘ರೇಡಿಯೋ ಬಟನ್’ಗಳು ಇರುವುದನ್ನು ನಾವು ನೋಡಬಹುದು.
01:24 ‘List Users’ ಗಾಗಿ ಒಂದು ಹಾಗೂ Checkout/Return Book ಗಾಗಿ ಇನ್ನೊಂದು.
01:30 ಈಗ, ಮತ್ತೆ ಬ್ರೌಸರ್ ಗೆ ಬದಲಾಯಿಸಿ.
01:33 ನಾವು ‘List Users’ ಗಾಗಿ, ‘ರೇಡಿಯೋ ಬಟನ್’ನ ಮೇಲೆ ಕ್ಲಿಕ್ ಮಾಡುವೆವು.
01:38 ಇದು, First Name, Surname, Age, Gender ಮತ್ತು Username ಗಳಂತಹ ಎಲ್ಲ ವಿವರಗಳನ್ನು ಹೊಂದಿದೆ.
01:48 ಈ ಹಂತಗಳು, ಮೊದಲಿನ ಎರಡು ಆಯ್ಕೆಗಳಂತೆಯೇ ಆಗಿವೆ.
01:51 ನಾವು ಅವುಗಳನ್ನು ಹಿಂದಿನ ಟ್ಯುಟೋರಿಯಲ್ ನಲ್ಲಿ ನೋಡಿದೆವು.
01:55 ಈಗ, Checkout ಅಥವಾ Return Book ಮಾಡಲು ಇರುವ ಮುಂದಿನ ಆಯ್ಕೆಯ ಮೇಲೆ ನಾವು ಕ್ಲಿಕ್ ಮಾಡೋಣ.
02:01 ನಮಗೆ ಒಂದು ‘ಫಾರ್ಮ್’ ಸಿಗುತ್ತದೆ. ಇದು ನಿಮಗೆ ಚೆಕ್-ಔಟ್ ಜೊತೆಗೆ ‘ಬುಕ್’ ಅನ್ನು ‘ರಿಟರ್ನ್’ ಮಾಡಲು (ಹಿಂದಿರುಗಿಸಲು) ಅನುಮತಿಸುತ್ತದೆ.
02:06 ಈಗ ನಾವು ಇದಕ್ಕಾಗಿ ‘ಕೋಡ್’ಅನ್ನು ನೋಡುವೆವು.
02:09 ‘IDE’ ಗೆ ಬದಲಾಯಿಸಿ.
02:11 ನಾವು ‘Checkout/Return Book’ ನ ಮೇಲೆ ಕ್ಲಿಕ್ ಮಾಡಿದೆವು.
02:14 ಆದ್ದರಿಂದ, ‘menuselection‘ ಇಕ್ವಲ್ ಟು 'checkoutbook' ಆಗಿದೆ.
02:18 ಈ ಹಂತಗಳು, ನಾವು ‘List Books’ ಗಾಗಿ ನೋಡಿದ ಹಂತಗಳ ಹಾಗೆಯೇ ಇರುತ್ತವೆ.
02:23 ಆದರೆ, ಇಲ್ಲಿ ನಾವು ‘RequestDispatcher’ ಅನ್ನು ಬಳಸಿ, ‘request’ ಅನ್ನು ‘checkOut.jsp’ ಗೆ ಫಾರ್ವರ್ಡ್ ಮಾಡುತ್ತೇವೆ.
02:29 ಈಗ, ನಾವು ‘checkOut ಡಾಟ್ jsp’ ಗೆ ಬರೋಣ.
02:33 ಪ್ರತಿಯೊಂದು ‘book’ ಗಾಗಿ ಒಂದು ‘ರೇಡಿಯೋ ಬಟನ್’ ಇರುವುದನ್ನು ಹೊರತುಪಡಿಸಿ ಈ ಪೇಜ್, ‘listBooks ಡಾಟ್ jsp’ ಯ ಹಾಗೆಯೇ ಇರುತ್ತದೆ.
02:42 ಹೀಗಾಗಿ, ನಾವು ಆ ಬುಕ್ ಅನ್ನು ‘Checkout/Return’ ಮಾಡಬಹುದು.
02:46 ಪುಸ್ತಕವನ್ನು ‘ಚೆಕ್-ಔಟ್’ ಮಾಡಬೇಕಾಗಿರುವ ‘ಯೂಸರ್’ನ username ಅನ್ನು ಪಡೆಯಲು, ‘User name’ ಫೀಲ್ಡ್ ಅನ್ನು ಸಹ ನಾವು ಪಡೆದಿದ್ದೇವೆ.
02:53 ಪುಸ್ತಕದ ‘ರಿಟರ್ನ್ ಡೇಟ್’ ಅನ್ನು ಸೆಟ್ ಮಾಡಲು, ನಾವು ‘Date’ ಫೀಲ್ಡ್ ಅನ್ನು ಸಹ ಹೊಂದಿದ್ದೇವೆ.
02:59 ನಾವು ‘ರಿಟರ್ನ್ ಡೇಟ್’ಅನ್ನು, ಇಂದಿನಿಂದ ಒಂದು ವಾರವೆಂದು ಸೆಟ್ ಮಾಡಿದ್ದೇವೆ.
03:04 Calendar ಎಂಬ ‘ಕ್ಲಾಸ್’ ಅನ್ನು ಬಳಸಿ ಇದನ್ನು ಮಾಡಲಾಗಿದೆ.
03:07 ಈ ಕ್ಲಾಸ್ ನ ‘add()’ ಎಂಬ ಫಂಕ್ಷನ್, ಎರಡು ಪ್ಯಾರಾಮೀಟರ್ ಗಳನ್ನು ತೆಗೆದುಕೊಳ್ಳುತ್ತದೆ.
03:13 ಮೊದಲನೆಯದು, ವರ್ಷದ ಇಂದಿನ ದಿನವಾಗಿದೆ.
03:16 ಎರಡನೆಯದು, ಇಂದಿಗೆ ಸೇರಿಸಬೇಕಾದ ದಿನಗಳ ಸಂಖ್ಯೆಯಾಗಿದೆ.
03:21 ನಾವು ಏಳು ದಿನಗಳನ್ನು ಸೇರಿಸಿದ್ದೇವೆ.
03:23 ಈಗ ‘form action’, “CheckOutServlet” ಎಂದು ಇರುವುದನ್ನು ಗಮನಿಸಿ.
03:29 ಈಗ, ನಾವು ಬ್ರೌಸರ್ ಗೆ ಹಿಂತಿರುಗೋಣ.
03:32 ಈಗ ನಾವು ‘Book Id 1’ ಮೇಲೆ ಕ್ಲಿಕ್ ಮಾಡುವೆವು.
03:35 ‘User name’ ಅನ್ನು “arya” ಎಂದು ಟೈಪ್ ಮಾಡುವೆವು.
03:38 ‘ರಿಟರ್ನ್ ಡೇಟ್’, ಇಂದಿನಿಂದ ಒಂದು ವಾರವಿದೆ ಎನ್ನುವುದನ್ನು ನಾವು ನೋಡುತ್ತೇವೆ.
03:43 Available Copies’ ನ ಸಂಖ್ಯೆಯು 9 (ಒಂಬತ್ತು) ಆಗಿದೆ ಎನ್ನುವುದನ್ನು ಗಮನಿಸಿ.
03:48 ‘Checkout book’ನ ಮೇಲೆ ಕ್ಲಿಕ್ ಮಾಡಿ.
03:51 ನಾವು ‘Checkout Success’ ಎಂಬ ಪೇಜನ್ನು ಪಡೆಯುತ್ತೇವೆ.
03:55 ‘Admin Section Page’ ಗೆ ಹಿಂದಿರುಗಲು, ನಾವು “here”ನ ಮೇಲೆ ಕ್ಲಿಕ್ ಮಾಡುವೆವು.
03:59 ಮತ್ತೊಮ್ಮೆ ‘Checkout/Return Book’ ನ ಮೇಲೆ ಕ್ಲಿಕ್ ಮಾಡಿ.
04:03 ‘Available Copies’ ನ ಸಂಖ್ಯೆಯು 8 ಕ್ಕೆ (ಎಂಟು) ಇಳಿಯುವುದನ್ನು ನಾವು ನೋಡಬಹುದು.
04:08 ನಾವು ಈಗ, ಇದಕ್ಕಾಗಿ ‘ಕೋಡ್’ನ್ನು ನೋಡುವೆವು.
04:10 ‘IDE’ ಗೆ ಹಿಂದಿರುಗಿ.
04:13 CheckOutServlet.java ಗೆ (ಚೆಕ್-ಔಟ್ ಸರ್ವ್ಲೆಟ್ ಡಾಟ್ ಜಾವಾ) ಹೋಗಿ.
04:16 ನಾವು ‘errorMsgs’ ಎಂಬ ಲಿಸ್ಟ್ ಅನ್ನು ಸೆಟ್ ಮಾಡಿದ್ದೇವೆ.
04:19 ನಾವು request ನಲ್ಲಿ, errorMsgs ಅನ್ನು ಸೆಟ್ ಮಾಡಿದ್ದೇವೆ.
04:23 ‘getParameter()’ ಅನ್ನು ಬಳಸಿ, ‘request’ ನಿಂದ ನಾವು ‘username’ ಅನ್ನು ಪಡೆಯುತ್ತೇವೆ.
04:28 ಹೀಗೆಯೇ, ನಾವು ‘checkout_book’, ‘return_book’ ಮತ್ತು ‘book-id’ ಗಳನ್ನು ಪಡೆಯುತ್ತೇವೆ.
04:34 ನಂತರ ನಾವು ‘id’ ಯಿಂದ, ‘book_id’ ಯನ್ನು ‘Integer’ (ಇಂಟೀಜರ್) ಎಂದು ಪಾರ್ಸ್ ಮಾಡುತ್ತೇವೆ.
04:40 ನಾವು ‘userName’ ಹಾಗೂ ‘book id’ ಗಳನ್ನು ವ್ಯಾಲಿಡೇಟ್ ಮಾಡುತ್ತೇವೆ.
04:44 ನಾವು ‘Checkout_book’ ಹಾಗೂ ‘Return_Book’ ಗಳು ‘null’ (ಶೂನ್ಯ) ಆಗಿವೆಯೇ ಎಂದು ಸಹ ವ್ಯಾಲಿಡೇಟ್ ಮಾಡುತ್ತೇವೆ.
04:50 ಆಮೇಲೆ ನಾವು, ಇವುಗಳಲ್ಲಿ ಪ್ರತಿಯೊಂದೂ ‘null’ ಆಗಿಲ್ಲ ಎನ್ನುವುದನ್ನು ವ್ಯಾಲಿಡೇಟ್ ಮಾಡುತ್ತೇವೆ.
04:55 ಇಲ್ಲಿ, ‘userExists()’ ಎಂಬ ಮೆಥಡ್ ಅನ್ನು ಬಳಸಿ, ‘ಯೂಸರ್’ ಸಿಸ್ಟಂನಲ್ಲಿ ಇರುವನೇ ಎಂದು ನಾವು ಪರಿಶೀಲಿಸುತ್ತೇವೆ.
05:01 ಆಮೇಲೆ, ಮೆಥಡ್, ಹಿಂತಿರುಗಿಸಿದ ವ್ಯಾಲ್ಯೂವನ್ನು, ನಾವು ‘userExists’ ಎಂಬ ವೇರಿಯೆಬಲ್ ನಲ್ಲಿ ಸ್ಟೋರ್ ಮಾಡುತ್ತೇವೆ.
05:07 ಈಗ, ಈ ಮೆಥಡ್ ನಲ್ಲಿ ನಾವು ಏನು ಮಾಡುತ್ತೇವೆ ಎನ್ನುವುದನ್ನು ನೋಡುವೆವು.
05:11 ಟೇಬಲ್ ನಲ್ಲಿ, username ಇದೆಯೋ ಹೇಗೆ ಎಂದು ಪರಿಶೀಲಿಸಲು, ಮೊದಲು ನಾವು ‘ಕ್ವೆರೀ’ಯನ್ನು ಎಕ್ಸಿಕ್ಯೂಟ್ ಮಾಡುತ್ತೇವೆ.
05:18 ನಂತರ, ನಾವು ‘userExists’ ಎಂಬ ‘integer ವೇರಿಯೆಬಲ್’ ಅನ್ನು 0 (ಸೊನ್ನೆ) ಗೆ ‘ಇನಿಶಿಯಲೈಸ್’ ಮಾಡುತ್ತೆವೆ.
05:23 ಒಂದುವೇಳೆ username ಅಸ್ತಿತ್ವದಲ್ಲಿ ಇದ್ದರೆ, ಆಗ ‘userExists’ ಅನ್ನು 1 (ಒಂದು) ಎಂದು ಸೆಟ್ ಮಾಡುತ್ತೇವೆ.
05:29 ನಂತರ ನಾವು userExists ನ ವ್ಯಾಲ್ಯೂ ಅನ್ನು ಹಿಂತಿರುಗಿಸುತ್ತೇವೆ (return).
05:33 ಹೀಗಾಗಿ, ಮೆಥಡ್, 0 ಯನ್ನು (ಸೊನ್ನೆ) ರಿಟರ್ನ್ ಮಾಡಿದರೆ, ಸಿಸ್ಟಂನಲ್ಲಿ user, ಅಸ್ತಿತ್ವದಲ್ಲಿಲ್ಲ ಎಂದು ಅದರ ಅರ್ಥ.
05:42 ಒಂದುವೇಳೆ user ಅಸ್ತಿತ್ವದಲ್ಲಿ ಇದ್ದರೆ, ಆಗ ನಾವು ‘bookAlreadyIssued()’ ಎಂಬ ಮೆಥಡ್ ಅನ್ನು ‘ಕಾಲ್’ ಮಾಡುತ್ತೇವೆ.
05:50 ಆಮೇಲೆ, ಮೆಥಡ್ ಹಿಂತಿರುಗಿಸಿದ ವ್ಯಾಲ್ಯೂ ಅನ್ನು, ನಾವು ‘bookIssued’ ನಲ್ಲಿ ಸ್ಟೋರ್ ಮಾಡುತ್ತೇವೆ.
05:55 ಒಂದುವೇಳೆ ಅದೇ user ನಿಗೆ ಅದೇ ‘ಬುಕ್’ ಅನ್ನು ಈಗಾಗಲೇ ಇಶ್ಯೂ ಮಾಡಲಾಗಿದೆಯೇ ಎನ್ನುವುದನ್ನು ಇಲ್ಲಿ ನಾವು ಪರಿಶೀಲಿಸುತ್ತೇವೆ.
06:01 ಈಗ, ನಾವು ‘bookAlreadyIssued()’ ಎಂಬ ಮೆಥಡ್ ಗೆ ಬರೋಣ.
06:05 ಇಲ್ಲಿ, ‘bookAlreadyIssued’ ಎಂಬ ಒಂದು ‘integer ವೇರಿಯೆಬಲ್’ಅನ್ನು, ನಾವು 0 ಗೆ (ಸೊನ್ನೆ) ಸೆಟ್ ಮಾಡಿದ್ದೇವೆ.
06:12 ಒಂದುವೇಳೆ, ಒಂದೇ book_id ಇರುವ ‘ಬುಕ್’ ಅನ್ನು, ಅದೇ user ನಿಗೆ ಇಶ್ಯೂ ಮಾಡಲಾಗಿದೆಯೇ ಎಂದು ಪರಿಶೀಲಿಸಲು, ನಾವು ‘ಕ್ವೆರೀ’ಯನ್ನು ಎಕ್ಸಿಕ್ಯೂಟ್ ಮಾಡುತ್ತೇವೆ.
06:18 ನಾವು ‘Checkout’ ಟೇಬಲ್ ನಿಂದ, ‘book_id’ ಯನ್ನು ಪಡೆಯುತ್ತೇವೆ.
06:23 ಒಂದುವೇಳೆ, ‘Book Id’ ಅಸ್ತಿತ್ವದಲ್ಲಿ ಇದ್ದರೆ, ಆಗ ‘bookAlreadyIssued’ ಎಂಬ ವೇರಿಯೆಬಲ್ ಅನ್ನು 1 ಕ್ಕೆ (ಒಂದು) ಸೆಟ್ ಮಾಡುತ್ತೇವೆ.
06:30 ನಂತರ, ನಾವು bookAlreadyIssued ನ ವ್ಯಾಲ್ಯೂ ಅನ್ನು ‘ರಿಟರ್ನ್’ ಮಾಡುತ್ತೇವೆ.
06:34 ಹೀಗಾಗಿ, ಈ ಮೆಥಡ್, 1 (ಒಂದು) ಅನ್ನು ‘ರಿಟರ್ನ್’ ಮಾಡಿದರೆ, ಇದೇ user, ಈಗಾಗಲೇ ಈ ಬುಕ್ ಅನ್ನು ಯರವಲು ಪಡೆದಿದ್ದಾನೆ ಎಂದು ಅದರ ಅರ್ಥ.
06:43 ಈಗ ಬ್ರೌಸರ್ ಗೆ ಹಿಂದಿರುಗಿ.
06:46 ಈಗ, ನಾವು ಒಂದೇ user ನಿಂದ, ಅದೇ ‘ಬುಕ್’ ಅನ್ನು ಚೆಕ್-ಔಟ್ ಮಾಡಲು ಪ್ರಯತ್ನಿಸೋಣ.
06:51 ‘User name’ ಅನ್ನು “arya” ಎಂದು ಟೈಪ್ ಮಾಡಿ.
06:54 ‘Book Id 1’ ಗಾಗಿ ಇರುವ ರೇಡಿಯೋ-ಬಟನ್ ನ ಮೇಲೆ ಕ್ಲಿಕ್ ಮಾಡಿ.
06:59 ನಂತರ ‘Checkout book’ ನ ಮೇಲೆ ಕ್ಲಿಕ್ ಮಾಡಿ.
07:03 ನಮಗೆ, “The same user has already borrowed this book!” ಎನ್ನುವ ಎರರ್-ಮೆಸೇಜ್ ಸಿಗುವುದನ್ನು ನಾವು ನೋಡುತ್ತೇವೆ.
07:10 ಈಗ, ‘IDE’ ಗೆ ಹಿಂದಿರುಗಿ.
07:14 ಒಂದುವೇಳೆ ಸಿಸ್ಟಂನಲ್ಲಿ ‘userExists’ ಇದ್ದರೆ ಮತ್ತು ‘checkout_book’, null ಆಗಿರದಿದ್ದರೆ ನಾವು checkout() ಮೆಥಡ್ ಅನ್ನು ‘ಕಾಲ್’ ಮಾಡುತ್ತೇವೆ.
07:22 ನಾವು ಈ ಮೆಥಡ್ ನಲ್ಲಿ ಏನು ಮಾಡುತ್ತೇವೆ ಎನ್ನುವುದನ್ನು ನೋಡೋಣ.
07:25 ಇಲ್ಲಿ, ನಮಗೆ ‘id’ ಗೆ ಅನುಗುಣವಾಗಿ ‘available copies’ ಸಿಗುತ್ತದೆ.
07:31 ನಾವು ಇದನ್ನು ‘Books’ ಎಂಬ ಟೇಬಲ್ ನಿಂದ ಪಡೆಯುತ್ತೇವೆ.
07:35 ಆಮೇಲೆ, ಲಭ್ಯವಿರುವ ಪ್ರತಿಗಳ ಸಂಖ್ಯೆಯನ್ನು, ನಾವು ‘availableCopies’ ಎಂಬ ವೇರಿಯೆಬಲ್ ನಲ್ಲಿ ಸ್ಟೋರ್ ಮಾಡುತ್ತೇವೆ.
07:41 ‘availableCopies’, 0 (ಸೊನ್ನೆ) ಗಿಂತ ಹೆಚ್ಚು ಇದೆಯೋ ಮತ್ತು bookIssued, 0 (ಸೊನ್ನೆ) ಎಂದು ಇದೆಯೋ ಎನ್ನುವುದನ್ನು ನಾವು ಪರಿಶೀಲಿಸುತ್ತೇವೆ.
07:50 ‘request’ ನಿಂದ, ನಾವು ‘dateofreturn’ (ಡೇಟ್ ಆಫ್ ರಿಟರ್ನ್) ಅನ್ನು ಪಡೆಯುತ್ತೇವೆ ಮತ್ತು ‘returndate (ರಿಟರ್ನ್ ಡೇಟ್) ನಲ್ಲಿ ಸ್ಟೋರ್ ಮಾಡುತ್ತೇವೆ.
07:56 ಆಮೇಲೆ ನಾವು ‘insertIntoCheckout()’ (ಇನ್ಸರ್ಟ್ ಇನ್-ಟು ಚೆಕ್-ಔಟ್) ಅನ್ನು ‘ಕಾಲ್’ ಮಾಡುತ್ತೇವೆ.
08:00 ‘insertIntoCheckout()’ ಮೆಥಡ್ ನಲ್ಲಿ, ನಾವು ಏನು ಮಾಡುತ್ತೇವೆ ಎನ್ನುವುದನ್ನು ನೋಡುವೆವು.
08:05 ಇಲ್ಲಿ, ನಾವು, book_id, userName ಮತ್ತು returndate ಗಳನ್ನು ‘Checkout’ ಎಂಬ ಟೇಬಲ್ ನಲ್ಲಿ ಸ್ಟೋರ್ ಮಾಡುತ್ತೇವೆ.
08:12 ನಂತರ, ನಾವು ‘decrementAvailableCopies()’ (ಡಿಕ್ರೀಮೆಂಟ್ ಅವೈಲೇಬಲ್ ಕಾಪೀಸ್) ಎಂಬ ಮೆಥಡ್ ಅನ್ನು ‘ಕಾಲ್’ ಮಾಡುತ್ತೇವೆ.
08:16 ಈ ಮೆಥಡ್ ನಲ್ಲಿ, ನಾವು ಏನು ಮಾಡುತ್ತೇವೆ ಎನ್ನುವುದನ್ನು ನೋಡುವೆವು.
08:19 ಇಲ್ಲಿ, ‘Books’ ಎಂಬ ಟೇಬಲ್ ನಲ್ಲಿ, ‘Available Copies’ ಅನ್ನು 1 ರಿಂದ ಇಳಿಸಲು ನಾವು ‘ಕ್ವೆರೀ’ಯನ್ನು ಎಕ್ಸಿಕ್ಯೂಟ್ ಮಾಡುತ್ತೇವೆ.
08:26 ಆಮೇಲೆ ನಾವು setCheckoutIntoRequest() (ಸೆಟ್ ಚೆಕ್-ಔಟ್ ಇನ್-ಟು ರಿಕ್ವೆಸ್ಟ್) ಮೆಥಡ್ ಅನ್ನು ಕಾಲ್ ಮಾಡುತ್ತೇವೆ.
08:29 ನಾವು ಈ ಮೆಥಡ್ ಗೆ ಬರೋಣ.
08:32 ಈ ಮೆಥಡ್ ನಲ್ಲಿ, ನಾವು ‘checkout’ ಅಟ್ರಿಬ್ಯೂಟ್ ಅನ್ನು, ‘request’ ನಲ್ಲಿ ಸೆಟ್ ಮಾಡುತ್ತೇವೆ.
08:38 ಆಮೇಲೆ ನಾವು, RequestDispatcher ಅನ್ನು ಬಳಸಿ, ‘request’ ಅನ್ನು successCheckout.jsp ಗೆ ಫಾರ್ವರ್ಡ್ ಮಾಡುತ್ತೇವೆ.
08:45 ಒಂದುವೇಳೆ availableCopies, 0 (ಸೊನ್ನೆ) ಆಗಿದ್ದರೆ, ಆಗ ನಾವು “There are no copies of the requested book available” ಎಂದು ಪ್ರಿಂಟ್ ಮಾಡುತ್ತೇವೆ.
08:53 ಈಗ, ನಾವು ‘successCheckout ಡಾಟ್ jsp’ ಗೆ ಬರೋಣ.
08:58 ಇಲ್ಲಿ, ಮೊದಲು ನಾವು ‘request’ ನಿಂದ, ‘checkout’ ಎಂಬ ಅಟ್ರಿಬ್ಯೂಟ್ ಅನ್ನು ಪಡೆಯುತ್ತೇವೆ.
09:03 ಆಮೇಲೆ, ಯಶಸ್ವಿಯಾದ ‘Checkout’ ಗಾಗಿ ನಾವು ಸಕ್ಸೆಸ್-ಮೆಸೇಜನ್ನು ತೋರಿಸುತ್ತೇವೆ.
09:08 ವಿವಿಧ ‘ಎರರ್’ಗಳನ್ನು ನೀವೇ ಪ್ರಯತ್ನಿಸಬಹುದು.
09:11 ಈಗ, ನಾವು ಬುಕ್ ಅನ್ನು ರಿಟರ್ನ್ ಮಾಡೋಣ. ಆದ್ದರಿಂದ, ಬ್ರೌಸರ್ ಗೆ ಬದಲಾಯಿಸಿ.
09:15 ‘Book Id 1’ ನ ಮೇಲೆ ಕ್ಲಿಕ್ ಮಾಡಿ ಮತ್ತು User name ಅನ್ನು “arya” ಎಂದು ಟೈಪ್ ಮಾಡಿ.
09:21 ಆಮೇಲೆ ‘Return book’ ನ ಮೇಲೆ ಕ್ಲಿಕ್ ಮಾಡಿ.
09:24 ನಮಗೆ, “Book has been successfully returned”.
09:29 “Click on ‘here’ for another checkout/return.” ಎನ್ನುವ ‘ಸಕ್ಸೆಸ್ ಮೆಸೇಜ್’ ಸಿಗುತ್ತದೆ.
09:33 ಹೀಗಾಗಿ, ನಾವು ‘Admin Section Page’ಗೆ ಹಿಂದಿರುಗುತ್ತೇವೆ.
09:36 ‘Checkout/Return Book’ ನ ಮೇಲೆ ಕ್ಲಿಕ್ ಮಾಡಿ.
09:39 ‘Available Copies’ ನ ಸಂಖ್ಯೆಯು ಹೆಚ್ಚಿಸಲ್ಪಟ್ಟಿದೆ ಎನ್ನುವುದನ್ನು ನಾವು ನೋಡಬಹುದು.
09:45 ನಾವು ಇದರ ‘ಕೋಡ್’ಅನ್ನು ನೋಡುವೆವು.
09:47 ‘IDE’ ಗೆ ಹಿಂದಿರುಗಿ.
09:49 ‘CheckOutServlet .java’ (ಚೆಕ್-ಔಟ್ ಸರ್ವ್ಲೆಟ್ ಡಾಟ್ ಜಾವಾ) ಅನ್ನು ಓಪನ್ ಮಾಡಿ.
09:53 ನಾವು ‘userExists= 1’ ಆಗಿದೆಯೇ ಮತ್ತು ‘return_book’ ‘null’ ಆಗಿಲ್ಲ ಎನ್ನುವುದನ್ನು ಪರಿಶೀಲಿಸುತ್ತೇವೆ.
10:00 ಆಮೇಲೆ, ನಾವು ‘returnBook()’ ಮೆಥಡ್ ಅನ್ನು ಕಾಲ್ ಮಾಡುತ್ತೇವೆ.
10:03 ನಾವು ಈ ಮೆಥಡ್ ಗೆ ಬರೋಣ.
10:06 ಇಲ್ಲಿ, ನಾವು ‘Book Id’ ಗಾಗಿ, ‘total copies’ ಮತ್ತು ‘available copies’ ಗಳನ್ನು ‘Books’ ಟೇಬಲ್ ನಿಂದ ಆಯ್ಕೆಮಾಡುತ್ತೇವೆ.
10:14 ನಾವು ‘Total Copies’ ಹಾಗೂ ‘Available Copies’ ಗಳನ್ನು ‘totcopies’ ಮತ್ತು ‘availcopies’ ಗಳಲ್ಲಿ ಸ್ಟೋರ್ ಮಾಡುತ್ತೇವೆ.
10:21 ನಂತರ, ನಾವು ‘available copies’, ‘total copies’ ಗಿಂತ ಹೆಚ್ಚಾಗಿದೆಯೇ ಎಂದು ಪರಿಶೀಲಿಸುತ್ತೇವೆ.
10:27 ನಾವು ಬ್ರೌಸರ್ ಗೆ ಹಿಂದಿರುಗೋಣ.
10:30 ಈಗ ನಾವು, ‘ಬುಕ್’ಅನ್ನು ‘ಬಾರೋ’ ಮಾಡದೇ ಇರುವ ‘ಯೂಸರ್’ನಿಗಾಗಿ, ಒಂದು ‘ಬುಕ್’ಅನ್ನು ಹಿಂದಿರುಗಿಸೋಣ.
10:35 ‘User name’ ಅನ್ನು “mdhusein” ಎಂದು ಟೈಪ್ ಮಾಡಿ.
10:39 ‘Book Id 1’ ರ ಮೇಲೆ ಕ್ಲಿಕ್ ಮಾಡಿ.
10:42 ನಂತರ ‘Return book’ ನ ಮೇಲೆ ಕ್ಲಿಕ್ ಮಾಡಿ.
10:44 ನಮಗೆ “The given user has not borrowed this book!!” ಎಂಬ ‘ಎರರ್ ಮೆಸೇಜ್’ ಸಿಗುವುದನ್ನು ನಾವು ನೋಡಬಹುದು.
10:50 ಈಗ, IDE ಗೆ ಹಿಂದಿರುಗಿ.
10:53 ಇಲ್ಲಿ, ‘bookIssued’ = 1 (ಬುಕ್ ಇಶ್ಯೂಡ್ ಇಕ್ವಲ್ ಟು ವನ್) ಇದೆಯೇ ಎಂದು ಪರಿಶೀಲಿಸುತ್ತೇವೆ.
10:57 ಆಮೇಲೆ ನಾವು removeFromCheckout() (ರಿಮೂವ್ ಫ್ರಾಮ್ ಚೆಕ್-ಔಟ್) ಮೆಥಡ್ ಅನ್ನು ‘ಕಾಲ್’ ಮಾಡುತ್ತೇವೆ.
11:01 ನಾವು ಈ ಮೆಥಡ್ ಗೆ ಬರೋಣ.
11:04 ಇಲ್ಲಿ, ‘ಬುಕ್’ಅನ್ನು ಹಿಂದಿರುಗಿಸಿದ (return) ನಮೂದನ್ನು (entry) Checkout ಟೇಬಲ್ ನಿಂದ ತೆಗೆದುಹಾಕಲು (delete), ನಾವು ‘ಕ್ವೆರೀ’ಯನ್ನು ಎಕ್ಸಿಕ್ಯೂಟ್ ಮಾಡುತ್ತೇವೆ.
11:14 ನಂತರ, ನಾವು incrementAvailableCopies() (ಇನ್ಕ್ರೀಮೆಂಟ್ ಅವೈಲೇಬಲ್ ಕಾಪೀಸ್) ಎಂಬ ಮೆಥಡ್ ಅನ್ನು ಕಾಲ್ ಮಾಡುತ್ತೇವೆ.
11:18 ನಾವು ಈ ಮೆಥಡ್ ಗೆ ಬರೋಣ.
11:21 ಇಲ್ಲಿ, Available Copies (ಅವೈಲೇಬಲ್ ಕಾಪೀಸ್) ಅನ್ನು ಒಂದರಿಂದ ಹೆಚ್ಚಿಸುತ್ತೇವೆ.
11:25 ‘Books’ ಎಂಬ ಟೇಬಲ್ ಅನ್ನು ‘ಅಪ್-ಡೇಟ್’ ಮಾಡಲು ನಾವು ‘ಕ್ವೆರೀ’ಯನ್ನು ಎಕ್ಸಿಕ್ಯೂಟ್ ಮಾಡುತ್ತೇವೆ.
11:29 ಆಮೇಲೆ ನಾವು setReturnIntoRequest() ಎಂಬ ಮೆಥಡ್ ಅನ್ನು ‘ಕಾಲ್’ ಮಾಡುತ್ತೇವೆ.
11:34 ನಾವು ಈ ಮೆಥಡ್ ಗೆ ಬರೋಣ.
11:37 ಇಲ್ಲಿ, ‘returnBook’ ಅಟ್ರಿಬ್ಯೂಟ್ ಅನ್ನು ‘request’ ನಲ್ಲಿ ಸೆಟ್ ಮಾಡುತ್ತೇವೆ.
11:41 ಆಮೇಲೆ, ನಾವು ‘RequestDispatcher’ ಅನ್ನು ಬಳಸಿ, ‘successReturn’ ಪೇಜ್ ಗೆ ಫಾರ್ವರ್ಡ್ ಮಾಡುತ್ತೇವೆ.
11:48 ‘successReturn’ ಪೇಜ್, ನಮ್ಮ ಹತ್ತಿರವಿದ್ದ ‘successCheckout’ ಪೇಜ್ ನ ಹಾಗೆಯೇ ಇದೆ.
11:53 ಈಗ, ಬ್ರೌಸರ್ ಗೆ ಹಿಂದಿರುಗಿ. ಲಾಗ್-ಇನ್ ಪೇಜ್ ಗೆ ಹಿಂದಿರುಗಿ.
11:58 ‘Visitor’s Home Page’ ಎಂಬ ಲಿಂಕ್ ಇರುವುದನ್ನು ನಾವು ನೋಡಬಹುದು.
12:03 ಲಭ್ಯವಿರುವ ಎಲ್ಲ ಪುಸ್ತಕಗಳ ‘ಲಿಸ್ಟ್’, ನಮಗೆ ಸಿಗುತ್ತದೆ ಎನ್ನುವುದನ್ನು ನಾವು ನೋಡಬಹುದು.
12:07 ಹೀಗೆ, ಈ ಟ್ಯುಟೋರಿಯಲ್’ನಲ್ಲಿ ನಾವು -
12:10 * ಎಲ್ಲ ಬಳಕೆದಾರರನ್ನು (users) ಲಿಸ್ಟ್ ಮಾಡಲು
12:12 * ‘ಬುಕ್’ಅನ್ನು ತರಲು ‘ಬುಕ್’ಅನ್ನು ಹಿಂತಿರುಗಿಸಲು ಕಲಿತಿದ್ದೇವೆ.
12:15 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ಈ ಕೆಳಗಿನ ಲಿಂಕ್ನಲ್ಲಿ ಲಭ್ಯವಿರುವ ವೀಡಿಯೋವನ್ನು ನೋಡಿ. http://spoken-tutorial.org/What_is_a_Spoken_Tutorial
12:20 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ.
12:24 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
12:28 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ತಂಡವು:
12:30 ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
12:32 ಆನ್-ಲೈನ್ ಪರೀಕ್ಷೆಯಲ್ಲಿ ಪಾಸಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
12:36 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ. contact@spoken-tutorial.org
12:41 ‘ಸ್ಪೋಕನ್ ಟ್ಯುಟೋರಿಯಲ್’ ಪ್ರಕಲ್ಪವು, ‘ಟಾಕ್ ಟು ಎ ಟೀಚರ್’ ಪ್ರಕಲ್ಪದ ಒಂದು ಭಾಗವಾಗಿದೆ.
12:44 ಇದು ಭಾರತ ಸರ್ಕಾರದ ICT, MHRD ಮೂಲಕ ‘ರಾಷ್ಟ್ರೀಯ ಸಾಕ್ಷರತಾ ಮಿಶನ್’ನ ಆಧಾರವನ್ನು ಪಡೆದಿದೆ.
12:50 ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ.
12:52 http://spoken-tutorial.org/NMEICT-Intro
12:58 ಒಂದು ಪ್ರಮುಖ ಸಾಫ್ಟ್ವೇರ್ MNC, ತಮ್ಮ Corporate Social Responsibility programme ನ ಮೂಲಕ ಈ Library Management System ಅನ್ನು ಕೊಡುಗೆಯಾಗಿ ನೀಡಿದ್ದಾರೆ.
13:06 ಈ ಸ್ಪೋಕನ್ ಟ್ಯುಟೋರಿಯಲ್ ಗಾಗಿ ಅವರು ವಿಷಯವನ್ನು ಸಹ ಮೌಲ್ಯಾಂಕಿತಗೊಳಿಸಿದ್ದಾರೆ (validated).
13:10 IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ

ವಂದನೆಗಳು.

Contributors and Content Editors

Pratik kamble, Sandhya.np14, Vasudeva ahitanal