Introduction-to-Computers/C2/Introduction-to-Gmail/Kannada

From Script | Spoken-Tutorial
Jump to: navigation, search
Time Narration
00:01 Introduction to Gmail ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ (Spoken Tutorial) ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು -
00:09 * ಒಂದು ಹೊಸ 'google' (ಗೂಗಲ್) ಅಕೌಂಟ್ ಅನ್ನು ಕ್ರಿಯೇಟ್ ಮಾಡುವುದು
00:12 * ‘ಗೂಗಲ್ ಅಕೌಂಟ್’ಅನ್ನು ಬಳಸಿ 'gmail' (ಜಿ-ಮೇಲ್) ನಲ್ಲಿ ಲಾಗ್-ಇನ್ ಮಾಡುವುದು
00:16 * 'email' (ಇ-ಮೇಲ್) ಅನ್ನು ಬರೆಯುವುದು
00:18 * ಇ-ಮೇಲ್ ಅನ್ನು ಕಳಿಸುವುದು
00:20 * ಇ-ಮೇಲ್ ಅನ್ನು ನೋಡುವುದು ಮತ್ತು
00:22 * ‘ಜಿ-ಮೇಲ್’ನಿಂದ ಲಾಗ್-ಔಟ್ ಮಾಡುವುದು ಇವುಗಳನ್ನು ಕಲಿಯುವೆವು.
00:24 ನಾವು 'Inbox' ನಂತಹ ಕೆಲವು ಮುಖ್ಯವಾದ ‘ಮೇಲ್ ಬಾಕ್ಸ್’ಗಳ ಬಗ್ಗೆ ಸಹ ಕಲಿಯುವೆವು.
00:30 ಈ ಟ್ಯುಟೋರಿಯಲ್ ಗಾಗಿ, ನಿಮಗೆ ‘ಇಂಟರ್ನೆಟ್’ ಸಂಪರ್ಕ
00:35 ಮತ್ತು ‘ವೆಬ್ ಬ್ರೌಸರ್’ನ ಅವಶ್ಯಕತೆ ಇದೆ.
00:37 ನಿಮಗೆ ಇಲ್ಲಿ ಮಾಡಿತೋರಿಸಲು, ನಾನು ‘Firefox’ (ಫೈರ್ಫಾಕ್ಸ್) ‘ವೆಬ್ ಬ್ರೌಸರ್’ಅನ್ನು ಬಳಸುತ್ತಿರುವೆನು.
00:42 ಇತ್ತೀಚೆಗೆ, ಗೂಗಲ್, ಈ ಕೆಳಗೆ ಹೇಳಿದಂತಹ ಎಲ್ಲ ಗೂಗಲ್ ಉತ್ಪನ್ನಗಳಿಗಾಗಿ ಒಂದೇ ಅಕೌಂಟ್ ಅನ್ನು ಒದಗಿಸಿದೆ :
00:48 * Gmail (ಜಿಮೇಲ್) YouTube (ಯು ಟ್ಯೂಬ್)
00:50 * Google Play (ಗೂಗಲ್ ಪ್ಲೇ) Google Docs/Drive (ಗೂಗಲ್ ಡಾಕ್ಸ್/ಡ್ರೈವ್)
00:53 * Google Calendar (ಗೂಗಲ್ ಕ್ಯಾಲೆಂಡರ್).... ಮತ್ತು ಇನ್ನೂ ಹಲವು.
00:57 ಹೀಗಾಗಿ, ನೀವು ಒಂದೇ ‘ಲಾಗ್-ಇನ್’ನಿಂದ ಇವುಗಳಲ್ಲಿ ಯಾವುದನ್ನಾದರೂ ಬಳಸಬಹುದು.
01:02 ಒಂದು ಹೊಸ ‘ಗೂಗಲ್ ಅಕೌಂಟ್’ ಅನ್ನು ಕ್ರಿಯೇಟ್ ಮಾಡುವುದರಿಂದ ನಾವು ಆರಂಭಿಸೋಣ.
01:06 ನಿಮ್ಮ ‘ವೆಬ್ ಬ್ರೌಸರ್’ಅನ್ನು ಓಪನ್ ಮಾಡಿ ಮತ್ತು ಹೀಗೆ ಟೈಪ್ ಮಾಡಿ: http colon slash slash gmail dot com (http://gmail.com).
01:16 ಇದು ನಮ್ಮನ್ನು ಒಂದು ಪೇಜ್ ಗೆ ಕರೆದೊಯ್ಯುವುದು.
01:22 ನಾವು ಇಲ್ಲಿ, ಮೇಲ್ಗಡೆ ಬಲಭಾಗದಲ್ಲಿ, 'Create an account ' ಮತ್ತು 'Sign in' ಎಂಬ ಎರಡು ಆಯ್ಕೆಗಳನ್ನು ಕಾಣಬಹುದು.
01:25 ನಿಮ್ಮ ‘ಮಷಿನ್’ನಿಂದ ಈ ಪೇಜನ್ನು ಆಕ್ಸೆಸ್ ಮಾಡಿದ್ದು ಇದೇ ಮೊದಲ ಬಾರಿ ಆಗಿದ್ದರೆ, ಇದು ಹೀಗೆ ಕಾಣುವುದು.
01:32 ಒಂದು ವೇಳೆ ನಿಮ್ಮ ‘ಮಷಿನ್’ನಿಂದ ಈ ಪೇಜ್ಅನ್ನು ಈಗಾಗಲೇ ಆಕ್ಸೆಸ್ ಮಾಡಿಬಿಟ್ಟಿದ್ದರೆ, ಆಗ ಈ ಪೇಜ್, ಹೀಗೆ ಕಾಣುವುದು.
01:39 ಹೀಗೆ, ನೀವು ನಿಮ್ಮ ‘email ಯೂಸರ್ ನೇಮ್’ ಮತ್ತು ‘password’ಗಳನ್ನು ಎಂಟರ್ ಮಾಡಲು ಟೆಕ್ಸ್ಟ್-ಬಾಕ್ಸ್ ಗಳನ್ನು
01:46 ಮತ್ತು 'Sign In' ಎನ್ನುವ ಒಂದು ದೊಡ್ಡ ಬಟನ್ ಅನ್ನು ನೋಡುವಿರಿ.
01:50 ಇದರ ಕೆಳಗೆ 'Create an account' ಎನ್ನುವ ಒಂದು ಲಿಂಕ್ ಅನ್ನು ನೀವು ನೋಡುವಿರಿ.
01:55 'Create an account' ಎಂಬ ಲಿಂಕ್ ನ ಮೇಲೆ ನಾವು ಕ್ಲಿಕ್ ಮಾಡೋಣ.
01:59 ಈಗ ನಾವು, 'Google Account' ಅನ್ನು ಕ್ರಿಯೇಟ್ ಮಾಡುವ ಪೇಜ್ ನಲ್ಲಿ ಇದ್ದೇವೆ.
02:03 ನಾವು ಬಲಭಾಗದಲ್ಲಿ ಒಂದು ಫಾರ್ಮ್ ಅನ್ನು ನೋಡಬಹುದು. ಇಲ್ಲಿ, ನಾವು ನಮ್ಮ ಅಕೌಂಟ್ ಮತ್ತು ವೈಯಕ್ತಿಕ ವಿವರಗಳನ್ನು ತುಂಬಬೇಕು.
02:11 ನಾವು, ನಮ್ಮ ಮೊದಲ (First name) ಮತ್ತು ಕೊನೆಯ (Last name) ಹೆಸರುಗಳನ್ನು ಆಯಾ ಟೆಕ್ಸ್ಟ್-ಬಾಕ್ಸ್ ಗಳಲ್ಲಿ ನಮೂದಿಸೋಣ.
02:17 ನಾನು ನನ್ನ ಹೆಸರನ್ನು 'Rebecca Raymond' ಎಂದು ಕೊಡುತ್ತೇನೆ.
02:23 ಆಮೇಲೆ, ನಾವು ನಮ್ಮ 'username' (ಯೂಸರ್ ನೇಮ್) ಅನ್ನು ಆರಿಸಿಕೊಳ್ಳಬೇಕು.
02:27 'ಯೂಸರ್ ನೇಮ್', ಏಕಮಾತ್ರ (unique) ಆಗಿರಬೇಕು ಮತ್ತು ಅಕ್ಷರಗಳು ಅಥವಾ ಅಕ್ಷರಸಂಖ್ಯಾಯುಕ್ತ ಸಂಯೋಜನೆಗಳಿಂದ ಮಾಡಿರಬೇಕು.
02:37 ನಾವು 'username' ಅನ್ನು "becky0808" ಎಂದು ಕೊಡೋಣ.
02:43 ಒಂದುವೇಳೆ 'username' ಅನ್ನು ಈಗಾಗಲೇ ತೆಗೆದುಕೊಂಡಿದ್ದರೆ, ನಾವು ಈ ಕೆಳಗಿನ ಮೆಸೇಜನ್ನು ನೋಡುವೆವು:
02:49 “Someone already has that user name, Try another”.
02:54 ನಾವು ಕೊಟ್ಟಿರುವ ಮೊದಲ ಮತ್ತು ಕೊನೆಯ ಹೆಸರುಗಳಿಗೆ ಅನುಗುಣವಾಗಿ, 'Google ' ಕೆಲವು 'ಯೂಸರ್ ನೇಮ್'ಗಳನ್ನು ಸಹ ಸೂಚಿಸುವುದು.
03:01 ನಾವು ನಮಗಿಷ್ಟವಾದ ಯಾವುದೇ 'ಯೂಸರ್ ನೇಮ್'ಅನ್ನು ಕೊಡಬಹುದು ಮತ್ತು ಅದರ ಲಭ್ಯತೆಯನ್ನು ಪರಿಶೀಲಿಸಬಹುದು.
03:07 ಈಗ, ನಾನು 'username' ಅನ್ನು 'ray.becky.0808' ಎಂದು ಕೊಡುವೆನು.
03:18 ಈ 'username' ಲಭ್ಯವಿದೆ ಎಂದು ಸೂಚಿಸಲಾಗಿದೆ.
03:24 ಈಗ, ನಾವು ಈ ಅಕೌಂಟ್ ಗಾಗಿ ಒಂದು ಪಾಸ್ವರ್ಡ್ ಅನ್ನು (password) ಕ್ರಿಯೇಟ್ ಮಾಡಬೇಕು.
03:30 ಎಡಭಾಗದಲ್ಲಿರುವ ‘ಇನ್ಫರ್ಮೇಶನ್ ಬಾಕ್ಸ್’, ಪಾಸ್ವರ್ಡ್ ಎಷ್ಟು ಉದ್ದವಾಗಿರಬೇಕೆಂದು ನಮಗೆ ಹೇಳುತ್ತದೆ.
03:36 ನಿಮಗಿಷ್ಟವಾದ, ಸೂಕ್ತವಾದ ಒಂದು ಪಾಸ್ವರ್ಡ್ ಅನ್ನು ಟೈಪ್ ಮಾಡಿ.
03:41 ಆಮೇಲೆ, ಖಚಿತಪಡಿಸಲು ಪಾಸ್ವರ್ಡ್ ಅನ್ನು ಮತ್ತೊಮ್ಮೆ ಟೈಪ್ ಮಾಡಿ.
03:44 ಇದಾದ ನಂತರ 'Birthday' ಬರುತ್ತದೆ.
03:48 ‘Month’ (ತಿಂಗಳು) ಅನ್ನು ಡ್ರಾಪ್-ಡೌನ್ ನಿಂದ ಆಯ್ಕೆಮಾಡಿ.
03:51 ಆಮೇಲೆ ದಿನಾಂಕ (Day) ಹಾಗೂ ವರ್ಷ (Year) ಗಳನ್ನು ಆಯಾ ಟೆಕ್ಸ್ಟ್-ಬಾಕ್ಸ್ಗಳಲ್ಲಿ ಟೈಪ್ ಮಾಡಿ.
03:57 ನಂತರ ಜೆಂಡರ್ ಬಾಕ್ಸ್ ಇದೆ. ಅಲ್ಲಿ ನಾನು 'Female' ಎಂದು ಆಯ್ಕೆಮಾಡುತ್ತಿದ್ದೇನೆ.
04:03 ಮುಂದಿನ ಫೀಲ್ಡ್, 'Mobile phone' ಎಂದು ಇದೆ.
04:06 ಸಧ್ಯಕ್ಕೆ ನಾನು ಇದನ್ನು ಬಿಟ್ಟು ಮುಂದುವರಿಯುತ್ತೇನೆ.
04:08 ಇದಾದ ನಂತರ, ನಮ್ಮ 'current email address' ಅನ್ನು ಕೇಳುವ ಒಂದು ಟೆಕ್ಸ್ಟ್-ಬಾಕ್ಸ್ ಇದೆ.
04:14 ನಿಮ್ಮ ಹತ್ತಿರ, ಈಗ ಕ್ರಿಯೇಟ್ ಮಾಡುತ್ತಿರುವುದನ್ನು ಬಿಟ್ಟು ಇನ್ನೊಂದು 'email address' ಇದ್ದರೆ, ಅದನ್ನು ಇಲ್ಲಿ ಟೈಪ್ ಮಾಡಿ.
04:21 ಇಲ್ಲವಾದಲ್ಲಿ, ಇದನ್ನು ಹಾಗೇ ಬಿಟ್ಟುಬಿಡಿ.
04:23 ಈಗ ನಾವು ಉಳಿದ ವಿವರಗಳನ್ನು ತುಂಬೋಣ.
04:26 “Prove you're not a robot” ಎಂಬ ಮುಂದಿನ ಭಾಗವು, 2 ವೆರಿಫಿಕೇಶನ್ ಹಂತಗಳನ್ನು ಹೊಂದಿದೆ.
04:32 * 'Phone verification' (ಫೋನ್ ವೆರಿಫಿಕೇಶನ್)
04:34 * 'Puzzle verification' (ಪಝಲ್ ವೆರಿಫಿಕೇಶನ್).
04:36 ಈ ಎರಡರಲ್ಲಿ, ಯಾವುದೇ ಒಂದು ಆಯ್ಕೆಯೊಂದಿಗೆ ನಾವು ಮುಂದುವರೆಯಬಹುದು.
04:40 ನಾನು 'puzzle verification' ಅನ್ನು ಆರಿಸಿಕೊಳ್ಳುತ್ತೇನೆ.
04:43 ಇಮೇಜ್ ನಲ್ಲಿ ತೋರಿಸಿದ ಟೆಕ್ಸ್ಟ್/ಸಂಖ್ಯೆಯನ್ನು, 'Type the text' ಎಂಬ ಟೆಕ್ಸ್ಟ್-ಬಾಕ್ಸ್ ನಲ್ಲಿ ಟೈಪ್ ಮಾಡಿ.
04:49 ‘Location’ ಎಂಬ ಡ್ರಾಪ್-ಡೌನ್ ನಲ್ಲಿ, ಡೀಫಾಲ್ಟ್ ಆಗಿ, ನೀವು ವಾಸವಾಗಿರುವ ದೇಶವನ್ನು ತೋರಿಸಲಾಗುವುದು.
04:55 ನಾನು 'India' ದಲ್ಲಿ ವಾಸವಾಗಿದ್ದೇನೆ. ಹೀಗಾಗಿ, 'India' ಅನ್ನು ನನ್ನ 'Location ' ಡ್ರಾಪ್-ಡೌನ್ ನಲ್ಲಿ ತೋರಿಸಲಾಗಿದೆ.
05:02 ಕೊನೆಯದಾಗಿ, 'I agree to the Google Terms of service and Privacy Policy' ಎನ್ನುವ ಚೆಕ್-ಬಾಕ್ಸ್ ಅನ್ನು ‘ಚೆಕ್’ ಮಾಡಲು, ಅದರ ಮೇಲೆ ಕ್ಲಿಕ್ ಮಾಡಿ.
05:10 ಒಂದು ಸಲ ಫಾರ್ಮ್ ನಲ್ಲಿ ಎಲ್ಲ ವಿವರಗಳನ್ನು ತುಂಬಿದ ನಂತರ, ನಾವು 'Next Step' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಬೇಕು.
05:17 ಈಗಲೇ, ನಾವು ಹೀಗೆ ಮಾಡುವುದಿಲ್ಲ.
05:20 “Phone Verification” ಅನ್ನು ನಾವು ಆಯ್ಕೆಮಾಡಿದರೆ, ಏನು ಮಾಡಬೇಕಾಗುವುದು ಎಂಬುದನ್ನು ನೋಡೋಣ.
05:25 “Skip this verification (Phone Verification may be required)” ಎನ್ನುವ ಚೆಕ್-ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ.
05:32 ‘Location’ ಅನ್ನು, 'India (भारत)' ಎಂದು ಆರಿಸಿಕೊಳ್ಳಿ.
05:35 ಆಮೇಲೆ, 'I agree to the Google Terms and Privacy Policy' ಎನ್ನುವ ಚೆಕ್-ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ.
05:41 ಮತ್ತು ಕೊನೆಯದಾಗಿ, 'Next Step' ನ ಮೇಲೆ ಕ್ಲಿಕ್ ಮಾಡಿ.
05:45 'Phone verification' ಪೇಜ್ ಗೆ ಇದು ಹೋಗುವುದು.
05:50 ಡ್ರಾಪ್-ಡೌನ್ ನಿಂದ, ದೇಶದ ಧ್ವಜವನ್ನು ಆಯ್ಕೆಮಾಡಿ. ನಾನು 'India' ಅನ್ನು ಆಯ್ಕೆಮಾಡುತ್ತಿದ್ದೇನೆ.
05:55 ಕೊಟ್ಟಿರುವ ಟೆಕ್ಸ್ಟ್-ಬಾಕ್ಸ್ ನಲ್ಲಿ, ನಿಮ್ಮ ಮೊಬೈಲ್ ನಂಬರನ್ನು ನಮೂದಿಸಿ.
06:00 'Text message (SMS)' ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ. ಸಾಮಾನ್ಯವಾಗಿ, ಇದು ಡೀಫಾಲ್ಟ್ ಆಗಿ, ಆಯ್ಕೆಯಾಗುವುದು.
06:07 ಆಮೇಲೆ, 'Continue' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ.
06:10 ನಿಮ್ಮ ಫೋನ್ ನಲ್ಲಿ ನಿಮಗೆ ಒಂದು 'SMS' ಸಿಗುವುದು.
06:13 ಇದು, ಈಗ ನಿಮ್ಮನ್ನು ವೆರಿಫಿಕೇಶನ್ ನ ಮುಂದಿನ ಭಾಗಕ್ಕೆ ಕರೆದೊಯ್ಯುವುದು.
06:17 ನೀವು ಗೂಗಲ್ ನಿಂದ 'SMS' ಮೂಲಕ ಪಡೆದ ‘ವೆರಿಫಿಕೇಶನ್ ಕೋಡ್’ಅನ್ನು ಇಲ್ಲಿ ಇರುವ ಟೆಕ್ಸ್ಟ್-ಬಾಕ್ಸ್ ನಲ್ಲಿ ಟೈಪ್ ಮಾಡಿ.
06:24 'Continue' ಎಂಬುದರ ಮೇಲೆ ಕ್ಲಿಕ್ ಮಾಡಿ.
06:27 ನಾವು ಈಗ 'Create your public Google+ profile ' ಎಂಬ ಪೇಜ್ ನಲ್ಲಿ ಇದ್ದೇವೆ.
06:32 ಇಲ್ಲಿ, ನೀವು ನಿಮ್ಮ ಹೆಸರನ್ನು ನೋಡಬಹುದು.
06:35 ಇದರ ಕೆಳಗೆ, ಇಲ್ಲಿ, “Add a photo” ಎಂಬ ಒಂದು ಆಯ್ಕೆಯಿದೆ.
06:39 ನೀವು ನಿಮ್ಮ ' ಗೂಗಲ್ ಪ್ರೊಫೈಲ್' ಗೆ ಒಂದು ಫೋಟೋ ಅನ್ನು ಸೇರಿಸಲು, ಇದರ ಮೇಲೆ ಕ್ಲಿಕ್ ಮಾಡಬಹುದು.
06:44 ಇಲ್ಲಿ “Create your profile” ಎಂಬ ಹೆಸರಿನ ಒಂದು ಬಟನ್ ಸಹ ಇದೆ.
06:48 ಸಧ್ಯಕ್ಕೆ, ನಾನು ಈ ಹಂತಗಳನ್ನು ಬಿಟ್ಟು ಮುಂದುವರಿಯುತ್ತೇನೆ.
06:51 ಅದರ ಬದಲಾಗಿ, ನನ್ನ ‘ಇಮೇಲ್ ಅಕೌಂಟ್’ಗೆ ಮುಂದುವರಿಯಲು, ನಾನು 'No Thanks ' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡುವೆನು.
06:58 ಈಗ, ನಾವು 'welcome ಪೇಜ್' ನಲ್ಲಿ ಇದ್ದೇವೆ.
07:02 ನನಗೆ, ಇದು “ Welcome, Rebecca” ಎಂದು ಹೇಳುತ್ತಿದೆ.
07:06 ನನ್ನ ಹೊಸ ‘ಇಮೇಲ್ ಅಡ್ರೆಸ್’, ‘ray.becky.0808@gmail.com’ ಅನ್ನು ಸಹ ತೋರಿಸಲಾಗಿದೆ.
07:16 ಈಗ, 'Continue to Gmail ' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ.
07:22 ಇದು, ನಿಮ್ಮ ‘ಮೇಲ್ ಅಕೌಂಟ್’ ಅನ್ನು ಲೋಡ್ ಮಾಡಲು ಆರಂಭಿಸುವುದು.
07:24 ನಿಮ್ಮ ಇಂಟರ್ನೆಟ್ ನ ವೇಗಕ್ಕೆ ಅನುಗುಣವಾಗಿ ಇದು ಸ್ವಲ್ಪ ಸಮಯವನ್ನು ತೆಗೆದುಕೊಳ್ಳಬಹುದು.
07:28 ನಮ್ಮ ಇಂಟರ್ನೆಟ್ ನಿಧಾನಗತಿಯಲ್ಲಿದ್ದರೆ, ನಾವು 'Load basic HTML' ಎಂಬುದರ ಮೇಲೆ ಕ್ಲಿಕ್ ಮಾಡಬಹುದು.
07:33 ಬಲಭಾಗದ ಕೆಳಗೆ ಇದು ಲಭ್ಯವಿದೆ.
07:37 ಇದು, ಯಾವುದೇ ಗ್ರಾಫಿಕಲ್ ನೋಟ ಇಲ್ಲದೇ 'gmail' ಅನ್ನು ಲೋಡ್ ಮಾಡುವುದು.
07:41 ಸ್ಕ್ರೀನ್ ಮೇಲೆ ಕೆಲವು ‘ಇನ್ಫರ್ಮೇಶನ್(ಮಾಹಿತಿಯ) ಬಾಕ್ಸ್’ ಗಳು ಪಾಪ್-ಅಪ್ ಆಗುವುವು.
07:46 ಅವುಗಳನ್ನು ಓದಿ ಅಥವಾ 'Next' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ ಇನ್ನಷ್ಟು ತಿಳಿದುಕೊಳ್ಳಿ. ಆನಂತರ ಕ್ಲೋಸ್ ಮಾಡಿ.
07:53 ಇದು, ನಿಮ್ಮ 'gmail' ಅಕೌಂಟ್ ನ ಡೀಫಾಲ್ಟ್ ಅಥವಾ 'ಸ್ಟಾಂಡರ್ಡ್ ವ್ಯೂ' ಆಗಿದೆ.
07:58 ಮಧ್ಯದಲ್ಲಿರುವ ಡಿಸ್ಪ್ಲೇ ಏರಿಯಾದಲ್ಲಿ, ನಾವು ನಮ್ಮ ಎಲ್ಲ ಮೇಲ್ ಗಳನ್ನು ನೋಡಬಹುದು.
08:04 ಇಲ್ಲಿ ಮೂರು ಟ್ಯಾಬ್ ಗಳಿವೆ ಎಂಬುದನ್ನು ಗಮನಿಸಿ. ನಾವು ಇವುಗಳ ಬಗ್ಗೆ ಮುಂದಿನ ಟ್ಯುಟೋರಿಯಲ್ ಗಳಲ್ಲಿ ವಿವರವಾಗಿ ಕಲಿಯುವೆವು.
08:12 ಎಡಭಾಗದಲ್ಲಿ, ನಾವು ಕೆಲವು ‘ಮೆನ್ಯು ಐಟಂ’ಗಳನ್ನು ನೋಡಬಹುದು.
08:16 'Inbox, Starred, Sent Mail, Drafts' ಮತ್ತು 'More' ಇವುಗಳು, 'Gmail' ನ ಕೆಲವು ಮುಖ್ಯವಾದ ‘ಮೇಲ್ ಬಾಕ್ಸ್’ಗಳಾಗಿವೆ.
08:29 ಡೀಫಾಲ್ಟ್ ಆಗಿ, 'Inbox' ಅನ್ನು ಆಯ್ಕೆಮಾಡಲಾಗಿದೆ ಮತ್ತು ಅದರಲ್ಲಿ ಇರುವುದನ್ನು ಡಿಸ್ಪ್ಲೇ ಏರಿಯಾದಲ್ಲಿ ತೋರಿಸಲಾಗಿದೆ.
08:36 'Inbox', ಬ್ರಾಕೆಟ್ ಗಳಲ್ಲಿ '3 ' ಅನ್ನುಹೊಂದಿರುವುದನ್ನು ಗಮನಿಸಿ.
08:41 ನೀವು ಪಡೆದ ಹೊಸ ‘ಮೇಲ್’ಗಳ ಸಂಖ್ಯೆಯನ್ನು ಇದು ಸೂಚಿಸುತ್ತದೆ.
08:46 ನಾವು ಹೊಸ ‘ಗೂಗಲ್ ಅಕೌಂಟ್’ಅನ್ನು ಕ್ರಿಯೇಟ್ ಮಾಡಿದಾಗ, 'Gmail Team' (ಜಿ-ಮೇಲ್ ಟೀಮ್) ನಿಂದ ಕೆಲವು ‘ಮೇಲ್’ಗಳನ್ನು ಪಡೆಯುತ್ತೇವೆ.
08:52 'Gmail ' ವೈಶಿಷ್ಟ್ಯಗಳನ್ನು ಹೇಗೆ ಬಳಸಬಹುದು ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನೀವು ಅವುಗಳನ್ನು ಓದಬಹುದು.
08:58 ಈಗ, ಒಂದು ‘ಇಮೇಲ್’ಅನ್ನು ಹೇಗೆ ಬರೆಯುವುದೆಂದು ನಾವು ಕಲಿಯೋಣ.
09:02 ಎಡಭಾಗದಲ್ಲಿರುವ 'COMPOSE' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ.
09:06 'New Message ' ಎಂಬ ಒಂದು ವಿಂಡೋ ತೆರೆದುಕೊಳ್ಳುವುದು.
09:10 ಇದರಲ್ಲಿ ನಾಲ್ಕು ಭಾಗಗಳಿವೆ.
09:13 'To' – ಇಲ್ಲಿ, ನಾವು ಯಾರಿಗೆ ‘ಇಮೇಲ್’ ಕಳಿಸಬೇಕಾಗಿದೆಯೋ ಆ ವ್ಯಕ್ತಿಯ ‘ಇಮೇಲ್ ಅಡ್ರೆಸ್’ಅನ್ನು ಬರೆಯುತ್ತೇವೆ.
09:21 ಇಲ್ಲಿ, ನಾನು ಈಗಷ್ಟೇ ಕ್ರಿಯೇಟ್ ಮಾಡಿರುವ email-id (ಇಮೇಲ್-ಐ ಡಿ)ಯನ್ನು, ಎಂದರೆ “ray.becky.0808@gmail.com” ಅನ್ನು ಟೈಪ್ ಮಾಡುವೆನು.
09:35 ನಾನು ನನಗೇ ಮೇಲ್ ಕಳಿಸುತ್ತಿದ್ದೇನೆ ಎಂದು ಇದರ ಅರ್ಥ.
09:39 ಮುಂದಿನ ಭಾಗವು 'Subject' ಎಂದು ಆಗಿದೆ.
09:42 ಇಲ್ಲಿ, ನಾವು ಮೇಲ್ ನ ವಿಷಯದ ಬಗ್ಗೆ ಸಂಕ್ಷಿಪ್ತವಾಗಿ ಟೈಪ್ ಮಾಡಬಹುದು.
09:46 ಉದಾಹರಣೆಗೆ: “Welcome mail”.
09:50 ಮುಂದಿನದು ವಿಷಯವನ್ನು ಬರೆಯುವ ಜಾಗ ಆಗಿದೆ.
09:53 ನಾವು ಇಲ್ಲಿ, ನಮಗೆ ಕಳಿಸಬೇಕಾಗಿರುವ ಸಂದೇಶವನ್ನು ಬರೆಯಬೇಕು.
09:57 ನಾವು, “Greetings to all from the Spoken Tutorial Project” ಎಂದು ಟೈಪ್ ಮಾಡೋಣ.
10:03 ಕೊನೆಯ ಭಾಗದಲ್ಲಿ, 'Send' ಎನ್ನುವ ಒಂದು ನೀಲಿ ಬಟನ್ ಇದೆ.
10:08 ‘ಮೇಲ್’ಅನ್ನು ಕಳಿಸಲು, ಅದರ ಮೇಲೆ ಕ್ಲಿಕ್ ಮಾಡಿ.
10:11 'Inbox' ನಲ್ಲಿರುವ ಮೇಲ್ ಗಳ ಸಂಖ್ಯೆಯು ಈಗ 4 ಆಗಿರುವುದನ್ನು ಗಮನಿಸಿ.
10:16 ಯಾವುದೇ ಒಂದು ನಿರ್ದಿಷ್ಟ ಮೇಲ್ ಅನ್ನು ಓದಲು, ಅದರ ಮೇಲೆ ಸುಮ್ಮನೆ ಕ್ಲಿಕ್ ಮಾಡಿ.
10:20 ನಾನು ನನಗೇ ಕಳಿಸಿದ ಮೇಲ್ ಇಲ್ಲಿದೆ.
10:23 ನಾವು ಒಮ್ಮೆ ಅದರತ್ತ ನೋಡೋಣ.
10:26 'Show details ' ಎಂಬ ಬಾಣದ ಗುರುತಿನ ಮೇಲೆ ಕ್ಲಿಕ್ ಮಾಡಿ.
10:29 ಇಲ್ಲಿ, ಇಮೇಲ್ ಕಳಿಸಿದವರ ಮತ್ತು ಪಡೆದವರ ‘ಇಮೇಲ್ ಅಡ್ರೆಸ್’ ಗಳು ಇರುತ್ತವೆ.
10:34 ಇಲ್ಲಿ, ‘ಇಮೇಲ್’ಅನ್ನು ಕಳಿಸಿದ ದಿನಾಂಕ ಮತ್ತು ಸಮಯಗಳು ಇರುತ್ತವೆ.
10:39 ಇಲ್ಲಿ ‘ಇಮೇಲ್’ನ ‘ಸಬ್ಜೆಕ್ಟ್ ಲೈನ್’ ಇದೆ
10:43 ಮತ್ತು ಇಲ್ಲಿ ವಿಷಯವು ಇರುತ್ತದೆ.
10:47 ಈಗ, 'Inbox' ನಲ್ಲಿ ‘unread email’ (ಓದಿರಲಾರದ ಇಮೇಲ್) ಗಳ ಸಂಖ್ಯೆಯು 3 ಇದೆ ಎಂದು ಗಮನಿಸಿ.
10:54 ಈಗ, ನಾವು 'Gmail' ನಿಂದ ‘ಸೈನ್-ಔಟ್’ ಹೇಗೆ ಮಾಡುವುದೆಂದು ತಿಳಿಯೋಣ.
10:58 ಮೇಲ್ಗಡೆ ಬಲಭಾಗದಲ್ಲಿ, ನೀವು ನಿಮ್ಮ 'email-id' (ಇಮೇಲ್ ಐ ಡಿ) ಯನ್ನು ನೋಡುವಿರಿ.
11:03 ಅಕೌಂಟ್ ಅನ್ನು ಕ್ರಿಯೇಟ್ ಮಾಡುವಾಗ, ನೀವು ಒಂದು ಫೋಟೋ ಅನ್ನು ಅಪ್-ಲೋಡ್ ಮಾಡಿದ್ದರೆ ಆಗ ಇಲ್ಲಿ, ಇದರ ಬದಲಾಗಿ, ನೀವು ಅದನ್ನು ನೋಡುವಿರಿ.
11:08 ಅದರ ಮೇಲೆ ಕ್ಲಿಕ್ ಮಾಡಿ.
11:10 ಇದು 'Sign Out ' ಬಟನ್ ಆಗಿದೆ. ‘ಸೈನ್ ಔಟ್’ ಮಾಡಲು, ಸುಮ್ಮನೆ ಇದರ ಮೇಲೆ ಕ್ಲಿಕ್ ಮಾಡಿ.
11:17 ‘Gmail’ ನಿಂದ ನೀವು ಯಶಸ್ವಿಯಾಗಿ ‘ಸೈನ್-ಔಟ್’ ಮಾಡಿದ್ದೀರಿ.
11:21 ಇಲ್ಲಿಗೆ, ನಾವು ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ.
11:25 ಸಂಕ್ಷಿಪ್ತವಾಗಿ, ನಾವು -
11:28 * ಒಂದು ಹೊಸ ‘ಗೂಗಲ್ ಅಕೌಂಟ್’ಅನ್ನು ಕ್ರಿಯೇಟ್ ಮಾಡುವುದು
11:31 * ‘ಗೂಗಲ್ ಅಕೌಂಟ್’ಅನ್ನು ಬಳಸಿ ‘ಜಿ-ಮೇಲ್’ನಲ್ಲಿ ಲಾಗ್-ಇನ್ ಮಾಡುವುದು
11:34 * ಒಂದು ‘ಇಮೇಲ್’ಅನ್ನು ಬರೆಯುವುದು
11:36 * ‘ಇಮೇಲ್’ಅನ್ನು ಕಳಿಸುವುದು ‘ಇಮೇಲ್’ಅನ್ನು ನೋಡುವುದು ಮತ್ತು
11:39 * ‘ಜಿ-ಮೇಲ್’ನಿಂದ ಲಾಗ್-ಔಟ್ ಮಾಡುವುದು ಇವುಗಳನ್ನು ಕಲಿತಿದ್ದೇವೆ.
11:41 ಈ ಲಿಂಕ್ ನಲ್ಲಿರುವ ವೀಡಿಯೋ, “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
11:45 ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
11:49 ನಾವು ಕಾರ್ಯಶಾಲೆಗಳನ್ನು ನಡೆಸುತ್ತೇವೆ ಮತ್ತು ನಮ್ಮ ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತೇವೆ.
11:55 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ.
11:58 ‘ಸ್ಪೋಕನ್ ಟ್ಯುಟೋರಿಯಲ್’ ಪ್ರಕಲ್ಪವು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
12:05 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ.
12:10 ಈ ಸ್ಕ್ರಿಪ್ಟ್, ಪ್ರವೀಣ್ ಅವರ ಕೊಡುಗೆಯಾಗಿದೆ.
12:12 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ . ವಂದನೆಗಳು.

Contributors and Content Editors

Pratik kamble, Sandhya.np14, Vasudeva ahitanal