Health-and-Nutrition/C2/Powder-recipes-for-6-to-24-months-old-children/Kannada
From Script | Spoken-Tutorial
| Time | Narration |
| 00:00 | Nutritious powder recipes for 6 to 24 months old children ಎಂಬ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
| 00:08 | ಈ ಟ್ಯುಟೋರಿಯಲ್ ನಲ್ಲಿ ನಾವು, ಕೆಳಗೆ ಹೇಳಿದ ವಿವಿಧ ಪೌಷ್ಟಿಕ ಪುಡಿಗಳ ಪಾಕವಿಧಾನವನ್ನು ಕಲಿಯುವೆವು. |
| 00:15 | ಅಮೈಲೇಸ್ (Amylase) ಪುಡಿ, |
| 00:17 | ಕಾಳುಗಳ ಪುಡಿ, |
| 00:18 | ಎಣ್ಣೆಬೀಜಗಳ ಪುಡಿ, |
| 00:20 | ದ್ವಿದಳ ಧಾನ್ಯಗಳ ಪುಡಿ, |
| 00:22 | ಕರಿಬೇವಿನ ಎಲೆಗಳ ಪುಡಿ ಮತ್ತು |
| 00:24 | ನುಗ್ಗೆ ಎಲೆಗಳ ಪುಡಿ. |
| 00:27 | ಹೆಚ್ಚು ಪ್ರಯತ್ನವಿಲ್ಲದೆ, ಮನೆಯಲ್ಲಿಯೇ ತಯಾರಿಸಬಹುದಾದ ಅನೇಕ ಪೌಷ್ಟಿಕ ಪುಡಿಗಳು ಇರುತ್ತವೆ. |
| 00:33 | ಈ ಪೌಷ್ಟಿಕ ಪುಡಿಗಳನ್ನು ಹೇಗೆ ತಯಾರಿಸುವುದೆಂದು ನಾವು ಕಲಿಯೋಣ. |
| 00:38 | ಈ ಪುಡಿಗಳು ಶಿಶುಗಳ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಸಹಾಯ ಮಾಡುವ ಪೋಷಕಾಂಶಗಳನ್ನು ಹೊಂದಿವೆ. |
| 00:44 | ಮಗುವಿನ ವಯಸ್ಸು 6 ತಿಂಗಳು ಆದ ನಂತರ, ಈ ಪುಡಿಗಳನ್ನು ಮಗುವಿಗೆ ಕೊಡಲು ಶಿಫಾರಸು ಮಾಡಲಾಗುತ್ತದೆ. |
| 00:52 | ಮಗುವಿಗೆ ಒಂದು ಹೊಸ ಆಹಾರವನ್ನು ಆರಂಭಿಸಿದಾಗಲೆಲ್ಲ, ಅದನ್ನು ೩ - ೪ ದಿನಗಳವರೆಗೆ ಸತತವಾಗಿ ಕೊಡಬೇಕು. |
| 01:00 | ೩ ಅಥವಾ ೪ ದಿನಗಳ ನಂತರ, ಮಗುವಿಗೆ ಹೊಸ ಆಹಾರವನ್ನು ಆರಂಭಿಸಿ. |
| 01:05 | ಈ ಎರಡೂ ಆಹಾರಗಳನ್ನು ಒಟ್ಟಿಗೆ ಸೇರಿಸಬಹುದು ಆದರೆ ಎರಡನ್ನೂ ಪ್ರತ್ಯೇಕವಾಗಿ ಪ್ರಯತ್ನಿಸಿರಬೇಕು. ಮತ್ತು, ಮಗುವಿನ ಮುಖ ಮತ್ತು ದೇಹದ ಮೇಲೆ ದದ್ದುಗಳು (rashes) ಅಥವಾ ಊತದಂತಹ (swelling) ಯಾವುದೇ ಅಲರ್ಜೀ ಆಗಿರಬಾರದು. |
| 01:20 | ಬೀಜಗಳಂತಹ (nuts) ಅಲರ್ಜೆನ್ ಗಳನ್ನು ಹೊಂದಿರುವ ಹೊಸ ಆಹಾರವನ್ನು ಮಗುವಿಗೆ ಪರಿಚಯಿಸಿದಾಗಲೆಲ್ಲ, ಟೀಚಮಚದ ತುದಿಯಷ್ಟು ಸಣ್ಣ ಪ್ರಮಾಣದೊಂದಿಗೆ ಪ್ರಾರಂಭಿಸಿ. |
| 01:30 | 10 ನಿಮಿಷಗಳವರೆಗೆ ಕಾಯ್ದು ನಂತರ ಅದನ್ನು ನಿಧಾನವಾಗಿ ಮಗುವಿಗೆ ತಿನ್ನಿಸಬೇಕು. |
| 01:35 | ಮಗುವಿಗೆ ಒಂದು ವರ್ಷ ಆಗುವವರೆಗೆ, ದಯವಿಟ್ಟು, ಅದರ ಆಹಾರದಲ್ಲಿ ಸಕ್ಕರೆ, ಉಪ್ಪು ಅಥವಾ ಯಾವುದೇ ರೀತಿಯ ಮಸಾಲೆಗಳನ್ನು ಸೇರಿಸಬೇಡಿ. |
| 01:44 | ಈಗ ನಮ್ಮ ಮೊದಲನೆಯ ಪಾಕವಿಧಾನದೊಂದಿಗೆ ನಾವು ಆರಂಭಿಸೋಣ – ಅಮೈಲೇಸ್ (Amylase) ಪುಡಿ. |
| 01:49 | ಆದರೆ, ಮೊದಲು ನಾವು ಅದರ ಪ್ರಯೋಜನಗಳನ್ನು ಚರ್ಚಿಸೋಣ. |
| 01:53 | ಅಮೈಲೇಸ್ - ಇದು ಆಹಾರದ ಜೀರ್ಣಕ್ರಿಯೆಗೆ ಅಗತ್ಯವಾದ ಒಂದು ಕಿಣ್ವ (enzyme) ಅಥವಾ ರಾಸಾಯನಿಕ ಆಗಿದೆ. |
| 01:59 | ಮಗುವಿನ ದೇಹದಲ್ಲಿ ಇದು ಸೀಮಿತ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ. |
| 02:03 | ಈ ಪುಡಿಯು ಹೆಚ್ಚಿನ 'ಅಮೈಲೇಸ್' ಅನ್ನು ಒದಗಿಸುತ್ತದೆ. ಮತ್ತು, ಪೌಷ್ಟಿಕಾಂಶ ಹಾಗೂ ಆಹಾರದಿಂದ ಹೀರುವಿಕೆಯನ್ನು ಹೆಚ್ಚಿಸುತ್ತದೆ. |
| 02:12 | ಆದ್ದರಿಂದ, ಮಗುವಿಗೆ 'ಅಮೈಲೇಸ್' ಹೆಚ್ಚಾಗಿರುವ ಹಿಟ್ಟು ಅಥವಾ 'ಅಮೈಲೇಸ್' ಪುಡಿಯನ್ನು ಕೊಡಬೇಕು. |
| 02:18 | 'ಅಮೈಲೇಸ್' ಪುಡಿಯನ್ನು ತಯಾರಿಸುವ ವಿಧಾನವನ್ನು ತಿಳಿದುಕೊಳ್ಳೋಣ. |
| 02:22 | 'ಅಮೈಲೇಸ್' ಪುಡಿಯನ್ನು ತಯಾರಿಸಲು ಬೇಕಾಗುವ ಪದಾರ್ಥಗಳು –
ಅರ್ಧ ಕಪ್ ಗೋಧಿ, |
| 02:27 | ಅರ್ಧ ಕಪ್ ಹೆಸರುಕಾಳು ಮತ್ತು |
| 02:29 | ಅರ್ಧ ಕಪ್ ರಾಗಿ. |
| 02:32 | ತಯಾರಿಸುವ ವಿಧಾನ: ಮೊದಲು, ಎಲ್ಲ ಕಾಳುಗಳನ್ನು ಪ್ರತ್ಯೇಕವಾಗಿ 10 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. |
| 02:39 | ನೆನೆಸಿಡುವುದರಿಂದ ಕಾಳುಗಳಲ್ಲಿಯ ತೇವಾಂಶವು ಸುಧಾರಿಸುತ್ತದೆ. |
| 02:42 | 10 ಗಂಟೆಗಳ ನಂತರ ಎಲ್ಲ ಕಾಳುಗಳನ್ನು ಹೊರತೆಗೆಯಿರಿ. |
| 02:46 | ಮತ್ತು, ನೀರೆಲ್ಲ ಬಸಿದು ಹೋಗುವಂತೆ ಒಂದು ಜರಡಿಯಲ್ಲಿರಿಸಿ. |
| 02:50 | ನಂತರ, ಒಂದೊಂದಾಗಿ ಎಲ್ಲಾ ಪದಾರ್ಥಗಳನ್ನು ಒಂದು ಶುದ್ಧ ಮತ್ತು ಒಣ ಹತ್ತಿ ಬಟ್ಟೆಯಲ್ಲಿ ಹಾಕಿ ಕಟ್ಟಿಡಿ. |
| 02:55 | ಅವು ಮೊಳಕೆಯೊಡೆಯುವ ತನಕ ಹಾಗೇ ಬಿಡಿ. |
| 02:58 | ಈ ಕ್ರಿಯೆಯನ್ನು ಮೊಳಕೆಯೊಡೆಯುವುದು ಎನ್ನುತ್ತಾರೆ. |
| 03:01 | ಮೊಳಕೆಯೊಡೆಯಲು ಕೆಲವೊಂದು ಪದಾರ್ಥಗಳು ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ ಮತ್ತು ಕೆಲವು ಸ್ವಲ್ಪ ಕಡಿಮೆ ಸಮಯ ತೆಗೆದುಕೊಳ್ಳುತ್ತವೆ ಎಂಬುದನ್ನು ಗಮನಿಸಿ. |
| 03:08 | ಇಲ್ಲಿ, ರಾಗಿಗೆ ಉಳಿದ ಕಾಳುಗಳಿಗಿಂತ ಹೆಚ್ಚು ಸಮಯ ಬೇಕು. |
| 03:14 | ಮೊಳಕೆಯೊಡೆದ ನಂತರ, ಒಂದು ಅಥವಾ ಎರಡು ದಿನಗಳವರೆಗೆ ಅವುಗಳನ್ನು ಬಿಸಿಲಿನಲ್ಲಿ ಒಣಗಿಸಿ. |
| 03:19 | ಆಮೇಲೆ, ಎಲ್ಲ ಪದಾರ್ಥಗಳನ್ನು ಪೂರ್ತಿಯಾಗಿ ಒಣಗುವವರೆಗೆ ಸಣ್ಣ ಉರಿಯ ಮೇಲೆ ಹುರಿಯಿರಿ. |
| 03:25 | ನೆನಪಿಡಿ, ಹುರಿಯುವಾಗ ನಿರಂತರವಾಗಿ ಮಗುಚುತ್ತಿರಬೇಕು. |
| 03:30 | ಆಮೇಲೆ, ಶುಚಿಯಾದ ಕೈಗಳ ನಡುವೆ ಉಜ್ಜುವ ಮೂಲಕ ಎಲ್ಲಾ ಪದಾರ್ಥಗಳ ಹೊರಗಿನ ಸಿಪ್ಪೆಯನ್ನು ಪ್ರತ್ಯೇಕಿಸಿ. |
| 03:36 | ಹೊರಗಿನ ಸಿಪ್ಪೆಯನ್ನು ತೆಗೆದ ನಂತರ ಎಲ್ಲ ಪದಾರ್ಥಗಳನ್ನು ಮಿಶ್ರಣ ಮಾಡಿ. |
| 03:41 | ಈಗ, ಗ್ರೈಂಡರ್ ಅನ್ನು ಬಳಸಿ ಈ ಮಿಶ್ರಣದ ಪುಡಿಯನ್ನು ಮಾಡಿ. |
| 03:45 | ಮತ್ತು, 'ಅಮೈಲೇಸ್' ಪುಡಿ ತಯಾರಾಗಿದೆ. |
| 03:48 | ಈ 'ಅಮೈಲೇಸ್' ಪುಡಿಯನ್ನು ಗಾಳಿತೂರದ ಜಾಡಿಯಲ್ಲಿ ಸಂಗ್ರಹಿಸಿಡಿ. |
| 03:52 | ಮಗುವಿನ ಆಹಾರವನ್ನು ತಯಾರಿಸುವಾಗ, ೧ ಟೀಚಮಚದಷ್ಟು 'ಅಮೈಲೇಸ್' ಪುಡಿಯನ್ನು ಸೇರಿಸಬಹುದು. |
| 03:59 | ಅಥವಾ, 'ಅಮೈಲೇಸ್' ಪುಡಿಯ ಗಂಜಿಯನ್ನು ಕೂಡ ಮಾಡಬಹುದು. |
| 04:03 | ೧ ಟೀಚಮಚ 'ಅಮೈಲೇಸ್' ಪುಡಿಯು, ಸುಮಾರು 18 ಕ್ಯಾಲೊರಿ ಮತ್ತು 0.6 ಗ್ರಾಂ ಪ್ರೋಟೀನ್ ಗಳನ್ನು ಕೊಡುತ್ತದೆ. |
| 04:10 | 100 ಗ್ರಾಂ 'ಅಮೈಲೇಸ್' ಪುಡಿಯು, ಸುಮಾರು 360 ಕ್ಯಾಲೊರಿ ಮತ್ತು 12 ಗ್ರಾಂ ಪ್ರೋಟೀನ್ ಗಳನ್ನು ಕೊಡುತ್ತದೆ. |
| 04:17 | 'ಅಮೈಲೇಸ್' ಪುಡಿಯು, ಕೆಲವು ವಿಶಿಷ್ಟ ಗುಣಗಳನ್ನು ಹೊಂದಿದೆ. ಆದ್ದರಿಂದ ಇದು ಮಗುವಿಗಾಗಿ ವಿಶೇಷವಾಗಿದೆ. |
| 04:23 | ಇದು ಆಹಾರದ ಗಾಢತೆಯನ್ನು ಕಡಿಮೆ ಮಾಡುತ್ತದೆ ಮತ್ತು ಮಗುವಿಗಾಗಿ ಇದು ಹೆಚ್ಚು ರುಚಿಕರವಾಗಿಸುತ್ತದೆ. |
| 04:28 | ಅಲ್ಲದೆ, ಆಹಾರದ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಮತ್ತು ಮಗುವಿನ ಆಹಾರದ ಶಕ್ತಿಯ ಸಾಂದ್ರತೆಯನ್ನು ಹೆಚ್ಚಿಸುತ್ತದೆ. |
| 04:34 | ಆಮೇಲೆ, ನಾವು ಕಾಳುಗಳ ಪುಡಿಯನ್ನು ತಯಾರಿಸುವ ವಿಧಾನವನ್ನು ಕಲಿಯುವೆವು. |
| 04:38 | ಈ ಪುಡಿಯಲ್ಲಿ ಸತುವು (Zinc), ನಾರು (fiber), ಮೆಗ್ನೀಸಿಯಮ್ ಮತ್ತು ಕ್ಯಾಲ್ಸಿಯಂ ಗಳು ಸಮೃದ್ಧವಾಗಿವೆ. |
| 04:44 | ಈ ಪೋಷಕಾಂಶಗಳು ಮೂಳೆಯ ಬೆಳವಣಿಗೆಗೆ ಸಹಾಯ ಮಾಡುತ್ತವೆ ಮತ್ತು ಮಗುವಿನ ಶಕ್ತಿಯನ್ನು ಸುಧಾರಿಸುತ್ತದೆ. |
| 04:50 | ಅಲ್ಲದೆ, ಈ ಪುಡಿಯು ಉತ್ತಮ ಕೊಬ್ಬಿನ ಮೂಲವಾಗಿದ್ದು ಮಕ್ಕಳ ಮೆದುಳಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. |
| 04:57 | ಈ ಪುಡಿಯನ್ನು ತಯಾರಿಸಲು ಬೇಕಾಗಿರುವ 3 ವಿಧದ ಬೀಜಗಳು-
ಅರ್ಧ ಕಪ್ ಕರಿಎಳ್ಳು, |
| 05:03 | ಅರ್ಧ ಕಪ್ ಅಗಸೆ ಬೀಜಗಳು ಮತ್ತು |
| 05:05 | ಅರ್ಧ ಕಪ್ ಕುಂಬಳಕಾಯಿಯ ಕಚ್ಚಾ ಬೀಜಗಳು. |
| 05:08 | ತಯಾರಿಸುವ ವಿಧಾನ: ಒಂದೊಂದಾಗಿ ಎಲ್ಲ ಬೀಜಗಳನ್ನು 4 ರಿಂದ 5 ನಿಮಿಷಗಳವರೆಗೆ ಸಣ್ಣ ಉರಿಯ ಮೇಲೆ ಒಣದಾಗಿ ಹುರಿಯಿರಿ. |
| 05:16 | ತಣ್ಣಗಾದ ನಂತರ, ಎಲ್ಲ ಹುರಿದ ಪದಾರ್ಥಗಳ ಪುಡಿಯನ್ನು ತಯಾರಿಸಿ. |
| 05:20 | ಈ ಪುಡಿಯನ್ನು ಗಾಳಿತೂರದ ಜಾಡಿಯಲ್ಲಿ ಶೇಖರಿಸಿಡಿ. |
| 05:23 | ಮಗುವಿಗೆ ತಿನ್ನಿಸುವ ಮುನ್ನ, ೧ ಟೀಚಮಚದಷ್ಟು ಈ ಪುಡಿಯನ್ನು ಅದರ ಆಹಾರದಲ್ಲಿ ಸೇರಿಸಬೇಕು. |
| 05:29 | ಇದು ಸುಮಾರು 30 ಕ್ಯಾಲೊರಿ ಮತ್ತು 2.7 ಗ್ರಾಂ ಪ್ರೋಟೀನ್ ಗಳನ್ನು ಒದಗಿಸುತ್ತದೆ. |
| 05:36 | 100 ಗ್ರಾಂ ಬೀಜಗಳ ಈ ಪುಡಿಯು, ಸುಮಾರು 600 ಕ್ಯಾಲೊರಿ ಮತ್ತು 55 ಗ್ರಾಂ ಪ್ರೋಟೀನ್ ಗಳನ್ನು ಕೊಡುತ್ತದೆ. |
| 05:43 | ನಮ್ಮ ಮುಂದಿನ ಪಾಕವಿಧಾನವು ಎಣ್ಣೆಬೀಜಗಳ ಪುಡಿಯಾಗಿದೆ. |
| 05:47 | ಈ ಪುಡಿಯಲ್ಲಿ ಸತುವು (Zinc), ಮೆಗ್ನೀಸಿಯಮ್ ಮತ್ತು ಕಬ್ಬಿಣ ಮುಂತಾದ ಖನಿಜಾಂಶಗಳು ಸಮೃದ್ಧವಾಗಿವೆ. |
| 05:53 | ಈ ಖನಿಜಾಂಶಗಳು, ಕೆಂಪು ರಕ್ತಕಣಗಳನ್ನು ಉತ್ಪಾದಿಸುವಲ್ಲಿ ಮುಖ್ಯ ಪಾತ್ರವಹಿಸುತ್ತವೆ. |
| 05:57 | ಅಲ್ಲದೆ, ಈ ಪುಡಿಯು ಉತ್ತಮ ಕೊಬ್ಬಿನ ಮೂಲವಾಗಿದ್ದು ಮಕ್ಕಳ ಮೆದುಳಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. |
| 06:04 | ಎಣ್ಣೆಬೀಜಗಳ ಈ ಪುಡಿಯನ್ನು ತಯಾರಿಸಲು ಬೇಕಾಗಿರುವ ಪದಾರ್ಥಗಳು - |
| 06:08 | ಅರ್ಧ ಕಪ್ ಕಡಲೆಕಾಯಿ, |
| 06:10 | ಅರ್ಧ ಕಪ್ ತುರಿದ ಒಣ ಕೊಬ್ಬರಿ, |
| 06:12 | ಅರ್ಧ ಕಪ್ ಅಗಸೆ ಬೀಜಗಳು ಮತ್ತು |
| 06:15 | ಅರ್ಧ ಕಪ್ ಕರಿ ಎಳ್ಳು. |
| 06:18 | ತಯಾರಿಸುವ ವಿಧಾನ: ಒಂದೊಂದಾಗಿ ಎಲ್ಲ ಎಣ್ಣೆಬೀಜಗಳನ್ನು 4 ರಿಂದ 6 ನಿಮಿಷಗಳವರೆಗೆ ಮಧ್ಯಮ ಉರಿಯ ಮೇಲೆ ಒಣದಾಗಿ ಹುರಿಯಿರಿ. |
| 06:26 | ನಂತರ, ಕಲ್ಲಿನ ಗ್ರೈಂಡರ್ ಅಥವಾ ಮಿಕ್ಸರ್ ಗ್ರೈಂಡರ್ ಅನ್ನು ಬಳಸಿ, ಎಲ್ಲ ಹುರಿದ ಬೀಜಗಳ ಪುಡಿಯನ್ನು ತಯಾರಿಸಿ. |
| 06:33 | ಈ ಪುಡಿಯನ್ನು ಗಾಳಿತೂರದ ಜಾಡಿಯಲ್ಲಿ ಶೇಖರಿಸಿಡಿ. |
| 06:36 | ಮಗುವಿಗೆ ತಿನ್ನಿಸುವ ಮುನ್ನ, ೧ ಟೀಚಮಚದಷ್ಟು ಈ ಪುಡಿಯನ್ನು ಆಹಾರದಲ್ಲಿ ಸೇರಿಸಬಹುದು. |
| 06:42 | ಇದು ಸುಮಾರು 28 ಕ್ಯಾಲೊರಿ ಮತ್ತು 0.9 ಗ್ರಾಂ ಪ್ರೋಟೀನ್ ಗಳನ್ನು ಒದಗಿಸುತ್ತದೆ. |
| 06:48 | ಈ ಪುಡಿಯ 100 ಗ್ರಾಂ, ಸುಮಾರು 600 ಕ್ಯಾಲೊರಿ ಮತ್ತು 19 ಗ್ರಾಂ ಪ್ರೋಟೀನ್ ಗಳನ್ನು ಒದಗಿಸುತ್ತದೆ. |
| 06:56 | ಈಗ, ದ್ವಿದಳ ಧಾನ್ಯಗಳ ಪುಡಿಯನ್ನು ತಯಾರಿಸುವ ವಿಧಾನವನ್ನು ತಿಳಿಯೋಣ. |
| 06:59 | ಈ ಪುಡಿಯು ಪೊಟ್ಯಾಸಿಯಮ್, ಪ್ರೋಟೀನ್, ಫೋಲೇಟ್, ಮೆಗ್ನೀಸಿಯಮ್ ಇತ್ಯಾದಿಗಳನ್ನು ಸಮೃದ್ಧವಾಗಿ ಹೊಂದಿದೆ. |
| 07:05 | ಈ ಪೋಷಕಾಂಶಗಳು ಮೂಳೆಯ ಬೆಳವಣಿಗೆಗೆ ಸಹಾಯ ಮಾಡುತ್ತವೆ ಮತ್ತು ಮಗುವಿನ ಶಕ್ತಿಯನ್ನು ಸುಧಾರಿಸುತ್ತವೆ. |
| 07:11 | ನಮ್ಮ ದೇಹದಲ್ಲಿ ಕೆಂಪು ರಕ್ತ ಕಣಗಳ ಉತ್ಪಾದನೆಗೆ ಸಹ ಅವು ಅಗತ್ಯವಾಗಿವೆ. |
| 07:16 | ದ್ವಿದಳ ಧಾನ್ಯಗಳ ಪುಡಿಯನ್ನು ತಯಾರಿಸಲು ಬೇಕಾದ ಪದಾರ್ಥಗಳು:
ಅರ್ಧ ಕಪ್ ಹೆಸರುಕಾಳು, |
| 07:22 | ಅರ್ಧ ಕಪ್ ಒಣಗಿದ ಹಸಿರು ವಟಾಣಿ, |
| 07:24 | ಅರ್ಧ ಕಪ್ ಕಡಲೆಕಾಳು ಮತ್ತು |
| 07:27 | ಅರ್ಧ ಕಪ್ ಮಡಿಕೆ ಕಾಳು. |
| 07:30 | ತಯಾರಿಸುವ ವಿಧಾನ: ಮೊದಲು, ಎಲ್ಲ ಕಾಳುಗಳನ್ನು ಪ್ರತ್ಯೇಕವಾಗಿ 10 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. |
| 07:35 | ನೆನೆಸಿಡುವುದರಿಂದ ಕಾಳುಗಳಲ್ಲಿಯ ತೇವಾಂಶವು ಸುಧಾರಿಸುತ್ತದೆ. |
| 07:40 | 10 ಗಂಟೆಗಳ ನಂತರ, ಎಲ್ಲ ಕಾಳುಗಳನ್ನು ಹೊರತೆಗೆಯಿರಿ. |
| 07:43 | ಮತ್ತು, ನೀರೆಲ್ಲ ಬಸಿದು ಹೋಗುವಂತೆ ಕಾಳುಗಳನ್ನು ಒಂದು ಜರಡಿಯಲ್ಲಿರಿಸಿ. |
| 07:47 | ನಂತರ, ಒಂದೊಂದಾಗಿ, ಎಲ್ಲಾ ಕಾಳುಗಳನ್ನು ಒಂದು ಶುದ್ಧ ಮತ್ತು ಒಣ ಹತ್ತಿ ಬಟ್ಟೆಯಲ್ಲಿ ಹಾಕಿ ಕಟ್ಟಿಡಿ. |
| 07:52 | ಅವು ಮೊಳಕೆಯೊಡೆಯುವ ತನಕ ಹಾಗೇ ಬಿಡಿ. |
| 07:55 | ಈ ಸಂಪೂರ್ಣ ಕ್ರಿಯೆಯನ್ನು ಮೊಳಕೆಯೊಡೆಯುವುದು ಎನ್ನುತ್ತಾರೆ. |
| 07:59 | ದಯವಿಟ್ಟು ಗಮನಿಸಿ – ಈಮೊದಲೇ ನಾವು ಚರ್ಚಿಸಿದಂತೆ, ಮೊಳಕೆಯೊಡೆಯುವ ಅವಧಿಯು ಪ್ರತಿಯೊಂದು ವಿಧದ ಕಾಳುಗಳಿಗೆ ಬೇರೆಬೇರೆ ಆಗಿರುತ್ತದೆ. |
| 08:06 | ಮೊಳಕೆಯೊಡೆದ ನಂತರ, ಒಂದು ಅಥವಾ ಎರಡು ದಿನಗಳವರೆಗೆ ಅವುಗಳನ್ನು ಬಿಸಿಲಿನಲ್ಲಿ ಒಣಗಿಸಿ. |
| 08:11 | ನಂತರ, ಎಲ್ಲ ಕಾಳುಗಳನ್ನು ಪೂರ್ತಿಯಾಗಿ ಒಣಗುವವರೆಗೆ ಮಧ್ಯಮ ಉರಿಯ ಮೇಲೆ ಹುರಿಯಿರಿ. |
| 08:17 | ಹುರಿಯುವಾಗ ನಿರಂತರವಾಗಿ ಮಗುಚುತ್ತಿರಬೇಕು. |
| 08:20 | ಇದು ಕಾಳುಗಳು ಸುಟ್ಟುಹೋಗದಂತೆ ತಡೆಯುತ್ತದೆ. |
| 08:24 | ಹುರಿದ ನಂತರ, ಶುಚಿಯಾದ ಕೈಗಳ ನಡುವೆ ಉಜ್ಜುವ ಮೂಲಕ, ಎಲ್ಲಾ ಒಣಗಿಸಿದ ಕಾಳುಗಳ ಹೊರಗಿನ ಸಿಪ್ಪೆಯನ್ನು ಪ್ರತ್ಯೇಕಿಸಿ. |
| 08:30 | ಈಗ, ಎಲ್ಲ ಕಾಳುಗಳನ್ನು ಒಟ್ಟಿಗೆ ಸೇರಿಸಿ ಪುಡಿಮಾಡಿ. |
| 08:34 | ಮತ್ತು, ಈ ಪುಡಿಯನ್ನು ಗಾಳಿತೂರದ ಜಾಡಿಯಲ್ಲಿ ಶೇಖರಿಸಿಡಿ. |
| 08:38 | ಮಗುವಿನ ಆಹಾರವನ್ನು ತಯಾರಿಸುವಾಗ, ಎರಡು ಟೀಚಮಚದಷ್ಟು ಈ ಪುಡಿಯನ್ನು ಸೇರಿಸಬೇಕು. |
| 08:43 | ಈ ಪುಡಿಯ ಎರಡು ಟೀಚಮಚಗಳು, ಸುಮಾರು 33 ಕ್ಯಾಲೊರಿ ಮತ್ತು 1.8 ಗ್ರಾಂ ಪ್ರೋಟೀನ್ ಗಳನ್ನು ಒದಗಿಸುತ್ತದೆ. |
| 08:49 | ಈ ಪುಡಿಯ 100 ಗ್ರಾಂ, ಸುಮಾರು 250 ಕ್ಯಾಲೊರಿ ಮತ್ತು 15 ಗ್ರಾಂ ಪ್ರೋಟೀನ್ ಗಳನ್ನು ಒದಗಿಸುತ್ತದೆ. |
| 08:57 | ಆಮೇಲೆ, ನಾವು ಕರಿಬೇವಿನ ಎಲೆಗಳ ಪುಡಿಯನ್ನು ಮಾಡುವ ವಿಧಾನವನ್ನು ತಿಳಿದುಕೊಳ್ಳುವೆವು. |
| 09:00 | ಕರಿಬೇವಿನ ಎಲೆಗಳು ನಾರು (fibre), ಕಬ್ಬಿಣ, ಕ್ಯಾಲ್ಸಿಯಂ ಮತ್ತು ವಿಟಮಿನ್ C ಗಳನ್ನು ಸಮೃದ್ಧವಾಗಿ ಹೊಂದಿವೆ. |
| 09:06 | ಈ ಎಲ್ಲಾ ಪೋಷಕಾಂಶಗಳು, ಜೀರ್ಣಕ್ರಿಯೆ ಮತ್ತು ಹಲ್ಲಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತವೆ. |
| 09:12 | ಅಲ್ಲದೆ, ಇವುಗಳು ಮಗುವಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. |
| 09:16 | ಈ ಪುಡಿಯನ್ನು ತಯಾರಿಸಲು ನಮಗೆ ಕರಿಬೇವಿನ ಎಲೆಗಳು ಬೇಕಾಗುವುದು. |
| 09:19 | ತಯಾರಿಸುವ ವಿಧಾನ – ಕರಿಬೇವಿನ ಎಲೆಗಳನ್ನು ಶುದ್ಧ ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. |
| 09:23 | ಅವುಗಳನ್ನು ನೆರಳಿನಲ್ಲಿ ಒಣಗಲು ಬಿಡಿ. |
| 09:26 | ಈಗ, ಈ ಎಲ್ಲ ಒಣಗಿದ ಕರಿಬೇವಿನ ಎಲೆಗಳ ಪುಡಿಯನ್ನು ತಯಾರಿಸಿ ಮತ್ತು ಈ ಪುಡಿಯನ್ನು ಗಾಳಿತೂರದ ಜಾಡಿಯಲ್ಲಿ ಶೇಖರಿಸಿಡಿ. |
| 09:33 | ಮಗುವಿಗೆ ತಿನ್ನಿಸುವ ಮುನ್ನ, ಕಾಲು ಟೀಚಮಚದಷ್ಟು ಈ ಪುಡಿಯನ್ನು ಆಹಾರದಲ್ಲಿ ಸೇರಿಸಬಹುದು. |
| 09:39 | ಇದು ಸುಮಾರು 9 ಮಿಲಿಗ್ರಾಂ ನಷ್ಟು ಕ್ಯಾಲ್ಶಿಯಂ ಅನ್ನು ಒದಗಿಸುತ್ತದೆ. |
| 09:42 | 100 ಗ್ರಾಂ ನಷ್ಟು ಈ ಪುಡಿಯು, ಸುಮಾರು 700 ಮಿಲಿಗ್ರಾಂ ನಷ್ಟು ಕ್ಯಾಲ್ಶಿಯಂ ಅನ್ನು ಒದಗಿಸುತ್ತದೆ. |
| 09:48 | ನಂತರ, ನಾವು ನುಗ್ಗೆ ಎಲೆಗಳ ಪುಡಿಯನ್ನು ಮಾಡುವ ವಿಧಾನವನ್ನು ತಿಳಿದುಕೊಳ್ಳೋಣ. |
| 09:53 | ಈ ಪುಡಿಯು ಕ್ಯಾಲ್ಸಿಯಂ, ಕಬ್ಬಿಣ, ವಿಟಮಿನ್ C, ವಿಟಮಿನ್ A, ಪ್ರೋಟೀನ್ ಮತ್ತು ಸಲ್ಫರ್ ಗಳನ್ನು (ಗಂಧಕ) ಸಾಕಷ್ಟು ಪ್ರಮಾಣದಲ್ಲಿ ಹೊಂದಿರುತ್ತದೆ. |
| 10:01 | ಈ ಪೋಷಕಾಂಶಗಳು ವಸಡುಗಳ ಬೆಳವಣಿಗೆಗೆ ಮತ್ತು ಮಗುವಿನ ಆರೋಗ್ಯಕರ ಕಣ್ಣುಗಳಿಗೆ ಅಗತ್ಯವಾಗಿರುತ್ತದೆ. |
| 10:07 | ಇವುಗಳು ಸೋಂಕಿನ ವಿರುದ್ಧ ಹೋರಾಡುತ್ತವೆ ಮತ್ತು ಮಗುವಿನ ಶಕ್ತಿಯನ್ನು ಸುಧಾರಿಸುತ್ತವೆ. |
| 10:12 | ಈ ಪುಡಿಯನ್ನು ತಯಾರಿಸಲು ನಮಗೆ ನುಗ್ಗೆ ಎಲೆಗಳು ಬೇಕಾಗುತ್ತದೆ. |
| 10:17 | ತಯಾರಿಸುವ ವಿಧಾನ – ಮೊದಲು ಎಲ್ಲ ನುಗ್ಗೆ ಎಲೆಗಳನ್ನು ಶುದ್ಧ ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. |
| 10:22 | ಈ ಎಲೆಗಳನ್ನು ನೆರಳಿನಲ್ಲಿ ಒಣಗಿಸಿ. |
| 10:25 | ಈಗ, ಎಲ್ಲ ಒಣಗಿದ ಎಲೆಗಳ ಪುಡಿಯನ್ನು ತಯಾರಿಸಿ. ನುಗ್ಗೆ ಎಲೆಗಳ ಪುಡಿಯು ಸಿದ್ಧವಾಗಿದೆ. |
| 10:31 | ಈ ಪುಡಿಯನ್ನು ಗಾಳಿತೂರದ ಜಾಡಿಯಲ್ಲಿ ಶೇಖರಿಸಿಡಿ. |
| 10:33 | ಮಗುವಿಗೆ ತಿನ್ನಿಸುವ ಮುನ್ನ, ಕಾಲು ಟೀಚಮಚದಷ್ಟು ಈ ಪುಡಿಯನ್ನು ಆಹಾರದಲ್ಲಿ ಸೇರಿಸಬಹುದು. |
| 10:40 | ಇದು ಸುಮಾರು 5 ಮಿಲಿಗ್ರಾಂ ನಷ್ಟು ಕ್ಯಾಲ್ಶಿಯಂ ಅನ್ನು ಒದಗಿಸುತ್ತದೆ. |
| 10:44 | ಈ ಪುಡಿಯ 100 ಗ್ರಾಂ, ಸುಮಾರು 350 ಮಿಲಿಗ್ರಾಂ ನಷ್ಟು ಕ್ಯಾಲ್ಶಿಯಂ ಅನ್ನು ಒದಗಿಸುತ್ತದೆ. |
| 10:50 | ಯಾವಾಗಲೂ ಇವುಗಳನ್ನು ನೆನಪಿನಲ್ಲಿಡಿ: ಈ ಪುಡಿಗಳನ್ನು ತಯಾರಿಸಲು ಸ್ಥಳೀಯ ಮತ್ತು ಕಾಲೋಚಿತ ಎಣ್ಣೆಬೀಜಗಳು, ಕಾಳುಗಳು ಮತ್ತು ದ್ವಿದಳ ಧಾನ್ಯಗಳನ್ನು ಬಳಸಿ. |
| 10:58 | ಪ್ರತಿಯೊಂದು ಊಟದಲ್ಲಿ ಒಂದು ಬೇರೆಯ ಪುಡಿ ಇರಬೇಕು. |
| 11:01 | ಉದಾಹರಣೆಗೆ, ಒಂದು ಟೀಚಮಚದಷ್ಟು ಎಣ್ಣೆಬೀಜಗಳ ಪುಡಿಯನ್ನು ಬೇಯಿಸಿದ ಆಹಾರದಲ್ಲಿ ಸೇರಿಸಬಹುದು. |
| 11:08 | ಅಥವಾ, ಕಾಲು ಟೀಚಮಚದಷ್ಟು ಕರಿಬೇವಿನ ಎಲೆಗಳ ಪುಡಿ ಅಥವಾ ನುಗ್ಗೆ ಎಲೆಗಳ ಪುಡಿಯನ್ನು ಬೇಯಿಸಿದ ಆಹಾರದಲ್ಲಿ ಸೇರಿಸಬಹುದು. |
| 11:14 | ಅಥವಾ 2 ಟೀಚಮಚದಷ್ಟು ದ್ವಿದಳ ಧಾನ್ಯಗಳ ಪುಡಿಯನ್ನು ಸೇರಿಸಬಹುದು. ಇದನ್ನು ಆಹಾರದ ಜೊತೆಗೇ ಬೇಯಿಸಬೇಕು. |
| 11:21 | ಗಮನಿಸಿ, ಈ ಟ್ಯುಟೋರಿಯಲ್ ನಲ್ಲಿಯ ಪುಡಿಗಳನ್ನು |
| 11:26 | ನೆನೆಸುವುದು, ಹುರಿಯುವುದು ಮತ್ತು |
| 11:28 | ಮೊಳಕೆ ಬರಿಸುವುದು ಮುಂತಾದ ವಿಧಾನಗಳನ್ನು ಬಳಸಿ ತಯಾರಿಸಲಾಗಿದೆ. |
| 11:30 | ಈ ಎಲ್ಲ ವಿಧಾನಗಳು, ಆಹಾರದಿಂದ ಖನಿಜಾಂಶಗಳ ಹೀರುವಿಕೆಯನ್ನು ತಡೆಗಟ್ಟುವ 'ಫೈಟಿಕ್ ಆಸಿಡ್' ಅನ್ನು (Phytic acid) ಕಡಿಮೆ ಮಾಡುತ್ತವೆ. |
| 11:38 | ಮತ್ತು, ಆಹಾರದಿಂದ ಪೌಷ್ಟಿಕಾಂಶದ ಹೀರಿಕೊಳ್ಳುವಿಕೆಯನ್ನು ಸುಧಾರಿಸುತ್ತವೆ. |
| 11:42 | ಇಲ್ಲಿಗೆ, ನಾವು Nutritious powder recipes for 6 to 24 months old children ಎಂಬ ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
| 11:51 | ಈ ಟ್ಯುಟೋರಿಯಲ್ ನಲ್ಲಿ ನಾವು, ವಿವಿಧ ಪೌಷ್ಟಿಕಾಂಶದ ಪುಡಿಗಳ ಪಾಕವಿಧಾನಗಳನ್ನು ಕಲಿತಿದ್ದೇವೆ. ಇವುಗಳು ಹೀಗಿವೆ: |
| 11:57 | ಅಮೈಲೇಸ್ ಪುಡಿ,
ಕಾಳುಗಳ ಪುಡಿ, |
| 12:00 | ಎಣ್ಣೆಬೀಜಗಳ ಪುಡಿ, |
| 12:02 | ದ್ವಿದಳ ಧಾನ್ಯಗಳ ಪುಡಿ, |
| 12:04 | ಕರಿಬೇವಿನ ಎಲೆಗಳ ಪುಡಿ ಮತ್ತು |
| 12:06 | ನುಗ್ಗೆ ಎಲೆಗಳ ಪುಡಿ. |
| 12:08 | ಈ ಟ್ಯುಟೋರಿಯಲ್, Spoken Tutorial Project, IIT Bombay ಇವರ ಕೊಡುಗೆಯಾಗಿದೆ. |
| 12:14 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, NMEICT, MHRD ಮೂಲಕ ಭಾರತ ಸರಕಾರದ ಅನುದಾನವನ್ನು ಪಡೆದಿದೆ.
ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ. |
| 12:25 | ಈ ಟ್ಯುಟೋರಿಯಲ್, WHEELS Global Foundation ನ ಉದಾರ ಕೊಡುಗೆಯಿಂದ ಭಾಗಶಃ ಅನುದಾನವನ್ನು ಪಡೆದಿದ್ದು, |
| 12:32 | Maa aur Shishu Poshan (ಮಾ ಔರ್ ಶಿಶು ಪೋಷಣ್) ಪ್ರೊಜೆಕ್ಟ್ ನ ಒಂದು ಭಾಗವಾಗಿದೆ. |
| 12:36 | ಈ ಟ್ಯುಟೋರಿಯಲ್ ನ ಡೊಮೇನ್ ರಿವ್ಯೂ ಮಾಡಿದವರು, Dr. ರೂಪಲ್ ದಲಾಲ್, MD ಪೀಡಿಯಾಟ್ರಿಕ್ಸ್ ಮತ್ತು Ms. ದೀಪಾಲಿ ಫಾರ್ಗಡೆ, ನ್ಯೂಟ್ರಿಶನಿಸ್ಟ್. |
| 12:46 | ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಹಾಗೂ ಧ್ವನಿ ಶ್ರೀಮತಿ ನಯನಾ ಭಟ್ಟ್.
ಧನ್ಯವಾದಗಳು. |