Health-and-Nutrition/C2/Non-vegetarian-recipes-for-pregnant-women/Kannada
| |
|
| 00:01 | Non-vegetarian recipes for pregnant women ಎಂಬ ಸ್ಪೋಕನ್-ಟ್ಯುಟೋರಿಯಲ್ ಗೆ ಸ್ವಾಗತ. |
| 00:06 | ಈ ಟ್ಯುಟೋರಿಯಲ್ ನಲ್ಲಿ, ಗರ್ಭಿಣಿ ಮಹಿಳೆಯರಿಗಾಗಿ ಮಾಂಸಾಹಾರದ ಮಹತ್ವ ಮತ್ತು ಕೆಲವು ಮಾಂಸಾಹಾರಿ ಪದಾರ್ಥಗಳ ಬಗ್ಗೆ ಕಲಿಯುತ್ತೇವೆ. |
| 00:15 | ಮೊದಲು ವಿವಿಧ ಮಾಂಸಾಹಾರಿ ಆಹಾರಗಳ ಮಹತ್ವವನ್ನು ತಿಳಿಯೋಣ. |
| 00:20 | ಕೋಳಿ, ಮಾಂಸ, ಮೀನು, ಸೀಗಡಿ, ಆರ್ಗನ್-ಮೀಟ್ ಇವುಗಳು ಪ್ರೋಟೀನ್, ಸತು, ಕೋಲಿನ್, ಕಬ್ಬಿಣ ಮತ್ತು ಕ್ಯಾಲ್ಸಿಯಂ ಗಳಲ್ಲಿ ಸಮೃದ್ಧವಾಗಿವೆ. |
| 00:30 | ಭ್ರೂಣದ ಬೆಳವಣಿಗೆಗೆ ಈ ಪೋಷಕಾಂಶಗಳು ಅವಶ್ಯಕ. |
| 00:35 | ಇವು ಮಗುವಿನ ಮೆದುಳಿನ ಬೆಳವಣಿಗೆಗೆ ಮತ್ತು ತಾಯಿಯ ಆರೋಗ್ಯಕ್ಕಾಗಿ ಅವಶ್ಯವಾಗಿವೆ. |
| 00:41 | ಗರ್ಭಾವಸ್ಥೆಯಲ್ಲಿ ಈ ಪೋಷಕಾಂಶಗಳನ್ನು ಪಡೆಯಲು ಮಾಂಸಾಹಾರವನ್ನು ಸೇವಿಸಬಹುದು. |
| 00:46 | ಈಗ, ನಾವು ಕೆಲವು ಮಾಂಸಾಹಾರಿ ಪಾಕವಿಧಾನಗಳನ್ನು ನೋಡೋಣ. |
| 00:50 | “ಕೇರಳ ಶೈಲಿಯ ಮೊಟ್ಟೆಯ ಕರಿ” ಯೊಂದಿಗೆ ಪ್ರಾರಂಭಿಸೋಣ. |
| 00:55 | ಇದಕ್ಕಾಗಿ, ನಮಗೆ:
2 ಬೇಯಿಸಿದ ಮೊಟ್ಟೆಗಳು, 1 ಮಧ್ಯಮ ಗಾತ್ರದ ಹೆಚ್ಚಿದ ಈರುಳ್ಳಿ, |
| 01:02 | 1 ಹೆಚ್ಚಿದ ಟೊಮೆಟೊ,
2 ಬೆಳ್ಳುಳ್ಳಿಯ ಎಸಳು, |
| 01:06 | ½ ಇಂಚು ಶುಂಠಿ,
ಸ್ವಲ್ಪ ಕರಿಬೇವಿನ ಎಲೆಗಳು, |
| 01:11 | ¼ ಟೀಚಮಚ ಗರಂ ಮಸಾಲ ಪುಡಿ,
¼ ಟೀಚಮಚ ಮೆಣಸಿನ ಪುಡಿ, |
| 01:14 | ¼ ಟೀಚಮಚ ಕಾಶ್ಮೀರಿ ಕೆಂಪು ಮೆಣಸಿನ ಪುಡಿ, |
| 01:18 | ಅರಿಶಿನ ಪುಡಿ,
1 ಟೇಬಲ್-ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು, |
| 01:22 | 1 ಟೇಬಲ್-ಚಮಚ ಎಣ್ಣೆ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಇವುಗಳು ಬೇಕು. |
| 01:26 | ಮೊದಲು ನಾವು ಬೇಯಿಸಿದ ಮೊಟ್ಟೆಗಳನ್ನು ತಯಾರಿಸೋಣ. |
| 01:29 | ಒಂದು ಪಾತ್ರೆಯಲ್ಲಿ, ಅಂಗುಲ ಎತ್ತರ ನೀರಿನಲ್ಲಿ ಮೊಟ್ಟೆಗಳನ್ನು ಇರಿಸಿ ಪಾತ್ರೆಯನ್ನು ಮುಚ್ಚಿ. |
| 01:36 | ಹೆಚ್ಚಿನ ಶಾಖದಲ್ಲಿ ನೀರು ಕುದಿಯಲಿ. ಸರಿಯಾಗಿ ಬೇಯಿಸಿದ ಮೊಟ್ಟೆಗಳಿಗಾಗಿ, ಮಧ್ಯಮ ಶಾಖದಲ್ಲಿ 6 ರಿಂದ 7 ನಿಮಿಷ ಬೇಯಿಸಿ. |
| 01:44 | ಈಗ ಚಿಪ್ಪನ್ನು ತೆಗೆದು ಮೊಟ್ಟೆಗಳನ್ನು ಪಕ್ಕಕ್ಕೆ ಇರಿಸಿ. |
| 01:48 | ನಂತರ, ಬಾಣಲೆಯಲ್ಲಿ ಎಣ್ಣೆಯನ್ನು ಕಾಯಿಸಿ. ಶುಂಠಿ, ಬೆಳ್ಳುಳ್ಳಿ, ಈರುಳ್ಳಿ ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಿ. |
| 01:54 | ಈಗ ಮಧ್ಯಮ ಉರಿಯಲ್ಲಿ ಈರುಳ್ಳಿಯನ್ನು ಕಂದು ಬಣ್ಣ ಬರುವವರೆಗೆ ಹುರಿಯಿರಿ. |
| 01:59 | ಆಮೇಲೆ ಎಲ್ಲಾ ಒಣ ಮಸಾಲೆಗಳನ್ನು ಸೇರಿಸಿ ಸುವಾಸನೆ ಬರುವವರೆಗೆ ಮತ್ತೆ ಹುರಿಯಿರಿ. |
| 02:04 | ಈಗ ಹೆಚ್ಚಿಟ್ಟ ಟೊಮೆಟೊ ಮತ್ತು ಉಪ್ಪು ಸೇರಿಸಿ. |
| 02:07 | 1 ಕಪ್ ನೀರು ಸೇರಿಸಿ ಈ ಮಿಶ್ರಣವನ್ನು ಕುದಿಸಿ. |
| 02:12 | ಟೊಮ್ಯಾಟೊ ಕುದಿಯುವವರೆಗೆ ಸಣ್ಣ ಉರಿಯಲ್ಲಿ ಬೇಯಿಸಿ. ನಂತರ, ಬೇಯಿಸಿದ ಮೊಟ್ಟೆಗಳನ್ನು ಅದರಲ್ಲಿ ಸೇರಿಸಿ. |
| 02:18 | ಬಾಣಲೆಯನ್ನು ಮುಚ್ಚಿ. ಮೊಟ್ಟೆಗಳನ್ನು 10 ರಿಂದ 15 ನಿಮಿಷಗಳ ಕಾಲ ಬೇಯಿಸಿ. |
| 02:23 | ಒಲೆಯಿಂದ ಕೆಳಗಿಳಿಸಿ, ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ. |
| 02:26 | ಮೊಟ್ಟೆಗಳು ತುಂಡಾಗದಂತೆ ಗ್ರೇವಿಯನ್ನು ನಿಧಾನವಾಗಿ ಕಲಕಿ.
ಈಗ ತಿನ್ನಲು ಬಡಿಸಿ. |
| 02:32 | ಈಗ ಎರಡನೇ ಪಾಕವಿಧಾನ ‘ಚಿಕನ್ ಚೆಟ್ಟಿನಾಡ್’ ಅನ್ನು ನೋಡೋಣ. |
| 02:37 | ಇದಕ್ಕಾಗಿ, ನಮಗೆ:
100 ಗ್ರಾಂ ಚಿಕನ್-ಬ್ರೆಸ್ಟ್, |
| 02:42 | 1 ಟೇಬಲ್-ಚಮಚ ಎಣ್ಣೆ,
1 ಸಣ್ಣಗೆ ಹೆಚ್ಚಿದ ದೊಡ್ಡ ಈರುಳ್ಳಿ, |
| 02:46 | 1 ಮಧ್ಯಮ ಟೊಮೆಟೊ, |
| 02:48 | 1 ರಿಂದ 2 ಕಡ್ಡಿ ಕರಿಬೇವು ಮತ್ತು 1 ಪಲಾವ್ ಎಲೆ ಇವುಗಳು ಬೇಕು. |
| 02:52 | ಮ್ಯಾರಿನೇಷನ್ ಗಾಗಿ, ನಮಗೆ:
¼ ಟೀಚಮಚ ಅರಿಶಿನ ಪುಡಿ, |
| 02:56 | ¼ ಟೀಚಮಚ ಮೆಣಸಿನ ಪುಡಿ, |
| 02:58 | 1 ಟೇಬಲ್-ಚಮಚ ಶುಂಠಿ- ಬೆಳ್ಳುಳ್ಳಿ ಪೇಸ್ಟ್ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಇವುಗಳು ಬೇಕು. |
| 03:03 | ಗ್ರೇವಿಗಾಗಿ ನಮಗೆ:
½ ಟೇಬಲ್-ಚಮಚ ಕೊತ್ತಂಬರಿ ಬೀಜ, ½ ಟೀಚಮಚ ಸೋಂಪು ಕಾಳು, |
| 03:10 | 1 ಟೀಸ್ಪೂನ್ ಕಾಳುಮೆಣಸು,
1 ಟೀಸ್ಪೂನ್ ಕೆಂಪು ಮೆಣಸಿನ ಪುಡಿ, |
| 03:14 | 2 ಏಲಕ್ಕಿ, 2 ಲವಂಗ, |
| 03:17 | ½ ಇಂಚು ದಾಲ್ಚಿನ್ನಿ ಮತ್ತು
2 ಟೇಬಲ್-ಚಮಚ ಕಾಯಿತುರಿ ಇಷ್ಟು ಬೇಕಾಗುತ್ತದೆ. |
| 03:22 | ಚಿಕನ್ ಅನ್ನು ಮ್ಯಾರಿನೇಟ್ ಮಾಡಲು, ಒಂದು ಪಾತ್ರೆಯಲ್ಲಿ ಚಿಕನ್, ಅರಿಶಿನ, ಮೆಣಸಿನ ಪುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಉಪ್ಪು ಇವುಗಳನ್ನು ಬೆರೆಸಿ. |
| 03:31 | 30 ರಿಂದ 45 ನಿಮಿಷಗಳ ಕಾಲ ಹಾಗೇ ಇರಿಸಿ. |
| 03:34 | ಕಡಿಮೆ ಶಾಖದಲ್ಲಿ ಕೊತ್ತಂಬರಿ ಬೀಜಗಳನ್ನು ಹುರಿಯಿರಿ. |
| 03:38 | 2 - 3 ನಿಮಿಷಗಳ ನಂತರ ಉಳಿದ ಮಸಾಲೆಗಳನ್ನು ಸೇರಿಸಿ. |
| 03:42 | ಮಸಾಲೆಯ ಸುವಾಸನೆ ಬರುವವರೆಗೆ ಹುರಿದು ಅದನ್ನು ಬದಿಗೆ ಇರಿಸಿ. |
| 03:47 | ನಂತರ ಕಾಯಿತುರಿಯನ್ನು ಕೆಲವು ನಿಮಿಷ ಹುರಿಯಿರಿ. |
| 03:50 | ಹುರಿದ ಮಸಾಲೆ ಮತ್ತು ಕಾಯಿತುರಿಯನ್ನು ತಣ್ಣಗಾಗಲು ಬಿಡಿ. |
| 03:53 | 1 ಟೇಬಲ್-ಚಮಚ ನೀರನ್ನು ಸೇರಿಸಿ ಮಿಕ್ಸರ್ ನಲ್ಲಿ ಇವುಗಳನ್ನು ಪೇಸ್ಟ್ ಮಾಡಿ. |
| 04:00 | ಈ ಪೇಸ್ಟ್ ಅನ್ನು ಬದಿಯಲ್ಲಿರಿಸಿ. ಈಗ ಬ್ಲೆಂಡರ್ ನಲ್ಲಿ ಟೊಮ್ಯಾಟೊ ಪ್ಯೂರೀಯನ್ನು ತಯಾರಿಸಿ. |
| 04:06 | ಬಾಣಲೆಯಲ್ಲಿ ಎಣ್ಣೆಯನ್ನು ಕಾಯಿಸಿ. ಇದರಲ್ಲಿ ಈರುಳ್ಳಿಯನ್ನು ಸೇರಿಸಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. |
| 04:12 | ಇದರಲ್ಲಿ ಚಿಕನ್ ಸೇರಿಸಿ. ಮಧ್ಯಮ ಉರಿಯಲ್ಲಿ 4 ರಿಂದ 5 ನಿಮಿಷಗಳ ಕಾಲ ಮತ್ತೆ ಹುರಿಯಿರಿ. |
| 04:16 | ಟೊಮೆಟೊ ಪ್ಯೂರೀ, ಅರಿಶಿನ, ಉಪ್ಪು ಮತ್ತು ಮೆಣಸಿನ ಪುಡಿಯನ್ನು ಸೇರಿಸಿ. |
| 04:21 | ಚೆನ್ನಾಗಿ ಬೆರೆಸಿ, ಎಣ್ಣೆ ಬಿಡುವವರೆಗೆ ಬೇಯಿಸಿ.
ಇದರ ನಂತರ, ರುಬ್ಬಿದ ಪೇಸ್ಟ್ ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಿ. |
| 04:27 | ಈ ಮಿಶ್ರಣವನ್ನು 2 - 3 ನಿಮಿಷ ಬೇಯಿಸಿ. |
| 04:30 | ¼ ಕಪ್ ನೀರು ಸೇರಿಸಿ. ಚಿಕನ್ ಮೃದುವಾಗುವವರೆಗೆ ಮುಚ್ಚಳ ಹಾಕಿ ಬೇಯಿಸಿ. |
| 04:37 | ಗ್ರೇವಿ ಗಟ್ಟಿಯಾಗುವವರೆಗೆ ಅದನ್ನು ಕುದಿಸುತ್ತಿರಿ.
ಕರಿಬೇವಿನ ಎಲೆಗಳಿಂದ ಅಲಂಕರಿಸಿ ಬಡಿಸಿ. |
| 04:42 | ನೆನಪಿಡಿ: ಮಟನ್, ಆರ್ಗನ್ ಮೀಟ್, ಸೀಗಡಿ ಮತ್ತು ಮೀನು ಇವುಗಳಲ್ಲಿ ಯಾವುದೇ ಒಂದನ್ನು ಬಳಸಿ ಈ ಪದಾರ್ಥವನ್ನು ತಯಾರಿಸಬಹುದು. |
| 04:52 | ಈಗ, ‘ಚಿಕನ್ ಲಿವರ್ ಸುಕ್ಕಾ’ ತಯಾರಿಸುವ ವಿಧಾನವನ್ನು ನೋಡೋಣ. |
| 04:56 | ಇದಕ್ಕಾಗಿ ಬೇಕಾದ ಪದಾರ್ಥಗಳು:
100 ಗ್ರಾಂ ಚಿಕನ್ ಲಿವರ್, 1 ಸಣ್ಣಗೆ ಹೆಚ್ಚಿದ ಈರುಳ್ಳಿ, |
| 05:03 | 1 ಸಣ್ಣಗೆ ಹೆಚ್ಚಿದ ಟೊಮೆಟೊ,
6 ಬೆಳ್ಳುಳ್ಳಿ ಎಸಳು, |
| 05:07 | ¼ ಇಂಚು ಶುಂಠಿ,
2 ಟೇಬಲ್-ಚಮಚ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು, |
| 05:12 | 1 ಟೇಬಲ್-ಚಮಚ ಎಣ್ಣೆ,
ರುಚಿಗೆ ತಕ್ಕಷ್ಟು ಉಪ್ಪು ಮತ್ತು 1 ಟೇಬಲ್-ಚಮಚ ನಿಂಬೆ ರಸ. |
| 05:18 | ಬ್ಲೆಂಡರ್ ನಲ್ಲಿ ಈರುಳ್ಳಿ, ಟೊಮೆಟೊ, ಬೆಳ್ಳುಳ್ಳಿ, ಶುಂಠಿ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಒಟ್ಟಿಗೆ ಪೇಸ್ಟ್ ಮಾಡಿಕೊಳ್ಳಿ. |
| 05:25 | ಈ ಪೇಸ್ಟ್ ಅನ್ನು ಚಿಕನ್ ಲಿವರ್ ಮೇಲೆ ಹಚ್ಚಿ. ಇದನ್ನು 10 ರಿಂದ 15 ನಿಮಿಷಗಳ ಕಾಲ ಹಾಗೇ ಇರಿಸಿ. |
| 05:34 | ಬಾಣಲೆಯಲ್ಲಿ ಎಣ್ಣೆಯನ್ನು ಕಾಯಿಸಿ. ಅದರಲ್ಲಿ ಮ್ಯಾರಿನೇಷನ್ ಪೇಸ್ಟ್ ನೊಂದಿಗೆ ಲಿವರ್ ಅನ್ನು ಸೇರಿಸಿ ಚೆನ್ನಾಗಿ ಕಲಕಿ. |
| 05:40 | 1/4 ಕಪ್ ನೀರು ಸೇರಿಸಿ. ಕಡಿಮೆ ಉರಿಯಲ್ಲಿ 10 ನಿಮಿಷ ಬೇಯಿಸಿ. ನಂತರ, ಹೆಚ್ಚಿನ ಉರಿಯಲ್ಲಿ ಚೆನ್ನಾಗಿ ಬೇಯಿಸಿ. |
| 05:49 | ಚೆನ್ನಾಗಿ ಬೇಯಿಸಿ. ತಣ್ಣಗಾದ ನಂತರ ನಿಂಬೆ ರಸವನ್ನು ಸೇರಿಸಿ. ತೊಳೆದು ಹೆಚ್ಚಿದ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಬಡಿಸಿ. |
| 05:57 | ಈ ಪದಾರ್ಥಕ್ಕಾಗಿ ನೀವು ಮಟನ್ ಲಿವರ್ ಅನ್ನು ಸಹ ಬಳಸಬಹುದು. |
| 06:00 | ಮುಂದಿನ ಪಾಕವಿಧಾನ - ಪಾಲಕ ಹಾಗೂ ಮೀನು ಪಲ್ಯ. |
| 06:04 | ಇದಕ್ಕಾಗಿ, ನಮಗೆ:
ಮ್ಯಾಕೆರೆಲ್ ಮೀನಿನ 2 ಸಣ್ಣ ತುಂಡುಗಳು, |
| 06:08 | 1 ಕಪ್ ಪಾಲಕ ಸೊಪ್ಪು,
1 ಹೆಚ್ಚಿದ ಈರುಳ್ಳಿ, |
| 06:12 | 1 ಸಣ್ಣಗೆ ಹೆಚ್ಚಿದ ಟೊಮೆಟೊ,
1 ಟೀಚಮಚ ಜೀರಿಗೆ, |
| 06:16 | 2 - 3 ಬೆಳ್ಳುಳ್ಳಿ ಎಸಳು, |
| 06:18 | ¼ ಟೀಚಮಚ ಅರಿಶಿನ ಪುಡಿ,
1 ಟೀಚಮಚ ಕೆಂಪು ಮೆಣಸಿನ ಪುಡಿ, |
| 06:23 | 1 ಟೀಚಮಚ ಜೀರಿಗೆ ಪುಡಿ,
¼ ಟೀಚಮಚ ಕರಿಮೆಣಸು ಪುಡಿ, |
| 06:28 | ½ ಟೀಚಮಚ ಕೊತ್ತಂಬರಿ ಬೀಜದ ಪುಡಿ,
1 ಟೇಬಲ್-ಚಮಚ ಬಿಳಿ ಎಳ್ಳು, |
| 06:33 | 1 ಟೀಚಮಚ ಎಣ್ಣೆ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಇಷ್ಟು ಬೇಕು. |
| 06:37 | ಮೆಕೆರೆಲ್ ಅನ್ನು ತೊಳೆದು ಶುಚಿಗೊಳಿಸಿ ಎರಡು ಭಾಗಗಳಾಗಿ ಕತ್ತರಿಸಿ ಬದಿಯಲ್ಲಿಡಿ. |
| 06:43 | ಒಂದು ಬಾಣಲೆಯಲ್ಲಿ ಎಣ್ಣೆ ಕಾಯಿಸಿ. ಇದಕ್ಕೆ ಜೀರಿಗೆಯನ್ನು ಸೇರಿಸಿ. |
| 06:46 | ಅದು ಸಿಡಿದ ನಂತರ, ಪಾಲಕ ಸೊಪ್ಪನ್ನು ಸೇರಿಸಿ ಒಂದು ನಿಮಿಷ ಬೇಯಿಸಿ. |
| 06:51 | ಅದನ್ನು ತಣ್ಣಗಾಗಲು ಬಿಡಿ. |
| 06:53 | ನಂತರ, ಬೇಯಿಸಿದ ಪಾಲಕ, ಟೊಮೆಟೊ ಮತ್ತು ಎಳ್ಳು ಸೇರಿಸಿ ಗ್ರೈಂಡರ್ ನಲ್ಲಿ ಪ್ಯೂರೇ ಮಾಡಿ. |
| 06:59 | ಬಾಣಲೆಯಲ್ಲಿ ಎಣ್ಣೆಯನ್ನು ಕಾಯಿಸಿ, ಹೆಚ್ಚಿದ ಈರುಳ್ಳಿಯನ್ನು ಸೇರಿಸಿ. |
| 07:03 | ಈ ಈರುಳ್ಳಿ ಗುಲಾಬಿ ಬಣ್ಣಕ್ಕೆ ಬಂದಾಗ, ಬೆಳ್ಳುಳ್ಳಿಯನ್ನು ಸೇರಿಸಿ ಮತ್ತೆ ಹುರಿಯಿರಿ. |
| 07:09 | ಎಲ್ಲಾ ಒಣ ಮಸಾಲೆಗಳನ್ನು ಸೇರಿಸಿ ಸುವಾಸನೆ ಬರುವವವರೆಗೆ ಹುರಿಯಿರಿ. |
| 07:14 | ಈಗ ಪಾಲಕ ಪ್ಯೂರೇಯನ್ನು ಸೇರಿಸಿ ಕೆಲವು ನಿಮಿಷ ಬೇಯಿಸಿ. |
| 07:17 | ನಂತರ, ಮೀನಿನ ತುಂಡುಗಳನ್ನು ಸೇರಿಸಿ ಚೆನ್ನಾಗಿ ಬೇಯಿಸಿ. |
| 07:20 | ಈಗ, ¼ ಕಪ್ ನೀರು ಮತ್ತು ಉಪ್ಪು ಸೇರಿಸಿ. 5 ರಿಂದ 7 ನಿಮಿಷಗಳ ಕಾಲ ಮುಚ್ಚಳ ಹಾಕಿ ಬೇಯಿಸಿ. |
| 07:28 | ಮುಚ್ಚಳ ತೆಗೆದು 15 ನಿಮಿಷ ಮಧ್ಯಮ ಉರಿಯಲ್ಲಿ ಬೇಯಿಸಿ.
ಬಿಸಿಯಾಗಿ ಬಡಿಸಿ. |
| 07:35 | ನೆನಪಿಡಿ, ಸ್ಥಳೀಯವಾಗಿ ಲಭ್ಯವಿರುವ ಯಾವುದೇ ಮೀನನ್ನು ಇಲ್ಲಿ ಬಳಸಬಹುದು. |
| 07:40 | ಕೊನೆಯಲ್ಲಿ, ‘ಮೀಟ್-ಬಾಲ್ ಕರಿ’ ತಯಾರಿಸುವುದನ್ನು ನೋಡೋಣ. |
| 07:44 | ಇದನ್ನು ತಯಾರಿಸಲು, ನಮಗೆ:
100 ಗ್ರಾಂ ಕೊಚ್ಚಿದ ಮಾಂಸ, 1 ಸಣ್ಣಗೆ ಹೆಚ್ಚಿದ ಈರುಳ್ಳಿ, |
| 07:51 | 1 ಹೆಚ್ಚಿದ ಟೊಮೆಟೊ,
½ ಟೇಬಲ್-ಚಮಚ ಶುಂಠಿ ಪೇಸ್ಟ್, |
| 07:55 | 1 ಟೇಬಲ್-ಚಮಚ ಬೆಳ್ಳುಳ್ಳಿ ಪೇಸ್ಟ್,
1 ಟೇಬಲ್-ಚಮಚ ಗರಂ ಮಸಾಲ, |
| 07:59 | ¼ ಕಪ್ ಹೆಚ್ಚಿದ ಕೊತ್ತಂಬರಿ ಸೊಪ್ಪು ಮತ್ತು
ರುಚಿಗೆ ತಕ್ಕಷ್ಟು ಉಪ್ಪು ಬೇಕು. |
| 08:04 | ಗ್ರೇವಿಗಾಗಿ -
1 ಟೇಬಲ್-ಚಮಚ ಎಣ್ಣೆ, 1 ಸಣ್ಣಗೆ ಹೆಚ್ಚಿದ ಈರುಳ್ಳಿ, |
| 08:10 | 1 ಟೇಬಲ್-ಚಮಚ ಬೆಳ್ಳುಳ್ಳಿ ಪೇಸ್ಟ್,
½ ಟೇಬಲ್-ಚಮಚ ಶುಂಠಿ ಪೇಸ್ಟ್, |
| 08:14 | ½ ಟೀಚಮಚ ಜೀರಿಗೆ ಪುಡಿ, |
| 08:16 | ¼ ಟೀಚಮಚ ಅರಿಶಿನ ಪುಡಿ, |
| 08:19 | ಮೆಣಸಿನ ಪುಡಿ, ಗರಂ ಮಸಾಲ ಮತ್ತು ಕೊತ್ತಂಬರಿ ಬೀಜದ ಪುಡಿ, ಪ್ರತಿಯೊಂದು ಅರ್ಧ ಟೀಚಮಚ, |
| 08:25 | 1 ದೊಡ್ಡ ಹೆಚ್ಚಿದ ಟೊಮೆಟೊ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಇವುಗಳು ಬೇಕು. |
| 08:29 | ಈಗ ಮಸ್ಲಿನ್ ಬಟ್ಟೆಯನ್ನು ಬಳಸಿ, ಕೊಚ್ಚಿದ ಮಾಂಸವನ್ನು ತೊಳೆದು ಚೊಕ್ಕಟಗೊಳಿಸಿ. |
| 08:34 | ಒಂದು ಪಾತ್ರೆಯಲ್ಲಿ ಕೊಚ್ಚಿದ ಮಾಂಸ ಮತ್ತು ಹೆಚ್ಚಿದ ಈರುಳ್ಳಿಯನ್ನು ಬೆರೆಸಿ. |
| 08:38 | ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಗರಂ ಮಸಾಲ, ಕೊತ್ತಂಬರಿ ಸೊಪ್ಪು ಮತ್ತು ಉಪ್ಪು ಸೇರಿಸಿ. |
| 08:44 | ಈ ಮಿಶ್ರಣದಲ್ಲಿ ಒಂದೇ ಗಾತ್ರದ ಆರು ಉಂಡೆಗಳನ್ನು ರೂಪಿಸಿ. |
| 08:48 | ಬಾಣಲೆಯಲ್ಲಿ ಎಣ್ಣೆಯನ್ನು ಕಾಯಿಸಿ. ಉಳಿದ ಹೆಚ್ಚಿದ ಈರುಳ್ಳಿಯನ್ನು ಸೇರಿಸಿ. |
| 08:52 | ತಿಳಿ ಕಂದು ಬಣ್ಣ ಬರುವವರೆಗೆ ಇದನ್ನು ಹುರಿಯಿರಿ. |
| 08:56 | ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ, ಮತ್ತೆ ಕೆಲವು ನಿಮಿಷ ಹುರಿಯಿರಿ. |
| 08:59 | ಇದಕ್ಕೆ ಕೊತ್ತಂಬರಿ ಬೀಜದ ಪುಡಿ, ಜೀರಿಗೆ ಪುಡಿ, ಕೆಂಪು ಮೆಣಸಿನ ಪುಡಿ, ಗರಂ ಮಸಾಲ ಮತ್ತು ಅರಿಶಿನ ಎಲ್ಲವನ್ನೂ ಸೇರಿಸಿ. |
| 09:08 | ಈಗ, ಇದನ್ನು 2 ರಿಂದ 3 ನಿಮಿಷಗಳ ಕಾಲ ಹುರಿಯಿರಿ. |
| 09:11 | ಟೊಮ್ಯಾಟೊ ಸೇರಿಸಿ 2 - 3 ನಿಮಿಷ ಹುರಿಯಿರಿ.
ನಂತರ, ಈ ಮಸಾಲೆಯಲ್ಲಿ ½ ಕಪ್ ನೀರು ಮತ್ತು ಉಪ್ಪು ಸೇರಿಸಿ. |
| 09:18 | ಈ ಹಂತದಲ್ಲಿ, ನಿಧಾನವಾಗಿ ಮೀಟ್-ಬಾಲ್ ಗಳನ್ನು ಸೇರಿಸಿ, ಸಣ್ಣ ಉರಿಯಲ್ಲಿ ಬೇಯಿಸಿ. |
| 09:23 | 5 ನಿಮಿಷಗಳ ನಂತರ ನಿಧಾನವಾಗಿ ಕಲಕಿ ಮತ್ತು ಮೀಟ್-ಬಾಲ್ ಗಳು ಆಗುವವರೆಗೆ ಬೇಯಿಸಿ.
ಬಿಸಿಯಾಗಿ ಬಡಿಸಿ. |
| 09:30 | ಈ ಪಾಕವಿಧಾನವನ್ನು ತಯಾರಿಸಲು ನೀವು ಕೊಚ್ಚಿದ ಚಿಕನ್ ಅನ್ನು ಸಹ ಬಳಸಬಹುದು. |
| 09:34 | ಈ ಎಲ್ಲಾ ಪದಾರ್ಥಗಳು ಪ್ರೋಟೀನ್, ಒಮೆಗಾ 3 ಕೊಬ್ಬಿನಾಮ್ಲಗಳು, ವಿಟಾಮಿನ್ A, ವಿಟಾಮಿನ್ B12, ಫೋಲಿಕ್ ಆಸಿಡ್, ಕಬ್ಬಿಣ, ಸತು, ಮೆಗ್ನೀಸಿಯಮ್, |
| 09:45 | ಗಂಧಕ ಮತ್ತು ಕೋಲಿನ್ ಇವುಗಳಲ್ಲಿ ಸಮೃದ್ಧವಾಗಿವೆ ಎಂಬುದನ್ನು ನೆನಪಿನಲ್ಲಿಡಿ. |
| 09:52 | ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಹಾಗೂ ಧ್ವನಿ ಶ್ರೀಮತಿ ನಯನಾ ಭಟ್. ಧನ್ಯವಾದಗಳು. |