Health-and-Nutrition/C2/Complementary-food-for-6-to-24-month-old-babies/Kannada

From Script | Spoken-Tutorial
Jump to: navigation, search
Time
Narration
00:00 ೬ ರಿಂದ ೨೪ ತಿಂಗಳ ಶಿಶುಗಳಿಗೆ ಪೂರಕ ಆಹಾರ ಎಂಬ ಸ್ಪೊಕನ್ ಟ್ಯುಟೋರಿಯಲ್ ಗೆ ನಿಮಗೆಲ್ಲ ಸ್ವಾಗತ.
00:09 ಈ ಟ್ಯುಟೋರಿಯಲ್ ನಲ್ಲಿ ನಾವು, ಮನೆಯಲ್ಲಿಯೇ ಸಿದ್ಧಪಡಿಸಿದ ಪೌಷ್ಟಿಕ ಪೂರಕ ಆಹಾರಗಳ ಕುರಿತು ಕಲಿಯುವೆವು.
00:16 ನಾವು ಇದರ ಪ್ರಮಾಣ,
00:18 ವಿಧ,
00:20 ಮತ್ತು ಆವರ್ತನಗಳ ಕುರಿತು ಕಲಿಯುವೆವು.
00:23 ನಾವು ೬ ತಿಂಗಳ ಶಿಶುವಿನ ಪೂರಕ ಆಹಾರದ ಜೊತೆ ಪ್ರಾರಂಭಿಸೋಣ.
00:29 ನೆನಪಿಡಿ, ಪೂರಕ ಆಹಾರಗಳು ಶಿಶುವಿನ ೬ ನೇ ತಿಂಗಳಿಂದ ಪ್ರಾರಂಭವಾಗಬೇಕು.
00:38 ಶಿಶುವಿನ ಮೊದಲ ಆಹಾರವು, ಒಂದೇ ಆಹಾರದ ದಪ್ಪವಾದ ಪ್ಯೂರಿ ಅಥವಾ ಪೇಸ್ಟ್ ಆಗಿರಬೇಕು.
00:46 ಈ ಆಹಾರಕ್ಕಾಗಿ ಉಪಯೋಗಿಸಲ್ಪಡುವ ಕೆಲವು ಆಹಾರದ ಉದಾಹರಣೆಗಳನ್ನು ನೋಡೋಣ.
00:52 ಮೊಳಕೆಯೊಡೆದ, ಬೇಯಿಸಿದ ಧಾನ್ಯಗಳು ಮತ್ತು ಪ್ಯೂರಿ ಮಾಡಿದ ಕಡಲೆ ಕಾಳನ್ನು ಉಪಯೋಗಿಸಬಹುದು.
01:00 ಮೊಳಕೆಯೊಡೆದ, ಬೇಯಿಸಿದ ಧಾನ್ಯಗಳು ಮತ್ತು ಪ್ಯೂರಿ ಮಾಡಿದ ರಾಗಿಯನ್ನೂ ಕೂಡಾ ಉಪಯೋಗಿಸಬಹುದು.
01:07 ಚೂರಾದ, ನೆನೆಸಿದ, ಬೇಯಿಸಿದ ದ್ವಿದಳ ಧಾನ್ಯಗಳು ಮತ್ತು ಪ್ಯುರೀ ಮಾಡಿದ ಹಸಿರು ಕಡಲೆ ಬೀಜಗಳನ್ನೂ ಉಪಯೋಗಿಸಬಹುದು.
01:16 ಮಾಂಸಾಹಾರಗಳಾದ, ಬೇಯಿಸಿದ ಮತ್ತು ಪ್ಯುರೀ ಮಾಡಿದ ಮೊಟ್ಟೆ, ಕೋಳಿ ಮಾಂಸ, ಮೀನನ್ನು ಕೂಡಾ ಬಳಸಬಹುದು.
01:25 ಇವುಗಳಲ್ಲಿ ಯಾವುದಾದರೂ ಒಂಡನ್ನು ದಪ್ಪ ಪೇಸ್ಟ್ ಮಾಡಲು ಆರಿಸಿಕೊಳ್ಳಿ.
01:30 ಇಲ್ಲಿ, ಮೊಳಕೆಯೊಡೆದ, ಬೇಯಿಸಿದ ಮತ್ತು ಪ್ಯುರೀ ಮಾಡಿದ ಕೆಂಪು ಬಣ್ಣದ ಧಾನ್ಯವನ್ನು ಮೊದಲ ಆಹಾರವಾಗಿ ಆರಿಸಲಾಗಿದೆ.
01:38 ಅವಶ್ಯವಿದ್ದಲ್ಲಿ, ಸ್ವಲ್ಪ ಎದೆಹಾಲನ್ನು ಆಹಾರದ ಪೇಸ್ಟ್ ಮಾಡುವಾಗ ಬಳಸಿ.
01:45 ಎದೆಹಾಲು ಲಭ್ಯವಿರದಿದ್ದಲ್ಲಿ ಕಾಸಿ ಆರಿಸಿದ ನೀರನ್ನು ಮಾತ್ರ ಬಳಸಿ.
01:53 ಪ್ಯುರೀ ಅಥವಾ ಪೆಸ್ಟ್ ನ ಸ್ಥಿರತೆ ಅತೀ ಮುಖ್ಯವಾಗಿದೆ.
01:59 ಅದು ಚಮಚವನ್ನು ತಿರುವಿದಾಗ ಅದಕ್ಕೆ ಅಂಟಿಕೊಳ್ಳುವಷ್ಟು ದಪ್ಪ ಇರಬೇಕು.
02:06 ಶಿಶುವಿಗೆ ಮೊದಲ ದಿನ ಪ್ರಥಮಾಹಾರವನ್ನು ೧ ಚಮಚದಷ್ಟು ಮಾತ್ರ ತಿನ್ನಿಸಿ.
02:14 ಅದೇ ದಿನ ಇನ್ನೊಮ್ಮೆ ಆಹಾರದಸಮಯದಲ್ಲಿ ಇನ್ನೊಂದು ಚಮಚದಷ್ಟು ತಿನ್ನಿಸಿ.
02:21 ಮೊದಲ ದಿನ ಈ ಎರಡು ಸಲದ ಆಹಾರದೊಂದಿಗೆ ಸಾಕಷ್ಟು ಎದೆ ಹಾಲನ್ನೂ ಕೊಡಿ.
02:29 ದಯವಿಟ್ಟು ಗಮನಿಸಿ, ಈ ಟ್ಯುಟೊರಿಯಲ್ ನಲ್ಲಿ ಉಪಯೋಗಿಸಿದ ಟೇಬಲ್ ಸ್ಪೂನ್ ೧೫ ಗ್ರಾಮ್ ನಷ್ಟು ಆಹಾರವನ್ನು ಹೊಂದಿರುತ್ತದೆ.
02:37 ಎರಡನೇ ದಿನ, 2 ಚಮಚದಷ್ಟು ಅದೇ ಆಹಾರವನ್ನು ಪ್ರತಿ ಊಟಕ್ಕೆ ಕೊಡಿ.
02:44 ಆ ದಿನ ಅಂತಹ ಎರಡು ಊಟವನ್ನು ಎದೆಹಾಲಿನ ಜೊತೆ ಕೊಡಿ.
02:50 ಮೂರನೇ ದಿನ, ಪ್ರತಿ ಊಟಕ್ಕೆ ೩ ಚಮಚ ದಷ್ಟು ತಿನ್ನಿಸಿ.
02:57 ಆ ದಿನ ಅಂತಹ ಎರಡು ಊಟವನ್ನು ಎದೆಹಾಲಿನ ಜೊತೆ ಕೊಡಿ.
03:03 ೪ ನೇ ದಿನ ೨ ನೇ ಆಹಾರವನ್ನು ಕೊಡಲು ಸೂಕ್ತವಾಗಿದೆ.
03:09 ಆಹಾರಗಳ ಸರಣಿಯಿಂದ ಒಂದು ಹೊಸ ಪೌಷ್ಟಿಕ ಘನ ಆಹಾರವನ್ನು ಆರಿಸಿಕೊಳ್ಳಿ.
03:15 ಈ ಆಹಾರ ಸರಣಿಗಳ ಬಗ್ಗೆ ಇದೇ ಸರಣಿಯ ಇನ್ನೊಂದು ಟ್ಯುಟೋರಿಯಲ್ ನಲ್ಲಿ ವಿವರಿಸಲಾಗಿದೆ.
03:22 ಇಲ್ಲಿ ಮೊಳೆಕೆಯೊಡೆದ, ಬೇಯಿಸಿದ ಮತ್ತು ಪ್ಯೂರೀ ಮಾಡಿದ ರಾಗಿಯನ್ನು ೨ನೇ ಆಹಾರವಾಗಿ ಸ್ವೀಕರಿಸಲಾಗಿದೆ.
03:30 ಎದೆಹಾಲಿನಿಂದ ಅಥವಾ ಕಾಸಿ ಆರಿಸಿದ ನೀರಿನಿಂದ ಇದರ ದಪ್ಪನೆಯ ಪೇಸ್ಟ್ ಮಾಡಿ.
03:38 ೨ ನೇ ಆಹಾರವನ್ನು ಪ್ರತಿ ಊಟಕ್ಕೆ ೧ ಚಮಚದಿಂದ ಪ್ರಾರಂಭಿಸಿ.
03:44 ಇದನ್ನು ೩ ಚಮಚ ಮೊದಲನೇ ಆಹರದ ಜೊತೆ ಕೊಡಿ.
03:50 ಪ್ರತಿ ಊಟಕ್ಕೆ ಒಟ್ಟು ೪ ಚಮಚ ಆಹಾರವನ್ನು ನೀಡಬೇಕು.
03:57 ನಾಲ್ಕನೇ ದಿನ ಎದೆ ಹಾಲಿನ ಜೊತೆ ಅಂತಹ ೨ ಊಟಗಳನ್ನು ನೀಡಿ.
04:03 ೫ ನೇ ದಿನ, ೨ನೇ ಪೇಸ್ಟ್ ಅನ್ನು ೨ ಚಮಚಗಳಿಗೆ ಹೆಚ್ಚಿಸಿ.
04:11 ಇದನ್ನು ೨ ಚಮಚ ಮೊದಲನೇ ಆಹಾರದೊಂದಿಗೆ ಪ್ರತಿ ಊಟಕ್ಕೆ ನೀಡಿ.
04:18 ೫ನೇ ದಿನ ಎದೆ ಹಾಲಿನೊಂದಿಗೆ ಅಂತಹ ೨ ಊಟಗಳನ್ನು ನೀಡಿ.
04:24 ೬ನೇ ದಿನ ಎರಡನೇ ಪೇಸ್ಟ ನ ಪ್ರಮಾಣವನ್ನು ಪ್ರತಿ ಊಟಕ್ಕೆ ೩ ಚಮಚಕ್ಕೆ ಹೆಚ್ಚಿಸಿ.
04:32 ಇದನ್ನು ೧ ಚಮಚ ಮೊದಲನೇ ಪೇಸ್ಟ್ ನೊಂದಿಗೆ ಪ್ರತಿ ಊಟಕ್ಕೆ ನೀಡಿ.
04:39 ೬ನೇ ದಿನ ಎದೆಹಾಲಿನೊಂದಿಗೆ ಅಂತಹ ೨ ಊಟಗಳನ್ನು ನೀಡಿ.
04:45 ೭ನೇ ದಿನ, ೩ನೇ ಪೌಷ್ಟಿಕ ಘನ ಆಹಾರದ ಪೇಸ್ಟ್ ಅನ್ನು ನೀಡಲು ಪ್ರಾರಂಭಿಸಿ.
04:53 ಈ ಚಿತ್ರದಲ್ಲಿ ಮೊಟ್ಟೆಯನ್ನು ೩ ನೇ ಆಹಾರದ ಪೇಸ್ಟ್ ಮಾಡಲು ಬಳಸಲಾಗಿದೆ.
04:59 ಪ್ರತಿ ಊಟಕ್ಕೆ ೩ನೇ ಆಹಾರದ ಪೇಸ್ಟ್ ಅನ್ನು ೧ ಚಮಚದೊಂದಿಗೆ ಆರಂಭಿಸಿ.
05:05 ಇದನ್ನು ೩ ಚಮಚ ೧ನೇ ಮತ್ತು ೨ನೇ ಆಹಾರದ ಪೇಸ್ಟ್ ನೊಂದಿಗೆ ಕೊಡಿ.
05:12 ಪ್ರತಿ ಊಟಕ್ಕೆ ೪ ಚಮಚ ಆಹಾರದ ಪೇಸ್ಟ್ ಅನ್ನು ನೀಡಬೇಕು.
05:19 ೭ನೇ ದಿನ ಎದೆಹಾಲಿನೊಂದಿಗೆ ಅಂತಹ ೨ ಊಟಗಳನ್ನು ನೀಡಿ.
05:25 ನಿಧಾನವಾಗಿ ೩ ನೇ ಆಹಾರದ ಪೇಸ್ಟ್ ಅನ್ನು, ಪ್ರತಿ ಊಟಕ್ಕೆ ೩ ಚಮಚಕ್ಕೆ ಹೆಚ್ಚಿಸಿ.
05:33 ಯಾವಾಗಲೂ ಮೊದಲು ನೀಡಿದ ಪೇಸ್ಟ್ ನೊಂದಿಗೆ ಕೊಡಿ.
05:38 ಪ್ರತಿ ಊಟಕ್ಕೆ ೪ ಚಮಚದಷ್ಟು ಆಹಾರದ ಪೇಸ್ಟ್ ಅನ್ನು ನೀಡಿ.
05:45 ೬ ತಿಂಗಳ ಮಗುವಿಗೆ ದಿನಕ್ಕೆ ಅಂತಹ ೨ ಊಟವನ್ನು ನೀಡಿ.
05:53 ಅಂತೆಯೇ, ೪ನೇ ಘನ ಪೌಷ್ಟಿಕ ಆಹಾರದ ಪೇಸ್ಟ್ ಅನ್ನು ೧೦ನೇ ದಿನ ನೀಡಿ.
06:00 ಈ ಚಿತ್ರದಲ್ಲಿ, ಮೀನನ್ನು ೪ನೇ ಆಹಾರದ ಪೇಸ್ಟ್ ಗಾಗಿ ಬಳಸಲಾಗಿದೆ.
06:07 ನಂತರ, ೧೩ ನೇ ದಿನ ೫ ನೇ ಹೊಸ ಆಹಾರದ ಪೇಸ್ಟ್, ಹೀಗೇ....
06:14 ೪ ದಿನಗಳಿಗೊಮ್ಮೆ ಹೊಸ ಆಹಾರವನ್ನು ಸೇರಿಸುತ್ತಾ ಹೋಗಿ .
06:19 ಮಗುವು ಆಹಾರ ಸಮೂಹದಲ್ಲಿನ ಹಲವಾರು ಪ್ರಕಾರಗಳನ್ನು ತಿನ್ನುವವರೆಗೆ ಇದನ್ನು ಮುಂದುವರೆಸಿ.
06:26 ಹೊಸ ಧಾನ್ಯಗಳು ಮತ್ತು ದ್ವಿದಳಧಾನ್ಯಗಳನ್ನು ಪ್ರಾರಂಭಿಸಿದ ನಂತರ, ಯಾವಾಗಲೂ ಅವುಗಳನ್ನು ಮಗುವಿನ ಆಹಾರದೊಂದಿಗೆ ಸೇರಿಸಿ.
06:34 ೬ ತಿಂಗಳು ತುಂಬಿದ ನಂತರ ಆದಷ್ಟು ಬೇಗ ಇಂತಹ ಮಿಶ್ರಣಗಳನ್ನು ನೀಡಿ.
06:41 ಅವುಗಳು ಮಗುವಿಗೆ ಸಂಪೂರ್ಣ ಪ್ರೋಟೀನ್ ಗಳನ್ನು ನೀಡುತ್ತವೆ.
06:46 ಆಹಾರದಲ್ಲಿ ನಾನಾ ಪೋಷಕಾಂಶಗಳನ್ನು ಪಡೆಯುವಂತೆ ಬೇರೆ ಬೇರೆ ವಿಧಾನಗಳನ್ನು ಅನುಸರಿಸಿ.
06:53 ಉದಾಹರಣೆಗೆ ಹುರಿಯುವುದು, ನೆನೆಸಿರುವುದು, ಮೊಳಕೆಯೊಡೆದಿರುವುದು ಮತ್ತು ಬೇಯಿಸಿರುವುದು.
07:02 ಈ ವಿಧಾನಗಳನ್ನು ಇದೇ ಸರಣಿಯ ಬೇರೆ ಟ್ಯುಟೋರಿಯಲ್ ನಲ್ಲಿ ವಿವರಿಸಲಾಗಿದೆ.
07:10 ಮನೆಯಲ್ಲಿಯೇ ಬೇಯಿಸಿ ಶುದ್ಧವಾಗಿ ತಯಾರಿಸಿದ ಆಹಾರವು ಮಗುವಿಗೆ ಅತ್ಯುತ್ತಮವಾಗಿದೆ.
07:17 ಶಿಶುವಿನ ಆಹಾರವನ್ನು ಸಂರಕ್ಷಿಸಬೇಕಾದರೆ, ದಯವಿಟ್ಟು ಸುರಕ್ಷೆಯ ನಿಯಮಾವಳಿಗಳನ್ನು ಅನುಸರಿಸಿ.
07:25 ಶಿಶುವಿನ ಆಹಾರವನ್ನು ಸಿದ್ಧಪಡಿಸುವ ಮತ್ತು ಸಂರಕ್ಷಿಸುವ ವಿಧಾನವನ್ನು ಇನ್ನೊಂದು ಟ್ಯುಟೋರಿಯಲ್ ನಲ್ಲಿ ವಿವರಿಸಲಾಗಿದೆ.
07:32 ಶಿಶುವಿಗೆ ಸುರಕ್ಷಿತವಾಗಿ ಆಹಾರವನ್ನು ಕೊಡುವ ವಿಧಾನವನ್ನೂ ಅದೇ ಟ್ಯುಟೋರಿಯಲ್ ನಲ್ಲಿ ವಿವರಿಸಲಾಗಿದೆ.
07:39 ಅಧಿಕ ವಿವರಣೆಗಳಿಗಾಗಿ ನಮ್ಮ ಜಾಲಪುಟವನ್ನು ನೋಡಿ.
07:44 ನಾವೀಗ, ೭ ತಿಂಗಳ ಮಗುವಿಗೆ ನೀಡುವ ಪೂರಕ ಆಹಾರದ ಕುರಿತು ಚರ್ಚಿಸೋಣ.
07:51 ಈ ವಯಸ್ಸಿನಲ್ಲಿ, ಕ್ರಮೇಣ ಆಹಾರದ ಪ್ರಮಾಣವನ್ನು ಪ್ರತಿ ಊಟಕ್ಕೆ ಅರ್ಧ ಕಪ್ ಗೆ ಹೆಚ್ಚಿಸಿ.
07:58 ಅಂತೆಯೇ ಊಟದ ಸಂಖ್ಯೆಯನ್ನು ಎದೆಹಾಲಿನ ಜೊತೆಗೆ ೩ ಕ್ಕೆ ಏರಿಸಿ.
08:06 ದಯವಿಟ್ಟು ಗಮನಿಸಿ, ಈ ಟ್ಯುಟೋರಿಯಲ್ ನಲ್ಲಿ ಉಪಯೋಗಿಸಿರುವ ಕಪ್ 250 ml ಪ್ರಮಾಣದ್ದಾಗಿದೆ.
08:14 ಈ ವಯಸ್ಸಿನಲ್ಲಿ, ಆಹಾರದ ಸ್ಥಿರತೆಯನ್ನೂ ಬದಲಾಯಿಸಬೇಕು.
08:21 ೭ ತಿಂಗಳ ಶಿಶುವಿಗೆ ಕೊಡುವ ಆಹಾರ ಹಿಸುಕಿದ ಅಥವಾ ಮುದ್ದೆಯಾದ ಆಹಾರವಾಗಿರಬೇಕು.
08:28 ಅದಕ್ಕೆ ಉದಾಹರಣೆಯೆಂದರೆ ಹಲಸಿನ ಬೀಜದ ಗಂಜಿ.
08:33 ಮಗುವಿಗೆ ೮ ತಿಂಗಳಾದಮೇಲೆ, ಪ್ರತಿದಿನ ಊಟದ ಸಂಖ್ಯೆಯನ್ನು ೪ ಕ್ಕೆ ಏರಿಸಿ.
08:41 ಪ್ರತಿ ಊಟಕ್ಕೆ ಅರ್ಧ ಕಪ್ ಆಹಾರವನ್ನು ಕೊಡುವದನ್ನು ಮುಂದುವರೆಸಿ.
08:46 ಎದೆಹಾಲು ಉಣಿಸುವದನ್ನು ಮುಂದುವರೆಸಿ.
08:49 ಈ ವಯಸ್ಸಿನಲ್ಲಿ, ಪ್ಯೂರಿ ಮತ್ತು ಪೇಸ್ಟ್ ಗಳನ್ನು ಕೊಡುವದನ್ನು ನಿಲ್ಲಿಸಿ.
08:56 ದಪ್ಪವಾದ ಪೌಷ್ಟಿಕ ಆಹಾರ ಕೊಡುವದನ್ನು ಪ್ರಾರಂಭಿಸಿ.
09:01 ಅಂತಹ ಆಹಾರದ ಒಂದು ಉದಾಹರಣೆಯೆಂದರೆ ಮೊಳಕೆಯೊಡೆದ ಮತ್ತು ಬೇಯಿಸಿದ ಕಡಲೆ.
09:08 ಮಗುವಿಗೆ ೯ ರಿಂದ ೧೧ ತಿಂಗಳು ಆಗುತ್ತಿದ್ದಂತೆ, ಮೃದುವಾದ ಫಿಂಗರ್ ಫೂಡ್ ಅನ್ನು ಆರಂಭಿಸಿ.
09:15 ಫಿಂಗರ್ ಫೂಡ್ ಅಂದರೆ ನೇರವಾಗಿ ಕೈಯಿಂದ ತಿನ್ನುವ ಆಹಾರಗಳು.
09:22 ಬೇಯಿಸಿದ ಮೊಟ್ಟೆ ಅಥವಾ ಬೇಯಿಸಿದ ತರಕಾರಿಯ ತುಂಡುಗಳು ಇದರ ಉದಾಹರಣೆಗಳಾಗಿವೆ.
09:29 ಈ ವಯಸ್ಸಿನಲ್ಲಿ, ಪ್ರತಿದಿನದ ಊಟದ ಸಂಖ್ಯೆಯನ್ನು ೫ ಕ್ಕೆ ಏರಿಸಿ.
09:35 ಪ್ರತಿ ಊಟಕ್ಕೆ ಅರ್ಧ ಕಪ್ ಆಹಾರವನ್ನು ಮುಂದುವರೆಸಿ.
09:41 ಎದೆಹಾಲನ್ನೂ ಮುಂದುವರೆಸಿ.
09:44 ೧೨ ತಿಂಗಳು ಕಳೆದ ನಂತರ, ಮಗುವು ಕುಟುಂಬದ ಊಟವನ್ನು ಸ್ವಲ್ಪ ತಿನ್ನಲು ಪ್ರಾರಂಭಿಸಬಹುದು.
09:52 ಈ ವಯಸ್ಸಿನಲ್ಲಿ, ಪ್ರತಿ ಊಟವನ್ನು ೧ ಕಪ್ ಗೆ ಏರಿಸಿ.
09:59 ಎದೆಹಾಲಿನ ಜೊತೆಗೆ ಪ್ರತಿದಿನ ೫ ಸಲ ಆಹಾರವನ್ನು ಕೊಡಿ.
10:05 ೫ ಸಲದ ಆಹಾರದಲ್ಲಿ ೩ ಮುಖ್ಯ ಆಹಾರ ಮತ್ತು ೨ ಅಲ್ಪಾಹಾರವಾಗಿ ಕೊಡಬಹುದು.
10:12 ಅಲ್ಪಾಹಾರಕ್ಕಾಗಿ, ೧ ಕಪ್ ಪೌಷ್ಟಿಕ ಆಹಾರವನ್ನು ಕೊಡಬೇಕು.
10:19 ಹಣ್ಣು, ಮೊಸರು, ಬೇಯಿಸಿದ ಕೊಟೇಜ್ ಚೀಸ್ ಮತ್ತು ಬೇಯಿಸಿದ ತರಕಾರಿಗಳು ಅಲ್ಪಾಹಾರದ ಉದಾಹರಣೆಗಳು.
10:28 ಅಲ್ಪಾಹಾರವನ್ನು ಬೇಯಿಸುವಾಗ ಪೌಷ್ಟಿಕ ಕಾಯಿಗಳು, ಬೀಜಗಳು ಮತ್ತು ಎಲೆಗಳ ಹಿಟ್ಟನ್ನು ಸೇರಿಸಬೇಕು.
10:36 ಪೌಷ್ಟಿಕ ಹಿಟ್ಟಿನ ಪಾಕವಿಧಾನವನ್ನು ಇದೇ ಸರಣಿಯ ಇನ್ನೊಂದು ಟ್ಯುಟೋರಿಯಲ್ ನಲ್ಲಿ ವಿವರಿಸಲಾಗಿದೆ.
10:44 ಕನಿಷ್ಠಪಕ್ಷ ೨ ವರ್ಷಗಳ ವರೆಗೆ ಎದೆ ಹಾಲು ಕುಡಿಸಲು ನೆನಪಿಡಿ.
10:51 ಮಗುವಿಗೆ ಒಂದು ವರ್ಷ ತುಂಬುವವರೆಗೆ, ಸೀಗಡಿ ಮತ್ತು ಚಿಪ್ಪು ಮೀನಗಳನ್ನು ತಿನ್ನಿಸಬೇಡಿ.
10:58 ಮತ್ತು, ಮಗುವಿಗೆ ಸಿದ್ಧಪಡಿಸುವ ಆಹಾರದಲ್ಲಿ ಉಪ್ಪನ್ನು ಸೇರಿಸಬೇಡಿ.
11:05 ೨ ವರ್ಷಗಳ ವರೆಗೆ ಮಗುವಿಗೆ ಯಾವುದೇ ರೀತಿಯ ಸಕ್ಕರೆಯನ್ನು ಕೊಡಬೇಡಿ.
11:13 ಅಂದರೆ ಬೆಲ್ಲ, ಜೇನುತುಪ್ಪ ಮತ್ತು ಹಣ್ಣಿನ ಜ್ಯೂಸ್ ಗಳು ಕೂಡಾ.
11:19 ಮತ್ತು ಚಹಾ, ಕೊಫೀ, ಪ್ಯಾಕ್ ಮಾಡಿದ ಆಹಾರ ಮತ್ತು ಪಾನೀಯಗಳನ್ನು ಕೂಡಾ.
11:25 ಮತ್ತು ಹೊರಗಿನ ಆಹಾರಗಳನ್ನು ಕೂಡಾ ಕೊಡಬೇಡಿ.
11:29 ಇವಿಷ್ಟು ಮಗುವಿನ ವಯಸ್ಸಿಗೆ ಅನುಗುಣವಾಗಿ ಪೂರಕ ಆಹಾರಗಳಾಗಿವೆ.
11:36 ಮಗುವಿನ ವಯಸ್ಸಿಗೆ ಅನುಗುಣವಾಗಿ ಇನ್ನೂ ಅನೇಕ ಆಹಾರದ ನಿಯಮಾವಳಿಗಳಿವೆ.
11:43 ಇವುಗಳ ಕುರಿತು ವಿವರವಾಗಿ ಇದೇ ಸರಣಿಯ ಇನ್ನೊಂದು ಟ್ಯುಟೋರಿಯಲ್ ನಲ್ಲಿ ಕಲಿಯುತ್ತೇವೆ.
11:49 ನಾವು ಪಾಠದ ಕೊನೆಯಲ್ಲಿದ್ದೇವೆ.
11:53 ಅನುವಾದ ಮತ್ತು ಧ್ವನಿ ಶ್ರೀಮತಿ ನಯನಾ ಭಟ್ಟ.

ಧನ್ಯವಾದಗಳು.

Contributors and Content Editors

Debosmita, Nayana