Git/C2/Overview-and-Installation-of-Git/Kannada
From Script | Spoken-Tutorial
|
|
00:01 | Overview and Installation of Git ಎಂಬ 'ಸ್ಪೋಕನ್ ಟ್ಯುಟೋರಿಯಲ್' ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ, ನಾವು:
|
00:17 | ಈ ಟ್ಯುಟೋರಿಯಲ್ ಗಾಗಿ, ನಿಮಗೆ ಇಂಟರ್ನೆಟ್ ನ ಸಂಪರ್ಕ ಬೇಕಾಗುವುದು. |
00:22 | ನೀವು 'Ubuntu Linux' ಅಥವಾ 'Windows' ಆಪರೇಟಿಂಗ್ ಸಿಸ್ಟಂಅನ್ನು ಸಹ ಹೊಂದಿರಬೇಕು. |
00:28 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ಇಲ್ಲಿ ಹೇಳಿದ ಯಾವುದಾದರೊಂದು ಆಪರೇಟಿಂಗ್ ಸಿಸ್ಟಂಅನ್ನು ನೀವು ಚೆನ್ನಾಗಿ ತಿಳಿದಿರಬೇಕು. |
00:36 | ಮೊದಲು, 'VCS' ಅರ್ಥಾತ್ 'ವರ್ಷನ್ ಕಂಟ್ರೋಲ್ ಸಿಸ್ಟಂ' ಎಂದರೇನು ಎಂಬುದನ್ನು ನಾವು ತಿಳಿಯೋಣ. |
00:39 | 'ವರ್ಷನ್ ಕಂಟ್ರೋಲ್ ಸಿಸ್ಟಂ', ಒಂದು ಬ್ಯಾಕ್-ಅಪ್ ಸಿಸ್ಟಂನಂತೆ ಇರುತ್ತದೆ. |
00:44 | ಇದು ಡಾಕ್ಯೂಮೆಂಟ್ ಗಳು, ಕಂಪ್ಯೂಟರ್ ಪ್ರೊಗ್ರಾಂಗಳು ಮತ್ತು ವೆಬ್ಸೈಟ್ ಗಳಲ್ಲಿಯ ಬದಲಾವಣೆಗಳನ್ನು ನಿರ್ವಹಿಸುತ್ತದೆ ಹಾಗೂ |
00:51 | ನೀವು ಕಾಲಕಾಲಕ್ಕೆ ಮಾಡಿದ ಕೆಲಸದ ದಾಖಲೆಯನ್ನು ಒದಗಿಸುತ್ತದೆ. |
00:55 | ಇದು 'VCS', 'ರಿವಿಶನ್ ಕಂಟ್ರೋಲ್' (revision control), 'ಸೋರ್ಸ್ ಕಂಟ್ರೋಲ್' ಮತ್ತು 'ಸೋರ್ಸ್ ಕೋಡ್ ಮ್ಯಾನೇಜ್ಮೆಂಟ್ (SCM)' ಎಂದು ಸಹ ಪರಿಚಿತವಾಗಿದೆ. |
01:03 | 'RCS', 'Subversion' ಹಾಗೂ 'Bazaar' ಇವುಗಳು 'VCS' ನ ಕೆಲವು ಉದಾಹರಣೆಗಳಾಗಿವೆ. |
01:11 | ಈಗ ನಾವು 'Git' ನೊಂದಿಗೆ ಪ್ರಾರಂಭಿಸೋಣ. |
01:13 | ಗಿಟ್: * ಇದು ಒಂದು 'ಡಿಸ್ಟ್ರಿಬ್ಯೂಟೆಡ್ ವರ್ಷನ್ ಕಂಟ್ರೋಲ್ ಸಾಫ್ಟ್ವೇರ್' (distributed version control software) ಆಗಿದೆ. |
01:16 | * ಉಚಿತ ಹಾಗೂ 'ಓಪನ್ ಸೋರ್ಸ್ ಸಾಫ್ಟ್ವೇರ್' ಆಗಿದೆ. |
01:19 | * ಒಂದು ಫೈಲ್ ನಲ್ಲಿ ಅಥವಾ ಫೈಲ್ ಗಳ ಸಮೂಹದಲ್ಲಿ ಮಾಡಲಾದ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಳ್ಳುತ್ತದೆ. |
01:24 | * ಡೆವಲಪ್ ಮಾಡುವವರನ್ನು ಜೊತೆಗೂಡಿ ಕೆಲಸ ಮಾಡಲು ಅನುಮತಿಸುತ್ತದೆ. |
01:28 | * ಪ್ರೊಜೆಕ್ಟ್ ಗಳ ಆವೃತ್ತಿಗಳನ್ನು ನಿರ್ವಹಿಸುತ್ತದೆ ಹಾಗೂ ಸ್ಟೋರ್ ಮಾಡುತ್ತದೆ. |
01:32 | * ಪ್ರೊಜೆಕ್ಟ್ ನ ಪ್ರಗತಿಯನ್ನು ಕಂಡುಹಿಡಿಯಲು ಸಹಾಯಮಾಡುತ್ತದೆ. |
01:37 | 'Git' ನ ಪ್ರಮುಖ ಲಕ್ಷಣಗಳು ಈ ಕೆಳಗಿನಂತಿವೆ. |
01:42 | ನಾವು ಹಿಂದಕ್ಕೆ ಹೋಗಿ ನಮ್ಮ ಕೆಲಸದ ಮೊದಲಿನ ಆವೃತ್ತಿಗಳನ್ನು ಮರಳಿ ಪಡೆಯಬಹುದು. |
01:47 | ನಾವು ಎಲ್ಲ ಬದಲಾವಣೆಗಳ ಸಂಪೂರ್ಣ ಇತಿಹಾಸವನ್ನು ನೋಡಬಹುದು. |
01:52 | 'Git' ನಿಂದ ಕೊಡಲ್ಪಟ್ಟ ಸೂಚನೆಗಳನ್ನು ಬಳಸಿ ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸಬಹುದು. |
01:58 | ಒಂದುವೇಳೆ ಡೇಟಾ ನಷ್ಟವಾದರೆ, ಯಾವುದೇ 'ಕ್ಲೈಂಟ್ ರಿಪಾಸಿಟರಿ' ಗಳಿಂದ (client repositories) ಅದನ್ನು ಮರಳಿ ಪಡೆಯಬಹುದು. |
02:05 | 'Git' ಅನ್ನು: * ಪ್ರೊಗ್ರಾಂ ಮಾಡುವವರು, ವೆಬ್-ಡೆವಲಪ್ ಮಾಡುವವರು, ಪ್ರೊಜೆಕ್ಟ್ ಮೆನೇಜರ್ ಗಳು, ಬರಹಗಾರರು ಮತ್ತು ಇನ್ನೂ ಹಲವರು ಬಳಸಬಹುದು. |
02:14 | * ಟೆಕ್ಸ್ಟ್-ಫೈಲ್ ಗಳು, ಶೀಟ್ ಗಳು, ಡಿಸೈನ್ ಫೈಲ್ ಗಳು, ಡ್ರಾಯಿಂಗ್ ಗಳು ಇತ್ಯಾದಿಗಳೊಂದಿಗೆ ಕೆಲಸ ಮಾಡುವವರು ಆವೃತ್ತಿಗಳ ಜಾಡನ್ನು ಕಂಡುಹಿಡಿಯಲು ಬಳಸಬಹುದು. |
02:22 | * ಯಾವುದೇ ಒಂದು ಚಟುವಟಿಕೆ ಅಥವಾ ಪ್ರೊಜೆಕ್ಟ್ ನಲ್ಲಿ ಜೊತೆಗೂಡಿ ಕೆಲಸ ಮಾಡುವವರು ಬಳಸಬಹುದು. |
02:28 | ಈಗ, 'Git' ಹೇಗೆ ಕೆಲಸಮಾಡುವುದೆಂದು ನಾವು ನೋಡೋಣ. |
02:31 | ಗಿಟ್, ವಾಸ್ತವವಾಗಿ ಇಡೀ ಪ್ರೊಜೆಕ್ಟ್ ನ 'ಸ್ನ್ಯಾಪ್ಶಾಟ್'ಅನ್ನು (snapshot) ಸ್ಟೋರ್ ಮಾಡುತ್ತದೆ. |
02:36 | 'ಸ್ನ್ಯಾಪ್ಶಾಟ್', ಆ ಕ್ಷಣದಲ್ಲಿ ಎಲ್ಲ ಫೈಲ್ ಗಳ ಛಾಯಾಚಿತ್ರವನ್ನು ತೆಗೆದಹಾಗೆ ಇರುತ್ತದೆ. |
02:42 | ಒಂದುವೇಳೆ ಕೆಲವು ಫೈಲ್ ಗಳಲ್ಲಿ ಬದಲಾವಣೆಗಳು ಇಲ್ಲದಿದ್ದರೆ, ಗಿಟ್ ಅವುಗಳನ್ನು ಮತ್ತೊಮ್ಮೆ ಸ್ಟೋರ್ ಮಾಡುವುದಿಲ್ಲ. |
02:47 | ಅವುಗಳನ್ನು ಹಿಂದಿನ ಆವೃತ್ತಿಗೆ ಲಿಂಕ್ ಮಾಡುತ್ತದೆ. |
02:50 | ವ್ಯವಸ್ಥೆಯು ವಿಫಲವಾದ ಸಂದರ್ಭದಲ್ಲಿ, ಡೇಟಾಅನ್ನು 'ಸ್ನ್ಯಾಪ್ಶಾಟ್'ನಿಂದ ಪುನಃ ಪಡೆಯಬಹುದು (restored). |
02:56 | ಈ ಸರಣಿಯಲ್ಲಿ ವಿವರಿಸಲಾದ ಕೆಲವು ವೈಶಿಷ್ಟ್ಯಗಳ ಒಳನೋಟವನ್ನು ನಾನು ತೋರಿಸುತ್ತೇನೆ - |
03:01 | * Basic commands of Git |
03:04 | * The git checkout command |
03:06 | * Inspection and comparison of Git ಮತ್ತು |
03:09 | * Tagging in Git. |
03:11 | ಈ ಸರಣಿಯಲ್ಲಿ, ನಾವು:
|
03:22 | 'Ubuntu Linux'ನ ಮೇಲೆ, 'Ubuntu Software Center' ಅನ್ನು ಬಳಸಿ 'Git' ಅನ್ನು ಇನ್ಸ್ಟಾಲ್ ಮಾಡಬಹುದು. |
03:27 | 'Ubuntu Software Center' ನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, 'Linux' Tutorials ವೆಬ್ಸೈಟ್ಅನ್ನು ನೋಡಿ. |
03:35 | ನನ್ನ ಸಿಸ್ಟಂನ ಮೇಲೆ 'Git' ಅನ್ನು ಈಗಾಗಲೇ ನಾನು ಇನ್ಸ್ಟಾಲ್ ಮಾಡಿದ್ದೇನೆ. ಈಗ ನಾವು ಇದನ್ನು ನೋಡೋಣ. |
03:42 | ಟರ್ಮಿನಲ್ ಗೆ ಹೋಗಿ ಮತ್ತು ಹೀಗೆ ಟೈಪ್ ಮಾಡಿ: git space hyphen hyphen version ಮತ್ತು 'Enter' ಅನ್ನು ಒತ್ತಿ. |
03:50 | 'Git' ನ ವರ್ಷನ್ ನಂಬರ್ ಅನ್ನು ತೋರಿಸಿರುವುದನ್ನು ನಾವು ನೋಡಬಹುದು. |
03:53 | ಇದರ ಅರ್ಥ 'Git', ಯಶಸ್ವಿಯಾಗಿ ಇನ್ಸ್ಟಾಲ್ ಮಾಡಲ್ಪಟ್ಟಿದೆ. |
03:57 | ನಂತರ, ನಾವು 'Windows OS' ನ ಮೇಲೆ 'Git'ಅನ್ನು ಇನ್ಸ್ಟಾಲ್ ಮಾಡಲು ಕಲಿಯೋಣ. |
04:01 | ನಿಮ್ಮ ವೆಬ್-ಬ್ರೌಸರ್ ಅನ್ನು ತೆರೆದು (ಓಪನ್ ಮಾಡಿ) www.git-scm.com' ಗೆ ಹೋಗಿ. |
04:09 | ಎಡಭಾಗಲ್ಲಿರುವ 'Downloads' ಎಂಬ ಲಿಂಕ್ ನ ಮೇಲೆ ಕ್ಲಿಕ್ ಮಾಡಿ. |
04:13 | 'ವಿಂಡೋಸ್'ಗಾಗಿ 'Git' ಅನ್ನು ಡೌನ್ಲೋಡ್ ಮಾಡಲು, 'Windows' ಎಂಬ ಐಕಾನ್ ನ ಮೇಲೆ ಕ್ಲಿಕ್ ಮಾಡಿ. |
04:17 | 'Save As' ಎಂಬ ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ. 'Save File' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. |
04:22 | 'ಇನ್ಸ್ಟಾಲರ್ ಫೈಲ್' ಅನ್ನು (installer file) ಡೀ-ಫಾಲ್ಟ್ 'Downloads' ಫೋಲ್ಡರ್ ನಲ್ಲಿ ಡೌನ್ಲೋಡ್ ಮಾಡಲಾಗುವುದು. |
04:26 | 'Git' ಅನ್ನು ಇನ್ಸ್ಟಾಲ್ ಮಾಡಲು, "exe" ಫೈಲ್ ನ ಮೇಲೆ ಡಬಲ್-ಕ್ಲಿಕ್ ಮಾಡಿ. |
04:30 | ಈಗ ಕಾಣಿಸಿಕೊಳ್ಳುವ ಡೈಲಾಗ್-ಬಾಕ್ಸ್ ನಲ್ಲಿ, 'Run' ನ ಮೇಲೆ, ನಂತರ 'Yes' ನ ಮೇಲೆ ಕ್ಲಿಕ್ ಮಾಡಿ. |
04:35 | ಈಗ, 'Next' ನ ಮೇಲೆ ಕ್ಲಿಕ್ ಮಾಡಿ. "General Public License" ಪೇಜ್ ನಲ್ಲಿ, 'Next' ನ ಮೇಲೆ ಕ್ಲಿಕ್ ಮಾಡಿ. |
04:41 | ಡೀ-ಫಾಲ್ಟ್ ಆಗಿ, 'Git', 'Programs files' ನಲ್ಲಿ ಇನ್ಸ್ಟಾಲ್ ಆಗುತ್ತದೆ. 'Next' ನ ಮೇಲೆ ಕ್ಲಿಕ್ ಮಾಡಿ. |
04:46 | ಇನ್ಸ್ಟಾಲ್ ಮಾಡಲು ಘಟಕಗಳನ್ನು ನಾವು ಆಯ್ಕೆಮಾಡಬಹುದು. |
04:49 | 'Additional icons' ಎಂಬ ಚೆಕ್-ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ. |
04:52 | ಆಮೇಲೆ 'Next' ನ ಮೇಲೆ ಕ್ಲಿಕ್ ಮಾಡಿ. ಮತ್ತೊಮ್ಮೆ 'Next' ನ ಮೇಲೆ ಕ್ಲಿಕ್ ಮಾಡಿ. |
04:57 | ಇಲ್ಲಿ, ನೀವು 'Git' ಕಮಾಂಡ್ ಗಳನ್ನು ರನ್ ಮಾಡಲು ಆಯ್ಕೆಯನ್ನು ಆರಿಸಿಕೊಳ್ಳಬಹುದು. |
05:00 | ನಾನು 'Use Git Bash only' ಯನ್ನು ಆಯ್ಕೆಮಾಡಿ, 'Next' ನ ಮೇಲೆ ಕ್ಲಿಕ್ ಮಾಡುವೆನು. |
05:04 | ನಾನು ಈ ಆಯ್ಕೆಯನ್ನು ಡೀ-ಫಾಲ್ಟ್ ಆಗಿ ಇಟ್ಟು, ' Next' ಮೇಲೆ ಕ್ಲಿಕ್ ಮಾಡುತ್ತೇನೆ. |
05:09 | 'Git' ಇನ್ಸ್ಟಾಲ್ ಆಗುತ್ತಾ ಇದೆ. ನಿಮ್ಮ ಇಂಟರ್ನೆಟ್ ನ ವೇಗಕ್ಕೆ ಅನುಸಾರವಾಗಿ ಇದು ಕೆಲವು ನಿಮಿಷಗಳನ್ನು ತೆಗೆದುಕೊಳ್ಳಬಹುದು. |
05:15 | ಇನ್ಸ್ಟಾಲ್ಲೇಶನ್ ಅನ್ನು ಪೂರ್ತಿಗೊಳಿಸಲು, 'Finish' ಬಟನ್ ನ ಮೇಲೆ ಕ್ಲಿಕ್ ಮಾಡಿ. |
05:19 | ಈಗ, “Git Release Notes” ತನ್ನಷ್ಟಕ್ಕೆ ತಾನೇ ತೆರೆದುಕೊಳ್ಳುತ್ತದೆ. ನಾನು ಇದನ್ನು ಕ್ಲೋಸ್ ಮಾಡುತ್ತೇನೆ. |
05:24 | ಡೆಸ್ಕ್ಟಾಪ್ ನ ಮೇಲೆ, 'Git Bash' ಎಂಬ ಒಂದು ಶಾರ್ಟ್ಕಟ್ ಐಕಾನ್ ಕ್ರಿಯೇಟ್ ಆಗಿರುವುದನ್ನು ನೀವು ನೋಡುವಿರಿ. ಓಪನ್ ಮಾಡಲು ಅದರ ಮೇಲೆ ಡಬಲ್-ಕ್ಲಿಕ್ ಮಾಡಿ. |
05:32 | ಪರ್ಯಾಯವಾಗಿ, ನೀವು Start ಮೆನ್ಯು >> All programs >> Git ಮತ್ತು ಆಮೇಲೆ Git Bash ನ ಮೇಲೆ ಕ್ಲಿಕ್ ಮಾಡಬಹುದು. |
05:41 | ಈಗ ' Git Bash' ತೆರೆದುಕೊಳ್ಳುವುದು. |
05:44 | ಇದು, 'Git'ನ ಇನ್ಸ್ಟಾಲ್ ಮಾಡಲಾದ ವರ್ಷನ್ ನಂಬರನ್ನು (ಆವೃತ್ತಿಯನ್ನು) ತೋರಿಸುತ್ತದೆ. |
05:48 | ಹೀಗಾಗಿ, 'Git', ಯಶಸ್ವಿಯಾಗಿ ಇನ್ಸ್ಟಾಲ್ ಆಗಿದೆ ಎಂದು ನಮಗೆ ತಿಳಿದಿದೆ. |
05:51 | ಇದರೊಂದಿಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ. |
05:55 | ಸಂಕ್ಷಿಪ್ತವಾಗಿ,
ಈ ಟ್ಯುಟೋರಿಯಲ್ ನಲ್ಲಿ, ನಾವು:
|
06:10 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ, ಸ್ಪೋಕನ್-ಟ್ಯುಟೋರಿಯಲ್ ಪ್ರೋಜೆಕ್ಟ್ ನ ಸಾರಾಂಶವಾಗಿದೆ.
ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. |
06:18 | ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್’ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ‘ಆನ್ ಲೈನ್ ಟೆಸ್ಟ್’ ನಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಬರೆಯಿರಿ: contact@spoken-tutorial.org |
06:29 | ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ. ಈ ಮಿಷನ್ನಿನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ: |
06:41 | IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ…..
ವಂದನೆಗಳು. |