Geogebra/C3/Tangents-to-a-circle/Kannada

From Script | Spoken-Tutorial
Jump to: navigation, search
Time Narration
00:00 ನಮಸ್ಕಾರ. Tangents to a circle in Geogebra (ಟ್ಯಾಂಜೆಂಟ್ಸ್ ಟು ಎ ಸರ್ಕಲ್ ಇನ್ ಜಿಯೊಜಿಬ್ರಾ) ಎನ್ನುವ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನ ಕೊನೆಗೆ, ನಿಮಗೆ:

ವರ್ತುಲಕ್ಕೆ ಟ್ಯಾಂಜೆಂಟ್ಸ್ ಗಳನ್ನು (ಸ್ಪರ್ಶಕಗಳನ್ನು) ಎಳೆಯಲು ಮತ್ತು ಟ್ಯಾಂಜೆಂಟ್ಸ್ ಗಳ ಗುಣಧರ್ಮಗಳನ್ನು ತಿಳಿದುಕೊಳ್ಳಲು, ಸಾಧ್ಯವಾಗುವುದು.

00:17 ನಿಮಗೆ ಜಿಯೊಜಿಬ್ರಾದೊಂದಿಗೆ ಕೆಲಸ ಮಾಡಿ ಅಭ್ಯಾಸವಿದೆ ಎಂದು ನಾವು ಭಾವಿಸುತ್ತೇವೆ.
00:22 ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ದಯವಿಟ್ಟು ನಮ್ಮ ವೆಬ್ಸೈಟ್ ಅನ್ನು ನೋಡಿ.

http://spoken-tutorial.org.

00:27 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು Ubuntu Linux OS Version 11.10 (ಉಬಂಟು ಲಿನಕ್ಸ್ ಆಪರೇಟಿಂಗ್ ಸಿಸ್ಟಂ ವರ್ಷನ್ 11.10) ಹಾಗೂ Geogebra Version 3.2.47.0 (ಜಿಯೊಜಿಬ್ರಾ ವರ್ಷನ್ 3.2.47.0) ಗಳನ್ನು ಬಳಸುತ್ತಿದ್ದೇನೆ.
00:41 ಈ ಕೆಳಗಿನ ಜಿಯೊಜಿಬ್ರಾ ಟೂಲ್ಗಳನ್ನು ನಾವು ಬಳಸುವೆವು:

Tangents (ಟ್ಯಾಂಜೆಂಟ್ಸ್) Perpendicular Bisector (ಪರ್ಪೆಂಡಿಕ್ಯುಲರ್ ಬೈಸೆಕ್ಟರ್) Intersect Two Objects (ಇಂಟರ್ಸೆಕ್ಟ್ ಟು ಆಬ್ಜೆಕ್ಟ್ಸ್) Compass (ಕಂಪಾಸ್) Polygon (ಪಾಲಿಗಾನ್) ಮತ್ತು Circle with Center and Radius(ಸರ್ಕಲ್ ವಿತ್ ಸೆಂಟರ್ ಆಂಡ್ ರೇಡಿಯಸ್).

00:58 ನಾವು ಒಂದು ಹೊಸ ಜಿಯೊಜಿಬ್ರಾ ವಿಂಡೋವನ್ನು ತೆರೆಯೋಣ.
01:01 ಕ್ರಮವಾಗಿ Dash home >> Media Applications ಗಳ ಮೇಲೆ ಕ್ಲಿಕ್ ಮಾಡಿ. Type ನ ಅಡಿಯಲ್ಲಿ , Education >> ಮತ್ತು Geogebra ಗಳನ್ನು ಆರಿಸಿಕೊಳ್ಳಿ.
01:13 ಒಂದು ವೃತ್ತದ ಸ್ಪರ್ಶಕಗಳನ್ನು ನಾವು ವ್ಯಾಖ್ಯಾನಿಸೋಣ.
01:16 “ಸ್ಪರ್ಶಕವು, ವೃತ್ತವನ್ನು ಒಂದೇ ಒಂದು ಬಿಂದುವಿನಲ್ಲಿ ಸ್ಪರ್ಶಿಸುವ ರೇಖೆಯಾಗಿದೆ”.
01:22 ಸಂಪರ್ಕದ ಬಿಂದುವನ್ನು “ಸ್ಪರ್ಶಬಿಂದು” ("point of tangency") ಎಂದು ಕರೆಯಲಾಗುತ್ತದೆ.
01:27 ಈ ಟ್ಯುಟೋರಿಯಲ್ ನಲ್ಲಿ, ನಾನು Axes ಗೆ ಬದಲಾಗಿ Grid ಲೇಔಟ್ (ವಿನ್ಯಾಸ) ಅನ್ನು ಬಳಸುವೆನು. ‘ಡ್ರಾಯಿಂಗ್ ಪ್ಯಾಡ್’ನ ಮೇಲೆ ರೈಟ್-ಕ್ಲಿಕ್ ಮಾಡಿ.
01:35 Axes ಅನ್ನು ‘ಅನ್-ಚೆಕ್’ (ತೆಗೆದುಹಾಕಿ) ಮಾಡಿ. Grid ಅನ್ನು ಆಯ್ಕೆಮಾಡಿ.
01:39 ನಾವು ವರ್ತುಲಕ್ಕೆ ಸ್ಪರ್ಶಕವನ್ನು (ಟ್ಯಾಂಜೆಂಟ್) ರಚಿಸೋಣ.
01:42 ಮೊದಲು, ನಾವು ಒಂದು ವರ್ತುಲವನ್ನು ರಚಿಸೋಣ.
01:45 ಟೂಲ್-ಬಾರ್ ನಲ್ಲಿಯ Circle with Center and Radius ಎನ್ನುವ ಟೂಲನ್ನು ಆಯ್ಕೆಮಾಡಿ.
01:49 ‘ಡ್ರಾಯಿಂಗ್ ಪ್ಯಾಡ್’ನ ಮೇಲೆ A ಬಿಂದುವನ್ನು ಗುರುತಿಸಿ.
01:52 ಒಂದು ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
01:53 ತ್ರಿಜ್ಯಕ್ಕಾಗಿ ನಾವು 3 ಎಂದು ಟೈಪ್ ಮಾಡೋಣ. OK ಯ ಮೇಲೆ ಕ್ಲಿಕ್ ಮಾಡಿ.
01:58 ಕೇಂದ್ರಬಿಂದು A ಹಾಗೂ 3 cm ತ್ರಿಜ್ಯವಿರುವ ಒಂದು ವರ್ತುಲವನ್ನು ರಚಿಸಲಾಗಿದೆ.
02:04 ನಾವು A ಬಿಂದುವನ್ನು ಜರುಗಿಸಿ, ವರ್ತುಲವು ಅದೇ ತ್ರಿಜ್ಯವನ್ನು ಹೊಂದಿದೆಯೋ ಹೇಗೆ ಎಂದು ನೋಡೋಣ.
02:09 New Point ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. ವರ್ತುಲದ ಹೊರಗೆ B ಎನ್ನುವ ಬಿಂದುವನ್ನು ಗುರುತಿಸಿ.
02:15 Segment between Two Points ಎನ್ನುವ ಟೂಲನ್ನು ಆಯ್ಕೆಮಾಡಿ. A ಹಾಗೂ B ಬಿಂದುಗಳನ್ನು ಸೇರಿಸಿ. ಸೆಗ್ಮೆಂಟ್ AB, ರಚಿಸಲ್ಪಟ್ಟಿದೆ.
02:25 Perpendicular Bisector ಎನ್ನುವ ಟೂಲನ್ನು ಆಯ್ಕೆಮಾಡಿ. A ಹಾಗೂ B ಬಿಂದುಗಳ ಮೇಲೆ ಕ್ಲಿಕ್ ಮಾಡಿ. ಸೆಗ್ಮೆಂಟ್ AB ಗೆ, ಲಂಬವಾದ ದ್ವಿಭಾಜಕವು (perpendicular bisector) ರಚಿಸಲ್ಪಟ್ಟಿದೆ.
02:37 ಸೆಗ್ಮೆಂಟ್ AB ಹಾಗೂ ಲಂಬವಾದ ದ್ವಿಭಾಜಕಗಳು ಒಂದು ಬಿಂದುವಿನಲಿ ಛೇದಿಸುತ್ತವೆ. Intersect Two Objects ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ.
02:44 ಛೇದನ ಬಿಂದುವನ್ನು C ಎಂದು ಗುರುತಿಸಿ. ನಾವು B ಬಿಂದುವನ್ನು ಜರುಗಿಸೋಣ ಮತ್ತು ಅದರೊಂದಿಗೆ ಲಂಬವಾದ ದ್ವಿಭಾಜಕ ಹಾಗೂ C ಬಿಂದುಗಳು ಹೇಗೆ ಸರಿದಾಡುತ್ತವೆ ಎನ್ನುವುದನ್ನು ನೋಡೋಣ.
02:59 C ಬಿಂದು, AB ಯ ಮಧ್ಯಬಿಂದುವಾಗಿದೆ ಎಂದು ಹೇಗೆ ಪರೀಕ್ಷಿಸುವುದು?
03:02 Distance ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. A, C; C, B ಬಿಂದುಗಳ ಮೇಲೆ ಕ್ಲಿಕ್ ಮಾಡಿ. AC = CB ಆಗಿದೆ ಎಂದು ಗಮನಿಸಿ. ಇದು C ಬಿಂದುವು, AB ಯ ಮಧ್ಯಬಿಂದುವಾಗಿದೆ ಎಂದು ಸೂಚಿಸುತ್ತದೆ.
03:20 ಟೂಲ್-ಬಾರ್ ನಲ್ಲಿಯ Compass ಎನ್ನುವ ಟೂಲನ್ನು ಆಯ್ಕೆಮಾಡಿ. C, B ಬಿಂದುಗಳ ಮೇಲೆ ಹಾಗೂ ಆಕೃತಿಯನ್ನು ಪೂರ್ಣಗೊಳಿಸಲು ಇನ್ನೊಮ್ಮೆ C ಯ ಮೇಲೆ ಕ್ಲಿಕ್ ಮಾಡಿ.
03:30 ಎರಡು ವರ್ತುಲಗಳು, ಎರಡು ಬಿಂದುಗಳಲ್ಲಿ ಛೇದಿಸುತ್ತವೆ.
03:33 Intersect Two Objects ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. ಛೇದನ ಬಿಂದುಗಳನ್ನು D ಹಾಗೂ E ಎಂದು ಗುರುತಿಸಿ.
03:42 Segment between Two Points ಎನ್ನುವ ಟೂಲನ್ನು ಆಯ್ಕೆಮಾಡಿ.
03:45 B, D ಹಾಗೂ B, E ಬಿಂದುಗಳನ್ನು ಸೇರಿಸಿ.
03:53 ಸೆಗ್ಮೆಂಟ್ BD ಮತ್ತು BE ಗಳು ‘c’ ಎನ್ನುವ ವರ್ತುಲಕ್ಕೆ ಸ್ಪರ್ಶಕಗಳಾಗಿವೆ.
03:59 ವರ್ತುಲದ ಈ ಸ್ಪರ್ಶಕಗಳ ಕೆಲವು ಗುಣಧರ್ಮಗಳನ್ನು ನಾವು ನೋಡೋಣ.
04:05 Segment between Two Points ಎನ್ನುವ ಟೂಲನ್ನು ಆಯ್ಕೆಮಾಡಿ.
04:08 A, D ಹಾಗೂ A, E ಬಿಂದುಗಳನ್ನು ಸೇರಿಸಿ.
04:14 ADB ಹಾಗೂ ABE ತ್ರಿಕೋನಗಳಲ್ಲಿ, ಸೆಗ್ಮೆಂಟ್ AD = ಸೆಗ್ಮೆಂಟ್ AE ಆಗಿದೆ ('c' ವರ್ತುಲದ ತ್ರಿಜ್ಯಗಳು).

ಸೆಗ್ಮೆಂಟ್ AD = ಸೆಗ್ಮೆಂಟ್ AE ಎನ್ನುವುದನ್ನು ನಾವು Algebra View ದಲ್ಲಿ ನೋಡೋಣ.

04:34 ಕೋನ ADB ಮತ್ತು ಕೋನ BEA ಗಳು, 'd’ ಎಂಬ ವರ್ತುಲದ ಅರ್ಧವೃತ್ತ ಕೋನಗಳಾಗಿದ್ದು, ಎರಡೂ ಸಮವಾಗಿವೆ (∠ADB = ∠BEA). ಈ ಕೋನವನ್ನು ಅಳೆಯೋಣ.
04:48 Angle ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. A, D, B, ಮತ್ತು B, E, A ಬಿಂದುಗಳ ಮೇಲೆ ಕ್ಲಿಕ್ ಮಾಡಿ. ಕೋನಗಳು ಸಮವಾಗಿವೆ.
05:03 ಸೆಗ್ಮೆಂಟ್ AB, ಎರಡೂ ತ್ರಿಕೋನಗಳಿಗೆ ಸಾಮಾನ್ಯವಾಗಿದೆ. ಆದ್ದರಿಂದ, SAS rule of congruency ಯ (ಭುಜ-ಕೋನ-ಭುಜ ಸರ್ವಸಮ ನಿಯಮ) ಅನುಸಾರ, ತ್ರಿಕೋನ ADB ಹಾಗೂ ತ್ರಿಕೋನ ABE ಗಳು ಸರ್ವಸಮ ತ್ರಿಕೋನಗಳಾಗಿವೆ (△ADB ≅ △ABE).
05:20 BD ಹಾಗೂ BE ಸ್ಪರ್ಶಕಗಳು ಸಮವಾಗಿವೆ ಎಂದು ಇದು ಸೂಚಿಸುತ್ತದೆ.
05:26 BD ಹಾಗೂ BE ಸ್ಪರ್ಶಕಗಳು ಸಮವಾಗಿರುವುದನ್ನು Algebra View ದಲ್ಲಿ ನಾವು ನೋಡಬಹುದು.
05:33 ಸ್ಪರ್ಶಕವು ಯಾವಾಗಲೂ ಸ್ಪರ್ಶಬಿಂದುವಿನಲ್ಲಿ ವರ್ತುಲದ ತ್ರಿಜ್ಯಕ್ಕೆ ಲಂಬವಾಗಿರುತ್ತದೆ ಎಂದು ದಯವಿಟ್ಟು ಗಮನಿಸಿ.

ನಾವು B ಬಿಂದುವನ್ನು ಜರುಗಿಸಿ, ಅದರೊಂದಿಗೆ ಸ್ಪರ್ಶಕಗಳು ಹೇಗೆ ಸರಿದಾಡುತ್ತವೆ ಎನ್ನುವುದನ್ನು ನೋಡೋಣ.

05:50 ಈಗ ನಾವು ಫೈಲ್ ಅನ್ನು ಸೇವ್ ಮಾಡೋಣ. ಕ್ರಮವಾಗಿ File >> Save As ಗಳ ಮೇಲೆ ಕ್ಲಿಕ್ ಮಾಡಿ.
05:54 ನಾನು ಫೈಲ್ ನ ಹೆಸರನ್ನು Tangent-circleಎಂದು ಟೈಪ್ ಮಾಡುವೆನು. Save ನ ಮೇಲೆ ಕ್ಲಿಕ್ ಮಾಡುತ್ತೇನೆ.
06:08 ನಾವು ಒಂದು ಪ್ರಮೇಯವನ್ನು ಮಂಡಿಸೋಣ.
06:11 “ಸ್ಪರ್ಶಬಿಂದುವಿನಲ್ಲಿ, ಸ್ಪರ್ಶಕ ಹಾಗೂ ‘ಕಾರ್ಡ್’ಗಳ ನಡುವಿನ ಕೋನವು, ಅದೇ ‘ಕಾರ್ಡ್’ನಿಂದ ವರ್ತುಲದಲ್ಲಿ ರೂಪಿಸಲ್ಪಟ್ಟ ಕೋನಕ್ಕೆ ಸಮನಾಗಿರುತ್ತದೆ”.

ಸ್ಪರ್ಶಕ ಹಾಗೂ ‘ಕಾರ್ಡ್’ನ ನಡುವಿನ ಕೋನ DFB = BF ‘ಕಾರ್ಡ್’ನಿಂದ ರೂಪಿಸಲ್ಪಟ್ಟ ಕೋನ FCB.

06:34 ಈ ಪ್ರಮೇಯವನ್ನು ನಾವು ಸಿದ್ಧಮಾಡೋಣ.
06:38 ನಾವು ಹೊಸದೊಂದು Geogebra ವಿಂಡೋವನ್ನು ತೆರೆಯೋಣ. ಕ್ರಮವಾಗಿ File >> New ಗಳ ಮೇಲೆ ಕ್ಲಿಕ್ ಮಾಡಿ. ನಾವು ಒಂದು ವರ್ತುಲವನ್ನು ರಚಿಸೋಣ.
06:48 ಟೂಲ್-ಬಾರ್ ನಲ್ಲಿಯ Circle with center through Point ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. A ಬಿಂದುವನ್ನು ಕೇಂದ್ರಬಿಂದುವೆಂದು ಗುರುತಿಸಿ, B ಬಿಂದುವನ್ನು ಪಡೆಯಲು ಮತ್ತೊಮ್ಮೆ ಕ್ಲಿಕ್ ಮಾಡಿ.
06:59 New Point ಎನ್ನುವ ಟೂಲನ್ನು ಆಯ್ಕೆಮಾಡಿ. C ಬಿಂದುವನ್ನು ಪರಿಧಿಯ ಮೇಲೆ ಹಾಗೂ D ಬಿಂದುವನ್ನು ವರ್ತುಲದ ಹೊರಗೆ ಗುರುತಿಸಿ.
07:06 ಟೂಲ್-ಬಾರ್ ನಲ್ಲಿಯ Tangents ಎನ್ನುವ ಟೂಲನ್ನು ಆಯ್ಕೆಮಾಡಿ. D ಬಿಂದುವಿನ ಮೇಲೆ ಹಾಗೂ ಪರಿಧಿಯ ಮೇಲೆ ಕ್ಲಿಕ್ ಮಾಡಿ.
07:14 ವರ್ತುಲಕ್ಕೆ ಎರಡು ಸ್ಪರ್ಶಕಗಳನ್ನು ರಚಿಸಲಾಗಿದೆ.
07:16 ಸ್ಪರ್ಶಕಗಳು ವರ್ತುಲವನ್ನು ಎರಡು ಬಿಂದುಗಳಲ್ಲಿ ಸಂಧಿಸುತ್ತವೆ.
07:20 Intersect Two Objects ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. ಸ್ಪರ್ಶಬಿಂದುಗಳನ್ನು E ಹಾಗೂ F ಎಂದು ಗುರುತಿಸಿ.
07:28 ನಾವು ಒಂದು ತ್ರಿಕೋನವನ್ನು ರಚಿಸೋಣ. Polygon ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ.
07:31 B, C, F ಬಿಂದುಗಳ ಮೇಲೆ ಹಾಗೂ ಆಕೃತಿಯನ್ನು ಪೂರ್ಣಗೊಳಿಸಲು ಇನ್ನೊಮ್ಮೆ B ಯ ಮೇಲೆ ಕ್ಲಿಕ್ ಮಾಡಿ.
07:41 ಈ ಆಕೃತಿಯಲ್ಲಿ, BF ಎನ್ನುವುದು ‘c’ ಎಂಬ ವರ್ತುಲದ ‘ಕಾರ್ಡ್’ ಆಗಿದೆ.
07:45 ಕೋನ FCB (∠FCB), ‘ಕಾರ್ಡ್’ನಿಂದ, ವರ್ತುಲ 'c' ಯಲ್ಲಿ ರೂಪಿಸಲ್ಪಟ್ಟ ಕೋನವಾಗಿದೆ.
07:53 ಕೋನ DFB, 'c' ವರ್ತುಲದ ಸ್ಪರ್ಶಕ ಹಾಗೂ ‘ಕಾರ್ಡ್’ಗಳ ನಡುವಿನ ಕೋನವಾಗಿದೆ.
08:01 ನಾವು ಈ ಕೋನಗಳನ್ನು ಅಳೆಯೋಣ. Angle ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. D, F, B, ಹಾಗೂ F, C, B ಬಿಂದುಗಳ ಮೇಲೆ ಕ್ಲಿಕ್ ಮಾಡಿ.
08:14 ಕೋನ DFB ಹಾಗೂ ಕೋನ FCB ಗಳು ಸಮವಾಗಿವೆ ಎನ್ನುವುದನ್ನು ಗಮನಿಸಿ (∠DFB = ∠FCB). ನಾವು D ಬಿಂದುವನ್ನು ಜರುಗಿಸಿ ಅದರೊಂದಿಗೆ ಸ್ಪರ್ಶಕಗಳು ಹಾಗೂ ‘ಕಾರ್ಡ್’ಗಳು ಸರಿದಾಡುತ್ತವೆ ಎನ್ನುವುದನ್ನು ನೋಡೋಣ.
08:31 ಈಗ ನಾವು ಫೈಲ್ ಅನ್ನು ಸೇವ್ ಮಾಡೋಣ. ಕ್ರಮವಾಗಿ File , Save As ಗಳ ಮೇಲೆ ಕ್ಲಿಕ್ ಮಾಡಿ.
08:36 ನಾನು ಫೈಲ್ ನ ಹೆಸರನ್ನು Tangent-angle ಎಂದು ಟೈಪ್ ಮಾಡುವೆನು. Save ನ ಮೇಲೆ ಕ್ಲಿಕ್ ಮಾಡಿ. ಇದರೊಂದಿಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬರುತ್ತೇವೆ.
08:50 ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ, ಈ ಕೆಳಗಿನವುಗಳನ್ನು ಸಿದ್ಧಮಾಡಲು ನಾವು ಕಲಿತಿದ್ದೇವೆ:
08:57 ಹೊರಗಿನ ಬಿಂದುವಿನಿಂದ ಎಳೆದ ಎರಡು ಸ್ಪರ್ಶಕಗಳು ಸಮವಾಗಿರುತ್ತವೆ.
09:01 ಒಂದು ಸ್ಪರ್ಶಕ ಹಾಗೂ ವರ್ತುಲದ ತ್ರಿಜ್ಯ, ಇವುಗಳ ನಡುವಿನ ಕೋನವು 90 ಅಂಶಗಳಾಗಿರುತ್ತದೆ.
09:07 ಸ್ಪರ್ಶಕ ಹಾಗೂ ‘ಕಾರ್ಡ್’ನ ನಡುವಿನ ಕೋನವು, ಆ ‘ಕಾರ್ಡ್’ನಿಂದ ವರ್ತುಲದಲ್ಲಿ ರೂಪಿಸಲ್ಪಟ್ಟ ಕೋನಕ್ಕೆ ಸಮನಾಗಿರುತ್ತದೆ.
09:14 ನಿಮಗಾಗಿ ಒಂದು ಅಸೈನ್ಮೆಂಟ್:
09:17 “ವರ್ತುಲಕ್ಕೆ ಎಳೆದ ಸ್ಪರ್ಶಕಗಳ ನಡುವಿನ ಕೋನವು, ಸ್ಪರ್ಶಬಿಂದುಗಳನ್ನು ಕೇಂದ್ರಬಿಂದುವಿಗೆ ಜೋಡಿಸುವ ರೇಖೆಗಳ ನಡುವಿನ ಕೋನಕ್ಕೆ ಪೂರಕವಾಗಿರುತ್ತದೆ” ಎನ್ನುವುದನ್ನು ಸಿದ್ಧಮಾಡಿ ತೋರಿಸಿ.
09:30 ಇದನ್ನು ಸಿದ್ಧಮಾಡಲು: ಒಂದು ವರ್ತುಲವನ್ನು ರಚಿಸಿ. ಹೊರಗಿನ ಒಂದು ಬಿಂದುವಿನಿಂದ ಸ್ಪರ್ಶಕಗಳನ್ನು ರಚಿಸಿರಿ.
09:37 ಸ್ಪರ್ಶಕಗಳ ಸ್ಪರ್ಶಬಿಂದುಗಳನ್ನು ಗುರುತಿಸಿ. ವರ್ತುಲದ ಕೇಂದ್ರಬಿಂದುವನ್ನು ಸ್ಪರ್ಶಬಿಂದುಗಳಿಗೆ ಸೇರಿಸಿ.
09:44 ಕೇಂದ್ರಬಿಂದುವಿನಲ್ಲಿಯ ಹಾಗೂ ಸ್ಪರ್ಶಕಗಳ ನಡುವಿನ ಕೋನಗಳನ್ನು ಅಳೆಯಿರಿ.
09:49 ಎರಡೂ ಕೋನಗಳ ಮೊತ್ತ ಎಷ್ಟಿದೆ? ಕೇಂದ್ರಬಿಂದು ಹಾಗೂ ಹೊರಗಿನ ಬಿಂದುಗಳನ್ನು ಸೇರಿಸಿ.
09:55 ಈ ರೇಖೆಯು, ಕೇಂದ್ರಬಿಂದುವಿನಲ್ಲಿಯ ಕೋನವನ್ನು ಇಬ್ಭಾಗ ಮಾಡುತ್ತದೆಯೇ? ಸೂಚನೆ - Angle Bisector ಟೂಲನ್ನು ಬಳಸಿ.
10:05 ಔಟ್ಪುಟ್, ಹೀಗೆ ಕಾಣಿಸಬೇಕು.
10:08 ಕೋನಗಳ ಮೊತ್ತವು 180 ಅಂಶಗಳಾಗಿದೆ. ರೇಖೆಯು (line segment) ಕೋನವನ್ನು ಇಬ್ಭಾಗ ಮಾಡುತ್ತದೆ.
10:16 ಈ URL ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.http://spoken-tutorial.org/
10:19 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ. ನಿಮಗೆಒಳ್ಳೆಯ ‘‘ಬ್ಯಾಂಡ್ವಿಡ್ತ್’’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
10:27 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ತಂಡವು: ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
10:32 ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
10:35 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ. contact@spoken-tutorial.org
10:42 “ ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು, “ಟಾಕ್ ಟು ಎ ಟೀಚರ್” ಎನ್ನುವ ಪ್ರಕಲ್ಪದ ಒಂದು ಭಾಗವಾಗಿದೆ.
10:47 ಇದು ICT, MHRD ಮೂಲಕ ಭಾರತ ಸರ್ಕಾರದ ರಾಷ್ಟ್ರೀಯ ಸಾಕ್ಷರತಾ ಮಿಷನ್ ನ ಆಧಾರವನ್ನು ಪಡೆದಿದೆ.
10:54 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ.[1]
10:59 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ---------- . ವಂದನೆಗಳು.

Contributors and Content Editors

Pratik kamble, Sandhya.np14