Geogebra/C2/Symmetrical-Transformation-in-Geogebra/Kannada

From Script | Spoken-Tutorial
Jump to: navigation, search
Time Narration
00:00 ನಮಸ್ಕಾರ. Symmetrical Transformation in Geogebra (ಸಿಮ್ಮೆಟ್ರಿಕಲ್ ಟ್ರಾನ್ಸ್ಫಾರ್ಮೇಶನ್ ಇನ್ ಜಿಯೊಜಿಬ್ರಾ) ಎನ್ನುವ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು,
00:11 * ರೇಖೆಯ ಸಮರೂಪತೆ (ಲೈನ್ ಸಿಮೆಟ್ರೀ)
00:12 * ತಿರುಗುವಿಕೆಯ ಸಮರೂಪತೆ (ರೊಟೇಶನ್ ಸಿಮೆಟ್ರೀ) ಎಂಬ ‘ಸಿಮ್ಮೆಟ್ರಿಕಲ್ ಟ್ರಾನ್ಸ್ಫಾರ್ಮೇಶನ್’ (ಸಮಪಾರ್ಶ್ವತೆಯ ರೂಪಾಂತರ) ಗಳನ್ನು ಕಲಿಯುವೆವು.
00:13 * ಮತ್ತು ಆಕೃತಿಯನ್ನು ಪ್ರಮಾಣಬದ್ಧವಾಗಿ ಹಾಗೂ ಸ್ಥಾನದೊಂದಿಗೆ ದೊಡ್ಡದನ್ನಾಗಿ ಮಾಡಲು ಸಹ ಕಲಿಯುವೆವು.
00:17 ನಿಮಗೆ ಜಿಯೊಜಿಬ್ರಾದ ಪರಿಚಯವಿದೆ ಎಂದು ಭಾವಿಸುತ್ತೇನೆ.
00:21 ಇಲ್ಲವಾದಲ್ಲಿ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಅನ್ನು ನೋಡಿ.
00:26 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು Ubuntu Linux OS Version 11.10 (ಉಬಂಟು ಲಿನಕ್ಸ್ ಆಪರೇಟಿಂಗ್ ಸಿಸ್ಟಂ ವರ್ಷನ್ 11.10),
00:31 Geogebra Version 3.2.47.0 (ಜಿಯೊಜಿಬ್ರಾ ವರ್ಷನ್ 3.2.47.0) ಗಳನ್ನು ಬಳಸುತ್ತಿದ್ದೇನೆ.
00:35 ನಾವು ಈ ಕೆಳಗಿನ ಜಿಯೊಜಿಬ್ರಾ ಟೂಲ್ಗಳನ್ನು ಬಳಸುವೆವು.
00:37 * Reflect Object about Line (ರಿಫ್ಲೆಕ್ಟ್ ಆಬ್ಜೆಕ್ಟ್ ಅಬೌಟ್ ಲೈನ್)
00:39 * Rotate Object around Point by Angle (ರೊಟೇಟ್ ಆಬ್ಜೆಕ್ಟ್ ಅರೌಂಡ್ ಪಾಯಿಂಟ್ ಬೈ ಆಂಗಲ್)
00:42 * Dilate object from a Point by Factor (ಡೈಲೇಟ್ ಆಬ್ಜೆಕ್ಟ್ ಫ್ರಾಂ ಎ ಪಾಯಿಂಟ್ ಬೈ ಫ್ಯಾಕ್ಟರ್)
00:45 * Semicircle through Two points (ಸೆಮಿಸರ್ಕಲ್ ಥ್ರೂ ಟು ಪಾಯಿಂಟ್ಸ್)
00:47 * Regular Polygon (ರೆಗ್ಯುಲರ್ ಪಾಲಿಗಾನ್) ಮತ್ತು
00:49 * Perpendicular bisector (ಪರ್ಪೆಂಡಿಕ್ಯುಲರ್ ಬೈಸೆಕ್ಟರ್)
00:51 ಟ್ರಾನ್ಸ್ಫಾರ್ಮೇಶನ್ ನ (ರೂಪಾಂತರ) ವ್ಯಾಖ್ಯಾನ:
00:53 ರೇಖಾಗಣಿತದ ಒಂದು ಆಕೃತಿಯ ‘ಸಿಮ್ಮೆಟ್ರಿಕಲ್ ಟ್ರಾನ್ಸ್ಫಾರ್ಮೇಶನ್’ಎಂದರೆ
00:57 ‘ಕೊ-ಆರ್ಡಿನೇಟ್ ಪ್ಲೇನ್’ನಲ್ಲಿ ಅದರ ಸ್ಥಾನ, ಗಾತ್ರ ಅಥವಾ ಆಕಾರದಲ್ಲಿ ಆಗುವ ಬದಲಾವಣೆ.
01:02 ಮೂಲ ಆಕೃತಿಯನ್ನು ‘ಆಬ್ಜೆಕ್ಟ್’ ಎಂದು ಕರೆಯಲಾಗುತ್ತದೆ.
01:04 ಪರಿವರ್ತಿತ ಆಕೃತಿಯನ್ನು ‘ಇಮೇಜ್’ ಎಂದು ಕರೆಯಲಾಗುತ್ತದೆ.
01:07 ರಿಫ್ಲೆಕ್ಶನ್ ಸಿಮೆಟ್ರೀ (ಪ್ರತಿಫಲನ ಸಮರೂಪತೆ):
01:09 * ಇದನ್ನು ‘ಲೈನ್ ಸಿಮೆಟ್ರೀ’ ಎಂದು ಸಹ ಹೇಳಲಾಗುತ್ತದೆ.
01:11 * ಇದು ಒಂದು ವಿಧದ ಸಮರೂಪತೆ (ಸಿಮೆಟ್ರೀ). ಇದರಲ್ಲಿ, ಒಂದು ಅರ್ಧವು ಇನ್ನೊಂದು ಅರ್ಧದ ಪ್ರತಿಬಿಂಬವಾಗಿರುತ್ತದೆ.
01:15 * ನೀವು ಇಮೇಜನ್ನು ಮಡಚಿದಾಗ ಎರಡೂ ಅರ್ಧಗಳು ಸರಿಯಾಗಿ ಹೊಂದಿಕೊಂಡಿರುತ್ತವೆ.
01:20 * ಆಕೃತಿಯು ಯಾವ ಗೆರೆಯ ಮೇಲೆ ಪ್ರತಿಫಲಿಸಿದೆಯೋ ಅದು ‘ಲೈನ್ ಆಫ್ ಸಿಮೆಟ್ರಿ’ ಆಗಿರುತ್ತದೆ.
01:24 ನಾವು ಜಿಯೊಜಿಬ್ರಾ ವಿಂಡೋಗೆ ಬದಲಾಯಿಸೋಣ.
01:27 ಕ್ರಮವಾಗಿ Dash home >> Media Apps >> Type ನ ಅಡಿಯಲ್ಲಿ >> Education ಆರಿಸಿ >> ಮತ್ತು Geogebra ಗೆ ಹೋಗಿ.
01:37 ಈ ಟ್ಯುಟೋರಿಯಲ್ ಗಾಗಿ ನಾನು Algebric view ಅನ್ನು ಮುಚ್ಚುತ್ತೇನೆ (close).
01:40 Algebric view ದ ಮೇಲಿರುವ Close ಬಟನ್ ನ ಮೇಲೆ ಕ್ಲಿಕ್ ಮಾಡಿ.
01:47 ನಾವು ‘ಲೈನ್ ಆಫ್ ಸಿಮೆಟ್ರಿ’ಯೊಂದಿಗೆ ಆರಂಭಿಸೋಣ.
01:50 ಮೊದಲು, ನಾವು ಒಂದು ಸಮಬಾಹು ತ್ರಿಕೋನವನ್ನು ರಚಿಸೋಣ.
01:53 ‘ಟೂಲ್ ಬಾರ್’ನಿಂದ Regular Polygon ಎನ್ನುವ ಟೂಲನ್ನು ಆಯ್ಕೆ ಮಾಡಿ.
01:57 ಡ್ರಾಯಿಂಗ್ ಪ್ಯಾಡ್ ನ ಮೇಲೆ A, B ಎನ್ನುವ ಬಿಂದುಗಳನ್ನು ಕ್ಲಿಕ್ ಮಾಡಿ ಹಾಗೂ ಭುಜಗಳ ಸಂಖ್ಯೆಗಾಗಿ 3 ಎಂದು ನಮೂದಿಸಿ.
02:08 A B C ಎಂಬ ಸಮಬಾಹು ತ್ರಿಕೋನದ ರಚನೆಯಾಗಿದೆ.
02:11 ತ್ರಿಕೋನದ ಒಂದು ಭುಜಕ್ಕೆ ನಾವು ಲಂಬವಾದ ದ್ವಿಭಾಜಕವನ್ನು ರಚಿಸೋಣ.
02:15 Perpendicular Bisector ಟೂಲನ್ನು ಆಯ್ಕೆಮಾಡಿ ಹಾಗೂ AC ಭುಜದ ಮೇಲೆ ಕ್ಲಿಕ್ ಮಾಡಿ.
02:26 Point ಟೂಲನ್ನು ಆಯ್ಕೆಮಾಡಿ ಹಾಗೂ ತ್ರಿಕೋನದ ಒಳಗಡೆ ಒಂದು ಬಿಂದುವನ್ನು (point) ರಚಿಸಿ.
02:31 ಪಾಯಿಂಟ್ D ಯನ್ನು ಯಾವುದೇ ಒಂದು ಶೃಂಗದತ್ತ (vertex) ಜರುಗಿಸಿ.
02:38 ಪಾಯಿಂಟ್ D ಯ ಮೇಲೆ ರೈಟ್-ಕ್ಲಿಕ್ ಮಾಡಿ ಹಾಗೂ Trace On ಅನ್ನು ಆಯ್ಕೆಮಾಡಿ.
02:43 ‘ಟೂಲ್ ಬಾರ್’ನಿಂದ Reflect Object about Line ಎನ್ನುವ ಟೂಲನ್ನು ಆಯ್ಕೆಮಾಡಿ.
02:48 ಪಾಯಿಂಟ್ D ಮೇಲೆ ಕ್ಲಿಕ್ ಮಾಡಿ.
02:49 ಇದು ಪಾಯಿಂಟ್ D ಯನ್ನು ಹೈಲೈಟ್ ಮಾಡುವುದು.
02:52 Perpendicular Bisector ನ ಮೇಲೆ ಕ್ಲಿಕ್ ಮಾಡಿ.
02:55 ಇದು, ಲಂಬವಾದ ದ್ವಿಭಾಜಕದ ಇನ್ನೊಂದು ಬದಿಗೆ, D' ಎನ್ನುವ ಪ್ರತಿಫಲಿತ ಇಮೇಜನ್ನು ಉತ್ಪತ್ತಿ ಮಾಡುವುದು.
03:01 D', ಪಾಯಿಂಟ್ D ಯ ಪ್ರತಿಬಿಂಬವಾಗಿದೆ.
03:04 ಪಾಯಿಂಟ್ D ಗಾಗಿ Trace On ಎನ್ನುವುದನ್ನು ಸೆಟ್ ಮಾಡಿ.
03:08 Move ಟೂಲನ್ನು ಬಳಸಿ, ಪಾಯಿಂಟ್ D ಯನ್ನು ತ್ರಿಕೋನದಗುಂಟ ನಡೆಸೋಣ.
03:11 ‘ಟೂಲ್ ಬಾರ್’ನ Move ಟೂಲ್ನ ಅಡಿಯಲ್ಲಿ, ಮೊದಲನೆಯ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
03:22 ಮೌಸ್ ನಿಂದ ಆಕೃತಿಯ ಮೇಲೆ ಕ್ಲಿಕ್ ಮಾಡಿ.
03:25 ತ್ರಿಕೋನದ ಜಾಡು ಹಿಡಿದು ಅದನ್ನು ಎಳೆಯಿರಿ.
03:28 ಈಗ ಮೌಸ್ನ ಬಟನ್ ಅನ್ನು ಬಿಟ್ಟುಬಿಡಿ.
03:31 ನಿಮಗೆ ಏನು ಕಾಣುತ್ತಿದೆ?
03:32 ಇಲ್ಲಿ ಲಂಬವಾದ ದ್ವಿಭಾಜಕವು (perpendicular bisector) ‘ಲೈನ್ ಆಫ್ ಸಿಮೆಟ್ರಿ’ ಆಗಿದೆ.
03:36 D ಆಬ್ಜೆಕ್ಟ್ ಆಗಿದ್ದು D' ಅದರ ಇಮೇಜ್ ಆಗಿದೆ.
03:39 ನಾವು ಒಂದು ಅರ್ಧವರ್ತುಲವನ್ನು, ಒಂದು ಗೆರೆಯ ಕುರಿತು ಪ್ರತಿಫಲಿಸೋಣ.
03:43 ಒಂದು ಅರ್ಧವರ್ತುಲವನ್ನು ರಚಿಸೋಣ.
03:44 Semicircle through Two points ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. E, ಆನಂತರ F ಎನ್ನುವ ಬಿಂದುಗಳನ್ನು ಗುರುತಿಸಿ.
03:56 Segment between Two Points ಎನ್ನುವುದರ ಮೇಲೆ ಕ್ಲಿಕ್ ಮಾಡಿ.
04:02 G ಹಾಗೂ H ಪಾಯಿಂಟ್ಗಳನ್ನು ಗುರುತಿಸಿ. ಒಂದು ಗೆರೆಯು ಎಳೆಯಲ್ಪಟ್ಟಿದೆ.
04:06 ನಾವು ಈ ಗೆರೆಯ ಗುಣಧರ್ಮಗಳನ್ನು ಬದಲಾಯಿಸೋಣ.
04:08 ಗೆರೆಯ (line) ಮೇಲೆ ರೈಟ್-ಕ್ಲಿಕ್ ಮಾಡಿ. ಕ್ರಮವಾಗಿ Object Properties > Style ಗಳ ಮೇಲೆ ಕ್ಲಿಕ್ ಮಾಡಿ. Style ಅನ್ನು ಬದಲಾಯಿಸಿ.
04:21 ‘ಟೂಲ್ ಬಾರ್’ನಿಂದ Reflect Object about Line ಎನ್ನುವ ಟೂಲನ್ನು ಆಯ್ಕೆಮಾಡಿ.
04:27 EF ಎಂಬ ಅರ್ಧವರ್ತುಲದ ಮೇಲೆ ಕ್ಲಿಕ್ ಮಾಡಿ.
04:31 GH ರೇಖೆಯ ಮೇಲೆ ಕ್ಲಿಕ್ ಮಾಡಿ.
04:34 ಇದು, GH ರೇಖೆಯ ಇನ್ನೊಂದು ಬದಿಗೆ E'F' ಎನ್ನುವ ಪ್ರತಿಫಲಿತ ಇಮೇಜನ್ನು ಉತ್ಪತ್ತಿ ಮಾಡುವುದು. ಈಗ ಆಕೃತಿಯು ಏನನ್ನು ಹೋಲುತ್ತದೆ? ಇದು ಒಂದು ವರ್ತುಲದ ಹಾಗೆ ಕಾಣುತ್ತದೆ.
04:45 ಈಗ, ಈ ಫೈಲನ್ನು ನಾವು ಸೇವ್ ಮಾಡೋಣ.
04:47 ಕ್ರಮವಾಗಿ File >> Save As ಗಳ ಮೇಲೆ ಕ್ಲಿಕ್ ಮಾಡಿ.
04:50 ಫೈಲ್ ನ ಹೆಸರನ್ನು ನಾನು Line-symmetry ಎಂದು ಟೈಪ್ ಮಾಡಿ Save ನ ಮೇಲೆ ಕ್ಲಿಕ್ ಮಾಡುವೆನು.
05:05 ನಂತರ, Rotate the Object around a Point by Angle ಎನ್ನುವುದರ ಬಗ್ಗೆ ತಿಳಿಯೋಣ.
05:12 ರೊಟೇಶನ್ (Rotation) ನ ವ್ಯಾಖ್ಯಾನ.
05:15 ರೊಟೇಶನ್ (ತಿರುಗುವಿಕೆ) ಎನ್ನುವುದು ಒಂದು ಆಕೃತಿಯನ್ನು, ನಿಶ್ಚಿತ ಕೇಂದ್ರದ ಸುತ್ತ, ಕೋನವನ್ನು ಮಾಡಿ ತಿರುಗಿಸುವ ಒಂದು ಪರಿವರ್ತನೆ ಆಗಿದೆ.
05:21 ಒಂದುವೇಳೆ, ಆಕೃತಿಯು ಮೊದಲಿನಂತೆಯೇ ಕಾಣಿಸಿದರೆ, ಆಗ ಅದು ‘ರೊಟೇಶನ್ ಸಿಮೆಟ್ರಿ’ಯನ್ನು ಹೊಂದಿರುತ್ತದೆ.
05:29 ನೀವು ಆಬ್ಜೆಕ್ಟ್ ಅನ್ನು ಎಷ್ಟು ಡಿಗ್ರೀಗಳಾದರೂ ತಿರುಗಿಸಬಹುದು. ರೊಟೇಶನ್, ಕ್ಲಾಕ್‌ವೈಸ್ ಅಥವಾ ಆಂಟಿ- ಕ್ಲಾಕ್‌ವೈಸ್ ಆಗಿರಬಹುದು.
05:39 ನಾವು ಒಂದು ಹೊಸ ಜಿಯೊಜಿಬ್ರಾ ವಿಂಡೋವನ್ನು ತೆರೆಯೋಣ.
05:41 ಕ್ರಮವಾಗಿ File >> New ಮೇಲೆ ಕ್ಲಿಕ್ ಮಾಡಿ.
05:47 ನಾವು ಒಂದು ಚೌಕೋನವನ್ನು ರಚಿಸೋಣ.
05:49 ‘ಟೂಲ್ ಬಾರ್’ನಲ್ಲಿಯ Regular Polygon ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ.
05:55 ಡ್ರಾಯಿಂಗ್ ಪ್ಯಾಡ್ ನ ಮೇಲೆ ಕ್ಲಿಕ್ ಮಾಡಿ.
05:57 A ಹಾಗೂ B ಎನ್ನುವ ಬಿಂದುಗಳನ್ನು ಗುರ್ತಿಸಿ.
05:59 ಒಂದು ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
06:01 OK ಯ ಮೇಲೆ ಕ್ಲಿಕ್ ಮಾಡಿ.
06:03 ABCD ಚೌಕೋನವು ರಚಿತವಾಗಿದೆ.
06:05 Rotate Object around a Point by Angle ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ.
06:13 ABCD ಚೌಕೋನದ ಮೇಲೆ ಕ್ಲಿಕ್ ಮಾಡಿ.
06:16 ಇದು ಚೌಕೋನವನ್ನು ಹೈಲೈಟ್ ಮಾಡುವುದು.
06:18 ನಂತರ ‘ವರ್ಟೈಸಿಸ್’ ಗಳಲ್ಲಿ ಯಾವುದೇ ಒಂದರ ಮೇಲೆ ಕ್ಲಿಕ್ ಮಾಡಿ.
06:20 ನಾನು A ದ ಮೇಲೆ ಕ್ಲಿಕ್ ಮಾಡುವೆನು.
06:23 ಒಂದು ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
06:25 Angle ಫೀಲ್ಡ್ ನಲ್ಲಿ 60 ಎಂದು ಟೈಪ್ ಮಾಡಿ.
06:30 ಮೊದಲನೆಯ ಡ್ರಾಪ್-ಡೌನ್ ಲಿಸ್ಟ್ ನಿಂದ ° (Degree) ಯನ್ನು ಆಯ್ಕೆಮಾಡಿ.
06:35 Clockwise ಎನ್ನುವ ಆಯ್ಕೆಯನ್ನು ಆರಿಸಿಕೊಳ್ಳಿ. OK ಯ ಮೇಲೆ ಕ್ಲಿಕ್ ಮಾಡಿ.
06:40 ಇದು, ಆಯ್ಕೆಮಾಡಿದ ಬಿಂದುವಿನಲ್ಲಿ, ಚೌಕವನ್ನು 60° ಕೋನದೊಂದಿಗೆ ಕ್ಲಾಕ್‌ವೈಸ್ ಆಗಿ ತಿರುಗಿಸುವುದು.
06:44 A`B`C`D` ಎನ್ನುವ, ತಿರುಗಿಸಲ್ಪಟ್ಟ ಇಮೇಜ್, ರೂಪುಗೊಂಡಿದೆ.
06:49 ನಾವು Move ಟೂಲನ್ನು ಬಳಸಿ ಈ ಆಕೃತಿಯನ್ನು ಬದಿಗೆ ಸರಿಸೋಣ.
07:00 ನಂತರ, ನಾವು Dilate or enlarge object from point by factor ಎನ್ನುವುದರ ಬಗ್ಗೆ ತಿಳಿಯೋಣ.
07:09 ಡೈಲೇಷನ್:
07:11 ಡೈಲೇಷನ್ ಅಥವಾ ಹಿಗ್ಗುವಿಕೆಯು ಒಂದು ರೂಪಾಂತರವಾಗಿದೆ.
07:14 ಇದರಲ್ಲಿ, ‘ಸ್ಕೇಲ್ ಫ್ಯಾಕ್ಟರ್’ ಎನ್ನುವುದನ್ನು ಬಳಸಿ, ಒಂದು ಆಕೃತಿಯನ್ನು ಹಿಗ್ಗಿಸಲಾಗುತ್ತದೆ.
07:23 Polygon ಟೂಲನ್ನು ಬಳಸಿ ನಾವು ಒಂದು ತ್ರಿಕೋನವನ್ನು ರಚಿಸೋಣ.
07:28 E , F , G. ತ್ರಿಕೋನವನ್ನು ಪೂರ್ಣಗೊಳಿಸಲು ಮತ್ತೊಮ್ಮೆ E ಬಿಂದುವಿನ ಮೇಲೆ ಕ್ಲಿಕ್ ಮಾಡಿ.
07:36 New Point ಟೂಲ್ನ ಮೇಲೆ ಕ್ಲಿಕ್ ಮಾಡಿ ಮತ್ತು
07:40 H ಎನ್ನುವ ಬಿಂದುವನ್ನು ಗುರುತಿಸಿ.
07:44 Dilate Object from Point by Factor ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ.
07:51 EFG ತ್ರಿಕೋನದ ಮೇಲೆ ಕ್ಲಿಕ್ ಮಾಡಿ.
07:54 ಇದು ತ್ರಿಕೋನವನ್ನು ಹೈಲೈಟ್ ಮಾಡುವುದು.
07:55 'H' ಬಿಂದುವಿನ ಮೇಲೆ ಕ್ಲಿಕ್ ಮಾಡಿ.
07:57 ಒಂದು ‘ಡೈಲಾಗ್ ಬಾಕ್ಸ್’ ತೆರೆದುಕೊಳ್ಳುತ್ತದೆ.
08:00 Number ಎನ್ನುವ ಫೀಲ್ಡ್ ನಲ್ಲಿ 2 ಎಂದು ಟೈಪ್ ಮಾಡಿ.
08:04 OK ಯ ಮೇಲೆ ಕ್ಲಿಕ್ ಮಾಡಿ.
08:09 ಇದು ಆಬ್ಜೆಕ್ಟ್ ಅನ್ನು ಎರಡರಷ್ಟು ಡೈಲೇಟ್, ಎಂದರೆ ದೊಡ್ಡದನ್ನಾಗಿ ಮಾಡುವುದು.
08:16 Segment between Two Points ಎನ್ನುವುದರ ಮೇಲೆ ಕ್ಲಿಕ್ ಮಾಡಿ, H, E, E' ಬಿಂದುಗಳನ್ನು ಸೇರಿಸಿ.
08:33 H, G, G' ಈ ಬಿಂದುಗಳನ್ನು ಸೇರಿಸಿ.
09:01 H, F, F' ಈ ಬಿಂದುಗಳನ್ನು ಸೇರಿಸಿ.
09:15 ಇಲ್ಲಿ H, ಡೈಲೇಶನ್ ನ ಬಿಂದುವಾಗಿದೆ ಎನ್ನುವುದನ್ನು ನೀವು ನೋಡಬಹುದು.
09:21 Factor ನ ವ್ಯಾಲ್ಯೂವನ್ನು ಟೈಪ್ ಮಾಡುವುದರ ಮೂಲಕ ನಿಮಗೆ ಬೇಕಾದಷ್ಟು ಸಲ ನೀವು ಆಬ್ಜೆಕ್ಟ್ ಅನ್ನು ದೊಡ್ಡದನ್ನಾಗಿ ಮಾಡಬಹುದು.
09:28 ಈಗ, ಈ ಫೈಲನ್ನು ನಾವು ಸೇವ್ ಮಾಡೋಣ.
09:30 ಕ್ರಮವಾಗಿ File >> Save As ಇವುಗಳ ಮೇಲೆ ಕ್ಲಿಕ್ ಮಾಡಿ.
09:33 ಫೈಲ್ ನ ಹೆಸರನ್ನು ನಾನು Dilate-triangle ಎಂದು ಟೈಪ್ ಮಾಡುವೆನು.
09:48 Save ನ ಮೇಲೆ ಕ್ಲಿಕ್ ಮಾಡುತ್ತೇನೆ. ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
09:55 ಸಂಕ್ಷಿಪ್ತವಾಗಿ,
09:58 ಈ ಟ್ಯುಟೋರಿಯಲ್ ನಲ್ಲಿ ನಾವು,
10:00 * ಒಂದು ಗೆರೆಯ ಕುರಿತು ಪ್ರತಿಫಲನ
10:02 * ಒಂದು ಬಿಂದುವಿನಲ್ಲಿ, ಒಂದು ಆಬ್ಜೆಕ್ಟ್ ನ ತಿರುಗುವಿಕೆ
10:05 * ಕೊಟ್ಟ ಪ್ರಮಾಣದಲ್ಲಿ ಒಂದು ಆಬ್ಜೆಕ್ಟ್ ಅನ್ನು ದೊಡ್ಡದು ಮಾಡುವಿಕೆ ಇತ್ಯಾದಿಗಳನ್ನು ಕಲಿತಿದ್ದೇವೆ.
10:09 ನಿಮಗಾಗಿ ಒಂದು ಅಸೈನ್ಮೆಂಟ್ ಇದೆ:
10:11 ಒಂದು ಪಂಚಕೋನವನ್ನು ರಚಿಸಿ.
10:12 ಇದನ್ನು ಮಾಡಲು Regular Polygon ಟೂಲನ್ನು ಬಳಸಿ. (ಸೂಚನೆ: ಭುಜಗಳು=೫)
10:17 ಪಂಚಕೋನದ ಯಾವುದೇ ಒಂದು ಭುಜಕ್ಕೆ ‘ಪರ್ಪೆಂಡಿಕ್ಯುಲರ್ ಬೈಸೆಕ್ಟರ್’ (ಲಂಬವಾದ ದ್ವಿಭಾಜಕ) ಅನ್ನು ರಚಿಸಿ.
10:21 ಪಂಚಕೋನದ ಒಳಗೆ ಒಂದು ಬಿಂದುವನ್ನು ರಚಿಸಿ.
10:25 ಈ ಬಿಂದುವಿಗಾಗಿ Trace On ಅನ್ನು ಸೆಟ್ ಮಾಡಿ.
10:27 ‘ಪರ್ಪೆಂಡಿಕ್ಯುಲರ್ ಬೈಸೆಕ್ಟರ್’ನ ಇನ್ನೊಂದು ಬದಿಗೆ ಈ ಬಿಂದುವಿನ ಪ್ರತಿಬಿಂಬವನ್ನು ಪಡೆಯಿರಿ.
10:31 ಈ ‘ಇಮೇಜ್ ಪಾಯಿಂಟ್’ ಗಾಗಿ Trace On ಅನ್ನು ಸೆಟ್ ಮಾಡಿ.
10:34 ನೀವು ಸರಿಯಾದ ‘ಲೈನ್ ಆಫ್ ಸಿಮೆಟ್ರಿ’ಯನ್ನು ಆಯ್ಕೆಮಾಡಿದ್ದೀರೋ ಹೇಗೆ ಎಂದು ನೋಡಲು ಪಂಚಕೋನವನ್ನು ಟ್ರೇಸ್ ಮಾಡಿ.
10:44 ಮೂಲ ಪಂಚಕೋನವನ್ನು ಒಂದು ಬಿಂದುವಿನಲ್ಲಿ 135° (ನೂರಮೂವತ್ತೈದು ಅಂಶಗಳು) ಕೌಂಟರ್ ಕ್ಲಾಕ್ವೈಸ್ ಆಗಿ ತಿರುಗಿಸಿ.
10:49 ಪಂಚಕೋನವನ್ನು ಒಂದು ಬಿಂದುವಿನಲ್ಲಿ ಮೂರುಪಟ್ಟು ಹಿಗ್ಗಿಸಿ.
10:56 ಅಸೈನ್ಮೆಂಟ್, ಹೀಗೆ ಕಾಣಿಸಬೇಕು.
11:03 ಈ URL ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.
11:06 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ.
11:09 ನಿಮಗೆಒಳ್ಳೆಯ ‘ಬ್ಯಾಂಡ್‌ವಿಡ್ಥ್’ ಸಿಗದಿದ್ದರೆ ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
11:12 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ತಂಡವು: ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
11:17 ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
11:20 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ. contact@spoken-tutorial.org
11:26 “ ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು “ಟಾಕ್ ಟು ಎ ಟೀಚರ್” ಎನ್ನುವ ಪ್ರಕಲ್ಪದ ಒಂದು ಭಾಗವಾಗಿದೆ.
11:29 ಇದು ICT, MHRD ಮೂಲಕ ಭಾರತ ಸರ್ಕಾರದ ರಾಷ್ಟ್ರೀಯ ಸಾಕ್ಷರತಾ ಮಿಷನ್ ನ ಆಧಾರವನ್ನು ಪಡೆದಿದೆ.
11:35 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ.
11:39 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ---------- .

ವಂದನೆಗಳು

Contributors and Content Editors

Sandhya.np14