Geogebra/C2/Spreadsheet-View-Basics/Kannada

From Script | Spoken-Tutorial
Jump to: navigation, search
Time Narration
00:01 ನಮಸ್ಕಾರ. Geogebra ದ Basics of Spreadsheets ( ಬೇಸಿಕ್ಸ್ ಆಫ್ ಸ್ಪ್ರೆಡ್‌ಶೀಟ್ಸ್) ಎನ್ನುವ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:05 ನೀವು ಇದೇ ಮೊದಲಬಾರಿಗೆ Geogebra ಅನ್ನು ಬಳಸುತ್ತಿದ್ದರೆ, ದಯವಿಟ್ಟು spoken tutorial ವೆಬ್ಸೈಟ್ ಮೇಲಿನ Introduction to Geogebra ಎನ್ನುವ ಟ್ಯುಟೋರಿಯಲ್ ಅನ್ನು ನೋಡಿ.
00:12 Geogebra ಆರಂಭಿಸಲು, ನಾನು GNU/Linux operating system Ubuntu Version 10.04 LTS ಹಾಗೂ Geogebra Version 3.2.40.0 ಗಳನ್ನು ಬಳಸುತ್ತಿದ್ದೇನೆ.
00:23 ಜಿಯೊಜಿಬ್ರಾದಲ್ಲಿ Spreadsheet (ಸ್ಪ್ರೆಡ್‌ಶೀಟ್) ಅನ್ನು ಹೇಗೆ ಉಪಯೋಗಿಸುವುದೆಂದು ನೋಡುವುದು ಈ ಟ್ಯುಟೋರಿಯಲ್ ನ ಉದ್ದೇಶವಾಗಿದೆ.
00:29 ಈ ಟ್ಯುಟೋರಿಯಲ್ ನಲ್ಲಿ, ಮೂಲಭೂತ (basic) ಡೇಟಾ ನಿರೂಪಣೆ ಹಾಗೂ ಲೆಕ್ಕಾಚಾರಗಳನ್ನು ಮಾಡಿತೋರಿಸಲು, ನಾವು ಸ್ಪ್ರೆಡ್‌ಶೀಟ್ ಅನ್ನು ಬಳಸುವೆವು;
00:36 ಮತ್ತು ಡೇಟಾವನ್ನು ಒಂದು ಹಿಸ್ಟೋಗ್ರಾಮ್, ರಚಿಸಲು ಬಳಸುವೆವು.
00:39 ಸಮಾನಾಂತರ ರೇಖೆಗಳ ಒಂದು ಗುಂಪನ್ನು ರಚಿಸುವ ಹಾಗೆ, ಪುನರಾವರ್ತಿಸುವ ಜಿಯೊಜಿಬ್ರಾ ‘ಆಬ್ಜೆಕ್ಟ್’ಗಳನ್ನು ರಚಿಸಲು, ಸ್ಪ್ರೆಡ್‌ಶೀಟ್ ವ್ಯೂ ಅನ್ನು ಹೇಗೆ ಬಳಸಬಹುದೆಂದು ಸಹ ನಾವು ನೋಡುವೆವು.
00:49 ಮೊದಲು, 50 ಅಂಕಗಳ ಟೆಸ್ಟ್ ನಲ್ಲಿ ನಾವು 50 ವಿದ್ಯಾರ್ಥಿಗಳ ಅಂಕಗಳನ್ನು ಉಪಯೋಗಿಸುವೆವು.
00:53 'From' ಹಾಗೂ 'To' ಕ್ಲಾಸ್ ಬೌಂಡರಿಗಳು ಮತ್ತು 'Frequency', ಇಲ್ಲಿ ಲಭ್ಯವಿರುತ್ತವೆ.
00:59 ನಾನು Frequency ಯನ್ನು ಕ್ಲಿಪ್-ಬೋರ್ಡ್ ನ ಮೇಲೆ ಕಾಪಿ ಮಾಡುವವನಿದ್ದೇನೆ.
01:05 ಈಗ Geogebra ವಿಂಡೋ ಗೆ ಹೋಗೋಣ.
01:09 ಮೊಟ್ಟಮೊದಲು, ಸ್ಪ್ರೆಡ್‌ಶೀಟ್ ವ್ಯೂ ಕಾಣುವಂತೆ ಮಾಡಬೇಕು.
01:13 ಮೆನು ಐಟಂ View ಅನ್ನು ಆಯ್ಕೆಮಾಡಿ ಮತ್ತು Spreadsheet View ಅನ್ನು ಚೆಕ್ ಮಾಡಿ.
01:19 ‘ಸ್ಪ್ರೆಡ್‌ಶೀಟ್ ವ್ಯೂ’ಅನ್ನು ಇಲ್ಲಿಗೆ ಜರುಗಿಸೋಣ.
01:25 ಮೊದಲನೆಯ ಕಾಲಂ A, From ಎನ್ನುವ ಕ್ಲಾಸ್ ಬೌಂಡರಿಯನ್ನು, ಕಾಲಂ B, To ಅನ್ನು ಮತ್ತು ಕಾಲಂ C, Frequency ಯನ್ನು ಪ್ರತಿನಿಧಿಸುತ್ತವೆ.
01:36 ಈಗ, ನಾನು Frequency ಯನ್ನು ಕಾಪಿ ಮಾಡಿದ್ದೇನೆ; ಅದನ್ನು ಇಲ್ಲಿ ಪೇಸ್ಟ್ ಮಾಡುತ್ತೇನೆ.
01:41 ಈಗ, 'From' ಮತ್ತು'To' ವ್ಯಾಲ್ಯೂಗಳಿಗಾಗಿ,
01:46 ನಾನು ಇವುಗಳನ್ನು ಪೇಸ್ಟ್ ಮಾಡಲಿಲ್ಲ ಏಕೆಂದರೆ ನಾನು ನಿಮಗೆ ‘ಜಿಯೊಜಿಬ್ರಾ ಸ್ಪ್ರೆಡ್‌ಶೀಟ್ಸ್’ ನ ಬೇರೊಂದು ವೈಶಿಷ್ಟ್ಯವನ್ನು ತೋರಿಸುವೆನು.
01:53 ಮೊದಲು, ನಾನು 0 (ಸೊನ್ನೆ) ಯೊಂದಿಗೆ ಆರಂಭಿಸುವೆನು.
01:59 ಆಮೇಲೆ 5, 5
02:04 ಮತ್ತು 10.
02:06 ಈಗ, ನಾನು ಇಲ್ಲಿಯ ಈ ಎರಡು ಸೆಲ್ ಗಳನ್ನು ಆಯ್ಕೆಮಾಡಿ, ಆಮೇಲೆ ಈ ನೀಲಿಯ ಚೌಕವನ್ನು (blue square) ಕೆಳಗಿನವರೆಗೆ ಎಳೆದುತಂದರೆ ಒಂದು ‘ಅರಿಥ್ಮೆಟಿಕ್ ಪ್ರೊಗ್ರೆಶನ್’ ತಯಾರಾಗಿದೆ ಎನ್ನುವುದನ್ನು ಗಮನಿಸಿ.
02:16 ಹೀಗೆಯೇ, ನಾನು ಅದನ್ನು 'To' ಎನ್ನುವ ವ್ಯಾಲ್ಯೂಗಳಿಗಾಗಿ ಮಾಡಬಹುದು.
02:22 ನಾವು ‘ಕ್ಲಾಸ್ ಬೌಂಡರಿ’ ಲಿಸ್ಟ್ ಹಾಗೂ ‘ಫ್ರಿಕ್ವೆನ್ಸಿ’ ಲಿಸ್ಟ್ಗಳನ್ನು ತಯಾರಿಸೋಣ. ಅದನ್ನು ಮಾಡಲು, ಇಲ್ಲಿ, ‘ಕಾಲಂ B’ಯನ್ನು ಆಯ್ಕೆಮಾಡಿ.
02:30 ರೈಟ್-ಕ್ಲಿಕ್ ಮಾಡಿ, Create List ಅನ್ನು ಒತ್ತಿ. ಇಲ್ಲಿ L1ಅನ್ನು ಗಮನಿಸಿ. ಎಂದರೆ L_1 ತಯಾರಾಗಿದೆ.
02:40 ರೈಟ್-ಕ್ಲಿಕ್ ಮಾಡುವ ಮೂಲಕ ನಾವು ಇದನ್ನು ಕೇವಲ ಮಾರ್ಪಡಿಸಬೇಕು; Object properties ಪರಿಶೀಲಿಸಿ, ಇಲ್ಲಿ ಮೊದಲನೆಯ ವ್ಯಾಲ್ಯೂ ಸೊನ್ನೆ ಇರುವ ಹಾಗೆ ಖಚಿತಪಡಿಸಿಕೊಳ್ಳಬೇಕು.
02:53 ಮತ್ತು Close ಅನ್ನು ಒತ್ತಿ.
02:57 ಈಗ, ‘Frequency' ಲಿಸ್ಟ್ ಗಾಗಿ ಇದನ್ನೇ ಮಾಡಿ. Frequency ಯನ್ನು ಆಯ್ಕೆಮಾಡಿ, ರೈಟ್-ಕ್ಲಿಕ್ ಮಾಡಿ ಹಾಗೂ Create List ಅನ್ನು ಒತ್ತಿ.
03:04 ನನಗೆ L_2 ಸಿಕ್ಕಿದೆ.
03:09 ಈಗ, ಹಿಸ್ಟೋಗ್ರಾಮ್ ಅನ್ನು ತಯಾರಿಸಲು, ಇಲ್ಲಿ Input ಬಾರ್ ಗೆ ಹೋಗಿ.
03:15 ನೀವು ಇಲ್ಲಿ commands ನಿಂದ ಆರಿಸಿಕೊಳ್ಳಬಹುದು ಅಥವಾ ಕೇವಲ “histogram” ಎಂದು ಟೈಪ್ ಮಾಡಬಹುದು.
03:22 ಈಗ, ಇಲ್ಲಿ, ಚೌಕ ಬ್ರಾಕೆಟ್ಗಳ ನಡುವೆ, ನೀವು Enter ಅನ್ನು ಒತ್ತಿದರೆ ಅದು ನಿಮಗೆ ವಿಭಿನ್ನ ಆಯ್ಕೆಗಳನ್ನು ಕೊಡುತ್ತದೆ.
03:28 List of Class Boundaries and List of Raw Data ಎನ್ನುವುದು ಇವುಗಳಲ್ಲಿ ಒಂದು ಆಯ್ಕೆಯಾಗಿದೆ. ನಾವು ಅದನ್ನು ಬಳಸೋಣ.
03:35 ಜಿಯೊಜಿಬ್ರಾ ಕೇಸ್ ಸೆನ್ಸಿಟಿವ್ ಆಗಿದೆ. ನಾನು, ಕ್ಲಾಸ್ ಬೌಂಡರಿ ಗಳಿಗಾಗಿ L_1 ಅನ್ನು ಮತ್ತು ‘ಫ್ರಿಕ್ವೆನ್ಸಿ’ಗಳಿಗಾಗಿ L_2 ಅನ್ನು ಆಯ್ದುಕೊಂಡು Enter ಅನ್ನು ಒತ್ತುತ್ತೇನೆ.
03:47 ಇಲ್ಲಿ ಹಿಸ್ಟೋಗ್ರಾಮ್ ತಯಾರಾಗಿದೆ ಎನ್ನುವುದನ್ನು ಗಮನಿಸಿ.
03:52 ಈಗ. ಹಿಸ್ಟೋಗ್ರಾಮ್ ಅನ್ನು ಸರಿಯಾಗಿ ಕಾಣುವಂತೆ ಅಥವಾ ಸುಲಭವಾಗಿ ಓದುವಂತೆ ಮಾಡಲು ನಾನು Move Drawing Pad ಅನ್ನು ಬಳಸುವೆನು. ಆಮೇಲೆ ಇಲ್ಲಿ Drawing Pad properties ನ ಮೇಲೆ ರೈಟ್-ಕ್ಲಿಕ್ ಸಹ ಮಾಡಿ ಈ Distance ಅನ್ನು 5 (ಐದು) ಕ್ಕೆ ಬದಲಾಯಿಸುವೆನು. ಪ್ರತಿಯೊಂದು ಬಾರ್ ನ ಅಗಲ 5 (ಐದು) ಆಗಿದೆ. ನಂತರ Close ಅನ್ನು ಒತ್ತುವೆನು.
04:15 ಆಗ ನಾನು Zoom Out ಮಾಡಬಹುದು.
04:22 ಮತ್ತೊಮ್ಮೆ Move Drawing Pad ಅನ್ನು ಒತ್ತಿ.
04:28 ನಾನು ಹಿಸ್ಟೋಗ್ರಾಮ್ ಅನ್ನು ತಯಾರಿಸಿದಾಗ, ಅದು a=250 ಎಂದು ಸೃಷ್ಟಿಸುತ್ತದೆ ಎಂದು ಗಮನಿಸಿ.
04:34 'a' ಎನ್ನುವುದು ಪ್ರತಿಯೊಂದು ಬಾರ್ ನ ಉದ್ದ ಮತ್ತು ಅಗಲಗಳ, ಗುಣಲಬ್ಧಗಳ, ಮೊತ್ತವಾಗಿದೆ.
04:41 ನಾನು ಈ 'a' ವ್ಯಾಲ್ಯೂವನ್ನು ಇಲ್ಲಿ, ಮೇಲೆ ಸರಿಸುತ್ತೇನೆ.
04:49 ಮುಂದಿನ ಹಂತವು, Y ಆಕ್ಸಿಸ್ ಗೆ ಸಮಾನಾಂತರವಾಗಿರುವ ಗೆರೆಗಳ ಸಮೂಹವನ್ನು ಪಡೆಯಲು, ‘ಸ್ಪ್ರೆಡ್‌ಶೀಟ್ ವ್ಯೂ’ನಲ್ಲಿ ಬಿಂದು ಮತ್ತು ರೇಖೆಗಳನ್ನು ರಚಿಸುವುದಾಗಿದೆ.
04:56 ನಾನು ಒಂದು ಹೊಸ Geogebra ವಿಂಡೋ ತೆಗೆದುಕೊಳ್ಳುತ್ತೇನೆ.
05:02 ಈಗ, ಜಿಯೊಜಿಬ್ರಾದ ಯಾವುದೇ ಕಮಾಂಡ್ ಅನ್ನು ಇಲ್ಲಿ, ಸೆಲ್ ನಲ್ಲಿ, ಟೈಪ್ ಮಾಡಬಹುದು.
05:07 ಮೊದಲು, ಒಂದು ಬಿಂದುವನ್ನು ರಚಿಸಲು, ನೀವು ಹೀಗೆ ಒಂದು ಬಿಂದುವನ್ನು ಕೊಡಬೇಕು.
05:19 ಇಲ್ಲಿ, ಬಿಂದುವು, A1 ಎನ್ನುವ ಹೆಸರಿನಿಂದ ಕಾಣಿಸಿಕೊಳ್ಳುತ್ತದೆ ಎಂದು ಗಮನಿಸಿ. ಇದು ‘ಕಾಲಂ A’, ರೋ (ಸಾಲು) 1. ಇದು 1,2 ನಿರ್ದೇಶಾಂಕಗಳನ್ನು (coordinates) ಹೊಂದಿದ ಸೆಲ್ ನ ಅಡ್ರೆಸ್ ಆಗಿದೆ.
05:34 ಹೀಗೆಯೇ, ನಾನು ಇಲ್ಲಿ 2, 2 ಎಂದು ಟೈಪ್ ಮಾಡಿ Enter ಅನ್ನು ಒತ್ತಬಹುದು. ನನಗೆ A2 ಸಿಗುತ್ತದೆ.
05:45 ಈಗ, ನಾನು ಈ ಎರಡು ಸೆಲ್ ಗಳನ್ನು ಆಯ್ಕೆಮಾಡಿ ನಂತರ ನೀಲಿ ಚೌಕವನ್ನು ಕೆಳಗೆ ಎಳೆದರೆ,
05:54 ಇದನ್ನು ನಾನು ಇಲ್ಲಿ ಸರಿಸುತ್ತೇನೆ.
05:56 ಈ ಟ್ಯುಟೋರಿಯಲ್ ಗಾಗಿ, ನಾನು Algebra view ಅನ್ನು ಮುಚ್ಚುವೆನು (close).
06:02 ನನಗೆ ಇಲ್ಲಿ 10 ಬಿಂದುಗಳು ಸಿಗುತ್ತವೆ ಎಂದು ಗಮನಿಸಿ.
06:08 ಮತ್ತು ಹೀಗೆಯೇ ಕಾಲಂ B ಯಲ್ಲಿ,
06:16 1,4 ಅನ್ನು ಬಿಂದುವಿನಂತೆ ಟೈಪ್ ಮಾಡುತ್ತೇನೆ. ನನಗೆ ಇಲ್ಲಿ ಈ ಬಿಂದು ಸಿಗುತ್ತದ. ನಾನು ರೈಟ್-ಕ್ಲಿಕ್ ಮಾಡಿ Show Label ಎನ್ನಬಹುದು. ಅದು B1 ಎಂದು ಸೆಲ್ ನ ಅಡ್ರೆಸ್ ಅನ್ನು ತೋರಿಸುತ್ತದೆ.
06:28 ನಾನು 2, 4 ಎಂದು ಟೈಪ್ ಮಾಡಬಹುದು
06:35 ಮತ್ತು ನನಗೆ B2 ಸಿಗುತ್ತದೆ.
06:41 ನಾನು ಇದನ್ನು ಮತ್ತೊಮ್ಮೆ ಎಳೆಯಬಹುದು, ಆಗ ನನಗೆ ಇಲ್ಲಿ ಹತ್ತು ಬಿಂದುಗಳು ಸಿಗುತ್ತವೆ.
06:48 ಈಗ ಮೂರನೆಯ ಕಾಲಂನಲ್ಲಿ, ನನಗೆ ರೇಖೆಯನ್ನು (line segment) ರಚಿಸಬೇಕಾಗಿದ್ದರೆ,
06:56 ನಾನು Segment ಎನ್ನುವ ಜಿಯೊಜಿಬ್ರಾ ಕಮಾಂಡನ್ನು ಬಳಸಬಹುದು ಮತ್ತು Value ನಲ್ಲಿ, ಸೆಲ್ ಅಡ್ರೆಸ್ A1 ಅನ್ನು ಕೊಡಬಹುದು.
07:08 ಇದನ್ನು ನಾನು ಇಲ್ಲಿ ಸರಿಸುತ್ತೇನೆ,
07:12 ,(comma) B1 ಹಾಗೂ Enter ಅನ್ನು ಒತ್ತಿ.
07:17 ಇದು A1 ಮತ್ತು B1ಗಳ ನಡುವಿನ ಗೆರೆಯ ಉದ್ದಳತೆಯಾಗಿದೆ.
07:23 ಈಗ ನಾನು ಈ ಸೆಲ್ ಅನ್ನು ಆಯ್ಕೆಮಾಡಿ ಕೆಳಗಡೆಗೆ ಎಳೆಯಲು ಸಾಧ್ಯವಿದೆ. ನನಗೆ 10 ಸಮಾನಾಂತರ ರೇಖೆಗಳ ಸಮೂಹವು ಸಿಗುತ್ತದೆ.
07:33 ಗಮನಿಸಬೇಕಾದ ಇನ್ನೊಂದು ಅಂಶವೆಂದರೆ, ನೀವು Options ಮತ್ತು Algebra ಗಳಿಗೆ ಹೋದರೆ,
07:40 ಸಧ್ಯಕ್ಕೆ ಇದು Value ಎನ್ನುವಲ್ಲಿ ಇದೆ. ಹೀಗಾಗಿ ನೀವು ಗೆರೆಯ ಉದ್ದಳತೆಯನ್ನು ಕಾಲಂ C ಯಲ್ಲಿ ನೋಡುತ್ತಿರುವಿರಿ.
07:44 ನಾನು ಇದನ್ನು Command ಗೆ ಬದಲಾಯಿಸಬಹುದು ಹಾಗೂ ಇದು ನನಗೆ ‘ಕಮಾಂಡ್’ಅನ್ನು ತೋರಿಸುವುದು.
07:51 ಈಗ ಅಸೈನ್ಮೆಂಟ್ ಮಾಡಲು,
07:55 ಮೊದಲನೆಯ ಅಸೈನ್ಮೆಂಟ್ ನಲ್ಲಿ: ಮನೆ ಹಾಗೂ ಶಾಲೆಗಳ ನಡುವಿನ ದೂರದ ಈ ಕೆಳಗಿನ ಡೇಟಾವನ್ನು ಬಳಸಿ, 35 ವಿದ್ಯಾರ್ಥಿಗಳ ವರ್ಗಕ್ಕಾಗಿ ಒಂದು ಹಿಸ್ಟೋಗ್ರಾಮ್ ಅನ್ನು ತಯಾರಿಸಿ.
08:04 ಇಲ್ಲಿ ನನ್ನ ಹತ್ತಿರ ‘ಕ್ಲಾಸ್ ಬೌಂಡರಿ’ಗಳು ಹಾಗೂ ‘ಫ್ರಿಕ್ವೆನ್ಸಿ’ಗಳು ಇರುತ್ತವೆ.
08:09 ‘ಡೇಟಾ’ವನ್ನು ಪ್ರತಿನಿಧಿಸಲು, ‘ಸ್ಪ್ರೆಡ್‌ಶೀಟ್ ವ್ಯೂ’ಅನ್ನು ಬಳಸಿ.

ಕ್ಲಾಸ್ ಬೌಂಡರಿ (Class boundary) ಹಾಗೂ ಫ್ರಿಕ್ವೆನ್ಸಿಗಳ (Frequency) ಲಿಸ್ಟನ್ನು ತಯಾರಿಸಿ.

08:15 ಲಿಸ್ಟ್ ಗಳಿಂದ ಹಿಸ್ಟೋಗ್ರಾಮ್ ಅನ್ನು ತಯಾರಿಸಲು, Input ಬಾರ್ ಅನ್ನು ಬಳಸಿ.
08:18 ಫ್ರಿಕ್ವೆನ್ಸಿಯನ್ನು ಬದಲಾಯಿಸಿ ಮತ್ತು ಹಿಸ್ಟೋಗ್ರಾಮ್ ನಲ್ಲಿಯ ಬದಲಾವಣೆಯನ್ನು ಗಮನಿಸಿ.
08:22 ನಾನು ಇಲ್ಲಿ ಈ ಟ್ಯುಟೋರಿಯಲ್ ಅನ್ನು ಈಗಾಗಲೇ ತಯಾರಿಸಿದ್ದೇನೆ.
08:26 ಇಲ್ಲಿ ಹಿಸ್ಟೋಗ್ರಾಮ್ ಅನ್ನು ಗಮನಿಸಿ.
08:33 ಈಗ ಮುಂದಿನ ಅಸೈನ್ಮೆಂಟ್ ನೋಡೋಣ.
08:36 ಎರಡನೆಯ ಅಸೈನ್ಮೆಂಟ್ ನಲ್ಲಿ, ‘ಸ್ಪ್ರೆಡ್‌ಶೀಟ್ ವ್ಯೂ’ಅನ್ನು ಬಳಸಿ ನಾವು ಏಕಕೇಂದ್ರೀಯ ವೃತ್ತಗಳನ್ನು ರಚಿಸುವೆವು.
08:43 ವರ್ತುಲದ ಕೆಂದ್ರವನ್ನು ಗುರುತಿಸಲು, ‘ಡ್ರಾಯಿಂಗ್ ಪ್ಯಾಡ್’ನ ಮೇಲೆ A ಬಿಂದುವನ್ನು ರಚಿಸಿ.

Radius ನ (ತ್ರಿಜ್ಯ) ‘ಕಾಲಂ A’ಅನ್ನು ತಯಾರಿಸಲು ಸ್ಪ್ರೆಡ್‌ಶೀಟ್ ಅನ್ನು ಬಳಸಿ.

08:52 A ಯನ್ನು ಕೇಂದ್ರಬಿಂದು ಮಾಡಿ, ಕಾಲಂ A ದ ತ್ರಿಜ್ಯದಿಂದ ವರ್ತುಲಗಳನ್ನು ರಚಿಸಲು, ಸ್ಪ್ರೆಡ್‌ಶೀಟ್ ನ ‘ಕಾಲಂ B’ ಯನ್ನು ಬಳಸಿ.
08:58 ಮಧ್ಯಬಿಂದು A ಅನ್ನು ಜರುಗಿಸಿ ಮತ್ತು ಗಮನಿಸಿ.
09:02 ನಾನು ಇಲ್ಲಿ ‘ಅಸೈನ್ಮೆಂಟ್’ಅನ್ನು ತಯಾರಿಸಿದ್ದೇನೆ.
09:06 ಕೇಂದ್ರಬಿಂದುವನ್ನು ಜರುಗಿಸಿ (move) ಹಾಗೂ
09:10 ವರ್ತುಲಗಳನ್ನು ಗಮನಿಸಿ.
09:12 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು “ಟಾಕ್ ಟು ಎ ಟೀಚರ್” ಎನ್ನುವ ಪ್ರಕಲ್ಪದ ಒಂದು ಭಾಗವಾಗಿದೆ.
09:18 ಇದು ICT, MHRD ಮೂಲಕ ಭಾರತ ಸರ್ಕಾರದ ರಾಷ್ಟ್ರೀಯ ಸಾಕ್ಷರತಾ ಮಿಷನ್ ನ ಆಧಾರವನ್ನು ಪಡೆದಿದೆ.
09:23 ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಕೆಳಗಿನ ವೆಬ್ಸೈಟ್ ನಲ್ಲಿ ನೀವು ನೋಡಬಹುದು.
09:27 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ---------- . ವಂದನೆಗಳು

Contributors and Content Editors

Pratik kamble, Sandhya.np14