GChemPaint/C2/Editing-molecules/Kannada
From Script | Spoken-Tutorial
Time | Narration |
00:01 | ನಮಸ್ಕಾರ. GChemPaint (ಜಿ-ಕೆಮ್-ಪೇಂಟ್) ನಲ್ಲಿಯ Editing molecules (ಎಡಿಟಿಂಗ್ ಮೊಲೆಕ್ಯುಲ್ಸ್) ಎನ್ನುವ ‘ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ. |
00:06 | ಈ ‘ಟ್ಯುಟೋರಿಯಲ್’ನಲ್ಲಿ ನಾವು, |
00:09 | * ಅನ್-ಬೌಂಡ್ ಇಲೆಕ್ಟ್ರಾನುಗಳನ್ನು ಪರಮಾಣುವಿನ ಮೇಲೆ ಜೋಡಿಸುವುದು |
00:12 | * ‘ಕಾರ್ಬೋನಿಕ್ ಆಸಿಡ್’ (ಇಂಗಾಲಾಮ್ಲ) ಮತ್ತು ‘ಸಲ್ಫೂರಿಕ್ ಆಸಿಡ್’ (ಗಂಧಕಾಮ್ಲ) ಗಳ ‘ಸ್ಟ್ರಕ್ಚರ್’ಗಳನ್ನು ‘ಡ್ರಾ’ ಮಾಡುವುದು |
00:16 | * ‘ಲೋಕಲ್ ಚಾರ್ಜ್’ಅನ್ನು ಪರಮಾಣುಗಳ ಸಮೂಹಕ್ಕೆ ಸೇರಿಸುವುದು ಹಾಗೂ ಮಾರ್ಪಡಿಸುವುದು ಇತ್ಯಾದಿಗಳನ್ನು ಕಲಿಯುವೆವು. |
00:21 | ನಾವು, |
00:23 | * ‘ಲೋಕಲ್ ಚಾರ್ಜ್’ಅನ್ನು ಪರಮಾಣುವಿಗೆ ಸೇರಿಸುವುದು ಹಾಗೂ ಮಾರ್ಪಡಿಸುವುದು |
00:26 | * ‘ಸೈಕ್ಲಿಕ್’ ಅಣುಗಳನ್ನು ಸೇರಿಸುವುದು |
00:29 | * ‘ಮೊನೋ-ಸೈಕ್ಲಿಕ್’ ಅಣುಗಳನ್ನು ‘ಬೈ-ಸೈಕ್ಲಿಕ್’ ಅಣುಗಳಿಗೆ ಪರಿವರ್ತಿಸುವುದು ಇತ್ಯಾದಿಗಳನ್ನು ಸಹ ಕಲಿಯುವೆವು.ಇಲ್ಲಿ ನಾನು, |
00:35 | Ubuntu Linux OS (ಉಬಂಟು ಲಿನಕ್ಸ್ ಒ-ಎಸ್) ವರ್ಷನ್ 12.04 (ಹನ್ನೆರಡು ಪಾಯಿಂಟ್ ಸೊನ್ನೆ ನಾಲ್ಕು) ಹಾಗೂ |
00:39 | GChemPaint (ಜೀ-ಕೆಮ್-ಪೇಂಟ್) ವರ್ಷನ್ 0.12.10 (ಸೊನ್ನೆ ಪಾಯಿಂಟ್ ಒಂದು ಎರಡು ಪಾಯಿಂಟ್ ಒಂದು ಸೊನ್ನೆ) ಗಳನ್ನು ಬಳಸುತ್ತಿದ್ದೇನೆ. |
00:46 | ಈ ‘ಟ್ಯುಟೋರಿಯಲ್’ಅನ್ನು ಅನುಸರಿಸಲು, ನೀವು |
00:50 | 'GChemPaint' chemical structure editor (‘ಜೀ-ಕೆಮ್-ಪೇಂಟ್’ ಕೆಮಿಕಲ್ ಸ್ಟ್ರಕ್ಚರ್ ಎಡಿಟರ್) ಅನ್ನು ತಿಳಿದಿರಬೇಕು. |
00:53 | ಇಲ್ಲದಿದ್ದರೆ, ಸಂಬಂಧಿತ ‘ಟ್ಯುಟೋರಿಯಲ್’ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಗೆ ಹೋಗಿ. |
00:58 | ನಾನು ಒಂದು ಹೊಸ GChemPaint ಅಪ್ಪ್ಲಿಕೇಶನ್ ಅನ್ನು ತೆರೆದಿದ್ದೇನೆ. |
01:02 | ನಾವು ಮೊದಲು ‘ಅಮೋನಿಯಾ’ದ ರಚನೆಯನ್ನು ‘ಡ್ರಾ’ ಮಾಡೋಣ. |
01:06 | Current element ನ ‘ಡ್ರಾಪ್-ಡೌನ್ ಆರೋ ಬಟನ್’ನ ಮೇಲೆ ಕ್ಲಿಕ್ ಮಾಡಿ. |
01:09 | ಟೇಬಲ್ ನಿಂದ ‘N' ಅನ್ನು ಆಯ್ಕೆಮಾಡಿ. |
01:11 | ಟೂಲ್-ಬಾಕ್ಸ್ ನಲ್ಲಿ ‘N' ಅನ್ನು ಗಮನಿಸಿ. |
01:15 | Add or modify an atom ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
01:18 | ಆಮೇಲೆ ‘ಡಿಸ್ಪ್ಲೇ ಏರಿಯಾ’ದ ಮೇಲೆ ಕ್ಲಿಕ್ ಮಾಡಿ. |
01:21 | ‘ಡಿಸ್ಪ್ಲೇ ಏರಿಯಾ’ದ ಮೇಲೆ NH3 (ಎನ್-ಎಚ್-ಥ್ರೀ) ಕಾಣಿಸುತ್ತದೆ. |
01:24 | ದೊಡ್ಡಕ್ಷರ 'H' ಒತ್ತಿ. 'H’ ನಿಂದ ಆರಂಭವಾಗುವ ಮೂಲಧಾತುಗಳ ಲಿಸ್ಟ್ ನೊಂದಿಗೆ ಒಂದು ಸಬ್-ಮೆನ್ಯೂ ಕಾಣಿಸಿಕೊಳ್ಳುತ್ತದೆ. |
01:30 | ಲಿಸ್ಟ್ ನಿಂದ 'H’ಅನ್ನು ಆಯ್ಕೆಮಾಡಿ. |
01:33 | Add a bond or change the multiplicity of the existing one ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
01:38 | ‘ನೈಟ್ರೋಜನ್’ ಪರಮಾಣುವಿಗೆ ಮೂರು ಬಾಂಡ್ ಗಳನ್ನು ‘ಡ್ರಾ’ ಮಾಡಲು, |
01:41 | ‘ನೈಟ್ರೋಜನ್’ ಪರಮಾಣುವಿನ ಮೇಲೆ, ‘ಬಾಂಡ್’ಗಳನ್ನು ಮೂರು ಸಲ ಕ್ಲಿಕ್ ಮಾಡಿ ಮತ್ತು ಎಳೆಯಿರಿ. |
01:46 | ‘ಪಿರಾಮಿಡ್’ನ ಹಾಗಿರುವ ರಚನೆಯನ್ನು ರೂಪಿಸಲು ‘ಬಾಂಡ್’ಗಳನ್ನು ತಿರುಗಿಸಿ ( orient) . |
01:51 | ನಾವು ಒಂದು ಜೊತೆ ಅನ್-ಬೌಂಡ್ ಇಲೆಕ್ಟ್ರಾನುಗಳನ್ನು ‘ನೈಟ್ರೋಜನ್’ ಪರಮಾಣುವಿಗೆ ಸೇರಿಸೋಣ. |
01:56 | Add an electron pair to an atom ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
02:01 | ನಂತರ ‘ಅಮೋನಿಯಾ’ದ Nitrogen ಪರಮಾಣುವಿನ ಮೇಲೆ ಕ್ಲಿಕ್ ಮಾಡಿ. |
02:05 | ಬದಲಾವಣೆಗಳನ್ನು ಗಮನಿಸಿ. |
02:07 | ‘ಅಮೋನಿಯಾ’ದ Nitrogen, ಈಗ ಒಂದು ಜೋಡಿ ಇಲೆಕ್ಟ್ರಾನುಗಳನ್ನು ಹೊಂದಿದೆ ಎಂದು ಗಮನಿಸಿ. |
02:12 | ಈ ಜೋಡಿಯು ‘ಬಾಂಡಿಂಗ್’ನಲ್ಲಿ ಭಾಗವಹಿಸುವುದಿಲ್ಲ. |
02:16 | ಇಲೆಕ್ಟ್ರಾನುಗಳ ಈ ಜೋಡಿಯು ‘ಲೋನ್ ಪೇರ್’ ಆಗಿದೆ. |
02:20 | ಒಂದು ಅಸೈನ್ಮೆಂಟ್ ಎಂದು, ‘ಫಾಸ್ಫರಸ್ ಟ್ರೈಕ್ಲೋರೈಡ್’ (PCl3) ನ ರಚನೆಯನ್ನು ‘ಡ್ರಾ’ ಮಾಡಿ. |
02:24 | * ‘ಫಾಸ್ಫರಸ್’ (ರಂಜಕ) ದ ಪರಮಾಣುವಿಗೆ ಒಂದು ಜೊತೆ ಅನ್-ಬೌಂಡ್ ಇಲೆಕ್ಟ್ರಾನುಗಳನ್ನು ಸೇರಿಸಿ. |
02:29 | ಈಗ ನಾವು ‘ಕಾರ್ಬೊನಿಕ್ ಆಸಿಡ್’ (H2CO3) ಹಾಗೂ ‘ಸಲ್ಫೂರಿಕ್ ಆಸಿಡ್’ (H2SO4) ಗಳ ರಚನೆಗಳನ್ನು ‘ಡ್ರಾ’ ಮಾಡೋಣ. |
02:34 | ಇಲ್ಲಿ, ‘ಕಾರ್ಬೊನಿಕ್ ಆಸಿಡ್’ ಮತ್ತು ‘ಸಲ್ಫೂರಿಕ್ ಆಸಿಡ್’ಗಳ ರಚನೆಗಳಿಗಾಗಿ ಒಂದು ಸ್ಲೈಡ್ ಇದೆ. |
02:40 | ಮೊದಲು ನಾವು ‘ಅಮೋನಿಯಾ’ದ ರಚನೆಯನ್ನು ಬದಿಗೆ ಸರಿಸೋಣ. |
02:44 | ಇದನ್ನು ಮಾಡಲು Select one or more objects ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
02:48 | ಆಮೇಲೆ ‘ಅಮೋನಿಯಾ’ದ ರಚನೆಯ ಮೇಲೆ ಕ್ಲಿಕ್ ಮಾಡಿ ಮತ್ತು ಅದನ್ನು ಒಂದು ಬದಿಗೆ ಎಳೆಯಿರಿ. |
02:53 | ಈಗ ನಾವು ‘ಕಾರ್ಬೊನಿಕ್ ಆಸಿಡ್’ನ ರಚನೆಯನ್ನು ‘ಡ್ರಾ’ ಮಾಡೋಣ. |
02:56 | Current element ನ ‘ಡ್ರಾಪ್-ಡೌನ್ ಆರೋ ಬಟನ್’ನ ಮೇಲೆ ಕ್ಲಿಕ್ ಮಾಡಿ. |
03:00 | ಟೇಬಲ್ ನಿಂದ ‘C’ ಯನ್ನು ಆಯ್ಕೆಮಾಡಿ. |
03:02 | Add a bond or change the multiplicity of the existing one ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
03:07 | ‘ಡಿಸ್ಪ್ಲೇ ಏರಿಯಾ’ದ ಮೇಲೆ ಕ್ಲಿಕ್ ಮಾಡಿ. |
03:09 | ತಲೆಕೆಳಗಾದ ’Y’ ನ ಹಾಗೆ ಆಗುವಂತೆ ಮೂರು ‘ಬಾಂಡ್’ಗಳನ್ನು ತಿರುಗಿಸಿ. |
03:15 | ನಾಲ್ಕನೆಯ ‘ಬಾಂಡ್’ಅನ್ನು, ಯಾವುದೇ ಒಂದು ‘ಬಾಂಡ್’ಗೆ ‘ಡಬಲ್ ಬಾಂಡ್’ ಆಗುವಂತೆ ‘ಡ್ರಾ’ ಮಾಡಿ. |
03:21 | ಈಗ Current element ನ ‘ಡ್ರಾಪ್-ಡೌನ್ ಆರೋ ಬಟನ್’ನ ಮೇಲೆ ಕ್ಲಿಕ್ ಮಾಡಿ. |
03:25 | 'O' ಅನ್ನು ಆಯ್ಕೆಮಾಡಿ. |
03:26 | Add or modify an atom ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
03:30 | ಕರ್ಸರನ್ನು ‘ಬಾಂಡ್’ಗಳ ಹತ್ತಿರ ಇರಿಸಿ. |
03:33 | ‘ಬಾಂಡ್’ಗಳ ಮೂರು ಸ್ಥಾನಗಳ ಮೇಲೆ ಕ್ಲಿಕ್ ಮಾಡಿ. |
03:37 | ‘ಕಾರ್ಬೊನಿಕ್ ಆಸಿಡ್’ (H2CO3) ರಚನೆಯನ್ನು ‘ಡ್ರಾ’ ಮಾಡಲಾಗಿದೆ. |
03:40 | ಈಗ ನಾವು ‘ಸಲ್ಫೂರಿಕ್ ಆಸಿಡ್’ನ ರಚನೆಯನ್ನು ‘ಡ್ರಾ’ ಮಾಡೋಣ. |
03:44 | Current element ನ ‘ಡ್ರಾಪ್-ಡೌನ್ ಆರೋ ಬಟನ್’ನ ಮೇಲೆ ಕ್ಲಿಕ್ ಮಾಡಿ. |
03:47 | 'S' ಅನ್ನು ಆಯ್ಕೆಮಾಡಿ. Add or modify an atom ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
03:52 | ಆಮೇಲೆ ‘ಡಿಸ್ಪ್ಲೇ ಏರಿಯಾ’ದ ಮೇಲೆ ಕ್ಲಿಕ್ ಮಾಡಿ. |
03:55 | H2S ಅನ್ನು ಗಮನಿಸಿ. |
03:57 | ಈಗ ‘ಡಿಸ್ಪ್ಲೇ ಏರಿಯಾ’ದ ಮೇಲೆ ಎಲ್ಲಿಯಾದರೂ ದೊಡ್ಡಕ್ಷರ 'O' ಅನ್ನು ಒತ್ತಿ. |
04:01 | 'O' ಮತ್ತು 'Os' (ಓ-ಎಸ್) ಈ ಎರಡು ಆಯ್ಕೆಗಳೊಂದಿಗೆ ಒಂದು ಸಬ್-ಮೆನ್ಯೂ ತೆರೆದುಕೊಳ್ಳುತ್ತದೆ. |
04:06 | 'O' ಅನ್ನು ಆಯ್ಕೆಮಾಡಿ. |
04:08 | Add or modify an atom ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
04:11 | ನಂತರ Add a bond or change the multiplicity of the existing one ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
04:17 | Property ಮೆನ್ಯೂನಲ್ಲಿ, Bond length ನ ವ್ಯಾಲ್ಯೂವನ್ನು 200 (ಎರಡು ನೂರು) ಅಥವಾ ಅದಕ್ಕಿಂತ ಹೆಚ್ಚು ಮಾಡಿ. |
04:23 | 'OH' (ಓ-ಎಚ್) ನ ಮೂರು ‘ಬಾಂಡ್’ಗಳನ್ನು, 'S' ಗೆ ‘ಡ್ರಾ’ ಮಾಡಲು H2S (ಎಚ್-ಟು-ಎಸ್) ನ ಮೇಲೆ ಕ್ಲಿಕ್ ಮಾಡಿ. |
04:29 | 'S' ನ ಹತ್ತಿರ ಒಂದು ಧನಾತ್ಮಕ ‘ಚಾರ್ಜ್’ ಇರುವುದನ್ನು ಗಮನಿಸಿ. |
04:32 | ಇದು ಗೋಚರಿಸುವ ಕಾರಣ, ‘ಸಲ್ಫರ್’ (ಗಂಧಕ), ೬ ‘ವೇಲೆನ್ಸಿ’ಯನ್ನು ಪೂರೈಸಬೇಕಾಗಿದೆ. |
04:39 | ನಾಲ್ಕನೆಯ ‘ಬಾಂಡ್’ಗಾಗಿ ಮೊದಲು 'S’ ನ ಮೇಲೆ ಕ್ಲಿಕ್ ಮಾಡಿ. |
04:43 | ಈಗ ಮೌಸನ್ನು ಬಿಡದೆ, ‘ಬಾಂಡ್’ಅನ್ನು ಒಂದು ಬದಿಗೆ ಎಳೆಯಿರಿ. |
04:47 | ಈಗ ನಾವು ಅಭಿಮುಖವಾಗಿರುವ ‘ಬಾಂಡ್’ಗಳನ್ನು ‘ಡಬಲ್ ಬಾಂಡ್’ಗಳಾಗಿ ಪರಿವರ್ತಿಸೋಣ. |
04:52 | Add a bond or change the multiplicity of the existing one ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
04:58 | ನಂತರ ರಚನೆಯಲ್ಲಿ ಅಭಿಮುಖವಾಗಿರುವ ‘ಬಾಂಡ್’ಗಳ ಮೇಲೆ ಕ್ಲಿಕ್ ಮಾಡಿ. |
05:03 | ಧನಾತ್ಮಕ ‘ಚಾರ್ಜ್’, ಈಗ ಗೋಚರಿಸುತ್ತಿಲ್ಲ ಎನ್ನುವುದನ್ನು ಗಮನಿಸಿ. |
05:08 | ‘ಸಲ್ಫೂರಿಕ್ ಆಸಿಡ್’ನ ರಚನೆಯು ಪೂರ್ಣಗೊಂಡಿದೆ. |
05:12 | ಇನ್ನುಮುಂದೆ ನಾವು ‘ಕಾರ್ಬೊನಿಕ್ ಆಸಿಡ್ ಹಾಗೂ ‘ಸಲ್ಫೂರಿಕ್ ಆಸಿಡ್’ನ ರಚನೆಗಳಿಗೆ ಒಂದು ‘ಲೋಕಲ್ ಚಾರ್ಜ್’ಅನ್ನು ಸೇರಿಸೋಣ. |
05:18 | ‘ಲೋಕಲ್ ಚಾರ್ಜ್’ಅನ್ನು ತೋರಿಸಲು, Decrement the charge of an atom ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
05:24 | ‘ಕಾರ್ಬೊನಿಕ್ ಆಸಿಡ್’ ರಚನೆಯ ಎರಡು 'O-H' ಸಮೂಹಗಳ ಮೇಲೆ ಕ್ಲಿಕ್ ಮಾಡಿ. |
05:30 | ‘ಕಾರ್ಬೋನೇಟ್ ಅಯಾನ್’ CO32- (ಸಿ-ಓ-ಥ್ರೀ-ಟು-ಮೈನಸ್) ರೂಪುಗೊಂಡಿದೆ ಎಂದು ಗಮನಿಸಿ. |
05:36 | ’ಸಲ್ಫೂರಿಕ್ ಆಸಿಡ್’ನ ರಚನೆಯ ಮೇಲೆ ಲೋಕಲ್ ಚಾರ್ಜನ್ನು ತೋರಿಸಲು, |
05:41 | Decrement the charge of an atom ಟೂಲ್ನ ಮೇಲೆ ಕ್ಲಿಕ್ ಮಾಡಿ. |
05:44 | ‘ಸಲ್ಫೂರಿಕ್ ಆಸಿಡ್’ನ ಅಭಿಮುಖವಾಗಿರುವ ಎರಡು 'O-H’ ಗುಂಪುಗಳ ಮೇಲೆ ಕ್ಲಿಕ್ ಮಾಡಿ. |
05:49 | ‘ಸಲ್ಫೇಟ್ ಅಯಾನ್’ SO42- (ಎಸ್-ಓ-ಫೋರ್-ಟು-ಮೈನಸ್) ರೂಪುಗೊಂಡಿದೆ ಎಂದು ಗಮನಿಸಿ. ಒಂದು ಅಸೈನ್ಮೆಂಟ್ ಎಂದು, |
05:57 | * ‘ನೈಟ್ರಿಕ್ ಆಸಿಡ್’ (HNO3) ರಚನೆಯನ್ನು ‘ಡ್ರಾ’ ಮಾಡಿ. |
05:59 | * ‘ನೈಟ್ರೇಟ್ ಅಯಾನ್’ನ (NO3-) ಮೇಲೆ ಲೋಕಲ್ ಚಾರ್ಜನ್ನು ತೋರಿಸಿ. |
06:02 | ಪೂರ್ಣಗೊಂಡ ನಿಮ್ಮ ಅಸೈನ್ಮೆಂಟ್ ಹೀಗೆ ಕಾಣಿಸಬೇಕು. |
06:07 | ಪರಮಾಣುವಿಗೆ ಒಂದು ಲೋಕಲ್ ಚಾರ್ಜನ್ನು ಹೇಗೆ ಸೇರಿಸುವುದೆಂದು ನಾನು ಬೇಗನೆ ತೋರಿಸುತ್ತೇನೆ. |
06:12 | ‘ಡಿಸ್ಪ್ಲೇ ಏರಿಯಾ’ದ ಮೇಲೆ ಎಲ್ಲಿಯಾದರೂ ದೊಡ್ಡಕ್ಷರ 'N' ಒತ್ತಿ. |
06:16 | ಒಂದು ಸಬ್-ಮೆನ್ಯೂ ತೆರೆದುಕೊಳ್ಳುತ್ತದೆ. ಇದರಲ್ಲಿ ನಾವು 'Na' (ಎನ್-ಎ) ಅನ್ನು ಆಯ್ಕೆಮಾಡುವೆವು. |
06:21 | Add or modify an atom ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
06:24 | ಆಮೇಲೆ ‘ಡಿಸ್ಪ್ಲೇ ಏರಿಯಾ’ದ ಮೇಲೆ ಕ್ಲಿಕ್ ಮಾಡಿ. |
06:27 | ‘ಡಿಸ್ಪ್ಲೇ ಏರಿಯಾ’ದ ಮೇಲೆ ‘ಸೋಡಿಯಂ’ ಅಣು ಕಾಣಿಸಿಕೊಳ್ಳುತ್ತದೆ. |
06:30 | Increment the charge of an atom ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
06:35 | ‘Na' (ಎನ್-ಎ) ದ ಮೇಲೆ ಕ್ಲಿಕ್ ಮಾಡಿ. |
06:37 | ‘ಸೋಡಿಯಂ’ ಪರಮಾಣುವಿನ ಮೇಲೆ ಒಂದು ಧನಾತ್ಮಕ ‘ಚಾರ್ಜ್’ಅನ್ನು ಗಮನಿಸಿ. |
06:41 | ಇದೇರೀತಿಯಲ್ಲಿ, ನಾವು ‘ನೆಗೆಟಿವ್’(ಋಣಾತ್ಮಕ) ಚಾರ್ಜನ್ನು ಪರಮಾಣುವಿಗೆ ಸೇರಿಸಬಹುದು. |
06:46 | Decrement the charge of an atom ಎನ್ನುವ ಟೂಲನ್ನು ಆಯ್ಕೆಮಾಡುವುದರಿಂದ ಇದನ್ನು ಮಾಡಬಹುದು. |
06:51 | ಈಗ ನಾವು ‘ಸೈಕ್ಲಿಕ್’ (Cyclic) ಅಣುಗಳನ್ನು ‘ಡ್ರಾ’ ಮಾಡಲು ಕಲಿಯೋಣ. |
06:54 | ಇದಕ್ಕಾಗಿ, ನಾವು ಹೊಸ GChemPaint ವಿಂಡೋವನ್ನು ತೆರೆಯುವೆವು. |
06:59 | ಟೂಲ್-ಬಾರ್ ನ ಮೇಲಿರುವ Create a new file ಐಕಾನ್ ಮೇಲೆ ಕ್ಲಿಕ್ ಮಾಡಿ. |
07:03 | 'C' ಎಂದರೆ ಕಾರ್ಬನ್, ಮೂಲಧಾತು ಎಂದು ಆಯ್ಕೆಯಾಗಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. |
07:09 | ಅಲ್ಲದೆ, Bond length 200 ಅಥವಾ ಅದಕ್ಕಿಂತ ಹೆಚ್ಚು ಆಗಿದೆ ಎಂದು ಖಚಿತಪಡಿಸಿಕೊಳ್ಳಿ. |
07:14 | ‘ಟೂಲ್ ಬಾಕ್ಸ್’ನಲ್ಲಿಯ ನಾಲ್ಕನೆಯ ಟೂಲ್ ಬಾರ್, ‘ಸೈಕಲ್’ ಟೂಲ್ ಆಗಿದೆ. |
07:19 | ಇಲ್ಲಿ ನಾವು ಬಳಸಲು ಸಾಧ್ಯವಿರುವ ವಿವಿಧ ಟೂಲ್ ಗಳಿವೆ. |
07:22 | ಉದಾಹರಣೆಗೆ, |
07:24 | * Add a three membered cycle |
07:26 | * Add a four membered cycle |
07:29 | * ಮತ್ತು ಇನ್ನೂ ಕೆಲವು ‘ಸೈಕಲ್’ ಟೂಲ್ಗಳು. |
07:32 | ಮತ್ತು * Add a cycle ಟೂಲ್. |
07:35 | ನಾವು Add a four membered cycle ಟೂಲನ್ನು ಬಳಸುವೆವು. |
07:40 | ಆದ್ದರಿಂದ, ಅದರ ಮೇಲೆ ಕ್ಲಿಕ್ ಮಾಡಿ. |
07:42 | ಆಮೇಲೆ ‘ಡಿಸ್ಪ್ಲೇ ಏರಿಯಾ’ದ ಮೇಲೆ ಕ್ಲಿಕ್ ಮಾಡಿ. |
07:44 | ‘ಸೈಕಲ್’ನ ಮೂಲೆಗಳಿಗೆ ನಾವು ಪರಮಾಣುಗಳನ್ನು ಸೇರಿಸೋಣ. |
07:49 | ಯಾವುದೇ ಒಂದು ಮೂಲೆಯ ಮೇಲೆ ರೈಟ್ ಕ್ಲಿಕ್ ಮಾಡಿ. |
07:52 | ಒಂದು ಸಬ್-ಮೆನ್ಯೂ ತೆರೆದುಕೊಳ್ಳುತ್ತದೆ. Atom ಅನ್ನು ಆಯ್ಕೆಮಾಡಿ. ಆಮೇಲೆ Display symbol ನ ಮೇಲೆ ಕ್ಲಿಕ್ ಮಾಡಿ. |
07:58 | ಹೀಗೆಯೇ, ನಾವು ಪರಮಾಣುಗಳನ್ನು ಎಲ್ಲ ಮೂಲೆಗಳಿಗೂ ಸೇರಿಸೋಣ. |
08:03 | ಪಡೆದ ರಚನೆಯು ‘ಸೈಕ್ಲೋಬ್ಯೂಟೇನ್’ ಆಗಿದೆ. |
08:07 | ಈಗ ನಾವು ಮೊನೋ-ಸೈಕ್ಲಿಕ್ ಕಂಪೌಂಡನ್ನು ಬೈ-ಸೈಕ್ಲಿಕ್ ಕಂಪೌಂಡ್’ಗೆ ಪರಿವರ್ತಿಸೋಣ. |
08:12 | Add a six membered cycle ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
08:16 | ಆಮೇಲೆ ‘ಡಿಸ್ಪ್ಲೇ ಏರಿಯಾ’ದ ಮೇಲೆ ಕ್ಲಿಕ್ ಮಾಡಿ. |
08:19 | ಕರ್ಸರ್ ಅನ್ನು ‘ಸೈಕಲ್’ನ ಬಾಂಡ್ ಮೇಲೆ ಇರಿಸಿ ಮತ್ತು ಇನೊಮ್ಮೆ ಕ್ಲಿಕ್ ಮಾಡಿ. |
08:24 | ‘ಬೈ-ಸೈಕ್ಲಿಕ್ ಕಂಪೌಂಡ್’ಅನ್ನು ಗಮನಿಸಿ. |
08:27 | ‘ಫೈಲ್’ಅನ್ನು ಸೇವ್ ಮಾಡಲು, ಟೂಲ್ ಬಾರ್ ಮೇಲಿನ Save the current file ಐಕಾನ್ ಮೇಲೆ ಕ್ಲಿಕ್ ಮಾಡಿ. |
08:32 | Save as ಎನ್ನುವ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
08:35 | ಫೈಲ್ ನ ಹೆಸರನ್ನು Editing Molecules ಎಂದು ನಮೂದಿಸಿ. |
08:38 | Save ‘ಬಟನ್’ನ ಮೇಲೆ ಕ್ಲಿಕ್ ಮಾಡಿ. |
08:41 | ನಾವು ಸಾರಾಂಶಗೊಳಿಸೋಣ. |
08:43 | ಈ ‘ಟ್ಯುಟೋರಿಯಲ್’ನಲ್ಲಿ ನಾವು, |
08:45 | * ಅನ್-ಬೌಂಡ್ ಇಲೆಕ್ಟ್ರಾನುಗಳನ್ನು ಪರಮಾಣುವಿಗೆ ಜೋಡಿಸುವುದು |
08:48 | * ‘ಕಾರ್ಬೋನಿಕ್ ಆಸಿಡ್’ ಮತ್ತು ‘ಸಲ್ಫೂರಿಕ್ ಆಸಿಡ್’ಗಳ ‘ಸ್ಟ್ರಕ್ಚರ್’ಗಳನ್ನು ‘ಡ್ರಾ’ ಮಾಡುವುದು |
08:53 | * ‘ಲೋಕಲ್ ಚಾರ್ಜ್’ಅನ್ನು ಪರಮಾಣುಗಳ ಸಮೂಹಕ್ಕೆ ಸೇರಿಸುವುದು ಹಾಗೂ ಮಾರ್ಪಡಿಸುವುದು ಇತ್ಯಾದಿಗಳನ್ನು ಕಲಿತಿದ್ದೇವೆ. |
08:58 | ನಾವು, |
09:00 | * ‘ಲೋಕಲ್ ಚಾರ್ಜ್’ಅನ್ನು ಪರಮಾಣುವಿಗೆ ಸೇರಿಸುವುದು ಹಾಗೂ ಮಾರ್ಪಡಿಸುವುದು |
09:04 | * ‘ಸೈಕ್ಲಿಕ್’ ಅಣುಗಳನ್ನು ಸೇರಿಸುವುದು |
09:06 | * ಮೊನೋ-ಸೈಕ್ಲಿಕ್ ಅಣುಗಳನ್ನು ಬೈ-ಸೈಕ್ಲಿಕ್ ಅಣುಗಳಿಗೆ ಪರಿವರ್ತಿಸುವುದು ಇತ್ಯಾದಿಗಳನ್ನು ಸಹ ಕಲಿತಿದ್ದೇವೆ. |
09:11 | ಒಂದು ಅಸೈನ್ಮೆಂಟ್ ಎಂದು, |
09:13 | * ‘ಡಿಸ್ಪ್ಲೇ ಏರಿಯಾ’ಗೆ ಒಂದು ‘ಸೆವೆನ್ ಮೆಂಬರ್ಡ್ ಸೈಕಲ್’ (seven membered cycle) ಅನ್ನು ಸೇರಿಸಿ. |
09:16 | * ಅದನ್ನು ‘ಟ್ರೈಸೈಕ್ಲಿಕ್ ಕಂಪೌಂಡ್’ಗೆ ಬದಲಾಯಿಸಿ. |
09:20 | ಈ ಕೆಳಗಿನ URL ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. http://spoken-tutorial.org/What_is_a_Spoken_Tutorial |
09:24 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವನ್ನು ಸಾರಾಂಶಗೊಳಿಸುತ್ತದೆ. |
09:27 | ಒಳ್ಳೆಯ ‘ಬ್ಯಾಂಡ್ವಿಡ್ಥ್’ ಸಿಗದಿದ್ದರೆ ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
09:32 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ತಂಡವು: ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
09:36 | ಆನ್-ಲೈನ್ ಪರೀಕ್ಷೆಯಲ್ಲಿ ಪಾಸಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
09:40 | ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಈ ಲಿಂಕ್ ಗೆ ಬರೆಯಿರಿ. contact@spoken-tutorial.org |
09:46 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರಕಲ್ಪವು ‘ಟಾಕ್ ಟು ಎ ಟೀಚರ್’ ಪ್ರಕಲ್ಪದ ಒಂದು ಭಾಗವಾಗಿದೆ. |
09:50 | ಇದು ಭಾರತ ಸರ್ಕಾರದ ICT, MHRD ಮೂಲಕ ‘ರಾಷ್ಟ್ರೀಯ ಸಾಕ್ಷರತಾ ಮಿಶನ್’ನ ಆಧಾರವನ್ನು ಪಡೆದಿದೆ. |
09:57 | ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ. http://spoken-tutorial.org/NMEICT-Intro |
10:03 | IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ ಐತಾಳ್. ವಂದನೆಗಳು. |