GChemPaint/C2/Edit-Preferences-Templates-and-Residues/Kannada
From Script | Spoken-Tutorial
| Time | Narration |
| 00:01 | ನಮಸ್ಕಾರ. GChemPaint (ಜಿ-ಕೆಮ್-ಪೇಂಟ್) ನಲ್ಲಿ Edit Preferences, Templates and Residues (ಎಡಿಟ್ ಪ್ರಿಫರನ್ಸಸ್, ಟೆಂಪ್ಲೇಟ್ಸ್ ಮತ್ತು ರೆಸಿಡ್ಯೂಸ್) ಎನ್ನುವ ‘ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ. |
| 00:10 | ಈ ‘ಟ್ಯುಟೋರಿಯಲ್’ನಲ್ಲಿ ನಾವು, |
| 00:13 | * ‘ಪ್ರಿಫರನ್ಸಸ್’ಅನ್ನು ಎಡಿಟ್ ಮಾಡುವುದು, |
| 00:15 | * ‘ಟೆಂಪ್ಲೇಟ್’ಗಳನ್ನು ನಿಭಾಯಿಸುವುದು, |
| 00:17 | * ಸಿದ್ಧವಾಗಿರುವ ‘ಟೆಂಪ್ಲೇಟ್’ಗಳನ್ನು ಆಯ್ಕೆಮಾಡುವುದು ಹಾಗೂ ಬಳಸುವುದು |
| 00:20 | * ಮತ್ತು ಹೊಸ ‘ಟೆಂಪ್ಲೇಟ್’ಅನ್ನು ಸೇರಿಸುವುದು ಇತ್ಯಾದಿಗಳನ್ನು ಕಲಿಯುವೆವು. |
| 00:24 | ನಾವು, |
| 00:26 | * ‘ರೆಸಿಡ್ಯೂಸ್’ನ ಉಪಯೋಗಗಳು ಮತ್ತು |
| 00:28 | * ‘ರೆಸಿಡ್ಯೂಸ್’ಅನ್ನು ಎಡಿಟ್ ಮಾಡುವುದನ್ನು ಸಹ ಕಲಿಯುವೆವು. |
| 00:31 | ಇಲ್ಲಿ ನಾನು, Ubuntu Linux OS (ಉಬಂಟು ಲಿನಕ್ಸ್ ಒ-ಎಸ್) ನ 12.04 ನೇ ಆವೃತ್ತಿಯನ್ನು (ಹನ್ನೆರಡು ಪಾಯಿಂಟ್ ಸೊನ್ನೆ ನಾಲ್ಕು) ಹಾಗೂ |
| 00:38 | GChemPaint (ಜೀ-ಕೆಮ್-ಪೇಂಟ್) ನ 0.12.10 ಆವೃತ್ತಿಯನ್ನು (ಸೊನ್ನೆ ಪಾಯಿಂಟ್ ಒಂದು ಎರಡು ಪಾಯಿಂಟ್ ಒಂದು ಸೊನ್ನೆ) ಬಳಸುತ್ತಿದ್ದೇನೆ. |
| 00:44 | ಈ ‘ಟ್ಯುಟೋರಿಯಲ್’ಅನ್ನು ಅನುಸರಿಸಲು, ನೀವು |
| 00:49 | 'GChemPaint' chemical structure editor (‘ಜೀ-ಕೆಮ್-ಪೇಂಟ್’ ಕೆಮಿಕಲ್ ಸ್ಟ್ರಕ್ಚರ್ ಎಡಿಟರ್) ನ ಬಗ್ಗೆ ತಿಳಿದಿರಬೇಕು. |
| 00:53 | ಇಲ್ಲದಿದ್ದರೆ, ಸಂಬಂಧಿತ ‘ಟ್ಯುಟೋರಿಯಲ್’ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಗೆ ಹೋಗಿ. |
| 00:59 | ನಾನು ಈಗಾಗಲೇ ಹೊಸ GChemPaint ಅಪ್ಪ್ಲಿಕೇಶನ್ ಅನ್ನು ತೆರೆದಿದ್ದೇನೆ. |
| 01:03 | Preferences ಅನ್ನು ಎಡಿಟ್ ಮಾಡುವುದರ ಮೂಲಕ ನಾವು ‘ಟ್ಯುಟೋರಿಯಲ್’ಅನ್ನು ಆರಂಭಿಸೋಣ. |
| 01:07 | Edit ಮೆನ್ಯೂ ಗೆ ಹೋಗಿ. ಅಲ್ಲಿ, Preferences ಗೆ ಹೋಗಿ ಅದರ ಮೇಲೆ ಕ್ಲಿಕ್ ಮಾಡಿ. |
| 01:13 | GChemPaint Preferences ವಿಂಡೋ ತೆರೆದುಕೊಳ್ಳುತ್ತದೆ. |
| 01:16 | Default Compression Level For GChemPaint Files (ಡೀ-ಫಾಲ್ಟ್ ಕಂಪ್ರೆಶನ್ ಲೆವೆಲ್ ಫಾರ್ ಜೀ-ಕೆಮ್-ಪೇಂಟ್ ಫೈಲ್ಸ್) ಎನ್ನುವ ಮೊದಲನೆಯ ಫೀಲ್ಡ್, ಫೈಲ್ ಗಳನ್ನು ಸೇವ್ ಮಾಡುವಾಗ ಬಳಸಲ್ಪಡುತ್ತದೆ. |
| 01:24 | ಡೀ-ಫಾಲ್ಟ್ ಆಗಿ ಇದು ಸೊನ್ನೆ ಆಗಿದೆ. |
| 01:28 | ಸೊನ್ನೆ ಆಗಿರದಿದ್ದರೆ, 'gzip.' ಬಳಸಿ ಫೈಲ್ ಅನ್ನು ‘ಕಂಪ್ರೆಸ್’ ಮಾಡಲಾಗುವುದು. |
| 01:33 | Invert wedge hashes ಅನ್ನು ಇನ್ನೊಂದು ಟ್ಯುಟೋರಿಯಲ್ ನಲ್ಲಿ ನಾನು ವಿವರಿಸುವೆನು. |
| 01:40 | ‘ಜೀ-ಕೆಮ್-ಪೇಂಟ್’ನಲ್ಲಿ ಪ್ರತಿಯೊಂದು ‘ಡಾಕ್ಯೂಮೆಂಟ್’, ಸಂಬಂಧಿತ ‘ಥೀಮ್’ ಒಂದನ್ನು ಹೊಂದಿದೆ. |
| 01:46 | ನಾವು GChemPaint (ಜೀ-ಕೆಮ್-ಪೇಂಟ್)ಅನ್ನು Default theme (ಡೀ-ಫಾಲ್ಟ್ ಥೀಮ್) ಆಗಿ ಉಳಿಸಿಕೊಳ್ಳೋಣ. |
| 01:50 | ಈಗ Themes ವಿಭಾಗದಲ್ಲಿನ Arrows ಬಗ್ಗೆ ನಾನು ವಿಸ್ತಾರವಾಗಿ ವಿವರಿಸುವೆನು. |
| 01:58 | ‘ಟೂಲ್ ಬಾಕ್ಸ್’ನಲ್ಲಿಯ ವಿಭಿನ್ನ ಬಗೆಯ ‘ಆರೋ’(ಬಾಣ) ಗಳನ್ನು ಗಮನಿಸಿ. |
| 02:02 | *Add an arrow for an irreversible reaction ( ಬದಲಾಯಿಸಲಾಗದ (irreversible) ಪ್ರತಿಕ್ರಿಯೆಗಾಗಿ ಈ ಬಾಣವನ್ನು ಸೇರಿಸಿ). |
| 02:06 | * Add a pair of Arrows for a reversible reaction (ಬದಲಾಯಿಸಬಹುದಾದ (reversible) ಪ್ರತಿಕ್ರಿಯೆಗಾಗಿ ಈ ಜೋಡಿ ಬಾಣವನ್ನು ಸೇರಿಸಿ). |
| 02:10 | * Add an arrow for a retrosynthesis step ( ರೆಟ್ರೋಸಿಂಥೆಸಿಸ್ ಸ್ಟೆಪ್’ಗಾಗಿ ಈ ಬಾಣದ ಚಿನ್ಹೆಯನ್ನು ಸೇರಿಸಿ). |
| 02:14 | * Add a double headed arrow to represent mesomery (‘ಮಿಸೊಮೆರಿ’ಯನ್ನು ಪ್ರತಿನಿಧಿಸಲು ಎರಡು ತಲೆಯ ಬಾಣದ ಚಿನ್ಹೆಯನ್ನು ಸೇರಿಸಿ). |
| 02:19 | ಈ ನಾಲ್ಕು ಬಾಣಗಳನ್ನು ನಾವು ‘ಡಿಸ್ಪ್ಲೇ ಏರಿಯಾ’ಗೆ ಸೇರಿಸೋಣ. |
| 02:24 | Add an arrow for an irreversible reaction ನ ಮೇಲೆ ಕ್ಲಿಕ್ ಮಾಡಿ. |
| 02:28 | ಆಮೇಲೆ ‘ಡಿಸ್ಪ್ಲೇ ಏರಿಯಾ’ದ ಮೇಲೆ ಕ್ಲಿಕ್ ಮಾಡಿ. |
| 02:31 | ಹೀಗೆಯೇ, ಇತರ ಪ್ರಕಾರದ ‘ಆರೋ’ಗಳನ್ನು ನಾನು ‘ಡಿಸ್ಪ್ಲೇ ಏರಿಯಾ’ಗೆ ಸೇರಿಸುವೆನು. |
| 02:41 | Preferences ನ ಡೈಲಾಗ್ ಬಾಕ್ಸ್ ನಲ್ಲಿಯ Themes ಫೀಲ್ಡ್ ನಿಂದ Arrows ಅನ್ನು ಆಯ್ಕೆಮಾಡಿ. |
| 02:47 | ಒಂದು ‘ಕಂಟೆಕ್ಸ್ಚುವಲ್‘ (ಸಂದರ್ಭೋಚಿತ) ಮೆನ್ಯೂ ತೆರೆದುಕೊಳ್ಳುತ್ತದೆ. |
| 02:50 | ಇಲ್ಲಿ ಬಾಣಗಳ Length, Width, ಮತ್ತು Distance ಗಳನ್ನು ನಾವು ಹೆಚ್ಚು ಅಥವಾ ಕಡಿಮೆ ಮಾಡಬಹುದು. |
| 02:57 | ಮೌಸ್ ನಿಂದ ‘ಅಪ್’ ಅಥವಾ ‘ಡೌನ್- ಆರೋ’ ಗಳ ಮೇಲೆ ಕ್ಲಿಕ್ ಮಾಡಿ. |
| 03:02 | ಮತ್ತು ‘ಡಿಸ್ಪ್ಲೇ ಏರಿಯಾ’ದಲ್ಲಿನ ಬಾಣಗಳಲ್ಲಿಯ ಬದಲಾವಣೆಗಳನ್ನು ಗಮನಿಸಿ. |
| 03:10 | ಈಗ ನಾವು ‘ಆರೋ ಹೆಡ್’ ಗಳ ಬಗ್ಗೆ ತಿಳಿಯೋಣ. |
| 03:14 | ಇಲ್ಲಿ A, B ಮತ್ತು C ಗಳ ಡೀ-ಫಾಲ್ಟ್ ವ್ಯಾಲ್ಯೂಗಳನ್ನು ತೋರಿಸಲಾಗಿದೆ. |
| 03:21 | A, B ಮತ್ತು C ನಿಯತಾಂಕಗಳು, ‘ಆರೋ ಹೆಡ್’ಗಳ ಆಕಾರವನ್ನು ಬದಲಾಯಿಸಲು ಸಹಾಯಮಾಡುತ್ತವೆ. |
| 03:28 | ಪ್ರತಿಯೊಂದನ್ನು ಹೆಚ್ಚು ಅಥವಾ ಕಡಿಮೆ ಮಾಡಿ ಮತ್ತು ‘ಆರೋ ಹೆಡ್’ಗಳಲ್ಲಿಯ ಬದಲಾವಣೆಗಳನ್ನು ಗಮನಿಸಿ. |
| 03:38 | ವಿಂಡೋವನ್ನು ಮುಚ್ಚಲು ನಾವು Close ‘ಬಟನ್’ನ ಮೇಲೆ ಕ್ಲಿಕ್ ಮಾಡೋಣ. |
| 03:42 | ‘ಡಿಸ್ಪ್ಲೇ ಏರಿಯಾ’ವನ್ನು ನಾವು ‘ಕ್ಲಿಯರ್’ ಮಾಡೋಣ. |
| 03:46 | ಎಲ್ಲ ಓಬ್ಜೆಕ್ಟ್ ಗಳನ್ನು ಸೆಲೆಕ್ಟ್ ಮಾಡಲು, Ctrl +A ಒತ್ತಿ. |
| 03:49 | Edit ಮೆನ್ಯೂ ಗೆ ಹೋಗಿ, Clear ನ ಮೇಲೆ ಕ್ಲಿಕ್ ಮಾಡಿ. |
| 03:53 | ಆಮೇಲೆ, ‘ಟೆಂಪ್ಲೇಟ್’ಗಳನ್ನು ಹೇಗೆ ನಿಭಾಯಿಸುವುದು ಎಂದು ನಾವು ತಿಳಿಯೋಣ. |
| 03:58 | Use or manage templates ಟೂಲ್ ನ ಮೇಲೆ ಕ್ಲಿಕ್ ಮಾಡಿ. |
| 04:01 | ಕೆಳಗೆ ‘ಪ್ರಾಪರ್ಟೀ ಡೈಲಾಗ್ ಬಾಕ್ಸ್’ ತೆರೆದುಕೊಳ್ಳುತ್ತದೆ. |
| 04:05 | ‘ಪ್ರಾಪರ್ಟೀ ಡೈಲಾಗ್ ಬಾಕ್ಸ್’, ಒಂದು ಡ್ರಾಪ್-ಡೌನ್ ಲಿಸ್ಟ್ ನೊಂದಿಗೆ Templates ಅನ್ನು ಒಳಗೊಂಡಿದೆ. |
| 04:10 | ಲಿಸ್ಟ್, Amino acids (ಅಮೈನೋ ಆಸಿಡ್ಸ್), Aromatic hydrocarbons (ಆರೋಮ್ಯಾಟಿಕ್ ಹೈಡ್ರೋಕಾರ್ಬನ್ಸ್), Nucleic bases(ನ್ಯೂಕ್ಲಿಕ್ ಬೇಸಸ್), Nucleosides (ನ್ಯೂಕ್ಲಿಯೋಸೈಡ್ಸ್) ಮತ್ತು Saccharides (ಸ್ಯಾಕರೈಡ್ಸ್) ಗಳನ್ನು ಒಳಗೊಂಡಿದೆ. |
| 04:19 | ಪ್ರತಿಯೊಂದು ಐಟಂ, ಒಂದು ‘ಸಬ್ ಮೆನ್ಯೂ’ವನ್ನು ಹೊಂದಿದೆ. |
| 04:23 | ನಾವು Aromatic Hydrocarbons ಅನ್ನು ಆಯ್ಕೆಮಾಡಿ, ‘ಸಬ್ ಮೆನ್ಯೂ’ನಲ್ಲಿಯ Benzene (ಬೆನ್ಸೀನ್) ನ ಮೇಲೆ ಕ್ಲಿಕ್ ಮಾಡೋಣ. |
| 04:31 | ‘ಪ್ರಾಪರ್ಟೀ ಪೇಜ್’ನ ಮೇಲೆ ‘ಬೆಂಜೀನ್’ನ ರಚನೆಯನ್ನು ತೋರಿಸಲಾಗಿದೆ. |
| 04:35 | ‘ಬೆಂಜೀನ್’ನ ರಚನೆಯನ್ನು ತೋರಿಸಲು ಈಗ ‘ಡಿಸ್ಪ್ಲೇ ಏರಿಯಾ’ದ ಮೇಲೆ ಕ್ಲಿಕ್ ಮಾಡಿ. |
| 04:40 | ಹೀಗೆಯೇ, Naphtalene (ನ್ಯಾಫ್ತಲೀನ್) ನ ರಚನೆಯನ್ನು ಆಯ್ಕೆಮಾಡಿ, ‘ಡಿಸ್ಪ್ಲೇ ಏರಿಯಾ’ದ ಮೇಲೆ ಕ್ಲಿಕ್ ಮಾಡೋಣ. |
| 04:49 | ಇತರ ರಚನೆಗಳನ್ನು ನೀವೇ ಆಯ್ಕೆಮಾಡಿ ‘ಡಿಸ್ಪ್ಲೇ ಏರಿಯಾ’ದ ಮೇಲೆ ಇರಿಸಿ. |
| 04:55 | ನಾವು ಫೈಲ್ ಅನ್ನು ಈಗ ಸೇವ್ ಮಾಡೋಣ. |
| 04:57 | ಟೂಲ್-ಬಾರ್ ಮೇಲಿರುವ Save the current file ಐಕಾನ್ ನ ಮೇಲೆ ಕ್ಲಿಕ್ ಮಾಡಿ. |
| 05:01 | Save as ಎನ್ನುವ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
| 05:04 | ‘ಫೈಲ್ ನೇಮ್’ಅನ್ನು Benzene ಎಂದು ನಮೂದಿಸಿ. Save ‘ಬಟನ್’ನ ಮೇಲೆ ಕ್ಲಿಕ್ ಮಾಡಿ. |
| 05:10 | ಈಗ, ಇರುವ ‘ಟೆಂಪ್ಲೇಟ್’ನ ಪಟ್ಟಿಗೆ ಹೊಸ ‘ಟೆಂಪ್ಲೇಟ್’ಅನ್ನು ಸೇರಿಸಲು ನಾವು ಕಲಿಯೋಣ. |
| 05:16 | ಟೂಲ್-ಬಾರ್ ನಲ್ಲಿಯ Open a file ಐಕಾನ್ ಮೇಲೆ ಕ್ಲಿಕ್ ಮಾಡಿ. |
| 05:20 | ಫೈಲ್ ಮತ್ತು ಫೋಲ್ಡರ್ ಗಳೊಂದಿಗೆ ಒಂದು ವಿಂಡೋ ತೆರೆದುಕೊಳ್ಳುತ್ತದೆ. |
| 05:24 | hexane ಎನ್ನುವ ಫೈಲನ್ನು ಪಟ್ಟಿಯಿಂದ ಆಯ್ಕೆಮಾಡಿ. |
| 05:27 | Open ‘ಬಟನ್’ನ ಮೇಲೆ ಕ್ಲಿಕ್ ಮಾಡಿ. |
| 05:31 | ‘ಟೆಂಪ್ಲೇಟ್’ನ ‘ಪ್ರಾಪರ್ಟೀ ಪೇಜ್’ನಲ್ಲಿಯ Add ‘ಬಟನ್’ನ ಮೇಲೆ ಕ್ಲಿಕ್ ಮಾಡಿ. |
| 05:35 | New template ‘ಪ್ರಾಪರ್ಟೀ ಪೇಜ್’ ತೆರೆದುಕೊಳ್ಳುತ್ತದೆ. |
| 05:38 | ‘ಪ್ರಾಪರ್ಟೀ ಪೇಜ್’, Name ಮತ್ತು Category (ಕೆಟೆಗರೀ) ಎನ್ನುವ ಎರಡು ಫೀಲ್ಡ್ ಗಳನ್ನು ಹೊಂದಿದೆ. |
| 05:42 | Category ಫೀಲ್ಡ್, ಒಂದು ಡ್ರಾಪ್-ಡೌನ್ ಲಿಸ್ಟ್ ಅನ್ನು ಹೊಂದಿದೆ. |
| 05:47 | ನಾವು ಲಿಸ್ಟ್ ನಿಂದ ಆಯ್ಕೆಮಾಡಬಹುದು ಅಥವಾ ನಮ್ಮದೇ ಆದ ‘ಕೆಟೆಗರೀ’ಯನ್ನು ಸೇರಿಸಬಹುದು. |
| 05:52 | ಟೆಕ್ಸ್ಟ್ ಫೀಲ್ಡ್ ನಲ್ಲಿ Hydrocarbons ಎಂದು ಟೈಪ್ ಮಾಡುವುದರ ಮೂಲಕ ನಾವು ಹೊಸ ‘ಕೆಟೆಗರೀ’ಯನ್ನು ಸೇರಿಸೋಣ. |
| 05:58 | Name ಫೀಲ್ಡ್ ನಲ್ಲಿ, ‘ಕಂಪೌಂಡ್’ನ ಹೆಸರನ್ನು Hexane ಎಂದು ನಮೂದಿಸಿ. |
| 06:03 | ‘ಡಿಸ್ಪ್ಲೇ ಏರಿಯಾ’ದ ಮೇಲಿನ ‘ಹೆಕ್ಸೇನ್’ (Hexane) ನ ರಚನೆಯ ಮೇಲೆ ಕ್ಲಿಕ್ ಮಾಡಿ. |
| 06:07 | New template ನ ‘ಪ್ರಾಪರ್ಟೀ ಪೇಜ್’ನಲ್ಲಿ ಇದನ್ನು ತೋರಿಸಲಾಗುವುದು. |
| 06:12 | OK ‘ಬಟನ್’ನ ಮೇಲೆ ಕ್ಲಿಕ್ ಮಾಡಿ. |
| 06:15 | ಈಗ, Templates ನ ‘ಡ್ರಾಪ್-ಡೌನ್’ನ ಮೇಲೆ ಕ್ಲಿಕ್ ಮಾಡಿ. |
| 06:19 | Hydrocarbons ‘ಕೆಟೆಗರೀ’ಯನ್ನು ಆಯ್ಕೆಮಾಡಿ. |
| 06:22 | ‘ಹೆಕ್ಸೇನ್’ (Hexane) ನ ರಚನೆಯನ್ನು ‘ಟೆಂಪ್ಲೇಟ್’ನ ಪಟ್ಟಿಗೆ ಸೇರಿಸಲಾಗಿದೆ ಎಂದು ಗಮನಿಸಿ. |
| 06:27 | Octane (ಓಕ್ಟೇನ್) ನ ರಚನೆಯನ್ನು ಹೈಡ್ರೋಕಾರ್ಬನ್ಸ್ ವರ್ಗಕ್ಕೆ (category) ನೀವೇ ಸೇರಿಸಿ. |
| 06:32 | ನಾವು hexane ಫೈಲ್ ಅನ್ನು ಮುಚ್ಚೋಣ. |
| 06:35 | File ಮೆನ್ಯೂ ಗೆ ಹೋಗಿ. ಫೈಲ್ ಅನ್ನು ಮುಚ್ಚಲು Close ಅನ್ನು ಆಯ್ಕೆಮಾಡಿ. |
| 06:41 | ‘ಟೆಂಪ್ಲೇಟ್ಸ್’ನ ‘ಪ್ರಾಪರ್ಟೀ ಪೇಜ್’ಅನ್ನು ಮುಚ್ಚಲು Select one or more objects ಟೂಲ್ ನ ಮೇಲೆ ಕ್ಲಿಕ್ ಮಾಡಿ. |
| 06:47 | ಈಗ, ನಾವು ರೆಸಿಡ್ಯೂಸ್ ನ ಬಗ್ಗೆ ತಿಳಿದುಕೊಳ್ಳೋಣ. |
| 06:51 | ‘ರೆಸಿಡ್ಯೂಸ್’ಗಳನ್ನು |
| 06:53 | * ‘ಕಾರ್ಬನ್ ಚೈನ್’ಗೆ ಜೋಡಿಸಲಾದ ಕ್ರಿಯಾತ್ಮಕ ಸಮೂಹದ (ಫಂಕ್ಶನಲ್ ಗ್ರುಪ್) ಸ್ವಭಾವವನ್ನು ತಿಳಿಯಲು, |
| 06:58 | * ಕ್ರಿಯಾತ್ಮಕ ಸಮೂಹದ ರಚನೆಯನ್ನು ತಿಳಿಯಲು, |
| 07:01 | * ‘ಡೇಟಾ ಬೇಸ್’ಗೆ ಹೊಸ ಕ್ರಿಯಾತ್ಮಕ ಸಮೂಹವನ್ನು ಸೇರಿಸಲು ಬಳಸಲಾಗುತ್ತದೆ. |
| 07:04 | Tools ಮೆನ್ಯೂ ಗೆ ಹೋಗಿ. Edit residues ನ ಮೇಲೆ ಕ್ಲಿಕ್ ಮಾಡಿ. |
| 07:09 | Residues ಎನ್ನುವ ವಿಂಡೋ ತೆರೆದುಕೊಳ್ಳುತ್ತದೆ. |
| 07:12 | ಇದು New, Save ಮತ್ತು Delete ಎನ್ನುವ ಮೂರು ‘ಬಟನ್’ಗಳನ್ನು ಹೊಂದಿದೆ. |
| 07:18 | New ಬಟನ್, ಒಂದು ಡ್ರಾಪ್-ಡೌನ್ ಲಿಸ್ಟ್ ಅನ್ನು ಹೊಂದಿದೆ. |
| 07:21 | ಲಿಸ್ಟ್ ನಿಂದ ‘n-Pr’ (ಎನ್ ಪಿ ಆರ್) ಅನ್ನು ಆಯ್ಕೆಮಾಡಿ. |
| 07:25 | Identity ಟ್ಯಾಬ್, ಆಯ್ಕೆಯಾದ ರೆಸಿಡ್ಯೂ ನ Symbol(s) (ಸಿಂಬಲ್) ಮತ್ತು Name ಗಳನ್ನು ತೋರಿಸುತ್ತದೆ. |
| 07:32 | Formula ಟ್ಯಾಬ್, ಆಯ್ಕೆಯಾದ ರೆಸಿಡ್ಯೂ ನ ಮೂಲರೂಪದ ತೆಳು ರಚನೆಯನ್ನು (skeletal structure) ತೋರಿಸುತ್ತದೆ. |
| 07:38 | ಹೀಗೆಯೇ, ನಾವು 's-Bu' (ಎಸ್ ಬಿ ಯು) ಅನ್ನು ‘ಸೆಕೆಂಡರಿ ಬ್ಯುಟೈಲ್’ಗಾಗಿ ಆಯ್ಕೆಮಾಡೋಣ. |
| 07:44 | ಆಯ್ಕೆಯಾದ ರೆಸಿಡ್ಯೂ ನ Symbol(s), Name ಮತ್ತು ತೆಳು ರಚನೆಯನ್ನು (ಸ್ಕೆಲಿಟನ್ ಸ್ಟ್ರಕ್ಚರ್) ಗಮನಿಸಿ. |
| 07:52 | ಈಗ, Hydroxy ಗ್ರುಪ್ ಅನ್ನು ಒಂದು ಹೊಸ ‘ರೆಸಿಡ್ಯೂ’ ಎಂದು ನಾವು ಸೇರಿಸೋಣ. |
| 07:57 | ಒಂದು ಹೊಸ ರೆಸಿಡ್ಯೂವನ್ನು ಸೇರಿಸಲು New ‘ಬಟನ್’ನ ಮೇಲೆ ಕ್ಲಿಕ್ ಮಾಡಿ. |
| 08:02 | Symbol ಫೀಲ್ಡ್ ನಲ್ಲಿ ‘O-H’ (ಒ ಎಚ್) ಎಂದು ಟೈಪ್ ಮಾಡಿ. |
| 08:06 | ಇದನ್ನು Hydroxy (ಹೈಡ್ರೊಕ್ಸಿ) ಎಂದು ಹೆಸರಿಸಿ. |
| 08:09 | Formula ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
| 08:11 | ನೀವು ಒಂದು ಬುಲೆಟೆಡ್ ಬಾಂಡ್ ಅನ್ನು ನೋಡುವಿರಿ. |
| 08:14 | ‘ಕರ್ಸರ್’ಅನ್ನು ‘ಬಾಂಡ್’ನ ಹತ್ತಿರ ಇರಿಸಿ ದೊಡ್ಡಕ್ಷರ ‘O’ ಅನ್ನು ಒತ್ತಿ. |
| 08:19 | ‘O’ ಮತ್ತು ‘Os’ ಗಳೊಂದಿಗೆ ಒಂದು ‘ಸಬ್-ಮೆನ್ಯೂ’ ತೆರೆದುಕೊಳ್ಳುತ್ತದೆ. ‘O’ ಅನ್ನು ಆಯ್ಕೆಮಾಡಿ. |
| 08:24 | ‘O-H’ ಗ್ರುಪ್ ‘ಬಾಂಡ್’ಗೆ ಸೇರಿಕೊಳ್ಳುತ್ತದೆ. |
| 08:28 | Save ‘ಬಟನ್’ನ ಮೇಲೆ ಕ್ಲಿಕ್ ಮಾಡಿ. |
| 08:31 | ಈಗ ‘ಲಿಸ್ಟ್’ಅನ್ನು ವೀಕ್ಷಿಸಲು New ‘ಬಟನ್’ನ ಮೇಲೆ ಕ್ಲಿಕ್ ಮಾಡಿ. |
| 08:35 | O-H ರೆಸಿಡ್ಯೂ, ಲಿಸ್ಟ್ ಗೆ ಸೇರಿಸಲ್ಪಟ್ಟಿದೆ ಎಂದು ಗಮನಿಸಿ. |
| 08:40 | ವಿಂಡೋವನ್ನು ಮುಚ್ಚಲು ನಾವು Close ‘ಬಟನ್’ನ ಮೇಲೆ ಕ್ಲಿಕ್ ಮಾಡೋಣ. |
| 08:44 | ಇದರೊಂದಿಗೆ ನಾವು ಈ ‘ಟ್ಯುಟೋರಿಯಲ್’ನ ಕೊನೆಗೆ ಬರುತ್ತೇವೆ. |
| 08:48 | ನಾವು ಸಾರಾಂಶಗೊಳಿಸೋಣ. |
| 08:50 | ಈ ‘ಟ್ಯುಟೋರಿಯಲ್’ನಲ್ಲಿ ನಾವು, |
| 08:53 | * ‘ಪ್ರಿಫರನ್ಸಸ್’ಅನ್ನು ಎಡಿಟ್ ಮಾಡುವುದು, |
| 08:55 | * ‘ಟೆಂಪ್ಲೇಟ್’ಗಳನ್ನು ನಿಭಾಯಿಸುವುದು, |
| 08:56 | * ಸಿದ್ಧವಾಗಿರುವ ‘ಟೆಂಪ್ಲೇಟ್’ಗಳನ್ನು ಆಯ್ಕೆಮಾಡುವುದು ಹಾಗೂ ಬಳಸುವುದು, |
| 08:59 | * ಹೊಸ ‘ಟೆಂಪ್ಲೇಟ್’ಅನ್ನು ಸೇರಿಸುವುದು, |
| 09:01 | * ‘ರೆಸಿಡ್ಯೂಸ್’ನ ಉಪಯೋಗಗಳು ಮತ್ತು ‘ರೆಸಿಡ್ಯೂಸ್’ಅನ್ನು ಎಡಿಟ್ ಮಾಡುವುದು ಇವುಗಳ ಬಗ್ಗೆ ಕಲಿತಿದ್ದೇವೆ. |
| 09:07 | ಅಸೈನ್ಮೆಂಟ್ ರೂಪದಲ್ಲಿ, ‘ಟೆಂಪ್ಲೇಟ್ಸ್’ ಪಟ್ಟಿಯಿಂದ ‘ಸ್ಯಾಕರೈಡ್ಸ್’ಅನ್ನು ಆಯ್ಕೆಮಾಡಿ ಹಾಗೂ ಬಳಸಿ. |
| 09:12 | * ಇತರ ‘ರೆಸಿಡ್ಯೂ’ಗಳನ್ನು ಪರಿಶೋಧಿಸಿ. |
| 09:16 | ಈ ಕೆಳಗಿನ URL ನಲ್ಲಿ ಲಭ್ಯವಿರುವ ವೀಡಿಯೋವನ್ನು ನೋಡಿ. http://spoken-tutorial.org/What_is_a_Spoken_Tutorial |
| 09:20 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವನ್ನು ಸಾರಾಂಶಗೊಳಿಸುತ್ತದೆ. |
| 09:24 | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ಥ್’ ಸಿಗದಿದ್ದರೆ ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
| 09:29 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ತಂಡವು: ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
| 09:33 | ಆನ್-ಲೈನ್ ಪರೀಕ್ಷೆಯಲ್ಲಿ ಪಾಸಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
| 09:37 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ. contact@spoken-tutorial.org |
| 09:45 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರಕಲ್ಪವು ‘ಟಾಕ್ ಟು ಎ ಟೀಚರ್’ ಪ್ರಕಲ್ಪದ ಒಂದು ಭಾಗವಾಗಿದೆ. |
| 09:50 | ಇದು ಭಾರತ ಸರ್ಕಾರದ ICT, MHRD ಯ ಮೂಲಕ ‘ರಾಷ್ಟ್ರೀಯ ಸಾಕ್ಷರತಾ ಮಿಶನ್’ನ ಆಧಾರವನ್ನು ಪಡೆದಿದೆ. |
| 09:57 | ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ. http://spoken-tutorial.org/NMEICT-Intro |
| 10:04 | IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ ಐತಾಳ್.ವಂದನೆಗಳು. |