Firefox/C4/Extensions/Kannada

From Script | Spoken-Tutorial
Jump to: navigation, search
Time Narration
00:00 ಮೊಝಿಲ್ಲಾ ಫೈರ್ ಫಾಕ್ಸ್ ನಲ್ಲಿ ಎಕ್ಸ್ಟೆನ್ಷನ್ ಎಂಬ ಸ್ಪೊಕನ್ ಟ್ಯುಟೊರಿಯಲ್ ಗೆ ಸ್ವಾಗತ.
00:05 ಈ ಟ್ಯುಟೊರಿಯಲ್ ನಲ್ಲಿ ನಾವು ಎಕ್ಸ್ಟೆನ್ಷನ್ ಅಥವಾ ಆಡ್ ಆನ್ಸ್, ಅವುಗಳನ್ನು ಇನ್ ಸ್ಟಾಲ್ ಮಾಡುವುದು ಮತ್ತು ರೆಕಮೆಂಡೆಡ್ ಎಕ್ಸ್ಟೆನ್ಷನ್ಸ್ ಗಳ ಬಗ್ಗೆ ಕಲಿಯಲಿದ್ದೇವೆ.
00:14 ಇಲ್ಲಿ ನಾವು ಉಬಂಟು 10.04 ರಲ್ಲಿ ಫೈರ್ ಫಾಕ್ಸ್ ನ 7.0 ಆವೃತ್ತಿಯನ್ನು ಬಳಸುತ್ತಿದ್ದೇವೆ.
00:20 ಫೈರ್ ಫಾಕ್ಸ್ ಬ್ರೌಸರನ್ನು ನಾವೀಗ ತೆರೆಯೋಣ.
00:23 ಡಿಫಾಲ್ಟ್ ಆಗಿ yahoo home page ತೆರೆದುಕೊಳ್ಳುತ್ತದೆ.
00:27 ಎಕ್ಸ್ಟೆನ್ಷನ್ ಗಳು ಅಥವಾ ಆಡ್ ಆನ್ ಗಳೆಂದರೇನು?
00:29 ಎಕ್ಸ್ಟೆನ್ಷನ್ ಗಳು ನಿಮಗೆ,
00:31 ಫೈರ್ ಫಾಕ್ಸ್ ಬ್ರೌಸರ್ ನಲ್ಲಿ ಹೊಸ ವೈಶಿಷ್ಟ್ಯಳನ್ನು ಸೇರಿಸಲು ಅನುವು ಮಾಡಿಕೊಡುತ್ತವೆ.
00:35 ಇರುವ ವೈಶಿಷ್ಟ್ಯಗಳನ್ನು ಅಭಿವೃದ್ಧಿಸಲೂ ಕೂಡಾ ಸಹಕರಿಸುತ್ತವೆ.
00:37 ಮತ್ತು ಫೈರ್ ಫಾಕ್ಸ್ ಬ್ರೌಸರನ್ನು ನಿಮ್ಮ ಆಯ್ಕೆಗೆ ತಕ್ಕಂತೆ ಕಸ್ಟಮೈಸ್ ಗೊಳಿಸಲು ಸಹಕರಿಸುತ್ತವೆ.
00:42 ಎಕ್ಸ್ಟೆನ್ಷನ್ ಗಳು ಫೈರ್ ಫಾಕ್ಸ್ ಬ್ರೌಸರ್ ನ ಒಂದು ಭಾಗ.
00:45 ಮತ್ತು ಇವು ಬ್ರೌಸರ್ ನ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ.
00:48 ಉದಾಹರಣೆಗಾಗಿ, ನೀವು ಎಕ್ಸ್ಟೆನ್ಷನನ್ನು ಇನ್ಸ್ಟಾಲ್ ಮಾಡುವುದರಿಂದ,
00:51 ಜಾಹಿರಾತುಗಳನ್ನು ಮತ್ತು ಪಾಪ್ ಅಪ್ ಗಳನ್ನು ತಡೆಗಟ್ಟಬಹುದು.
00:54 ವಸ್ತುಗಳ ಬೆಲೆಯನ್ನು ಹೋಲಿಕೆ ಮಾಡಬಹುದು.
00:56 ಹವಾಮಾನದ ಅಪ್ ಡೇಟ್ ಗಳನ್ನು ತೆರೆಯ ಮೇಲೆ ಜೋಡಿಸಬಹುದು.
01:00 ನಾವೀಗ Grab and Drag (ಗ್ರ್ಯಾಬ್ ಅಂಡ್ ಡ್ರ್ಯಾಗ್) ಎಂಬ ಎಕ್ಸ್ಟೆನ್ಷನ್ ಒಂದನ್ನು ಇನ್ ಸ್ಟಾಲ್ ಮಾಡೋಣ.
01:03 ಹಲವು ರೀತಿಯಲ್ಲಿ ವೆಬ್ ಪೇಜನ್ನು ಸ್ಕ್ರೋಲ್ ಮಾಡಲು ಗ್ರ್ಯಾಬ್ ಅಂಡ್ ಡ್ರ್ಯಾಗ್ ಸಹಕರಿಸುತ್ತದೆ.
01:07 ಇದು Adobe Acrobat' (ಅಡೋಬ್ ಆಕ್ರೊಬಾಟ್) ನ ಗ್ರ್ಯಾಬ್ ಅಂಡ್ ಡ್ರ್ಯಾಗ್ ಫಂಕ್ಷನ್ ನನ್ನು ಹೋಲುತ್ತದೆ.
01:12 ಮೆನ್ಯು ಬಾರ್ ನಲ್ಲಿ, Tools (ಟೂಲ್ಸ್) ಮೇಲೆ ಕ್ಲಿಕ್ ಮಾಡಿ ನಂತರ Add-ons (ಆಡ್ ಆನ್ಸ್) ನ ಮೇಲೆ ಕ್ಲಿಕ್ ಮಾಡಿ.
01:16 Add-ons Manager (ಆಡ್ ಆನ್ಸ್ ಮ್ಯಾನೇಜರ್) ಟ್ಯಾಬ್ ತೆರೆದುಕೊಳ್ಳುತ್ತದೆ.
01:20 ಪರ್ಯಾಯವಾಗಿ ನೀವು, CTRL+Shift+A ಕೀಗಳನ್ನು ಒಮ್ಮೆಗೇ ಒತ್ತುವ ಮುಖಾಂತರ Add-ons Manager (ಆಡ್ ಆನ್ ಮ್ಯಾನೆಜರ್) ಟ್ಯಾಬನ್ನು ತೆರೆಯಬಹುದು.
01:28 Add-ons Manager (ಆಡ್ ಆನ್ಸ್ ಮ್ಯಾನೇಜರ್) ನ ಎಡಬದಿಯ ಪ್ಯಾನೆಲ್ ನಲ್ಲಿ ಲಭ್ಯವಿರುವ ಆಯ್ಕೆಗಳು ಬಿತ್ತರಗೊಳ್ಳುತ್ತವೆ.
01:34 Get Add-ons (ಗೆಟ್ ಆಡ್ ಆನ್ಸ್) ಎಂಬ ಆಯ್ಕೆಯು ಡಿಫಾಲ್ಟ್ ಆಗಿ ಆಯ್ಕೆಯಾಗಿರುವುದನ್ನು ಗಮನಿಸಿ.
01:39 ಎಡಬದಿಯ ಪ್ಯಾನೆಲ್ ನಲ್ಲಿ ಆರಿಸಿದ ಆಯ್ಕೆಯ ಬಗೆಗಿನ ಮಾಹಿತಿಯು ಬಲಬದಿಯ ಪ್ಯಾನೆಲ್ ನಲ್ಲಿ ಕಾಣಸಿಗುತ್ತದೆ.
01:45 ಆದ್ದರಿಂದ, ಬಲಬದಿಯ ಪ್ಯಾನೆಲ್, ಆಡ್ ಆನ್ ಗಳನ್ನು ವಿವರಿಸುತ್ತದೆ ಮತ್ತು ಅವುಗಳನ್ನು ಬಳಸುವ ಬಗೆಯನ್ನು ತಿಳಿಸುತ್ತದೆ.
01:51 ಅಷ್ಟೇ ಅಲ್ಲದೆ, ನಾವು ಇನ್ ಸ್ಟಾಲ್ ಮಾಡಬಹುದಾದ ಇನ್ನೂ ಹಲವು ಆಡ್ ಆನ್ ಗಳ ಪಟ್ಟಿಯನ್ನೂ ಇದು ತೋರಿಸುತ್ತದೆ.
01:55 ನಾವೀಗ Grab and Drag (ಗ್ರ್ಯಾಬ್ ಅಂಡ್ ಡ್ರ್ಯಾಗ್) ಎಂಬ ಹೊಸ ಆಡ್ ಆನ್ ಒಂದನ್ನು ಇನ್ ಸ್ಟಾಲ್ ಮಾಡೋಣ.
01:59 ಮೊದಲಿಗೆ, ಮೇಲ್ಭಾಗದ ಬಲಮೂಲೆಯಲ್ಲಿರುವ ಸರ್ಚ್ ಬಾರ್ ನಲ್ಲಿ Grab and Drag (ಗ್ರ್ಯಾಬ್ ಅಂಡ್ ಡ್ರ್ಯಾಗ್) ಎಂದು ಟೈಪ್ ಮಾಡಿ. Enter ಅನ್ನು ಒತ್ತಿರಿ.
02:08 ನಾವು ಸರ್ಚ್ ಮಾಡಿದ ಹೆಸರಿಗೆ ಸರಿಯಾಗಿ ಹೊಂದುವ ಆಡ್ ಆನ್ ಗಳ ಪಟ್ಟಿ ಬಲಭಾಗದ ಪ್ಯಾನಲ್ ನಲ್ಲಿ ಕಾಣಸಿಗುತ್ತದೆ.
02:14 ಮತ್ತು ಎಲ್ಲಾ ಆಡ್ ಆನ್ ಗಳು ತಮ್ಮ ಹೆಸರಿನ ಜೊತೆಗೆ ಡ್ರ್ಯಾಗ್ ಎಂಬ ಪದವನ್ನು ಹೊಂದಿರುವುದನ್ನು ಗಮನಿಸಿ.
02:20 ಹಾಗೆಯೇ ಸರಿಯಾದ ಹೋಲಿಕೆಯಾದ Grab and Drag, ಪಟ್ಟಿಯ ಮೊದಲ ಹೆಸರಾಗಿ ಗೋಚರವಾಗುವುದನ್ನೂ ಗಮನಿಸಿ.
02:26 Install (ಇನ್ ಸ್ಟಾಲ್) ನ ಮೇಲೆ ಕ್ಲಿಕ್ ಮಾಡಿ.
02:28 ಹೆಚ್ಚಿನ ಎಲ್ಲಾ ಸಾಫ್ಟ್ ವೇರ್ ಗಳಂತೆ ಕೆಲವು ಆಡ್ ಆನ್ ಗಳು ಕೂಡಾ, end-user license agreements (ಎಂಡ್ ಯೂಸರ್ ಲೈಸೆನ್ಸ್ ಅಗ್ರಿಮೆಂಟ್) ಎಂಬುದನ್ನು ಹೊಂದಿರಲೂಬಹುದು.
02:35 End-User License Agreement (ಎಂಡ್ ಯೂಸರ್ ಲೈಸನ್ಸ್ ಅಗ್ರಿಮೆಂಟ್) ಎಂಬ ಡಯಲಾಗ್ ಬಾಕ್ಸ್ ನಲ್ಲಿ Accept and Install (ಅಕ್ಸೆಪ್ಟ್ ಅಂಡ್ ಇನ್ ಸ್ಟಾಲ್) ಎಂಬಲ್ಲಿ ಕ್ಲಿಕ್ ಮಾಡಿ.
02:41 Add-on downloading progress bar (ಆಡ್ ಆನ್ ಡೌನ್ ಲೋಡಿಂಗ್ ಪ್ರೊಗ್ರೆಸ್ ಬಾರ್) ಕಾಣಿಸಿಕೊಳ್ಳುತ್ತದೆ.
02:46 ನಂತರ, when you restart Mozilla Firefox the add-on will be installed (ವೆನ್ ಯು ರಿಸ್ಟಾರ್ಟ್ ಮೊಝಿಲ್ಲಾ ಫೈರ್ ಫಾಕ್ಸ್ಆಡ್ ಆನ್ ವಿಲ್ ಬಿ ಇನ್ ಸ್ಟಾಲ್ಡ್)
02:50 ಎಂಬ ಸಂದೇಶ ಗೋಚರವಾಗುತ್ತದೆ.
02:54 Restart Now (ರಿಸ್ಟಾರ್ಟ್ ನೌ) ನ ಮೇಲೆ ಕ್ಲಿಕ್ ಮಾಡಿ.
02:57 ಫೈರ್ ಫಾಕ್ಸ್ ಬ್ರೌಸರ್ ಕ್ಲೋಸ್ ಆಗಿ ನಂತರ ತೆರೆದುಕೊಳ್ಳುತ್ತದೆ..
03:01 Add-ons Manager (ಆಡ್ ಆನ್ಸ್ ಮ್ಯಾನೇಜರ್) ಹೊಸ ಟ್ಯಾಬ್ ನಲ್ಲಿ ತೆರೆದುಕೊಳ್ಳುತ್ತದೆ.
03:05 ಬಲಬದಿಯ ಪ್ಯಾನಲ್ ನ Extensions tab (ಎಕ್ಸ್ಟೆನ್ಷನ್ ಟ್ಯಾಬ್) ನಲ್ಲಿ Grab and Drag (ಗ್ರ್ಯಾಬ್ ಅಂಡ್ ಡ್ರ್ಯಾಗ್) ಎಂಬ ಎಕ್ಸ್ಟೆನ್ಷನ್ ಗೋಚರವಾಗುವುದನ್ನು ಗಮನಿಸಿ.
03:11 ಮೊದಲಿನ ಹಂತಗಳನ್ನು ಪಾಲಿಸುವ ಮುಖಾಂತರ Scrap Book (ಸ್ಕ್ರಾಪ್ ಬುಕ್) ಎಂಬ ಮತ್ತೊಂದು ಎಕ್ಸ್ಟೆನ್ಷನ್ ನನ್ನು ಇನ್ ಸ್ಟಾಲ್ ಮಾಡೊಣ.
03:18 Scrap Book (ಸ್ಕ್ರಾಪ್ ಬುಕ್) ವೆಬ್ ಪೇಜನ ಸಂಗ್ರಹವನ್ನು ಸೇವ್ ಮಾಡಲು ಮತ್ತು ಮ್ಯಾನೇಜ್ ಮಾಡಲು ಅನುವು ಮಾಡಿಕೊಡುತ್ತದೆ.
03:24 ಇನ್ಸ್ಟಾಲೇಷನ್ ನ ಪ್ರೊಗ್ರೆಸ್ ಬಾರ್ ಮತ್ತು ಫೈರ್ ಫಾಕ್ಸ್ ಅನ್ನು ಕ್ಲೋಸ್ ಮಾಡಿ ರಿಸ್ಟಾರ್ಟ್ ಮಾಡುವ ಬಗೆಗಿನ ಸಂದೇಶ, ಇವೆರೆಡೂ ಬೇರೆಯಾಗಿ ಗೋಚರಸಿದೇ ಇರುವುದನ್ನು ಗಮನಿಸಿ.
03:33 ಅವುಗಳು Scrap Book (ಸ್ಕ್ರಾಪ್ ಬುಕ್) ಎಂಬ ಬಾರ್ ನಲ್ಲಿ ಕಾಣಸಿಗುತ್ತವೆ.
03:36 Restart Now ಅನ್ನು ಕ್ಲಿಕ್ ಮಾಡಿ.
03:40 Scrap Book (ಸ್ಕ್ರಾಪ್ ಬುಕ್) ಫೈರ್ ಫಾಕ್ಸ್ ನಲ್ಲಿ ಇನ್ ಸ್ಟಾಲ್ ಆಗಿದೆ.
03:44 ಟ್ಯುಟೋರಿಯಲ್ ನನ್ನು ಸದ್ಯಕ್ಕೆ ನಿಲ್ಲಿಸಿ ಮತ್ತು ಈ ಅಭ್ಯಾಸವನ್ನು ಮಾಡಿ.
03:48 ಫೈರ್ ಫಾಕ್ಸ್ ಬ್ರೌಸರ್ ನಲ್ಲಿ ಆಡ್ ಆನ್ಸ್ ಮ್ಯಾನೆಜರನ್ನು ತೆರೆಯಿರಿ.
03:52 Get Add-ons (ಗೆಟ್ ಆಡ್ ಆನ್ಸ್) ಎಂಬ ಆಪ್ಷನ್ ನಲ್ಲಿ Featured Add-ons (ಫೀಚರ್ಡ್ ಆಡ್ ಆನ್ಸ್) ಪಟ್ಟಿಯಿಂದ ಹೊಸ ಆಡ್ ಆನ್ ಒಂದನ್ನು ಇನ್ಸ್ಟಾಲ್ ಮಾಡಿ.
03:59 ಆಡ್ ಆನ್ಸ್ ಮ್ಯಾನೆಜರ್ ನಲ್ಲಿ ಎಕ್ಸ್ಟೆನ್ಷನ್ ಆಪ್ಷನ್ ನನ್ನು ಬಳಸುವ ಮುಖಾಂತರ
04:03 ಆಡ್, ಡಿಲಿಟ್ ಅಥವಾ ಅಪ್ ಡೇಟ್
04:06 ಎಂದು ಎಕ್ಸ್ಟೆನ್ಷನ್ ನನ್ನು ನಿಯಂತ್ರಿಸಿ.
04:08 ಫೈರ್ ಫಾಕ್ಸ್ ಬ್ರೌಸರ್ ನಲ್ಲಿ Add-ons Manager tab ಮೇಲೆ ಕ್ಲಿಕ್ ಮಾಡಿ.
04:13 ಎಡಬದಿಯ ಪ್ಯಾನಲ್ ನಲ್ಲಿ Extensions ಮೇಲೆ ಕ್ಲಿಕ್ ಮಾಡಿ.
04:16 ಬಲಬದಿಯ ಪ್ಯಾನಲ್ ನಿಮ್ಮ ಕಂಪ್ಯೂಟರ್ ನಲ್ಲಿ ಈಗಾಗಲೇ ಇನ್ ಸ್ಟಾಲ್ ಆಗಿರುವ ಎಕ್ಸ್ಟೆನ್ಷನ್ ಗಳನ್ನು ತೋರಿಸುತ್ತದೆ.
04:22 ScrapBook ನ ಬಗೆಗಿನ ಹೆಚ್ಚಿನ ಮಾಹಿತಿಗಾಗಿ, ಅದನ್ನು ಸೆಲೆಕ್ಟ್ ಮಾಡಿ ನಂತರ More (ಮೋರ್) ನ ಮೇಲೆ ಕ್ಲಿಕ್ ಮಾಡಿ.
04:27 ಸ್ಕ್ರಾಪ್ ಬುಕ್ ಬಗೆಗಿನ ಮಾಹಿತಿ ಕಾಣಸಿಗುತ್ತದೆ.
04:31 ಈ ಎಕ್ಸ್ಟೆನ್ಷನ್ ನ ಬಗ್ಗೆ ತಿಳಿಯಲು ವೆಬ್ ಸೈಟ್ ಲಿಂಕ್ ನ ಮೇಲೆ ಕ್ಲಿಕ್ ಮಾಡಿ.
04:35 ಈಗ ಎಡಬದಿಯ ಪ್ಯಾನಲ್ ನಿಂದ Extension option ನ ಮೇಲೆ ಕ್ಲಿಕ್ ಮಾಡಿ.
04:40 ಪ್ರತಿಯೊಂದು ಎಕ್ಸ್ಟೆನ್ಷನ್ನಿಗೂ ಕೂಡಾ ಡಿಸೇಬಲ್ ಅಥವಾ ರಿಮೂವ್ ಎಂಬ ಪ್ರಿಫರೆನ್ಸ್ ಅನ್ನು ಯೋಜಿಸಿರುವುದನ್ನು ಗಮನಿಸಿ.
04:46 Grab and Drag ಅನ್ನು ಸೆಲೆಕ್ಟ್ ಮಾಡಿ ಮತ್ತುPreferences ನ ಮೇಲೆ ಕ್ಲಿಕ್ ಮಾಡಿ.
04:49 ನೀವು ನಿಮ್ಮ ಪ್ರಿಫರೆನ್ಸ್ ಅನ್ನು ಈ ಡಯಲಾಗ್ ಬಾಕ್ಸ್ ಅನ್ನು ಬಳಸುವ ಮೂಲಕ ಸೆಟ್ ಮಾಡಬಹುದು.
04:53 ಡಯಲಾಗ್ ಬಾಕ್ಸ್ ನಿಂದ ಹೊರಬರಲು Cancel ಅನ್ನು ಕ್ಲಿಕ್ ಮಾಡಿ.
04:57 ಈಗ Scrap Book ಅನ್ನು ಸೆಲೆಕ್ಟ್ ಮಾಡಿ ನಂತರ Preferences ಮೇಲೆ ಕ್ಲಿಕ್ ಮಾಡಿ.
05:01 Scrap Book Options (ಸ್ಕ್ರಾಪ್ ಬುಕ್ ಆಪ್ಷನ್ಸ್) ಎಂಬ ಡಯಲಾಗ್ ಬಾಕ್ಸ್, Grab and Drag Preferences (ಗ್ರ್ಯಾಬ್ ಅಂಡ್ ಡ್ರ್ಯಾಗ್ ಪ್ರಿಫರೆನ್ಸ್) ಎಂಬ ಡಯಲಾಗ್ ಬಾಕ್ಸ್ ಗಿಂತ ಭಿನ್ನವಾಗಿರುವುದನ್ನು ಗಮನಿಸಿ.
05:09 ಹೀಗಾಗಿ ಪ್ರತಿಯೊಂದು ಎಕ್ಸ್ಟೆನ್ಷನ್ ಕೂಡಾ ತನ್ನದೇ ಆದ ವಿಭಿನ್ನ ಸೆಟ್ಟಿಂಗ್ ಆಪ್ಷನ್ ನನ್ನು ಹೊಂದಿರುತ್ತದೆ.
05:13 ಒಂದು ವೇಳೆ ಯಾವುದಾದರೂ ಎಕ್ಸ್ಟೆನ್ಷನ್ ನಲ್ಲಿPreferences ಬಟನ್ ಕಾಣದಿದ್ದಲ್ಲಿ,
05:17 ಅದಕ್ಕೆ ಪ್ರಿಫರೆನ್ಸ್ ಗಳು ಇರುವುದಿಲ್ಲ ಎಂಬುದನ್ನು ಅದು ಸೂಚಿಸುತ್ತದೆ.
05:21 Scrap Book Options (ಸ್ಕ್ರಾಪ್ ಬುಕ್ ಆಪ್ಷನ್) ಡಯಲಾಗ್ ಬಾಕ್ಸ್ ನಿಂದ ಹೊರಬರಲು Close ಮೇಲೆ ಕ್ಲಿಕ್ ಮಾಡಿ.
05:26 ಹಲವು ಸಾಪ್ಟ್ ವೇರ್ ಗಳಲ್ಲಿದ್ದಂತೆ, ಆಡ್ ಆನ್ ಗಳು ಕೂಡಾ ನಿಯಮಿತವಾಗಿ ಅಪ್ ಡೇಟ್ ಆಗುತ್ತಿರುತ್ತವೆ.
05:31 ಸ್ಕ್ರಾಪ್ ಬುಕ್ ಅನ್ನುಅಪ್ ಡೇಟ್ ಮಾಡಲು, ಅದನ್ನು ಸೆಲೆಕ್ಟ್ ಮಾಡಿ. ನಂತರ ರೈಟ್ ಕ್ಲಿಕ್ ಮಾಡಿ Find Updates (ಫೈಂಡ್ ಅಪ್ ಡೇಟ್) ಅನ್ನು ಆರಿಸಿ.
05:37 ಅಪ್ ಡೇಟ್ ಗಳು ಲಭ್ಯವಿದ್ದಲ್ಲಿ, Update ' ಎಂಬ ಬಟನ್ ಗೋಚರವಾಗುತ್ತವೆ.
05:42 ಆಡ್ ಆನ್ ಗಳನ್ನು ಅಪ್ ಡೇಟ್ ಮಾಡಲು ಅದರ ಮೇಲೆ ಕ್ಲಿಕ್ ಮಾಡಿ.
05:47 ಸ್ಕ್ರಾಪ್ ಬುಕ್ ನಲ್ಲಿ ಅಪ್ ಡೇಟ್ ಗಳು ಲಭ್ಯವಿಲ್ಲದಿರುವುದರಿಂದ ಅಲ್ಲಿ update ಬಟನ್ ಇರುವುದಿಲ್ಲ.
05:51 ಇಷ್ಟಾಗಿ ನಿಮಗೆ ಎಕ್ಸ್ಟೆನ್ಷನ್ ಗಳನ್ನು ಉಪಯೊಗಿಸಲು ಇಚ್ಛೆಯಿಲ್ಲದಿದಲ್ಲಿ Disable (ಡಿಸೇಬಲ್) ಬಟನ್ ನ ಮೇಲೆ ಕ್ಲಿಕ್ ಮಾಡಿ.
05:58 ನಿಮ್ಮ ಕಂಪ್ಯೂಟರ್ ನಿಂದ ಎಕ್ಸೆಪ್ಷನ್ ಗಳನ್ನು ತೆಗೆದುಹಾಕಲು Remove (ರಿಮೂವ್) ಬಟನ್ ನನ್ನು ಕ್ಲಿಕ್ ಮಾಡಿ.
06:03 ನಾವೀಗ ಎಕ್ಸೆಪ್ಷನ್ ಗಳ ಬಗ್ಗೆ ಕಲಿತೆವು.
06:06 ಹೀಗಾಗಿ ನೀವೀಗ ಫೈರ್ ಫಾಕ್ಸ್ ನ ಅತ್ಯುತ್ತಮ ಬಳಕೆಗಾಗಿ ವಿವಿಧ ವೈಶಿಷ್ಟ್ಯಗಳನ್ನೊಳಗೊಂಡ ಎಕ್ಸ್ಟೆನ್ಶನ್ ಗಳನ್ನು ಬಳಸಿಕೊಳ್ಳಬಹುದು.
06:13 ಹಲವು ಬಗೆಯ ಆಡ್ ಆನ್ ಗಳ ಬಗ್ಗೆ ತಿಳಿಯಲು ನೀವು Get Add-ons (ಗೆಟ್ ಆಡ್ ಆನ್ಸ್) ಎಂಬ ಆಪ್ಷನ್ ನನ್ನು ಬಳಸಬಹುದು.
06:18 ನಂತರ ನಿಮಗೆ ತುಂಬಾ ಅವಶ್ಯಕವಾಗಿರುವ ಮತ್ತು ಉಪಯೋಗವಿರುವ ಆಡ್ ಆನ್ ಗಳನ್ನು ಆರಿಸಿ ಇನ್ ಸ್ಟಾಲ್ ಮಾಡಬಹುದು.
06:24 ಫೈರ್ ಫಾಕ್ಸ್ ಎಕ್ಟೆನ್ಷನ್ ಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ Firefox (ಫೈರ್ ಫಾಕ್ಸ್) ವೆಬ್ ಸೈಟ್ ಗೆ ಭೇಟಿ ನೀಡಿ.
06:31 ಈಗ ನಾವು ಈ ಟ್ಯುಟೊರಿಯಲ್ ನ ಕೊನೆಗೆ ಬಂದಿದ್ದೇವೆ.
06:34 ಈ ಟ್ಯುಟೋರಿಯಲ್ ನಲ್ಲಿ ನಾವು, ಎಕ್ಸ್ಟೆನ್ಷನ್ ಗಳು, ಅವುಗಳ ಇನ್ ಸ್ಟಾಲಿಂಗ್, ಮತ್ತು ರಿಕಮಂಡೆಡ್ ಎಕ್ಸ್ಟೆನ್ಷನ್ ಗಳ ಬಗ್ಗೆ ಕಲಿತಿದ್ದೇವೆ.
06:42 ಇಲ್ಲಿ ನಿಮಗೆ ಅಭ್ಯಾಸವಿದೆ.
06:45 WebMail Notifier (ವೆಬ್ ಮೈಲ್ ನೋಟಿಫೈಯರ್) ಎಂಬ ಹೆಸರಿನ ಎಕ್ಸ್ಟೆನ್ಷನ್ ನನ್ನು ಹುಡುಕಿರಿ.
06:49 ಮತ್ತು ಅದನ್ನು ನಿಮ್ಮ ಕಂಪ್ಯೂಟರ್ ನಲ್ಲಿ ಇನ್ ಸ್ಟಾಲ್ ಮಾಡಿರಿ.
06:52 ಈ ಎಕ್ಸ್ಟೆನ್ಷನ್ ನ ಫೀಚರ್ ಗಳು ಮತ್ತು ಅವುಗಳನ್ನು ಉಪಯೊಗಿಸುವ ಮುಖಾಂತರ ನಿಮ್ಮ ಮೇಲ್ ಅಕೌಂಟ್ ನ ಅನ್ ರೀಡ್ ಮೇಲ್ ಗಳನ್ನು ಪರಿಶೀಲಿಸುವುದನ್ನು ತಿಳಿದುಕೊಳ್ಳಿ.
07:01 ಎಕ್ಸ್ಟೆನ್ಷನ್ ನನ್ನು ನಿಶ್ಕ್ರಿಯಗೊಳಿಸಿ.
07:03 ಅದನ್ನು ಫೈರ್ ಫಾಕ್ಸ್ ನಿಂದ ತೆಗೆದುಹಾಕಿರಿ.
07:07 ಈ ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋ ವನ್ನುನೋಡಿ.
07:10 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವನ್ನುಹೇಳುತ್ತದೆ.
07:13 ನಿಮ್ಮಲ್ಲಿ ಉತ್ತಮ ಬ್ಯಾಂಡ್ ವಿಡ್ಥ್ ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ.
07:18 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಗಣವು ಈ ಪಾಠವನ್ನಾಧಾರಿಸಿ ಕಾರ್ಯಶಾಲೆಯನ್ನು ನಡೆಸುತ್ತದೆ.
07:23 ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
07:27 ಹೆಚ್ಚಿನ ಮಾಹಿತಿಗಾಗಿ contact @spoken-tutorial.org (ಕಾಂಟೆಕ್ಟ್ ಎಟ್ ಸ್ಪೋಕನ್ ಹೈಫನ್ ಟ್ಯುಟೋರಿಯಲ್ ಡಾಟ್ ಓ ಆರ್ ಜಿ) ಈ ಈ-ಮೇಲ್ ಮೂಲಕ ಸಂಪರ್ಕಿಸಿ.
07:33 ಈ ಪಾಠವು ಟಾಕ್ ಟು ಎ ಟೀಚರ್ ಎಂಬ ಪರಿಯೋಜನೆಯ ಭಾಗವಾಗಿದೆ.
07:37 ಈ ಪ್ರಕಲ್ಪವನ್ನು ರಾಷ್ಟ್ರೀಯ ಶೈಕ್ಷಣಿಕ ಮಿಷನ್ ICT, MHRD,ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
07:45 ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ಲಿಂಕ್ ಅನ್ನುನೋಡಿ
07:48 http://spoken-tutorial.org/NMEICT-Intro. (ಎಚ್ ಟಿ ಟಿ ಪಿ ಸ್ಲಾಷ್ ಸ್ಲಾಷ್ ಸ್ಪೋಕನ್ ಹೈಫನ್ ಟ್ಯುಟೋರಿಯಲ್ ಡಾಟ್ ಓ ಆರ್ ಜಿ ಸ್ಲಾಷ್ ಎನ್ ಎಮ್ ಇ ಸಿ ಟಿ ಹೈಫನ್ ಇನ್ ಟ್ರೊ ಡಾಟ್)
07:56 ಈ ಟ್ಯುಟೋರಿಯಲ್ ನ ಅನುವಾದಕ ಮತ್ತು ಪ್ರವಾಚಕ ಬೆಂಗಳೂರಿನಿಂದ ಶಶಾಂಕ.
08:00 ಸಹಯೋಗಕ್ಕಾಗಿ ಧನ್ಯವಾದಗಳು

Contributors and Content Editors

PoojaMoolya, Vasudeva ahitanal