Firefox/C3/Themes-Popup-blocking/Kannada
From Script | Spoken-Tutorial
Time | Narration |
00:00 | ಮೋಝಿಲ್ಲ ಫೈರ್ ಫಾಕ್ಸ್ ನಲ್ಲಿ ಥೀಮ್ ಗಳು ಎಂಬ ಈ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:05 | ಈ ಟ್ಯುಟೋರಿಯಲ್ ನಲ್ಲಿ ನಾವು ಮೋಝಿಲ್ಲ ಫೈರ್ ಫಾಕ್ಸ್ ನಲ್ಲಿನ ಥೀಮ್ಸ್, ಪರ್ಸೋನಾಸ್, ಮತ್ತು ಆಡ್ ಬ್ಲಾಕಿಂಗ್ ಗಳ ಬಗ್ಗೆ ಕಲಿಯಲಿದ್ದೇವೆ. |
00:13 | ಮೋಝಿಲ್ಲ ಫೈರ್ಫಾಕ್ಸ್, ಬಳಕೆದಾರನ ಅಭಿರುಚಿ ಅಥವಾ ಆಯ್ಕೆಗೆ ತಕ್ಕಂತೆ ಕಸ್ಟಮೈಸ್ ಮಾಡುವ ಸೌಲಭ್ಯವನ್ನು ಹೊಂದಿದೆ. |
00:20 | ಈ ಕಸ್ಟಮೈಝೇಷನ್ ಗಳಲ್ಲಿ ಥೀಮ್ಸ್ ಕೂಡಾ ಒಂದು. |
00:23 | ಥೀಮ್ ಗಳು ಫೈರ್ಫಾಕ್ಸ್ ನ ಚಿತ್ರಣವನ್ನೇ ಬದಲಿಸುತ್ತವೆ. |
00:27 | ಅಷ್ಟೇ ಅಲ್ಲದೆ ಇದು, ಬ್ಯಾಕ್ ಗ್ರೌಂಡ್ ನ ಬಣ್ಣ, ಬಟನ್ ಗಳ ಚಿತ್ರಣ ಮತ್ತು ಲೇಔಟ್ ಅನ್ನೂ ಬದಲಾಯಿಸುತ್ತದೆ. |
00:32 | ಈ ಟ್ಯುಟೋರಿಯಲ್ ನಲ್ಲಿ ನಾವು ಉಬಂಟು 10.04 ರಲ್ಲಿ ಫೈರ್ಫಾಕ್ಸ್ 7.0 ಯನ್ನು ಬಳಸುತ್ತಿದ್ದೇವೆ. |
00:40 | ನಾವೀಗ ಫೈರ್ಫಾಕ್ಸ್ ಬ್ರೌಸರ್ ಅನ್ನು ತೆರೆಯೋಣ. |
00:43 | ಆರಂಭದಲ್ಲಿ ನಾವು ಮೊಝಿಲ್ಲ ಫೈರ್ಫಾಕ್ಸ್ ನ ಥೀಮ್ ಅನ್ನು ಬದಲಾಯಿಸುವುದು ಹೇಗೆ ಎಂಬುದನ್ನು ಕಲಿಯೋಣ. |
00:48 | ಮೊದಲಿಗೆ Load images automatically (ಲೋಡ್ ಇಮೇಜಸ್ ಆಟೋಮೆಟಿಕಲಿ) ಎಂಬ ಅಪ್ಷನ್ ಅನ್ನು ಸಕ್ಷಮಗೊಳಿಸಿ. ಅದರಿಂದ ಬ್ರೌಸರ್ ನಲ್ಲಿ ಚಿತ್ರಗಳು ಗೋಚರವಾಗುವುದನ್ನು ಕಾಣಬಹುದು. |
00:58 | ಮೆನ್ಯುಬಾರ್ ನಲ್ಲಿ Edit (ಎಡಿಟ್) ಮೇಲೆ ಕ್ಲಿಕ್ ಮಾಡಿ ನಂತರ Preferences (ಪ್ರಿಫರೆನ್ಸ್) ಮೇಲೆ ಕ್ಲಿಕ್ ಮಾಡಿ. |
01:03 | ಪ್ರಿಫೆರೆನ್ಸ್ ನ ಡೈಲಾಗ್ ಬಾಕ್ಸ್ ನಲ್ಲಿ Content (ಕಂಟೆಂಟ್) ಟ್ಯಾಬ್ ಅನ್ನು ಆಯ್ಕೆ ಮಾಡಿ. |
01:08 | Load images automatically (ಲೋಡ್ ಇಮೇಜಸ್ ಆಟೊಮೆಟಿಕ್ ಲ್ಲಿ) ಎಂಬ ಬಾಕ್ಸ್ ಅನ್ನು ಚೆಕ್ ಮಾಡಿ. |
01:12 | Close (ಕ್ಲೋಸ್) ಮೇಲೆ ಕ್ಲಿಕ್ ಮಾಡಿ. |
01:14 | ಈಗ ಯು ಆರ್ ಎಲ್ ಪಟ್ಟಿಯ ಮೇಲೆ ಕ್ಲಿಕ್ ಮಾಡಿ ನಂತರ addons.mozilla.org/firefox/themes (ಆಡೊನ್ಸ್ ಡಾಟ್ ಮೋಝಿಲ್ಲ ಡಾಟ್ ಓ ಆರ್ ಜಿ ಸ್ಲಾಷ್ ಫೈರ್ಫಾಕ್ಸ್ ಸ್ಲಾಷ್ ಥೀಮ್ಸ್) ಎಂದು ಟೈಪ್ ಮಾಡಿ. |
01:25 | ಎಂಟರ್ ಅನ್ನು ಒತ್ತಿರಿ. |
01:27 | ಇದು ನಮ್ಮನ್ನು ಮೊಝಿಲ್ಲ ಫೈರ್ಫಾಕ್ಸ್ ಆಡ್ ಆನ್ಸ್ನ ಥೀಮ್ ಪೇಜ್ ಗೆ ಕರೆದೊಯ್ಯುತ್ತದೆ. |
01:32 | ಚಿಕ್ಕ ಚಿಕ್ಕ ಗಾತ್ರದಲ್ಲಿ ಅನೇಕ ಥೀಮ್ ಗಳನ್ನು ನಾವಿಲ್ಲಿ ಕಾಣಬಹುದು. |
01:37 | ಥೀಮ್ ಗಳು ಹೇಗೆ ಕಾಣುತ್ತವೆ ಎಂಬುದನ್ನು ಈ ಥಂಬ್ನೈಲ್ ಗಳು ತೋರಿಸುತ್ತವೆ. |
01:41 | ನೀವೀಗ ಥೀಮ್ ಗಳನ್ನು ಕಾಣಬಹುದು. |
01:43 | ಲಭ್ಯವಿರುವ ಥೀಮ್ ಗಳ ವಿಭಾಗಗಳನ್ನು ನೋಡಿ. |
01:46 | ಮೊದಲು ಇವುಗಳನ್ನು ಉಪಯೋಗಿಸಿದ ಬಳಕೆದಾರರ ರೇಟಿಂಗ್ (rating) ಕೂಡಾ ನೋಡಿ. |
01:52 | ನಮ್ಮ ಮೌಸ್ಪಾಯಿಂಟರ್ ಅನ್ನು ಹಾಗೆಯೇ ಯಾವುದಾದರೊಂದು ಥೀಮ್ ಮೇಲೆ ನಿಲ್ಲಿಸೋಣ. <Pause> |
01:57 | ಈಗ, Shine Bright Skin (ಶೈನ್ ಬ್ರೈಟ್ ಸ್ಕಿನ್) ಥೀಮ್ ಮೇಲೆ ಕ್ಲಿಕ್ ಮಾಡಿ. |
02:01 | ಲಭ್ಯವಿರುವ ಅನೇಕ ಥೀಮ್ ಗಳಲ್ಲಿ ಇದೂ ಕೂಡಾ ಒಂದು. |
02:05 | ಶೈನ್ ಬ್ರೈಟ್ ಸ್ಕಿನ್ ಥೀಮ್ ನ ಪೇಜ್ ಗೋಚರವಾಗುತ್ತದೆ. |
02:09 | Continue to Download (ಕಂಟಿನ್ಯು ಟು ಡೌನ್ ಲೋಡ್) ಬಟನ್ ಮೇಲೆ ಕ್ಲಿಕ್ ಮಾಡಿ. |
02:12 | ಇದು ಥೀಮ್ ನ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಕೊಡುವ ಪುಟಕ್ಕೆ ನಿಮ್ಮನ್ನು ಕರೆದೊಯ್ಯುತ್ತದೆ. |
02:17 | ಥೀಮ್ ಅನ್ನುಇನ್ ಸ್ಟಾಲ್ ಮಾಡಲು Add to Firefox (ಆಡ್ ಟು ಫೈರ್ಫಾಕ್ಸ್) ಬಟನ್ ಮೇಲೆ ಕ್ಲಿಕ್ ಮಾಡಿ. |
02:22 | ಆಗ ಆಡ್-ಆನ್ ಡೌನ್ ಲೋಡಿಂಗ್ ಪ್ರೋಗ್ರೆಸ್ ಬಾರ್ ತೆರೆದುಕೊಳ್ಳುತ್ತದೆ. |
02:27 | ನಂತರ ಸಾಫ್ಟ್ ವೇರ್ ಇನ್ ಸ್ಟಾಲೇಷನ್ ಅನ್ನು ಖಚಿತಪಡಿಸಲು ಸಂದೇಶವು ಗೋಚರವಾಗುತ್ತದೆ. |
02:32 | Install Now (ಇನ್ ಸ್ಟಾಲ್ ನೌವ್) ಎಂಬಲ್ಲಿ ಕ್ಲಿಕ್ ಮಾಡಿ. |
02:34 | “the theme will be installed once you restart Firefox” (ದ ಥೀಮ್ ವಿಲ್ ಬಿ ಇನ್ಸ್ಟಾಲ್ಡ್ ಒನ್ಸ್ ಯು ರಿಸ್ಟಾರ್ಟ್ ಫೈರ್ಫಾಕ್ಸ್) ಎಂಬ ಸಂದೇಶ ಗೋಚರವಾಗುತ್ತದೆ. |
02:40 | Restart Now (ರಿಸ್ಟಾರ್ಟ್ ನೌವ್) ಬಟನ್ ಕ್ಲಿಕ್ ಮಾಡಿ. |
02:43 | ಮೊಝಿಲ್ಲ ಫೈರ್ಫಾಕ್ಸ್ ಶಟ್ ಡೌನ್ ಆಗುತ್ತದೆ. |
02:46 | ಅದು ರಿಸ್ಟಾರ್ಟ್ ಆದಾಗ ಹೊಸ ಥೀಮ್ ಅನ್ವಯವಾಗಿರುತ್ತದೆ. |
02:51 | ನಾವೀಗ ನಮ್ಮ ಹಿಂದಿನ ಥೀಮ್ ಗಳ ಪೇಜ್ ಗೆ ಹೋಗೋಣ. |
02:54 | ಈಗ ಇನ್ನೊಂದು ಥೀಮನ್ನು ಆರಿಸಿಕೊಳ್ಳೋಣ. |
02:57 | ಈ ಥೀಮ್ Add to Firefox (ಆಡ್ ಟು ಫೈರ್ಫಾಕ್ಸ್) ಬಟನ್ ತೋರಿಸುತ್ತದೆ. |
03:01 | ಇದು ಆಯ್ಕೆಮಾಡಿದ ಥೀಮನ್ನು ಡೌನ್ ಲೋಡ್ ಮಾಡುತ್ತದೆ. |
03:05 | ಡೌನ್ ಲೋಡ್ ಮುಗಿಯುತ್ತಿದ್ದಂತೆ ಎಚ್ಚರಿಕೆಯ ಸಂದೇಶವುಳ್ಳ ವಿಂಡೋ ಗೋಚರವಾಗುತ್ತದೆ. |
03:10 | Install Now (ಇನ್ ಸ್ಟಾಲ್ ನೌವ್) ಬಟನ್ ಮೇಲೆ ಕ್ಲಿಕ್ ಮಾಡಿ. |
03:13 | ನೀವು ಫೈರ್ಫಾಕ್ಸ್ ಬ್ರೌಸರ್ ಅನ್ನು ರಿಸ್ಟಾರ್ಟ್ ಮಾಡಬೇಕಾಗುತ್ತದೆ. |
03:16 | Restart now (ರಿಸ್ಟಾರ್ಟ್ ನೌವ್) ಬಟನ್ ನ ಮೇಲೆ ಕ್ಲಿಕ್ ಮಾಡಿ. |
03:19 | ಮೊಝಿಲ್ಲ ಫೈರ್ಫಾಕ್ಸ್ ಮುಚ್ಚಿಕೊಳ್ಳುತ್ತದೆ. |
03:22 | ಮತ್ತೆ ಅದು ರಿಸ್ಟಾರ್ಟ್ ಆದಾಗ ಹೊಸ ಥೀಮ್ ಅನ್ವಯವಾಗಿರುತ್ತದೆ. |
03:27 | ನೀವೇ ನೋಡಿ, ಥೀಮ್ ಗಳು ಬ್ರೌಸರ್ ನ ಮೇಲ್ಮೈ ಪರಿದೃಶ್ಯದ ಸೌಂದರ್ಯವನ್ನು ವೃದ್ಧಿಗೊಳಿಸಲು ಹೇಗೆ ಸಹಕಾರಿಯಾಗಿವೆ ! |
03:31 | ಇದು ನಿಮ್ಮ ವಿಶಿಷ್ಟ ಅಭಿರುಚಿಗೆ ತಕ್ಕಂತೆ ಫೈರ್ಫಾಕ್ಸ್ ಬ್ರೌಸರ್ ಅನ್ನು ಕಸ್ಟಮೈಸ್ ಗೊಳಿಸುತ್ತದೆ. |
03:36 | ಯಾವುದೇ ಕಾರಣದಿಂದ ಹಿಂದಿನ ಡಿಫಾಲ್ಟ್ ಥೀಮ್ ಗೆ ಹೋಗಲು ನೀವು ಬಯಸಿದ್ದಲ್ಲಿ, |
03:40 | ಕೇವಲ Tools (ಟೂಲ್ಸ್) ಮೇಲೆ ಕ್ಲಿಕ್ ಮಾಡಿ ಮತ್ತು ನಂತರ Add-ons (ಆಡ್ ಆನ್ಸ್) ಮೇಲೆ ಕ್ಲಿಕ್ ಮಾಡಿ. |
03:44 | ನಂತರ ಎಡಬದಿಯ ಪೇನಲ್ ನಲ್ಲಿ, Appearance (ಅಪಿಯರೆನ್ಸ್) ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
03:48 | ಇಲ್ಲಿ ಡೌನ್ ಲೋಡ್ ಮಾಡಿದ ಎಲ್ಲಾ ಥೀಮ್ ಗಳು ಕಾಣಸಿಗುತ್ತವೆ. |
03:53 | Default Theme (ಡಿಫಾಲ್ಟ್ ಥೀಮ್) ಅನ್ನುನೋಡಿ. |
03:56 | Enable (ಎನೇಬಲ್) ಬಟನ್ ಮೇಲೆ ಕ್ಲಿಕ್ ಮಾಡಿ. |
03:59 | ಈಗ Restart now (ರಿಸ್ಟಾರ್ಟ್ ನೌವ್) ಬಟನ್ ಮೇಲೆ ಕ್ಲಿಕ್ ಮಾಡಿ. |
04:02 | ಮೊಝಿಲ್ಲ ಫೈರ್ಫಾಕ್ಸ್ ಷಟ್ ಡೌನ್ ಆಗಿ ನಂತರ ರಿಸ್ಟಾರ್ಟ್ ಆಗುತ್ತದೆ. |
04:06 | ಅದು ರಿಸ್ಟಾರ್ಟ್ ಆದಾಗ ಮತ್ತೊಮ್ಮೆ ಡೀಫಾಲ್ಟ್ ಥೀಮ್ ಕಾಣಸಿಗುತ್ತದೆ. |
04:12 | ನಾವೀಗ ಆಡ್ ಆನ್ಸ್ ಟ್ಯಾಬ್ ಅನ್ನು ಮುಚ್ಚೋಣ. |
04:16 | ಪರ್ಸೊನಾ ಗಳು ಉಚಿತವಾಗಿವೆ ಮತ್ತು ಫೈರ್ಫಾಕ್ಸ್ ನ ಸ್ಕಿನ್ ಆಗಿ ಇನ್ ಸ್ಟಾಲ್ ಮಾಡಲು ಬಹಳ ಸುಲಭವಾಗಿವೆ. |
04:22 | ಪರ್ಸೋನಾಸ್ ಪ್ಲಸ್ ಎಂಬುದು ಆಂತರಿಕ ಕಾರ್ಯಗಳಾದ ಅತ್ಯುತ್ತಮವಾದ ನಿಯಂತ್ರಣ ಹಾಗೂ ಹೊಸತಾದ, ಪ್ರಸಿದ್ಧವಾದ ಮತ್ತು ನಿಮ್ಮ ಆಯ್ಕೆಯ ಪರ್ಸೋನಾಗಳಿಗೆ ಪ್ರವೇಶಿಸುವುದೇ ಮುಂತಾದವುಗಳನ್ನು ವಿಸ್ತಾರಮಾಡುತ್ತದೆ. |
04:34 | ಯು ಆರ್ ಎಲ್ ಪಟ್ಟಿಯ ಮೇಲೆ ಕ್ಲಿಕ್ ಮಾಡಿ ನಂತರ “addons.mozilla dot .org/firefox/personas” (ಆಡೊನ್ಸ್ ಡಾಟ್ ಮೋಝಿಲ್ಲ ಡಾಟ್ ಓ ಆರ್ ಜಿ ಸ್ಲಾಷ್ ಫೈರ್ಫಾಕ್ಸ್ ಸ್ಲಾಷ್ ಪರ್ಸೋನಾಸ್) ಎಂದು ಟೈಪ್ ಮಾಡಿ. |
04:44 | ಎಂಟರ್ ಅನ್ನು ಒತ್ತಿರಿ. |
04:47 | ಇದು ನಿಮ್ಮನ್ನು ಮೊಝಿಲ್ಲ ಫೈರ್ಫಾಕ್ಸ್ ಆಡ್ ಆನ್ಸ್ ನ ಪರ್ಸೋನಾಸ್ ಪುಟಕ್ಕೆ ಕರೆದೊಯ್ಯುತ್ತದೆ. |
04:52 | ನಾವಿಲ್ಲಿ ಅನೇಕ ಸಂಖ್ಯೆಯ ಪರ್ಸೋನಾಸ್ ಗಳನ್ನುಕಾಣಬಹುದು. |
04:56 | ನಿಮ್ಮ ಆಯ್ಕೆಯಂತೆ ಯಾವುದಾದರೊಂದು ಪರ್ಸೋನಾಸ್ ಮೇಲೆ ಕ್ಲಿಕ್ ಮಾಡಿ. |
05:01 | ಇದು ಆರಿಸಿದ ಪರ್ಸೋನಾ ಬಗೆಗಿನ ವಿಸ್ತೃತ ಮಾಹಿತಿಯುಳ್ಳ ಪುಟಕ್ಕೆ ನಿಮ್ಮನ್ನು ಕರೆದೊಯ್ಯುತ್ತದೆ. |
05:06 | Add to Firefox (ಆಡ್ ಟು ಪೈರ್ಫಾಕ್ಸ್) ಬಟನ್ ನ ಮೇಲೆ ಕ್ಲಿಕ್ ಮಾಡಿ. |
05:09 | ಹೊಸ ಥೀಮ್ ಅಳವಡಿಸಲಾಗಿದೆ ಎಂದು ನಿಮ್ಮನ್ನು ಜಾಗೃತಗೊಳಿಸಲು ಮೇಲ್ಭಾಗದಲ್ಲಿ ನೋಟಿಫಿಕೇಷನ್ ಬಾರ್ ಗೋಚರವಾಗುತ್ತದೆ. |
05:16 | ನೊಟಿಫಿಕೇಷನ್ ಬಾರ್ ನ ಬಲಮೂಲೆಯಲ್ಲಿನ ಸಣ್ಣ ಎಕ್ಸ್ (x) ಗುರುತಿನ ಮೇಲೆ ಕ್ಲಿಕ್ ಮಾಡಿ. |
05:21 | ಫೈರ್ಫಾಕ್ಸ್ ಪರ್ಸೋನಾವನ್ನು ತಾನಾಗಿಯೇ ಇನ್ ಸ್ಟಾಲ್ ಮಾಡುತ್ತದೆ. |
05:28 | ಇಂಟರ್ನೆಟ್ ನಲ್ಲಿ ಕೆಲಸ ಮಾಡುವಾಗ ಆಡ್ ಗಳು ಪದೇ ಪದೇ ಮಧ್ಯಪ್ರವೇಶಿಸುತ್ತಿರುತ್ತವೆ. |
05:32 | ಆದರೆ ಆಡ್ ಗಳನ್ನು ತಡೆಗಟ್ಟಲು ಸಹಕರಿಸುವ ವಿಶಿಷ್ಟ ಸಾಫ್ಟ್ವೇರ್ ಗಳೂ ಇವೆ. |
05:36 | ಈ ರೀತೀಯ ಆಡ್ಆನ್ ಗಳಲ್ಲಿ ಆಡ್ ಬ್ಲಾಕ್ ಕೂಡಾ ಒಂದು. |
05:39 | ಟೂಲ್ಸ್ ಮೇಲೆ ಕ್ಲಿಕ್ ಮಾಡಿ ನಂತರ ಆಡ್ಆನ್ ನ ಮೇಲೆ ಕ್ಲಿಕ್ ಮಾಡಿ. |
05:43 | ಮೇಲ್ಭಾಗದ ಬಲಮೂಲೆಯಲ್ಲಿನ ಸರ್ಚ್ ಪಟ್ಟಿಯ ಮುಖಾಂತರ ಆಡ್ ಬ್ಲಾಕ್ ಅನ್ನು ಹುಡುಕಿ ಎಂಟರ್ ಅನ್ನು ಒತ್ತಿರಿ. |
05:51 | ಆಡ್ ಬ್ಲಾಕಿಂಗ್ ಸಾಫ್ಟ್ವೇರ್ ಗಳ ಪಟ್ಟಿಯೇ ಗೋಚರವಾಗುತ್ತದೆ. |
05:55 | ಆಡ್ ಬ್ಲಾಕ್ ಪ್ಲಸ್ ಗಾಗಿ ಇನ್ ಸ್ಟಾಲ್ ಬಟನ್ ಮೇಲೆ ಕ್ಲಿಕ್ ಮಾಡಿ. |
05:59 | ಆಡ್ ಬ್ಲಾಕ್ ಡೌನ್ ಲೋಡ್ ಆಗಲು ಶುರುವಾಗುತ್ತದೆ. |
06:02 | ಅಷ್ಟೇ! ಆಡ್ ಬ್ಲಾಕರ್ ಈಗ ಇನ್ ಸ್ಟಾಲ್ ಆಗಿರುತ್ತದೆ. |
06:06 | “Adblock will be installed after you restart Firefox” ಎಂಬ ನೋಟಿಫಿಕೇಷನ್ ಗೋಚರವಾಗುತ್ತದೆ. |
06:14 | Restart now (ರಿಸ್ಟಾರ್ಟ್ ನೌವ್) ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ. |
06:17 | ಮೊಝಿಲ್ಲ ಫೈರ್ಫಾಕ್ಸ್ ಷಟ್ ಡೌನ್ ಆಗಿ ನಂತರ ರಿಸ್ಟಾರ್ಟ್ ಆಗುತ್ತದೆ. |
06:21 | ರಿಸ್ಟಾರ್ಟ್ ನ ನಂತರ ಆಡ್ ಬ್ಲಾಕರ್ ತನ್ನ ಕಾರ್ಯವನ್ನು ನಿರ್ವಹಿಸುತ್ತಿರುತ್ತದೆ. |
06:25 | ಇಷ್ಟಾದರೂ ಆಡ್ ಬ್ಲಾಕರ್ ಉಪಯೋಗದಿಂದ ಕೆಲವು ತೊಂದರೆಗಳೂ ಉಂಟಾಗುತ್ತವೆ. |
06:30 | ಆಡ್ ಬ್ಲಾಕರ್ ಚಾಲ್ತಿಯಲ್ಲಿದ್ದಾಗ ಕೆಲವು ಸೈಟ್ ಗಳ ಪ್ರವೇಶ ಸಾಧ್ಯವಾಗುವುದಿಲ್ಲ. |
06:35 | ಇದಕ್ಕೆ ಕಾರಣವೆಂದರೆ ಅನೇಕ ಉಚಿತ ಸೈಟ್ ಗಳ ಆದಾಯದ ಮೂಲ ಆಡ್ ಗಳೇ ಆಗಿವೆ. |
06:41 | ಆಡ್ ಬ್ಲಾಕರ್ ನಿಮ್ಮ ಬ್ರೌಸರ್ ನಲ್ಲಿ ಗೋಚರವಾಗುವ ಕೆಲವು ಸೈಟ್ ಗಳನ್ನು ತಡೆಯಲೂಬಹುದು. |
06:46 | ಆಡ್ ಗಳನ್ನು ತಡೆಗಟ್ಟುತ್ತಿರುವ ಸಂದರ್ಭದಲ್ಲಿ ಈ ವಿಚಾರವನ್ನು ಅವಶ್ಯವಾಗಿ ಗಮನಿಸಬೇಕಾಗುತ್ತದೆ. |
06:51 | ಈಗ ನಾವು ಈ ಟ್ಯುಟೊರಿಯಲ್ ನ ಕೊನೆಗೆ ಬಂದಿದ್ದೇವೆ. |
06:54 | ಈ ಟ್ಯುಟೋರಿಯಲ್ನಲ್ಲಿ ನಾವು ಥೀಮ್ಸ್, ಪರ್ಸೋನಾಸ್ ಮತ್ತು ಆಡ್ ಬ್ಲಾಕಿಂಗ್ ಗಳ ಬಗ್ಗೆ ಕಲಿತಿದ್ದೇವೆ. |
07:00 | ಇಲ್ಲಿರುವ ಅಭ್ಯಾಸವನ್ನು ಮಾಡಲು ಪ್ರಯತ್ನಿಸಿ. |
07:03 | ’ನಾಸಾ ನೈಟ್ ಲಾಂಚ್’ ಎಂಬ ಥೀಮ್ ಅನ್ನು ಇನ್ ಸ್ಟಾಲ್ ಮಾಡಿ. |
07:06 | ನಂತರ ಡಿಫಾಲ್ಟ್ ಥೀಮ್ ಗೆ ಪರಿವರ್ತಿಸಿ. |
07:10 | ಯಾಹೂ ಡಾಟ್ಕಾಮ್ ಅನ್ನು ಬಿಟ್ಟು ಉಳಿದ ಎಲ್ಲಾ ಪಾಪ್ಅಪ್ ಗಳನ್ನು ತಡೆಗಟ್ಟಿ. |
07:15 | ಈ ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋ ವನ್ನುನೋಡಿ. |
07:18 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವನ್ನುಹೇಳುತ್ತದೆ. |
07:21 | ನಿಮ್ಮಲ್ಲಿ ಉತ್ತಮ ಬ್ಯಾಂಡ್ ವಿಡ್ಥ್ ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ. |
07:25 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಗಣವು |
07:28 | ಈ ಪಾಠವನ್ನಾಧಾರಿಸಿ ಕಾರ್ಯಶಾಲೆಯನ್ನು ನಡೆಸುತ್ತದೆ. |
07:31 | ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
07:35 | ಹೆಚ್ಚಿನ ಮಾಹಿತಿಗಾಗಿ contact @spoken-tutorial.org (ಕಾಂಟೆಕ್ಟ್ ಎಟ್ ಸ್ಪೋಕನ್ ಹೈಫನ್ ಟ್ಯುಟೋರಿಯಲ್ ಡಾಟ್ ಓ ಆರ್ ಜಿ) ಈ ಈ-ಮೇಲ್ ಮೂಲಕ ಸಂಪರ್ಕಿಸಿ. |
07:41 | ಈ ಪಾಠವು ಟಾಕ್ ಟು ಎ ಟೀಚರ್ ಎಂಬ ಪರಿಯೋಜನೆಯ ಭಾಗವಾಗಿದೆ. |
07:45 | ಈ ಪ್ರಕಲ್ಪವನ್ನು ರಾಷ್ಟ್ರೀಯ ಸಾಕ್ಷರತಾ ಮಿಷನ್ ICT, MHRD, ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
07:53 | ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ಲಿಂಕ್ ಅನ್ನುನೋಡಿ |
07:56 | http://spoken-tutorial.org/NMEICT-Intro. (ಎಚ್ ಟಿ ಟಿ ಪಿ ಸ್ಲಾಷ್ ಸ್ಲಾಷ್ ಸ್ಪೋಕನ್ ಹೈಫನ್ ಟ್ಯುಟೋರಿಯಲ್ ಡಾಟ್ ಓ ಆರ್ ಜಿ ಸ್ಲಾಷ್ ಎನ್ ಎಮ್ ಇ ಸಿ ಟಿ ಹೈಫನ್ ಇನ್ ಟ್ರೊ ಡಾಟ್) |
08:04 | ಈ ಟ್ಯುಟೋರಿಯಲ್ ನ ಅನುವಾದಕ ಬೆಂಗಳೂರಿನಿಂದ ಶಶಾಂಕ ಹತ್ವಾರ್ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. |
08:08 | ಸಹಯೋಗಕ್ಕಾಗಿ ಧನ್ಯವಾದಗಳು |