Firefox/C3/Popups/Kannada
From Script | Spoken-Tutorial
Time | Narration |
00:00 | ಮೊಜಿಲ್ಲಾ ಫೈರ್ ಫಾಕ್ಸ್ ನಲ್ಲಿ ಸೆಟ್ಟಿಂಗ್ ಪಾಪ್ ಅಪ್ ಮತ್ತು ಇಮೇಜ್ ಆಪ್ಷನ್ಸ್ ಬಗೆಗಿನ ಸ್ಪೊಕನ್ ಟ್ಯುಟೊರಿಯಲ್ ಗೆ ಸ್ವಾಗತ. |
00:07 | ಈ ಟ್ಯುಟೊರಿಯಲ್ ನಲ್ಲಿ ನಾವು ಪಾಪ್ ಅಪ್ ಮತ್ತು ಇಮೇಜ್ ಪ್ರಿಫೆರೆನ್ಸ್ ಅನ್ನು ಸೆಟ್ ಮಾಡುವುದು |
00:13 | ಹಾಗೂ ಟೂಲ್ ಬಾರ್ ಅನ್ನು ಕಸ್ಟಮೈಸ್ ಮಾಡುವುದನ್ನು ಕಲಿಯಲಿದ್ದೇವೆ. |
00:15 | ಪಾಪ್ ಅಪ್ ವಿಂಡೋಸ್ ಅಥವಾ ಪಾಪ್ ಅಪ್ಸ್ ಎಂಬ ವಿಂಡೋಗಳು ನಿಮ್ಮ ಅನುಮತಿಯಿಲ್ಲದೆಯೇ ಗೋಚರವಾಗುತ್ತವೆ. |
00:21 | ಅವು ಅಳತೆಯಲ್ಲಿ ಬೇರೆ ಬೇರೆಯಿದ್ದರೂ ಸ್ಕ್ರೀನ್ ಅನ್ನು ಪೂರ್ತಿಯಾಗಿ ಆವರಿಸುವುದಿಲ್ಲ. |
00:27 | ಕೆಲವು ಪಾಪ್ ಅಪ್ ಗಳು ಫೈರ್ ಫಾಕ್ಸ್ ವಿಂಡೋನ ಮೇಲ್ಭಾಗದಲ್ಲಿ ತೆರೆದುಕೊಳ್ಳುತ್ತವೆಯಾದರೆ ಇನ್ನು ಕೆಲವು ಫೈರ್ ಫಾಕ್ಸ್ನ ಕೆಳಭಾಗದಲ್ಲಿ ತೆರೆದುಕೊಳ್ಳುತ್ತವೆ. (ಪಾಪ್ ಅಂಡರ್ಸ್). |
00:37 | ಪಾಪ್ ಅಪ್ ಗಳು ನಿಮ್ಮನ್ನು ಸಿಟ್ಟಿಗೆಬ್ಬಿಸಬಹುದು ಮತ್ತು ಈ ಕಾರಣಕ್ಕಾಗಿ ನೀವು ಅವುಗಳನ್ನು ನಿಷ್ಕ್ರಿಯಗೊಳಿಸಲು ಬಯಸುತ್ತೀರಿ. |
00:42 | ಈ ಟ್ಯುಟೋರಿಯಲ್ ನಲ್ಲಿ ನಾವು ಉಬಂಟು 10.04 ರಲ್ಲಿ ಫೈರ್ ಫಾಕ್ಸ್ ನ ಆವೃತ್ತಿ 7.0 ಯನ್ನು ಬಳಸುತ್ತಿದ್ದೇವೆ. |
00:50 | ಫೈರ್ ಫಾಕ್ಸ್ ಬ್ರೌಸರ್ ಅನ್ನು ತೆರೆಯೋಣ. |
00:53 | URL ಪಟ್ಟಿಯಲ್ಲಿ, ‘www.popuptest.com’ ಎಂದು ಟೈಪ್ ಮಾಡೋಣ. |
01:01 | Enter (ಎಂಟರ್) ಕೀಯನ್ನು ಒತ್ತಿರಿ. |
01:03 | ಈ ಸೈಟ್, ಪಾಪ್ ಅಪ್ ಎಂದರೆ ಏನು ಎಂಬುದನ್ನು ತಿಳಿಸುತ್ತದೆ. |
01:07 | ‘multi-popup test’ ಎಂಬ ಲಿಂಕ್ ನ ಮೇಲೆ ಕ್ಲಿಕ್ ಮಾಡಿ. |
01:12 | ನೀವು ಆರು ಪಾಪ್ ಅಪ್ ಗಳನ್ನು ಕಾಣುತ್ತೀರಿ. |
01:20 | Back (ಬ್ಯಾಕ್) ಮೇಲೆ ಕ್ಲಿಕ್ ಮಾಡಿ. |
01:22 | ಇನ್ನೂ ಎರಡು ಪಾಪ್ ಅಪ್ ಗಳು ಕಾಣುತ್ತವೆ. ನೋಡಿ ಅವುಗಳು ಎಷ್ಟು ರೇಗಿಸುತ್ತವೆ ? |
01:28 | ಫೈರ್ ಫಾಕ್ಸ್, ಪಾಪ್ ಅಪ್ಸ್ ಮತ್ತು ಪಾಪ್ ಅಂಡರ್ಸ್ ಇವೆರಡನ್ನೂ ನಿಯಂತ್ರಿಸಲು ಅವಕಾಶ ಮಾಡಿಕೊಡುತ್ತದೆ. Edit (ಎಡಿಟ್) ಮೇಲೆ ಕ್ಲಿಕ್ ಮಾಡಿ ನಂತರ Preferences (ಪ್ರಿಫರೆನ್ಸಸ್) ಮೇಲೆ ಕ್ಲಿಕ್ ಮಾಡುವುದರ ಮೂಲಕ ಇದನ್ನು ನಿಯಂತ್ರಿಸಬಹುದು. |
01:37 | ವಿಂಡೋಸ್ ಬಳಕೆದಾರರು, ದಯವಿಟ್ಟು Tools (ಟೂಲ್ಸ್) ಮೇಲೆ ಕ್ಲಿಕ್ ಮಾಡಿ ಮತ್ತು ನಂತರ Options (ಆಪ್ಶನ್) ಮೇಲೆ ಕ್ಲಿಕ್ ಮಾಡಿ. |
01:43 | Preferences (ಪ್ರಿಫರೆನ್ಸ್) ವಿಂಡೋನಲ್ಲಿ, Content (ಕನೆಕ್ಟ್) ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ. |
01:48 | Block pop-up windows ಎಂಬ ವಿಕಲ್ಪವು ಈಗಾಗಲೇ ಡೀಫಾಲ್ಟ್ ಆಗಿ ಆಯ್ಕೆಯಾಗಿರುತ್ತದೆ. |
01:53 | ಇಲ್ಲದಿದ್ದಲ್ಲಿ, ಅದನ್ನು ನೀವು ಆಯ್ಕೆಮಾಡಿ. |
01:56 | ಹೀಗೆ ಮಾಡುವುದರಿಂದ ಫೈರ್ ಫಾಕ್ಸ್ ನಲ್ಲಿ ಪಾಪ್ ಅಪ್ ಗಳು ಕಾಣುವುದನ್ನು ತಡೆಯುವ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. |
02:02 | ಈಗ ನೀವು Firefox Preference (ಫೈರ್ ಫಾಕ್ಸ್ ಪ್ರಿಫೆರೆನ್ಸ್) ವಿಂಡೋವನ್ನು ಕ್ಲೋಸ್ ಬಟನ್ ಕ್ಲಿಕ್ ಮಾಡುವುದರ ಮೂಲಕ ಮುಚ್ಚಬಹುದು. |
02:09 | ನೀವು exception (ಎಕ್ಸೆಪ್ಷನ್) ಗಳನ್ನು ಕೂಡ ಆಯ್ಕೆ ಮಾಡಬಹುದು. |
02:12 | ನಿಮಗೆ ಒಪ್ಪಿಗೆಯಾಗುವ pop-up (ಪಾಪ್ ಅಪ್)ಗಳುಳ್ಳ ಸೈಟ್ ಗಳೇ Exceptions (ಎಕ್ಸೆಪ್ಷನ್ಸ್). |
02:17 | Edit (ಎಡಿಟ್) ಮೇಲೆ ಕ್ಲಿಕ್ ಮಾಡಿ ಮತ್ತು Preferences (ಪ್ರಿಫರೆನ್ಸಸ್) ಮೇಲೆ ಕ್ಲಿಕ್ ಮಾಡಿ. |
02:20 | ವಿಂಡೋಸ್ ಬಳಕೆದಾರರು ದಯವಿಟ್ಟು Tools (ಟೂಲ್ಸ್) ಮೇಲೆ ಕ್ಲಿಕ್ ಮಾಡಿ ಮತ್ತು Options (ಆಪ್ಶನ್ಸ್) ನ ಮೇಲೆ ಕ್ಲಿಕ್ ಮಾಡಿ. |
02:26 | ಎಕ್ಸೆಪ್ಷನ್ ಗಳನ್ನು ಸೇರಿಸಲು, Block pop-up windows (ಬ್ಲೊಕ್ ಪೋಪ್ ಅಪ್ ವಿಂಡೋಸ್) ನ ಮುಂದಿರುವ Exceptions (ಎಕ್ಸೆಪ್ಶನ್ಸ್) ಬಟನ್ ನ ಮೇಲೆ ಕ್ಲಿಕ್ ಮಾಡಿ. |
02:34 | ಇದು ಡಯಲಾಗ್ ಬಾಕ್ಸ್ ಅನ್ನು ತೆರೆಯುತ್ತದೆ. |
02:37 | Address of website (ಅಡ್ರೆಸ್ ಆಫ್ ವೆಬ್ಸೈಟ್) ಎಂಬಲ್ಲಿ ‘www.google.com’ ಎಂದು ಟೈಪ್ ಮಾಡಿ. |
02:44 | Allow (ಅಲೊ) ಬಟನ್ ನ ಮೇಲೆ ಕ್ಲಿಕ್ ಮಾಡಿ. |
02:46 | ಡಯಲಾಗ್ ಬಾಕ್ಸ್ ಅನ್ನು ಮುಚ್ಚಲು Close (ಕ್ಲೋಸ್) ಬಟನ್ ಮೇಲೆ ಕ್ಲಿಕ್ ಮಾಡಿ. |
02:50 | preferences (ಪ್ರಿಫೆರನ್ಸೆಸ್) ಡಯಲಾಗ್ ಬಾಕ್ಸ್ ಅನ್ನು ಮುಚ್ಚಲು Close (ಕ್ಲೋಸ್) ಬಟನ್ ಮೇಲೆ ಕ್ಲಿಕ್ ಮಾಡಿ. |
02:55 | ಈಗ ಪಾಪ್ ಅಪ್ google.com ಅನ್ನು ಬಿಟ್ಟು ಉಳಿದ ಎಲ್ಲಾ ಸೈಟ್ ಗಳಿಂದ ತೆಗೆದುಹಾಕಿರಲ್ಪಟ್ಟಿರುತ್ತದೆ. |
03:01 | ಈಗ URL ಪಟ್ಟಿಯಲ್ಲಿ, ‘www.popuptest.com’ ಎಂದು ಟೈಪ್ ಮಾಡಿ ಮತ್ತು Enter (ಎಂಟರ್) ಒತ್ತಿ. |
03:09 | ‘Multi-PopUp Test’ ಎಂಬ ಲಿಂಕ್ ನ ಮೇಲೆ ಕ್ಲಿಕ್ ಮಾಡಿ. |
03:12 | ಒಂದೇ ಒಂದು ಪಾಪ್ ಅಪ್ ಕೂಡ ಕಾಣಿಸಿಕೊಳ್ಳುವುದಿಲ್ಲ. |
03:15 | ನಿಮ್ಮ ಪಾಪ್ ಅಪ್ ಬ್ಲಾಕರ್ ಜಾಗೃತವಾಗಿದೆ! |
03:20 | ಚಿತ್ರಗಳು ಡೌನ್ ಲೋಡ್ ಆಗಲು ಸಮಯವನ್ನು ಮತ್ತು ಬ್ಯಾಂಡ್ ವಿಡ್ಥ್ ಅನ್ನು ತೆಗೆದುಕೊಳ್ಳುತ್ತವೆ. |
03:24 | ಮೊಝಿಲ್ಲ ಫೈರ್ ಫಾಕ್ಸ್ ಚಿತ್ರಗಳ ಡೌನ್ ಲೋಡಿಂಗನ್ನು ತಡೆಗಟ್ಟುವ ಆಯ್ಕೆಯನ್ನು ಹೊಂದಿದೆ. |
03:30 | Edit (ಎಡಿಟ್) ಮೇಲೆ ಕ್ಲಿಕ್ ಮಾಡಿ ಮತ್ತು Preferences (ಪ್ರಿಫರೆನ್ಸಸ್) ಮೇಲೆ ಕ್ಲಿಕ್ ಮಾಡಿ. |
03:33 | ವಿಂಡೋಸ್ ಬಳಕೆದಾರರು, ದಯವಿಟ್ಟು Tools (ಟೂಲ್ಸ್) ನ ಮೇಲೆ ಕ್ಲಿಕ್ ಮಾಡಿ ಮತ್ತು Options (ಆಪ್ಶನ್ಸ್) ಮೇಲೆ ಕ್ಲಿಕ್ ಮಾಡಿ. |
03:39 | Preferences (ಪ್ರಿಫರೆನ್ಸಸ್) ಎಂಬ ಡಯಲಾಗ್ ಬಾಕ್ಸ್ ನಲ್ಲಿ Content (ಕಂಟೆಂಟ್) ಟ್ಯಾಬ್ ಅನ್ನು ಆಯ್ಕೆ ಮಾಡಿ. |
03:44 | Load images automatically (ಲೋಡ್ ಇಮೇಜ್ ಟೋಮೆಟಿಕಲಿ) ಎಂಬ ಚೆಕ್ ಬಾಕ್ಸ್ ಅನ್ನು ನಿಶ್ಕ್ರಿಯಗೊಳಿಸಿ. |
03:49 | ಡಯಲಾಗ್ ಬಾಕ್ಸ್ ಅನ್ನು ಮುಚ್ಚಲು Close (ಕ್ಲೋಸ್) ಮೇಲೆ ಕ್ಲಿಕ್ ಮಾಡಿ. |
03:53 | ಈಗ ಸರ್ಚ್ ಬಾರ್ ನಲ್ಲಿ, Flowers (ಫ್ಲವರ್ಸ್) ಎಂದು ಟೈಪ್ ಮಾಡಿ ಮತ್ತು Enter (ಎಂಟರ್) ಅನ್ನು ಒತ್ತಿ. |
04:00 | ಗೂಗಲ್ ನ ಹೋಂ ಪೇಜ್ ನಲ್ಲಿ, 'Images' (ಇಮೇಜಸ್) ನ ಮೇಲೆ ಕ್ಲಿಕ್ ಮಾಡಿ. |
04:04 | ಮೊದಲು ಕಾಣುವ ಚಿತ್ರದ ಲಿಂಕ್ ನ ಮೇಲೆ ಕ್ಲಿಕ್ ಮಾಡಿ. |
04:08 | ಚಿತ್ರವು ಲೋಡ್ ಆಗದೇ ಇರುವುದನ್ನು ಕಾಣಬಹುದು. |
04:12 | ಮೊಝಿಲ್ಲ ಫೈರ್ ಫಾಕ್ಸ್, ಟೂಲ್ ಬಾರ್ ಅನ್ನು ಕಸ್ಟಮೈಸ್ ಮಾಡಲು ಅನೇಕ ಆಯ್ಕೆಗಳನ್ನು ಹೊಂದಿದೆ. |
04:18 | ನಾವು ಯಾವುದಾದರೂ ಟೂಲ್ ಬಾರ್ ಅನ್ನು ಅಡಗಿಸಬೇಕೆಂದಿದ್ದೇವೆ ಎಂದುಕೊಳ್ಳೋಣ. ಉದಾಹರಣೆಗಾಗಿ ಮೆನ್ಯು ಬಾರ್. |
04:23 | ಮೆನು ಬಾರ್ ನ ಖಾಲಿ ಜಾಗದ ಮೇಲೆ ರೈಟ್ ಕ್ಲಿಕ್ ಮಾಡಿ. |
04:27 | ಮತ್ತು Menu Bar (ಮೆನ್ಯುಬಾರ್) ಆಯ್ಕೆಯನ್ನು ಅನ್ ಚೆಕ್ ಮಾಡಿ.
ಅಷ್ಟೆ! |
04:30 | ಮೆನು ಬಾರ್ ಅನ್ನು ಮತ್ತೆ ನೋಡಲು ಪುನಃ ಟೂಲ್ ಬಾರ್ ನ ಖಾಲಿ ಜಾಗದಲ್ಲಿ ರೈಟ್ ಕ್ಲಿಕ್ ಮಾಡಿ. |
04:36 | ಈಗ Menu Bar (ಮೆನು ಬಾರ್) ಆಯ್ಕೆಯನ್ನು ಚೆಕ್ ಮಾಡಿ. |
04:40 | ಫೈರ್ ಫಾಕ್ಸ್, ಟೂಲ್ ಬಾರ್ ಅನ್ನು ಕಸ್ಟಮೈಸ್ ಮಾಡಲು ಅಡ್ವಾನ್ಸ್ಡ್ ಆಪ್ಷನ್ ಗಳನ್ನೂ ಹೊಂದಿದೆ. ಕೆಲವನ್ನು ನೋಡೋಣ. |
04:46 | ಟೂಲ್ ಬಾರ್ ಗೆ ಐಕಾನ್ ಒಂದನ್ನು ಸೇರಿಸೊಣ, ಇದು ವೆಬ್ ಪೇಜ್ ಅನ್ನು ಒಂದೇ ಕ್ಲಿಕ್ ಗೆ ಪ್ರಿಂಟ್ ಮಾಡಲು ಅವಕಾಶ ಮಾಡಿಕೊಡುತ್ತದೆ . |
04:54 | ಟೂಲ್ ಬಾರ್ ನ ಖಾಲಿ ಜಾಗದ ಮೇಲೆ ರೈಟ್ ಕ್ಲಿಕ್ ಮಾಡಿ. |
04:58 | Customize (ಕಸ್ಟಮೈಸ್) ನ ಮೇಲೆ ಕ್ಲಿಕ್ ಮಾಡಿ. |
05:00 | Customize Toolbar ಎಂಬ ಡಯಲಾಗ್ ಬಾಕ್ಸ್ ಗೋಚರವಾಗುತ್ತದೆ. |
05:04 | ಡಯಲಾಗ್ ಬಾಕ್ಸ್ ನ ಒಳಗೆ, Print (ಪ್ರಿಂಟ್) ಎಂಬ ಐಕಾನ್ ನನ್ನು ಕಾಣುತ್ತೀರಿ. |
05:09 | ಐಕಾನ್ ಅನ್ನು ಟೂಲ್ ಬಾರ್ ಗೆ ಡ್ರ್ಯಾಗ್ ಮಾಡಿ. |
05:12 | Done (ಡನ್) ನ ಮೇಲೆ ಕ್ಲಿಕ್ ಮಾಡುವ ಮೂಲಕ ಡಯಲಾಗ್ ಬಾಕ್ಸ್ ಅನ್ನು ಮುಚ್ಚಿರಿ. |
05:17 | ಟೂಲ್ ಬಾರ್ ನಲ್ಲಿನ ಪ್ರಿಂಟ್ ಐಕಾನ್ ನ ಮೇಲೆ ಕ್ಲಿಕ್ ಮಾಡಿ. |
05:21 | ಇದು Print (ಪ್ರಿಂಟ್) ಎಂಬ ಡಯಲಾಗ್ ಬಾಕ್ಸ್ ಅನ್ನು ತೆರೆಯುತ್ತದೆ.. |
05:25 | ನಾವೀಗ ಪ್ರಿಂಟ್ ಮಾಡುವುದಿಲ್ಲ. |
05:28 | ಆದ್ದರಿಂದ ಡಯಲಾಗ್ ಬಾಕ್ಸ್ ಅನ್ನು ಮುಚ್ಚಲು Cancel (ಕೆನ್ಸಲ್) ನ ಮೇಲೆ ಕ್ಲಿಕ್ ಮಾಡಿ. |
05:32 | ನೀವು ಹೊಸ ಟೂಲ್ ಬಾರ್ ಅನ್ನು ಸೇರಿಸಲೂ ಬಹುದು ತೆಗೆಯಲೂ ಬಹುದು. |
05:35 | ಹಾಗೆ ಮಾಡಲು, ಟೂಲ್ ಬಾರ್ ನ ಮೇಲೆ ರೈಟ್ ಕ್ಲಿಕ್ ಮಾಡಿ Customize (ಕಸ್ಟಮೈಸ್) ಅನ್ನು ಆರಿಸಿ. |
05:40 | Add New Toolbar (ಆಡ್ ನ್ಯೂ ಟೂಲ್ಬಾರ್) ಬಟನ್ ಅನ್ನು ಕ್ಲಿಕ್ ಮಾಡಿ. |
05:44 | ಹೊಸ ಟೂಲ್ ಬಾರ್ ಗೆ ಹೆಸರನ್ನು ಕೊಡಿ. ನಾವೀಗ Sample Toolbar (ಸ್ಯಾಂಪಲ್ ಟೂಲ್ ಬಾರ್) ಎಂದು ಕೊಡೋಣ. |
05:50 | OK ಬಟನ್ ಅನ್ನು ಕ್ಲಿಕ್ ಮಾಡಿ. |
05:53 | ಈಗ ಒಂದು ಐಕಾನ್ ನನ್ನು ಡ್ರ್ಯಾಗ್ ಮಾಡಿ. Downloads (ಡೌನ್ ಲೊಡ್ಸ್) ಅನ್ನು ಸ್ಯಾಂಪಲ್ ಟೂಲ್ ಬಾರ್ ಮೇಲೆ ಡ್ರ್ಯಾಗ್ ಮಾಡಿ. |
06:01 | ಹೊಸ ಟೂಲ್ ಬಾರ್ ಅನ್ನು ಬ್ರೌಸರ್ ನಲ್ಲಿ ಗಮನಿಸಿ. |
06:04 | ಟೂಲ್ ಬಾರ್ ಅನ್ನು ತೆಗೆದು ಹಾಕಲು, Restore Default Set (ರಿಸ್ಟೋರ್ ಡೀಫಾಲ್ಟ್ ಸೆಟ್) ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. |
06:10 | ಕಂಟೆಂಟ್ ನ ಜಾಗವನ್ನು ದೊಡ್ಡದಾಗಿಸಲು, ನಾವು ಐಕಾನ್ ಗಳನ್ನು ಚಿಕ್ಕದಾಗಿಸಬಹುದು. |
06:16 | Use Small Icons (ಯೂಸ್ ಸ್ಮಾಲ್ ಐಕಾನ್ಸ್) ಎಂಬ ಹೆಸರಿನ ಚೆಕ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ. |
06:22 | ಡಯಲಾಗ್ ಬಾಕ್ಸ್ ಅನ್ನು ಮುಚ್ಚಲು Done (ಡನ್) ನ ಮೇಲೆ ಕ್ಲಿಕ್ ಮಾಡಿ. |
06:27 | ಐಕಾನ್ ಗಳು ಸಣ್ಣದಾಗಿರುವುದನ್ನು ನೋಡಬಹುದು. |
06:32 | ಈಗ ನಾವು ಈ ಟ್ಯುಟೊರಿಯಲ್ ನ ಕೊನೆಗೆ ಬಂದಿದ್ದೇವೆ. |
06:36 | ಈ ಟ್ಯುಟೊರಿಯಲ್ ನಲ್ಲಿ ನಾವು ಪಾಪ್ ಅಪ್ ಮತ್ತು ಇಮೇಜ್ ಪ್ರಿಫರೆನ್ಸ್ ಅನ್ನು ಸೆಟ್ ಮಾಡುವುದು, |
06:41 | ಮತ್ತು ಟೂಲ್ ಬಾರ್ ಅನ್ನು ಕಸ್ಟಮೈಸ್ ಮಾಡುವುದನ್ನು ಕಲಿತಿದ್ದೇವೆ. |
06:43 | ಇಲ್ಲಿ ನಿಮಗಾಗಿ ಅಭ್ಯಾಸವಿದೆ. |
06:46 | ಮೊಝಿಲ್ಲ ಫೈರ್ ಫಾಕ್ಸ್ ನ ಹೊಸ ವಿಂಡೋವನ್ನು ತೆರೆಯಿರಿ. www.yahoo.com ಅನ್ನು ಹೊರತುಪಡಿಸಿ ಉಳಿದ ಎಲ್ಲಾ ಪಾಪ್ ಅಪ್ ಗಳನ್ನು ಬ್ಲಾಕ್ ಮಾಡಿ. ಬುಕ್ ಮಾರ್ಕ್ಸ್ ಟೂಲ್ ಬಾರ್ ಅನ್ನು ಸೇರಿಸಿ. |
06:59 | ಕೆಳಗಿನ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ. |
07:02 | ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ. |
07:05 | ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ. |
07:10 | ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. |
07:15 | ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
07:18 | ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. |
07:25 | ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. |
07:29 | ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
07:38 | ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ಲಿಂಕ್ ಅನ್ನು ನೋಡಿ |
07:48 | ಈ ಪಾಠದ ಅನುವಾದಕ ಬೆಂಗಳೂರಿನಿಂದ ಶಶಾಂಕ ಹತ್ವಾರ್ ಮತ್ತು ಪ್ರವಾಚಕ ಐ.ಐ.ಟಿ. ಬಾಂಬೆಯಿಂದ ವಾಸುದೇವ.
ಸಹಯೊಗಕ್ಕಾಗಿ ಧನ್ಯವಾದಗಳು |