Firefox/C3/Bookmarks/Kannada

From Script | Spoken-Tutorial
Jump to: navigation, search
Time Narration
00:00 ಮೊಝಿಲ್ಲ ಫೈರ್ಫಾಕ್ಸ್ ನಲ್ಲಿ ಬುಕ್ ಮಾರ್ಕ್ಸ್ ಅನ್ನು ಆರ್ಗನೈಸ್ ಮಾಡುವುದು ಮತ್ತು ಪ್ರಿಂಟ್ ಮಾಡುವ ಬಗೆಗಿನ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು ಬುಕ್ ಮಾರ್ಕ್ಸ್ ನ ಬಗ್ಗೆ ಕಲಿಯಲಿದ್ದೇವೆ.
00:11 ಅಷ್ಟೇ ಅಲ್ಲದೆ ಬುಕ್ ಮಾರ್ಕ್ಸ್ ಅನ್ನು ಆರ್ಗನೈಸ್ ಮಾಡುವುದು, ಫೈರ್ ಫಾಕ್ಸ್ ಪೇಜ್ ಅನ್ನು ಸೆಟ್ ಅಪ್ ಮಾಡುವುದು, ಪ್ರಿವ್ಯೂ ಮತ್ತು ಪ್ರಿಂಟ್ ಈ ವಿಷಯಗಳನ್ನೂ ನಾವಿಲ್ಲಿ ಕಲಿಯಲಿದ್ದೇವೆ.
00:18 ಇಲ್ಲಿ ನಾವು ಉಬಂಟು 10.04 ರಲ್ಲಿ ಫೈರ್ಫಾಕ್ಸ್ 7.0 ಯನ್ನು ಬಳಸುತ್ತಿದ್ದೇವೆ.
00:26 ನಾವೀಗ ಫೈರ್ ಫಾಕ್ಸ್ ಬ್ರೌಸರ್ ಅನ್ನು ತೆರೆಯೋಣ.
00:29 ಡಿಫಾಲ್ಟ್ ಆಗಿ ಯಾಹೂ ಹೋಮ್ ಪೇಜ್ ತೆರೆದುಕೊಳ್ಳುತ್ತದೆ.
00:32 ನೀವು ಆಗಾಗ ಉಪಯೋಗಿಸುವ ಪೇಜ್ ಗೆ ನ್ಯಾವಿಗೇಟ್ ಆಗಲು ಬುಕ್ ಮಾರ್ಕ್ಸ್ ಗಳು ಸಹಕರಿಸುತ್ತವೆ.
00:37 ಈ ಹಿಂದಿನ ಟ್ಯುಟೋರಿಯಲ್ ನಲ್ಲಿ ನಾವು ಬುಕ್ ಮಾರ್ಕ್ಸ್ ನ ಬಗ್ಗೆ ಸ್ವಲ್ಪ ಕಲಿತಿದ್ದೇವೆ.
00:42 ಅಲ್ಲಿ gmail ಗಾಗಿ ಬುಕ್ ಮಾರ್ಕ್ ಅನ್ನು ಕೂಡಾ ಆಡ್ ಮಾಡಿದ್ದೆವು.
00:46 gmail ಹೋಮ್ ಪೇಜನ್ನು ತೆರೆಯಲು ಇದರ ಮೇಲೆ ಕ್ಲಿಕ್ ಮಾಡೋಣ.
00:50 ಆಗ ನೀವು gmail ಹೋಮ್ ಪೇಜ್ ಗೆ ಹೋಗುತ್ತೀರಿ.
00:53 ಅಡ್ರೆಸ್ಸ್ ಬಾರ್ ನ gmail ಅಡ್ರೆಸ್ಸ್ ನ ಬಲ ಭಾಗದಲ್ಲಿ ಹಳದಿ ನಕ್ಷತ್ರದ ಗುರುತನ್ನು ಗಮನಿಸಿದ್ದೀರಾ?
00:59 ಅದು ಈ ಸೈಟ್ ಬುಕ್ ಮಾರ್ಕ್ ಆಗಿದೆ ಎಂಬುದನ್ನು ಸೂಚಿಸುತ್ತದೆ.
01:03 ಬುಕ್ ಮಾರ್ಕ್ ನ ಹೆಸರನ್ನು ಬದಲಿಸಲು ಮತ್ತು ಅದನ್ನು ಬೇರೆ ಫೋಲ್ಡರ್ ನಲ್ಲಿಡಲೂ ಕೂಡಾ ಸ್ಟಾರ್ ಅನ್ನು ಬಳಸಬಹುದು.
01:09 ನಾವೀಗ gmail ನ ಹೆಸರನ್ನು mygmailpage (ಮೈ ಜೀಮೇಲ್ ಪೇ ಜ್) ಎಂದು ಬದಲಿಸೋಣ ಮತ್ತು ಇದನ್ನು MyBookmark (ಮೈಬುಕ್ ಮಾರ್ಕ್) ಎಂಬ ಹೊಸ ಫೋಲ್ಡರ್ ನಲ್ಲಿ ಇಡೋಣ.
01:18 ಅಡ್ರಸ್ ಬಾರ್ ನಲ್ಲಿನ ಹಳದಿ ಬಣ್ಣದ ಸ್ಟಾರನ್ನು ಕ್ಲಿಕ್ ಮಾಡೋಣ.
01:22 Edit This Bookmarks (ಎಡಿಟ್ ದಿಸ್ ಬುಕ್ ಮಾರ್ಕ್) ಎಂಬ ಡಯಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ.
01:25 ಹೆಸರಿನ ಜಾಗದಲ್ಲಿ mygmailpage (ಮೈ ಜಿಮೇಲ್ ಪೇಜ್) ಎಂದು ಬರೆಯಿರಿ.
01:29 Folder (ಫೋಲ್ಡರ್) ನಲ್ಲಿ ಕ್ಲಿಕ್ ಮಾಡಿ ಕೆಳಗೆ ಬನ್ನಿ, Choose (ಛೂಸ್) ಅನ್ನು ಆಯ್ಕೆ ಮಾಡಿ.
01:34 Bookmarks menu (ಬುಕ್ ಮಾರ್ಕ್ಸ್ ಮೆನ್ಯು) ವನ್ನು ಆರಿಸಿ ಮತ್ತು New Folder (ನ್ಯೂ ಫೋಲ್ಡರ್) ಬಟನ್ ಮೇಲೆ ಕ್ಲಿಕ್ ಮಾಡಿ.
01:39 ನ್ಯೂ ಫೋಲ್ಡರ್ ಬಂದಿರುತ್ತದೆ..
01:41 ಈ ಫೋಲ್ಡರ್ ನ ಹೆಸರನ್ನು MyBookmarks (ಮೈ ಬುಕ್ ಮಾರ್ಕ್ಸ್) ಎಂದು ಬದಲಿಸಿ.
01:45 Tags (ಟ್ಯಾಗ್ಸ್) ನಲ್ಲಿ email (ಈಮೇಲ್) ಎಂದು ಟೈಪ್ ಮಾಡಿ.
01:49 ಟ್ಯಾಗ್ ಗಳು ಬುಕ್ ಮಾರ್ಕ್ಸ್ ಗಳನ್ನು ವಿಂಗಡಿಸಲು ಸಹಕರಿಸುತ್ತವೆ.
01:52 ಬುಕ್ ಮಾರ್ಕ್ಸ್ ನ ಜೊತೆಗೆ ಹಲವು ಟ್ಯಾಗ್ ಗಳನ್ನೂ ನೀವು ಸೇರಿಸಬಹುದು.
01:55 ಉದಾಹರಣೆಗೆ, ಒಂದು ಶಾಪಿಂಗ್ ಸೈಟ್ ಅನ್ನು ನೀವು ಬುಕ್ ಮಾರ್ಕ್ ಮಾಡಿದಾಗ,
01:58 ಗಿಫ್ಟ್ಸ್, ಬುಕ್ಸ್, ಅಥವಾ ಟಾಯ್ಸ್ ಎಂಬ ಪದಗಳಿಂದ ಟ್ಯಾಗ್ ಮಾಡಬಹುದು.
02:03 Done (ಡನ್) ಮೇಲೆ ಕ್ಲಿಕ್ ಮಾಡಿ.
02:06 ಪೇಜನ್ನು ಬುಕ್ ಮಾರ್ಕ್ ಮಾಡಲು ಪರ್ಯಾಯವಾಗಿ Ctrl ಮತ್ತು D ಕೀ ಯನ್ನು ಒತ್ತಬಹುದು.
02:12 ಮೆನ್ಯು ಬಾರ್ ನಲ್ಲಿ Bookmarks (ಬುಕ್ ಮಾರ್ಕ್ಸ್) ನೆ ಮೇಲೆ ಕ್ಲಿಕ್ ಮಾಡಿ.
02:16 ಬುಕ್ ಮಾರ್ಕ್ಸ್ ಮೆನ್ಯುವಿನಲ್ಲಿ MyBookmarks (ಮೈ ಬುಕ್ ಮಾರ್ಕ್ಸ್) ಎಂಬ ಫೋಲ್ಡರ್ ಗೋಚರವಾಗುತ್ತದೆ. .
02:20 ಕ್ರಸರ್ ಅನ್ನು ಫೋಲ್ಡರ್ ನ ಮೇಲೆ ತನ್ನಿ.
02:23 mygmailpage (ಮೈ ಜಿಮೇಲ್ ಪೇಜ್) ಎಂಬ ಬುಕ್ ಮಾರ್ಕ್ ಇಲ್ಲಿ ಸೇವ್ ಆಗಿದೆ.
02:27 ಈಗ ಅಡ್ರೆಸ್ ಬಾರ್ ನಲ್ಲಿ email ಎಂಬ ಟ್ಯಾಗನ್ನು ಟೈಪ್ ಮಾಡಿ.
02:31 mygmailpage (ಮೈ ಜಿಮೇಲ್ ಪೇಜ್) ಸೈಟ್ ಪಟ್ಟಿಯ ಮೊದಲ ಆಯ್ಕೆಯಾಗಿ ಗೋಚರಿಸುವುದನ್ನು ಗಮನಿಸಿ.
02:38 ನಾವೀಗ ಬುಕ್ ಮಾರ್ಕ್ ನ ಹೆಸರನ್ನು ಬದಲಿಸಿದೆವು, ನಂತರ ಬೇರೆ ಫೋಲ್ಡರ್ ನಲ್ಲಿ ಸೇವ್ ಮಾಡಿದೆವು ಮತ್ತು ಟ್ಯಾಗ್ ಬಳಸುವ ಮುಖಾಂತರ ಅದನ್ನು ಗುರುತಿಸಿದೆವು.
02:45 ಈಗ www.google.com ( ಡಬ್ಲ್ಯು ಡಬ್ಲ್ಯು ಡಬ್ಲ್ಯು ಡಾಟ್ ಗೂಗಲ್ ಡಾಟ್ ಕಾಮ್) ಎಂಬ ವೆಬ್ ಸೈಟ್ ಅನ್ನು ಬುಕ್ ಮಾರ್ಕ್ ಮಾಡೋಣ. <Pause>
02:53 ಆಡ್ರೆಸ್ ಬಾರ್ ನಲ್ಲಿ ಅಡ್ರೆಸ್ ಅನ್ನು ಸೆಲೆಕ್ಟ್ ಮಾಡಿ ಡಿಲಿಟ್ ಮಾಡಿರಿ.
02:56 ಈಗ www.google.com (ಡಬ್ಲ್ಯು ಡಬ್ಲ್ಯು ಡಬ್ಲ್ಯು ಡಾಟ್ ಗೂಗಲ್ ಡಾಟ್ ಕಾಮ್) ಎಂದು ಟೈಪ್ ಮಾಡಿ.
03:01 ಎಂಟರ್ ಅನ್ನು ಒತ್ತಿರಿ.
03:03 ಈಗ ಅಡ್ರೆಸ್ ಬಾರ್ ನ ಬಲ ಮೂಲೆಯಲ್ಲಿರುವ ಸ್ಟಾರ್ ನ ಮೇಲೆ ಕ್ಲಿಕ್ ಮಾಡಿ.
03:08 ಗೂಗಲ್ ವೆಬ್ ಸೈಟ್ ಬುಕ್ ಮಾರ್ಕ್ ಆಗಿದೆ.
03:12 ಇದೇ ರೀತಿಯಲ್ಲಿ ಇನ್ನೂ ನಾಲ್ಕು ಸೈಟ್ ಗಳನ್ನು ಬುಕ್ ಮಾರ್ಕ್ ಮಾಡೋಣ. Spoken Tutorial (ಸ್ಪೋಕನ್ ಟ್ಯುಟೋರಿಯಲ್), Yahoo (ಯಾಹೂ), Fairefox Add-ons (ಫೈರ್ ಫಾಕ್ಸ್ ಆಡ್ ಆನ್ಸ್) ಮತ್ತು Ubuntu (ಉಬಂಟು).
03:36 ಗಮನಿಸಿ, ಈ ಬುಕ್ ಮಾರ್ಕ್ ಗಳನ್ನು ನಾವು ಫೋಲ್ಡರ್ ಗೆ ಸೇವ್ ಮಾಡಿಲ್ಲ.
03:40 ನಾವು ಕ್ರಿಯೆಟ್ ಮಾಡಿದ ಬುಕ್ ಮಾರ್ಕ್ ಅನ್ನು ಡಿಲಿಟ್ ಮಾಡುವುದಾದರೂ ಹೇಗೆ?
03:44 Edit This Bookmarks (ಎಡಿಟ್ ದಿಸ್ ಬುಕ್ ಮಾರ್ಕ್) ಎಂಬ ಡಯಲಾಗ್ ಬಾಕ್ಸ್ ನಲ್ಲಿ Remove Bookmark (ರಿಮೂವ್ ಬುಕ್ ಮಾರ್ಕ್) ಎಂಬ ಬಟನ್ ನನ್ನು ನೀವು ಈಗಾಗಲೇ ಗಮನಿಸಿರುತ್ತೀರಿ.
03:50 ನಾವೀಗ www.google.com (ಡಬ್ಲ್ಯು ಡಬ್ಲ್ಯು ಡಬ್ಲ್ಯು ಡಾಟ್ ಗೂಗಲ್ ಡಾಟ್ ಕಾಮ್) ಎಂಬುದರ ಬುಕ್ ಮಾರ್ಕ್ ಅನ್ನು ಡಿಲಿಟ್ ಮಾಡೋಣ.
03:55 ಅಡ್ರೆಸ್ ಬಾರ್ ನಲ್ಲಿ www.google.com (ಡಬ್ಲ್ಯು ಡಬ್ಲ್ಯು ಡಬ್ಲ್ಯು ಡಾಟ್ ಗೂಗಲ್ ಡಾಟ್ ಕಾಮ್) ಎಂದು ಟೈಪ್ ಮಾಡಿ. ನಂತರ ಹಳದಿ ನಕ್ಷತ್ರದ ಮೇಲೆ ಕ್ಲಿಕ್ ಮಾಡಿ.
04:03 ಎಡಿಟ್ ದಿಸ್ ಬುಕ್ ಮಾರ್ಕ್ ಎಂಬ ಡಯಲಾಗ್ ಬಾಕ್ಸ್ ನಲ್ಲಿ Remove bookmark (ರಿಮೂವ್ ಬುಕ್ ಮಾರ್ಕ್) ಎಂಬ ಬಟನ್ ನನ್ನು ಕ್ಲಿಕ್ ಮಾಡಿ.
04:09 ಮೆನ್ಯು ಬಾರ್ ನಲ್ಲಿ Bookmarks ಮತ್ತು MyBookmarks ಎಂಬ ಬಟನ್ ಗಳ ಮೇಲೆ ಕ್ಲಿಕ್ ಮಾಡಿ.
04:14 ಇನ್ನು ಮುಂದೆ ಗೂಗಲ್ ಬುಕ್ ಮಾರ್ಕ್, ಬುಕ್ ಮಾರ್ಕ್ ಮೆನ್ಯುವಿನಲ್ಲಿ ಕಾಣಸಿಗುವುದಿಲ್ಲ.
04:19 ನೀವು ರಚಿಸಿದ ಬುಕ್ ಮಾರ್ಕ್ ಅನ್ನು ಹೇಗೆ ಬಳಸುತ್ತೀರಿ?
04:23 ಬುಕ್ ಮಾರ್ಕ್ ಗಳನ್ನು ಅನೇಕ ರೀತಿಯಲ್ಲಿ ಬಳಸಬಹುದು.
04:26 ನೀವು ರಚಿಸಿದ ಬುಕ್ ಮಾರ್ಕ್ ಅನ್ನು ಬಳಸುವ ಅತಿ ಸರಳ ಮಾರ್ಗವೆಂದರೆ ಅದರ ಹೆಸರನ್ನು ಅಡ್ರೆಸ್ ಬಾರ್ ನಲ್ಲಿ ಬರೆಯುವುದು.
04:33 ಅಡ್ರೆಸ್ ಬಾರ್ ನಲ್ಲಿ ಕ್ಲಿಕ್ ಮಾಡಿ. ತೋರಿಸುತ್ತಿರುವ ಅಡ್ರೆಸ್ ಅನ್ನು ಸೆಲೆಕ್ಟ್ ಮಾಡಿ ನಂತರ ಡಿಲಿಟ್ ಮಾಡಿ.
04:39 ಈಗ ಅಡ್ರೆಸ್ ಬಾರ್ ನಲ್ಲಿ g ಎಂದು ಟೈಪ್ ಮಾಡಿ.
04:43 g ಎಂಬ ಅಕ್ಷರದಿಂದ ಆರಂಭವಾಗುವ ವೆಬ್ ಸೈಟ್ ಗಳ ಪಟ್ಟಿ ಗೋಚರವಾಗುವುದನ್ನು ಗಮನಿಸಿ.
04:49 ಇವುಗಳು ನೀವು ಬುಕ್ ಮಾರ್ಕ್ ಮಾಡಿದ ಅಥವಾ ಟ್ಯಾಗ್ ಮಾಡಿದ ಅಥವಾ ಮೊದಲು ನೋಡಿದ ಸೈಟ್ ಗಳಾಗಿರುತ್ತವೆ.
04:55 ಲೈಬ್ರರಿ ವಿಂಡೋವಿನಲ್ಲಿ ಬುಕ್ ಮಾರ್ಕ್ ಗಳನ್ನು ನೋಡಬಹುದು ಮತ್ತು ಜೋಡಿಸಲೂಬಹುದು.
05:00 ಮೆನ್ಯು ಬಾರ್ ನಲ್ಲಿ Bookmarks (ಬುಕ್ ಮಾರ್ಕ್ಸ್) ನ ಮೇಲೆ ಕ್ಲಿಕ್ ಮಾಡಿ, ನಂತರ Show All Bookmarks (ಶೋ ಆಲ್ ಬುಕ್ ಮಾರ್ಕ್ಸ್) ಅನ್ನು ಸೆಲೆಕ್ಟ್ ಮಾಡಿ.
05:06 Library (ಲೈಬ್ರರಿ) ಎಂಬ ವಿಂಡೋ ತೆರೆದುಕೊಳ್ಳುತ್ತದೆ.
05:09 ನೀವು ಮಾಡಿದ ಎಲ್ಲಾ ಬುಕ್ ಮಾರ್ಕ್ ಗಳು ಡಿಫಾಲ್ಟ್ ಆಗಿ Unsorted Bookmarks (ಅನ್ ಸ್ಟೋರ್ಡ್ ಬುಕ್ ಮಾರ್ಕ್ಸ್) ಎಂಬ ಫೋಲ್ಡರ್ ನಲ್ಲಿ ಸೇವ್ ಆಗಿರುತ್ತದೆ.
05:16 Yahoo, Spoken Tutorial, Ubuntu ಮತ್ತು Firefox Add-ons ಎಂಬ ಬುಕ್ ಮಾರ್ಕ್ ಗಳು ಪಟ್ಟಿಯಲ್ಲಿರುವುದನ್ನು ಗಮನಿಸಿ.
05:24 ಬುಕ್ ಮಾರ್ಕ್ ಮೆನ್ಯುವಿಗೆ Yahoo India (ಯಾಹೂ ಇಂಡಿಯಾ) ಎಂಬ ಬುಕ್ ಮಾರ್ಕನ್ನು ಸೇರಿಸಬೇಕೆಂದಿಟ್ಟುಕೊಳ್ಳೋಣ.
05:29 ಮೊದಲಿಗೆ Library ವಿಂಡೋ ವನ್ನು ಸ್ಕ್ರೀನ್ ನ ಮಧ್ಯ ಭಾಗಕ್ಕೆ ತರೋಣ.
05:34 ಈಗ ನಾವು ಮೆನ್ಯು ಬಾರ್ ಮತ್ತು ಆಪ್ಷನ್ ಗಳನ್ನು ಸ್ಪಷ್ಟವಾಗಿ ನೋಡಬಹುದು.
05:39 Unsorted Bookmarks (ಅನ್ ಸಾರ್ಟೆಡ್ ಬುಕ್ ಮಾರ್ಕ್) ಫೋಲ್ಡರ್ ನಲ್ಲಿ ಯಾಹೂ ಬುಕ್ ಮಾರ್ಕ್ ಅನ್ನು ಸೆಲೆಕ್ಟ್ ಮಾಡಿ.
05:43 ಮೌಸ್ ನ ಎಡ ಬಟನ್ ನನ್ನು ಒತ್ತಿಕೊಂಡು ಯಾಹೂ ಬುಕ್ ಮಾರ್ಕನ್ನು ಬುಕ್ ಮಾರ್ಕ್ ಮೆನ್ಯುವಿನ ವರೆಗೆ ಎಳೆದುಕೊಂಡು ಬನ್ನಿ.
05:49 ಕ್ರಸರ್ ಬುಕ್ ಮಾರ್ಕ್ ಮೆನ್ಯುವಿನ ಮೇಲೆಯೇ ಇದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
05:53 ಬುಕ್ ಮಾರ್ಕ್ ಮೆನ್ಯು ವಿಸ್ತೃತಗೊಳ್ಳುತದೆ.
05:56 ಮೆನ್ಯುವಿನ ಮೇಲೆ ಮೌಸ್ ಪಾಯಿಂಟರನ್ನು ನಿಲ್ಲಿಸಿ ಮೌಸ್ ನ ಎಡ ಬಟನ್ ನನ್ನು ಬಿಡಿ.
06:01 ಈಗ ಬುಕ್ ಮಾರ್ಕ್ ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ.
06:04 ಯಾಹೂ ಬುಕ್ ಮಾರ್ಕ್ ಈಗ ಬುಕ್ ಮಾರ್ಕ್ ಮೆನ್ಯುವಿನಲ್ಲಿ ಗೋಚರಿಸುತ್ತದೆ.
06:08 Library ಲೈಬ್ರರಿ ವಿಂಡೋವಿನಿಂದ ನೇರವಾಗಿ ಬುಕ್ ಮಾರ್ಕನ್ನು ತೆರೆಯಲು ಅದರ ಮೇಲೆ ಡಬಲ್ ಕ್ಲಿಕ್ ಮಾಡಿ.
06:15 ನಾವೀಗ ಲೈಬ್ರರಿ ವಿಂಡೋವನ್ನು ಮುಚ್ಚೋಣ.
06:19 ಫೈರ್ ಫಾಕ್ಸ್, ಬುಕ್ ಮಾರ್ಕ್ ಗಳನ್ನು ಜೋಡಿಸಲು ಕೂಡಾ ಅವಕಾಶ ಮಾಡಿಕೊಡುತ್ತದೆ.
06:23 ಈಗ ಬುಕ್ ಮಾರ್ಕ್ ಗಳನ್ನು ಹೆಸರಿನ ಅನುಗುಣವಾಗಿ ಜೋಡಿಸೋಣ.
06:26 ಮೆನ್ಯು ಬಾರ್ ನಲ್ಲಿ View ಮೇಲೆ ಕ್ಲಿಕ್ ಮಾಡಿ ನಂತರ Sidebar (ಸೈಡ್ ಬಾರ) ಅನ್ನು ಸೆಲೆಕ್ಟ್ ಮಾಡಿ ಮತ್ತು Bookmarks (ಬುಕ್ ಮಾರ್ಕ್ಸ್) ಅನ್ನು ಕ್ಲಿಕ್ ಮಾಡಿ.
06:32 ಎಡಬದಿಯಲ್ಲಿ Bookmarks (ಬುಕ್ ಮಾರ್ಕ್ಸ್) ಎಂಬ ಸ್ಲೈಡ್ ಬಾರ್ ತೆರೆದುಕೊಳ್ಳುತ್ತದೆ.
06:37 ಗೂಗಲ್ ಡಾಟ್ ಕಾಮನ್ನು ಮತ್ತೊಮ್ಮೆ ಬುಕ್ ಮಾರ್ಕ್ ಮಾಡೋಣ. <Pause>
06:42 Bookmarks ಎಂಬ ಸ್ಲೈಡ್ ಬಾರ್ ನಲ್ಲಿ Unsorted Bookmarks ಎಂಬ ಫೋಲ್ಡರನ್ನು ಸೆಲೆಕ್ಟ್ ಮಾಡಿ, ಅದರ ಮೇಲೆ ರೈಟ್ ಕ್ಲಿಕ್ ಮಾಡಿ.
06:48 Sort By Name (ಸಾರ್ಟ್ ಬೈ ನೇಮ್) ಅನ್ನು ಸೆಲೆಕ್ಟ್ ಮಾಡಿ.
06:51 ಬುಕ್ ಮಾರ್ಕ್ ಗಳು ಹೆಸರಿನ ಆಧಾರದಲ್ಲಿ ಜೋಡಿಸಲ್ಪಡುತ್ತದೆ.
06:54 ನಿಮಗೆ ಬೇಕಾದ ಹಾಗೆಯೂ ಬುಕ್ ಮಾರ್ಕ್ ಗಳನ್ನು ಜೋಡಿಸಬಹುದು.
06:57 Bookmarks ಸ್ಲೈಡ್ ಬಾರ್ ನಲ್ಲಿ Bookmarks Menu ಫೋಲ್ಡರ್ ನ ಮೇಲೆ ಕ್ಲಿಕ್ ಮಾಡಿ.
07:03 ನಂತರ, Unsorted Bookmarks ಫೋಲ್ಡರ್ ನ ಮೇಲೆ ಕ್ಲಿಕ್ ಮಾಡಿ.
07:08 ಮೌಸನ್ನು Spoken Tutorial ಬುಕ್ ಮಾರ್ಕ್ ನ ಮೇಲೆ ತನ್ನಿ.
07:12 ಈಗ ಮೌಸ್ ನ ಎಡ ಬಟನ್ ಅನ್ನು ಒತ್ತಿಕೊಂಡು ಆ ಬುಕ್ ಮಾರ್ಕನ್ನು ಬುಕ್ ಮಾರ್ಕ್ಸ್ ಸ್ಲೈಡ್ ಬಾರ್ ನ Ubuntu and Free Software ಎಂಬ ಫೋಲ್ಡರ್ ಗೆ ಎಳೆದು ತನ್ನಿ.
07:22 ಮೌಸ್ ಬಟನ್ ಅನ್ನು ಬಿಡಿ.
07:25 ಈ ಬುಕ್ ಮಾರ್ಕ್, Ubuntu and Free Software ಎಂಬ ಫೋಲ್ಡರ್ ಗೆ ರವಾನೆಯಾಗಿರುತ್ತದೆ.
07:30 ಬುಕ್ ಮಾರ್ಕ್ಸ್ ಸ್ಲೈಡ್ ಬಾರ್ ನಲ್ಲಿ ನೀವು ಮಾಡಿದ ಬದಲಾವಣೆಗಳು ಬುಕ್ ಮಾರ್ಕ್ಸ್ ಮೆನ್ಯುವಿನಲ್ಲೂ ಗೋಚರವಾಗುತ್ತವೆ.
07:35 ನೀವು ಬುಕ್ ಮಾರ್ಕ್ ಗಳನ್ನು ಸ್ವಯಂಚಾಲಿತವಾಗಿಯೂ ಜೋಡಿಸಬಹುದು.
07:39 ಮನ್ಯು ಬಾರ್ ನಲ್ಲಿ Bookmarks ನ ಮೇಲೆ ಕ್ಲಿಕ್ ಮಾಡಿ Show All Bookmarks (ಶೋ ಆಲ್ ಬುಕ್ ಮಾರ್ಕ್ಸ್) ಅನ್ನು ಸೆಲೆಕ್ಟ್ ಮಾಡಿ.
07:45 Library ವಿಂಡೋವಿನ ಎಡಬದಿಯಲ್ಲಿ ಅದು ಗೋಚರಗೊಳ್ಳುತ್ತದೆ. Unsorted Bookmarks ಅನ್ನು ಸೆಲೆಕ್ಟ್ ಮಾಡಿ.
07:51 ಈಗ Views ಮೇಲೆ ಕ್ಲಿಕ್ ಮಾಡಿ ನಂತರ Sort ಮತ್ತು Sort by Added ಮೇಲೆ ಕ್ಲಿಕ್ ಮಾಡಿ.
07:57 ಅಡ್ರೆಸ್ಸ್ ಗಳು ಆಡ್ ಆದ ಕ್ರಮದಲ್ಲಿ ಜೋಡಿಸಲ್ಪಟ್ಟಿರುತ್ತದೆ. ಕ್ಲೋಸ್ ಬಟನ್ ಮೇಲೆ ಕ್ಲಿಕ್ ಮಾಡಿ.
08:04 ಕೊನೆಯದಾಗಿ ಈ ವೆಬ್ ಪೇಜನ್ನು ಪ್ರಿಂಟ್ ಮಾಡುವುದು ಹೇಗೆ ಎಂಬುದನ್ನು ಕಲಿಯೋಣ.
08:08 ಮೊದಲಿಗೆ ಈ ವೆಬ್ ಪೇಜನ್ನು ಪ್ರಿಂಟ್ ಗಾಗಿ ಸೆಟ್ ಅಪ್ ಮಾಡಿಕೊಳ್ಳೋಣ.
08:12 ಫೈರ್ ಫಾಕ್ಸ್ ಮೆನ್ಯು ಬಾರ್ ನಲ್ಲಿ File ಅನ್ನು ಕ್ಲಿಕ್ ಮಾಡಿ Page Setup ಅನ್ನು ಆಯ್ಕೆ ಮಾಡಿ.
08:17 Page Setup ಎಂಬ ಡಯಲಾಗ್ ಬಾಕ್ಸ್ ಗೋಚರವಾಗುತ್ತದೆ.
08:21 ಪೇಪರ್ ನ ಅಳತೆಯನ್ನು A4 (ಎ ಫೋರ್) ಎಂದು ಆಯ್ಕೆ ಮಾಡಿ.
08:24 Orientation (ಓರಿಎಂಟೇಷನ್) ಅನ್ನು Portrait (ಪೋರ್ಟ್ರೇಟ್) ಎಂದು ಆಯ್ಕೆ ಮಾಡಿ.
08:28 Apply (ಅಪ್ಲೈ) ಬಟನ್ ಅನ್ನು ಕ್ಲಿಕ್ ಮಾಡಿ.
08:30 ಸೆಟ್ಟಿಂಗ್ಸ್ ನ ಅನ್ವಯದ ಬಗ್ಗೆ ತಿಳಿಯಲು File ಮೇಲೆ ಕ್ಲಿಕ್ ಮಾಡಿ ನಂತರ Print Preview (ಪ್ರಿಂಟ್ ಪ್ರಿವ್ಯೂ) ಅನ್ನು ಸೆಲೆಕ್ಟ್ ಮಾಡಿ.
08:36 ಪ್ರಿಂಟ್ ಆದಾಗ ಪೇಜ್ ಹೇಗೆ ಕಾಣುವುದೋ ಹಾಗೆಯೇ ಇಲ್ಲಿ ಕಾಣಸಿಗುತ್ತದೆ.
08:40 ಹೊರಗೆ ಬರಲು Close ಬಟನ್ ಕ್ಲಿಕ್ ಮಾಡಿ.
08:42 ಫೈರ್ ಫಾಕ್ಸ್ ಮೆನ್ಯು ಬಾರ್ ನಲ್ಲಿ File ಮೇಲೆ ಕ್ಲಿಕ್ ಮಾಡಿ Print ಅನ್ನು ಆರಿಸಿ.
08:47 Print ಎಂಬ ಡಯಲಾಗ್ ಬಾಕ್ಸ್ ಸ್ಕ್ರೀನ್ ಮೇಲೆ ಗೋಚರವಾಗುತ್ತದೆ.
08:50 General ಟ್ಯಾಬ್ ನಲ್ಲಿ GenericPrinter (ಜೆನೆರಿಕ್ ಪ್ರಿಂಟರ್) ಆಯ್ಕೆಯನ್ನು ನಾವಿಲ್ಲಿ ಆರಿಸಿಕೊಳ್ಳೋಣ.
08:55 ನಂತರ, Range (ರೇಂಜ್) ನಲ್ಲಿ All Pages (ಆಲ್ ಪೇಜಸ್) ಅನ್ನು ಸೆಲೆಕ್ಟ್ ಮಾಡಿ.
09:01 Copies (ಕಾಪೀಸ್) ನಲ್ಲಿ ಒಂದನ್ನು ನಾವು ಆರಿಸೋಣ.
09:04 Options (ಆಪ್ಷನ್ಸ್) ಟ್ಯಾಬನ್ನು ಕ್ಲಿಕ್ ಮಾಡಿ ಮತ್ತು Ignore Scaling and Shrink To Fit Page Width (ಇಗ್ನೋರ್ ಸ್ಕೇಲಿಂಗ್ ಅಂಡ್ ಶ್ರಿಂಕ್ ಟು ಫಿಟ್ ಪೇಜ್ ವಿಡ್ಥ್) ಅನ್ನು ಸೆಲೆಕ್ಟ್ ಮಾಡಿ.
09:10 Print ಬಟನ್ ಕ್ಲಿಕ್ ಮಾಡಿ.
09:12 ಪ್ರಿಂಟರ್ ಸರಿಯಾಗಿ ಸಂರಚನೆಗೊಂಡಿದ್ದಲ್ಲಿ ಈಗಲೇ ಪ್ರಿಂಟ್ ಶುರುವಾಗುತ್ತದೆ.
09:17 ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದೆವು. ಈ ಟ್ಯುಟೋರಿಯಲ್ ನಲ್ಲಿ ನಾವು
09:23 ಬುಕ್ ಮಾರ್ಕ್ಸ್, ಬುಕ್ಮಾರ್ಕ್ಸ್ ಅನ್ನು ಜೋಡಿಸುವ ಬಗೆ, ಫೈರ್ ಫಾಕ್ಸ್ ಪೇಜ್ ಅನ್ನು ಸೆಟ್ ಮಾಡುವ ಬಗೆ, ಪ್ರಿವ್ಯೂ ಮತ್ತು ಪ್ರಿಂಟ್ ಎಂಬ ವಿಚಾರಗಳ ಬಗ್ಗೆ ಕಲಿತಿದ್ದೇವೆ.
09:32 ಇಲ್ಲಿ ನಿಮಗೆ ಅಭ್ಯಾಸವಿದೆ.
09:35 ಹೊಸ ಮೊಝಿಲ್ಲಾ ಫೈರ್ ಫಾಕ್ಸ್ ವಿಂಡೋವನ್ನು ತೆರೆಯಿರಿ,
09:38 ಹೊಸ ಐದು ಸೈಟ್ ಗಳಿಗೆ ಭೇಟಿ ಕೊಡಿ.
09:41 ಅವುಗಳೆಲ್ಲವನ್ನೂ ಬುಕ್ ಮಾರ್ಕ್ ಮಾಡಿ.
09:43 ಎಲ್ಲಾ ಬುಕ್ ಮಾರ್ಕ್ ಗಳನ್ನೂ ಹೊಸ ಫೋಲ್ಡರ್ ನಲ್ಲಿ ಸೇವ್ ಮಾಡಿ.
09:47 ಬುಕ್ಮಾರ್ಕ್ ಗಳನ್ನು ಅಕ್ಷರ ಕ್ರಮದ ವಿರುದ್ಧವಾಗಿ ಜೋಡಿಸಿ.
09:51 ಕೊನೆಗೆ ಬುಕ್ ಮಾರ್ಕ್ ಮಾಡಿದ ಸೈಟ್ ಗೆ ಹೋಗಿ.
09:55 ವೆಬ್ ಪೇಜನ್ನು ಪ್ರಿಂಟ್ ಗೆ ಸೆಟ್ ಅಪ್ ಮಾಡಿ ಮತ್ತು ಪ್ರಿಂಟ್ ಮಾಡಿ.
09:58 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ನೋಡಿ.
10:02 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವನ್ನು ತಿಳಿಸುತ್ತದೆ.
10:05 ನಿಮ್ಮಲ್ಲಿ ಉತ್ತಮ ಬ್ಯಾಂಡ್ ವಿಡ್ಥ್ ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ.
10:10 ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.
10:15 ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
10:18 ಹೆಚ್ಚಿನ ಮಾಹಿತಿಗಾಗಿ contact at spoken hyphen tutorial dot org ಎಂಬ ಈ-ಮೇಲ್ ಮೂಲಕ ಸಂಪರ್ಕಿಸಿ.
10:25 ಈ ಪಾಠವು ಟಾಕ್ ಟು ಎ ಟೀಚರ್ ಎಂಬ ಪರಿಯೋಜನೆಯ ಭಾಗವಾಗಿದೆ.
10:29 ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
10:37 ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ಲಿಂಕ್ ಅನ್ನು ನೋಡಿ
10:40 spoken hyphen tutorial dot org slash NMEICT hyphen Intro
10:47 ಈ ಪಾಠದ ಅನುವಾದಕ ಬೆಂಗಳೂರಿನಿಂದ ಶಶಾಂಕ ಹತ್ವಾರ್ ಮತ್ತು ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ .

ಸಹಯೊಗಕ್ಕಾಗಿ ಧನ್ಯವಾದಗಳು.

Contributors and Content Editors

PoojaMoolya, Vasudeva ahitanal