Digital-Divide/C2/Newborn-Child-Care/Kannada
From Script | Spoken-Tutorial
Time | Narration |
00:02 | Neonatal Childcare ಎಂಬ 'ಸ್ಪೋಕನ್ ಟ್ಯುಟೋರಿಯಲ್'ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ, ನಾವು: |
00:09 | * ನವಜಾತ ಶಿಶುವಿನ ಆರೈಕೆಯನ್ನು ಹೇಗೆ ಮಾಡುವುದು |
00:12 | * ಹೊಸದಾಗಿ ತಾಯಿಯಾದವಳು ಎದುರಿಸುವ ಸಾಮಾನ್ಯ ಸಮಸ್ಯೆಗಳು ಮತ್ತು |
00:15 | * ಈ ಸಮಸ್ಯೆಗಳನ್ನು ಹೇಗೆ ಬಗೆಹರಿಸುವುದು ಇತ್ಯಾದಿಗಳ ಬಗ್ಗೆ ಕಲಿಯುವೆವು. |
00:18 | ಡಾ. ಅಂಜಲಿ ಅನಿತಾಳ ಮನೆಗೆ ಬಂದು, ಅವಳ ನವಜಾತ ಶಿಶುವಿನ ಬಗ್ಗೆ ತಮ್ಮ ಸಂತಸವನ್ನು ವ್ಯಕ್ತಪಡಿಸುತ್ತಾರೆ. |
00:25 | ಅನಿತಾ ತನ್ನ ಮಗುವನ್ನು ತಪ್ಪಾದ ರೀತಿಯಲ್ಲಿ ಎತ್ತಿಕೊಂಡಿರುವುದನ್ನು ಡಾ. ಅಂಜಲಿ ಗಮನಿಸುತ್ತಾರೆ. |
00:30 | ಮಗುವನ್ನು ಎತ್ತಿಕೊಳ್ಳುವಾಗ ಜಾಗ್ರತೆಯಿಂದಿರಲು ಅನಿತಾಳಿಗೆ ಅವರು ಹೇಳುತ್ತಾರೆ. |
00:35 | ಮಗುವನ್ನು ಎತ್ತಿಕೊಳ್ಳುವಾಗ ಅಥವಾ ತೊಟ್ಟಿಲಲ್ಲಿ ಮಲಗಿಸುವಾಗ ಮಗುವಿನ ತಲೆಗೆ ಹೇಗೆ ಆಸರೆಯನ್ನು ಕೊಡಬೇಕು ಎಂಬುದನ್ನು |
00:41 | ಡಾ. ಅಂಜಲಿ ಅವಳಿಗೆ ತೋರಿಸುತ್ತಾರೆ. |
00:45 | ಮಗುವಿನೊಂದಿಗೆ ಒರಟಾಗಿ ವರ್ತಿಸಬಾರದೆಂದು ವೈದ್ಯೆಯು ಅನಿತಾಳಿಗೆ ಸಲಹೆ ಕೊಡುತ್ತಾರೆ. |
00:51 | ಇದೆಲ್ಲ ತನಗೆ ಹೊಸದು ಎಂದು ಅನಿತಾ ವೈದ್ಯೆಗೆ ಹೇಳುತ್ತಾಳೆ ಮತ್ತು |
00:55 | ತನ್ನ ಮಗುವಿನ ಉತ್ತಮ ಆರೈಕೆಯನ್ನು ಮಾಡುವುದರ ಬಗ್ಗೆ ಅವರ ಸಲಹೆಯನ್ನು ಕೇಳುತ್ತಾಳೆ. |
01:02 | ಡಾ. ಅಂಜಲಿ ಸಂತೋಷದಿಂದ ಒಪ್ಪಿಕೊಳ್ಳುತ್ತಾರೆ. |
01:04 | ನವಜಾತ ಶಿಶುವನ್ನು ಮುಟ್ಟುವ ಮೊದಲು |
01:09 | ಸಾಬೂನು ಅಥವಾ ಇದ್ದಿಲುಬೂದಿಯಿಂದ ನಿಮ್ಮ ಕೈಗಳನ್ನು ತೊಳೆದುಕೊಳ್ಳುವುದು |
01:13 | ಅತ್ಯಂತ ಮುಖ್ಯವಾಗಿದೆ ಎಂದು ಅವರು ಒತ್ತಿ ಹೇಳುತ್ತಾರೆ. |
01:15 | ಏಕೆಂದರೆ ಹಸುಳೆಗಳ ರೋಗನಿರೋಧಕ ಶಕ್ತಿಯು ಇನ್ನೂ ಸಾಕಷ್ಟು ಬಲವಾಗಿರುವುದಿಲ್ಲ. |
01:19 | ಹೀಗಾಗಿ, ಅವುಗಳಿಗೆ ಸೋಂಕುರೋಗಗಳು ತಗುಲುವ ಸಾಧ್ಯತೆ ಹೆಚ್ಚಾಗಿರುತ್ತದೆ. |
01:24 | ಅನಿತಾ ವೈದ್ಯೆಯನ್ನು ಕೇಳುತ್ತಾಳೆ: “ನಾನು ಮಗುವಿಗೆ ಎಷ್ಟು ಬಾರಿ ಆಹಾರವನ್ನು ಕೊಡಬೇಕು?”. |
01:28 | ಮಗುವಿಗೆ ಪ್ರತಿ 2 ರಿಂದ 3 ಗಂಟೆಗಳಿಗೊಮ್ಮೆ ಫೀಡ್ ಮಾಡುವುದು ಅವಶ್ಯಕ ಎಂದು ವೈದ್ಯೆ ಅನಿತಾಳಿಗೆ ಹೇಳುತ್ತಾರೆ. |
01:37 | ಮಗುವಿಗೆ ಎದೆಹಾಲು ಉಣಿಸುವುದು, ಮಗುವಿನ ಆರೋಗ್ಯಕ್ಕೆ ಮತ್ತು |
01:43 | ರೋಗನಿರೋಧಕ ಶಕ್ತಿಯ ಬೆಳವಣಿಗೆಗೆ ಅತ್ಯಂತ ಮುಖ್ಯವಾಗಿದೆ. |
01:46 | ಅಲ್ಲದೇ, ನೀವು ಎದೆಹಾಲು ಉಣಿಸುತ್ತಿದ್ದರೆ, ಮಗುವಿಗೆ ಪ್ರತಿಯೊಂದು ಸ್ತನದಲ್ಲಿ ಸುಮಾರು 10-15 ನಿಮಿಷಗಳಷ್ಟು ಸ್ತನಪಾನ ಮಾಡಲು ಅವಕಾಶವನ್ನು ಕೊಡಬೇಕು ಎಂದು ಅವರು ವಿವರಿಸುತ್ತಾರೆ. |
01:56 | ಆಗ ಅನಿತಾ ವೈದ್ಯೆಯನ್ನು ಮಗುವಿಗೆ 'ಫಾರ್ಮುಲಾ ಫೀಡಿಂಗ್' ಕೊಡುವುದರ ಬಗ್ಗೆ ಕೇಳುತ್ತಾಳೆ. |
02:00 | ಉದಾಹರಣೆಗೆ, ಒಂದುವೇಳೆ ನೀವು ನಿಮ್ಮ ಮಗುವಿಗೆ ಹಾಲಿನ ಪರ್ಯಾಯಗಳಂತಹ ಫಾರ್ಮುಲಾ ಆಹಾರವನ್ನು ಕೊಡುತ್ತಿದ್ದರೆ |
02:08 | ಆಗ, ಮಗು ಪ್ರತಿಸಲ ಸುಮಾರು 60 ರಿಂದ 90 ಗ್ರಾಂಗಳಷ್ಟು ಆಹಾರವನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ವೈದ್ಯೆಯು ಹೇಳುತ್ತಾರೆ. |
02:14 | ನಂತರ ಅನಿತಾ, ಯಾವಾಗ ಮತ್ತು ಹೇಗೆ ಮಗುವಿಗೆ ಸ್ನಾನ ಮಾಡಿಸಬೇಕೆಂದು ವೈದ್ಯೆಯನ್ನು ಕೇಳುತ್ತಾಳೆ. |
02:21 | ಮೊದಲ ಕೆಲವು ವಾರಗಳಲ್ಲಿ ಶಿಶು ಬಹಳ ನಾಜೂಕಾಗಿರುತ್ತದೆ. |
02:28 | ಮಗುವಿನ- |
02:33 | * ಹೊಕ್ಕುಳಬಳ್ಳಿ ಬೀಳುವವರೆಗೆ |
02:37 | * ಗಾಯವು ಮಾಯುವವರೆಗೆ |
02:39 | * ನಾಭಿಯು ಪೂರ್ತಿಯಾಗಿ ಮಾಯುವವರೆಗೆ ಮಗುವಿಗೆ ನಾವು ಸ್ಪಾಂಜ್-ಬಾಥ್ (ಒದ್ದೆ ಬಟ್ಟೆಯಿಂದ ಒರೆಸುವುದು) ಮಾತ್ರ ಮಾಡಿಸಬೇಕೆಂದು ವೈದ್ಯೆ ಹೇಳುತ್ತಾರೆ. |
02:43 | ಆನಂತರ, ವಾರದಲ್ಲಿ 2 ರಿಂದ 3 ಸಲ ಸೌಮ್ಯವಾದ ಸಾಬೂನು ಬಳಸಿ ಸ್ನಾನಮಾಡಿಸಿದರೆ ಸಾಕು ಎಂದು ವೈದ್ಯೆಯು ವಿವರಿಸುತ್ತಾರೆ. |
02:53 | ಮಗುವಿಗೆ ಒಂದು ವರ್ಷವಾಗುವವರೆಗೆ ಇದು ಮುಂದುವರಿಯಬಹುದು. |
02:56 | ಮೇಲಿಂದ ಮೇಲೆ ಸ್ನಾನ ಮಾಡಿಸುವುದರಿಂದ ಚರ್ಮವು ಒಣಗಬಹುದು. |
03:01 | ಮಗುವಿಗೆ ಸ್ವಲ್ಪ ಕೆಂಪುಗುಳ್ಳೆಗಳು ಆಗಿರುವುದನ್ನು ಡಾ. ಅಂಜಲಿ ತೋರಿಸುತ್ತಾರೆ. |
03:06 | ಅನಿತಾ ಹೆದರುತ್ತಾಳೆ. |
03:08 | ಇದರ ಆರೈಕೆಯನ್ನು ಹೇಗೆ ಮಾಡುವುದೆಂದು ಅವಳು ವೈದ್ಯೆಯನ್ನು ಕೇಳುತ್ತಾಳೆ. |
03:13 | ಒದ್ದೆಯಾದ 'ಡೈಪರ್'ನಿಂದ ಈ ಕೆಂಪುಗುಳ್ಳೆಗಳು ಆಗಿವೆ ಎಂದು ವೈದ್ಯೆಯು ಹೇಳುತ್ತಾರೆ. |
03:19 | ನೀವು ನಿಮ್ಮ ಮಗುವಿನ ಬಟ್ಟೆಯ ಡೈಪರನ್ನು ಮೇಲಿಂದ ಮೇಲೆ ಮತ್ತು ಮಲವಿಸರ್ಜನೆಯ ನಂತರ ಸಾಧ್ಯವಿದ್ದಷ್ಟು ಬೇಗನೆ ಬದಲಾಯಿಸಬೇಕು ಎಂದು ಸಹ ಹೇಳುತ್ತಾರೆ. |
03:29 | ಸೌಮ್ಯವಾದ ಸಾಬೂನು ಮತ್ತು ನೀರಿನಿಂದ ಜಾಗವನ್ನು ಶುದ್ಧಗೊಳಿಸಿದ ಮೇಲೆ ಅದನ್ನು ಒರೆಸಿ. |
03:34 | ನಂತರ, ಅದನ್ನು ತೇವಾಂಶದಿಂದ ದೂರವಿಡಲು ಅದರ ಮೇಲೆ ಸ್ವಲ್ಪ ಬೇಬಿ ಪೌಡರನ್ನು ಹಚ್ಚಿ. |
03:39 | ನೀವು ಬಟ್ಟೆಯ ಡೈಪರನ್ನು ಬಳಸುತ್ತಿದ್ದರೆ, ಅವುಗಳನ್ನು ಬಿಸಿನೀರು ಮತ್ತು ಡೆಟ್ಟಾಲ್ ಗಳಂತಹ ರೋಗಾಣುನಾಶಕವನ್ನು ಬಳಸಿ ತೊಳೆಯಬೇಕು. |
03:49 | ದಿನದ ಕೆಲವು ಸಮಯ ಮಗುವಿಗೆ ಡೈಪರ್ ಹಾಕದಿದ್ದರೆ ಒಳ್ಳೆಯದು ಎಂದು ವೈದ್ಯೆಯು ಹೇಳುತ್ತಾರೆ. |
03:55 | ಅನಿತಾ ಡಾ. ಅಂಜಲಿಗೆ ಅವರ ಸಲಹೆಗಾಗಿ ಧನ್ಯವಾದ ಹೇಳುತ್ತಾಳೆ ಮತ್ತು ತಾನು ಎಲ್ಲವನ್ನು ನೆನಪಿಟ್ಟುಕೊಳ್ಳುವುದಾಗಿ ಹೇಳುತ್ತಾಳೆ. |
04:02 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ. |
04:05 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. |
04:09 | ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. |
04:12 | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
04:18 | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: * 'ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
04:25 | * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
04:29 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:
contact@spoken-tutorial.org |
04:39 | "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು, “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ. |
04:44 | ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
04:53 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ: |
05:09 | ಈ ಸ್ಕ್ರಿಪ್ಟ್, ಅವಿನಾಶ್ ಕುಮಾರ್ ಮತ್ತು ಚಿತ್ರಗಳು ಸೌರಭ್ ಗಾಡ್ಗಿಲ್ ಅವರ ಕೊಡುಗೆ. |
05:16 | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕಿ ಗ್ಲೋರಿಯಾ. |
05:19 | ಧನ್ಯವಾದಗಳು. |