Digital-Divide/C2/Model-Village-Hiware-Bazar/Kannada

From Script | Spoken-Tutorial
Jump to: navigation, search
Time Narration
00:01 Model Village : Hiware Bazar ಎಂಬ 'ಸ್ಪೋಕನ್ ಟ್ಯುಟೋರಿಯಲ್'ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ, ನಾವು -
00:09 1. ‘ಹಿವರೆ ಬಝಾರ್’ ನ ಜನರು ಎದುರಿಸಿದ ಸಮಸ್ಯೆಗಳು
00:13 2. ‘ಹಿವರೆ ಬಝಾರ್’ ನ ಈಗಿನ ಪರಿಸ್ಥಿತಿ ಮತ್ತು
00:16 3. ಈ ಬದಲಾವಣೆಗಳನ್ನು ತರಲು ಸಹಾಯಮಾಡಿದ ಆಚರಣೆಗಳು ಇತ್ಯಾದಿಗಳ ಬಗ್ಗೆ ಕಲಿಯುವೆವು.
00:20 ‘ಹಿವರೆ ಬಝಾರ್’ ನ ಜನರು ಎದುರಿಸಿದ ಸಮಸ್ಯೆಗಳು:
00:24 * ‘ಹಿವರೆ ಬಝಾರ್’ ನ ಜನರು ಕೃಷಿಗಾಗಿ ಮಳೆಯನ್ನುಅವಲಂಬಿಸಿದ್ದರು.
00:29 * ಅತಿಯಾದ ಮಣ್ಣಿನ ಸವಕಳಿ ಭೂಮಿಯ ಗುಣಮಟ್ಟವನ್ನು ಕಡಿಮೆ ಮಾಡಿತ್ತು.
00:35 * ಕುಡಿಯುವ ನೀರು ಸಿಗುವುದು ದುರ್ಲಭವಾಗಿತ್ತು.
00:40 * ಸಾಕಷ್ಟು ಮೇವು ಇರಲಿಲ್ಲ.
00:44 * ಇಂಧನ ಕೂಡ ಲಭ್ಯವಿರಲಿಲ್ಲ.
00:49 ಇವುಗಳು ಬಹಳಷ್ಟು ಸಾಮಾಜಿಕ ಸಮಸ್ಯೆಗಳಿಗೆ ಎಡೆಮಾಡಿದವು.
00:53 * ನಿರುದ್ಯೋಗ-
00:55 ಜನರಿಗೆ ನೌಕರಿ ಸಿಗುವುದು ಕಷ್ಟವಾಗಿತ್ತು.
00:58 * ವಲಸೆಹೋಗುವುದು-
01:00 ಜನರು ಹಳ್ಳಿಯಿಂದ ವಲಸೆ ಹೋಗಲು ಆರಂಭಿಸಿದರು.
01:03 * ಅಲ್ಲದೇ, ಅಪರಾಧಗಳ ಸಂಖ್ಯೆಯೂ ಹೆಚ್ಚಾಯಿತು.
01:06 ‘ಹಿವರೆ ಬಝಾರ್’ ನಲ್ಲಿ ಈಗಿನ ಪರಿಸ್ಥಿತಿ:
01:09 * ತಲಾವಾರು ಆದಾಯವು 1995 ರಲ್ಲಿ Rs 830 ಇದ್ದು 2012 ರಲ್ಲಿ ಅದು Rs 30,000 ಕ್ಕೆ ಏರಿದೆ.
01:19 * ಈ ಹಳ್ಳಿಯು ಸುಮಾರು 60 ಲಕ್ಷಾಧಿಪತಿಗಳನ್ನು ಹೊಂದಿದೆ.
01:23 * ಬಡ ಕುಟುಂಬಗಳ ಸಂಖ್ಯೆಯು 1995 ರಲ್ಲಿ 168 ಇದ್ದು 2012 ರಲ್ಲಿ ಅದು ಕೇವಲ 3 (ಮೂರು) ಕ್ಕೆ ಇಳಿದಿದೆ.
01:34 * ಇದೇ ಅವಧಿಯಲ್ಲಿ, ಪ್ರತಿದಿನದ ಹಾಲಿನ ಉತ್ಪಾದನೆಯು 150 ಲೀಟರ್ ಗಳಿಂದ 4000 ಲೀಟರ್ ಗಳಿಗೆ ಏರಿದೆ.
01:43 * ಸಾಕ್ಷರತಾ ಪ್ರಮಾಣವು 30% ರಿಂದ 95% ಗೆ ಬೆಳೆದಿದೆ.
01:51 * ಅಪರಾಧಗಳ ಪ್ರಮಾಣವು ತೀವ್ರವಾಗಿ ಕಡಿಮೆಯಾಗಿದೆ
01:54 * ಮತ್ತು ಉದ್ಯೋಗಾವಕಾಶಗಳು ಹೆಚ್ಚಾಗಿವೆ.
01:57 ಪರಿಸ್ಥಿತಿಯನ್ನು ಸುಧಾರಿಸಲು ಸಹಾಯಮಾಡಿದ ಆಚರಣೆಗಳು:
02:00 ಐದು ಆಯಾಮಗಳ ವಿಧಾನ ಅಥವಾ 'ಪಂಚಸೂತ್ರಿ':
02:05 1. ಉಚಿತ ಸ್ವಯಂಪ್ರೇರಿತ ದುಡಿಮೆ ಅಥವಾ 'ಶ್ರಮದಾನ'
02:09 2. ಮೇಯಿಸುವಿಕೆಯ ಮೇಲೆ ನಿಷೇಧ ಅಥವಾ 'ಚರಾಯಿ ಬಂದಿ'
02:14 3. ಮರಗಳನ್ನು ಕಡಿಯುವುದರ ಮೇಲೆ ನಿಷೇಧ ಅಥವಾ 'ಕುರ್ಹಡ ಬಂದಿ'
02:19 4. ಮದ್ಯಪಾನ ನಿಷೇಧ ಅಥವಾ 'ನಶಾಬಂದಿ' ಮತ್ತು
02:25 5. ಕುಟುಂಬ ಯೋಜನೆ ಅಥವಾ 'ಕುಟುಂಬ ನಿಯೋಜನ'
02:30 'ಶ್ರಮದಾನ'-
02:32 ಸಮುದಾಯದ ಕಲ್ಯಾಣಕ್ಕಾಗಿ ಜನರು ಒಟ್ಟಿಗೆ ಕೆಲಸ ಮಾಡಲು ಪ್ರಾರಂಭಿಸಿದರು.
02:38 ಹಳ್ಳಿಗರು ಕೆಲಸದ ಸಂಸ್ಕೃತಿಯನ್ನು ಬೆಳೆಸಿಕೊಂಡರು.
02:42 ನೀರು ಹರಿಯುವುದರ ವೇಗವನ್ನು ಕಡಿಮೆಗೊಳಿಸಲು ಗುಡ್ಡಗಳ ಸಮೀಪದಲ್ಲಿ ಒಡ್ಡು ಕಟ್ಟಲು ಅವರು ಮುಂದೆಬಂದರು.
02:50 ಒಡ್ಡುಗಳು ಅಂತರ್ಜಲದ ಮಟ್ಟವನ್ನು ಹೆಚ್ಚಿಸಲು ಮತ್ತು ಮಣ್ಣಿನ ಸವಕಳಿಯನ್ನು ಕಡಿಮೆಮಾಡಲು ಸಹಾಯಮಾಡಿದವು.
02:58 'ಚರಾಯಿ ಬಂದಿ'-
03:00 ದನಕರುಗಳನ್ನು ಅತಿಯಾಗಿ ಮೇಯಿಸುವುದನ್ನು ನಿಷೇಧಿಸಲಾಯಿತು.
03:05 ಅತಿಯಾಗಿ ಮೇಯಿಸುವುದು ಮರುಭೂಮೀಕರಣಕ್ಕೆ ಹಾಗೂ ಮಣ್ಣಿನ ಸವಕಳಿಗೆ ಎಡೆಮಾಡಿಕೊಡುತ್ತದೆ.
03:12 ಮೇಯಿಸುವುದರ ಮೇಲಿನ ನಿಷೇಧವು
03:14 ಹುಲ್ಲಿನ ಉತ್ಪಾದನೆಯನ್ನು 1994-95 ರಲ್ಲಿ 200 ಟನ್ ಗಳಿಂದ 2001-2002 ರಲ್ಲಿ ಸುಮಾರು 5000-6000 ಟನ್ ಗಳಿಗೆ ಹೆಚ್ಚಿಸಿತು.
03:30 'ಕುರ್ಹಡ ಬಂದಿ'-
03:32 ಮರಗಳನ್ನು ಕಡಿಯುವುದನ್ನು ನಿಷೇಧಿಸಲಾಯಿತು.
03:35 ಮರಗಳು ಮಣ್ಣಿನ ಸವಕಳಿಯನ್ನು ತಡೆಗಟ್ಟಲು ಸಹಾಯಮಾಡುತ್ತವೆ.
03:40 ಮಣ್ಣಿನ ಸವಕಳಿಯು ನೆಲದ ಗುಣಮಟ್ಟವನ್ನು ಮತ್ತು ಇದರಿಂದಾಗಿ ಕೃಷಿ ಉತ್ಪನ್ನವನ್ನು ಕಡಿಮೆಮಾಡುತ್ತದೆ.
03:47 ಮರಗಳು ಮಳೆನೀರನ್ನು ತಡೆಹಿಡಿದು ಅಂತರ್ಜಲದ ಮಟ್ಟವನ್ನು ಹೆಚ್ಚಿಸಲು ಸಹಾಯಮಾಡುತ್ತವೆ.
03:54 ಮರದ ತ್ಯಾಜ್ಯಗಳು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವಲ್ಲಿ ಉಪಯುಕ್ತವಾಗಿವೆ.
04:00 'ನಶಾಬಂದಿ'
04:02 22 ಸಾರಾಯಿ ಅಂಗಡಿಗಳನ್ನು ಮುಚ್ಚಲಾಯಿತು.
04:05 ಮದ್ಯ ಮತ್ತು ತಂಬಾಕು ಸೇವನೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಯಿತು.
04:10 'ಗ್ರಾಮ ಸಭಾ', ಸಾರಾಯಿ ಅಂಗಡಿಗಳನ್ನು ಹೊಂದಿದವರಿಗೆ ಸಾಲವನ್ನು ಕೊಡಲು ಬ್ಯಾಂಕುಗಳ ಜೊತೆಗೆ ಒಪ್ಪಂದ ಮಾಡಿಕೊಂಡಿತು.
04:17 ಅಪರಾಧಗಳ ಪ್ರಮಾಣವು ಕಡಿಮೆಯಾಯಿತು.
04:20 ಜನರು ಸಮುದಾಯಕ್ಕೆ ಸಹಾಯವಾಗುವ ಹೆಚ್ಚು ಉಪಯುಕ್ತವಾದ ಕೆಲಸಗಳಲ್ಲಿ ತೊಡಗಿಕೊಂಡರು.
04:26 'ಕುಟುಂಬ ನಿಯೋಜನ'
04:28 ಒಂದು ಕುಟುಂಬಕ್ಕೆ ಒಂದೇ ಮಗು ಎಂಬ ನಿಯಮವನ್ನು ಕಟ್ಟುನಿಟ್ಟಾಗಿ ವಿಧಿಸಲಾಯಿತು.
04:33 ಜನನ ಪ್ರಮಾಣವು ಪ್ರತಿ ಸಾವಿರದಲ್ಲಿ 11 ಕ್ಕೆ ಇಳಿಸಲಾಗಿದೆ.
04:39 ಇದು ಮಹಿಳೆಯರಲ್ಲಿ ಗರ್ಭಾವಸ್ಥೆಯಲ್ಲಿ ಆಗುವ ಆರೋಗ್ಯಕ್ಕೆ ಸಂಬಂಧಿಸಿದ ಅಪಾಯಗಳನ್ನು ತಡೆಯುತ್ತದೆ.
04:44 ಕುಟುಂಬ ಯೋಜನೆಯು ಶಿಶು ಮರಣದ ಪ್ರಮಾಣವನ್ನು ಸಹ ಕಡಿಮೆಮಾಡುತ್ತದೆ.
04:49 ಇದು ಜನರಿಗೆ ಅಧಿಕಾರ ನೀಡಲು ಮತ್ತು ಶಿಕ್ಷಣವನ್ನು ಹೆಚ್ಚಿಸಲು ಸಹಾಯಾಡುತ್ತದೆ.
04:55 ಕುಟುಂಬ ಯೋಜನೆಯು ಒಂದು ಸಮರ್ಥ ಸಮುದಾಯವನ್ನು ರಚಿಸಲು ಕೀಲಿಯಾಗಿದೆ.
05:01 ಈ ಟ್ಯುಟೋರಿಯಲ್ ನಿಂದ, ನಾವು:
05:04 ಹಳ್ಳಿಯಲ್ಲಿ ಸಾಮೂಹಿಕ ಪ್ರಯತ್ನವು ಗಣನೀಯ ಮಾರ್ಪಾಟುಗಳನ್ನು ತರಬಹುದು
05:09 'ಪಂಚಸೂತ್ರಿ' ತತ್ವಗಳು ಅತ್ಯಂತ ಪರಿಣಾಮಕಾರಿ ಎಂದು ತೋರಿಸಿಕೊಟ್ಟಿವೆ
05:15 ಈ ಆಚರಣೆಗಳನ್ನು ಅನುಸರಿಸುವುದರಿಂದ ಇನ್ನೂ ಹೆಚ್ಚು ಇಂತಹ ಮಾದರಿ ಹಳ್ಳಿಗಳ ರಚನೆಗೆ ಹಾದಿಮಾಡಬಹುದು ಎಂದು ತಿಳಿದುಕೊಳ್ಳಬಹುದು.
05:21 ಇಲ್ಲಿಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ.
05:24 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.
05:28 ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
05:32 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
05:37 * 'ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ
05:44 * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
05:48 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:

contact@spoken-tutorial.org

05:55 "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು, “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.
06:01 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
06:09 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:

http://spoken-tutorial.org/NMEICT-Intro.

06:21 ಈ ಸ್ಕ್ರಿಪ್ಟ್, ಮಾಯಾಂಕ್ ಮಿಲಿಂದ್ ಅವರ ಕೊಡುಗೆಯಾಗಿದೆ ಮತ್ತು ಚಿತ್ರಗಳು ಸೌರಭ್ ಗಾಡ್ಗಿಲ್ ಅವರದು.
06:28 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕಿ ಗ್ಲೋರಿಯಾ.
06:31 ಧನ್ಯವಾದಗಳು.

Contributors and Content Editors

Sandhya.np14