Digital-Divide/C2/How-to-manage-the-train-ticket/Kannada
From Script | Spoken-Tutorial
Time | Narration |
00:01 | Managing train tickets bought at IRCTC ಎಂಬ 'ಸ್ಪೋಕನ್ ಟ್ಯುಟೋರಿಯಲ್'ಗೆ ನಿಮಗೆ ಸ್ವಾಗತ. |
00:09 | ಈ ಟ್ಯುಟೋರಿಯಲ್ ನಲ್ಲಿ ನಾವು, “irctc” ಯ ಮೊದಲಿನ ವ್ಯವಹಾರಗಳನ್ನು ನಿರ್ವಹಿಸುವುದರ ಬಗ್ಗೆ ಕಲಿಯುವೆವು. |
00:16 | ನಾವು, * ಟಿಕೆಟ್ ಗಳ ಸ್ಟ್ಯಾಟಸ್ (ಸ್ಥಿತಿಗತಿ) ಅನ್ನು ಹೇಗೆ ನೋಡುವುದು |
00:22 | * ಟಿಕೆಟ್ ಅನ್ನು ಹೇಗೆ ಪ್ರಿಂಟ್ ಮಾಡುವುದು |
00:25 | * ಟಿಕೆಟ್ ಅನ್ನು ಹೇಗೆ ರದ್ದುಮಾಡುವುದು |
00:27 | * ರದ್ದುಮಾಡಿದ ಇತಿಹಾಸವನ್ನು ಹೇಗೆ ನೋಡುವುದು ಮತ್ತು * ಮರುಪಾವತಿಯ ಅಟೋಮೇಟೆದ್ ಇಮೇಲ್
ಇವುಗಳ ಬಗ್ಗೆ ಕಲಿಯುವೆವು. |
00:35 | ರೈಲು ಟಿಕೆಟ್ ಬುಕಿಂಗ್ ಗಾಗಿ ಖಾಸಗಿ ವೆಬ್ಸೈಟ್ ಗಳು ಸಹ ಇರುತ್ತವೆ. |
00:39 | ಕೆಲವು ಜನಪ್ರಿಯ ವೆಬ್ಸೈಟ್ ಗಳನ್ನು ನಾವು ನೋಡುವೆವು |
00:43 | ಮತ್ತು ಅವುಗಳನ್ನು “IRCTC” ಯೊಂದಿಗೆ ಹೋಲಿಸುವೆವು. |
00:48 | ಈಗ ನಾವು “IRCTC” ಯಲ್ಲಿಯ ಮೊದಲಿನ ಬುಕಿಂಗ್ ಗಳನ್ನು ನೋಡುವೆವು. ನಾನು “irctc” ವೆಬ್ಸೈಟ್ ನಲ್ಲಿ ಲಾಗ್-ಇನ್ ಮಾಡುತ್ತೇನೆ. |
01:13 | ಸ್ಕ್ರೋಲ್-ಡೌನ್ ಮಾಡುತ್ತೇನೆ. |
01:15 | ನಾನು Transactions ಲಿಂಕ್ ಅನ್ನು ಕ್ಲಿಕ್ ಮಾಡುತ್ತೇನೆ ಮತ್ತು ನೀವು “Booked History” ಯನ್ನು ನೋಡುವಿರಿ. |
01:21 | ನಾವು “Booked History” ಎಂಬಲ್ಲಿಗೆ ಹೋಗೋಣ. ಇದು “Enter the password” ಎಂದು ಹೇಳುತ್ತಿದೆ. |
01:27 | ನಾನು ಪಾಸ್ವರ್ಡ್ ಅನ್ನು ಟೈಪ್ ಮಾಡುತ್ತೇನೆ. “Go” ಅನ್ನು ಒತ್ತಿ. |
01:38 | ಇದು, 'PNR Number' ಎಂದರೆ ಏನಿದೆ ಎಂದು ಹೇಳುತ್ತದೆ. |
01:44 | ಟಿಕೆಟ್ ಗಳ ಪಟ್ಟಿಯನ್ನು ಇಲ್ಲಿ ಕೊಡಲಾಗಿದೆ. |
01:46 | ನಾನು ಇದನ್ನು ಕ್ಲಿಕ್ ಮಾಡುತ್ತೇನೆ ಮತ್ತು “PNR Status” ಅನ್ನು ಪಡೆಯುತ್ತೇನೆ. “Wait Listed, 162” ಎಂದು ಇದು ಹೇಳುತ್ತಿದೆ. |
01:57 | ಇದನ್ನು ಕ್ಲೋಸ್ ಮಾಡುತ್ತೇನೆ. ನಾನು ಇದರ ಪ್ರಿಂಟ್-ಔಟ್ ಅನ್ನು (ಮುದ್ರಿತ ಪ್ರತಿ) ಪಡೆಯಬಹುದು. ಇದನ್ನು ಒತ್ತಿ. |
02:07 | ಇದರಲ್ಲಿ, ಈಗ ನಾನು 'Print' ಎಂದು ಹೇಳಿದರೆ ಇದು ಹೊರಗೆ ಹೋಗಿ ಇದನ್ನು ಪ್ರಿಂಟ್ ಮಾಡುವುದು. |
02:12 | ನಾನು ಸ್ಲೈಡ್ ಗಳಿಗೆ ಹಿಂದಿರುಗಿದ್ದೇನೆ. ನಾವು ಮುಂದಿನ ಸ್ಲೈಡ್ ಗೆ ಹೋಗೋಣ. |
02:17 | ಟಿಕೆಟ್ ಅನ್ನು ರದ್ದುಗೊಳಿಸುವುದು ಹೇಗೆ ಎಂಬುದನ್ನು ಈಗ ನಾವು ನೋಡುವೆವು. |
02:21 | ಒಂದುವೇಳೆ, ನನಗೆ ಈ ಟಿಕೆಟ್ ಅನ್ನು ರದ್ದುಗೊಳಿಸಬೇಕಾಗಿದ್ದರೆ ನಾನು ಏನು ಮಾಡುತ್ತೇನೆ? |
02:24 | ಆದ್ದರಿಂದ, ನಾವು ಈ ಟಿಕೆಟ್ ಅನ್ನು ರದ್ದುಗೊಳಿಸೋಣ. |
02:41 | ಸರಿ.. ನಾನು ಇದನ್ನು ರದ್ದುಗೊಳಿಸಬೇಕು. ಇದನ್ನು ಆಯ್ಕೆಮಾಡುತ್ತೇನೆ. |
02:44 | ನನಗೆ ಈ ಟಿಕೆಟ್ ಬೇಕಾಗಿಲ್ಲ. |
02:55 | ಇದು “Select for Cancel” ಎಂದು ಹೇಳುತ್ತದೆ. ನೀವು ಏಕೆ ಸೆಲೆಕ್ಟ್ ಮಾಡಬೇಕೆಂದರೆ, ಕೆಲವು ಸಲ ನೀವು ಟಿಕೆಟ್ ಅನ್ನು ಒಬ್ಬರಿಗಿಂತ ಹೆಚ್ಚು ಜನರ ಪ್ರಯಾಣಕ್ಕಾಗಿ ಬುಕ್ ಮಾಡಬಹುದು. |
03:07 | ಭಾಗಶಃ ರದ್ದುಗೊಳಿಸಲು ಸಹ ಸಾಧ್ಯವಿದೆ. ಒಂದುವೇಳೆ, ಇಬ್ಬರು ಪ್ರಯಾಣ ಮಾಡುತ್ತಾರೆ ಮತ್ತು ಒಬ್ಬರ ಟಿಕೆಟ್ ಅನ್ನು ಮಾತ್ರ ನಿಮಗೆ ರದ್ದುಗೊಳಿಸಬೇಕಾಗಿದೆ. |
03:15 | ನೀವು ಆ ವ್ಯಕ್ತಿಯ ಬಾಕ್ಸ್ ಅನ್ನು ಮಾತ್ರ ಚೆಕ್ ಮಾಡಿ. ಆದ್ದರಿಂದ, ಇದನ್ನು ನಾವು ಕ್ಲಿಕ್ ಮಾಡೋಣ ಮತ್ತು ನಂತರ ಟಿಕೆಟ್ ಅನ್ನು ರದ್ದುಮಾಡೋಣ. |
03:22 | ಈಗ, ಇದು “Are you sure you want to cancel the e-ticket”? ಎಂದು ಕೇಳುತ್ತಿದೆ. ನಾನು “OK” ಎಂದು ಹೇಳುತ್ತೇನೆ. |
03:33 | ಸರಿ.. ಇದು “Cancellation Status Details” ಮತ್ತು “Cash Deducted 20 rupees” ಎಂದು ಹೇಳುತ್ತದೆ. |
03:39 | “Cash paid Rs. 89”. ವಾಸ್ತವವಾಗಿ ನಾನು 10 ರೂಪಾಯಿಗಳನ್ನು ಆನ್-ಲೈನ್ ಸೌಲಭ್ಯಕ್ಕಾಗಿ ಕೊಟ್ಟಿದ್ದೇನೆ. |
03:45 | 20 ರೂಪಾಯಿ ನಗದನ್ನು ಕಡಿತಗೊಳಿಸಲಾಗಿದೆ. |
03:47 | 69 ರೂಪಾಯಿಗಳನ್ನು ನಾನು ಮರಳಿ ಪಡೆದಿದ್ದೇನೆ. ಮೂಲತಃ ಹಣವನ್ನು ಪಾವತಿಮಾಡಿದ ಖಾತೆಗೆ ಇದನ್ನು ಮರಳಿ ಪಾವತಿ ಮಾಡಲಾಗುವುದು ಎಂಬುದನ್ನು ಗಮನಿಸಿ. |
03:57 | ನಿಮಗೆ ಬೇಕಾಗಿದ್ದರೆ, ಇದರ ಪ್ರಿಂಟ್-ಔಟ್ ಅನ್ನು ತೆಗೆದುಕೊಳ್ಳಬಹುದು. |
04:01 | ನಾನು 'History' ಎಂಬಲ್ಲಿಗೆ ಮರಳಿ ಹೋಗಬಹುದು. ಈಗ ಸ್ಲೈಡ್ ಗಳಿಗೆ ಹಿಂದಿರುಗಿದ್ದೇನೆ. |
04:07 | ನಾವು ಮುಂದಿನ ಸ್ಲೈಡ್ ಗೆ ಹೋಗೋಣ. |
04:10 | ಈಗ ನಾನು ರದ್ದತಿಯ ‘History’ ಯನ್ನು ನೋಡುವ ಬಗೆಯನ್ನು ವಿವರಿಸುವೆನು. |
04:17 | ಸರಿ… ಈಗ ನಾನು 'Canceled History' ಯನ್ನು ನೋಡಲು ಸಾಧ್ಯವಿದೆ. |
04:26 | ಆದ್ದರಿಂದ, ನಾನು ನನ್ನ ಪಾಸ್ವರ್ಡ್ ಅನ್ನು ಕೊಡುತ್ತೇನೆ. |
04:31 | 'Go' ಅನ್ನು ಒತ್ತಿ. |
04:35 | ಇದು, “The history for the canceled PNR will be available following the day of cancellation” ಎಂದು ಹೇಳುತ್ತಿದೆ. ಸರಿ.. |
04:47 | ಆದರೆ ಇದು ತಕ್ಷಣ ಅದನ್ನು ತೋರಿಸುವಂತೆ ಕಾಣುತ್ತಿದೆ. ಹೀಗಾಗಿ, ರದ್ದುಗೊಳಿಸಲಾದ ಎಲ್ಲ ಟಿಕೆಟ್ ಗಳನ್ನು ಇಲ್ಲಿ ಪಟ್ಟಿ ಮಾಡಲಾಗುವುದು. |
04:54 | ನಾನು ಸ್ಲೈಡ್ ಗಳಿಗೆ ಹಿಂದಿರುಗಿದ್ದೇನೆ. |
04:56 | ನಾವು ಮುಂದಿನ ಸ್ಲೈಡ್ ಗೆ ಹೋಗೋಣ. |
04:59 | ಈಗ ನಾನು ಮರುಪಾವತಿಯ (refund) ಒಂದು ‘Automated Email' ಅನ್ನು ತೋರಿಸುವೆನು. |
05:07 | ನಾನು ಈ ಇಮೇಲ್ ಅನ್ನು ಈಗಾಗಲೇ ಓಪನ್ ಮಾಡಿದ್ದೇನೆ. |
05:09 | ಇಲ್ಲಿ ಕೊಟ್ಟಿರುವ “PNR” ಗಾಗಿ Rs.69 ನ್ನು ಹಿಂದಿರುಗಿಸಲಾಗುವುದು ಎಂದು ಇದು ಹೇಳುತ್ತದೆ. |
05:21 | ನಾನು ಸ್ಲೈಡ್ ಗಳಿಗೆ ಹಿಂದಿರುಗಿದ್ದೇನೆ. ನಾವು ಮುಂದಿನ ಸ್ಲೈಡ್ ಗೆ ಹೋಗೋಣ. |
05:26 | ರೈಲು ಬುಕಿಂಗ್ ಗಾಗಿ ಕೆಲವು ಉಪಯುಕ್ತ ಖಾಸಗಿ ವೆಬ್ಸೈಟ್ ಗಳು ಇವೆ. |
05:30 | ನಾವು ಈಗ ಅವುಗಳನ್ನು ನೋಡುವೆವು. |
05:38 | ನಾನು ಈಗಾಗಲೇ “Clear trip” ಅನ್ನು ಓಪನ್ ಮಾಡಿದ್ದೇನೆ. |
05:41 | ನಾನು ನಿಮಗೆ “make my trip” ಎಂಬ ಪೇಜನ್ನು ತೋರಿಸುತ್ತೇನೆ. |
05:48 | ನಾವು “Yatra.com” ನ ವೆಬ್ ಪೇಜನ್ನು ನೋಡೋಣ. |
05:52 | ಸ್ಲೈಡ್ ಗಳಿಗೆ ಹಿಂದಿರುಗೋಣ. ನಾನು ಮುಂದಿನ ಸ್ಲೈಡ್ ಗೆ ಹೋಗುತ್ತೇನೆ. |
05:58 | ಈಗ ನಾವು “IRCTC” ಯನ್ನು ಖಾಸಗಿ ವೆಬ್ಸೈಟ್ ಗಳೊಂದಿಗೆ ಹೋಲಿಸುವೆವು. |
06:03 | “irctc” ಯಿಂದ ಆಗುವ ಅನುಕೂಲತೆಗಳೇನು? |
06:06 | * ಎಲ್ಲ ರೈಲುಗಳನ್ನು ಖಾಸಗಿ ವೆಬ್ಸೈಟ್ ಗಳಲ್ಲಿ ಪಟ್ಟಿಮಾಡಿರುವುದಿಲ್ಲ. |
06:10 | * ಖಾಸಗಿ ವೆಬ್ಸೈಟ್ ಗಳು Rs. 20 ಗಳಷ್ಟು ಹೆಚ್ಚು ದುಬಾರಿಯಾಗಿರುತ್ತವೆ. |
06:16 | * ಖಾಸಗಿ ವೆಬ್ಸೈಟ್ ಗಳು ಬೆಳಿಗ್ಗೆ ತಡವಾಗಿ ತೆರೆಯುತ್ತವೆ (open). |
06:19 | * ಖಾಸಗಿ ವೆಬ್ಸೈಟ್ ಗಳ ಮೇಲೆ ಕಡಿಮೆ ಕಾಲಾವಧಿ ಮಾತ್ರ ಲಭ್ಯವಿರುತ್ತದೆ. ಉದಾಹರಣೆಗೆ: “irctc”, ಬೆಳಿಗ್ಗೆ 8 ಗಂಟೆಗೆ ತೆರೆದರೆ ಖಾಸಗಿ ವೆಬ್ಸೈಟ್ ಗಳು 10 ಗಂಟೆಗೆ ತೆರೆಯುತ್ತವೆ. |
06:29 | ಖಾಸಗಿ ವೆಬ್ಸೈಟ್ ಗಳಿಂದ ಆಗುವ ಅನುಕೂಲತೆಗಳನ್ನು ಈಗ ನಾವು ನೋಡುವೆವು: |
06:36 | * ಕೆಲವುಸಲ ಖಾಸಗಿ ವೆಬ್ಸೈಟ್ ಗಳು “irctc” ಗಿಂತ ಶೀಘ್ರವಾಗಿ ಕೆಲಸ ಮಾಡುತ್ತವೆ. |
06:42 | * ವಿಮಾನಗಳ ಹಾಗೂ ಬಸ್ ಗಳ ಟಿಕೆಟ್ ಗಳನ್ನು ಕಾಯ್ದಿರಿಸಲು ಸಹ ಸಹಾಯಮಾಡುತ್ತವೆ. ಇದರಿಂದಾಗಿ |
06:47 | ಪ್ರಯಾಣದ ಎಲ್ಲ ಮಾಹಿತಿಯನ್ನು ಒಂದು ಸ್ಥಳದಲ್ಲಿ ಕಾಯ್ದಿರಿಸಬಹುದು. |
06:52 | * ಖಾಸಗಿ ವೆಬ್ಸೈಟ್ ಗಳು, ಹಿಂದಿನ ಸರ್ಚ್ ಗಳನ್ನು ಸಹ ನೆನಪಿಟ್ಟುಕೊಳ್ಳಬಹುದು. |
06:58 | ವೈಯಕ್ತಿಕವಾಗಿ ನಾನು, “irctc” ಮತ್ತು ಖಾಸಗಿ ವೆಬ್ಸೈಟ್ ಎರಡನ್ನೂ ಉಪಯೋಗಿಸುತ್ತೇನೆ. |
07:05 | ನನಗೆ 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಬಗ್ಗೆ ಸ್ವಲ್ಪ ಹೇಳಬೇಕಾಗಿದೆ. |
07:09 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.
http://spoken-tutorial.org/what_is_ spoken_tutorial. |
07:17 | ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. |
07:20 | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
07:26 | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: * 'ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
07:31 | * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
07:35 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:
contact@spoken-tutorial.org |
07:40 | "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು, “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ. |
07:43 | ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
07:50 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ: |
07:59 | ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕಿ ಗ್ಲೋರಿಯಾ.
ಧನ್ಯವಾದಗಳು. |