C-and-Cpp/C4/File-Handling-In-C/Kannada
From Script | Spoken-Tutorial
Time | Narration |
00:01 | c ಮತ್ತು c++ ನಲ್ಲಿ ಫೈಲ್ಸ್ ಎಂಬ ಟ್ಯುಟೋರಿಯಲ್ ಗೆ ಸ್ವಾಗತ. |
00:05 | ಈ ಟ್ಯುಟೋರಿಯಲ್ ನಲ್ಲಿ ನಾವು ತಿಳಿಯುವ ಅಂಶಗಳು: |
00:08 | ಫೈಲ್ ಅನ್ನು ತೆರೆಯುವ ಬಗೆ, |
00:10 | ಫೈಲ್ ನಿಂದ ಡಾಟಾವನ್ನು ರೀಡ್ ಮಾಡುವ ಬಗೆ, |
00:12 | ಫೈಲ್ ಗೆ ಡಾಟಾವನ್ನು ರೈಟ್ ಮಾಡುವ ಬಗೆ ಹಾಗೂ |
00:15 | ಕೆಲವು ಉದಾಹರಣೆಗಳು. |
00:17 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡುವಾಗ, ನಾನು ಉಬುಂಟು ಆಪರೇಟಿಂಗ್ ಸಿಸ್ಟಮ್ ನ 11.10 ನೇ ಆವೃತ್ತಿ ಮತ್ತು gcc ಕಂಪೈಲರ್ ನ 4.6.1 ನೇ ಆವೃತ್ತಿಯನ್ನು ಅನ್ನು ಉಪಯೋಗಿಸಿದ್ದೇನೆ. |
00:28 | ಫೈಲ್ಸ್ ಅನ್ನು ಪೀಠಿಕೆಯೊಂದಿಗೆ ಪ್ರಾರಂಭಿಸೋಣ. |
00:31 | ಫೈಲ್ ಎಂಬುದು ಮಾಹಿತಿಯ ಸಂಗ್ರಹವಾಗಿದೆ. |
00:34 | ಇದು ಡಾಟಾಬೇಸ್, ಪ್ರೊಗ್ರಾಮ್ ಅಥವಾ ಪತ್ರವಾಗಿರಬಹುದು. |
00:39 | ನಾವು c ಯಿಂದ ಫೈಲ್ ಅನ್ನು ರಚಿಸಿ ಅದನ್ನು ಉಪಯೋಗಿಸಬಹುದು. |
00:44 | ಈಗ c ಯಲ್ಲಿ ಫೈಲ್ ಹ್ಯಾಂಡ್ಲಿಂಗ್ ಗೆ ಉದಾಹರಣೆಯನ್ನು ನೋಡೋಣ. |
00:48 | ನಾನೀಗಾಗಲೇ ಪ್ರೊಗ್ರಾಮ್ ಅನ್ನು ಬರೆದಿದ್ದೇನೆ. |
00:50 | ಅದನ್ನು ನೋಡೋಣ.ನಮ್ಮ ಫೈಲ್ ನ ಹೆಸರು ಫೈಲ್ ಡಾಟ್ ಸಿ (file.c) ಎಂಬುದನ್ನು ಗಮನದಲ್ಲಿಡಿ. |
00:55 | ಈ ಪ್ರೊಗ್ರಾಮ್ ನಲ್ಲಿ ನಾವು ಫೈಲ್ ಅನ್ನು ರಚಿಸಿ ಅದಕ್ಕೆ ಡಾಟಾ ಅನ್ನು ರೈಟ್ ಮಾಡುತ್ತೇವೆ. |
01:01 | ಈಗ ಕೋಡ್ ಅನ್ನು ವಿವರಿಸುತ್ತೇನೆ. |
01:03 | ಇದು ನಮ್ಮ ಹೆಡರ್ ಫೈಲ್. |
01:05 | ಇದು ನಮ್ಮ ಮೈನ್ ಫಂಕ್ಷನ್. |
01:07 | ಫೈಲ್ ಅನ್ನು ಡಿಫೈನ್ ಮಾಡಲು ಫೈಲ್(FILE) ಟೈಪ್ ನ ವೇರಿಯೇಬಲ್ ಅನ್ನು ಉಪಯೋಗಿಸುತ್ತೇವೆ. |
01:12 | ಫೈಲ್ ಎಂಬ ವೇರಿಯೇಬಲ್, ಎಸ್ ಟಿ ಡಿ ಐ ಒ ಡಾಟ್ ಹೆಚ್ ಎಂಬ ಹೆಡರ್ ನ ಒಳಗೆ ಡಿಫೈನ್ ಆಗಿದೆ. |
01:19 | *fp (ಆಸ್ಟರಿಕ್ಸ್ ಎಫ್ ಪಿ) ಎಂಬುದು ಫೈಲ್ ವೇರಿಯೇಬಲ್ ಗೆ ಪಾಯಿಂಟರ್ ಆಗಿದೆ. |
01:22 | ಇದು: ಫೈಲ್ ನ ಹೆಸರು, ಸ್ಥಿತಿ, ಪ್ರಸ್ತುತ ಮಾಹಿತಿ ಮುಂತಾದ ಎಲ್ಲ ಮಾಹಿತಿಗಳನ್ನು ಸಂಗ್ರಹಿಸಿ ಇಡುತ್ತದೆ. |
01:31 | ನಮ್ಮ ಸ್ಲೈಡ್ ಗೆ ಹಿಂತಿರುಗೋಣ. |
01:33 | ಈಗ ನಾವು ಫೈಲ್ ಅನ್ನು ತೆರೆಯಲು ಸಿಂಟ್ಯಾಕ್ಸ್ ಅನ್ನು ನೋಡೋಣ. |
01:37 | ಇಲ್ಲಿ, ಎಫ್ ಒಪನ್(fopen) ಎಂಬ ಫಂಕ್ಷನ್, ಸ್ಟ್ರೀಮ್ ಅನ್ನು ತೆರೆಯುತ್ತದೆ. |
01:42 | ನಂತರ ಅದು ಫೈಲ್ ಅನ್ನು ಸ್ಟ್ರೀಮ್ ನೊಂದಿಗೆ ಜೋಡಿಸುತ್ತದೆ. |
01:44 | ಫೈಲ್ ನೇಮ್(filename) ಎಂಬುದು ನಾವು ರಚಿಸಲಿರುವ ಅಥವಾ ತೆರೆಯುವ ಫೈಲ್ ನ ಹೆಸರು. |
01:49 | ನಾವು ಫೈಲ್ ನ ಹೆಸರಿನೊಂದಿಗೆಯೇ ಪಾಥ್ ಅನ್ನೂ ಸೂಚಿಸಬಹುದು, |
01:53 | ಮತ್ತು, ಎಕ್ಸ್ಟೆಂಶನ್ ಅನ್ನೂ ಸೂಚಿಸಬಹುದು. |
01:56 | ಇಲ್ಲಿ ಫೈಲ್ ನ ಮೋಡ್ ಅನ್ನು ಕೊಡಬಹುದು. |
01:59 | ಇಲ್ಲಿ ವಿವಿಧ ಮೋಡ್ ಗಳನ್ನು ನೋಡೋಣ. |
02:02 | w – ಎಂಬುದು ಓದಲು ಅಥವಾ ಬರೆಯಲು ಫೈಲ್ ಅನ್ನು ರಚಿಸುತ್ತದೆ. |
02:06 | r – ಎಂಬುದು ಓದಲು ಫೈಲ್ ಅನ್ನು ತೆರೆಯುತ್ತದೆ. |
02:09 | a – ಎಂಬುದು ಫೈಲ್ ನ ಕೊನೆಯಲ್ಲಿ ಬರೆಯುತ್ತದೆ. |
02:12 | ಈಗ ನಮ್ಮ ಪ್ರೊಗ್ರಾಮ್ ಗೆ ಹಿಂದಿರುಗಿ. |
02:15 | ಇಲ್ಲಿ, ನಾವು ಸ್ಯಾಂಪಲ್ ಡಾಟ್ ಟಿ ಎಕ್ಸ್ ಟಿ ಫೈಲ್ (sample.txt)ಅನ್ನು ರೈಟ್ ಮೋಡ್ ನಲ್ಲಿ ರಚಿಸೋಣ. |
02:20 | ಇಲ್ಲಿ ಪಾಥ್ ಅನ್ನು ಸೂಚಿಸಿರುವುದನ್ನು ನೋಡಬಹುದು. |
02:23 | ನಮ್ಮ ಫೈಲ್ ಡೆಸ್ಕ್ ಟಾಪ್ ಮೇಲೆ ರಚನೆಯಾಗುತ್ತದೆ. |
02:27 | ನಂತರ ನಾವು ಫೈಲ್ ಗೆ ಈ ಕೆಳಗಿನ ಸಾಲುಗಳನ್ನು ರೈಟ್ ಮಾಡುತ್ತೇವೆ. |
02:30 | ವೆಲ್ ಕಮ್ ಟು ದ ಸ್ಪೋಕನ್ ಟ್ಯುಟೋರಿಯಲ್( Welcome to the spoken-tutorial) ಮತ್ತು |
02:32 | ದಿಸ್ ಈಸ್ ಅ ಟೆಸ್ಟ್ ಎಕ್ಸಾಂಪಲ್(This is an test example) |
02:34 | ಎಫ್ ಪ್ರಿಂಟ್ ಎಫ್ (fprintf) ಎಂಬುದು ಔಟ್ ಪುಟ್ ಅನ್ನು, ಕೊಟ್ಟ ಔಟ್ ಪುಟ್ ಸ್ಟ್ರೀಮ್ ಗೆ ರೈಟ್ ಮಾಡುತ್ತದೆ, |
02:39 | ಎಫ್ ಕ್ಲೋಸ್ ( fclose) ಎಂಬುದು ಸ್ಟ್ರೀಮ್ ನೊಂದಿಗೆ ಸೇರಿದ ಫೈಲ್ ಅನ್ನು ಮುಚ್ಚುತ್ತದೆ, |
02:43 | ಮತ್ತು ಇದು ನಮ್ಮ ರಿಟರ್ನ್ ಸ್ಟೇಟ್ಮೆಂಟ್. |
02:46 | ಈಗ ಸೇವ್(save) ಅನ್ನು ಒತ್ತಿ. |
02:48 | ಈಗ ಪ್ರೊಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ. |
02:50 | ನಿಮ್ಮ ಕೀಬೋರ್ಡ ನಲ್ಲಿ Ctrl, Alt ಮತ್ತು T ಕೀ ಗಳನ್ನು ಒಮ್ಮೆಗೇ ಒತ್ತಿ, ಟರ್ಮಿನಲ್ ವಿಂಡೊ ಅನ್ನು ಓಪನ್ ಮಾಡಿ. |
02:59 | ಕಂಪೈಲ್ ಮಾಡಲು, gcc ಸ್ಪೇಸ್ ಫೈಲ್ ಡಾಟ್ ಸಿ(file.c) ಸ್ಪೇಸ್ ಹೈಫನ್ ಒ(-o) ಸ್ಪೇಸ್ ಫೈಲ್(file) ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ. |
03:07 | ಎಕ್ಸಿಕ್ಯೂಟ್ ಮಾಡಲು, ಡಾಟ್ ಸ್ಲ್ಯಾಶ್ ಫೈಲ್(./file) ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ. |
03:13 | ಫೈಲ್ ಎಕ್ಸಿಕ್ಯೂಟ್ ಆಗಿರುವುದನ್ನು ನಾವು ನೋಡಬಹುದು. |
03:15 | ಈಗ ನಾವು ಇದನ್ನು ಪರಿಶೀಲಿಸೋಣ. |
03:17 | ಈಗ, ಹೋಮ್ ಫೋಲ್ಡರ್ ಅನ್ನು ತೆರೆಯೋಣ. |
03:20 | ಹೋಮ್ ಫೋಲ್ಡರ್ ಮೇಲೆ ಒತ್ತಿ. |
03:22 | ಈಗ ಡೆಸ್ಕ್ ಟಾಪ್ ಆಪ್ಶನ್ ಮೇಲೆ ಒತ್ತಿ. |
03:25 | ಇದು ನಮ್ಮ ಸ್ಯಾಂಪಲ್ ಡಾಟ್ ಟಿ ಎಕ್ಸ್ ಟಿ(sample.txt) ಫೈಲ್. |
03:29 | ನಮ್ಮ ಫೈಲ್ ಯಶಸ್ವಿಯಾಗಿ ರಚಿಸಲಾಗಿದೆ ಎಂದು ತೋರಿಸುತ್ತದೆ. |
03:32 | ಈಗ ಇದನ್ನು ತೆರೆಯೋಣ. |
03:34 | ಫೈಲ್ ನ ಮೇಲೆ ಡಬಲ್ ಕ್ಲಿಕ್ ಮಾಡಿ. |
03:36 | ಇಲ್ಲಿ ಮೆಸೇಜ್ ಗಳನ್ನು ನೋಡಬಹುದು. |
03:39 | ವೆಲ್ ಕಮ್ ಟು ದ ಸ್ಪೋಕನ್ ಟ್ಯುಟೋರಿಯಲ್( Welcome to the spoken-tutorial) ಮತ್ತು |
03:41 | ದಿಸ್ ಈಸ್ ಅ ಟೆಸ್ಟ್ ಎಕ್ಸಾಂಪಲ್(This is a test example) |
03:44 | ಹೀಗೆ ನಾವು ಫೈಲ್ ಅನ್ನು ರಚಿಸಿ ಡಾಟಾ ವನ್ನು ರೈಟ್ ಮಾಡುತ್ತೇವೆ. |
03:48 | ಈಗ ನಾವು ಫೈಲ್ ನಿಂದ ಡಾಟಾ ವನ್ನು ರೀಡ್ ಮಾಡುವುದು ಹೇಗೆ ಎಂದು ನೋಡೋಣ. |
03:52 | ನಾನೀಗಾಗಲೇ ಪ್ರೊಗ್ರಾಮ್ ಅನ್ನು ಬರೆದಿದ್ದೇನೆ. |
03:54 | ಅದನ್ನು ಒಪನ್ ಮಾಡುತ್ತೇನೆ. |
03:56 | ಈ ಪ್ರೊಗ್ರಾಮ್ ನಲ್ಲಿ ಸ್ಯಾಂಪಲ್ ಡಾಟ್ ಟಿ ಎಕ್ಸ್ ಟಿ ಫೈಲ್ ನಿಂದ ಡಾಟಾವನ್ನು ರೀಡ್ ಮಾಡಿ ಅದನ್ನು ಕಂಸೋಲ್ ಗೆ ಪ್ರಿಂಟ್ ಮಾಡುತ್ತೇವೆ. |
04:03 | ಈಗ ಕೋಡ್ ಅನ್ನು ವಿವರಿಸುತ್ತೇನೆ. |
04:05 | ಇದು ನಮ್ಮ ಹೆಡರ್ ಫೈಲ್. |
04:08 | ಇದು ನಮ್ಮ ಮೈನ್ ಫಂಕ್ಷನ್ |
04:10 | ಇಲ್ಲಿ, ಒಂದು ಫೈಲ್ ವೇರಿಯೇಬಲ್ ಮತ್ತು ಅದಕ್ಕೆ ಪಾಯಿಂಟರ್ ಅನ್ನು ಡಿಫೈನ್ ಮಾಡಲಾಗಿದೆ. |
04:15 | ನಂತರ, c ಎಂದು ಒಂದು ಕ್ಯಾರಕ್ಟರ್ ವೇರಿಯೇಬಲ್ ಅನ್ನು ಡಿಕ್ಲೇರ್ ಮಾಡಿದ್ದೇವೆ. |
04:19 | ಇಲ್ಲಿ, ಸ್ಯಾಂಪಲ್ ಡಾಟ್ ಟಿ ಎಕ್ಸ್ ಟಿ ಯನ್ನು ರೀಡ್ ಮೋಡ್ ನಲ್ಲಿ ಒಪನ್ ಮಾಡುತ್ತೇವೆ. |
04:24 | ಇದರ ಔಟ್ ಪುಟ್ ಅನ್ನು fp(ಎಫ್ ಪಿ) ಯಲ್ಲಿ ಇಡುತ್ತೇವೆ. |
04:27 | ನಂತರ ಕಂಡೀಶನ್ ಅನ್ನು ಚೆಕ್ ಮಾಡುತ್ತೇವೆ. |
04:29 | Fp ಎಂಬುದು ನಲ್ ಆದ ಪಕ್ಷದಲ್ಲಿ, |
04:32 | ಕಂಡೀಶನ್ ಟ್ರು ಆಗಿದ್ದಲ್ಲಿ, ಈ ಮೆಸೇಜ್ ಅನ್ನು ಪ್ರಿಂಟ್ ಮಾಡುತ್ತೇವೆ. |
04:36 | ಫೈಲ್ ಡಸ್ ನಾಟ್ ಎಕ್ಸಿಸ್ಟ್ (File doesn't exist.) |
04:38 | ಇಲ್ಲದಿದ್ದಲ್ಲಿ, ಇದು c ಮತ್ತು EOF(ಇ ಒ ಎಫ್) ಸಮಾನವಾಗಿಲ್ಲವೆಂದು, ಮತ್ತೊಂದು ಕಂಡೀಶನ್ ಅನ್ನು ಚೆಕ್ ಮಾಡುತ್ತದೆ. |
04:46 | ಇಲ್ಲಿ, EOF ಎಂದರೆ ಫೈಲ್ ನ ಕೊನೆ. |
04:49 | ಇದು ಇನ್ಪುಟ್ ನ ಕೊನೆಯನ್ನು ಸೂಚಿಸುತ್ತದೆ. |
04:52 | ಇದು, ಡಾಟಾ ಸೋರ್ಸ್ ನಿಂದ ಡಾಟಾ ವನ್ನು ಓದಲಾಗದ ಸ್ಥಿತಿಯಾಗಿದೆ. |
04:57 | ಈ ಕಂಡೀಶನ್ ಟ್ರು ಆಗಿದ್ದಲ್ಲಿ, ಸ್ಯಾಂಪಲ್ ಡಾಟ್ ಟಿ ಎಕ್ಸ್ ಟಿ ಇಂದ ಕ್ಯಾರೆಕ್ಟರ್ ಗಳನ್ನು ಕನ್ಸೋಲ್ ಮೇಲೆ ತೋರಿಸುತ್ತದೆ. |
05:06 | ಇಲ್ಲಿ, ಗೆಟ್ ಸಿ (getc) ಎಂಬುದು, ಕೊಟ್ಟ ಫೈಲ್ ಅಥವಾ ಸ್ಟ್ರೀಮ್ ನ ಒಂದು ಕ್ಯಾರೆಕ್ಟರ್ ಅನ್ನು ಕೊಡುತ್ತದೆ. |
05:12 | ಈಗ, ಸ್ಯಾಂಪಲ್ ಡಾಟ್ ಟಿ ಎಕ್ಸ್ ಟಿ ಎಂಬ ಫೈಲ್ ನಿಂದ ಕ್ಯಾರೆಕ್ಟರ್ ಅನ್ನು ಕೊಡುತ್ತದೆ. |
05:17 | (ಪುಟ್ ಕ್ಯಾರ್ ) putchar ಎಂಬುದನ್ನು ಕನ್ಸೋಲ್ ಮೇಲೆ ಕ್ಯಾರೆಕ್ಟರ್ ಅನ್ನು ಪ್ರಿಂಟ್ ಮಾಡಲು ಬಳಸುತ್ತಾರೆ. |
05:22 | ನಂತರ ಇದು ಕ್ಯಾರೆಕ್ಟರ್ ಗಳನ್ನು ವೇರಿಯೇಬಲ್ ಸಿ ಯಲ್ಲಿ ಇಡುತ್ತದೆ. |
05:25 | ಇಲ್ಲಿ, ನಾವು ಫೈಲ್ ಅನ್ನು ಕ್ಲೋಸ್ ಮಾಡುತ್ತೇವೆ, |
05:28 | ಮತ್ತು, ಇದು ನಮ್ಮ ರಿಟರ್ನ್ ಸ್ಟೇಟ್ಮೆಂಟ್. |
05:30 | ಈಗ, save ಅನ್ನು ಒತ್ತಿ. |
05:32 | ಪ್ರೊಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ. |
05:35 | ಟರ್ಮಿನಲ್ ಗೆ ಹಿಂತಿರುಗಿ. |
05:37 | ಕಂಪೈಲ್ ಮಾಡಲು, gcc ಸ್ಪೇಸ್ ರೀಡ್ ಫೈಲ್ ಡಾಟ್ ಸಿ(readfile.c) ಸ್ಪೇಸ್ ಹೈಫನ್ ಒ(-o) ಸ್ಪೇಸ್ ರೀಡ್(read) ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ. |
05:47 | ಎಕ್ಸಿಕ್ಯೂಟ್ ಮಾಡಲು, ಡಾಟ್ ಸ್ಲ್ಯಾಶ್ ರೀಡ್ ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ |
05:52 | ವೆಲ್ ಕಮ್ ಟು ದ ಸ್ಪೋಕನ್ ಟ್ಯುಟೋರಿಯಲ್ (Welcome to the Spoken-Tutorial) ಎಂದು ಔಟ್ ಪುಟ್ ತೋರಿಸುತ್ತದೆ. |
05:56 | ದಿಸ್ ಈಸ್ ಅ ಟೆಸ್ಟ್ ಎಕ್ಸಾಂಪಲ್(This is a test example.) |
05:59 | ಇಲ್ಲಿಗೆ ನಮ್ಮ ಟ್ಯುಟೋರಿಯಲ್ ಮುಗಿಯುತ್ತದೆ. |
06:01 | ನಮ್ಮ ಸ್ಲೈಡ್ ಗೆ ಹಿಂತಿರುಗೋಣ. |
06:03 | ಈಗ ಸಾರಾಂಶ ತಿಳಿಯೋಣ. ಈ ಟ್ಯುಟೋರಿಯಲ್ ನಲ್ಲಿ ನಾವು ಇವುಗಳನ್ನು ತಿಳಿದೆವು: |
06:06 | ಫೈಲ್ ಹ್ಯಾಂಡ್ಲಿಂಗ್, |
06:08 | ಡಾಟಾ ವನ್ನು ಫೈಲ್ ನಲ್ಲಿ ಬರೆಯುವುದು. |
06:10 | ಉದಾಹರಣೆಗೆ: ಎಫ್ ಪಿ = ಎಫ್ ಒಪನ್ ಸ್ಯಾಂಪಲ್ ಡಾಟ್ ಟಿ ಎಕ್ಸ್ ಟಿ ಕೊಮಾ ಡಬ್ಲ್ಯೂ(fp = fopen(“Sample.txt”, “w”);) ಹಾಗೂ |
06:17 | ಫೈಲ್ ನಿಂದ ಡಾಟಾ ವನ್ನು ಓದುವುದು,ಉದಾಹರಣೆಗೆ: ಎಫ್ ಪಿ = ಎಫ್ ಒಪನ್ ಸ್ಯಾಂಪಲ್ ಡಾಟ್ ಟಿ ಎಕ್ಸ್ ಟಿ ಕೊಮಾ ಆರ್(fp = fopen(“Sample.txt”, “r”);) |
06:25 | ಟೆಸ್ಟ್ ಎಂಬ ಫೈಲ್ ಅನ್ನು ರಚಿಸಿ, ಅದರಲ್ಲಿ ನಿಮ್ಮ ಹೆಸರು ಮತ್ತು ವಿಳಾಸವನ್ನು ರೈಟ್ ಮಾಡಲು ಮತ್ತು ಅದನ್ನು ಕನ್ಸೋಲ್ ನ ಮೇಲೆ ಪ್ರಿಂಟ್ ಮಾಡಲು ಒಂದು ಸಿ ಪ್ರೊಗ್ರಾಮ್ ಅನ್ನು ಅಸೈನ್ಮೆಂಟ್ ಆಗಿ ಬರೆಯಿರಿ. |
06:37 | ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋವನ್ನು ನೋಡಿರಿ. |
06:40 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಅನ್ನು ವಿವರಿಸುತ್ತದೆ. |
06:43 | ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲದಿದ್ದಲ್ಲಿ ನೀವು ಇದನ್ನು ಡೌನ್ ಲೋಡ್ ಮಾಡಿ ನೋಡಬಹುದು. |
06:47 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್, ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಗಾರವನ್ನು ನಡೆಸುತ್ತದೆ. |
06:53 | ಆನ್ ಲೈನ್ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದವರಿಗೆ ಸರ್ಟಿಫಿಕೇಟ್ ಕೊಡುತ್ತದೆ. |
06:57 | ಹೆಚ್ಚಿನ ಮಾಹಿತಿಗಾಗಿ, contact@spoken-tutorial.org ಗೆ ಬರೆಯಿರಿ. |
07:03 | ಸ್ಪೋಕನ್ ಟ್ಯುಟೋರಿಯಲ್, ಟಾಕ್ ಟು ಎ ಟೀಚರ್ ಪ್ರೊಜಕ್ಟ್ ನ ಒಂದು ಭಾಗವಾಗಿದೆ. |
07:07 | ಇದು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯಿಂದ ಬೆಂಬಲಿತವಾಗಿದೆ. |
07:14 | ಈ ನಿಯೋಗದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ದೊರೆಯುತ್ತದೆ. |
07:18 | ಈ ಟ್ಯುಟೋರಿಯಲ್ ನ ಅನುವಾದಕಿ ಬೆಂಗಳೂರಿನಿಂದ ಚೇತನಾ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. |
07:22 | ಧನ್ಯವಾದಗಳು. |