C-and-Cpp/C2/Functions/Kannada

From Script | Spoken-Tutorial
Jump to: navigation, search
Time Narration
00:01 ಸಿ ಮತ್ತು ಸಿ ಪ್ಲಸ್ ಪ್ಲಸ್ ನಲ್ಲಿ ಫಂಕ್ಷನ್ಸ್ ಎಂಬ ಟ್ಯುಟೋರಿಯಲ್ ಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು ಕಲಿಯುವ ಅಂಶಗಳು ಹೀಗಿವೆ:
00:09 ಫಂಕ್ಷನ್ ಎಂದರೇನು?
00:11 ಫಂಕ್ಷನ್ ನ ಸಿಂಟ್ಯಾಕ್ಸ್ ಮತ್ತು
00:13 ರಿಟರ್ನ್ ಸ್ಟೇಟ್ಮೆಂಟ್ ನ ಮಹತ್ವ.
00:16 ಇದನ್ನು ನಾವು ಉದಾಹರಣೆಯೊಂದಿಗೆ ಮಾಡೋಣ.
00:18 ಕೆಲವು ಸಾಮಾನ್ಯವಾಗಿ ಆಗುವ ಎರರ್ ಗಳನ್ನು ಕೂಡಾ ನೋಡೋಣ.
00:22 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡುವಾಗ, ನಾನು ಉಬುಂಟು ಆಪರೇಟಿಂಗ್ ಸಿಸ್ಟಮ್ ನ 11.10 ನೇ ಆವೃತ್ತಿ ಮತ್ತು gcc ಮತ್ತು g++ ಕಂಪೈಲರ್ ನ 4.6.1 ನೇ ಆವೃತ್ತಿಯನ್ನು ಉಪಯೋಗಿಸಿದ್ದೇನೆ.
00:35 ಫಂಕ್ಷನ್ ಅನ್ನು ಪೀಠಿಕೆಯೊಂದಿಗೆ ಆರಂಭಿಸೋಣ.
00:39 ಫಂಕ್ಷನ್ ಎಂಬುದು ಒಂದು ನಿರ್ದಿಷ್ಟ ಕೆಲಸವನ್ನು ಮಾಡುವ ಸೆಲ್ಫ್ ಕಂಟೇಂಡ್(self-contained) ಪ್ರೊಗ್ರಾಮ್ ಆಗಿದೆ.
00:45 ಎಲ್ಲಾ ಪ್ರೊಗ್ರಾಮ್ ಗಳೂ, ಒಂದು ಅಥವಾ ಹೆಚ್ಚು ಫಂಕ್ಷನ್ ಗಳನ್ನು ಹೊಂದಿರುತ್ತವೆ.
00:49 ಫಂಕ್ಷನ್, ಒಮ್ಮೆ ಎಕ್ಸಿಕ್ಯೂಟ್ ಆದ ನಂತರ, ಕಂಟ್ರೋಲ್ ಅನ್ನು ಎಲ್ಲಿಂದ ಪಡೆದಿರುತ್ತದೆಯೋ ಅಲ್ಲಿಗೆ ಹಿಂತಿರುಗಿಸುತ್ತದೆ.
00:55 ಫಂಕ್ಷನ್ ನ ಸಿಂಟಾಕ್ಸ್ ಅನ್ನು ನೋಡೋಣ.
00:59 ರಿಟರ್ನ್ ಟೈಪ್ ಎಂಬುದು ಫಂಕ್ಷನ್ ರಿಟರ್ನ್ ಮಾಡುವ ಡಾಟಾ ವಿನ ಟೈಪ್ ಅನ್ನು ಹೇಳುತ್ತದೆ.
01:05 ಫಂಕ್ಷನ್ ನೇಮ್ ಎಂಬುದು, ಫಂಕ್ಷನ್ ನ ಹೆಸರನ್ನು ಸೂಚಿಸುತ್ತದೆ.
01:09 ಪಾರಾಮೀಟರ್ಸ್ ಎಂಬುದು ವೇರಿಯೇಬಲ್ ಗಳ ಹೆಸರು ಮತ್ತು ಅವುಗಳ ಟೈಪ್ ಗಳ ಪಟ್ಟಿಯಾಗಿದೆ.
01:14 ನಾವು, ಖಾಲಿ ಪಾರಾಮೀಟರ್ ಗಳ ಪಟ್ಟಿ ಯನ್ನು ಸೂಚಿಸಬಹುದು.
01:18 ಇದನ್ನು ಫಂಕ್ಷನ್ ವಿತೌಟ್ ಆರ್ಗ್ಯುಮೆಂಟ್ಸ್ ಎನ್ನುತ್ತಾರೆ.
01:21 ಮತ್ತು, ಇದನ್ನು ಫಂಕ್ಷನ್ ವಿತ್ ಆರ್ಗ್ಯುಮೆಂಟ್ಸ್ ಎನ್ನುತ್ತಾರೆ.
01:26 void ಅನ್ನು ಉಪಯೋಗಿಸಿ ಬರೆದ ಒಂದು ಪ್ರೊಗ್ರಾಮ್ ನೋಡೋಣ.
01:29 ನಾನು ಈಗಾಗಲೇ ಪ್ರೊಗ್ರಾಮ್ ಅನ್ನು ಎಡಿಟರ್ ನಲ್ಲಿ ಬರೆದಿದ್ದೇನೆ.
01:32 ಅದನ್ನು ಒಪನ್ ಮಾಡುತ್ತೇನೆ.
01:35 ನಮ್ಮ ಫೈಲ್ ನ ಹೆಸರು ಫಂಕ್ಷನ್ ಎಂದು.
01:38 ಮತ್ತು, ಇದನ್ನು ನಾನು ಡಾಟ್ ಸಿ ಎಂಬ ಎಕ್ಸ್ಟೆಂಶನ್ ನೊಡನೆ ಸೇವ್ ಮಾಡಿದ್ದೇನೆ.
01:43 ಕೋಡ್ ಅನ್ನು ವಿವರಿಸುತ್ತೇನೆ.
01:45 ಇದು ನಮ್ಮ ಹೆಡರ್ ಫೈಲ್
01:47 ಯಾವುದೇ ಫಂಕ್ಷನ್ ಅನ್ನು ಉಪಯೋಗಿಸುವ ಮುನ್ನ ಅದನ್ನು ಡಿಫೈನ್ ಮಾಡಬೇಕು.
01:51 ಇಲ್ಲಿ ನಾವು add ಎಂಬ ಫಂಕ್ಷನ್ ಅನ್ನು ಡಿಫೈನ್ ಮಾಡಿದ್ದೇವೆ.
01:54 add ಎಂಬ ಫಂಕ್ಷನ್ ಗೆ ಆರ್ಗ್ಯುಮೆಂಟ್ಸ್ ಇಲ್ಲದಿರುವುದನ್ನು, ಮತ್ತು ರಿಟರ್ನ್ ಟೈಪ್ void ಎಂದಿರುವುದನ್ನು ಗಮನಿಸಿ.
02:01 ಫಂಕ್ಷನ್ ಗಳಲ್ಲಿ ಎರಡು ವಿಧ.
02:03 ಯೂಸರ್ ಡಿಫೈನ್ಡ್, ನಮ್ಮ add ಫಂಕ್ಷನ್ ನಂತೆ ಮತ್ತು ಪ್ರಿಡಿಫೈನ್ಡ್ ಉದಾಹರಣೆಗೆ printf, main ಫಂಕ್ಷನ್
02:12 ಇಲ್ಲಿ a ಗೆ ಎರಡು ಮತ್ತು b ಗೆ ಮೂರು ಮೌಲ್ಯವನ್ನು ಕೊಟ್ಟು ಇನಿಶಿಯಲೈಸ್ ಮಾಡಿದ್ದೇವೆ.
02:19 ಇಲ್ಲಿ c ಎಂಬ ವೇರಿಯೇಬಲ್ ಅನ್ನು ಡಿಕ್ಲೇರ್ ಮಾಡಿದ್ದೇವೆ.
02:21 a ಮತ್ತು b ಯ ಮೌಲ್ಯಗಳನ್ನು ಕೂಡಿಸುತ್ತೇವೆ.
02:24 ಮೊತ್ತವನ್ನು c ಯಲ್ಲಿ ಇಟ್ಟಿದ್ದೇವೆ.
02:27 ನಂತರ ಮೊತ್ತವನ್ನು ಪ್ರಿಂಟ್ ಮಾಡುತ್ತೇವೆ.
02:29 ಇದು ನಮ್ಮ main ಫಂಕ್ಷನ್.
02:32 ಇಲ್ಲಿ add ಫಂಕ್ಷನ್ ಅನ್ನು ಕಾಲ್ ಮಾಡುತ್ತೇವೆ.
02:34 ಮೌಲ್ಯಗಳನ್ನು ಕೂಡಿ, ಅದರಿಂದ ಬರುವ ಮೊತ್ತವು ಪ್ರಿಂಟ್ ಆಗುತ್ತದೆ.
02:39 ಈಗ Save ಒತ್ತಿ.
02:42 ಪ್ರೊಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ.
02:45 ನಿಮ್ಮ ಕೀಬೋರ್ಡ ನಲ್ಲಿ Ctrl, Alt ಮತ್ತು T ಕೀ ಗಳನ್ನು ಒಂದೇಬಾರಿಗೆ ಒತ್ತಿ, ಟರ್ಮಿನಲ್ ವಿಂಡೊ ಅನ್ನು ಓಪನ್ ಮಾಡಿ.
02:53 ಕಂಪೈಲ್ ಮಾಡಲು, “gcc”ಸ್ಪೇಸ್ functions ಡಾಟ್ c ಸ್ಪೇಸ್ ಹೈಫನ್(-) ಒ (O) ಸ್ಪೇಸ್ ಎಫ್ ಯು ಎನ್ ಎಂದು ಟೈಪ್ ಮಾಡಿ, Enter ಒತ್ತಿ.
03:00 ಎಕ್ಸಿಕ್ಯೂಟ್ ಮಾಡಲು ಡಾಟ್ ಸ್ಲ್ಯಾಶ್ ಎಫ್ ಯು ಎನ್ ಎಂದು ಟೈಪ್ ಮಾಡಿ.
03:05 Sum of a and b is 5 ಎಂದು ಔಟ್ ಪುಟ್ ಪ್ರಿಂಟ್ ಆಗಿರುವುದನ್ನು ನೋಡಬಹುದು.
03:10 ಈಗ ಪ್ರೊಗ್ರಾಮ್ ಗೆ ಹಿಂತಿರುಗಿ.
03:13 ಫಂಕ್ಷನ್ ಗಳಲ್ಲಿ ವಿಶೇಷ ಐಡೆಂಟಿಫೈರ್ ಗಳಿರುತ್ತವೆ, ಅವನ್ನು ಪಾರಾಮೀಟರ್ಸ್ (parameters) ಅಥವಾ ಆರ್ಗ್ಯುಮೆಂಟ್ಸ್ (arguments) ಎನ್ನುತ್ತಾರೆ.
03:20 ಇದೇ ಉದಾಹರಣೆಯನ್ನು ಅರ್ಗ್ಯುಮೆಂಟ್ಸ್ ನೊಂದಿಗೆ ನೋಡೋಣ.
03:23 ಇಲ್ಲಿ ಕೆಲವು ಬದಲಾವಣೆ ಗಳನ್ನು ಮಾಡುತ್ತೇನೆ.
03:27 ಇಂಟ್ add ಇಂಟ್ a “,”(comma) ಇಂಟ್ b ಎಂದು ಟೈಪ್ ಮಾಡಿ.
03:32 ಇಲ್ಲಿ add ಫಂಕ್ಷನ್ ಅನ್ನು ಡಿಕ್ಲೇರ್ ಮಾಡಿದ್ದೇವೆ.
03:36 ಇಂಟ್ a ಮತ್ತು ಇಂಟ್ b ಗಳು add ಫಂಕ್ಷನ್ ನ ಆರ್ಗ್ಯುಮೆಂಟ್ ಗಳು.
03:41 ಇದನ್ನು ಡಿಲೀಟ್ ಮಾಡೋಣ. ಇಲ್ಲಿ a ಮತ್ತು b ಗಳನ್ನು ಇನಿಶಿಯಲೈಸ್ ಮಾಡುವ ಅವಶ್ಯಕತೆ ಇಲ್ಲ.
03:46 printf ಸ್ಟೇಟ್ಮೆಂಟ್ ಅನ್ನು ಡಿಲೀಟ್ ಮಾಡಿ.
03:49 ಇಂಟ್ ಮೈನ್ ಒಪನ್ ಬ್ರಾಕೆಟ್ ಕ್ಲೋಸಿಂಗ್ ಬ್ರಾಕೆಟ್ ಎಂದು ಟೈಪ್ ಮಾಡಿ.
03:52 ಇಲ್ಲಿ sum ಎಂಬ ವೇರಿಯೇಬಲ್ ಅನ್ನು ಡಿಕ್ಲೇರ್ ಮಾಡೋಣ.
03:54 ಇಂಟ್ ಸಮ್ ಸೆಮಿಕೊಲನ್ ಎಂದು ಟೈಪ್ ಮಾಡಿ.
03:57 ನಂತರ, ಸಮ್ ಈಸ್ ಈಕ್ವಲ್ ಟು ಆಡ್ ಐದು “,”(comma) ನಾಲ್ಕು ಸೆಮಿಕೊಲನ್ ಎಂದು ಟೈಪ್ ಮಾಡಿ.
04:03 ಇಲ್ಲಿ add ಫಂಕ್ಷನ್ ಅನ್ನು ಕಾಲ್ ಮಾಡುತ್ತೇವೆ.
04:05 ನಂತರ, ಐದು ಮತ್ತು ನಾಲ್ಕನ್ನು ಪ್ಯಾರಾಮೀಟರ್ ಆಗಿ ಪಾಸ್ ಮಾಡುತ್ತೇವೆ.
04:10 ಐದು a ಯಲ್ಲಿರುತ್ತದೆ ಮತ್ತು ನಾಲ್ಕು b ಯಲ್ಲಿ ಇರುತ್ತದೆ.
04:14 ಇಲ್ಲಿ ಕೂಡುವ ಕಾರ್ಯ ನಡೆಯುತ್ತದೆ.
04:18 ಇಲ್ಲಿ ಮೊತ್ತವನ್ನು ಪ್ರಿಂಟ್ ಮಾಡೋಣ.
04:20 ಹಾಗಾಗಿ, ಇಲ್ಲಿ ಟೈಪ್ ಮಾಡಿ printf ಸಮ್ ಈಸ್ ಪರ್ಸೆಂಟ್ ಡಿ ಸ್ಲ್ಯಾಶ್ ಎನ್ ಡಬಲ್ ಕೋಟ್ಸ್ “,”(comma) ಸಮ್.
04:27 ನಾವೀಗಾಗಲೇ ಫಂಕ್ಷನ್ ಅನ್ನು ಕಾಲ್ ಮಾಡಿರುವುದರಿಂದ ಇದನ್ನು ಡಿಲೀಟ್ ಮಾಡಿ
04:32 ರಿಟರ್ನ್ ಜೀರೊ ಎಂದು ಟೈಪ್ ಮಾಡಿ.
04:36 ನಾನ್ ವೋಯ್ಡ್ ಫಂಕ್ಷನ್ ಗಳು, ಮೌಲ್ಯವನ್ನು ರಿಟರ್ನ್ ಮಾಡುವ ರಿಟರ್ನ್ ಸ್ಟೇಟ್ಮೆಂಟ್ ಅನ್ನು ಉಪಯೋಗಿಸಬೇಕು.
04:41 Save ಒತ್ತಿ.
04:43 ಪ್ರೊಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ.
04:45 ಟರ್ಮಿನಲ್ ಗೆ ಹಿಂತಿರುಗಿ.
04:48 ಈಗ ಪ್ರೊಗ್ರಾಮ್ ಅನ್ನು ಮೊದಲಿನಂತೆ ಕಂಪೈಲ್ ಮಾಡಿ.
04:50 ಎಕ್ಸಿಕ್ಯೂಟ್ ಮಾಡೋಣ.
04:52 ಸಮ್ ಈಸ್ ನೈನ್ ಎಂದು ಔಟ್ ಪುಟ್ ತೋರುತ್ತದೆ.
04:57 ಈಗ ಇದೇ ಪ್ರೊಗ್ರಾಮ್ ಅನ್ನು C ಪ್ಲಸ್ ಪ್ಲ್ಲಸ್ ನಲ್ಲಿ ಹೇಗೆ ಎಕ್ಸಿಕ್ಯೂಟ್ ಮಾಡುವುದೆಂದು ನೋಡೋಣ.
05:02 ನಮ್ಮ ಪ್ರೊಗ್ರಾಮ್ ಗೆ ಹಿಂತಿರುಗಿ.
05:04 ಇಲ್ಲಿ ಕೆಲವನ್ನು ಬದಲಾಯಿಸುತ್ತೇನೆ.
05:07 ಮೊದಲು Shift, Ctrl ಮತ್ತು S ಅನ್ನು ಒಂದೇ ಬಾರಿಗೆ ಒತ್ತಿ.
05:12 ಈಗ ಫೈಲ್ ಅನ್ನು ಡಾಟ್ ಸಿಪಿಪಿ ಎಂಬ ಎಕ್ಸ್ಟೆಂಶನ್ ನೊಂದಿಗೆ ಸೇವ್ ಮಾಡಿ.
05:18 Save ಒತ್ತಿ. ಮೊದಲು ಹೆಡರ್ ಫೈಲ್ ಅನ್ನು ಐಒಸ್ಟ್ರೀಮ್ ಎಂದು ಬದಲಾಯಿಸೋಣ.
05:24 ಯೂಸಿಂಗ್ ಸ್ಟೇಟ್ಮೆಂಟ್ ಅನ್ನು ಇಲ್ಲಿ ಸೇರಿಸೋಣ.
05:28 ಫಂಕ್ಷನ್ ಡಿಕ್ಲರೇಶನ್ ಸಿ ಪ್ಲಸ್ ಪ್ಲಸ್ ನಲ್ಲಿ ಇದೇ ರೀತಿ ಇರುತ್ತದೆ.
05:32 ಹಾಗಾಗಿ ಬದಲಾಯಿಸುವ ಅಗತ್ಯವಿಲ್ಲ.
05:37 ಸಿ ಪ್ಲಸ್ ಪ್ಲಸ್ ನಲ್ಲಿ ಲೈನ್ ಅನ್ನು ಪ್ರಿಂಟ್ ಮಾಡಲು ಸಿಔಟ್ ಫಂಕ್ಷನ್ ಅನ್ನು ಉಪಯೋಗಿಸುವುದರಿಂದ, printf ಸ್ಟೇಟ್ಮೆಂಟ್ ಅನ್ನು ಸಿಔಟ್ ಸ್ಟೇಟ್ಮೆಂಟ್ ಆಗಿ ಬದಲಾಯಿಸಿ
05:48 ಇಲ್ಲಿ ನಮಗೆ ಫಾರ್ಮಾಟ್ ಸ್ಪೆಸಿಫೈರ್ ಮತ್ತು ಬ್ಯಾಕ್ ಸ್ಲ್ಯಾಶ್ ಎನ್ ನ ಅವಶ್ಯಕತೆ ಇಲ್ಲ.
05:52 ”,” (comma) ಅನ್ನು ಡಿಲೀಟ್ ಮಾಡಿ.
05:54 ಈಗ, ಎರಡು ಒಪನಿಂಗ್ ಆಂಗಲ್ ಬ್ರಾಕೆಟ್ ಅನ್ನು ಟೈಪ್ ಮಾಡಿ.
05:58 ಸಮ್ ನ ನಂತರ ಮತ್ತೆ ಎರಡು ಒಪನಿಂಗ್ ಆಂಗಲ್ ಬ್ರಾಕೆಟ್ ಅನ್ನು ಟೈಪ್ ಮಾಡಿ.
06:03 ಡಬಲ್ ಕೋಟ್ಸ್ ನ ಒಳಗೆ ಬ್ಯಾಕ್ ಸ್ಲ್ಯಾಷ್ ಎನ್ ಎಂದು ಟೈಪ್ ಮಾಡಿ.
06:07 ಕ್ಲೋಸಿಂಗ್ ಬ್ರಾಕೆಟ್ ಅನ್ನು ಡಿಲೀಟ್ ಮಾಡಿ.
06:09 Save ಒತ್ತಿ.
06:11 ಪ್ರೊಗ್ರಾಮ್ ಅನ್ನು ಕಂಪೈಲ್ ಮಾಡೋಣ.
06:14 ನಮ್ಮ ಟರ್ಮಿನಲ್ ಗೆ ಹಿಂತಿರುಗಿ,
06:16 ಜಿ ಪ್ಲಸ್ ಪ್ಲಸ್ ಫಂಕ್ಷನ್ ಡಾಟ್ ಸಿಪಿಪಿ ಹೈಫನ್ ಒ ಎಫ್ ಯು ಎನ್ಒನ್ ಎಂದು ಟೈಪ್ ಮಾಡಿ.
06:23 ಎಫ್ ಯು ಎನ್ಎಂಬ ಔಟ್ ಪುಟ್ ಫೈಲ್, ಓವರ್ ರೈಟ್ ಆಗದಿರಲು, ಇಲ್ಲಿ ಎಫ್ ಯು ಎನ್ ಒನ್ ಎಂದು ಟೈಪ್ ಮಾಡಿದ್ದೇವೆ.
06:31 Enter ಒತ್ತಿ.
06:34 ಡಾಟ್ ಸ್ಲ್ಯಾಶ್ ಎಫ್ ಯು ಎನ್ ಒನ್ ಎಂದು ಟೈಪ್ ಮಾಡಿ.
06:38 ಸಮ್ ಈಸ್ ನೈನ್ ಎಂದು ಔಟ್ ಪುಟ್ ತೋರಿಸುತ್ತದೆ.
06:42 ಈಗ ನಾವು ಸಾಮಾನ್ಯವಾಗಿ ಆಗುವ ಕೆಲವು ಎರರ್ ಗಳನ್ನು ನೋಡೋಣ.
06:47 ಇಲ್ಲಿ ನಾಲ್ಕರ ಬದಲು ಎಕ್ಸ್ ಎಂದು ಟೈಪ್ ಮಾಡುತ್ತೇವೆ ಎಂದೆಣಿಸಿ.
06:51 ಉಳಿದ ಕೋಡ್ ಅನ್ನು ಹಾಗೆಯೇ ಬಿಡುತ್ತೇನೆ.
06:55 Save ಒತ್ತಿ.
06:58 ಕಂಪೈಲ್ ಮಾಡೋಣ.
07:02 x was not declared in this scope. ಎಂದು ಹತ್ತನೇ ಲೈನ್ ನಲ್ಲಿ ಎರರ್ ಅನ್ನು ನೊಡಬಹುದು.
07:09 ಏಕೆಂದರೆ ಎಕ್ಸ್ ಎಂಬುದು ಕ್ಯಾರಕ್ಟರ್ ವೇರಿಯೇಬಲ್ ಆಗಿದೆ.
07:13 ಇದು ಎಲ್ಲೂ ಡಿಕ್ಲೇರ್ ಆಗಿಲ್ಲ.
07:15 ಮತ್ತು, add ಫಂಕ್ಷನ್ ನ ಆರ್ಗ್ಯುಮೆಂಟ್, ಇಂಟಿಜರ್ ವೇರಿಯೇಬಲ್ ಆಗಿದೆ.
07:21 ಹಾಗಾಗಿ, ರಿಟರ್ನ್ ಟೈಪ್ ಮತ್ತು ರಿಟರ್ನ್ ಮೌಲ್ಯದಲ್ಲಿ ವ್ಯತ್ಯಾಸವಿದೆ.
07:25 ಈಗ ನಮ್ಮ ಪ್ರೊಗ್ರಾಮ್ ಗೆ ಹಿಂತಿರುಗಿ.
07:27 ಎರರ್ ಅನ್ನು ಸರಿಪಡಿಸೋಣ.
07:30 ಹತ್ತನೇ ಸಾಲಿನಲ್ಲಿ ನಾಲ್ಕು ಎಂದು ಟೈಪ್ ಮಾಡಿ.
07:32 Save ಒತ್ತಿ.
07:35 ಮತ್ತೆ ಎಕ್ಸಿಕ್ಯೂಟ್ ಮಾಡೋಣ.
07:37 ಪ್ರಾಂಪ್ಟ್ ಅನ್ನು ಖಾಲಿ ಮಾಡುತ್ತೇನೆ.
07:40 ಪ್ರೊಗ್ರಾಮ್ ಅನ್ನು ಮೊದಲಿನಂತೆ ಕಂಪೈಲ್ ಮಾಡಿ.
07:42 ಹೌದು, ಇದು ಕೆಲಸ ಮಾಡುತ್ತಿದೆ.
07:45 ಈಗ, ಸಾಮಾನ್ಯವಾಗಿ ಬರುವ ಮತ್ತೊಂದು ಎರರ್ ಅನ್ನು ನೋಡೋಣ.
07:50 ಇಲ್ಲಿ ಒಂದೇ ಪಾರಾಮೀಟರ್ ಅನ್ನು ಪಾಸ್ ಮಾಡುತ್ತೇವೆ ಎಂದೆಣಿಸಿ.
07:55 ನಾಲ್ಕನ್ನು ಡಿಲೀಟ್ ಮಾಡಿ. Save ಒತ್ತಿ.
07:58 ಟರ್ಮಿನಲ್ ಗೆ ಹಿಂತಿರುಗಿ.
08:00 ಕಂಪೈಲ್ ಮಾಡೋಣ.
08:01 too few arguments to function ಇಂಟ್ add ಇಂಟ್ ಇಂಟ್ ಎಂದು ಹತ್ತನೇ ಸಾಲಿನಲ್ಲಿ ಎರರ್ ಅನ್ನು ನೋಡಬಹುದು,
08:11 ಪ್ರೊಗ್ರಾಮ್ ಗೆ ಹಿಂತಿರುಗಿ.
08:14 ಇಲ್ಲಿ ಇಂಟ್ a ಮತ್ತು ಇಂಟ್ b ಎಂದು ಎರಡು ಪ್ಯಾರಾಮೀಟರ್ ಇರುವುದನ್ನು ನೋಡಬಹುದು.
08:22 ಮತ್ತು, ಇಲ್ಲಿ ನಾವು ಒಂದೇ ಪಾರಾಮೀಟರ್ ಅನ್ನು ಪಾಸ್ ಮಾಡುತ್ತಿದ್ದೇವೆ.
08:25 ಹಾಗಾಗಿ ಇದು ಎರರ್ ಕೊಡುತ್ತಿದೆ.
08:27 ಎರರ್ ಅನ್ನು ಸರಿಪಡಿಸೋಣ.
08:29 ನಾಲ್ಕನ್ನು ಟೈಪ್ ಮಾಡಿ.
08:31 Save ಒತ್ತಿ.
08:34 ಟರ್ಮಿನಲ್ ಗೆ ಹಿಂತಿರುಗಿ.
08:36 ಮತ್ತೆ ಎಕ್ಸಿಕ್ಯೂಟ್ ಮಾಡೋಣ.
08:39 ಹೌದು ಇದು ಕೆಲಸ ಮಾಡುತ್ತಿದೆ.
08:42 ನಮ್ಮ ಸ್ಲೈಡ್ ಗೆ ಹಿಂತಿರುಗಿ.
08:44 ಸಾರಾಂಶ ತಿಳಿಯೋಣ. ಈ ಟ್ಯುಟೋರಿಯಲ್ ನಲ್ಲಿ ನಾವು ತಿಳಿದ ಅಂಶಗಳು
08:49 ಫಂಕ್ಷನ್, ಫಂಕ್ಷನ್ ನ ಸಿಂಟಾಕ್ಸ್
08:51 ಫಂಕ್ಷನ್ ವಿತೌಟ್ ಆರ್ಗ್ಯುಮೆಂಟ್ಸ್
08:53 ಉದಾಹರಣೆಗೆ ವಾಯ್ಡ್ ad, ಮತ್ತು
08:55 ಫಂಕ್ಷನ್ ವಿತ್ ಆರ್ಗ್ಯುಮೆಂಟ್ಸ್
08:57 ಉದಾಹರಣೆಗೆ ಇಂಟ್ add ಇಂಟ್ a ಇಂಟ್ b.
09:02 ಅಸೈನ್ಮೆಂಟ್ ಆಗಿ, ಒಂದು ಸಂಖ್ಯೆಯ ಸ್ಕ್ವೇರ್ ಅನ್ನು ಕಂಡುಹಿಡಿಯಲು ಪ್ರೊಗ್ರಾಮ್ ಬರೆಯಿರಿ.
09:07 ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋವನ್ನು ನೋಡಿರಿ.
09:11 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಅನ್ನು ವಿವರಿಸುತ್ತದೆ.
09:14 ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲದಿದ್ದಲ್ಲಿ ನೀವು ಇದನ್ನು ಡೌನ್ ಲೋಡ್ ಮಾಡಿ ನೋಡಬಹುದು.
09:18 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್,
09:21 ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಗಾರವನ್ನು ನಡೆಸುತ್ತದೆ.
09:24 ಆನ್ ಲೈನ್ ಟೆಸ್ಟ್ ನಲ್ಲಿ ತೇರ್ಗಡೆಹೊಂದಿದವರಿಗೆ ಸರ್ಟಿಫಿಕೇಟ್ ಕೊಡುತ್ತದೆ.
09:28 ಹೆಚ್ಚಿನ ಮಾಹಿತಿಗಾಗಿ, ಕಾಂಟಾಕ್ಟ್ ಆಟ್ (at)ಸ್ಪೋಕನ್ ಹೈಫನ್ (-) ಟ್ಯುಟೋರಿಯಲ್ ಡಾಟ್ ಆರ್ಗ್ ಗೆ ಬರೆಯಿರಿ.
09:35 ಸ್ಪೋಕನ್ ಟ್ಯುಟೋರಿಯಲ್, ಟಾಕ್ ಟು ಎ ಟೀಚರ್ ಪ್ರೊಜಕ್ಟ್ ನ ಒಂದು ಭಾಗವಾಗಿದೆ.
09:40 ಇದು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯಿಂದ ಬೆಂಬಲಿತವಾಗಿದೆ.
09:47 ಈ ನಿಯೋಗದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯು ಕೆಳಗಿನ ಲಿಂಕ್ ನಲ್ಲಿ ದೊರೆಯುತ್ತದೆ.
09:52 ಈ ಟ್ಯುಟೋರಿಯಲ್ ನ ಅನುವಾದಕಿ ಚೇತನಾ. ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. ಧನ್ಯವಾದಗಳು.

Contributors and Content Editors

PoojaMoolya, Vasudeva ahitanal