Blender/C2/Types-of-Windows-User-Preference/Kannada

From Script | Spoken-Tutorial
Jump to: navigation, search
Time
Narration
00:02 ಬ್ಲೆಂಡರ್ನ ಟ್ಯುಟೋರಿಯಲ್ಸ್ ಸರಣಿಗೆ ಸ್ವಾಗತ.
00:05 ಈ ಟ್ಯುಟೋರಿಯಲ್ ಬ್ಲೆಂಡರ್ 2.59 ನಲ್ಲಿಯ ಯೂಜರ್ ಪ್ರಿಫರೆನ್ಸಿಸ್ ವಿಂಡೋ ಕುರಿತು ಇರುತ್ತದೆ.
00:12 ಈ ಸ್ಕ್ರಿಪ್ಟ್ ನ ಅನುವಾದಕಿ ಐ ಐ ಟಿ ಬಾಂಬೆಯಿಂದ ಸಂಧ್ಯಾ ಪುಣೇಕರ್.
00:22 ಈ ಟ್ಯುಟೋರಿಯಲ್ ನೋಡಿದ ನಂತರ, ಯೂಜರ್ ಪ್ರಿಫರೆನ್ಸಿಸ್ ವಿಂಡೋ ಎಂದರೆ ಏನು;
00:30 ಯೂಜರ್ ಪ್ರಿಫರೆನ್ಸಿಸ್ ವಿಂಡೋ ನಲ್ಲಿ ಲಭ್ಯವಿರುವ ವಿವಿಧ ಆಯ್ಕೆಗಳು
00:36 ಮತ್ತು ಯೂಜರ್ ಪ್ರಿಫರೆನ್ಸಿಸ್ ವಿಂಡೋವನ್ನು ಬಳಸಿ ಬ್ಲೆಂಡರ್ ಇಂಟರ್ಫೇಸ್ ಅನ್ನು ಕಸ್ಟಮೈಜ್ ಹೇಗೆ ಮಾಡುವದು ಎನ್ನುವದನ್ನು ನಾವು ಕಲಿಯಲಿದ್ದೇವೆ.
00:43 ಬ್ಲೆಂಡರ್ ಇಂಟರ್ಫೇಸ್ ನ ಮೂಲಭೂತ ಅಂಶಗಳ ಬಗೆಗೆ ನೀವು ತಿಳಿದಿರುವಿರಿ ಎಂದು ನಾನು ಭಾವಿಸುತ್ತೇನೆ.
00:48 ಇಲ್ಲದಿದ್ದಲ್ಲಿ ದಯವಿಟ್ಟು ನಮ್ಮ ಮೊದಲಿನ ಟ್ಯುಟೋರಿಯಲ್-
00:52 Basic Description of the Blender Interface (ಬೇಸಿಕ್ ಡಿಸ್ಕ್ರಿಪ್ಶನ್ ಆಫ್ ದ ಬ್ಲೆಂಡರ್ ಇಂಟರ್ಫೇಸ್) ಅನ್ನು ನೋಡಿರಿ.
00:58 ಬ್ಲೆಂಡರ್ ಇಂಟರ್ಫೇಸ್ ನ ಮೇಲಿನ ಎಡ ಮೂಲೆಯಲ್ಲಿರುವ File ಗೆ ಹೋಗಿರಿ.
01:05 File ಅನ್ನು ಓಪನ್ ಮಾಡಲು ಲೆಫ್ಟ್ ಕ್ಲಿಕ್ ಮಾಡಿರಿ.
01:08 ‘ಫೈಲ್ ಬ್ರೌಜರ್ ಆಂಡ್ ಇನ್ಫೊ ಪ್ಯಾನೆಲ್’ ಎನ್ನುವ ಟ್ಯುಟೋರಿಯಲ್ ನಲ್ಲಿ ಈಗಾಗಲೇ ವಿವರಿಸಿದಂತೆ ಇಲ್ಲಿ ಆಯ್ಕೆಗಳ ಒಂದು ಲಿಸ್ಟ್ ಇದೆ.
01:19 User Preferences ಅನ್ನು ಆರಿಸಿಕೊಳ್ಳಿ.
01:22 ಕೀಬೋರ್ಡ್ ಶಾರ್ಟ್ಕಟ್ ಗಾಗಿ Ctrl, Alt & U ಒತ್ತಿರಿ.
01:32 ಇದು ಯೂಜರ್ ಪ್ರಿಫರೆನ್ಸಿಸ್ ವಿಂಡೋ ಆಗಿದೆ.
01:38 ಯೂಜರ್ ಪ್ರಿಫರೆನ್ಸಿಸ್ ವಿಂಡೋ ದ ಮೇಲಿನ ಎಡ ಮೂಲೆಯಲ್ಲಿರುವ Interface ಗೆ ಹೋಗಿ.
01:45 ಬ್ಲೆಂಡರ್ ಇಂಟರ್ಫೇಸ್ ಅನ್ನು ಕಸ್ಟಮೈಜ್ ಮಾಡಲು ಇದು ಹಲವಾರು ಆಯ್ಕೆಗಳನ್ನು ಒಳಗೊಂಡಿದೆ.
01:50 ಮೂಲಭೂತ ಅಗತ್ಯವಾದ ಆಯ್ಕೆಗಳು ಈಗಾಗಲೇ ಡಿಫಾಲ್ಟ್ ಆಗಿ ಸಕ್ರಿಯವಾಗಿವೆ.
01:56 3D ವ್ಯೂ ನ ಕೆಳಗಿನ ಎಡ ಮೂಲೆಯಲ್ಲಿ ಇರುವ ಮಿನಿ ಆಕ್ಸಿಸ್ ನ ಸೈಜ್ ಅನ್ನು ಈ Display mini axis ಎನ್ನುವುದು ನಿಯಂತ್ರಿಸುತ್ತದೆ.
02:05 ಈ ಡಿಫಾಲ್ಟ್ ಸೈಜ್ 25 ಆಗಿದೆ.
02:09 ಉತ್ತಮ ವೀಕ್ಷಣೆಯ ಉದ್ದೇಶದಿಂದ ನಾನು size 60 ಯನ್ನು ಬ್ಲೆಂಡರ್ ಟ್ಯುಟೋರಿಯಲ್ಸ್ ಸರಣಿಯಲ್ಲಿ ಉಪಯೋಗಿಸುತ್ತಿದ್ದೇನೆ.
02:16 ನಾನು ತೋರಿಸುತ್ತೇನೆ.
02:18 ಯೂಜರ್ ಪ್ರಿಫರೆನ್ಸಿಸ್ ವಿಂಡೋ ಕ್ಲೋಸ್ ಮಾಡಿ.
02:24 3D ವ್ಯೂ ದ ಕೆಳಗಿನ ಎಡ ಮೂಲೆಯಲ್ಲಿ ನಾವು ಮಿನಿ ಆಕ್ಸಿಸ್ ಅನ್ನು ನೋಡಬಹುದು.
02:32 ಈ ಮಿನಿ ಆಕ್ಸಿಸ್ ಬ್ಲೆಂಡರ್ ನಲ್ಲಿ 3D ಸ್ಪೇಸ್ ನ ಗ್ಲೋಬಲ್ ಟ್ರಾನ್ಸ್ಫಾರ್ಮ್ ಆಕ್ಸಿಸ್ ಅನ್ನು ಪ್ರತಿನಿಧಿಸುತ್ತದೆ.
02:40 ಬ್ಲೆಂಡರ್ ನಲ್ಲಿ ಅನಿಮೇಶನ್ ಮಾಡುವಾಗ ಇದು ಉಪಯುಕ್ತವಾಗಿದೆ..
02:44 ಗ್ಲೋಬಲ್ ಮತ್ತು ಲೋಕಲ್ ಟ್ರಾನ್ಸ್ಫಾರ್ಮ್ ಆಕ್ಸಿಸ್ ಗಳ ಕುರಿತು ಮುಂದಿನ ಟ್ಯುಟೋರಿಯಲ್ ಗಳಲ್ಲಿ ನಾವು ವಿವರವಾಗಿ ಚರ್ಚಿಸುವೆವು.
02:52 ಯೂಜರ್ ಪ್ರಿಫರೆನ್ಸಿಸ್ ವಿಂಡೋ ಅನ್ನು ಓಪನ್ ಮಾಡಲು Ctrl, Alt & U ಒತ್ತಿರಿ.
03:00 Rotate around selection ಅನ್ನು ಆಕ್ಟಿವೇಟ್ ಮಾಡಿ.
03:06 ಆಯ್ಕೆಯಾದ ಆಬ್ಜೆಕ್ಟ್ ನ ಕೇಂದ್ರದ ಸುತ್ತ ಪರಿಭ್ರಮಿಸಲು ಇದು ನಿಮಗೆ ಅನುವು ಮಾಡಿಕೊಡುತ್ತದೆ.
03:12 ಹೀಗೆಂದರೆ ಏನು ಎಂದು ನಾವು ನೋಡೋಣ.
03:15 ಯೂಜರ್ ಪ್ರಿಫರೆನ್ಸಿಸ್ ವಿಂಡೋ ಅನ್ನು ಕ್ಲೋಸ್ ಮಾಡಿ.
03:19 ಈ 3D ವ್ಯೂ ನಲ್ಲಿಯ lamp ನ ಮೇಲೆ ರೈಟ್ ಕ್ಲಿಕ್ ಮಾಡಿ.
03:27 ಮೌಸ್ನ ವೀಲ್ ಅಥವಾ ಮೌಸ್ ನ ಮಧ್ಯದ ಬಟನ್ ನ್ನು ಒತ್ತಿ ಹಿಡಿಯಿರಿ ಮತ್ತು ನಿಮ್ಮ ಮೌಸ್ ನ್ನು ತಿರುಗಿಸಿರಿ.
03:35 ನಾವು ಆಯ್ಕೆಯಾದ ಆಬ್ಜೆಕ್ಟ್ ನ ಸುತ್ತಲೂ ಪ್ರದಕ್ಷಿಣೆ ಹಾಕುತ್ತಿದ್ದೇವೆ.
03:42 ಹೀಗೆಯೇ Camera ದ ಮೇಲೆ ರೈಟ್ ಕ್ಲಿಕ್ ಮಾಡಿ.
03:47 ಮೌಸ್ ನ ವೀಲ್ ಅಥವಾ ಮೌಸ್ ನ ಮಧ್ಯದ ಬಟನ್ ನ್ನು ಒತ್ತಿ ಹಿಡಿಯಿರಿ ಮತ್ತು ನಿಮ್ಮ ಮೌಸ್ ನ್ನು ತಿರುಗಿಸಿರಿ.
03:55 ಈಗ ನಾವು ಕ್ಯಾಮೆರಾದ ಸುತ್ತಲೂ ತಿರುಗುತ್ತಿದ್ದೇವೆ.
04:03 ಯೂಜರ್ ಪ್ರಿಫರೆನ್ಸಿಸ್ ವಿಂಡೋ ಓಪನ್ ಮಾಡಲು Ctrl, Alt & U ಒತ್ತಿರಿ.
04:10 Editing ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ.
04:14 ಆಬ್ಜೆಕ್ಟ್ ಎಡಿಟಿಂಗ್ ಮೋಡ್ ಅಥವಾ ಎಡಿಟ್ ಮೋಡ್ ನಲ್ಲಿ ಬ್ಲೆಂಡರ್ ನ ವರ್ತನೆಯನ್ನು ಪ್ರತಿಬಿಂಬಿಸುವ ಪ್ಯಾರಾಮೀಟರ್ ಗಳನ್ನು ಇದು ಒಳಗೊಂಡಿದೆ.
04:24 ಮತ್ತೆ, ಮೂಲಭೂತ ಆಯ್ಕೆಗಳು ಈಗಾಗಲೇ ಡಿಫಾಲ್ಟ್ ಆಗಿ ಸಕ್ರಿಯವಾಗಿವೆ.
04:32 ಎಡಿಟಿಂಗ್ ಮಾಡುವಾಗ ಬೇಕಾಗಬಹುದಾದ ಅನ್-ಡು ಹಂತಗಳ ಸಂಖ್ಯೆಯನ್ನು Global undo ಹೆಚ್ಚು/ಕಡಿಮೆ ಮಾಡುತ್ತದೆ.
04:44 Input ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿ.
04:46 ಬ್ಲೆಂಡರ್ ನಲ್ಲಿ ಉಪಯೋಗಿಸಿದ ಎಲ್ಲ ಕೀಬೋರ್ಡ್ ಶಾರ್ಟ್ಕಟ್ ಗಳನ್ನು ಇಲ್ಲಿ ನಾವು ಕಸ್ಟಮೈಜ್ ಮಾಡಬಹುದು.
04:53 Emulate 3-button mouse, ಬ್ಲೆಂಡರ್ ನಲ್ಲಿ ನಿಮ್ಮ 2-ಬಟನ್ ಮೌಸ್ ನ್ನು 3- ಬಟನ್ ಮೌಸ್ ನ ಹಾಗೆ ವರ್ತಿಸುವಂತೆ ಮಾಡುವುದು.
05:04 Select with, ನಿಮ್ಮ ಮೌಸ್ ನ ಸೆಲೆಕ್ಟ್ ಮಾಡುವ ಆಯ್ಕೆಯನ್ನು ಬಲಗಡೆಯಿಂದ ಎಡಕ್ಕೆ ಬದಲಿಸಬಲ್ಲದು.
05:12 ಇದು ಎಡಚ ಬಳಕೆದಾರರಿಗೆ (left hand user) ಉಪಯುಕ್ತವಾಗಿದೆ.
05:19 Emulate numpad, ಇದು ನಿಮ್ಮ ಕೀಬೋರ್ಡ್ ಮೇಲಿನ ನಂಬರ್ ಕೀಗಳು ಬ್ಲೆಂಡರ್ ನಲ್ಲಿಯ ನಂಪ್ಯಾಡ್ ಕೀಗಳ ಹಾಗೆ ವರ್ತಿಸುವಂತೆ ಮಾಡುವುದು.
05:29 ಕೀಬೋರ್ಡ್ ಮೇಲೆ ಪ್ರತ್ಯೇಕ ನಂಪ್ಯಾಡ್ ಇಲ್ಲದಿರುವ ಲ್ಯಾಪ್ಟಾಪ್ ನ ಬಳಕೆದಾರರಿಗೆ ಇದು ಉಪಯುಕ್ತವಾಗಿದೆ.
05:41 Add-ons ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ.
05:43 ಇದು ಬ್ಲೆಂಡರ್ ನಲ್ಲಿಯ ಪ್ಲಗ್-ಇನ್ ಗಳ ಲಿಸ್ಟನ್ನು ಒಳಗೊಂಡಿದೆ.
05:49 Enabled ದ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ.
05:52 ಕೆಲವು ಪ್ಲಗ್-ಇನ್ ಗಳು ಡಿಫಾಲ್ಟ್ ಆಗಿ ಸಕ್ರಿಯವಾಗಿವೆ.
05:55 ಬೇರೆ ಪ್ಲಗ್-ಇನ್ ಗಳನ್ನು ಅವುಗಳ ವೆಬ್ಸೈಟ್ ನಿಂದ ಇನ್ಸ್ಟಾಲ್ ಮಾಡಬಹುದು.
06:00 ಉದಾಹರಣೆಗೆ, ನಾವು ಕ್ಲೌಡ್ ಕ್ರಿಯೇಟಿಂಗ್ ಗಾಗಿ ಒಂದು ಪ್ಲಗ್-ಇನ್ ಇನ್ಸ್ಟಾಲ್ ಮಾಡೋಣ.
06:07 Object ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ.
06:11 Object ನ ಬದಿಯಲ್ಲಿರುವ ತ್ರಿಕೋನದ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ : Cloud generator ಗೆ ಹೋಗಿ.
06:19 link to wiki ಯ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ.
06:23 ಈ ಲಿಂಕ್ ನಮ್ಮ ಇಂಟರ್ನೆಟ್ ಬ್ರೌಜರ್ ಮೇಲೆ ಒಂದು ವೆಬ್ ಪೇಜ್ ನ್ನು ಓಪನ್ ಮಾಡುತ್ತದೆ.
06:29 ನಾನು Firefox 3.09 ಇಂಟರ್ನೆಟ್ ಬ್ರೌಜರ್ ಅನ್ನು ಉಪಯೋಗಿಸುತ್ತಿದ್ದೇನೆ.
06:35 ಇಲ್ಲಿ ನಾವು ಬ್ಲೆಂಡರ್ ಗಾಗಿ ಕ್ಲೌಡ್ ಜನರೇಟರ್ ಪ್ಲಗ್-ಇನ್ ಅನ್ನು ಡೌನ್ಲೋಡ್ ಮತ್ತು ಇನ್ಸ್ಟಾಲ್ ಮಾಡಬಹುದು.
06:42 ಈ ಪೇಜ್ ನಲ್ಲಿರುವ ಸೂಚನೆಗಳನ್ನು ಹಾಗೆಯೇ ಅನುಸರಿಸಿರಿ.
06:47 ಇಲ್ಲಿ ತೋರಿಸಿದ ಹಂತಗಳು ಎಲ್ಲ ಇಂಟರ್ನೆಟ್ ಬ್ರೌಜರ್ ಗಳಲ್ಲಿ ಇದೇ ತರಹ ಇರುತ್ತವೆ.
06:56 Theme ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ.
06:59 ಬ್ಲೆಂಡರ್ ಇಂಟರ್ಫೇಸ್ ನಲ್ಲಿಯ ಪ್ರತಿಯೊಂದು ಪ್ಯಾನೆಲ್ ನ

ಬಣ್ಣವನ್ನು ಇಲ್ಲಿ ನೀವು ಬದಲಿಸಬಹುದು.

07:09 ಉದಾಹರಣೆಗೆ, Timeline ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ.
07:14 ಇಲ್ಲಿ ನೀವು Current frame ನ ಸೂಚಕದ, Grid ಮತ್ತು ಬೇರೆ ಎಲ್ಲ ಲಕ್ಷಣಗಳ ಬಣ್ಣವನ್ನು ಸಹ ನೋಡಬಹುದು,
07:24 ಕರೆಂಟ್ ಫ್ರೇಮ್ ನ ಬದಿಯಲ್ಲಿರುವ ಗ್ರೀನ್ ಬಾರ್ ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ.
07:30 ಇದು ಬ್ಲೆಂಡರ್ನಲ್ಲಿ ಕಲರ್ ಮೋಡ್ ವಿಂಡೋ ಆಗಿದೆ.
07:38 ಇಲ್ಲಿ ಹಸಿರು ಪ್ರದೇಶದ ಮೇಲಿರುವ ವೈಟ್ ಡಾಟ್ Current frame ಸೂಚಕದ ಬಣ್ಣವನ್ನು ನಿಯಂತ್ರಿಸುತ್ತದೆ.
07:45 ನಾನು ಇದನ್ನು ಕೆಂಪು ಬಣ್ಣಕ್ಕೆ ಬದಲಾಯಿಸುತ್ತಿದ್ದೇನೆ.
07:49 white dot ಮೇಲೆ ಲೆಫ್ಟ್ ಕ್ಲಿಕ್ ಮಾಡಿ ಹಿಡಿದು ನಿಮ್ಮ ಮೌಸ್ ಅನ್ನು ಕೆಂಪು ವರ್ಣದ ಪ್ರದೇಶಕ್ಕೆ ಎಳೆದು ತನ್ನಿ.
07:58 ಲೆಫ್ಟ್ ಕ್ಲಿಕ್ ಅನ್ನು ಬಿಟ್ಟುಬಿಡಿ.
08:01 RGB ಯ ಮೌಲ್ಯಗಳು ಸಹ ಹೇಗೆ ಬದಲಾಯಿಸಿವೆ ಎಂಬುದನ್ನು ಗಮನಿಸಿ.
08:07 ಈ ರೀತಿಯಲ್ಲಿ ಲಿಸ್ಟ್ ಮಾಡಿದ ಬೇರೆ ಆಯ್ಕೆಗಳ ಬಣ್ಣವನ್ನು ಸಹ ನಾವು ಬದಲಾಯಿಸಬಹುದು.
08:15 File ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ.
08:20 ನಮ್ಮ ಸಿಸ್ಟೆಮ್ ನ Fonts, Textures, Plugins, Render output, Scripts, Sounds ಮುಂತಾದವುಗಳಿಗೆ ಇಲ್ಲಿ ನಾವು ಸ್ಥಳವನ್ನು ಹೊಂದಿಸಬಹುದು.
08:38 ನಾವು Fonts ಗಾಗಿ ಸ್ಥಳವನ್ನು ಹೊಂದಿಸೋಣ.
08:42 ಮೊದಲನೆಯ ಆಯತಾಕಾರದ ಪಟ್ಟಿಯ ಬಲತುದಿಯಲ್ಲಿರುವ file ಐಕಾನ್ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ.
08:53 ಒಂದು ಫೈಲ್ ಬ್ರೌಜರ್ ಓಪನ್ ಆಗುತ್ತದೆ.
08:56 ಡಿಫಾಲ್ಟ್ ಆಗಿ ನಾವು ಲೋಕಲ್ C ಡ್ರೈವ್ ಡಿರೆಕ್ಟರಿಯಲ್ಲಿ ಇದ್ದೇವೆ.
09:02 windows ಡಿರೆಕ್ಟರಿಯ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ.
09:07 Fonts ವರೆಗೆ ಹೋಗಲು ನೇವಿಗೇಟ್ ಮಾಡಿರಿ.
09:11 ಸ್ಕ್ರೀನ್ ನ ಮೇಲಿನ ಬಲಮೂಲೆಯಲ್ಲಿರುವ Accept ದ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ.
09:19 ಮೊದಲನೆಯ ಆಯತಾಕಾರದ ಪಟ್ಟಿಯ ಮೇಲೆ ಒಂದು ‘ಪಾಥ್’ ಕಾಣಿಸಿಕೊಂಡಿದೆ.
09:25 ನಮ್ಮ ಸಿಸ್ಟೆಮ್ ನಲ್ಲಿ ಫೊಂಟ್ಸ್ ಗಾಗಿ ಎಲ್ಲಿ ನೋಡಬೇಕೆಂದು ಬ್ಲೆಂಡರ್ ಗೆ ಈಗ ತಿಳಿದಿದೆ.
09:32 ಹೀಗೆಯೇ, ಎರಡನೇಯ ಆಯತಾಕಾರದ ಪಟ್ಟಿಯ ಬಲತುದಿಯಲ್ಲಿರುವ file ಐಕಾನ್ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ.
09:40 ಮತ್ತೊಮ್ಮೆ ಫೈಲ್ ಬ್ರೌಜರ್ ಓಪನ್ ಆಗುತ್ತದೆ.
09:43 ಫೊಂಟ್ಸ್ ಗಾಗಿ ಮಾಡಿದಂತೆ ಈಗ ಟೆಕ್ಸ್ಚರ್ಸ್ ಗಾಗಿ ನಮ್ಮ ಸಿಸ್ಟೆಮ್ ನಲ್ಲಿ ನಾವು ಸ್ಥಳವನ್ನು ಹೊಂದಿಸಬಹುದು.
09:52 ಟೆಕ್ಸ್ಚರ್ಸ್ ಗಾಗಿ ಸ್ಥಳವನ್ನು ಆಯ್ಕೆ ಮಾಡದೆಯೇ ಈ ಫೈಲ್ ಬ್ರೌಜರ್ ನಿಂದ ನನಗೆ ಹೊರಗೆ ಬರಬೇಕಾಗಿದ್ದರೆ?
10:00 ಯೂಜರ್ ಪ್ರಿಫರೆನ್ಸಿಸ್ ವಿಂಡೋ ಗೆ ಮರಳಿ ಬರಲು ಸ್ಕ್ರೀನ್ ನ ಮೇಲ್ಗಡೆ Help ನ ಬದಿಯಲ್ಲಿರುವ Back to previous ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ.ಎರಡನೆಯ ಆಯತಾಕಾರದ ಪಟ್ಟಿಯಲ್ಲಿ ಯಾವ ‘ಪಾಥ್’ ಸಹ ಕಾಣಿಸುತ್ತಿಲ್ಲ ಏಕೆಂದರೆ ನಾನು ಒಂದನ್ನೂ ಆಯ್ಕೆ ಮಾಡಲಿಲ್ಲ.
10:20 System ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ.
10:23 ಇಲ್ಲಿ ನಾವು ಉಪಯೋಗಿಸುತ್ತಿರುವ ಕಂಪ್ಯೂಟರ್ ನ ಪ್ರಾಪರ್ಟೀಸ್ ಗೆ ಅನುಸಾರವಾಗಿ ಬ್ಲೆಂಡರ್ ಸೆಟ್ಟಿಂಗ್ಸ್ ಅನ್ನು ಕಸ್ಟಮೈಜ್ ಮಾಡಬಹುದು.
10:29 ಬ್ಲೆಂಡರ್ ನಲ್ಲಿ DPI ಫೊಂಟ್ ಸೈಜ್ ಮತ್ತು ಡಿಸ್ಪ್ಲೇ ಗಾಗಿ ರೆಸೆಲ್ಯೂಶನ್ ಅನ್ನು ಬದಲಾಯಿಸುತ್ತದೆ.
10:36 ಬ್ಲೆಂಡರ್ ನಲ್ಲಿ ಡಿಫಾಲ್ಟ್ ಆಗಿ DPI 72 ಆಗಿದೆ.
10:42 ಉತ್ತಮ ವೀಕ್ಷಣೆಯ ಉದ್ದೇಶದಿಂದ ಬ್ಲೆಂಡರ್ ಟ್ಯುಟೋರಿಯಲ್ಸ್ ನ ಸರಣಿಯಲ್ಲಿ ನಾನು DPI:90 ಅನ್ನು ಬಳಸುತ್ತಿದ್ದೇನೆ.
10:52 ಬ್ಲೆಂಡರ್ ಇಂಟರ್ಫೇಸ್ ನಲ್ಲಿ, ಕೆಳಗಿನ ಎಡ ಮೂಲೆಯಲ್ಲಿರುವ Save as default ಎನ್ನುವುದು, ನಮ್ಮ ಕಸ್ಟಮೈಜ್ ಮಾಡಿದ ಬದಲಾವಣೆಗಳನ್ನು ಸೇವ್ ಮಾಡಲು ಬಳಸಲ್ಪಡುತ್ತದೆ.
11:01 ಕೀಬೋರ್ಡ್ ಶಾರ್ಟ್ಕಟ್ ಗಾಗಿ Ctrl & U ಒತ್ತಿ.
11:07 ಹೀಗೆ, ಇದು ಯೂಜರ್ ಪ್ರಿಫರೆನ್ಸಿಸ್ ವಿಂಡೋ ಕುರಿತಾದ ಮೂಲಭೂತ ಮಾಹಿತಿ ಆಗಿತ್ತು.
11:13 ಇವುಗಳ ಹೊರತು ಯೂಜರ್ ಪ್ರಿಫರೆನ್ಸಿಸ್ ವಿಂಡೋನಲ್ಲಿ ಇರುವ ಬೇರೆ ಆಯ್ಕೆಗಳನ್ನು ನಂತರದ ಟ್ಯುಟೋರಿಯಲ್ ಗಳಲ್ಲಿ ಚರ್ಚಿಸಲಾಗುವದು.
11:25 ಈಗ ಕೀಬೋರ್ಡ್ ಶಾರ್ಟ್ಕಟ್ ಅನ್ನು ಉಪಯೋಗಿಸಿ ಬ್ಲೆಂಡರ್ ನಲ್ಲಿ ಯೂಜರ್ ಪ್ರಿಫರೆನ್ಸಿಸ್ ವಿಂಡೋ ವನ್ನು ಓಪನ್ ಮಾಡಲು ಪ್ರಯತ್ನಿಸಿ.
11:33 ನಂತರ, Rotate around Selection ಅನ್ನು ಉಪಯೋಗಿಸಿ 3D ವ್ಯೂ ನಲ್ಲಿ ಕ್ಯೂಬ್ ಅನ್ನು ಭ್ರಮಣದ ಕೇಂದ್ರವನ್ನಾಗಿ ಮಾಡಿ.
11:42 ಬ್ಲೆಂಡರ್ ಗಾಗಿ ಕ್ಲೌಡ್ ಜನರೇಟರ್ ಪ್ಲಗ್-ಇನ್ ಅನ್ನು ಇನ್ಸ್ಟಾಲ್ ಮಾಡಿರಿ.
11:47 ನಿಮ್ಮ ಕಂಪ್ಯೂಟರ್ ನಲ್ಲಿ, ಟೈಮ್ಲೈನ್ ನಲ್ಲಿಯ ಕರೆಂಟ್ ಫ್ರೇಮ್ ಸೂಚಕದ ಬಣ್ಣವನ್ನು ಬದಲಾಯಿಸಿ ಮತ್ತು ರೆಂಡರ್ ಔಟ್ಪುಟ್ ಗಾಗಿ ಸ್ಥಳವನ್ನು ಹೊಂದಿಸಿರಿ.
11:57 ನಿಮಗೆ ಶುಭವಾಗಲಿ !!
12:02 ಮತ್ತು ಇಲ್ಲಿಗೆ ಯೂಜರ್ ಪ್ರಿಫರೆನ್ಸಿಸ್ ಟ್ಯುಟೋರಿಯಲ್ ಮುಕ್ತಾಯವಾಗುತ್ತದೆ.
12:10 ಈ ಟ್ಯುಟೋರಿಯಲ್ ರಾಷ್ಟ್ರೀಯ ಸಾಕ್ಷರತಾ ಮಿಶನ್, ICT ಯ ಆಧಾರದಿಂದ ಮತ್ತು Project Oscar ಅವರಿಂದ ತಯಾರಿಸಲ್ಪಟ್ಟಿದೆ.
12:19 ಇದರ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ಗಳ ಮೇಲೆ ಲಭ್ಯವಿದೆ.
12:23 oscar.iitb.ac.in ಮತ್ತು spoken-tutorial.org/NMEICT-Intro.
12:39 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು
12:41 ಸ್ಪೋಕನ್ ಟ್ಯುಟೋರಿಯಲ್ಸ್ ಬಳಸಿಕೊಂಡು ಕಾರ್ಯಶಾಲೆಗಳನ್ನು ನಡೆಸುತ್ತದೆ.
12:45 ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
12:50 ಹೆಚ್ಚಿನ ವಿವರಗಳಿಗೆ ದಯವಿಟ್ಟು contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
12:59 ಇದರ ಪ್ರವಾಚಕ ಐ ಐ ಟಿ ಬಾಂಬೆ ಯಿಂದ ವಾಸುದೇವ. ಧನ್ಯವಾದಗಳು.

Contributors and Content Editors

Pratik kamble, Vasudeva ahitanal