Blender/C2/Types-of-Windows-Properties-Part-5/Kannada

From Script | Spoken-Tutorial
Jump to: navigation, search
Time Narration
00:04 ಬ್ಲೆಂಡರ್ ನ ಟ್ಯುಟೋರಿಯಲ್ಸ್ ಸರಣಿಗೆ ಸ್ವಾಗತ.
00:08 ಈ ಟ್ಯುಟೋರಿಯಲ್, ಬ್ಲೆಂಡರ್ 2.59 ನಲ್ಲಿಯ ಪ್ರಾಪರ್ಟೀಸ್ ವಿಂಡೋ ಕುರಿತು ಆಗಿದೆ.
00:15 ಈ ಸ್ಕ್ರಿಪ್ಟ್ ನ ಅನುವಾದಕಿ ಐ ಐ ಟಿ ಬಾಂಬೆಯಿಂದ ಸಂಧ್ಯಾ ಪುಣೇಕರ್.
00:28 ಈ ಟ್ಯುಟೋರಿಯಲ್ ಅನ್ನು ನೋಡಿದ ನಂತರ, ಪ್ರಾಪರ್ಟೀಸ್ ವಿಂಡೋ ಎಂದರೇನು;
00:33 ಪ್ರಾಪರ್ಟೀಸ್ ವಿಂಡೋದಲ್ಲಿ ಟೆಕ್ಸ್ಚರ್ ಪ್ಯಾನಲ್ ಎಂದರೇನು ;
00:38 ಮತ್ತು ಪ್ರಾಪರ್ಟೀಸ್ ವಿಂಡೋದ ಟೆಕ್ಸ್ಚರ್ ಪ್ಯಾನಲ್ ನಲ್ಲಿ ಇರುವ ವಿವಿಧ ಸೆಟ್ಟಿಂಗ್ ಗಳು ಯಾವುವು, ಇತ್ಯಾದಿಗಳ ಬಗೆಗೆ ನಾವು ಕಲಿಯುವೆವು.
00:45 ಬ್ಲೆಂಡರ್ ಇಂಟರ್ಫೇಸ್ ನ ಮೂಲ ಅಂಶಗಳನ್ನು ನೀವು ತಿಳಿದಿರುವಿರಿ ಎಂದು ನಾನು ಭಾವಿಸುತ್ತೇನೆ.
00:50 ಇಲ್ಲವಾದಲ್ಲಿ, ದಯವಿಟ್ಟು ನಮ್ಮ ಮೊದಲಿನ ಟ್ಯುಟೋರಿಯಲ್ Basic Description of the Blender Interface (ಬೇಸಿಕ್ ಡಿಸ್ಕ್ರಿಪ್ಶನ್ ಆಫ್ ದ ಬ್ಲೆಂಡರ್ ಇಂಟರ್ಫೇಸ್) ಎನ್ನುವುದನ್ನು ನೋಡಿರಿ.
00:58 ಈ ಪ್ರಾಪರ್ಟೀಸ್ ವಿಂಡೋ ಎನ್ನುವುದು ನಮ್ಮ ಸ್ಕ್ರೀನ್ ನ ಬಲಬದಿಗೆ ಇರುತ್ತದೆ.
01:04 ಪ್ರಾಪರ್ಟೀಸ್ ವಿಂಡೋದ ಮೊದಲಿನ ಕೆಲವು ಪ್ಯಾನಲ್ ಗಳು ಹಾಗೂ ಅವುಗಳ ಸೆಟ್ಟಿಂಗ್ ಗಳನ್ನು ಹಿಂದಿನ ಟ್ಯುಟೋರಿಯಲ್ ನಲ್ಲಿ ನಾವು ಈಗಾಗಲೇ ನೋಡಿದ್ದೇವೆ.
01:11 ಪ್ರಾಪರ್ಟೀಸ್ ವಿಂಡೋದಲ್ಲಿಯ ಮುಂದಿನ ಪ್ಯಾನಲ್ ಅನ್ನು ನಾವು ನೋಡೋಣ.
01:14 ಮೊದಲು, ಉತ್ತಮ ವೀಕ್ಷಣೆ ಮತ್ತು ಗ್ರಹಿಕೆಗಳಿಗಾಗಿ ನಮ್ಮ ಪ್ರಾಪರ್ಟೀಸ್ ವಿಂಡೋವನ್ನು ನಾವು ರಿಸೈಜ್ ಮಾಡಲೇಬೇಕು.
01:21 ಪ್ರಾಪರ್ಟೀಸ್ ವಿಂಡೋದ ಎಡ ಅಂಚಿನ ಮೇಲೆ ಲೆಫ್ಟ್ ಕ್ಲಿಕ್ ಮಾಡಿ ಹಿಡಿಯಿರಿ ಮತ್ತು ಎಡಗಡೆಗೆ ಎಳೆಯಿರಿ.
01:29 ಪ್ರಾಪರ್ಟೀಸ್ ವಿಂಡೋದಲ್ಲಿಯ ಆಯ್ಕೆಗಳನ್ನು ಈಗ ಹೆಚ್ಚು ಸ್ಪಷ್ಟವಾಗಿ ನಾವು ನೋಡಬಹುದು.
01:34 ಬ್ಲೆಂಡರ್ ನ ವಿಂಡೋ ಗಳನ್ನು ಹೇಗೆ ರಿಸೈಜ್ ಮಾಡುವದೆಂದು ತಿಳಿಯಲು, How to Change Window Types in Blender (ಹೌ ಟು ಚೇಂಜ್ ವಿಂಡೋ ಟೈಪ್ಸ್ ಇನ್ ಬ್ಲೆಂಡರ್) ಎನ್ನುವ ನಮ್ಮ ಟ್ಯುಟೋರಿಯಲ್ ನೋಡಿರಿ.
01:45 ಪ್ರಾಪರ್ಟೀಸ್ ವಿಂಡೋದ ಮೇಲಿನ ಸಾಲಿಗೆ ಹೋಗಿರಿ.
01:48 ಪ್ರಾಪರ್ಟೀಸ್ ವಿಂಡೋದ ಮೇಲಿನ ಸಾಲಿನಲ್ಲಿರುವ Checkered Square ಐಕಾನ್ ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ.
01:55 ಇದು Texture ಎನ್ನುವ ಪ್ಯಾನಲ್ ಆಗಿದೆ. ಇಲ್ಲಿ, ಆಕ್ಟಿವ್ ಒಬ್ಜೆಕ್ಟ್ ನ ಆಕ್ಟಿವ್ ಮೆಟೀರಿಯಲ್ ಗೆ ಟೆಕ್ಸ್ಚರ್ ಅನ್ನು ನಾವು ಸೇರಿಸಬಹುದು.
02:04 Texture ಎನ್ನುವ ಐಕಾನ್ ನ ಕೆಳಗೆ ನಾವು ಈ ಪ್ರದರ್ಶಿತ ಲಿಂಕ್ ಗಳನ್ನು ನೋಡಬಹುದು. Cube, White, Tex.
02:14 ಹೀಗೆಂದರೆ, ಕ್ಯೂಬ್ ಎನ್ನುವುದು ಆಕ್ಟಿವ್ ಒಬ್ಜೆಕ್ಟ್ ಆಗಿದೆ. White ಎನ್ನುವುದು ಕ್ಯೂಬ್ ನ ಆಕ್ಟಿವ್ ಮೆಟೀರಿಯಲ್ ಆಗಿದೆ.
02:23 Tex ಎನ್ನುವುದು ವೈಟ್ ಮೆಟೀರಿಯಲ್ ನ ಆಕ್ಟಿವ್ ಟೆಕ್ಸ್ಚರ್ ಆಗಿದೆ. ಇಲ್ಲಿ ಮೂರು ವಿಧದ ಟೆಕ್ಸ್ಚರ್ ಗಳಿವೆ -
02:32 Material Textures, World Textures ಮತ್ತು Brush Textures.
02:38 ಈ ಟ್ಯುಟೋರಿಯಲ್ ನಲ್ಲಿ ಮೆಟೀರಿಯಲ್ ಟೆಕ್ಸ್ಚರ್ಸ್ ಎನ್ನುವುದನ್ನು ನಾವು ನೋಡುವೆವು.
02:42 ನಂತರದ ಟ್ಯುಟೋರಿಯಲ್ ಗಳಲ್ಲಿ ವರ್ಲ್ಡ್ ಟೆಕ್ಸ್ಚರ್ಸ್ ಮತ್ತು ಬ್ರಶ್ ಟೆಕ್ಸ್ಚರ್ಸ್ ಗಳನ್ನು ವಿವರಿಸಲಾಗುವುದು.
02:49 ಇದು ಟೆಕ್ಸ್ಚರ್ ಸ್ಲಾಟ್ ಬಾಕ್ಸ್ ಎನ್ನುವುದು ಆಗಿದೆ. ಡೀಫಾಲ್ಟ್ ಆಗಿ, ಆಕ್ಟಿವ್ ಮೆಟೀರಿಯಲ್ ಗಾಗಿ ಒಂದು ಟೆಕ್ಸ್ಚರ್ ಅನ್ನು ಸಕ್ರಿಯಗೊಳಿಸಲಾಗಿದೆ. ಇದನ್ನು ಬ್ಲೂ ಬಣ್ಣದಲ್ಲಿ ಹೈಲೈಟ್ ಮಾಡಲಾಗಿದೆ.
03:00 ಹೈಲೈಟ್ ಮಾಡಲಾಗಿರುವ ಟೆಕ್ಸ್ಚರ್ ನ ಬಲತುದಿಯಲ್ಲಿರುವ check box ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ಈಗ ಟೆಕ್ಸ್ಚರ್ ಅನ್ನು ನಿಷ್ಕ್ರಿಯಗೊಳಿಸಲಾಗಿದೆ.
03:11 check box ನ ಮೇಲೆ ಮತ್ತೊಮ್ಮೆ ಲೆಫ್ಟ್ ಕ್ಲಿಕ್ ಮಾಡಿರಿ. ಇದು ಮತ್ತೆ ಸಕ್ರಿಯವಾಯಿತು. ಚೆಕ್ ಬಾಕ್ಸ್ ನ ಬದಿಗೆ ಒಂದು ವರ್ಟಿಕಲ್ ಸ್ಕ್ರೋಲ್ ಬಾರ್ ಇರುತ್ತದೆ.
03:25 ವರ್ಟಿಕಲ್ ಸ್ಕ್ರೋಲ್ ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿ ಹಿಡಿಯಿರಿ. ನಿಮ್ಮ ಮೌಸ್ ಅನ್ನು ಕೆಳಗಡೆಗೆ ಎಳೆಯಿರಿ.
03:32 ಸದ್ಯದ ಮೆಟೀರಿಯಲ್ ಗಾಗಿ ಲಭ್ಯವಿರುವ ಎಲ್ಲ ಟೆಕ್ಸ್ಚರ್ ಸ್ಲಾಟ್ ಗಳನ್ನು ಈಗ ನೀವು ನೋಡಬಹುದು.
03:38 ಪ್ರತಿಯೊಂದು ಸ್ಲಾಟ್, ಒಂದು ಚೆಕರ್ಡ್ ಸ್ಕ್ವೇರ್ ನಿಂದ ಪ್ರತಿನಿಧಿಸಲ್ಪಟ್ಟಿದೆ.
03:44 ಆಕ್ಟಿವ್ ಟೆಕ್ಸ್ಚರ್ ಗೆ ಮರಳಿ ಸ್ಕ್ರೋಲ್ ಮಾಡಿರಿ.
03:48 ಟೆಕ್ಸ್ಚರ್ ಸ್ಲಾಟ್ ಬಾಕ್ಸ್ ನಲ್ಲಿ, ಟೆಕ್ಸ್ಚರ್ ಗಳನ್ನು ಮೇಲೆ ಮತ್ತು ಕೆಳಗೆ ಸರಿಸಲು ಈ ‘ಅಪ್ ಆಂಡ್ ಡೌನ್ ಆರೋಸ್’, ಬಳಸಲ್ಪಡುತ್ತವೆ.
03:56 ಡೌನ್ ಆರೋದ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ಈ ಆಕ್ಟಿವ್ ಟೆಕ್ಸ್ಚರ್ ಎನ್ನುವುದು ಎರಡನೆಯ ಟೆಕ್ಸ್ಚರ್ ಸ್ಲಾಟ್ ಗೆ ಸ್ಥಳಾಂತರವಾಗುತ್ತದೆ.
04:06 ಅಪ್ ಆರೋದ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ಈ ಆಕ್ಟಿವ್ ಟೆಕ್ಸ್ಚರ್, ಮೊದಲನೆಯ ಸ್ಲಾಟ್ ಗೆ ಹಿಂತಿರುಗುತ್ತದೆ.
04:15 ‘ಅಪ್ ಆಂಡ್ ಡೌನ್ ಆರೋಸ್’ ದ ಕೆಳಗೆ ಇನ್ನೊಂದು ಬ್ಲ್ಯಾಕ್ ಡೌನ್ ಆರೋ ಇರುತ್ತದೆ.
04:20 ಬ್ಲ್ಯಾಕ್ ಡೌನ್ ಆರೋದ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ಒಂದು ಮೆನ್ಯು ಕಾಣಿಸುತ್ತದೆ.
04:26 Copy Texture Slot Settings ಎನ್ನುವುದರ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ.
04:31 ಬಾಕ್ಸ್ ನಲ್ಲಿಯ ಸೆಕೆಂಡ್ ಟೆಕ್ಸ್ಚರ್ ಸ್ಲಾಟ್ ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ಅದು ಬ್ಲೂ ಬಣ್ಣದಲ್ಲಿ ಹೈಲೈಟ್ ಮಾಡಲ್ಪಡುತ್ತದೆ.
04:40 ಬ್ಲ್ಯಾಕ್ ಡೌನ್ ಆರೋದ ಮೇಲೆ ಮತ್ತೆ ಲೆಫ್ಟ್ ಕ್ಲಿಕ್ ಮಾಡಿರಿ.
04:45 Paste Texture Slot Settings ಎನ್ನುವುದರ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ.
04:49 ಎರಡನೆಯ ಟೆಕ್ಸ್ಚರ್ ಸ್ಲಾಟ್ ನಲ್ಲಿ, ಮೊದಲನೆಯ ಟೆಕ್ಸ್ಚರ್ ನ ಸೆಟ್ಟಿಂಗ್ ಗಳನ್ನೇ ಹೊಂದಿದ ಒಂದು ಹೊಸ ಟೆಕ್ಸ್ಚರ್ ಕಾಣಿಸಿಕೊಂಡಿದೆ.
04:57 ಸ್ಲಾಟ್ ಬಾಕ್ಸ್ ನ ಕೆಳಗೆ, ಟೆಕ್ಸ್ಚರ್ ನೇಮ್ ಬಾರ್ ನ ಬಲಗಡೆ ಇರುವ cross sign ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ.
05:07 ಎರಡನೆಯ ಟೆಕ್ಸ್ಚರ್ ಅನ್ನು ತೆಗೆಯಲಾಗಿದೆ. ಅದರ ಸೆಟ್ಟಿಂಗ್ ಗಳು ಸಹ ಹೋಗಿಬಿಟ್ಟಿವೆ.
05:15 plus sign ಅನ್ನು ಹೊಂದಿದ ಒಂದು New ಎನ್ನುವ ಬಟನ್ ಕಾಣಿಸಿಕೊಂಡಿದೆ.
05:20 New ಎನ್ನುವ ಬಟನ್ ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ಎರಡನೆಯ ಟೆಕ್ಸ್ಚರ್ ಸ್ಲಾಟ್ ನಲ್ಲಿ, ಒಂದು ನ್ಯೂ ಟೆಕ್ಸ್ಚರ್ ಕಾಣಿಸಿಕೊಂಡಿದೆ.
05:29 ಹೀಗೆ, ಇದು ಹೊಸ ಟೆಕ್ಸ್ಚರ್ ಅನ್ನು ಸೇರಿಸುವ ಇನ್ನೊಂದು ರೀತಿಯಾಗಿದೆ.
05:34 ಎರಡನೆಯ ಟೆಕ್ಸ್ಚರ್ ನ ಎಡಗಡೆಯ ಚೆಕರ್ಡ್ ಸ್ಕ್ವೇರ್, ಬೇರೆ ಇಮೇಜ್ ಗೆ ಹೇಗೆ ಬದಲಾಗಿದೆ ಎನ್ನುವುದನ್ನು ಗಮನಿಸಿರಿ.
05:42 ಕೆಳಗೆ ಒಂದು ಪ್ರೀವ್ಯೂ ವಿಂಡೋ ಕಾಣಿಸಿಕೊಂಡಿದೆ. ಅದು ಆಕ್ಟಿವ್ ಟೆಕ್ಸ್ಚರ್ ನ ಮುನ್ನೋಟವನ್ನು ತೋರಿಸುತ್ತದೆ.
05:49 ಈ ಟೆಕ್ಸ್ಚರ್ ಗೆ ಹೊಸ ಹೆಸರಿಡೋಣ.
05:53 ಸ್ಲಾಟ್ ಬಾಕ್ಸ್ ನ ಕೆಳಗೆ ಇರುವ ಟೆಕ್ಸ್ಚರ್ ನೇಮ್ ಬಾರ್ ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ.
05:57 ನಿಮ್ಮ ಕೀಬೋರ್ಡ್ ನ ಮೇಲೆ Bump ಎಂದು ಟೈಪ್ ಮಾಡಿರಿ ಮತ್ತು Enter ಕೀಯನ್ನು ಒತ್ತಿರಿ.
06:05 ನೇಮ್ ಬಾರ್ ನ ಎಡಗಡೆಗೆ ಇರುವ checkered square ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ಇದು ಟೆಕ್ಸ್ಚರ್ ಮೆನ್ಯು ಆಗಿದೆ.
06:12 ಸೀನ್ ನಲ್ಲಿ ಬಳಸುವ ಎಲ್ಲ ಟೆಕ್ಸ್ಚರ್ ಗಳು ಇಲ್ಲಿ ಲಿಸ್ಟ್ ಮಾಡಲ್ಪಟ್ಟಿವೆ.
06:18 ನೇಮ್ ಬಾರ್ ನ ಕೆಳಗೆ ಇರುವದು Type ಬಾರ್ ಎನ್ನುವುದು ಆಗಿದೆ. ಡೀಫಾಲ್ಟ್ ಆಗಿ, ಪ್ರತಿಯೊಂದು ಹೊಸ ಟೆಕ್ಸ್ಚರ್ Clouds ಟೆಕ್ಸ್ಚರ್ ಎಂದು ತೋರಿಸುತ್ತದೆ.
06:28 Clouds ಎನ್ನುವುದರ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ಇದು Type ಮೆನ್ಯು ಆಗಿದೆ.
06:35 ಇಲ್ಲಿ, ಬ್ಲೆಂಡರ್ ನಿಂದ ಬೆಂಬಲಿಸಲ್ಪಟ್ಟ ಎಲ್ಲ ವಿಧದ ಟೆಕ್ಸ್ಚರ್ ಗಳನ್ನು ಲಿಸ್ಟ್ ಮಾಡಲಾಗಿದೆ. Wood, Voxel data, voronoi ಇತ್ಯಾದಿ.
06:48 ಯಾವುದೇ ಒಂದು ವಿಧದ ಟೆಕ್ಸ್ಚರ್ ಅನ್ನು ಆಯ್ಕೆಮಾಡಲು ಸುಮ್ಮನೆ ಅದರ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ಇದೀಗ ನಾನು Clouds ಟೆಕ್ಸ್ಚರ್ ಅನ್ನು ಇಡುತ್ತಿದ್ದೇನೆ.
06:58 ಇದು ಟೆಕ್ಸ್ಚರ್ ಪ್ರೀವ್ಯೂ ವಿಂಡೋ ಆಗಿದೆ. ಇಲ್ಲಿ ಡಿಸ್ಪ್ಲೇಗಾಗಿ ಮೂರು ಆಯ್ಕೆಗಳಿವೆ.
07:05 Texture. ಡೀಫಾಲ್ಟ್ ಆಗಿ, ಈ ಡಿಸ್ಪ್ಲೇ, ಯಾವಾಗಲೂ ಆಯ್ಕೆಯಾಗಿರುತ್ತದೆ.
07:10 Material ಎನ್ನುವುದರ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ಇದು ಮೆಟೀರಿಯಲ್ ನ ಮೇಲಿರುವ ಟೆಕ್ಸ್ಚರ್ ನ ಪ್ರೀವ್ಯೂಅನ್ನು ತೋರಿಸುತ್ತದೆ.
07:19 Both ಎನ್ನುವುದರ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ಈ ಹೆಸರೇ ಸೂಚಿಸುವಂತೆ ಟೆಕ್ಸ್ಚರ್ ಮತ್ತು ಮೆಟೀರಿಯಲ್, ಈ ಎರಡೂ ಡಿಸ್ಪ್ಲೇಗಳು ಈಗ ಅಕ್ಕಪಕ್ಕದಲ್ಲಿ ಕಾಣುತ್ತಿವೆ.
07:30 Show Alpha ಎನ್ನುವುದರ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ಈಗ ಟೆಕ್ಸ್ಚರ್, ಪಾರದರ್ಶಕವಾಗಿದೆ.
07:38 ಇದು ಗಾಜು, ನೀರಿನಂತಹ ವಸ್ತುಗಳಿಗಾಗಿ ಬಳಸಲ್ಪಡುತ್ತದೆ. ಇದೀಗ ನಾವು ಇದನ್ನು ಸ್ವಿಚ್ ಆಫ್ ಮಾಡೋಣ.
07:44 Show Alpha ಎನ್ನುವುದರ ಮೇಲೆ ಇನ್ನೊಮ್ಮೆ ಲೆಫ್ಟ್ ಕ್ಲಿಕ್ ಮಾಡಿರಿ.
07:51 Influence ಎನ್ನುವುದು ಮುಂದಿನ ಸೆಟ್ಟಿಂಗ್ ಆಗಿದೆ.
07:53 ಇಲ್ಲಿ, ಮೆಟೀರಿಯಲ್ ಮೇಲೆ ಮುಖ್ಯವಾಗಿ ನಾಲ್ಕು ಏರಿಯಾಗಳಲ್ಲಿ ಪ್ರಭಾವವನ್ನು ಬೀರಲು ಟೆಕ್ಸ್ಚರ್ ಗೆ ಸಹಾಯ ಮಾಡುವ ಹಲವಾರು ಆಯ್ಕೆಗಳಿವೆ.
08:01 Diffuse, Shading, Specular ಮತ್ತು Geometry. ಡೀಫಾಲ್ಟ್ ಆಗಿ, Diffuse ನಡಿಯಲ್ಲಿ, Color ಎನ್ನುವುದು ಸಕ್ರಿಯವಾಗಿದೆ.
08:22 Color ಬಾರ್ ನ ಎಡಗಡೆಗೆ ಇರುವ checkbox ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ಈಗ Color ಎನ್ನುವುದು ನಿಷ್ಕ್ರಿಯವಾಗಿದೆ.
08:30 ಟೆಕ್ಸ್ಚರ್ ನ ಬಣ್ಣವು ಇನ್ನುಮುಂದೆ ಮೆಟೀರಿಯಲ್ ಡಿಫ್ಯೂಸ್ ನ ಬಣ್ಣದ ಮೇಲೆ ಪ್ರಭಾವವನ್ನು ಬೀರುವುದಿಲ್ಲ.
08:38 Geometry ಎನ್ನುವಲ್ಲಿಗೆ ಹೋಗಿರಿ. Normal ಎನ್ನುವುದರ ಬದಿಯಲ್ಲಿರುವ checkbox ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ.
08:45 ಈಗ ಟೆಕ್ಸ್ಚರ್ ನ ನಾರ್ಮಲ್ ಎನ್ನುವುದು ಮೆಟೀರಿಯಲ್ ನ ಜಿಯೊಮೆಟ್ರಿಯ ಮೇಲೆ ಪ್ರಭಾವ ಬೀರುತ್ತದೆ.
08:50 ನೀವು ಪ್ರೀವ್ಯೂ ವಿಂಡೋದಲ್ಲಿ ಈ ಪರಿಣಾಮವನ್ನು ನೋಡಬಹುದು.
08:57 ಪ್ರೀವ್ಯೂ ಸ್ಫಿಯರ್ ನ ಮೇಲೆಲ್ಲ ಕ್ಲೌಡ್ ಗಳು ಚಿಕ್ಕ ಬಂಪ್ ಗಳಂತೆ ಹರಡಿಕೊಂಡಿವೆ.
09:06 ಟೆಕ್ಸ್ಚರ್, ಮೆಟೀರಿಯಲ್ ನ ಜೊತೆಗೆ ಹೇಗೆ ಬೆರಕೆಯಾಗುತ್ತದೆ ಎನ್ನುವುದನ್ನು Blend, ನಿಯಂತ್ರಿಸುತ್ತದೆ ಡೀಫಾಲ್ಟ್ ಆಗಿ, ಇದು Mix ಎಂದು ಸೆಟ್ ಮಾಡಲ್ಪಟ್ಟಿದೆ.
09:15 Mix ಎನ್ನುವುದರ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ಈ ಮೆನ್ಯು, ಬ್ಲೆಂಡರ್ ನಿಂದ ಬೆಂಬಲಿಸಲ್ಪಟ್ಟ ಎಲ್ಲ ಟೆಕ್ಸ್ಚರ್ ಬ್ಲೆಂಡ್ ವಿಧಗಳನ್ನು ಲಿಸ್ಟ್ ಮಾಡುತ್ತದೆ.
09:25 RGB to Intensity ಎನ್ನುವುದರ ಕೆಳಗಿರುವ ಈ ಪಿಂಕ್ ಕಲರ್ ಹೊಂದಿದ ಬಾರ್ ನಿಮಗೆ ಕಾಣುತ್ತಿದೆಯೇ? ಇದು ಡೀಫಾಲ್ಟ್ ಆಗಿ, ಟೆಕ್ಸ್ಚರ್ ನ ಬಣ್ಣವಾಗಿದೆ.
09:33 ಸಧ್ಯಕ್ಕೆ ಇದು ಮೆಟೀರಿಯಲ್ ನ ಬಣ್ಣದ ಮೇಲೆ ಯಾವ ಪ್ರಭಾವವನ್ನೂ ಬೀರುತ್ತಿಲ್ಲ ಏಕೆಂದರೆ, Influence ಎನ್ನುವುದರ ಕೆಳಗಿರುವ, ಕಲರ್ ನ ಆಯ್ಕೆಯನ್ನು ನಾವು ನಿಷ್ಕ್ರಿಯಗೊಳಿಸಿದ್ದೇವೆ ಎನ್ನುವುದನ್ನು ನೆನಪಿಸಿಕೊಳ್ಳಿರಿ.
09:44 ಪಿಂಕ್ ಕಲರ್ ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ಒಂದು ಕಲರ್ ಮೆನ್ಯು ಕಾಣಿಸುತ್ತದೆ.
09:48 ಇಲ್ಲಿ ನಮ್ಮ ಟೆಕ್ಸ್ಚರ್ ಗಾಗಿ ಯಾವುದೇ ಬಣ್ಣವನ್ನು ನಾವು ಆಯ್ಕೆಮಾಡಬಹುದು.
09:53 ಇದೀಗ, ನಾವು ಇದನ್ನು ಪಿಂಕ್ ಆಗಿಯೇ ಇಡೋಣ ಏಕೆಂದರೆ, ನಾವು ಟೆಕ್ಸ್ಚರ್ ಕಲರ್ ಅನ್ನು ಬಳಸುತ್ತಿಲ್ಲ.
10:00 Bump Mapping ಎನ್ನುವುದು ಟೆಕ್ಸ್ಚರ್ ನ ನಾರ್ಮಲ್, ಮೆಟೀರಿಯಲ್ ನ ಜಿಯೊಮೆಟ್ರಿಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ನಿರ್ಣಯಿಸುತ್ತದೆ.
10:09 Default ಎನ್ನುವುದು ಬಂಪ್ ಮ್ಯಾಪಿಂಗ್ ನ ಸದ್ಯದ ವಿಧಾನವಾಗಿದೆ.
10:12 Default ಎನ್ನುವುದರ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ಬಂಪ್ ಮ್ಯಾಪಿಂಗ್ ನ ವಿವಿಧ ರೀತಿಗಳನ್ನು ಈ ಮೆನ್ಯು ಲಿಸ್ಟ್ ಮಾಡುತ್ತದೆ.
10:19 Best quality, Default, Compatible ಮತ್ತು Original.
10:34 Compatible ಎನ್ನುವುದರ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ಈ ಬಂಪ್ ನ ಪ್ರಭಾವವನ್ನು ಹೆಚ್ಚಿಸಲಾಗಿದೆ.
10:46 ಮುಂದಿನ ಸೆಟ್ಟಿಂಗ್, Clouds ಎನ್ನುವುದು ಆಗಿದೆ. ಇಲ್ಲಿ ಕ್ಲೌಡ್ಸ್ ನ ಟೆಕ್ಸ್ಚರ್ ಗಾಗಿ ವಿವಿಧ ಆಯ್ಕೆಗಳಿವೆ.
10:54 Greyscale ಎನ್ನುವುದು ಟೆಕ್ಸ್ಚರ್ ಗಳನ್ನು ಗ್ರೇಸ್ಕೇಲ್ ಮೋಡ್ ನಲ್ಲಿ ತೋರಿಸುತ್ತದೆ.
10:59 Color ಎನ್ನುವುದರ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ.
11:09 ಈಗ ಪ್ರೀವ್ಯೂ ವಿಂಡೋದಲ್ಲಿಯ ಟೆಕ್ಸ್ಚರ್ ಎನ್ನುವುದು ವರ್ಣಗಳ ಮಿಶ್ರಣದಂತೆ ಪ್ರದರ್ಶಿಸಲ್ಪಡುತ್ತದೆ.
11:12 ಆದರೆ ಮೆಟೀರಿಯಲ್ ನ ಮೇಲೆ ಈ ಬಣ್ಣವು ಯಾವುದೇ ಪರಿಣಾಮವನ್ನು ಬೀರುವುದಿಲ್ಲ.
11:16 Noise ಎನ್ನುವುದು ಕ್ಲೌಡ್ಸ್ ಟೆಕ್ಸ್ಚರ್ ನ ಅಸ್ಪಷ್ಟತೆಯನ್ನು (ಡಿಸ್ಟಾರ್ಶನ್) ಅನ್ನು ನಿರ್ಣಯಿಸುತ್ತದೆ.
11:21 ಡೀಫಾಲ್ಟ್ ಆಗಿ, Soft Noise ಎನ್ನುವುದು ಡಿಸ್ಟಾರ್ಶನ್ ಆಗಿದೆ.
11:25 Hard ಎನ್ನುವುದರ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ಈಗ ಪ್ರೀವ್ಯೂ ವಿಂಡೋ, ಕ್ಲೌಡ್ಸ್ ಟೆಕ್ಸ್ಚರ್ ನಲ್ಲಿ ಕಠಿಣವಾದ ಕಪ್ಪು ಬಾಹ್ಯರೇಖೆಗಳನ್ನು ತೋರಿಸುತ್ತದೆ.
11:36 ಅದೇ ಸಮಯದಲ್ಲಿ, ಮೆಟೀರಿಯಲ್ ನ ಮೇಲಿನ ಬಂಪ್ ಗಳು ಹೆಚ್ಚು ಆಳವಾಗಿ ಮಾರ್ಪಟ್ಟಿವೆ. ಇದು ಹಾರ್ಡ್ ನಾಯ್ಸ್ ಆಗಿದೆ.
11:47 ಕ್ಲೌಡ್ಸ್ ಟೆಕ್ಸ್ಚರ್ ನಲ್ಲಿ, Basis ಎನ್ನುವುದು ನಾಯ್ಸ್ ನ ನೆಲೆ ಅಥವಾ ಮೂಲವಾಗಿದೆ.
11:53 Blender Original ಎನ್ನುವುದರ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ಇಲ್ಲಿರುವುದು ನಾಯ್ಸ್ ಬೇಸಿಸ್ ಮೆನ್ಯು ಆಗಿದೆ.
12:00 ಬ್ಲೆಂಡರ್ ನಲ್ಲಿ ಬೆಂಬಲಿಸಲ್ಪಟ್ಟ ಎಲ್ಲ ನಾಯ್ಸ್ ಬೇಸಿಸ್ ಗಳ ಲಿಸ್ಟ್ ಅನ್ನು ಇದು ತೋರಿಸುತ್ತದೆ.
12:05 Voronoi Crackle ಎನ್ನುವುದರ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ನೀವು ಪ್ರೀವ್ಯೂ ವಿಂಡೋದಲ್ಲಿಯ ಬದಲಾವಣೆಯನ್ನು ನೋಡಬಹುದು.
12:14 ಹೀಗೆ ನಾಯ್ಸ್ ಬೇಸಿಸ್ ಎನ್ನುವುದು ಕ್ಲೌಡ್ಸ್ ಟೆಕ್ಸ್ಚರ್ ನ ಮೇಲೆ ಪರಿಣಾಮ ಬೀರುತ್ತದೆ
12:21 Size, Nabla ಮತ್ತು Depth control, ಇವುಗಳು ಕ್ಲೌಡ್ಸ್ ಟೆಕ್ಸ್ಚರ್ ನಲ್ಲಿ ನಾಯ್ಸ್ ನ ಗುಣಲಕ್ಷಣಗಳಾಗಿವೆ.
12:33 ಪ್ರಾಪರ್ಟೀಸ್ ಪ್ಯಾನಲ್ ನ ಮೇಲಿನ ಸಾಲಿನಲ್ಲಿರುವ ಕೊನೆಯ ಎರಡು ಐಕಾನ್ ಗಳು Particles ಮತ್ತು Physics ಎನ್ನುವ ಐಕಾನ್ ಗಳಾಗಿವೆ.
12:42 ನಾವು ಹೆಚ್ಚು ಮುಂದುವರಿದ ಟ್ಯುಟೋರಿಯಲ್ ಗಳಲ್ಲಿ, ನಮ್ಮ ಅನಿಮೇಶನ್ ನಲ್ಲಿ ಪಾರ್ಟಿಕಲ್ಸ್ ಮತ್ತು ಫಿಸಿಕ್ಸ್ ಗಳನ್ನು ಬಳಸುವಾಗ ಇವುಗಳನ್ನು ನೋಡುವೆವು.
12:50 3D ವ್ಯೂಗೆ ಹೋಗಿರಿ.
12:53 Lamp ಅನ್ನು ಆಯ್ಕೆಮಾಡಲು ರೈಟ್ ಕ್ಲಿಕ್ ಮಾಡಿರಿ.
12:59 ಪ್ರಾಪರ್ಟೀಸ್ ಪ್ಯಾನಲ್ ನ, ಮೇಲಿನ ಸಾಲಿನಲ್ಲಿಯ ಐಕಾನ್ ಗಳು ಈಗ ಹೇಗೆ ಬದಲಾಗಿವೆ ಎನ್ನುವುದನ್ನು ಗಮನಿಸಿರಿ.
13:05 ಕೆಲವು ಐಕಾನ್ ಗಳು ಬದಲಾಯಿಸಲ್ಪಟ್ಟಿವೆ ಹಾಗೆಯೇ ಬೇರೆ ಯವುಗಳನ್ನು ತೆಗೆದುಹಾಕಲಾಗಿದೆ.
13:10 3D ವ್ಯೂನಲ್ಲಿಯ Camera ದ ಮೇಲೆ ರೈಟ್ ಕ್ಲಿಕ್ ಮಾಡಿರಿ.
13:13 ಮತ್ತೆ, ಪ್ರಾಪರ್ಟೀಸ್ ಪ್ಯಾನಲ್ ನ, ಮೇಲಿನ ಸಾಲಿನಲ್ಲಿಯ ಐಕಾನ್ ಗಳು ಹೇಗೆ ಬದಲಾಗಿವೆ ಎನ್ನುವುದನ್ನು ನೀವು ನೋಡಬಹುದು
13:19 ಹೀಗೆಂದರೆ ಪ್ರಾಪರ್ಟೀಸ್ ವಿಂಡೋದಲ್ಲಿಯ ಟೂಲ್ ಗಳು ಡೈನಾಮಿಕ್ ಆಗಿವೆ ಮತ್ತು 3D ವ್ಯೂನಲ್ಲಿಯ ಆಕ್ಟಿವ್ ಒಬ್ಜೆಕ್ಟ್ ನ ಮಾದರಿಯ ಮೇಲೆ ಅವಲಂಬಿಸಿವೆ.
13:29 ಇಲ್ಲಿಗೆ ಪ್ರಾಪರ್ಟೀಸ್ ವಿಂಡೋ ಕುರಿತು ಇರುವ ನಮ್ಮ ಟ್ಯುಟೋರಿಯಲ್ ಮುಕ್ತಾಯವಾಯಿತು.
13:34 ಈಗ ನೀವು ಮುಂದುವರೆದು ಒಂದು ಹೊಸ ಫೈಲನ್ನು ಕ್ರಿಯೇಟ್ ಮಾಡಬಹುದು;
13:39 ಕ್ಯೂಬ್ ಗೆ ಒಂದು ಕ್ಲೌಡ್ಸ್ ಟೆಕ್ಸ್ಚರ್ ಅನ್ನು ಸೇರಿಸಿರಿ ಮತ್ತು ಸೈಜ್, ನ್ಯಾಬ್ಲ ಮತ್ತು ಕ್ಲೌಡ್ಸ್ ನಾಯ್ಸ್ ನ ಡೆಪ್ತ್ ಗಳೊಂದಿಗೆ ಪ್ರಯೋಗ ಮಾಡಿರಿ.
13:49 ಈ ಟ್ಯುಟೋರಿಯಲ್ ರಾಷ್ಟ್ರೀಯ ಸಾಕ್ಷರತಾ ಮಿಶನ್, ICT ಯ ಆಧಾರದಿಂದ ಮತ್ತು Project Oscar ಅವರಿಂದ ತಯಾರಿಸಲ್ಪಟ್ಟಿದೆ.
13:58 ಇದರ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ಗಳ ಮೇಲೆ ಲಭ್ಯವಿದೆ.oscar.iitb.ac.in ಮತ್ತು spoken-tutorial.org/NMEICT-Intro
14:19 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು
14:21 ಸ್ಪೋಕನ್ ಟ್ಯುಟೋರಿಯಲ್ಸ್ ಬಳಸಿಕೊಂಡು ಕಾರ್ಯಶಾಲೆಗಳನ್ನು ನಡೆಸುತ್ತದೆ.
14:25 ಹಾಗೂ ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
14:31 ಹೆಚ್ಚಿನ ವಿವರಗಳಿಗೆ ದಯವಿಟ್ಟು contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
14:36 ಧನ್ಯವಾದಗಳು.
14:38 ಐ ಐ ಟಿ ಬಾಂಬೆ ಯಿಂದ ಪ್ರವಾಚಕ ………………

Contributors and Content Editors

Pratik kamble, Vasudeva ahitanal