Blender/C2/Moving-in-3D-Space/Kannada

From Script | Spoken-Tutorial
Jump to: navigation, search
Time Narration
00:04 ಬ್ಲೆಂಡರ್ ನ ಟ್ಯುಟೋರಿಯಲ್ ಸರಣಿಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ಬ್ಲೆಂಡರ್ 2.59 ನ 3ಡಿ ಸ್ಪೇಸ್ ನಲ್ಲಿ ನೇವಿಗೇಶನ್ ಮಾಡುವ ಕುರಿತು ಇದೆ.
00:17 ಈ ಸ್ಕ್ರಿಪ್ಟ್ ನ ಅನುವಾದಕಿ ಐ ಐ ಟಿ ಬಾಂಬೆಯಿಂದ ಸಂಧ್ಯಾ ಪುಣೇಕರ್.
00:26 ಈ ಟ್ಯುಟೋರಿಯಲ್ ನೋಡಿದ ನಂತರ ಬ್ಲೆಂಡರ್ ವ್ಹ್ಯೂಪೋರ್ಟ್ ನಂತಹ 3ಡಿ ಸ್ಪೇಸ್ ನಲ್ಲಿ ಪ್ಯಾನ್, ರೊಟೇಟ್ ಮತ್ತು ಝೂಮ್ ಮಾಡುವದು ಹೇಗೆ ಎಂದು ಕಲಿಯುತ್ತೇವೆ.
00:38 ಬ್ಲೆಂಡರ್ ನ್ನು ನಿಮ್ಮ ಸಿಸ್ಟೆಮ್ ನಲ್ಲಿ ಇನ್ಸ್ಟಾಲ್ ಮಾಡುವ ವಿಧಾನ ನಿಮಗೆ ಈಗಾಗಲೆ ತಿಳಿದಿದೆ ಎಂದು ಭಾವಿಸುತ್ತೇನೆ.
00:43 ತಿಳಿದಿಲ್ಲವಾದರೆ ನಮ್ಮ ಮೊದಲಿನ ಟ್ಯುಟೋರಿಯಲ್ಸ್ Installing Blender (ಇನ್ಸ್ಟಾಲಿಂಗ್ ಬ್ಲೆಂಡರ್) ನೋಡಿರಿ.
00:50 ಬ್ಲೆಂಡರ್ ನಲ್ಲಿ ಸಂಚರಿಸುವದು ನಿಮ್ಮ ಮೌಸ್ ನ ಮಾದರಿಯ ಮೇಲೆ ಬಹಳವಾಗಿ ಅವಲಂಬಿಸಿದೆ.
00:56 3 ಬಟನ್ ಮೌಸ್
00:58 ಅಥವಾ 2 ಬಟನ್ ಮೌಸ್
01:00 ವ್ಹೀಲ್ ಸಹಿತ.
01:05 ನಾನು ಬ್ಲೆಂಡರ್ ಟ್ಯುಟೋರಿಯಲ್ಸ್ ನ ಈ ಸರಣಿಯಲ್ಲಿ ವ್ಹೀಲ್ ಸಹಿತ ಇರುವ 2 ಬಟನ್ ಮೌಸ್ ನ್ನು ಬಳಸುತ್ತಿದ್ದೇನೆ.
01:13 ಮೊದಲು ನಾವು “ಪ್ಯಾನಿಂಗ್ ಎ ವ್ಯೂ” ಕ್ರಮವನ್ನು ನೋಡೋಣ.
01:17 ಮೌಸ್ ಹಾಗೂ ಕೀಬೋರ್ಡ್ ಬಳಸಿ ಇದನ್ನು ಮೂರು ವಿಧಗಳಲ್ಲಿ ಮಾಡಬಹುದು.
01:22 ಮೌಸ್ ವ್ಹೀಲ್ ಜೊತೆಗೆ Shift ಕೀ ಬಳಸಿ ಅಥವಾ ಸ್ಕ್ರೋಲ್ ಮಾಡಿ.
01:27 shift ಒತ್ತಿ, ಮೌಸ್ನ ವ್ಹೀಲ್ ಒತ್ತಿ ಹಿಡಿದು ಮೌಸ್ ನ್ನು ಅತ್ತಿತ್ತ ಕೊಂಡೊಯ್ಯಿರಿ.
01:41 ಈ ದ್ರಶ್ಯವು ಮೌಸ್ ನ ಚಲನೆಯ ದಿಕ್ಕಿನಲ್ಲಿ ಎಡದಿಂದ ಬಲಕ್ಕೆ ಹಾಗೂ ಮೇಲೆ ಮತ್ತು ಕೆಳಗೆ ಪ್ಯಾನ್ ಆಗುತ್ತದೆ.
01:48 ಈಗ SHIFT ಒತ್ತಿ ಹಿಡಿದು ಮೌಸ್ನ ವ್ಹೀಲ್ ನ್ನು ಮೇಲೆ ಕೆಳಗೆ ತಿರುಗಿಸಿ.
02:00 ದ್ರಶ್ಯವು ಮೇಲೆ ಮತ್ತು ಕೆಳಗೆ ಪ್ಯಾನ್ ಆಗುವದು. ಇದು ಪ್ಯಾನಿಂಗ್ ದ ವ್ಯೂ ನ ಎರಡನೇ ವಿಧಾನ.
02:06 SHIFT ಒತ್ತಿ ಹಿಡಿದು ಮೌಸ್ನ ವ್ಹೀಲ್ ನ್ನು ಕೆಳಗಡೆಗೆ ತಿರುಗಿಸಿ. ವ್ಯೂ ಮೇಲ್ಗಡೆಗೆ ಪ್ಯಾನ್ ಆಗುವದು.
02:19 SHIFT ಒತ್ತಿ ಹಿಡಿದು ಮೌಸ್ನ ವ್ಹೀಲ್ ನ್ನು ಮೇಲ್ಗಡೆಗೆ ತಿರುಗಿಸಿ. ವ್ಯೂ ಕೆಳಗಡೆಗೆ ಪ್ಯಾನ್ ಆಗುವದು.
02:33 ಮೂರನೆಯ ಹಾಗೂ ಕೊನೆಯ ವಿಧಾನವು ಮೌಸ್ನ ವ್ಹೀಲ್ ಜೊತೆಗೆ CTRL ಕೀ ಯನ್ನು ಬಳಸುತ್ತದೆ.
02:40 CTRL ಒತ್ತಿ ಹಿಡಿದು ಮೌಸ್ನ ವ್ಹೀಲ್ ನ್ನು ತಿರುಗಿಸಿ. ವ್ಯೂ ಎಡದಿಂದ ಬಲಕ್ಕೆ ಹಾಗೂ ಬಲದಿಂದ ಎಡಕ್ಕೆ ಪ್ಯಾನ್ ಆಗುವದು.
02:55 Ctrl ಒತ್ತಿ ಹಿಡಿದು ಮೌಸ್ನ ವ್ಹೀಲ್ ನ್ನು ಮೇಲ್ಗಡೆಗೆ ತಿರುಗಿಸಿ. ವ್ಯೂ ಬಲಗಡೆಗೆ ಪ್ಯಾನ್ ಆಗುತ್ತದೆ.
03:09 Ctrl ಒತ್ತಿ ಹಿಡಿದು ಮೌಸ್ನ ವ್ಹೀಲ್ ನ್ನು ಕೆಳಗಡೆಗೆ ತಿರುಗಿಸಿ. ವ್ಯೂ ಎಡಗಡೆಗೆ ಪ್ಯಾನ್ ಆಗುತ್ತದೆ.
03:22 ನೀವು ವ್ಯೂ ಪ್ಯಾನ್ ಮಾಡಲು ನಿಮ್ಮ ನಂಪ್ಯಾಡ್ ಕೀ ಗಳನ್ನು ಸಹ ಬಳಸಬಹುದು.
03:29 Ctrl ಮತ್ತು ನಂಪ್ಯಾಡ್ 2 ಒತ್ತಿ ಹಿಡಿಯಿರಿ. ವ್ಯೂ ಮೇಲ್ಗಡೆಗೆ ಪ್ಯಾನ್ ಆಗುತ್ತದೆ.
03:37 Ctrl ಮತ್ತು ನಂಪ್ಯಾಡ್ 8 ಒತ್ತಿ ಹಿಡಿಯಿರಿ. ವ್ಯೂ ಕೆಳಗಡೆಗೆ ಪ್ಯಾನ್ ಆಗುತ್ತದೆ.
03:46 Ctrl ಮತ್ತು ನಂಪ್ಯಾಡ್ 4 ಒತ್ತಿ ಹಿಡಿಯಿರಿ. ವ್ಯೂ ಎಡಗಡೆಗೆ ಪ್ಯಾನ್ ಆಗುತ್ತದೆ.
03:55 Ctrl ಮತ್ತು 6 ಒತ್ತಿ ಹಿಡಿಯಿರಿ. ವ್ಯೂ ಬಲಗಡೆಗೆ ಪ್ಯಾನ್ ಆಗುತ್ತದೆ.
04:03 ನೀವು ಲ್ಯಾಪ್ ಟಾಪ್ ಬಳಸುವದಿದ್ದರೆ ನಿಮ್ಮ ನಂಬರ್ ಕೀ ಗಳನ್ನು ನಂಪ್ಯಾಡ್ ನಂತೆ ಅನುಕರಿಸಬೆಕು. ನಂಪ್ಯಾಡ್ ಅನುಕರಿಸುವದು ಹೇಗೆ ಎಂಬುದನ್ನು ತಿಳಿಯಲು User Preferences (ಯುಜರ್ ಪ್ರಿಫರೆನ್ಸಸ್) ಎಂಬ ಟ್ಯುಟೋರಿಯಲ್ ನೋಡಿ.
04:19 ಸರಿ, ಇನ್ನು ಮುಂದೆ ನಾವು ವ್ಯೂಅನ್ನು ತಿರುಗಿಸುವ ಕ್ರಮವನ್ನು ನೋಡುತ್ತೇವೆ.
04:24 ನಿಮ್ಮ ಮೌಸ್ನ ವ್ಹೀಲ್ ನ್ನು ಕೆಳಗೆ ಒತ್ತಿ ಮತ್ತು ಮೌಸ್ ನ್ನು ಚೌಕಾಕಾರವಾಗಿ ತಿರುಗಿಸಿ.
04:33 ಅದು ನಮಗೆ ಟರ್ನ್ ಟೇಬಲ್ ರೊಟೇಶನ್ ಅನ್ನು ಕೊಡುತ್ತದೆ.
04:39 ನೀವು ಬ್ಲೆಂಡರ್ ನಲ್ಲಿ ಟ್ರ್ಯಾಕ್ ಬಾಲ್ ಮಾದರಿಯ ರೊಟೇಶನ್ ಸಹ ಉಪಯೋಗಿಸಬಹುದು. ಇದು ರೊಟೇಶನ್ ಕ್ರಿಯೆಯಲ್ಲಿ ಸ್ವಲ್ಪ ಹೆಚ್ಚು ನಮ್ಯತೆಯನ್ನು (flexibility) ಕೊಡುತ್ತದೆ.
04:49 ಇದಕ್ಕಾಗಿ ಯುಜರ್ ಪ್ರಿಫರೆನ್ಸಸ್ ವಿಂಡೋ ದಲ್ಲಿಯ ಟರ್ನ್-ಟೇಬಲ್ ಆಯ್ಕೆಯನ್ನು ಟ್ರ್ಯಾಕ್-ಬಾಲ್ ಗೆ ಬದಲಿಸಬೇಕು.
04:57 ಇದನ್ನು ಹೇಗೆ ಮಾಡಬೇಕು ಎಂದು ತಿಳಿಯಲು User Preferences ಎನ್ನುವ ಟ್ಯುಟೋರಿಯಲ್ ನೊಡಿ.</p>
05:05 ವ್ಯೂ ಅನ್ನು
05:08 ಎಡದಿಂದ ಬಲಕ್ಕೆ ಅಥವಾ ಮೇಲೆ ಮತ್ತು ಕೆಳಗೆ ತಿರುಗಿಸಬಹುದು.
05:13 ಈಗ ನಾವು ವ್ಯೂ ಅನ್ನು ಎಡದಿಂದ ಬಲಕ್ಕೆ ತಿರುಗಿಸೋಣ.
05:19 ctrl, alt ಒತ್ತಿ ಹಿಡಿದು ಮೌಸ್ನ ವ್ಹೀಲ್ ನ್ನು ಮೇಲೆ ಮತ್ತು ಕೆಳಗೆ ತಿರುಗಿಸಿ. ವ್ಯೂ ಎಡದಿಂದ ಬಲಕ್ಕೆ ಹಾಗೂ ಹಿಂತಿರುಗಿ ತಿರುಗುತ್ತದೆ.
05:35 ctrl, alt ಒತ್ತಿ ಹಿಡಿದು ಮೌಸ್ನ ವ್ಹೀಲ್ ನ್ನು ಮೇಲ್ಗಡೆಗೆ ತಿರುಗಿಸಿ. ವ್ಯೂ ಎಡಕ್ಕೆ ತಿರುಗುತ್ತದೆ.
05:47 ctrl, alt ಒತ್ತಿ ಹಿಡಿದು ಮೌಸ್ನ ವ್ಹೀಲ್ ನ್ನು ಕೆಳಗಡೆಗೆ ತಿರುಗಿಸಿ. ವ್ಯೂ ಬಲಕ್ಕೆ ತಿರುಗುತ್ತದೆ. </p>
06:00 ನಂಪ್ಯಾಡ್ ನಲ್ಲಿಯ ಶಾರ್ಟ್ ಕಟ್ ಕೀ 4 ಮತ್ತು 6 ಸಹ ನೀವು ಬಳಸಬಹುದು.
06:07 ನಂಪ್ಯಾಡ್ 4 ಒತ್ತಿ, ವ್ಯೂ ಎಡಕ್ಕೆ ತಿರುಗುತ್ತದೆ.
06:16 ನಂಪ್ಯಾಡ್ 6 ಒತ್ತಿ, ವ್ಯೂ ಬಲಕ್ಕೆ ತಿರುಗುತ್ತದೆ.
06:26 ಈಗ ನಾವು ವ್ಯೂ ಅನ್ನು ಮೇಲೆ ಮತ್ತು ಕೆಳಗೆ ತಿರುಗಿಸೋಣ.
06:30 Shift, Alt ಒತ್ತಿ ಹಿಡಿಯಿರಿ ಹಾಗೂ ಮೌಸ್ನ ವ್ಹೀಲ್ ನ್ನು ಮೇಲೆ ಮತ್ತು ಕೆಳಗೆ ತಿರುಗಿಸಿ. ವ್ಯೂ ಮೇಲೆ ಮತ್ತು ಕೆಳಗೆ ತಿರುಗುತ್ತದೆ.
06:45 Shift, Alt ಒತ್ತಿ ಹಿಡಿಯಿರಿ ಹಾಗೂ ಮೌಸ್ನ ವ್ಹೀಲ್ ನ್ನು ಮೇಲ್ಗಡೆಗೆ ತಿರುಗಿಸಿ. ವ್ಯೂ ಕೆಳಗೆ ತಿರುಗುತ್ತದೆ.
06:58 Shift, Alt ಒತ್ತಿ ಹಿಡಿಯಿರಿ ಹಾಗೂ ಮೌಸ್ನ ವ್ಹೀಲ್ ನ್ನು ಕೆಳಗಡೆಗೆ ತಿರುಗಿಸಿ. ವ್ಯೂ ಮೇಲಕ್ಕೆ ತಿರುಗುತ್ತದೆ.
07:10 ನಂಪ್ಯಾಡ್ ನಲ್ಲಿಯ ಶಾರ್ಟ್ ಕಟ್ ಕೀ 2 ಮತ್ತು 8 ಸಹ ನೀವು ಬಳಸಬಹುದು.
07:16 ನಂಪ್ಯಾಡ್ 2 ಒತ್ತಿ, ವ್ಯೂ ಮೇಲಕ್ಕೆ ತಿರುಗುತ್ತದೆ.
07:23 ನಂಪ್ಯಾಡ್ 8 ಒತ್ತಿ, ವ್ಯೂ ಕೆಳಗೆ ತಿರುಗುತ್ತದೆ.
07:32 ಕೊನೆಯ ಕ್ರಿಯೆ ವ್ಯೂ ಅನ್ನು ಝೂಮ್ ಮಾಡುವದು.
07:36 ಝೂಮ್ ಇನ್ ಮಾಡಲು ಮೌಸ್ನ ವ್ಹೀಲ್ ನ್ನು ಮೇಲ್ಗಡೆಗೆ ತಿರುಗಿಸಿ.
07:43 ಝೂಮ್ ಔಟ್ ಮಾಡಲು ಮೌಸ್ನ ವ್ಹೀಲ್ ನ್ನು ಕೆಳಗಡೆಗೆ ತಿರುಗಿಸಿ. ಸುಲಭವಾಗಿದೆಯಲ್ಲವೆ?
07:51 ಶಾರ್ಟ್-ಕಟ್ ಗಾಗಿ ನಂಪ್ಯಾಡ್ ಮೇಲಿನ ಪ್ಲಸ್ ಮತ್ತು ಮೈನಸ್ ಕೀ ಗಳನ್ನು ಬಳಸಿ. </p>
07:58 ಝೂಮ್ ಇನ್ ಮಾಡಲು ನಂಪ್ಯಾಡ್ ನಲ್ಲಿಯ + ಒತ್ತಿ.
08:04 ಝೂಮ್ ಔಟ್ ಮಾಡಲು ನಂಪ್ಯಾಡ್ ನಲ್ಲಿಯ – ಒತ್ತಿ.
08:10 ಇಲ್ಲಿಗೆ ನಮ್ಮ Navigating in 3D space within the Blender View port (ನೇವಿಗೇಟಿಂಗ್ ಇನ್ 3ಡಿ ಸ್ಪೇಸ್ ವಿದಿನ್ ದಿ ಬ್ಲೆಂಡರ್ ವ್ಹ್ಯೂಪೋರ್ಟ್) ಎಂಬ ಟ್ಯುಟೋರಿಯಲ್ ಮುಕ್ತಾಯವಾಯಿತು.
08:18 ಈಗ 3D ವ್ಯೂ ನ್ನು ಪ್ಯಾನ್, ರೊಟೇಟ್ ಹಾಗೂ ಝೂಮ್ ಮಾಡಲು ಪ್ರಯತ್ನಿಸಿ. ಶುಭವಾಗಲಿ !!
08:27 ಈ ಟ್ಯುಟೋರಿಯಲ್ ರಾಷ್ಟ್ರೀಯ ಸಾಕ್ಷರತಾ ಮಿಶನ್, ICT ಯ ಆಧಾರದಿಂದ ಮತ್ತು Project Oscar ಅವರಿಂದ ತಯಾರಿಸಲ್ಪಟ್ಟಿದೆ.
08:37 ಇದರ ಬಗ್ಗೆ ಹೆಚ್ಚಿನ ಮಾಹಿತಿ oscar.iitb.ac.in ಮತ್ತು spoken-tutorial.org/NMEICT-Intro ಲಿಂಕ್ ಗಳ ಮೇಲೆ ಲಭ್ಯವಿದೆ.
08:57 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು
08:59 ಸ್ಪೋಕನ್ ಟ್ಯುಟೋರಿಯಲ್ಸ್ ಬಳಸಿಕೊಂಡು ಕಾರ್ಯಶಾಲೆಗಳನ್ನು ನಡೆಸುತ್ತದೆ.
09:03 ಹಾಗೂ ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
09:07 ಹೆಚ್ಚಿನ ವಿವರಗಳಿಗೆ ದಯವಿಟ್ಟು contact@spoken-tutorial.org ಇಲ್ಲಿ ಸಂಪರ್ಕಿಸಿ.
09:15 ಧನ್ಯವಾದಗಳು.
09:17 ಇದರ ಪ್ರವಾಚಕ ಐ ಐ ಟಿ ಬಾಂಬೆ ಯಿಂದ ವಾಸುದೇವ, ಧನ್ಯವಾದಗಳು.

Contributors and Content Editors

Pratik kamble, Vasudeva ahitanal