Blender/C2/How-to-Change-Window-types-in-Blender/Kannada

From Script | Spoken-Tutorial
Jump to: navigation, search
Time Narration
00:03 ಬ್ಲೆಂಡರ್ ಟ್ಯುಟೋರಿಯಲ್ಸ್ ಸರಣಿಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ಬ್ಲೆಂಡರ್ 2.59 ರಲ್ಲಿ ವಿಂಡೋ ದ ಪ್ರಕಾರಗಳನ್ನು ಹೇಗೆ ಬದಲಿಸುವದು ಎನ್ನುವುದರ ಕುರಿತು ಇದೆ.
00:16 ಈ ಸ್ಕ್ರಿಪ್ಟ್ ನ ಅನುವಾದಕಿ ಐ ಐ ಟಿ ಬಾಂಬೆಯಿಂದ ಸಂಧ್ಯಾ ಪುಣೇಕರ್.
00:26 ಈ ಟ್ಯುಟೋರಿಯಲ್ ನೋಡಿದ ನಂತರ ಬ್ಲೆಂಡರ್ ಇಂಟರ್ಫೇಸ್ ನಲ್ಲಿ ಯಾವುದೇ ವಿಂಡೋ ಅನ್ನು ರಿಸೈಜ್ ಹೇಗೆ ಮಾಡುವದು;
00:36 ವಿವಿಧ ವಿಂಡೋ ಗಳಲ್ಲಿ ಟೊಗಲ್ ಹೇಗೆ ಮಾಡುವದು;
00:40 ವಿಂಡೋ ಗಳನ್ನು ವಿಭಾಗಿಸುವದು ಮತ್ತು ಅವುಗಳನ್ನು ಒಟ್ಟಿಗೆ ಮರ್ಜ್ ಹೇಗೆ ಮಾಡುವುದು;
00:46 ಮತ್ತು ಯಾವುದೇ ವಿಂಡೋ ಅನ್ನು ಫುಲ್ ಸ್ಕ್ರೀನ್ ಮೋಡ್ ಗೆ ಮ್ಯಾಕ್ಸಿಮೈಜ್ ಹೇಗೆ ಮಾಡುವದು ಎಂದು ನಾವು ತಿಳಿಯುತ್ತೇವೆ.
00:55 ಬ್ಲೆಂಡರ್ ಇಂಟರ್ಫೇಸ್ ನ ಮೂಲ ಅಂಶಗಳನ್ನು ನೀವು ತಿಳಿದಿರುವಿರಿ ಎಂದು ನಾನು ಭಾವಿಸುತ್ತೇನೆ.
01:01 ಇಲ್ಲದಿದ್ದರೆ ದಯವಿಟ್ಟು ನಮ್ಮ ಮೊದಲಿನ ಟ್ಯುಟೋರಿಯಲ್
01:05 Basic Description of the Blender Interface (ಬೇಸಿಕ್ ಡಿಸ್ಕ್ರಿಪ್ಶನ್ ಆಫ್ ದ ಬ್ಲೆಂಡರ್ ಇಂಟರ್ಫೇಸ್) ನ್ನು ನೋಡಿರಿ.
01:11 ಬ್ಲೆಂಡರ್ ಇಂಟರ್ಫೇಸ್ ನಲ್ಲಿ ಇರುವ ವಿವಿಧ ಪ್ರಕಾರದ ವಿಂಡೋ ಗಳನ್ನು ನಾವು ಈಗಾಗಲೇ ನೋಡಿದ್ದೇವೆ.
01:17 ಈ ವಿಂಡೋ ಗಳ ಗಾತ್ರವನ್ನು ಬದಲಾಯಿಸಬಹುದು.
01:21 ಮೌಸ್ ಕರ್ಸರ್ ನ್ನು ಔಟ್ಲೈನರ್ ವಿಂಡೋ ದ ಎಡ ಅಂಚಿಗೆ ಕೊಂಡೊಯ್ಯಿರಿ.
01:28 ನಾವು ಒಂದು ಡಬಲ್-ಹೆಡೆಡ್ ಆರೋ ನೋಡುತ್ತೇವೆ.
01:32 ಈಗ ನಿಮ್ಮ ಮೌಸ್ ನಲ್ಲಿ ಲೆಫ್ಟ್ ಕ್ಲಿಕ್ ಮಾಡಿರಿ ಮತ್ತು ಎಳೆಯಿರಿ.
01:37 ಮೌಸ್ ಸರಿಯುತ್ತಿದ್ದಂತೆ ಈ ಔಟ್ಲೈನರ್ ವಿಂಡೋ ಗಾತ್ರ ಬದಲಿಸುತ್ತದೆ.
01:45 ಈಗ, ಮೌಸ್ ಕರ್ಸರ್ ನ್ನು ಔಟ್ಲೈನರ್ ವಿಂಡೋ ದ ಕೆಳ ಅಂಚಿಗೆ ಕೊಂಡೊಯ್ಯಿರಿ.
01:51 ಇನ್ನೊಮ್ಮೆ ನಾವು ಒಂದು ಡಬಲ್-ಹೆಡೆಡ್ ಆರೋ ನೋಡುತ್ತೇವೆ.
01:55 ನಿಮ್ಮ ಮೌಸ್ ನಲ್ಲಿ ಲೆಫ್ಟ್ ಕ್ಲಿಕ್ ಮಾಡಿರಿ ಮತ್ತು ಎಳೆಯಿರಿ.
01:59 ಮೌಸ್ ಸರಿಯುತ್ತಿದ್ದಂತೆ ಈ ಔಟ್ಲೈನರ್ ವಿಂಡೋ ಗಾತ್ರ ಬದಲಿಸುತ್ತದೆ.
02:07 ಹೀಗೆ ಬ್ಲೆಂಡರ್ ಇಂಟರ್ಫೇಸ್ ನಲ್ಲಿ ಯಾವದೇ ವಿಂಡೋ ವನ್ನು ರಿಸೈಜ್ ಮಾಡಬಹುದು.
02:14 ಬ್ಲೆಂಡರ್ ಇಂಟರ್ಫೇಸ್ ನ ವಿವಿಧ ವಿಂಡೋ ಗಳಲ್ಲಿ ಟೋಗಲ್ ಮಾಡುವದು ಹೇಗೆ ಎಂದು ಈಗ ನಾವು ನೋಡೋಣ.
02:22 3D ವ್ಯೂ ನ ಎಡಗಡೆಯ ಮೂಲೆಗೆ ಹೋಗಿ.
02:27 ಈಗಿನ ಎಡಿಟರ್ ಯಾವುದೆಂದು ತೋರಿಸುತ್ತಿರುವ, ಅಪ್ ಮತ್ತು ಡೌನ್ ಆರೋ ಹೊಂದಿರುವ ಒಂದು ಬಟನ್ ಇಲ್ಲಿ ಇದೆ.
02:35 ಬಟನ್ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ.
02:38 ವಿವಿಧ ವಿಂಡೋ ಆಯ್ಕೆಗಳಿರುವ ಒಂದು ಮೆನ್ಯು ಓಪನ್ ಆಗುತ್ತದೆ.
02:42 ಇದು ಎಡಿಟರ್ ಟೈಪ್ ಮೆನ್ಯು ಆಗಿದೆ.
02:46 ಬ್ಲೆಂಡರ್ ಇಂಟರ್ಫೇಸ್ ನಲ್ಲಿ ಪ್ರತಿಯೊಂದು ವಿಂಡೋ ದ ಎಡಭಾಗದ ಮೂಲೆಯಲ್ಲಿ ಈ ಮೆನ್ಯು ಇರುತ್ತದೆ.
02:52 ಮತ್ತು ವಿವಿಧ ವಿಂಡೋ ಗಳ ನಡುವೆ ಟೊಗಲ್ ಮಾಡಲು ಉಪಯೋಗಿಸಲ್ಪಡುತ್ತದೆ.
02:59 ಮೆನ್ಯು ಆಯ್ಕೆಗಳ ಮೇಲೆ ನಿಮ್ಮ ಮೌಸ್ ನ್ನು ಕೊಂಡೊಯ್ಯಿರಿ.
03:04 ಶಾರ್ಟ್ಕಟ್ ಗಾಗಿ ನಿಮ್ಮ ಕೀಬೋರ್ಡ್ ಮೇಲಿನ ಅಪ್ ಮತ್ತು ಡೌನ್ ಆರೋ ಕೀ ಗಳನ್ನು ನೀವು ಬಳಸಬಹುದು.
03:12 UV or Image Editor ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿ.
03:16 3D ವ್ಯೂ UV ಇಮೇಜ್ ಎಡಿಟರ್ ಗೆ ಬದಲಾಯಿಸಿದೆ.
03:25 ಎಡಿಟರ್ ಟೈಪ್ ಮೆನ್ಯು ಮೇಲೆ ಲೆಫ್ಟ್ ಕ್ಲಿಕ್ ಮಾಡಿ ಮತ್ತು 3D view ಅನ್ನು ಆಯ್ಕೆ ಮಾಡಿರಿ.
03:31 ಈಗ ನಾವು 3D ವ್ಯೂ ಗೆ ಮರಳಿದ್ದೇವೆ.
03:36 ಎಡಿಟರ್ ಟೈಪ್ ಮೆನ್ಯು ಉಪಯೋಗಿಸಿ ನೀವು ಹೀಗೆ ವಿವಿಧ ವಿಂಡೋ ಗಳ ನಡುವೆ ಟೊಗಲ್ ಮಾಡಬಹುದು.
03:47 ಡಿಫಾಲ್ಟ್ 3D ವ್ಯೂ ಅನ್ನು 4 ಭಾಗಗಳಲ್ಲಿ ವಿಭಾಗಿಸಬಹುದು.
03:53 3D ವ್ಯೂ ಅನ್ನು ಎರಡು ವಿಧದಲ್ಲಿ ವಿಭಾಗಿಸಬಹುದು.
03:57 ಮೊದಲನೆಯದು, 3D ವ್ಯೂ ನ ಕೆಳಗೆ ಎಡಮೂಲೆಯಲ್ಲಿ, ಎಡಿಟರ್ ಟೈಪ್ ಮೆನ್ಯು ದ ಪಕ್ಕದಲ್ಲಿರುವ View ಮೇಲೆ ಲೆಫ್ಟ್ ಕ್ಲಿಕ್ ಮಾಡಿ,
04:07 ಮೇಲಿನಿಂದ ಎರಡನೆಯದಾದ Toggle Quad view (ಟೋಗಲ್ ಕ್ವೊಡ್ ವ್ಯೂ) ಎನ್ನುವ ಆಯ್ಕೆಯನ್ನು ಆರಿಸಿಕೊಳ್ಳಿ.
04:13 ಶಾರ್ಟ್ಕಟ್ ಗಾಗಿ Ctrl, Alt & Q ಒತ್ತಿ.
04:20 ಈ 3D ವ್ಯೂ 4 ವಿಭಿನ್ನ ವ್ಯೂ ಗಳಲ್ಲಿ ವಿಭಾಗಿಸಲ್ಪಟ್ಟಿದೆ.
04:26 ಟಾಪ್ ವ್ಯೂ, ಫ್ರಂಟ್ ವ್ಯೂ,ರೈಟ್ ವ್ಯೂ ಮತ್ತು ಕ್ಯಾಮೆರಾ ವ್ಯೂ.
04:38 ಬ್ಲೆಂಡರ್ ನಲ್ಲಿ ಮಾಡೆಲಿಂಗ್ ಹಾಗೂ ಅನಿಮೇಟಿಂಗ್ ಮಾಡುವಾಗ ಇದು ನಿಮಗೆ ಬಹಳ ಉಪಯುಕ್ತವೆನಿಸುವದು.
04:47 ಕ್ವಾಡ್ ವ್ಯೂ ಅನ್ನು ನಿಷ್ಕ್ರಿಯಗೊಳಿಸಲು Ctrl, Alt & Q ಒತ್ತಿರಿ.
04:55 ಸ್ಪೇಸ್ ಬಾರ್ ಒತ್ತಿ ಮತ್ತು ಸರ್ಚ್ ಏರಿಯಾ ದಲ್ಲಿ Toggle ಎಂದು ಟೈಪ್ ಮಾಡಿ.
05:05 ಲಿಸ್ಟ್ ನಿಂದ Toggle Quad view ಆಯ್ಕೆಯನ್ನು ಆರಿಸಿಕೊಳ್ಳಿ.
05:12 ಇದು ಕ್ವಾಡ್ ವ್ಯೂ ಅನ್ನು ಸಕ್ರಿಯಗೊಳಿಸುವ ಎರಡನೆಯ ವಿಧಾನ.
05:18 ಮತ್ತೆ ಕ್ವಾಡ್ ವ್ಯೂ ನಿಷ್ಕ್ರಿಯಗೊಳಿಸಲು Ctrl, Alt & Q ಒತ್ತಿರಿ.
05:27 ಬ್ಲೆಂಡರ್ ನ ಡಿಫಾಲ್ಟ್ ಕ್ಯಾಮೆರಾ ವ್ಯೂ ಗೆ ನಾವು ಮರಳಿದ್ದೇವೆ.
05:33 ಡಿಫಾಲ್ಟ್ ನಿಂದ ಬ್ಲೆಂಡರ್ ಇಂಟರ್ಫೇಸ್ ನಲ್ಲಿರುವ ಈ ಐದು ವಿಭಿನ್ನ ವಿಂಡೋ ಗಳನ್ನು ಹೊರತುಪಡಿಸಿ,
05:39 ನೀವು ಈ ಏರಿಯಾ ವನ್ನು ವಿಭಾಗಿಸಿ ಬ್ಲೆಂಡರ್ ಇಂಟರ್ಫೇಸ್ ಗೆ ಹೊಸ ವಿಂಡೋ ಗಳನ್ನು ಸಹ ಸೇರಿಸಬಹುದು.
05:46 ಮತ್ತೆ, ಇದನ್ನು ಮಾಡಲು ಎರಡು ವಿಧಾನಗಳಿವೆ.
05:50 ನಾನು ಇದನ್ನು ಔಟ್ಲೈನರ್ ವಿಂಡೋ ದಲ್ಲಿ ತೋರಿಸುವೆನು.
05:55 ನಿಮ್ಮ ಮೌಸ್ ಕರ್ಸರ್ ನ್ನು, ಔಟ್ಲೈನರ್ ವಿಂಡೋ ದ ಕೆಳಗಿನ ಎಡ ಮೂಲೆಯಲ್ಲಿರುವ ವಾಲಿರುವ ಮೂರು ಗೆರೆಗಳು ಅಥವಾ ಹ್ಯಾಚ್ಡ್ ಗೆರೆಯತ್ತ, ಪ್ಲಸ್ ಚಿನ್ಹೆ ಕಾಣುವವರೆಗೆ ಕೊಂಡೊಯ್ಯಿರಿ.
06:07 ಲೆಫ್ಟ್ ಕ್ಲಿಕ್ ನ್ನು ಹಿಡಿದು ನಿಮ್ಮ ಮೌಸ್ ನ್ನು ಬಲಕ್ಕೆ ಎಳೆಯಿರಿ.
06:12 ಔಟ್ಲೈನರ್ ವಿಂಡೋ ಈಗ ಎರಡು ಹೊಸ ಪ್ಯಾನೆಲ್ ಗಳಲ್ಲಿ ವಿಭಾಗಿಸಲ್ಪಟ್ಟಿದೆ.
06:19 ಪ್ರತಿಯೊಂದು ಹೊಸ ಪ್ಯಾನೆಲ್ ಗೆ ತನ್ನದೇ ಆದ ಟೂಲ್ ಸೆಟ್ ಇದೆ.
06:26 ಈಗ, ಎರಡೂ ಹೊಸ ಪ್ಯಾನೆಲ್ ಗಳನ್ನು ಮರಳಿ ಮರ್ಜ್ ಮಾಡಲು ನಾವು ಅದೇ ವಿಧಾನವನ್ನು ಬಳಸುತ್ತೇವೆ.
06:33 ಬಲ ಪ್ಯಾನೆಲ್ ಮರಳಿ ಎಡ ಪ್ಯಾನೆಲ್ ನಲ್ಲಿ ಮರ್ಜ್ ಆಗಬೇಕು.
06:39 ನಿಮ್ಮ ಮೌಸ್ ಕರ್ಸರ್ ನ್ನು ಬಲ ಔಟ್ಲೈನರ್ ಪ್ಯಾನೆಲ್ ನ ಕೆಳಗಿನ ಎಡ ಮೂಲೆಯಲ್ಲಿಯ ಹ್ಯಾಚ್ಡ್ ಗೆರೆಗಳೆಡೆಗೆ, ಪ್ಲಸ್ ಸೈನ್ ಕಾಣಿಸಿಕೊಳ್ಳುವವರೆಗೂ ಕೊಂಡೊಯ್ಯಿರಿ.
06:50 ಲೆಫ್ಟ್ ಕ್ಲಿಕ್ ಅನ್ನು ಹಿಡಿದು ನಿಮ್ಮ ಮೌಸ್ ಅನ್ನು ಲೆಫ್ಟ್ ಪ್ಯಾನೆಲ್ ನತ್ತ ಎಳೆಯಿರಿ.
06:56 ಈ ಪ್ಯಾನೆಲ್ ಮಬ್ಬಾಗಿದೆ ಹಾಗೂ ಒಂದು ಸ್ಪಷ್ಟ ಆರೋ ಚಿನ್ಹೆ ಅದರಮೇಲೆ ಕಾಣಿಸಿಕೊಂಡಿದೆ.
07:02 ಲೆಫ್ಟ್ ಕ್ಲಿಕ್ ಬಿಟ್ಟುಬಿಡಿ.
07:05 ಈ ಎರಡೂ ವಿಂಡೋ ಗಳು ಮರ್ಜ್ ಆಗಿವೆ.
07:10 ವಿಂಡೋ ಏರಿಯಾ ವನ್ನು ವಿಭಾಗಿಸುವ ಎರಡನೆಯ ರೀತಿಯನ್ನು ಈಗ ನಾವು ನೋಡೋಣ.
07:15 ಮೊದಲು ನಾವು ಔಟ್ಲೈನರ್ ವಿಂಡೋ ವನ್ನು ಅಡ್ಡಲಾಗಿ ವಿಭಾಗಿಸೋಣ.
07:21 ಒಂದು ಡಬಲ್-ಹೆಡೆಡ್ ಆರೋ ಕಾಣಿಸುವವರೆಗೆ ನಿಮ್ಮ ಮೌಸ್ ಕರ್ಸರ್ ಅನ್ನು ಔಟ್ಲೈನರ್ ವಿಂಡೋ ದ ಎಡ ಅಂಚಿಗೆ ಕೊಂಡೊಯ್ಯಿರಿ.
07:29 arrow ಚಿನ್ಹೆಯ ಮೇಲೆ ರೈಟ್ ಕ್ಲಿಕ್ ಮಾಡಿರಿ.
07:33 Split area ದ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ.
07:37 ನಿಮ್ಮ ಮೌಸ್ ಅನ್ನು ಔಟ್ಲೈನರ್ ವಿಂಡೋ ದ ಮಧ್ಯಕ್ಕೆ ಎಳೆದು ತನ್ನಿ.
07:43 ಡಬಲ್-ಹೆಡೆಡ್ ಆರೋ ಜೊತೆಗೆ ಒಂದು ಅಡ್ಡಗೆರೆ ಕಾಣಿಸಿಕೊಳ್ಳುತ್ತದೆ.
07:48 ಈ ಸ್ಥಾನವನ್ನು ಲಾಕ್ ಮಾಡಲು ಲೆಫ್ಟ್ ಕ್ಲಿಕ್ ಮಾಡಿ.
07:54 ಔಟ್ಲೈನರ್ ವಿಂಡೋ ಈಗ ಎರಡು ಹೊಸ ಅಡ್ಡಲಾದ ಪ್ಯಾನೆಲ್ ಗಳಲ್ಲಿ ವಿಭಾಗಿಸಲ್ಪಟ್ಟಿದೆ.
08:01 ಮೊದಲಿನಂತೆ ಪ್ರತಿಯೊಂದು ಹೊಸ ಪ್ಯಾನೆಲ್ ಗೆ ತನ್ನದೇ ಆದ ಟೂಲ್ ಸೆಟ್ ಇದೆ.
08:07 ಈಗ ನಾವು ಹೊಸ ಪ್ಯಾನೆಲ್ ಗಳನ್ನು ಮೊದಲಿನಂತೆ ಮತ್ತೆ ಮರ್ಜ್ ಮಾಡೋಣ.
08:14 ಒಂದು ಡಬಲ್-ಹೆಡೆಡ್ ಆರೋ ಕಾಣಿಸುವವರೆಗೆ ನಿಮ್ಮ ಮೌಸ್ ಕರ್ಸರ್ ಅನ್ನು ಎರಡು ಹೊಸ ಪ್ಯಾನೆಲ್ ಗಳ ಮಧ್ಯದ ಅಡ್ಡವಾದ ಅಂಚಿಗೆ ಕೊಂಡೊಯ್ಯಿರಿ.
08:26 ರೈಟ್ ಕ್ಲಿಕ್ ಮಾಡಿ ಮತ್ತು Join area ಆಯ್ಕೆಮಾಡಿರಿ.
08:31 ಮೇಲಿನ ಅಥವಾ ಕೆಳಗಿನ ಯಾವದೇ ಒಂದು ಪ್ಯಾನೆಲ್ ಮೇಲೆ ನಿಮ್ಮ ಮೌಸ್ ಅನ್ನು ಕೊಂಡೊಯ್ಯಿರಿ.
08:35 ನಾನು ಕೆಳಗಿನ ಪ್ಯಾನೆಲ್ ಆರಿಸಿಕೊಳ್ಳುತ್ತಿದ್ದೇನೆ.
08:40 ಈ ಆಯ್ದುಕೊಂಡ ಪ್ಯಾನೆಲ್ ಮಬ್ಬಾಗಿದೆ ಮತ್ತು ಅದರ ಮೇಲೆ ಒಂದು ನಿಚ್ಚಳವಾದ ಆರೋ ಚಿನ್ಹೆ ಕಾಣಿಸುತ್ತಿದೆ.
08:47 ಶೇಡೆಡ್ ಪ್ಯಾನೆಲ್ ಮೇಲೆ ಲೆಫ್ಟ್ ಕ್ಲಿಕ್ ಮಾಡಿ.
08:50 ಎರಡೂ ಪ್ಯಾನೆಲ್ ಗಳು ಮತ್ತೆ ಒಟ್ಟಿಗೆ ಮರ್ಜ್ ಆಗಿವೆ.
08:54 ಈಗ ಔಟ್ಲೈನರ್ ವಿಂಡೋ ವನ್ನು ಉದ್ದಕ್ಕೆ ವಿಭಾಗಿಸಿ ಹಾಗೂ ಹೊಸ ಪ್ಯಾನೆಲ್ ಗಳನ್ನು ಮತ್ತೆ ಮರ್ಜ್ ಮಾಡಲು ಪ್ರಯತ್ನಿಸಿ.
09:03 ಒಂದು ಡಬಲ್-ಹೆಡೆಡ್ ಆರೋ ಕಾಣುವವರೆಗೂ ಔಟ್ಲೈನರ್ ವಿಂಡೋ ದ ಕೆಳ ಅಂಚಿನವರೆಗೆ ನಿಮ್ಮ ಮೌಸ್ ಕರ್ಸರ್ ಅನ್ನು ಕೊಂಡೊಯ್ಯಿರಿ.
09:12 arrow sign ಮೇಲೆ ರೈಟ್ ಕ್ಲಿಕ್ ಮಾಡಿ.
09:16 Split area ಮೇಲೆ ಲೆಫ್ಟ್ ಕ್ಲಿಕ್ ಮಾಡಿ.
09:21 ಔಟ್ಲೈನರ್ ವಿಂಡೋ ದ ಮಧ್ಯಕ್ಕೆ ನಿಮ್ಮ ಮೌಸ್ ನ್ನು ಎಳೆದು ತನ್ನಿ.
09:26 ಡಬಲ್-ಹೆಡೆಡ್ ಆರೋ ಜೊತೆಗೆ ಒಂದು ಉದ್ದದ ಗೆರೆ ಕಾಣಿಸಿಕೊಳ್ಳುತ್ತದೆ.
09:33 ಈ ಸ್ಥಾನವನ್ನು ಲಾಕ್ ಮಾಡಲು ಲೆಫ್ಟ್ ಕ್ಲಿಕ್ ಮಾಡಿ.
09:36 ಔಟ್ಲೈನರ್ ವಿಂಡೋ ಈಗ ಎರಡು ಹೊಸ ಲಂಬ ಪ್ಯಾನೆಲ್ ಗಳಾಗಿ ವಿಭಾಗಿಸಲ್ಪಟ್ಟಿದೆ.
09:45 ಒಂದು ಡಬಲ್-ಹೆಡೆಡ್ ಆರೋ ಕಾಣುವವರೆಗೆ ಎರಡೂ ಹೊಸ ಪ್ಯಾನೆಲ್ ಗಳ ನಡುವಿನ ಉದ್ದನೆಯ ಅಂಚಿಗೆ ನಿಮ್ಮ ಮೌಸ್ ನ ಕರ್ಸರ್ ಅನ್ನು ಕೊಂಡೊಯ್ಯಿರಿ.
09:55 ರೈಟ್ ಕ್ಲಿಕ್ ಮಾಡಿ Join area ಆಯ್ದುಕೊಳ್ಳಿ.
10:01 ನಿಮ್ಮ ಮೌಸ್ ಅನ್ನು ಎಡ ಅಥವ ಬಲಕ್ಕಿರುವ ಯಾವುದೇ ಒಂದು ಪ್ಯಾನೆಲ್ ಮೇಲೆ ಕೊಂಡೊಯ್ಯಿರಿ.
10:05 ನಾನು ಬಲ ಪ್ಯಾನೆಲ್ ಅನ್ನು ಆರಿಸಿಕೊಳ್ಳುತ್ತಿದ್ದೇನೆ.
10:10 ಆಯ್ಕೆಯಾದ ಪ್ಯಾನೆಲ್ ಮಬ್ಬಾಗಿದೆ ಮತ್ತು ಇದರ ಮೇಲೆ ಒಂದು ನಿಚ್ಚಳವಾದ ಆರೋ ಚಿನ್ಹೆ ಕಾಣಿಸುತ್ತದೆ.
10:16 ಶೇಡ್ ಆಗಿರುವ ಪ್ಯಾನೆಲ್ ಮೇಲೆ ಲೆಫ್ಟ್ ಕ್ಲಿಕ್ ಮಾಡಿ.
10:19 ಎರಡು ಪ್ಯಾನೆಲ್ ಗಳು ಪುನಃ ಒಟ್ಟಿಗೆ ಮರ್ಜ್ ಆಗುತ್ತವೆ.
10:24 ಈಗ, ಪ್ರಾಪರ್ಟೀಸ್ ವಿಂಡೋ ನಲ್ಲಿ ವಿವಿಧ ಪ್ಯಾನೆಲ್ ಗಳ ಸ್ಥಾನವನ್ನು ಹೇಗೆ ಮರು ವ್ಯವಸ್ಥೆ ಮಾಡಬಹುದು ಎಂದು ನಾವು ನೋಡೋಣ.
10:32 ಉದಾಹರಣೆಗೆ, ನಮಗೆ ಲೇಯರ್ಸ್ ಪ್ಯಾನೆಲ್ ರೆಂಡರ್ ಪ್ಯಾನೆಲ್ ನ ಮೇಲ್ಗಡೆ ಬೇಕಾಗಿದೆ.
10:40 ಲೇಯರ್ಸ್ ಪ್ಯಾನೆಲ್ ನ ಮೇಲಿನ ಬಲಮೂಲೆಯಲ್ಲಿರುವ ವಾಲಿರುವ ಮೂರು ಗೆರೆಗಳತ್ತ ಮೌಸ್ ಕರ್ಸರ್ ಅನ್ನು ಕೊಂಡೊಯ್ಯಿರಿ.
10:50 ಲೆಫ್ಟ್ ಕ್ಲಿಕ್ ಅನ್ನು ಒತ್ತಿ ಹಿಡಿದು ನಿಮ್ಮ ಮೌಸ್ ಅನ್ನು ಮೇಲ್ಗಡೆಗೆ ಎಳೆಯಿರಿ.
11:00 ಲೇಯರ್ಸ್ ಪ್ಯಾನೆಲ್, ರೆಂಡರ್ ಪ್ಯಾನೆಲ್ ನ ಮೇಲಕ್ಕೆ ಸರಿಯುತ್ತದೆ.
11:07 ಈಗ, ಬ್ಲೆಂಡರ್ ನಲ್ಲಿ ಯಾವದೇ ಒಂದು ವಿಂಡೋ ಅನ್ನು ಹೇಗೆ ಮ್ಯಾಕ್ಸಿಮೈಜ್ ಮಾಡುವದು ಅಥವಾ ಫುಲ್ ಸ್ಕ್ರೀನ್ ಮೋಡ್ ಗೆ ಹೇಗೆ ಸ್ವಿಚ್ ಮಾಡುವದು ಎಂದು ನಾವು ನೋಡೋಣ.
11:20 ನಿಮ್ಮ ಮೌಸ್ ಕರ್ಸರ್ ಅನ್ನು ಯಾವುದೇ ಒಂದು ವಿಂಡೋ ಗೆ ಸರಿಸಿ.
11:23 ನಾನು 3D ವ್ಯೂ ಅನ್ನು ಆರಿಸಿಕೊಳ್ಳುತ್ತಿದ್ದೇನೆ.
11:28 ನಿಮ್ಮ ಕೀ ಬೋರ್ಡ್ ಮೇಲಿನ Ctrl & up arrow ಕೀ ಗಳನ್ನು ಒತ್ತಿರಿ.
11:33 ಈ 3D ವ್ಯೂ ಈಗ ಫುಲ್ ಸ್ಕ್ರೀನ್ ಮೋಡ್ ಗೆ ಮ್ಯಾಕ್ಸಿಮೈಜ್ ಮಾಡಲ್ಪಟ್ಟಿದೆ.
11:41 ಫುಲ್ ಸ್ಕ್ರೀನ್ ಮೋಡ್ ನಿಂದ ಹೊರಬರಲು ನಿಮ್ಮ ಕೀ ಬೋರ್ಡ್ ಮೇಲಿನ Ctrl & down arrow ಕೀ ಗಳನ್ನು ಒತ್ತಿರಿ.
11:48 ನಾವು ಬ್ಲೆಂಡರ್ ನ ಡಿಫಾಲ್ಟ್ ವ್ಯೂ ಗೆ ಮತ್ತೆ ಮರಳಿದ್ದೇವೆ.
11:51 ಇದನ್ನು ಯಾವದೇ ವಿಂಡೋ ಗೂ ಮಾಡಬಹುದು.
11:59 ಬ್ಲೆಂಡರ್ ನಲ್ಲಿ ನಾವು ಈ ರೀತಿ ವಿಂಡೋ ದ ಗಾತ್ರ ಬದಲಿಕೆ, ವಿಂಡೋ ಗಳ ನಡುವೆ ಟೊಗಲ್ ಮಾಡುವದು, ವಿಂಡೋ ಗಳನ್ನು ವಿಭಾಗಿಸುವದು ಮತ್ತು ಅವುಗಳನ್ನು ಪುನಃ ವಿಲೀನಗೊಳಿಸುವದನ್ನು ಮಾಡುತ್ತೇವೆ.
12:11 ಈಗ ಒಂದು ಹೊಸ ಫೈಲ್ ಅನ್ನು ಸೃಷ್ಟಿಸಿರಿ ಮತ್ತು 3D ವ್ಯೂ ಅನ್ನು ಕ್ವಾಡ್ ವ್ಯೂ ಗೆ ಟೋಗಲ್ ಮಾಡಲು ಪ್ರಯತ್ನಿಸಿರಿ.
12:19 ಔಟ್ಲೈನರ್ ವಿಂಡೋ ವನ್ನು ವಿಭಾಗಿಸಿ ಹಾಗೂ ಹೊಸ ಪ್ಯಾನೆಲ್ ಗಳನ್ನು ಮತ್ತೆ ಮರ್ಜ್ ಮಾಡಿರಿ.
12:27 ಪ್ರಾಪರ್ಟೀಸ್ ವಿಂಡೋ ನಲ್ಲಿ ಔಟ್ಪುಟ್ ಪ್ಯಾನೆಲ್ ಅನ್ನು ರೆಂಡರ್ ಪ್ಯಾನೆಲ್ ನ ಮೇಲ್ಗಡೆಗೆ ಸ್ಥಳಾಂತರಿಸಿ.
12:35 3D ವ್ಯೂ ಅನ್ನು ಫುಲ್ ಸ್ಕ್ರೀನ್ ಮೋಡ್ ಗೆ ಮ್ಯಾಕ್ಸಿಮೈಜ್ ಮಾಡಿರಿ.
12:44 ಈ ಟ್ಯುಟೋರಿಯಲ್ ರಾಷ್ಟ್ರೀಯ ಸಾಕ್ಷರತಾ ಮಿಶನ್, ICT ಯ ಆಧಾರದಿಂದ ಮತ್ತು Project Oscar ಅವರಿಂದ ತಯಾರಿಸಲ್ಪಟ್ಟಿದೆ.
12:52 ಇದರ ಬಗ್ಗೆ ಹೆಚ್ಚಿನ ಮಾಹಿತಿ ಈ ಕೆಳಗಿನ ಲಿಂಕ್ ಗಳ ಮೇಲೆ ಲಭ್ಯವಿದೆ.
12:57 oscar.iitb.ac.in ಮತ್ತು spoken-tutorial.org/NMEICT-Intro.
13:10 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು-
13:13 ಸ್ಪೋಕನ್ ಟ್ಯುಟೋರಿಯಲ್ಸ್ ಬಳಸಿಕೊಂಡು ಕಾರ್ಯಶಾಲೆಗಳನ್ನು ನಡೆಸುತ್ತದೆ.
13:17 ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
13:21 ಹೆಚ್ಚಿನ ವಿವರಗಳಿಗೆ ದಯವಿಟ್ಟು contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
13:29 ಇದರ ಪ್ರವಾಚಕ ಐ ಐ ಟಿ ಬಾಂಬೆ ಯಿಂದ ವಾಸುದೇವ. ಧನ್ಯವಾದಗಳು.

Contributors and Content Editors

Vasudeva ahitanal