Advanced-Cpp/C2/Function-Overloading-And-Overriding/Kannada

From Script | Spoken-Tutorial
Jump to: navigation, search
Time Narration
00:01 C++ ನಲ್ಲಿಯ function Overloading and Overriding (ಫಂಕ್ಶನ್ ಓವರ್‌ಲೋಡಿಂಗ್ ಆಂಡ್ ಓವರ್‌ರೈಡಿಂಗ್) ಎನ್ನುವುದರ ಕುರಿತು ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:09 ಈ ಟ್ಯುಟೋರಿಯಲ್ ನಲ್ಲಿ,
00:11 ಫಂಕ್ಶನ್ ಓವರ್‌ಲೋಡಿಂಗ್
00:13 ಮತ್ತು ಫಂಕ್ಶನ್ ಓವರ್‌ರೈಡಿಂಗ್ ಗಳನ್ನು ನಾವು ಕಲಿಯುವೆವು,ನಾವು ಇದನ್ನು ಉದಾಹರಣೆಗಳ ಸಹಾಯದಿಂದ ಮಾಡುವೆವು.
00:18 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು,
00:21 Ubuntu ಆಪರೇಟಿಂಗ್ ಸಿಸ್ಟಮ್ ನ 11.10 ಆವೃತ್ತಿ ಹಾಗೂ,
00:26 g++ ಕಂಪೈಲರ್ನ 4.6.1 ನೇ ಆವೃತ್ತಿಯನ್ನು ಬಳಸುತ್ತಿದ್ದೇನೆ.
00:30 ನಾವು ಫಂಕ್ಶನ್ ಓವರ್‌ಲೋಡಿಂಗ್ ಎನ್ನುವುದರ ಪರಿಚಯದೊಂದಿಗೆ ಆರಂಭಿಸೋಣ.
00:34 ಫಂಕ್ಶನ್ ಓವರ್‌ಲೋಡಿಂಗ್ ಎಂದರೆ ಎರಡು ಅಥವಾ ಅದಕ್ಕಿಂತ ಹೆಚ್ಚು ಫಂಕ್ಶನ್ ಗಳು ಒಂದೇ ಹೆಸರನ್ನು ಹೊಂದಿರುವುದು ಎಂದರ್ಥ.
00:41 ಅವುಗಳಲ್ಲಿರುವ ಆರ್ಗ್ಯುಮೆಂಟುಗಳ ಸಂಖ್ಯೆ ಮತ್ತು ಆರ್ಗ್ಯುಮೆಂಟುಗಳ ಡೇಟಾ-ಟೈಪ್ ಗಳು ಭಿನ್ನವಾಗಿರುವವು.
00:47 ಕಾಲ್ ಮಾಡಿದಾಗ ಆರ್ಗ್ಯುಮೆಂಟನ ಲಿಸ್ಟ್ ಗೆ ಅನುಗುಣವಾಗಿ ಫಂಕ್ಶನ್, ಆಯ್ಕೆಯಾಗುತ್ತದೆ.
00:53 ನಾವು ಒಂದು ಉದಾಹರಣೆಯನ್ನು ನೋಡೋಣ.
00:56 ನಾನು ಕೋಡನ್ನು ಈಗಾಗಲೇ ಎಡಿಟರ್ನಲ್ಲಿ ಟೈಪ್ ಮಾಡಿದ್ದೇನೆ.
00:59 ನಾವು ಈ ಪ್ರೋಗ್ರಾಂನಲ್ಲಿ ಸ೦ಕಲನವನ್ನು ಮಾಡಿ ತೋರಿಸುವೆವು.
01:03 ನಮ್ಮ ಫೈಲ್ ನೇಮ್ overload.cpp ಆಗಿದೆ ಎನ್ನುವುದನ್ನು ಗಮನಿಸಿರಿ.
01:08 ನಾನು ಕೋಡ್ ಅನ್ನು ಈಗ ವಿವರಿಸುತ್ತೇನೆ.
01:10 ಇದು iostream ಎನ್ನುವ ನಮ್ಮ ಹೆಡರ್ ಫೈಲ್ ಆಗಿದೆ.
01:13 ಇಲ್ಲಿ ನಾವು std namespace ಎನ್ನುವುದನ್ನು ಉಪಯೋಗಿಸುತ್ತಿದ್ದೇವೆ.
01:17 ಆಮೇಲೆ add ಎನ್ನುವ ಫಂಕ್ಶನ್ ಅನ್ನು int ಎಂದು ಡಿಫೈನ್ ಮಾಡಲಾಗಿದೆ.
01:21 ಇದರಲ್ಲಿ ನಾವು ಮೂರು ಆರ್ಗ್ಯುಮೆಂಟುಗಳನ್ನು ಪಾಸ್ ಮಾಡಿದ್ದೇವೆ.
01:24 Int a, int b ಮತ್ತು int c;
01:28 ನಂತರ ನಾವು ಮೂರು ಸಂಖ್ಯೆಗಳ ಸಂಕಲನವನ್ನು ಮಾಡುತ್ತೇವೆ ಮತ್ತು ವ್ಯಾಲ್ಯುವನ್ನು ರಿಟರ್ನ್ ಮಾಡುತ್ತೇವೆ.
01:33 ಇಲ್ಲಿ ನಾವು add ಎನ್ನುವ ಫಂಕ್ಶನ್ ಅನ್ನು ಓವರ್‌ಲೋಡ್ ಮಾಡುತ್ತೇವೆ.
01:36 ಇದನ್ನು float ಎಂದು ಡಿಕ್ಲೇರ್ ಮಾಡಲಾಗಿದೆ.
01:38 float d ಮತ್ತು float e ಎನ್ನುವ ಎರಡು ಆರ್ಗ್ಯುಮೆಂಟುಗಳನ್ನು ಪಾಸ್ ಮಾಡುತ್ತೇವೆ.
01:44 ಆಮೇಲೆ ನಾವು ಈ ಎರಡು ಸಂಖ್ಯೆಗಳ ಸಂಕಲನವನ್ನು ಮಾಡುತ್ತೇವೆ.
01:48 ಇದು ನಮ್ಮ main ಎನ್ನುವ ಫಂಕ್ಶನ್ ಆಗಿದೆ.
01:50 ಈ main ಎನ್ನುವ ಫಂಕ್ಶನ್ ನಲ್ಲಿ ನಾವು, add ಎನ್ನುವ ಫಂಕ್ಶನ್ ಅನ್ನು ವಿಭಿನ್ನ ಆರ್ಗ್ಯುಮೆಂಟುಗಳೊಂದಿಗೆ ಡಿಕ್ಲೇರ್ ಮಾಡುತ್ತೇವೆ.
01:56 ಆಮೇಲೆ ನಾವು ವೇರಿಯಬಲ್ ಗಳನ್ನು ಡಿಕ್ಲೇರ್ ಮಾಡುತ್ತೇವೆ.
01:58 ಇಲ್ಲಿ ನಾವು ಯೂಸರ್ ನಿಂದ ಇಂಟೀಜರ್ ವ್ಯಾಲ್ಯುಗಳನ್ನು ಪಡೆಯುತ್ತೇವೆ.
02:03 ನಂತರ ನಾವು add ಎನ್ನುವ ಫಂಕ್ಶನ್ ಅನ್ನು ಮೂರು ಆರ್ಗ್ಯುಮೆಂಟುಗಳೊಂದಿಗೆ ಕಾಲ್ ಮಾಡುತ್ತೇವೆ.
02:07 ಮತ್ತು ಮೊತ್ತವನ್ನು sum ಎನ್ನುವ ವೇರಿಯಬಲ್ ನಲ್ಲಿ ಸ್ಟೋರ್ ಮಾಡುತ್ತೇವೆ.
02:09 ಇಲ್ಲಿ ನಾವು sum ಎನ್ನುವುದನ್ನು ಪ್ರಿಂಟ್ ಮಾಡುತ್ತೇವೆ.
02:12 ಈಗ, ಯೂಸರ್ ನಿಂದ ಇಲ್ಲಿ ನಾವು ಫ್ಲೋಟಿಂಗ್ ಪಾಯಿಂಟ್ ನಂಬರ್ ಗಳನ್ನು ಪಡೆಯುತ್ತೇವೆ.
02:17 ಆಮೇಲೆ ನಾವು add ಎನ್ನುವ ಫಂಕ್ಶನ್ ಅನ್ನು ಎರಡು ಆರ್ಗ್ಯುಮೆಂಟುಗಳೊಂದಿಗೆ ಕಾಲ್ ಮಾಡುತ್ತೇವೆ.
02:21 ಇಲ್ಲಿ ನಾವು sum ಎನ್ನುವುದನ್ನು ಪ್ರಿಂಟ್ ಮಾಡುತ್ತೇವೆ.
02:23 ಮತ್ತು ಇದು ನಮ್ಮ return ಸ್ಟೇಟಮೆಂಟ್ ಆಗಿದೆ.
02:26 ಈಗ ನಾವು ಪ್ರೊಗ್ರಾಮನ್ನು ಎಕ್ಸಿಕ್ಯೂಟ್ ಮಾಡೋಣ.
02:29 ನಿಮ್ಮ ಕೀಬೋರ್ಡ್ ಮೇಲಿನ Ctrl, Alt ಮತ್ತು T ಎನ್ನುವ ಕೀಗಳನ್ನು ಒಂದೇ ಬಾರಿಗೆ ಒತ್ತಿ, ಟರ್ಮಿನಲ್ ಅನ್ನು ಓಪನ್ ಮಾಡಿರಿ.
02:38 ಎಕ್ಸಿಕ್ಯೂಟ್ ಮಾಡಲು g++ space overload dot cpp space hyphen o space over ಎಂದು ಟೈಪ್ ಮಾಡಿರಿ.
02:49 Enter ಅನ್ನು ಒತ್ತಿರಿ.
02:51 ./over (ಡಾಟ್ ಸ್ಲ್ಯಾಷ್ over) ಎಂದು ಟೈಪ್ ಮಾಡಿರಿ.
02:53 Enter ಅನ್ನು ಒತ್ತಿರಿ.
02:55 Enter three integers ಎಂದು ಕಾಣಿಸುತ್ತದೆ.
02:58 ನಾನು 10, 25 ಮತ್ತು 48 ಗಳನ್ನು ಎಂಟರ್ ಮಾಡುವೆನು.
03:04 ಔಟ್ಪುಟ್ ಹೀಗೆ ಕಾಣಿಸುತ್ತದೆ: Sum of integers is 83.
03:09 ಈಗ ನಾವು ನೋಡುತ್ತೇವೆ: Enter two floating point numbers
03:13 ನಾನು 4.5 ಮತ್ತು 8.9 ಗಳನ್ನು ಎಂಟರ್ ಮಾಡುವೆನು.
03:17 Enter ಅನ್ನು ಒತ್ತಿರಿ.
03:19 ಔಟ್ಪುಟ್ ಹೀಗೆ ತೋರಿಸಲ್ಪಡುತ್ತದೆ: Sum of floating point numbers is 13.4
03:25 ಈಗ ನಾವು ಫಂಕ್ಶನ್ ಓವರ್‌ರೈಡಿಂಗ್ ಅನ್ನು ನೋಡುವೆವು.
03:29 ನಾವು ನಮ್ಮ ಸ್ಲೈಡ್ ಗಳಿಗೆ ಬದಲಾಯಿಸೋಣ.
03:31 ಡಿರೈವ್ಡ್ ಕ್ಲಾಸ್ ನಲ್ಲಿ, ಬೇಸ್ ಕ್ಲಾಸ್ನ ಫಂಕ್ಶನ್ಅನ್ನು ಮತ್ತೆ ಡಿಫೈನ್ ಮಾಡುವದು.
03:36 ಡಿರೈವ್ಡ್ ಕ್ಲಾಸ್ನ ಫಂಕ್ಶನ್, ಬೇಸ್ ಕ್ಲಾಸ್ನ ಫಂಕ್ಶನ್ಅನ್ನು ಓವರ್‌ರೈಡ್ ಮಾಡುತ್ತದೆ.
03:40 ಆದರೆ ಅದೇ ಆರ್ಗ್ಯುಮೆಂಟುಗಳನ್ನು ಪಾಸ್ ಮಾಡಲಾಗಿದೆ.
03:44 ಮತ್ತು ರಿಟರ್ನ್ ಟೈಪ್ ಸಹ ಅದೇ ಆಗಿದೆ.
03:47 ನಾವು ಒಂದು ಉದಾಹರಣೆಯನ್ನು ನೋಡೋಣ.
03:49 ಇಲ್ಲಿ ಫಂಕ್ಶನ್ ಓವರ್‌ರೈಡಿಂಗ್ ನ ಒಂದು ಉದಾಹರಣೆ ಇರುತ್ತದೆ.
03:53 ನಮ್ಮ ಫೈಲ್ ನ ಹೆಸರು override.cpp ಆಗಿದೆ ಎನ್ನುವುದನ್ನು ಗಮನಿಸಿರಿ.
03:57 ನಾವು ಕೋಡ್ ಅನ್ನು ಅನುಸರಿಸೋಣ.
04:00 ಇದು ನಮ್ಮ iostream ಎನ್ನುವ ಹೆಡರ್ ಫೈಲ್ ಆಗಿದೆ.
04:03 ಇಲ್ಲಿ ನಾವು std namespace ಅನ್ನು ಹೊಂದಿದ್ದೇವೆ.
04:06 ಆಮೇಲೆ, ನಾವು arithmetic ಎನ್ನುವ ಕ್ಲಾಸ್ಅನ್ನು ಹೊಂದಿದ್ದೇವೆ.
04:09 ಇದರಲ್ಲಿ, ನಾವು ಇಂಟೀಜರ್ ವೇರಿಯಬಲ್ ಗಳನ್ನು ಪ್ರೊಟೆಕ್ಟೆಡ್ ಎಂದು ಡಿಕ್ಲೇರ್ ಮಾಡಿದ್ದೇವೆ.
04:14 ನಂತರ values ಎನ್ನುವ ಫಂಕ್ಶನ್ ಅನ್ನು ಪಬ್ಲಿಕ್ ಎಂದು ಡಿಕ್ಲೇರ್ ಮಾಡಿದ್ದೇವೆ.
04:18 ಇವುಗಳಲ್ಲಿ ನಾವು int x ಮತ್ತು int y ಎನ್ನುವ ಎರಡು ಆರ್ಗ್ಯುಮೆಂಟುಗಳನ್ನು ಪಾಸ್ ಮಾಡಿದ್ದೇವೆ.
04:23 ನಂತರ ಈ ವ್ಯಾಲ್ಯುಗಳನ್ನು ನಾವು a ಮತ್ತು b ಗಳಲ್ಲಿ ಸ್ಟೋರ್ ಮಾಡಿದ್ದೇವೆ.
04:26 ಇಲ್ಲಿ operations ಎನ್ನುವ ವರ್ಚುವಲ್ ಫಂಕ್ಶನ್ ಇರುತ್ತದೆ.
04:30 ಇದರಲ್ಲಿ ನಾವು ಎರಡು ಸಂಖ್ಯೆಗಳನ್ನು ಕೂಡಿಸುತ್ತೇವೆ ಮತ್ತು sum ಎನ್ನುವುದನ್ನು ಪ್ರಿಂಟ್ ಮಾಡುತ್ತೇವೆ.
04:34 ಇಲ್ಲಿ ನಾವು ಕ್ಲಾಸ್ ಅನ್ನು ಮುಗಿಸುತ್ತೇವೆ.
04:37 ಈಗ Subtract ಎನ್ನುವುದು ಡಿರೈವ್ಡ್ ಕ್ಲಾಸ್ ಆಗಿದೆ.
04:41 ಇದು arithmetic ಎನ್ನುವ ಬೇಸ್ ಕ್ಲಾಸ್ ಅನ್ನು ಇನ್ಹೆರಿಟ್ ಮಾಡುತ್ತದೆ.
04:45 ಇದರಲ್ಲಿ ನಾವು ಎರಡು ಸಂಖ್ಯೆಗಳ ವ್ಯತ್ಯಾಸವನ್ನು ಕಂಡುಹಿಡಿಯುತ್ತೇವೆ ಮತ್ತು ವ್ಯತ್ಯಾಸವನ್ನು ಪ್ರಿಂಟ್ ಮಾಡುತ್ತೇವೆ.
04:50 Multiply ಎನ್ನುವುದು ಇನ್ನೊಂದು ಡಿರೈವ್ಡ್ ಕ್ಲಾಸ್ ಆಗಿದೆ.
04:54 ಇದೂ ಸಹ arithmetic ಎನ್ನುವ ಬೇಸ್ ಕ್ಲಾಸ್ ಅನ್ನು ಇನ್ಹೆರಿಟ್ ಮಾಡುತ್ತದೆ.
04:57 ಇದರಲ್ಲಿ ನಾವು ಎರಡು ಸಂಖ್ಯೆಗಳ ಗುಣಲಬ್ಧವನ್ನು ಕಂಡುಹಿಡಿಯುತ್ತೇವೆ ಮತ್ತು ಗುಣಲಬ್ಧವನ್ನು ಪ್ರಿಂಟ್ ಮಾಡುತ್ತೇವೆ.
05:03 ನಂತರ, Divide ಎನ್ನುವ ಕ್ಲಾಸ್ ಇರುತ್ತದೆ. ಇದೂ ಸಹ arithmetic ಎನ್ನುವ ಬೇಸ್ ಕ್ಲಾಸ್ ಅನ್ನು ಇನ್ಹೆರಿಟ್ ಮಾಡುತ್ತದೆ.
05:09 ಇದರಲ್ಲಿ ನಾವು ಎರಡು ಸಂಖ್ಯೆಗಳ ಭಾಗಾಕಾರವನ್ನು ಕಂಡುಹಿಡಿಯುತ್ತೇವೆ ಮತ್ತು ಅದನ್ನು ಪ್ರಿಂಟ್ ಮಾಡುತ್ತೇವೆ.
05:15 ಫಂಕ್ಶನ್ ನ ರಿಟರ್ನ್ ಟೈಪ್ ಮತ್ತು ಪಾಸ್ ಮಾಡಿದ ಆರ್ಗ್ಯುಮೆಂಟ್ಗಳು ಹಿಂದಿನಂತೆಯೇ ಇವೆ ಎನ್ನುವುದನ್ನು ಗಮನಿಸಿರಿ.
05:23 ಈಗ, ಇದು ನಮ್ಮ main ಎನ್ನುವ ಫಂಕ್ಶನ್ ಆಗಿದೆ.
05:26 ಇದರಲ್ಲಿ, arithmetic ಎನ್ನುವ ಕ್ಲಾಸ್ ನ p ಎನ್ನುವ ಒಬ್ಜೆಕ್ಟ್ ಒಂದನ್ನು ನಾವು ಕ್ರಿಯೇಟ್ ಮಾಡುತ್ತೇವೆ.
05:31 arith ಎನ್ನುವುದು arithmetic ಎನ್ನುವ ಕ್ಲಾಸ್ ಗೆ ಪಾಯಿಂಟರ್ ಆಗಿದೆ.
05:35 subt ಎನ್ನುವುದು Subtract ಎನ್ನುವ ಕ್ಲಾಸ್ನ ಒಬ್ಜೆಕ್ಟ್ ಆಗಿದೆ.
05:39 mult ಎನ್ನುವುದು Multiply ಎನ್ನುವ ಕ್ಲಾಸ್ನ ಒಬ್ಜೆಕ್ಟ್ ಆಗಿದೆ.
05:42 ಮತ್ತು divd ಎನ್ನುವುದು Divide ಎನ್ನುವ ಕ್ಲಾಸ್ನ ಒಬ್ಜೆಕ್ಟ್ ಆಗಿದೆ.
05:46 ಇಲ್ಲಿ, p ಯನ್ನು arith ಎನ್ನುವುದರ ಅಡ್ರೆಸ್ ಗೆ ಸೆಟ್ ಮಾಡಲಾಗಿದೆ.
05:50 values ಎನ್ನುವ ಫಂಕ್ಶನ್ ನಲ್ಲಿ ನಾವು 30 ಮತ್ತು 12, ಇವುಗಳನ್ನು ಆರ್ಗ್ಯುಮೆಂಟುಗಳೆಂದು ಪಾಸ್ ಮಾಡುತ್ತೇವೆ.
05:56 ಈಗ operations ಎನ್ನುವ ಫಂಕ್ಶನ್ ಅನ್ನು ಕಾಲ್ ಮಾಡುತ್ತೇವೆ.
05:59 ಇದು ಸಂಕಲನವನ್ನು ಮಾಡಿ ತೋರಿಸುತ್ತದೆ.
06:02 subt ಎನ್ನುವುದನ್ನು arith ಎನ್ನುವುದರ ಅಡ್ರೆಸ್ ಗೆ ಸೆಟ್ ಮಾಡುತ್ತೇವೆ.
06:07 ಹಾಗೂ 42 ಮತ್ತು 5, ಇವುಗಳನ್ನು ಆರ್ಗ್ಯುಮೆಂಟುಗಳೆಂದು ಪಾಸ್ ಮಾಡುತ್ತೇವೆ.
06:11 ಮತ್ತೊಮ್ಮೆ operations ಎನ್ನುವ ಫಂಕ್ಶನ್ ಅನ್ನು ಕಾಲ್ ಮಾಡುತ್ತೇವೆ.
06:14 ಇದು ಎರಡು ಸಂಖ್ಯೆಗಳ ವ್ಯವಕಲನವನ್ನು ಮಾಡಿ ತೋರಿಸುತ್ತದೆ.
06:18 ಈಗ, ಇಲ್ಲಿ ನಾವು mult ಎನ್ನುವುದನ್ನು arith ಎನ್ನುವುದರ ಅಡ್ರೆಸ್ ಗೆ ಸೆಟ್ ಮಾಡುತ್ತೇವೆ.
06:22 ಹಾಗೂ 6 ಮತ್ತು 5, ಇವುಗಳನ್ನು ಆರ್ಗ್ಯುಮೆಂಟುಗಳೆಂದು ಪಾಸ್ ಮಾಡುತ್ತೇವೆ.
06:26 operations ಎನ್ನುವ ಫಂಕ್ಶನ್ ಅನ್ನು ಕಾಲ್ ಮಾಡುತ್ತೇವೆ.
06:29 ಇದು ಎರಡು ಸಂಖ್ಯೆಗಳ ಗುಣಾಕಾರವನ್ನು ಮಾಡಿ ತೋರಿಸುತ್ತದೆ.
06:33 ಕೊನೆಯದಾಗಿ ನಾವು divd ಎನ್ನುವುದನ್ನು arith ಎನ್ನುವುದರ ಅಡ್ರೆಸ್ ಗೆ ಸೆಟ್ ಮಾಡುತ್ತೇವೆ ಹಾಗೂ 6 ಮತ್ತು 3, ಇವುಗಳನ್ನು ಆರ್ಗ್ಯುಮೆಂಟುಗಳೆಂದು ಪಾಸ್ ಮಾಡುತ್ತೇವೆ.
06:41 ಈಗ operations ಎನ್ನುವ ಫಂಕ್ಶನ್ ಅನ್ನು ಕಾಲ್ ಮಾಡುತ್ತೇವೆ.
06:44 ಇದು ಎರಡು ಸಂಖ್ಯೆಗಳ ಭಾಗಾಕಾರವನ್ನು ಮಾಡಿ ತೋರಿಸುತ್ತದೆ.
06:48 ಮತ್ತು ಇದು ನಮ್ಮ return ಸ್ಟೇಟಮೆಂಟ್ ಆಗಿದೆ.
06:50 ನಾವು ಈ ಪ್ರೋಗ್ರಾಮನ್ನು ಎಕ್ಸೀಕ್ಯೂಟ್ ಮಾಡೋಣ. ನಮ್ಮ ಟರ್ಮಿನಲ್ ಗೆ ಬದಲಾಯಿಸಿರಿ.
06:54 g++ space override dot cpp space hyphen o space over2 ಎಂದು ಟೈಪ್ ಮಾಡಿರಿ,
07:04 Enter ಅನ್ನು ಒತ್ತಿರಿ.
07:06 ./over2 (ಡಾಟ್ ಸ್ಲ್ಯಾಷ್ over2) ಎಂದು ಟೈಪ್ ಮಾಡಿರಿ.
07:09 Enter ಅನ್ನು ಒತ್ತಿರಿ.
07:11 ಔಟ್ಪುಟ್ ಹೀಗೆ ಕಾಣುತ್ತದೆ:
07:13 Addition of two numbers is 42
07:16 Difference of two numbers is 37
07:19 Product of two numbers is 30 ಮತ್ತು Division of two numbers is 2
07:25 ನಮ್ಮ ಸ್ಲೈಡ್ ಗಳಿಗೆ ಹಿಂದಿರುಗೋಣ.
07:27 ಓವರ್‌ಲೋಡಿಂಗ್ ಮತ್ತು ಓವರ್‌ರೈಡಿಂಗ್ ಗಳ ವ್ಯತ್ಯಾಸವನ್ನು ನಾವು ನೋಡೋಣ.
07:31 ಓವರ್‌ಲೋಡಿಂಗ್ ಎನ್ನುವುದು ಇನ್ಹೆರಿಟನ್ಸ್ ಇಲ್ಲದೇ ಸಂಭವಿಸಬಹುದು.
07:35 ಒಂದು ಕ್ಲಾಸ್, ಇನ್ನೊಂದು ಕ್ಲಾಸ್ನಿಂದ ಇನ್ಹೆರಿಟ್ ಮಾಡಲ್ಪಟ್ಟಾಗ ಓವರ್‌ರೈಡಿಂಗ್ ಸಂಭವಿಸುತ್ತದೆ.
07:41 ಓವರ್‌ಲೋಡಿಂಗ್ ಎನ್ನುವುದರಲ್ಲಿ ಆರ್ಗ್ಯುಮೆಂಟ್ಗಳು ಮತ್ತು ರಿಟರ್ನ್ ಟೈಪ್ ವಿಭಿನ್ನವಾಗಿರಲೇಬೇಕು.
07:46 ಓವರ್‌ರೈಡಿಂಗ್ ಎನ್ನುವುದರಲ್ಲಿ ಆರ್ಗ್ಯುಮೆಂಟ್ಗಳು ಮತ್ತು ರಿಟರ್ನ್ ಟೈಪ್ ಒಂದೇ ಆಗಿರಬೇಕು.
07:51 ಓವರ್‌ಲೋಡಿಂಗ್ ಎನ್ನುವುದರಲ್ಲಿ ಫಂಕ್ಶನ್ ನ ಹೆಸರು ಒಂದೇ ಆಗಿರುತ್ತದೆ.
07:55 ಆದರೆ ಅದರ ಕಾರ್ಯಾಚರಣೆ ಅವುಗಳಿಗಾಗಿ ಪಾಸ್ ಮಾಡಿದ ಆರ್ಗ್ಯುಮೆಂಟ್ಗಳನ್ನು ಅನುಸರಿಸಿ ವಿಭಿನ್ನವಾಗಿರುತ್ತದೆ.
08:01 ಓವರ್‌ರೈಡಿಂಗ್ನಲ್ಲಿ, ಫಂಕ್ಶನ್ ನ ಹೆಸರು ಒಂದೇ ಆಗಿರುತ್ತದೆ.
08:05 ಡಿರೈವ್ಡ್ ಕ್ಲಾಸ್ನ ಫಂಕ್ಶನ್, ಬೇಸ್ ಕ್ಲಾಸ್ನಲ್ಲಿಯ ಫಂಕ್ಶನ್ ಗಿಂತ ಭಿನ್ನವಾದ ಕಾರ್ಯಗಳನ್ನು ನಿರ್ವಹಿಸಬಲ್ಲದು.
08:11 ನಾವು ಇದನ್ನು ಸಂಕ್ಶಿಪ್ತಗೊಳಿಸೋಣ.
08:13 ಈ ಟ್ಯುಟೋರಿಯಲ್ ನಲ್ಲಿ,
08:15 ಫಂಕ್ಶನ್ ಓವರ್‌ಲೋಡಿಂಗ್,ಉದಾ. ಮೂರು ವಿಭಿನ್ನ ಆರ್ಗ್ಯುಮೆಂಟ್ಗಳನ್ನು ಹೊಂದಿರುವ int add() ಮತ್ತು
08:21 ಎರಡು ವಿಭಿನ್ನ ಆರ್ಗ್ಯುಮೆಂಟ್ಗಳನ್ನು ಹೊಂದಿರುವ float add() ಎನ್ನುವ ಫಂಕ್ಶನ್.
08:24 ಫಂಕ್ಶನ್ ಓವರ್‌ರೈಡಿಂಗ್,
08:26 ಉದಾ. virtual int operations() ಮತ್ತು int operations()
08:31 ಒಂದೇ ಬಗೆಯ ಆರ್ಗ್ಯುಮೆಂಟ್ ಮತ್ತು ಒಂದೇ ಬಗೆಯ ರಿಟರ್ನ್ ಟೈಪ್ಅನ್ನು ಹೊಂದಿರುವ ಫಂಕ್ಶನ್ಗಳು ಹಾಗೂ ಎರಡರಲ್ಲಿಯ ವ್ಯತ್ಯಾಸ, ಇವುಗಳನ್ನು ಕಲಿತೆವು.
08:38 ಒಂದು ಅಸೈನ್ಮೆಂಟ್ ಎಂದು, ಆಯತಾಕಾರ, ಚೌಕೋನ ಮತ್ತು ವರ್ತುಲದ ವಿಸ್ತೀರ್ಣವನ್ನು ಕಂಡು ಹಿಡಿಯುವ ಒಂದು ಪ್ರೊಗ್ರಾಮ್ ಅನ್ನು
08:46 ಫಂಕ್ಶನ್ ಓವರ್‌ಲೋಡಿಂಗ್ ಎನ್ನುವುದನ್ನು ಬಳಸಿಕೊಂಡು ಬರೆಯಿರಿ.
08:48 ಕೆಳಗೆ ತೋರಿಸಿದ ಲಿಂಕ್ನಲ್ಲಿ ಲಭ್ಯವಿರುವ ವೀಡಿಯೋವನ್ನು ನೋಡಿರಿ. http://spoken-tutorial.org/What_is_a_Spoken_Tutorial
08:52 ಅದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವನ್ನು ಸಾರಾಂಶಗೊಳಿಸುತ್ತದೆ.
08:55 ನೀವು ಉತ್ತಮವಾದ ಬ್ಯಾಂಡ್ವಿಡ್ತ್ ಅನ್ನು ಹೊಂದಿಲ್ಲದಿದ್ದರೆ, ಡೌನ್ಲೋಡ್ ಮಾಡಿ ನೋಡಬಹುದು.
08:59 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ತಂಡವು
09:02 ಸ್ಪೋಕನ್ ಟ್ಯುಟೋರಿಯಲ್ಸ್ ಬಳಸಿಕೊಂಡು ಕಾರ್ಯಶಾಲೆಗಳನ್ನು ನಡೆಸುತ್ತದೆ.
09:05 ಹಾಗೂ ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
09:09 ಹೆಚ್ಚಿನ ವಿವರಗಳಿಗೆ ದಯವಿಟ್ಟು ಈ ಈ-ಮೇಲ್ ಗೆ ಬರೆಯಿರಿ.
09:12 contact [at] spoken hyphen tutorial dot org
09:16 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ‘ಟಾಕ್ ಟು ಎ ಟೀಚರ್’ ಎನ್ನುವ ಪ್ರಕಲ್ಪದ ಒಂದು ಭಾಗವಾಗಿದೆ.
09:20 ಈ ಟ್ಯುಟೋರಿಯಲ್ ರಾಷ್ಟ್ರೀಯ ಸಾಕ್ಷರತಾ ಮಿಶನ್, ICT , MHRD, ಭಾರತ ಸರ್ಕಾರದ ಆಧಾರವನ್ನು ಹೊಂದಿದೆ.
09:27 ಇದರ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ಗಳ ಮೇಲೆ ಲಭ್ಯವಿದೆ. http://spoken-tutorial.org/NMEICT-Intro
09:32 ಇದರ ಅನುವಾದಕಿ ಐ ಐ ಟಿ ಬಾಂಬೆ ಯಿಂದ ಸಂಧ್ಯಾ ಪುಣೇಕರ್ ಮತ್ತು ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ.
09:36 ಧನ್ಯವಾದಗಳು.

Contributors and Content Editors

PoojaMoolya, Vasudeva ahitanal