Advanced-Cpp/C2/Friend-Function/Kannada

From Script | Spoken-Tutorial
Jump to: navigation, search
Time Narration
00:01 C++ ನಲ್ಲಿಯ friend function (ಫ್ರೆಂಡ್ ಫಂಕ್ಶನ್) ಎನ್ನುವುದರ ಕುರಿತು ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ,
00:08 ಫ್ರೆಂಡ್ ಫಂಕ್ಶನ್ ಎನ್ನುವುದರ ಬಗೆಗೆ ನಾವು ಕಲಿಯುವೆವು,
00:10 ನಾವು ಇದನ್ನು ಒಂದು ಉದಾಹರಣೆಯ ಸಹಾಯದಿಂದ ಮಾಡುವೆವು.
00:13 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು,
00:15 Ubuntu ಆಪರೇಟಿಂಗ್ ಸಿಸ್ಟಮ್ ನ 11.10 ಆವೃತ್ತಿ ಹಾಗೂ,
00:19 g++ compiler ನ 4.6.1 ನೇ ಆವೃತ್ತಿಗಳನ್ನು ನಾನು ಬಳಸುತ್ತಿದ್ದೇನೆ.
00:24 ನಾವು ಫ್ರೆಂಡ್ ಫಂಕ್ಶನ್ ಎನ್ನುವುದರ ಪರಿಚಯದೊಂದಿಗೆ ಆರಂಭಿಸೋಣ.
00:27 ಕ್ಲಾಸ್ ಎನ್ನುವುದರ ಹೊರಗೆ ಪ್ರೈವೇಟ್ ಡೇಟಾವನ್ನು ಆಕ್ಸೆಸ್ ಮಾಡಲು ಸಾಧ್ಯವಿಲ್ಲವೆಂದು ನಮಗೆ ತಿಳಿದಿದೆ.
00:33 ಪ್ರೈವೇಟ್ ಡೇಟಾವನ್ನು ಆಕ್ಸೆಸ್ ಮಾಡಲು ನಾವು ಫ್ರೆಂಡ್ ಫಂಕ್ಶನ್ ಅನ್ನು ಬಳಸುತ್ತೇವೆ.
00:37 ಫ್ರೆಂಡ್ ಫಂಕ್ಶನ್ ಎನ್ನುವುದು ಕ್ಲಾಸ್ ನ ಮೆಂಬರ್ ಫಂಕ್ಶನ್ ಆಗಿರುವದಿಲ್ಲ.
00:42 ಫ್ರೆಂಡ್ ಫಂಕ್ಶನ್ ಎನ್ನುವುದನ್ನು ಓಬ್ಜೆಕ್ಟ್ ಅನ್ನು ಬಳಸದೇ ಪ್ರಚೋದಿಸಬಹುದು (invoking).
00:46 ಫ್ರೆಂಡ್ ಫಂಕ್ಶನ್ ನಲ್ಲಿ ಪಾಸ್ ಮಾಡಿದ ಆರ್ಗ್ಯುಮೆಂಟ್, ಅದರ ಓಬ್ಜೆಕ್ಟ್ ನ ಹಾಗೆ ಬಳಸಲ್ಪಡುತ್ತದೆ.
00:51 ಫ್ರೆಂಡ್ ಫಂಕ್ಶನ್ ಎನ್ನುವುದರ ಡಿಕ್ಲರೇಶನ್ ಅನ್ನು ನಾವು ನೋಡೋಣ.
00:55 ಫ್ರೆಂಡ್ ಫಂಕ್ಶನ್ಅನ್ನು ಡಿಕ್ಲೇರ್ ಮಾಡಲು friend ಎನ್ನುವ ಕೀವರ್ಡ್ ಅನ್ನು ಬಳಸಲಾಗುತ್ತದೆ.
00:59 ಆಮೇಲೆ ನಾವು return_type ಅನ್ನು ಕೊಡುತ್ತೇವೆ.
01:02 function_name ಎನ್ನುವುದು ಫಂಕ್ಶನ್ ನ ಹೆಸರು ಆಗಿದೆ.
01:05 ನಂತರ ನಾವು class_name ಹಾಗೂ ಕ್ಲಾಸ್ ನ ಓಬ್ಜೆಕ್ಟ್, ಇವುಗಳನ್ನು ಆರ್ಗ್ಯುಮೆಂಟ್ ಗಳೆಂದು ಪಾಸ್ ಮಾಡುತ್ತೇವೆ.
01:11 ಒಂದು ಉದಾಹರಣೆಯನ್ನು ನಾವು ನೋಡೋಣ.
01:13 ನಾನು ಕೋಡನ್ನು ಈಗಾಗಲೇ ಎಡಿಟರ್ನಲ್ಲಿ ಟೈಪ್ ಮಾಡಿದ್ದೇನೆ.
01:16 ನಾನು ಅದನ್ನು ಓಪನ್ ಮಾಡುತ್ತೇನೆ.
01:18 ಈ ಪ್ರೊಗ್ರಾಂನಲ್ಲಿ ನಾವು ಸಂಕಲನವನ್ನು ಮಾಡಿ ತೋರಿಸುವೆವು.
01:22 ನಮ್ಮ ಫೈಲ್ ನ ಹೆಸರು frnd.cpp ಆಗಿದೆ ಎಂಬುದನ್ನು ಗಮನಿಸಿರಿ.
01:27 ನಾನು ಈಗ ಕೋಡ್ ಅನ್ನು ವಿವರಿಸುತ್ತೇನೆ.
01:30 iostream ಎನ್ನುವುದು ನಮ್ಮ ಹೆಡರ್ ಫೈಲ್ ಆಗಿದೆ.
01:34 ಇಲ್ಲಿ ನಾವು std namespace ಅನ್ನು ಬಳಸುತ್ತಿದ್ದೆವೆ.
01:37 ಆಮೇಲೆ ನಾವು frnd ಎನ್ನುವ ಕ್ಲಾಸ್ಅನ್ನು ಡಿಕ್ಲೇರ್ ಮಾಡಿದ್ದೇವೆ.
01:41 ಇದರಲ್ಲಿ ನಾವು a ಹಾಗೂ b ಎನ್ನುವ ವೇರಿಯಬಲ್ ಗಳನ್ನು ಪ್ರೈವೇಟ್ ಎಂದು ಡಿಕ್ಲೇರ್ ಮಾಡಿದ್ದೇವೆ.
01:46 ಇಲ್ಲಿ, input ಎನ್ನುವ ಫಂಕ್ಶನ್ ಅನ್ನು ಪಬ್ಲಿಕ್ ಎಂದು ಡಿಕ್ಲೇರ್ ಮಾಡಿದ್ದೇವೆ.
01:52 ಇದರಲ್ಲಿ ನಾವು ಯೂಸರ್ ನಿಂದ ಇನ್ಪುಟ್ ಅನ್ನು ಪಡೆಯುತ್ತೇವೆ.
01:55 compute ಎನ್ನುವುದು ನಮ್ಮ ಫ್ರೆಂಡ್ ಫಂಕ್ಶನ್ ಆಗಿದೆ.
01:58 ಇಲ್ಲಿ, frnd ಎನ್ನುವ ಕ್ಲಾಸ್-ನೇಮ್ ಮತ್ತು f1 ಎನ್ನುವ ಕ್ಲಾಸ್ ನ ಓಬ್ಜೆಕ್ಟ್, ಇವುಗಳನ್ನು ಆರ್ಗ್ಯುಮೆಂಟ್ ಗಳೆಂದು ಪಾಸ್ ಮಾಡಿದ್ದೇವೆ.
02:06 ನಂತರ ಕ್ಲಾಸ್ ಅನ್ನು ಕ್ಲೋಸ್ ಮಾಡುತ್ತೇವೆ.
02:08 ಫ್ರೆಂಡ್ ಫಂಕ್ಶನ್ ಅನ್ನು ಬಳಸಿ ಈಗ ನಾವು frnd ಕ್ಲಾಸ್ ನ ಪ್ರೈವೇಟ್ ಮೆಂಬರ್ ಗಳನ್ನು ಆಕ್ಸೆಸ್ ಮಾಡಬಹುದು.
02:16 ಇಲ್ಲಿ ನಾವು ಕಂಪ್ಯೂಟ್ ಫಂಕ್ಶನ್ ಅನ್ನು ಬಳಸಿದ್ದೇವೆ.
02:19 ಇದರಲ್ಲಿ ನಾವು ಸಂಕಲನವನ್ನು ಮಾಡಿ ತೋರಿಸುವೆವು.
02:23 ನಾವು a ಹಾಗೂ b ಎನ್ನುವ ವೇರಿಯಬಲ್ಗಳನ್ನು ಕೂಡಿಸುತ್ತೇವೆ
02:26 ಮತ್ತು ವ್ಯಾಲ್ಯೂವನ್ನು ರಿಟರ್ನ್ ಮಾಡುತ್ತೇವೆ.
02:28 ಇಲ್ಲಿ ನಾನ್-ಮೆಂಬರ್ ಫಂಕ್ಶನ್ ನಲ್ಲಿಯ ಪ್ರೈವೇಟ್ ವೇರಿಯಬಲ್ಗಳನ್ನು, ನಾವು f1 ಎನ್ನುವ ಓಬ್ಜೆಕ್ಟ್ ಅನ್ನು ಬಳಸಿ ಆಕ್ಸೆಸ್ ಮಾಡುತ್ತೇವೆ.
02:35 ಇದು ನಮ್ಮ main ಎನ್ನುವ ಫಂಕ್ಶನ್ ಆಗಿದೆ.
02:38 ಇಲ್ಲಿ, frnd ಎನ್ನುವ ಕ್ಲಾಸ್ ನ, f ಎನ್ನುವ ಒಬ್ಜೆಕ್ಟ್ ಅನ್ನು ನಾವು ಕ್ರಿಯೇಟ್ ಮಾಡುತ್ತೇವೆ.
02:44 ಆಮೇಲೆ, f ಎನ್ನುವ ಒಬ್ಜೆಕ್ಟ್ ಅನ್ನು ಬಳಸಿಕೊಂಡು ನಾವು input ಎನ್ನುವ ಫಂಕ್ಶನ್ ಅನ್ನು ಕಾಲ್ ಮಾಡುತ್ತೇವೆ.
02:48 ಮತ್ತು ಇಲ್ಲಿ f ಎನ್ನುವ ಆರ್ಗ್ಯುಮೆಂಟ್ ಅನ್ನು ಪಾಸ್ ಮಾಡಿ ನಾವು compute ಎನ್ನುವ ಫಂಕ್ಶನ್ ಅನ್ನು ಕಾಲ್ ಮಾಡುತ್ತೇವೆ.
02:54 ನಾವು compute ಎನ್ನುವ ಫಂಕ್ಶನ್ ನಲ್ಲಿ, f ಎನ್ನುವ ಆರ್ಗ್ಯುಮೆಂಟ್ ಅನ್ನು ಪಾಸ್ ಮಾಡಿದ್ದನ್ನು ನೀವು ನೋಡಬಹುದು.
02:58 ‘ಪಾಸ್ ಬೈ ವ್ಯಾಲ್ಯೂ’ ಎನ್ನುವ ಮೆಥಡ್ ಅನ್ನು ಬಳಸಿ ಇದನ್ನು ಮಾಡಲಾಗಿದೆ.
03:03 f ಅನ್ನು f1 ನ ವ್ಯಾಲ್ಯೂಗೆ ಪಾಸ್ ಮಾಡಲಾಗಿದೆ.
03:06 ಇದು ನಮ್ಮ return ಸ್ಟೇಟಮೆಂಟ್ ಆಗಿದೆ.
03:09 ಈಗ ನಾವು ಈ ಪ್ರೋಗ್ರಾಮನ್ನು ಎಕ್ಸೀಕ್ಯೂಟ್ ಮಾಡೋಣ.
03:11 ನಿಮ್ಮ ಕೀಬೋರ್ಡ್ ಮೇಲಿನ Ctrl, Alt ಮತ್ತು T ಎನ್ನುವ ಕೀಗಳನ್ನು ಒಟ್ಟಿಗೇ ಒತ್ತಿ ಟರ್ಮಿನಲ್ ಅನ್ನು ಓಪನ್ ಮಾಡಿರಿ.
03:20 ಈಗ, g++ space frnd dot cpp space hyphen o space frnd ಎಂದು ಟೈಪ್ ಮಾಡಿರಿ. Enter ಅನ್ನು ಒತ್ತಿರಿ.
03:32 ./frnd (ಡಾಟ್ ಸ್ಲ್ಯಾಷ್ frnd) ಎಂದು ಟೈಪ್ ಮಾಡಿರಿ.
03:36 Enter ಅನ್ನು ಒತ್ತಿರಿ.
03:38 ಇಲ್ಲಿ, ಅದು ಹೀಗೆ ಕಾಣುತ್ತದೆ: Enter the value of a and b
03:41 ನಾನು 8 ಹಾಗೂ 4 ನ್ನು ಎಂಟರ್ ಮಾಡುವೆನು.
03:46 ಔಟ್ಪುಟ್ ಹೀಗೆ ಕಾಣುತ್ತದೆ:
03:48 The result is: 12
03:51 ಈಗ ನಾವು ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ.
03:54 ನಮ್ಮ ಸ್ಲೈಡ್ ಗಳಿಗೆ ಹಿಂದಿರುಗೋಣ.
03:56 ನಾವು ಸಂಕ್ಶಿಪ್ತಗೊಳಿಸೋಣ. ಈ ಟ್ಯುಟೋರಿಯಲ್ ನಲ್ಲಿ, ಫ್ರೆಂಡ್ ಫಂಕ್ಶನ್ ಎನ್ನುವುದನ್ನು ನಾವು ಕಲಿತೆವು. ಉದಾ. friend int compute ಕ್ಲಾಸ್ ನೇಮ್ frnd ಮತ್ತು object f1.
04:08 ಒಂದು ಅಸೈನ್ಮೆಂಟ್ ಎಂದು, ಒಂದು ಸಂಖ್ಯೆಯ ವರ್ಗ ಮತ್ತು ಘನವನ್ನು ಕಂಡುಹಿಡಿಯಲು ಪ್ರೊಗ್ರಾಮನ್ನು ಬರೆಯಿರಿ.
04:14 ಕೆಳಗೆ ತೋರಿಸಿದ ಲಿಂಕ್ನಲ್ಲಿ ಲಭ್ಯವಿರುವ ವೀಡಿಯೋವನ್ನು ನೋಡಿರಿ. http://spoken-tutorial.org/What_is_a_Spoken_Tutorial
04:17 ಅದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವನ್ನು ಸಾರಾಂಶಗೊಳಿಸುತ್ತದೆ.
04:20 ನೀವು ಉತ್ತಮವಾದ ಬ್ಯಾಂಡ್ವಿಡ್ತ್ ಅನ್ನು ಹೊಂದಿಲ್ಲದಿದ್ದರೆ, ಡೌನ್ಲೋಡ್ ಮಾಡಿ ನೋಡಬಹುದು.
04:24 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ತಂಡವುಸ್ಪೋಕನ್ ಟ್ಯುಟೋರಿಯಲ್ಸ್ ಬಳಸಿಕೊಂಡು ಕಾರ್ಯಶಾಲೆಗಳನ್ನು ನಡೆಸುತ್ತದೆ.
04:30 ಹಾಗೂ ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
04:33 ಹೆಚ್ಚಿನ ವಿವರಗಳಿಗೆ ದಯವಿಟ್ಟು contact [at] spoken hyphen tutorial dot org ಈ ಈ-ಮೇಲ್ ಗೆ ಬರೆಯಿರಿ.
04:40 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ‘ಟಾಕ್ ಟು ಎ ಟೀಚರ್’ ಎನ್ನುವ ಪ್ರಕಲ್ಪದ ಒಂದು ಭಾಗವಾಗಿದೆ.
04:43 ಈ ಟ್ಯುಟೋರಿಯಲ್ ರಾಷ್ಟ್ರೀಯ ಸಾಕ್ಷರತಾ ಮಿಶನ್, ICT , MHRD, ಭಾರತ ಸರ್ಕಾರದ ಆಧಾರವನ್ನು ಹೊಂದಿದೆ.
04:51 ಇದರ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ಗಳ ಮೇಲೆ ಲಭ್ಯವಿದೆ. http://spoken-tutorial.org/NMEICT-Intro
04:56 ಇದರ ಅನುವಾದಕಿ ಐ ಐ ಟಿ ಬಾಂಬೆ ಯಿಂದ ಸಂಧ್ಯಾ ಪುಣೇಕರ್ ಮತ್ತು ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. ಧನ್ಯವಾದಗಳು.

Contributors and Content Editors

PoojaMoolya, Vasudeva ahitanal