Advanced-Cpp/C2/Exception-Handling/Kannada

From Script | Spoken-Tutorial
Jump to: navigation, search
Time Narration
00:01 C++ ನಲ್ಲಿಯ Exception Handling (ಎಕ್ಸೆಪ್ಶನ್ ಹ್ಯಾಂಡ್ಲಿಂಗ್) ಎನ್ನುವುದರ ಕುರಿತು ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ,
00:09 ಎಕ್ಸೆಪ್ಶನ್ ಹ್ಯಾಂಡ್ಲಿಂಗ್ ಎನ್ನುವುದನ್ನು ನಾವು ಕಲಿಯುವೆವು.
00:11 ನಾವು ಇದನ್ನು ಒಂದು ಉದಾಹರಣೆಯ ಸಹಾಯದಿಂದ ಮಾಡುವೆವು.
00:14 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು,
00:16 Ubuntu ಆಪರೇಟಿಂಗ್ ಸಿಸ್ಟಮ್ ನ 11.10 ಆವೃತ್ತಿ ಹಾಗೂ,
00:20 g++ compiler ನ 4.6.1 ನೇ ಆವೃತ್ತಿಗಳನ್ನು ನಾನು ಬಳಸುತ್ತಿದ್ದೇನೆ.
00:25 ನಾವು Exception ಎನ್ನುವುದರ ಪರಿಚಯದೊಂದಿಗೆ ಆರಂಭಿಸೋಣ.
00:29 ಎಕ್ಸೆಪ್ಶನ್ ಎನ್ನುವುದು, ಒಂದು ಪ್ರೋಗ್ರಾಮನ್ನು ಎಕ್ಸಿಕ್ಯೂಟ್ ಮಾಡುವಾಗ ಉದ್ಭವಿಸುವ ಸಮಸ್ಯೆಯಾಗಿದೆ.
00:34 ಇದು ಪ್ರೋಗ್ರಾಂ, ಕಂಡುಹಿಡಿಯಬಹುದಾದ ರನ್ ಟೈಮ್ ಎರರ್ ಆಗಿದೆ.
00:39 ನಾವು ಎಕ್ಸೆಪ್ಶನ್ ಹ್ಯಾಂಡ್ಲಿಂಗ್ ನತ್ತ ನಡೆಯೋಣ.
00:42 ಒಂದು ಪ್ರೋಗ್ರಾಮನ್ನು ಎಕ್ಸಿಕ್ಯೂಟ್ ಮಾಡುವಾಗ ಉದ್ಭವಿಸುವ ಸಮಸ್ಯೆಗಳಿಗೆ ತೋರಿಸಿದ ಪ್ರತಿಕ್ರಿಯೆಯನ್ನು ಎಕ್ಸೆಪ್ಶನ್ ಹ್ಯಾಂಡ್ಲಿಂಗ್ ಎಂದು ಹೇಳಲಾಗುತ್ತದೆ.
00:50 ಎಕ್ಸೆಪ್ಶನ್ ಹ್ಯಾಂಡ್ಲಿಂಗ್ ಎನ್ನುವುದು ಪ್ರೋಗ್ರಾಮನ್ನು ಎಕ್ಸಿಕ್ಯೂಟ್ ಮಾಡುವದನ್ನು ಮುಂದುವರೆಸಲು ಅನುಮತಿಸುತ್ತದೆ.
00:55 ಸಮಸ್ಯೆಯನ್ನು ಗುರುತಿಸಲು ಅದು ಸಹಾಯ ಮಾಡುತ್ತದೆ.
00:57 ಮತ್ತು ಪ್ರೋಗ್ರಾಮನ್ನು ನಿಯಂತ್ರಿತ ರೀತಿಯಲ್ಲಿ ಅಂತ್ಯಗೊಳಿಸುತ್ತದೆ.
01:02 ಎಕ್ಸೆಪ್ಶನ್ಸ್ ಗಳಲ್ಲಿಯ ಪ್ರಕಾರಗಳನ್ನು ನಾವು ನೋಡೋಣ.
01:05 try (ಟ್ರೈ), catch (ಕ್ಯಾಚ್)
01:07 ಮತ್ತು throw (ಥ್ರೋ).
01:09 ನಾವು ಎರರ್ ಇರುವ ಸಾಧ್ಯತೆಗಳಿರುವ ಕೋಡನ್ನು try ಬ್ಲಾಕ್ನಲ್ಲಿ ಇಡುತ್ತೇವೆ.
01:13 ಆಗ ಅದು throw ಎನ್ನುವುದನ್ನು ಬಳಸಿ ನಿಭಾಯಿಸಲ್ಪಡುತ್ತದೆ.
01:16 ಆನಂತರ catch ಸ್ಟೇಟಮೆಂಟನ್ನು ಬಳಸಿ ಎಕ್ಸೆಪ್ಶನ್ ಅನ್ನು ಹಿಡಿಯಲಾಗುತ್ತದೆ.
01:21 ಮತ್ತು ಆಗ ಅದನ್ನು ಪರಿಷ್ಕರಿಸಲಾಗುತ್ತದೆ.
01:23 try, catch ಮತ್ತು throw ಗಳಿಗಾಗಿ ಇರುವ ಸಿಂಟ್ಯಾಕ್ಸ್ ಹೀಗಿದೆ:
01:27 throw: try ಬ್ಲಾಕ್ ಮತ್ತು catch ಬ್ಲಾಕ್,
01:32 ಇಲ್ಲಿ ನಾವು ಆರ್ಗ್ಯುಮೆಂಟನ್ನು ಪಾಸ್ ಮಾಡುತ್ತೇವೆ.
01:35 throw ಸ್ಟೇಟಮೆಂಟನ್ನು try ಬ್ಲಾಕ್ ನಲ್ಲಿ ಸಹ ಬರೆಯಬಹುದು.
01:40 ನಾವು ಒಂದಕ್ಕಿಂತ ಹೆಚ್ಚು try, catch ಬ್ಲಾಕ್ ಗಳನ್ನು ಹೊಂದಿರಲು ಸಾಧ್ಯವಿದೆ.
01:44 ಈಗ, ಎಕ್ಸೆಪ್ಶನ್ ಹ್ಯಾಂಡ್ಲಿಂಗ್ ಎನ್ನುವುದರ ಒಂದು ಉದಾಹರಣೆಯನ್ನು ನಾವು ನೋಡೋಣ.
01:48 ನನ್ನ ಹತ್ತಿರ ಇರುವ ಕೋಡನ್ನು ಓಪನ್ ಮಾಡುವೆನು.
01:51 ನಮ್ಮ ಫೈಲ್ ನ ಹೆಸರು exception.cpp ಆಗಿದೆ ಎಂಬುದನ್ನು ಗಮನಿಸಿರಿ.
01:55 ಈ ಪ್ರೊಗ್ರಾಮ್ ನಲ್ಲಿ divide by zero error ಎನ್ನುವುದನ್ನು ಎಕ್ಸೆಪ್ಶನ್ ಹ್ಯಾಂಡ್ಲಿಂಗ್ ಅನ್ನು ಬಳಸಿ ನಾವು ಬಗೆಹರಿಸುತ್ತೇವೆ.
02:02 ನಾವು ಕೋಡನ್ನು ಅನುಸರಿಸೋಣ.
02:04 ಈ iostream ಎನ್ನುವುದು ನಮ್ಮ ಹೆಡರ್ ಫೈಲ್ ಆಗಿದೆ.
02:07 ಇಲ್ಲಿ ನಾವು std namespace ಎನ್ನುವುದನ್ನು ಬಳಸುತ್ತಿದ್ದೇವೆ.
02:11 int a ಹಾಗೂ int b ಎನ್ನುವ ಆರ್ಗ್ಯುಮೆಂಟ್ ಗಳನ್ನು ಹೊಂದಿರುವ division ಎನ್ನುವ ಫಂಕ್ಶನ್ ಇಲ್ಲಿ ಇರುತ್ತದೆ.
02:18 ನಂತರ ನಾವು b ==0 ಇದೆಯೋ ಎಂದು ಪರಿಶೀಲಿಸುತ್ತೇವೆ.
02:22 ಇದು ನಿಜವಾಗಿದ್ದರೆ, division by zero condition ಎನ್ನುವ ಎಕ್ಸೆಪ್ಶನ್ ಅನ್ನು ನಾವು throw ಮಾಡುತ್ತೇವೆ.
02:27 ಫಂಕ್ಶನ್ a ಮತ್ತು b ಗಳ ಭಾಗಾಕಾರವನ್ನು ರಿಟರ್ನ್ ಮಾಡುತ್ತದೆ.
02:32 ಇದು ನಮ್ಮ main ಎನ್ನುವ ಫಂಕ್ಶನ್ ಆಗಿದೆ.
02:34 ಇದರಲ್ಲಿ ನಾವು x ಹಾಗೂ y ಎನ್ನುವ ಇಂಟೀಜರ್ ವೇರಿಯಬಲ್ ಗಳನ್ನು ಮತ್ತು z ಎನ್ನುವ ಡಬಲ್ ವೇರಿಯಬಲ್ ಅನ್ನು ಡಿಕ್ಲೇರ್ ಮಾಡಿದ್ದೇವೆ.
02:42 ಇಲ್ಲಿ ನಾವು x ಮತ್ತು y ಗಳ ವ್ಯಾಲ್ಯೂವನ್ನು ಪಡೆಯುತ್ತೇವೆ.
02:46 ಇದು ನಮ್ಮ try ಎನ್ನುವ ಬ್ಲಾಕ್ ಆಗಿದೆ.
02:48 ಇಲ್ಲಿ ನಾವು division ಎನ್ನುವ ಫಂಕ್ಶನ್ ಅನ್ನು ಕಾಲ್ ಮಾಡಿದ್ದೇವೆ.
02:51 ಮತ್ತು ರಿಸಲ್ಟ್ ಅನ್ನು z ಎನ್ನುವಲ್ಲಿ ಸ್ಟೋರ್ ಮಾಡುತ್ತೇವೆ.
02:54 ಆಮೇಲೆ ನಾವು z ದ ವ್ಯಾಲ್ಯೂವನ್ನು ಪ್ರಿಂಟ್ ಮಾಡುತ್ತೇವೆ.
02:57 ಇದು ನಮ್ಮ catch ಎನ್ನುವ ಬ್ಲಾಕ್ ಆಗಿದೆ.
02:59 ಇದರಲ್ಲಿ ನಾವು msg ಎನ್ನುವ ಕ್ಯಾರಕ್ಟರ್ ಕಾನ್ಸ್ಟೆಂಟ್ಅನ್ನು ಆರ್ಗ್ಯುಮೆಂಟ್ ಎಂದು ಪಾಸ್ ಮಾಡುತ್ತೇವೆ.
03:06 ಆಮೇಲೆ ನಾವು msg ಎನ್ನುವುದನ್ನು ಪ್ರಿಂಟ್ ಮಾಡುತ್ತೇವೆ.
03:08 ಮತ್ತು ಇದು ನಮ್ಮ return ಸ್ಟೇಟಮೆಂಟ್ ಆಗಿದೆ.
03:11 ಈಗ ನಾವು ಈ ಪ್ರೋಗ್ರಾಮನ್ನು ಎಕ್ಸೀಕ್ಯೂಟ್ ಮಾಡೋಣ.
03:13 ನಿಮ್ಮ ಕೀಬೋರ್ಡ್ ಮೇಲಿನ Ctrl, Alt ಮತ್ತು T ಎನ್ನುವ ಕೀಗಳನ್ನು ಒಟ್ಟಿಗೇ ಒತ್ತಿ ಟರ್ಮಿನಲ್ ಅನ್ನು ಓಪನ್ ಮಾಡಿರಿ.
03:21 ಕಂಪೈಲ್ ಮಾಡಲು, g++ space exception dot cpp space hyphen o space ex ಎಂದು ಟೈಪ್ ಮಾಡಿರಿ, Enter ಅನ್ನು ಒತ್ತಿರಿ.
03:32 ./ex (ಡಾಟ್ ಸ್ಲ್ಯಾಷ್ ex) ಎಂದು ಟೈಪ್ ಮಾಡಿರಿ, Enter ಅನ್ನು ಒತ್ತಿರಿ.
03:36 Enter the value of x and y:
03:38 ನಾನು 3 ಮತ್ತು 0 ಎಂದು ಕೊಡುತ್ತೇನೆ.
03:42 ಔಟ್ಪುಟ್ ಹೀಗೆ ಕಾಣಿಸುತ್ತದೆ: Division by zero condition!
03:46 ನಾವು ಮತ್ತೆ ಕಂಪೈಲ್ ಮಾಡೋಣ.
03:48 ಅಪ್ ಆರೋ ಕೀಯನ್ನು ಎರಡು ಸಲ ಒತ್ತಿರಿ.
03:51 Enter ಅನ್ನು ಒತ್ತಿರಿ. ಮತ್ತೊಮ್ಮೆ ಅಪ್ ಆರೋ ಕೀಯನ್ನು ಎರಡು ಸಲ ಒತ್ತಿರಿ.
03:55 Enter value of x and y
03:57 ನಾನು 8 ಮತ್ತು 2 ಎಂದು ಕೊಡುವೆನು.
04:01 ಔಟ್ಪುಟ್, 4 ಆಗಿದೆ.
04:04 try, catch ಮತ್ತು throw ಬ್ಲಾಕ್ ಈ ರೀತಿಯಲ್ಲಿ ಕೆಲಸ ಮಾಡುತ್ತದೆ.
04:08 ಇದು ನಮ್ಮನ್ನು ಈ ಟ್ಯುಟೋರಿಯಲ್ ನ ಕೊನೆಗೆ ತಂದಿರುತ್ತದೆ.
04:11 ನಾವು ನಮ್ಮ ಸ್ಲೈಡ್ ಗಳಿಗೆ ಹಿಂದಿರುಗೋಣ.
04:14 ನಾವು ಸಂಕ್ಶಿಪ್ತಗೊಳಿಸೋಣ.
04:16 ಈ ಟ್ಯುಟೋರಿಯಲ್ ನಲ್ಲಿ, ಎಕ್ಸೆಪ್ಶನ್ ಹ್ಯಾಂಡ್ಲಿಂಗ್, try, catch ಮತ್ತು throw ಬ್ಲಾಕ್ ಗಳನ್ನು ನಾವು ನೋಡಿದ್ದೇವೆ.
04:23 ಒಂದು ಅಸೈನ್ಮೆಂಟ್ ಎಂದು, employee ಗಳ ವಯಸ್ಸನ್ನು ತೋರಿಸಿರಿ.
04:26 ವಯಸ್ಸು 15 ಕ್ಕಿಂತ ಕಡಿಮೆ ಇಲ್ಲವೆಂದು ಪರಿಶೀಲಿಸಲು ಎಕ್ಸೆಪ್ಶನ್ ಅನ್ನು throw ಮಾಡಿರಿ.
04:31 ಕೆಳಗೆ ತೋರಿಸಿದ ಲಿಂಕ್ನಲ್ಲಿ ಲಭ್ಯವಿರುವ ವೀಡಿಯೋವನ್ನು ನೋಡಿರಿ. http://spoken-tutorial.org/What_is_a_Spoken_Tutorial
04:34 ಅದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವನ್ನು ಸಾರಾಂಶಗೊಳಿಸುತ್ತದೆ.
04:38 ನೀವು ಉತ್ತಮವಾದ ಬ್ಯಾಂಡ್ವಿಡ್ತ್ ಅನ್ನು ಹೊಂದಿಲ್ಲದಿದ್ದರೆ, ಡೌನ್ಲೋಡ್ ಮಾಡಿ ನೋಡಬಹುದು.
04:42 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ತಂಡವು ಸ್ಪೋಕನ್ ಟ್ಯುಟೋರಿಯಲ್ಸ್ ಬಳಸಿಕೊಂಡು ಕಾರ್ಯಶಾಲೆಗಳನ್ನು ನಡೆಸುತ್ತದೆ.
04:48 ಹಾಗೂ ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
04:52 ಹೆಚ್ಚಿನ ವಿವರಗಳಿಗೆ ದಯವಿಟ್ಟು contact [at] spoken hyphen tutorial dot org ಈ ಈ-ಮೇಲ್ ಗೆ ಬರೆಯಿರಿ.
04:59 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ‘ಟಾಕ್ ಟು ಎ ಟೀಚರ್’ ಎನ್ನುವ ಪ್ರಕಲ್ಪದ ಒಂದು ಭಾಗವಾಗಿದೆ.
05:04 ಈ ಟ್ಯುಟೋರಿಯಲ್ ರಾಷ್ಟ್ರೀಯ ಸಾಕ್ಷರತಾ ಮಿಶನ್, ICT , MHRD, ಭಾರತ ಸರ್ಕಾರದ ಆಧಾರವನ್ನು ಹೊಂದಿದೆ.
05:11 ಇದರ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ಗಳ ಮೇಲೆ ಲಭ್ಯವಿದೆ. http://spoken-tutorial.org/NMEICT-Intro
05:16 ಇದರ ಅನುವಾದಕಿ ಐ ಐ ಟಿ ಬಾಂಬೆ ಯಿಂದ ಸಂಧ್ಯಾ ಪುಣೇಕರ್ ಮತ್ತು ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. ಧನ್ಯವಾದಗಳು.

Contributors and Content Editors

PoojaMoolya, Vasudeva ahitanal