Thunderbird/C2/Introduction-to-Thunderbird/Kannada

From Script | Spoken-Tutorial
Revision as of 15:27, 27 June 2014 by Pratik kamble (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:00 Mozilla thunderbird ನ ಪರಿಚಯಾತ್ಮಕ ಟ್ಯುಟೋರಿಯಲ್ ಗೆ ಸ್ವಾಗತ.
00:04 ಈ ಟ್ಯುಟೋರಿಯಲ್ ನಲ್ಲಿ ನಾವು Mozilla Thunderbird ನ ಬಗ್ಗೆ ಕಲಿಯಲಿದ್ದೇವೆ ಮತ್ತು
00:09 ಹೇಗೆ ಥಂಡರ್-ಬರ್ಡ್ ಅನ್ನು ಡೌನ್-ಲೋಡ್, ಇನ್ಸ್ಟಾಲ್ ಮತ್ತು ಲಾಂಚ್ ಮಾಡುವುದೆಂದು ಕಲಿಯಲಿದ್ದೇವೆ.
00:13 ಇದರೊಂದಿಗೆ ನಾವು:
00:15 ಹೊಸ ಈ-ಮೇಲ್ ಅಕೌಂಟ್ ನ ಕನ್ಫಿಗರ್ ಮತ್ತು ಡೌನ್ಲೋಡ್ ಮಾಡಲು, ಮೆಸೇಜ್ ಅನ್ನು ಓದಲು
00:20 ಕಂಪೋಸ್ ಮಾಡಲು ಮತ್ತು ಮೇಲ್ ಅನ್ನು ಕಳುಹಿಸಲು ಹಾಗೂ ಥಂಡರ್-ಬರ್ಡ್ ಅನ್ನು ಲಾಗ್-ಔಟ್ ಮಾಡಲು ಕಲಿಯಲಿದ್ದೇವೆ.
00:26 ಮೊಜಿಲ್ಲಾ ಥಂಡರ್-ಬರ್ಡ್ ಒಂದು ಸುಲಭವಾದ ಈ-ಮೇಲ್ ಗ್ರಾಹಕವಾಗಿದೆ.
00:29 ಇದೊಂದು ಕ್ರಾಸ್ ಪ್ಲಾಟ್-ಫೋರ್ಮ್ ಸಾಫ್ಟ್ವೇರ್ ಆಗಿದೆ, ಅಂದರೆ ವಿವಿಧ ಆಪರೇಟಿಂಗ್ ಸಿಸ್ಟಮ್ ಗಳ ಮೇಲೆ ಇದು ಕೆಲಸ ಮಾಡುತ್ತದೆ.
00:35 ನಿಮ್ಮ ಬೇರೆ ಮೇಲ್ ಅಕೌಂಟ್ ನಿಂದ

ನಿಮ್ಮ ಸ್ಥಳೀಯ ಕಂಪ್ಯೂಟರ್ ಗೆ .

00:39 ಈ-ಮೇಲ್ ಮೆಸೇಜ್ ಗಳನ್ನು ಡೌನ್ಲೋಡ್ ಮಾಡಲು ಅನುವು ಮಾಡಿಕೊಡುತ್ತದೆ.
00:42 ಇದರೊಂದಿಗೆ ಇದು ಅನೇಕ ಈ-ಮೇಲ್ ಅಕೌಂಟ್ ಗಳನ್ನು ನಿಭಾಯಿಸಲು ಅನುವು ಮಾಡಿಕೊಡುತ್ತದೆ.
00:47 ಥಂಡರ್-ಬರ್ಡ್, ಕೆಲವು ಮುಂದುವರಿದ ವೈಶಿಷ್ಟ್ಯಗಳನ್ನು ಹೊಂದಿದೆ.
00:50 ಮೇಲ್ ಫೋಲ್ಡರ್ ಹಾಗೂ ಅಡ್ರೆಸ್ ಬುಕ್ ನಂತಹ ಈ-ಮೇಲ್ ಡಾಟಾ ಗಳನ್ನು Gmail (ಜೀಮೇಲ್), Yahoo (ಯಾಹೂ) ಮತ್ತು Eudora (ಯುಡೋರಾ) ಆದಿ ಮೇಲ್ ಅಕೌಂಟ್ ಗಳಿಂದ ತೆಗೆದುಕೊಳ್ಳಬಹುದು.
01:01 ನೀವು POP 3 ಅನ್ನು ಉಪಯೋಗಿಸಿದ್ದಲ್ಲಿ,
01:04 ಎಲ್ಲಾ POP 3 ಅಕೌಂಟ್ ಗಳನ್ನು ಥಂಡರ್ ಬರ್ಡ್ ನ

ಒಂದು ಇನ್ಬಾಕ್ಸ್ ನಲ್ಲಿ ಕಂಬೈನ್ ಮಾಡಬಹುದು.

01:09 ದಿನಾಂಕ, ಕಳುಹಿಸುವಾತ, ಪ್ರಾಶಸ್ತ್ಯ ಅಥವಾ ಕಸ್ಟಮ್ ಲೇಬಲ್ ನಂತಹ
01:12 ಗುಣಲಕ್ಷಣಗಳಿಂದ ಮೆಸೆಜ್ ಗಳನ್ನು ಗ್ರುಪ್ ಮಾಡಬಹುದು.
01:18 ಇಲ್ಲಿ ನಾವು ಉಬಂಟು 12.04 ರಲ್ಲಿ ಮೊಜಿಲ್ಲಾ ಥಂಡರ್ ಬರ್ಡ್ 13.0.1 ಅನ್ನು ಉಪಯೋಗಿಸುತ್ತಿದ್ದೇವೆ.
01:26 ನೀವು ಮೊಜಿಲ್ಲಾ ಥಂಡರ್ ಬರ್ಡ್ ಅನ್ನು ಇನ್ಸ್ಟಾಲ್ ಮಾಡದಿದ್ದಲ್ಲಿ ಉಬಂಟು ಸಾಫ್ಟ್ ವೇರ್ ಸೆಂಟರ್ ಅನ್ನು

ಉಪಯೋಗಿಸಿ ಇನ್ಸ್ಟಾಲ್ ಮಾಡಬಹುದು.

01:33 ಉಬಂಟು ಸಾಫ್ಟ್ ವೇರ್ ಸೆಂಟರ್ ನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ವೆಬ್ ಸೈಟ್ ಅನ್ನು ಗಮನಿಸಿ.
01:40 ಮೊಜಿಲ್ಲಾ ವೆಬ್ ಸೈಟ್ ನಿಂದಲೂ ಕೂಡ ಥಂಡರ್ ಬರ್ಡ್ ಅನ್ನು ಡೌನ್ಲೋಡ್ ಮತ್ತು ಇನ್ಸ್ಟಾಲ್ ಮಾಡಬಹುದು.
01:46 ಮೊಜಿಲ್ಲಾ ಥಂಡರ್ ಬರ್ಡ್ ತಂತ್ರಾಂಶವು
01:48 ಮೈಕ್ರೋಸಾಫ್ಟ್ ವಿಂಡೋಸ್ 2000 ಅಥವಾ ನೂತನ ಆವೃತ್ತಿಗಳಾದ

MS ವಿಂಡೋಸ್ XP ಅಥವಾ MS ವಿಂಡೋಸ್ 7 ಗಳಿಗೂ ಲಭ್ಯವಿದೆ.

01:56 ಹೆಚ್ಚಿನ ಮಾಹಿತಿಗಾಗಿ ಮೊಜಿಲ್ಲಾ ವೆಬ್ ಸೈಟ್ ಅನ್ನು ಸಂಪರ್ಕಿಸಿ.
02:02 ಮೊಜಿಲ್ಲಾ ಥಂಡರ್ ಬರ್ಡ್ ಅನ್ನು ಉಪಯೋಗಿಸಲು ನೀವು ಎರಡು ಈಮೈಲ್ ಅಡ್ರೆಸ್ ಗಳನ್ನು ಹೊಂದಿರಬೇಕು.
02:08 ನೀವು POP 3 ಅಪ್ಶನ್ ನಿಮ್ಮ ಈಮೈಲ್ ಅಕೌಂಟ್ ನಲ್ಲಿ ಕೆಲಸ ಮಾಡುತ್ತದೆಯೇ ಎಂದು ಖಚಿತಮಾಡಿಕೊಳ್ಳಿ.
02:15 ಹಾಗು ನೀವು ಇಂಟರ್ನೆಟ್ ಗೆ ಕನೆಕ್ಟ್ ಆಗಿದ್ದೀರ ಎಂದು ಪರೀಕ್ಷಿಸಿಕೊಳ್ಳಿ.
02:19 ಈಗ ಥಂಡರ್ ಬರ್ಡ್ ಅನ್ನು ಲಾಂಚ್ ಮಾಡೋಣ.
02:22 ಮೊದಲಿಗೆ ನಿಮ್ಮ ಕಂಪ್ಯೂಟರ್ ನ ಡೆಸ್ಕ್ಟಾಪ್ ನ ಮೇಲಿನ ಎಡಬದಿಗಿರುವ ವೃತ್ತಾಕಾರದ ಡಾಶ್ ಹೋಮ್ ಬಟನ್ ಅನ್ನು ಕ್ಲಿಕ್ ಮಾಡಿ.
02:29 ಸರ್ಚ್ ಬಾಕ್ಸ್ ಕಾಣಿಸುತ್ತದೆ.
02:31 ಈಗ Thunderbird ಎಂದು ಟೈಪ್ ಮಾಡಿ. ಥಂಡರ್ ಬರ್ಡ್ ನ ಐಕಾನ್ ಕಾಣಿಸುತ್ತದೆ.
02:37 application ಅನ್ನು ಓಪನ್ ಮಾಡಲು ಅದರ ಮೇಲೆ ಕ್ಲಿಕ್ ಮಾಡಿ.
02:40 Mail Account Setup ಎಂಬ ಡಯಲಾಗ್ ಬಾಕ್ಸ್ ಓಪನ್ ಆಗುತ್ತದೆ.
02:43 ಮೇಲಿನ ಎಡಬದಿಗಿರುವ ಕೆಂಪು ಬಣ್ಣದ ಕ್ರಾಸ್ ಬಟನ್ ಅನ್ನು ಒತ್ತಿ ಅದನ್ನು ಕ್ಲೋಸ್ ಮಾಡಿ.
02:49 ಮೊಜಿಲ್ಲಾ ಥಂಡರ್ ಬರ್ಡ್ ಅಪ್ಲಿಕೇಶನ್ ಓಪನ್ ಆಗುತ್ತದೆ.
02:53 ಮೊದಲಿಗೆ ಮೊಜಿಲ್ಲಾ ಥಂಡರ್ ಬರ್ಡ್ ಇಂಟರ್ಫೇಸ್ ಅನ್ನು ಅಭ್ಯಾಸ ಮಾಡೋಣ.
02:59 ಮೊಜಿಲ್ಲಾ ಥಂಡರ್ ಬರ್ಡ್ ಇಂಟರ್ಫೇಸ್ ವಿವಿಧ ಆಪ್ಶನ್ ಗಳಿರುವ ಮೈನ್ ಮೆನ್ಯುವನ್ನು ಹೊಂದಿದೆ.
03:05 ಶಾರ್ಟ್ ಕಟ್ ಐಕಾನ್ ಗಳು ಮೆನು ಬಾರ್ ನಲ್ಲಿರುವ ಮೇನ್ ಮೆನ್ಯುವಿನ ಕೆಳ ಭಾಗದಲ್ಲಿ ಲಭ್ಯವಿರುತ್ತವೆ.
03:11 ಉದಾಹರಣೆಗಾಗಿ, Get Mail, Write ಮತ್ತು Address book ನಂತಹ ಶಾರ್ಟ್ ಕಟ್ ಗಳು ಲಭ್ಯವಿರುತ್ತವೆ.
03:18 ಥಂಡರ್ ಬರ್ಡ್ ಎರಡು ಪೇನಲ್ ಗಳಲ್ಲಿ ವಿಭಾಗಿಸಲ್ಪಟ್ಟಿದೆ.
03:21 ಎಡ ಪೇನಲ್, ಥಂಡರ್ ಬರ್ಡ್ ಅಕೌಂಟ್ ನಲ್ಲಿರುವ ಫೋಲ್ಡರ್ಗಳನ್ನು ತೋರಿಸುತ್ತದೆ.
03:26 ಈಗ ನಾವು ಯಾವುದೇ ಮೇಲ್ ಅಕೌಂಟ್ ಅನ್ನು ಕನ್ಫಿಗರ್ ಮಾಡದೇ ಇರುದರಿಂದ ಪೇನಲ್ ಪ್ರದರ್ಶಿತವಾಗುತ್ತಿಲ್ಲ.
03:33 ಬಲ ಪ್ಯಾನಲ್, Email, Accounts, Advanced, Features ಮುಂತಾದ ಓಪ್ಶನ್ ಗಳನ್ನು ಹೊಂದಿದೆ.
03:41 ಈ ಟ್ಯುಟೋರಿಯಲ್ ಗಾಗಿ ನಾವು ಈಗಾಗಲೇ
03:44 ಎರಡು ಈಮೇಲ್ ಅಕೌಂಟ್ ಗಳನ್ನು ರಚಿಸಿದ್ದೇವೆ. ಅವು ಹೀಗಿವೆ:
03:48 STUSERONE at gmail dot com

STUSERTWO at yahoo dot in

03:56 ನೀವು ಈ ಎರಡು ಈ-ಮೇಲ್ ಅಕೌಂಟ್ ಗಳನ್ನು ಉಪಯೋಗಿಸಿ.
04:02 ನಾನು ಈ ಎರಡು ಮೇಲ್ ಅಕೌಂಟ್ ಗಳಲ್ಲಿ POP 3 ಆಪ್ಶನ್ ಅನ್ನು ಸಮರ್ಥಗೊಳಿಸಿದ್ದೇನೆ.
04:07 ನಾನು Gmail ನಲ್ಲಿ POP 3 ಅನ್ನು ಹೇಗೆ ಸಮರ್ಥಗೊಳಿಸಿದೆ?
04:11 ಮೊದಲಿಗೆ ಜೀಮೇಲ್ ಅಕೌಂಟ್ ಗೆ ಲಾಗ್ ಇನ್ ಆಗೋಣ.
04:14 ಹೊಸ ಬ್ರೌಸರ್ ಅನ್ನು ಓಪನ್ ಮಾಡಿ, ಅಲ್ಲಿರುವ ಅಡ್ರೆಸ್ ಬಾರ್ ನಲ್ಲಿ www.gmail.com ಎಂದು ಟೈಪ್ ಮಾಡಿ,
04:21 ಈಗ STUSERONE at gmail dot com ಎಂಬ ಯೂಸರ್ ನೇಮ್ ಮತ್ತು ಪಾಸ್ವರ್ಡ್ ಎಂಟರ್ ಮಾಡಿ.
04:30 ಈಗ ಜೀಮೇಲ್ ವಿಂಡೋ ನ ಮೇಲಿಂದ ಬಲಬದಿಗಿರುವ ಸೆಟ್ಟಿಂಗ್ ಐಕಾನ್ ಕ್ಲಿಕ್ ಮಾಡಿ. ನಂತರ Settings ಒಪ್ಶನ್ ಮೇಲೆ ಕ್ಲಿಕ್ ಮಾಡಿ.
04:40 ಈಗ ಸೆಟ್ಟಿಂಗ್ಸ್ ವಿಂಡೋ ಕಾಣಿಸುತ್ತದೆ. ಅಲ್ಲಿ Forwarding and POP/IMAP ಎಂಬ ಟ್ಯಾಬ್ ಅನ್ನು ಕ್ಲಿಕ್ ಮಾಡಿ.
04:48 ಈಗ POP Download ನಲ್ಲಿ, ನಾನು Enable POP for all mail ಎಂಬುದನ್ನು ಸೆಲೆಕ್ಟ್ ಮಾಡುತ್ತೇನೆ.
04:53 ನಂತರ Save Changes ಅನ್ನು ಕ್ಲಿಕ್ ಮಾಡಿ.
04:56 ಈಗ ಜೀಮೇಲ್ ವಿಂಡೊ ಕಾಣಿಸುತ್ತದೆ.
04:58 POP 3 ಯು ಈಗ ಜೀಮೇಲ್ ನಲ್ಲಿ ಕೆಲಸ ಮಾಡಲು ಸಿದ್ಧವಾಗಿದೆ.
05:02 ಈಗ ಜೀಮೇಲ್ ಅನ್ನು ಲಾಗ್ ಔಟ್ ಮಾಡಿ, ಈ ಬ್ರೌಸರ್ ಅನ್ನು ಕ್ಲೋಸ್ ಮಾಡೋಣ.
05:08 ಈಗ STUSERONE at gmail dot com ಅಕೌಂಟ್ ಅನ್ನು ಥಂಡರ್ ಬರ್ಡ್ ನಲ್ಲಿ ಕನ್ಫಿಗರ್ ಮಾಡೋಣ.
05:15 ಜೀಮೇಲ್ ಅಕೌಂಟ್ ಗಳು ತಾವಗಿಯೇ ಥಂಡರ್ ಬರ್ಡ್ ನಿಂದ ಕನ್ಫಿಗರ್ ಆಗುತ್ತವೆ.
05:19 ಮುಂದಿನ ಟ್ಯುಟೋರಿಯಲ್ ಗಳಲ್ಲಿ ನಾವು manual configurations ಮತ್ತು ಇತರ ಈಮೇಲ್ ಅಕೌಂಟ್ ಗಳ ಬಗ್ಗೆ ತಿಳಿಯೋಣ.
05:26 ಮೊದಲಿಗೆ ನಿಮ್ಮ ನೆಟ್ ವರ್ಕ್ ಕನಕ್ಷನ್ ಸರಿಯಾಗಿದೆಯೇ ಎಂದು ಪರೀಕ್ಷಿಸಿಕೊಳ್ಳಿ.
05:31 ಮೇನ್ ಮೆನ್ಯುವಿನಲ್ಲಿ, Edit ಮತ್ತು Preferences ಅನ್ನು ಆಯ್ಕೆಮಾಡಿ.
05:36 Thunderbird Preferences ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
05:39 Advanced ಅನ್ನು ಕ್ಲಿಕ್ ಮಾಡಿ, ಅಲ್ಲಿ Network & Disk Space ಎಂಬ ಟ್ಯಾಬ್ ಆಯ್ಕೆಮಾಡಿ ಮತ್ತು Settings ಅನ್ನು ಕ್ಲಿಕ್ ಮಾಡಿ.
05:48 Connection Settings ಎಂಬ ಡಯಲಾಗ್ ಬಾಕ್ಸ್ ನಲ್ಲಿ, Use system proxy settings ಎಂಬ ಓಪ್ಶನ್ ಆಯ್ಕೆ ಮಾಡಿ.
05:56 OK ಕ್ಲಿಕ್ ಮಾಡಿ, Close ಕ್ಲಿಕ್ ಮಾಡಿ.
06:00 ಈಗ, Accounts ಓಪ್ಶನ್ ಅನ್ನು ಉಪಯೋಗಿಸಿ ಹೊಸ ಅಕೌಂಟ್ ಅನ್ನು ರಚಿಸೋಣ.
06:05 ಥಂಡರ್ ಬರ್ಡ್ ನ ಬಲ panel ನಿಂದ, Create a New Account ಅನ್ನು ಕ್ಲಿಕ್ ಮಾಡಿ.
06:12 Mail Account Setup ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
06:17 STUSERONE ಎಂದು ಹೆಸರು ಟೈಪ್ ಮಾಡಿ.
06:20 STUSERONE at gmail dot com ಎಂದು ಈಮೇಲ್ ಅಡ್ಡ್ರೆಸ್ ಅನ್ನು ಎಂಟರ್ ಮಾಡಿ.
06:27 ಮತ್ತು ಜೀಮೇಲ್ ಅಕೌಂಟ್ ನ ಪಾಸ್ ವರ್ಡ್ ಅನ್ನು ಎಂಟರ್ ಮಾಡಿ.
06:32 ನಂತರ, Continue ಬಟನ್ ಮೇಲೆ ಕ್ಲಿಕ್ ಮಾಡಿ.
06:36 The message Configuration found in Mozilla ISP database ಎಂದು ಕಾಣಿಸುತ್ತದೆ.
06:42 ನಂತರ, POP 3 ಅನ್ನು ಸೆಲೆಕ್ಟ್ ಮಾಡಿ.
06:46 ಕೆಲವೊಮ್ಮೆ Thunderbird failed to find the settings ಎಂದು,
06:49 ಎರರ್ ಮೆಸೇಜ್ ಕಾಣಸಿಗಬಹುದು.
06:53 ಇದು, ಥಂಡರ್ ಬರ್ಡ್ ಸ್ವತಃ ಜೀಮೇಲ್ ಸೆಟ್ಟಿಂಗ್ ಗಳನ್ನು ಕನ್ಫಿಗರ್ ಮಾಡಲು ಸಮರ್ಥವಾಗಿಲ್ಲ ಎಂಬುದನ್ನು ಸೂಚಿಸುತ್ತದೆ.
06:59 ಇಂತಹ ಸಂದರ್ಭದಲ್ಲಿ ನಾವೇ ಸೆಟ್ಟಿಂಗ್ ಗಳನ್ನು ಕನ್ಫಿಗರ್ ಮಾಡಬೆಕಾಗುತ್ತದೆ.
07:04 ಈಗ, Manual Config ಎಂಬ ಬಟನ್ ಅನ್ನು ಕ್ಲಿಕ್ ಮಾಡಿ.
07:08 ಜೀಮೇಲ್ ನ configuration settings ಕಾಣಿಸುತ್ತದೆ.
07:12 ಆದರೆ ಇಲ್ಲಿ ಥಂಡರ್ ಬರ್ಡ್, ಜೀಮೇಲ್ ಸೆಟ್ಟಿಂಗ್ ಗಳನ್ನು ಸರಿಯಾಗಿ ಕನ್ಫಿಗರ್ ಮಾಡಿರುದರಿಂದ, ನಾವು ಅದನ್ನು ಬದಲಾಯಿಸುವ ಅಗತ್ಯವಿಲ್ಲ.
07:19 ಈಗ ವೀಡಿಯೋವನ್ನು Pause ಮಾಡಿ ಮತ್ತು ಈ ಸೆಟ್ಟಿಂಗ್ ಗಳನ್ನು ನೋಟ್ ಮಾಡಿಕೊಳ್ಳಿ.
07:24 ಜೀಮೇಲ್ ಅನ್ನು ಕೈಯಾರೆ ಕನ್ಫಿಗರ್ ಮಾಡಲು, ನೀವು ಈ ಸೆಟ್ಟಿಂಗ್ ಗಳನ್ನು ಸಂಬಧಿಸಿದ ಫೀಲ್ಡ್ ಗಳಲ್ಲಿ ಎಂಟರ್ ಮಾಡಬೇಕು.
07:30 ನಾವು ಸೆಟ್ಟಿಂಗ್ ಗಳನ್ನು ನಮ್ಮ ಕೈಯಾರೆ ಮಾಡುವಾಗ, Create Account ಬಟನ್ ಉಪಯೋಗಕ್ಕೆ ಲಭ್ಯವಿರುತ್ತದೆ.
07:36 ಈ ಟ್ಯುಟೋರಿಯಲ್ ನಲ್ಲಿ ಥಂಡರ್ ಬರ್ಡ್, ಜೀಮೇಲ್ ಅನ್ನು ಸರಿಯಾಗಿ ಕನ್ಫಿಗರ್ ಮಾಡಿದೆ.
07:41 ಹಾಗಾಗಿ, Create Account ಅನ್ನು ಕ್ಲಿಕ್ ಮಾಡೋಣ.
07:44 ಇಂಟರ್ನೆಟ್ ನ ವೇಗವನ್ನು ಅವಲಂಬಿಸಿ ಇದು ಕೆಲವು ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.
07:52 ಈಗ Gmail account ಕ್ರಿಯೇಟ್ ಆಗಿದೆ ಮತ್ತು ಬಲ panel ನಲ್ಲಿ ಕಾಣಿಸುತ್ತದೆ.
07:56 ಎಡ panel ನಲ್ಲಿ Email ID STUSERONE at gmail dot com ಎಂದು ಕಾಣಿಸುತ್ತಿರುದನ್ನು ಗಮನಿಸಿ.
08:04 Gmail account ಅಡಿಯಲ್ಲಿ, ಹಲವಾರು mail folders ಗಳು ಕಾಣಿಸುತ್ತವೆ.
08:09 ಈಗ, Gmail account ನ ಎಡ panel ನಲ್ಲಿ ಇನ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ ಅಲ್ಲಿ ಪುನಃ Get Mail icon ಅನ್ನು ಕ್ಲಿಕ್ ಮಾಡಿ.
08:18 Thunderbird window ನ ಕೆಳ ಭಾಗದಲ್ಲಿ status bar ಅನ್ನು ಗಮನಿಸಿ.
08:22 ಅಲ್ಲಿ ಡೌನ್ ಲೋಡ್ ಆಗುತ್ತಿರುವ ಕೆಲ ಮೆಸೇಜ್ ಗಳು ಕಾಣಿಸುತ್ತವೆ.
08:27 STUSERONE at gmail dot com ನ ಎಲ್ಲ ಈಮೇಲ್ ಮೆಸೇಜ್ ಗಳು ಇನ್ ಬಾಕ್ಸ್ ನಲ್ಲಿ ಡೌನ್ ಲೋಡ್ ಆಗಿವೆ.
08:36 Inbox ಅನ್ನು ಕ್ಲಿಕ್ ಮಾಡಿ ಮತ್ತು ಮೆಸೇಜ್ ಅನ್ನು ಸೆಲೆಕ್ಟ್ ಮಾಡಿ.
08.39 message ಕೆಳಗಿನ panel ನಲ್ಲಿ ಕಾಣಿಸುತ್ತದೆ.
08:43 message ನ ಮೇಲೆ ಎರಡು ಬಾರಿ ಕ್ಲಿಕ್ ಮಾಡೋಣ.
08:46 ಮೆಸೇಜ್ ಹೊಸ tab ನಲ್ಲಿ ಓಪನ್ ಆಗುತ್ತದೆ.
08:49 tab ನ ಮೇಲಿಂದ ಬಲಕ್ಕಿರುವ X ಐಕಾನ್ ಕ್ಲಿಕ್ ಮಾಡಿ ಈ tab ಅನ್ನು ಕ್ಲೋಸ್ ಮಾಡೋಣ.
08:55 ಈಗ ಮೆಸೇಜ್ ಅನ್ನು ಕಂಪೋಸ್ ಮಾಡಿ STUSERTWO at yahoo dot in ಅಕೌಂಟ್ ಗೆ ಕಳುಹಿಸಿ.
09:03 Mail ಟೂಲ್ ಬಾರ್ ನಿಂದ Write ಅನ್ನು ಕ್ಲಿಕ್ ಮಾಡಿ.
09:07 Write dialog box ಕಾಣಿಸುತ್ತದೆ.
09:10 From field, ನಿಮ್ಮ ಹೆಸರು ಮತ್ತು Gmail ID ಅನ್ನು ತೋರಿಸುತ್ತದೆ.
09:14 To field ನಲ್ಲಿ, STUSERTWO at yahoo dot in ಎಂದು ಎಂಟರ್ ಮಾಡಿ.
09:20 ಈಗ Hi, I now have an email account in Thunderbird! ಎಂದು ಮೇಲ್ ನಲ್ಲಿ ಟೈಪ್ ಮಾಡೋಣ.
09:29 ಈಗ, ಬರೆದ text ಅನ್ನು ಸೆಲೆಕ್ಟ್ ಮಾಡಿ ಅದರ font size ಅನ್ನು ಹೆಚ್ಚಿಸೋಣ.
09:33 ಈಗ Larger font size Icon ಅನ್ನು ಕ್ಲಿಕ್ ಮಾಡಿ, ಇದು Font size ಅನ್ನು ಹೆಚ್ಚಿಸುತ್ತದೆ.
09:40 text ಬಣ್ಣವನ್ನು ಬದಲಾಯಿಸಲು ಅದನ್ನು ಸೆಲೆಕ್ಟ್ ಮಾಡಿ Choose colour for text icon ಅನ್ನು ಕ್ಲಿಕ್ ಮಾಡಿ.
09:47 The Text Color dialog box ಕಾಣಿಸುತ್ತದೆ. ಅಲ್ಲಿ Red ಅನ್ನು ಕ್ಲಿಕ್ ಮಾಡಿ, OK ಕ್ಲಿಕ್ ಮಾಡಿ.
09:55 text ನ ಬಣ್ಣ ಬದಲಾಗಿದೆ.
09:58 ಈಗ smiley ಅನ್ನು ಹಾಕಲು, Insert a Smiley face ಐಕಾನ್ ಅನ್ನು ಕ್ಲಿಕ್ ಮಾಡಿ.
10:04 Smiley list ನಿಂದ, Smile ಅನ್ನು ಕ್ಲಿಕ್ ಮಾಡಿ. ಒಂದು Smiley ಹಾಕಲ್ಪಟ್ಟಿದೆ.
10:11 ನೀವು ನಿಮ್ಮ mail ನಲ್ಲಿ spell check ಅನ್ನು ಕೂಡ ಮಾಡಬಹುದು.
10:15 have ಅನ್ನು heve ಎಂದು ಬದಲಾಯಿಸೋಣ.
10:20 Spelling ಅನ್ನು ಕ್ಲಿಕ್ ಮಾಡಿ, ಅಲ್ಲಿ English US ಅನ್ನು ಸೆಲೆಕ್ಟ್ ಮಾಡಿ.
10:24 Spelling ತಪ್ಪಾಗಿರುವ ಶಬ್ದವನ್ನು ಹೈಲೇಟ್ ಮಾಡುತ್ತಾ Check Spelling dialog box ಕಾಣಿಸುತ್ತದೆ.
10:30 ಇದು ಸರಿಯಾದ spelling ಅನ್ನು ಕೂಡ ತೋರಿಸುತ್ತದೆ. Replace ಅನ್ನು ಕ್ಲಿಕ್ ಮಾಡಿ.. Exit ಆಗಲು Close ಅನ್ನು ಕ್ಲಿಕ್ ಮಾಡಿ.
10:38 Main menu ನಿಂದ spelling ಆಯ್ಕೆಗಳನ್ನು ಪಡೆಯಲು, Edit ಮತ್ತು Preferences ಅನ್ನು ಕ್ಲಿಕ್ ಮಾಡಿ.
10:44 Preferences dialog box ನಲ್ಲಿ, Composition ಅನ್ನು ಕ್ಲಿಕ್ ಮಾಡಿ.
10:48 ನಂತರ ನಿಮಗೆ ಬೇಕಾದ options ಗಳನ್ನು ಪರೀಕ್ಷಿಸಿ Close ಅನ್ನು ಕ್ಲಿಕ್ ಮಾಡಿ.
10:54 ಈಗ, Send ಬಟನ್ ಅನ್ನು ಕ್ಲಿಕ್ ಮಾಡಿ mail ಅನ್ನು ಕಳುಹಿಸಿ.
10:59 ಒಂದು Subject Reminder dialog box ಕಾಣಿಸುತ್ತದೆ.
11:03 ನಾವು ಮೇಲ್ ನಲ್ಲಿ Subject ಅನ್ನು ಎಂಟರ್ ಮಾಡದೇ ಇರುವುದರಿಂದ ಇದು ಕಾಣಿಸುತ್ತದೆ.
11:07 ವಿಷಯವೇ ಇಲ್ಲದೆ ಮೇಲ್ ಕಳುಹಿಸಲು Send without Subject ಅನ್ನು ಕ್ಲಿಕ್ ಮಾಡಿ.
11:13 Cancel Sending ಅನ್ನು ಕ್ಲಿಕ್ ಮಾಡಿ.
11:16 ಈಗ, Subject field ನಲ್ಲಿ, My First Email From Thunderbird ಎಂದು ಟೈಪ್ ಮಾಡಿ.
11:21 Send ಅನ್ನು ಕ್ಲಿಕ್ ಮಾಡಿ. ನಿಮ್ಮ email ಕಳುಹಿಸಲ್ಪಟ್ಟಿರುತ್ತದೆ. ಅದನ್ನು ಪರೀಕ್ಷಿಸೋಣ.
11:29 ನಾವು STUSERTWO@yahoo.in ಅಕೌಂಟ್ ಅನ್ನು ಓಪನ್ ಮಾಡಿ ಇನ್ ಬಾಕ್ಸ್ ಅನ್ನು ಪರೀಕ್ಷಿಸೋಣ.
11:37 Yahoo ಗೆ ಲಾಗ್ ಇನ್ ಆಗೋಣ.
11:47 Yahoo login ಪೇಜ್ ನಲ್ಲಿ, STUSERTWO ಎನ್ನುವ Yahoo ID ಮತ್ತು ನಿಮ್ಮ ಪಾಸ್ ವರ್ಡ್ ಅನ್ನು ಎಂಟರ್ ಮಾಡಿ.
11:56 Inbox ಅನ್ನು ಕ್ಲಿಕ್ ಮಾಡಿ. Gmail account ನಿಂದ ಮೇಲ್ ಬಂದಿರುವುದನ್ನು ಇನ್ ಬಾಕ್ಸ್ ತೋರಿಸುತ್ತದೆ!
12:03 ಓಪನ್ ಮಾಡಲು mail ಅನ್ನು ಕ್ಲಿಕ್ ಮಾಡಿ .
12:05 ನೀವು Reply ಬಟನ್ ಅನ್ನು ಬಳಸಿ ಮೇಲ್ ಗೆ reply ಮಾಡಬಹುದು, ಆದರೆ ನಾವಿಲ್ಲಿ ಹೊಸ ಮೇಲ್ ಅನ್ನು ಕಂಪೋಸ್ ಮಾಡೋಣ.
12:13 Compose ಅನ್ನು ಕ್ಲಿಕ್ ಮಾಡೋಣ.
12:16 To field ನಲ್ಲಿ, STUSERONE at gmail dot com ಅಡ್ಡ್ರೆಸ್ ಅನ್ನು ಎಂಟರ್ ಮಾಡೋಣ.
12:23 Subject field ನಲ್ಲಿ, Congrats ಎಂದು ಎಂಟರ್ ಮಾಡಿ!
12:27 mail ನಲ್ಲಿ Glad you got a new account ಎಂದು ಟೈಪ್ ಮಾಡಿ.
12:32 send ಬಟನ್ ಅನ್ನು ಕ್ಲಿಕ್ ಮಾಡಿ, Yahoo ಅನ್ನು ಲಾಗ್ ಔಟ್ ಮಾಡಿ.
12:37 ಈ browser ಅನ್ನು ಕ್ಲೋಸ್ ಮಾಡೋಣ.
12:39 ಈಗ Thunderbird ಅನ್ನು ಪರೀಕ್ಷಿಸೋಣ.
12:42 Get Mail ಮತ್ತು Get All New Messages ಅನ್ನು ಕ್ಲಿಕ್ ಮಾಡಿ.
12:48 Gmail account ID ಕೆಳಗಿನ ಎಡ panel ನಲ್ಲಿನ Inbox ಅನ್ನು ಕ್ಲಿಕ್ ಮಾಡಿ.
12:53 yahoo ಅಕೌಂಟ್ ನಿಂದ ಕಳುಹಿಸಿದ ಹೊಸ ಮೆಸೇಜ್ ನಿಮಗೆ ಇನ್ ಬಾಕ್ಸ್ ನಲ್ಲಿ ಕಾಣಿಸುತ್ತದೆ.
12:58 mail ನಲ್ಲಿರುವ ವಿಷಯಗಳು ಕೆಳಗಿನ panel ನಲ್ಲಿ ಕಾಣಿಸುತ್ತವೆ.
13:03 Reply ಬಟನ್ ಉಪಯೋಗಿಸಿ ನೀವು ಈ ಮೇಲ್ ಗೆ reply ಮಾಡಬಹುದು.
13:07 Thunderbird ಅನ್ನು ಉಪಯೋಗಿಸಿ ನೀವು ಯಶಸ್ವಿಯಾಗಿ ಈಮೇಲ್ ಮೆಸೇಜ್ ಅನ್ನು ಕಳುಹಿಸಿದ್ದೀರಿ, ಪಡೆದಿದ್ದೀರಿ ಮತ್ತು ನೋಡಿದ್ದೀರಿ ಕೂಡ.
13:14 Thunderbird ಅನ್ನು ಲಾಗ್ ಔಟ್ ಮಾಡಲು, Main menu ನಲ್ಲಿ, File ಮತ್ತು Quit ಅನ್ನು ಕ್ಲಿಕ್ ಮಾಡಿ.
13:19 ನೀವು Mozilla Thunderbird ನಿಂದ exit ಆಗುವಿರಿ.
13:22 Thunderbird ವಿಷಯದ tutorial ನ ಕೊನೆಗೆ ಬಂದಿದ್ದೇವೆ.
13:26 ಈ tutorial ನಲ್ಲಿ ನಾವು Mozilla Thunderbird ನ ಬಗ್ಗೆ ಮತ್ತು ಅದನ್ನು ಹೇಗೆ ಡೌನ್ಲೋಡ್, install ಮತ್ತು launch ಮಾಡಬೇಕೆಂದು ತಿಳಿದಿರುತ್ತೇವೆ.
13:35 ಇದರೊಂದಿಗೆ ನಾವು:
13:37 ಹೊಸ ಮೇಲ್ ಅಕೌಂಟ್ ಅನ್ನು Configure ಮಾಡುದನ್ನು,

ಮೇಲ್ ಮೆಸೇಜ್ ಅನ್ನು Compose ಮತ್ತು send ಮಾಡುವುದನ್ನು, ಪಡೆಯುವುದನ್ನು ಮತ್ತು ಓದುವುದನ್ನು ಹಾಗೂ Thunderbird ಅನ್ನು ಲಾಗ್ ಔಟ್ ಮಾಡುವುದನ್ನು ಕಲಿತಿದ್ದೇವೆ.

13:46 ನಿಮಗೊಂದು assignment ಕೊಡುತ್ತೇನೆ.
13:49 Mozilla Thunderbird application ಅನ್ನು ಡೌನ್ ಲೋಡ್ ಮಾಡಿ,
13:52 ಅದನ್ನು Install ಮಾಡಿ ಮತ್ತು launch ಮಾಡಿ.
13:54 'Thunderbird' ನಲ್ಲಿ ಒಂದು ಈಮೇಲ್ ಅಕೌಂಟ್ ಅನ್ನು Configure ಮಾಡಿ.
13:58 ಈ ಅಕೌಂಟ್ ಅನ್ನು ಬಳಸಿ ಮೇಲ್ ಗಳನ್ನು ಕಳುಹಿಸಿ ಮತ್ತು ಪುನಃ ಪಡೆಯಿರಿ. ಏನಾಗುತ್ತದೆ ಎಂದು ಗಮನಿಸಿ.
14:06 ಈ ಕೆಳಗಿನ ಲಿಂಕ್ ಗಳನ್ನು ಬಳಸಿ ವೀಡಿಯೋಗಳನ್ನು ನೋಡಿ.
14:09 Spoken Tutorial project ನ ಸಾರವು ಅಲ್ಲಿ ಲಭ್ಯವಾಗುತ್ತದೆ.
14:12 ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ.
14:16 ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.
14:22 ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
14:26 ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
14:32 ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
14:36 ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
14:44 ಈ ಯೋಜನೆಯ ಹೆಚ್ಚಿನ ಮಾಹಿತಿಯು spoken hyphen tutorial dot org slash NMEICT hyphen Intro ದಲ್ಲಿ ಲಭ್ಯ.
14:55 ಈ ಟ್ಯುಟೋರಿಯಲ್ ನ ಅನುವಾದಕ ಪ್ರಜ್ವಲ್ ಮತ್ತು ಪ್ರವಾಚಕ ಐ. ಐ. ಟಿ ಬಾಂಬೆಯಿಂದ ವಾಸುದೇವ. ಧನ್ಯವಾದಗಳು.

Contributors and Content Editors

Pratik kamble, Vasudeva ahitanal