Thunderbird/C2/Account-settings-and-configuring/Kannada

From Script | Spoken-Tutorial
Revision as of 15:52, 31 July 2014 by Vasudeva ahitanal (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
0:00 ಅಕೌಂಟ್ ಸೆಟ್ಟಿಂಗ್ ಮತ್ತು ಜೀಮೇಲ್ ಅಕೌಂಟ್ ನ ಕಾನ್ಫಿಗರಿಂಗ್ (Configuring) ಅನ್ನು ತಿಳಿಸಿಕೊಡುವ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ
00.06 ಈ ಟ್ಯುಟೋರಿಯಲ್ ನಲ್ಲಿ ನಾವು,
00.09 ಈ-ಮೇಲ್ ಅಕೌಂಟ್ ಗೆ ಹೊಸ ಫೋಲ್ಡರ್ ಅನ್ನು ಸೇರಿಸುವುದನ್ನು,
00.13 ಮೆಸೇಜ್ ಅನ್ನು ಹುಡುಕಲು ಅಡ್ವಾನ್ಸ್ದ್ ಫಿಲ್ಟರ್ ಗಳನ್ನು (advanced filters) ಸೆಟ್ ಮಾಡಲು,
00.18 ಮೆಸೇಜ್ ಫಿಲ್ಟರ್ ಗಳನ್ನು ನಿರ್ವಹಿಸಲು ಕಲಿಯಲಿದ್ದೇವೆ.
00.20 ಇದರೊಂದಿಗೆ ನಾವು:
00.22 ಕೃತಕವಾಗಿ (manually) ಯಾಹೂ (Yahoo) ಅಕೌಂಟ್ ಗಳನ್ನು ಸಂರಚಿಸಲು (Configure),
00.25 ಮಲ್ಟಿಪಲ್ ಈಮೇಲ್ ಅಕೌಂಟ್ ಗಳನ್ನು ನಿರ್ವಹಿಸಲು,
00.28 ಮೇಲ್ ಅಕೌಂಟ್ ನ ಅಕೌಂಟ್ ಸೆಟ್ಟಿಂಗ್ ಗಳನ್ನು ಬದಲಿಸಲು,
00.32 ಈ-ಮೇಲ್ ಅಕೌಂಟ್ ಅನ್ನು ಡಿಲೀಟ್ ಮಾಡಲು ಕಲಿಯಲಿದ್ದೇವೆ.
00.34 ಇಲ್ಲಿ ನಾವು ಉಬಂಟು (Ubuntu) 12.04 ವಿನಲ್ಲಿ ಮೋಜಿಲ ಥಂಡರ್ ಬರ್ಡ್ (Mozilla Thunderbird) 13.0.1 ಅನ್ನು ಬಳಸುತ್ತಿದ್ದೇವೆ.
00.42 ಲಾಂಚರ್ ನಲ್ಲಿರುವ Thunderbird ಐಕಾನ್ ಮೇಲೆ ಕ್ಲಿಕ್ ಮಾಡಿ.
00.45 ಥಂಡರ್ ಬರ್ಡ್ ವಿಂಡೋ ತೆರೆದುಕೊಳ್ಳುತ್ತದೆ.
00.48 ಈ ಅಕೌಂಟ್ ಗೆ ಇನ್ನೊಂದು ಫ಼ೋಲ್ಡರ್ ಅನ್ನು ಸೇರಿಸೋಣ.
00.51 ಬಲ ಬದಿಯ ಫಲಕದಿಂದ STUSERONE at GMAIL dot COM ಎಂಬ ಅಕೌಂಟ್ ಅನ್ನು ಆಯ್ಕೆ ಮಾಡೋಣ.
00.58 STUSERONE at gmail dot com ಅಕೌಂಟ್ ನ ಮೇಲೆ ಮೌಸ್ ನ ಬಲ ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು New Folder ಅನ್ನು ಆರಿಸಿ.
01.06 New Folder ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
01.09 Name ಫೀಲ್ದ್ ನಲ್ಲಿ Important Mails ಎಂದು ನಮೂದಿಸಿ (ಎಂಟರ್).
01.13 Create Folder ಅನ್ನು ಕ್ಲಿಕ್ ಮಾಡಿ. ಫ಼ೋಲ್ಡರ್ ರಚಿತವಾಗುತ್ತದೆ!
01.18 ಈಗ ನೀವು ಪ್ರಮುಖವಾದ ಮೇಲ್ ಗಳನ್ನು ಇನ್ ಬಾಕ್ಸ್ ನಿಂದ ಈ ಹೊಸ ಫ಼ೋಲ್ಡರ್ ಗೆ ವರ್ಗಾಯಿಸಬಹುದು.
01.23 ಈ ಮೇಲ್ ಗಳನ್ನು ಇನ್ ಬಾಕ್ಸ್ ನಿಂದ ಆರಿಸಿ, ಎಳೆದು(ಡ್ರ್ಯಾಗ್) ಮಾಡಿ Important Mails ಫ಼ೋಲ್ಡರ್ ಗೆ ತಂದು ಬಿಡಿ.
01.30 ಬೇರೆ ಬೇರೆ ಫಿಲ್ಟರ್ ಆಯ್ಕೆಗಳನ್ನು ಬಳಸಿ ಮೆಸೇಜ್ ಅನ್ನು ಹುಡುಕಬಹುದು (ಸರ್ಚ್ ಮಾಡಬಹುದು).
01.36 ಈಗ ಎಡ ಫಲಕದಿಂದ STUSERONE@gmail dot com ಅಕೌಂಟ್ ಅನ್ನು ಆಯ್ದುಕೊಳ್ಳಿ.
01.43 ಬಲ ಫಲಕದಲ್ಲಿನ Advanced Features ಅಡಿಯಲ್ಲಿರುವ Search Messages ಅನ್ನು ಕ್ಲಿಕ್ ಮಾಡಿ.
01.48 Search Messages ಡಯಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ.
01.52 ಮೆಸೇಜ್ ಗಳನ್ನು ಹುಡುಕಲು ಡೀಫ಼ಾಲ್ಟ್ ಸೆಟ್ಟಿಂಗ್ ಅನ್ನು ಬಳಸೋಣ.
01.57 Match all of the following ಎಂಬ ಆಪ್ಷನ್ ಡೀಫಾಲ್ಟ್ ಆಗಿಯೇ ಸೆಲೆಕ್ಟ್ ಆಗಿದೆ.
02.02 subject (ಸಬ್ಜೆಕ್ಟ್) ಮತ್ತು contains (ಕಂಟೈನ್ಸ್) ಡೀಫ಼ಾಲ್ಟ್ ನಿಂದಲೇ ಸೆಲೆಕ್ಟ್ ಆಗಿವೆ.
02.08 ಮುಂದಿನ ಕ್ಷೇತ್ರ (field) ದಲ್ಲಿ Ten interesting ಎಂದು ಟೈಪ್ ಮಾಡಿ. Search ಅನ್ನು ಕ್ಲಿಕ್ ಮಾಡಿ.
02.13 ವಿಷಯದ ಹೆಸರಿಗೆ ಹೊಂದುವ ಮೇಲ್ ಗಳು ಕಾಣಿಸಿಕೊಳ್ಳುತ್ತವೆ.
02.18 ನೀವು ಹುಡುಕಿರುವ ಈ ಮೇಲ್ ಗಳನ್ನು ಸೇವ್ ಕೂಡ ಮಾಡಬಹುದು.
02.22 ಟ್ಯುಟೋರಿಯಲ್ ಅನ್ನು ಸ್ವಲ್ಪ ನಿಲ್ಲಿಸಿ ಈ ಅಭ್ಯಾಸಗಳನ್ನು (ಅಸೈನ್ ಮೆಂಟ್) ಮಾಡಿರಿ.
02.25 ಮೇಲ್ ಗಳನ್ನು ದಿನಾಂಕಗಳ ಅಧಾರದಲ್ಲಿ ಹುಡುಕಿ ಒಂದು ಫೋಲ್ಡರ್ ನಲ್ಲಿ ಸೇವ್ ಮಾಡಿರಿ.
02.31 ಈ ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡೋಣ.
02.35 ಈ ಮೇಲ್ ಅಕೌಂಟ್ ಗೆ ಹೊಸ ಫಿಲ್ಟರ್ ಅನ್ನು ರಚಿಸೋಣ..
02.39 ಫಿಲ್ಟರ್ ಎಂದರೆ ನಿಮ್ಮ ಇನ್ ಬಾಕ್ಸ್ ನಲ್ಲಿ ಮೆಸೇಜ್ ಗಳನ್ನು ವಿಂಗಡಿಸಲು ಉಪಯೋಗಿಸಬಹುದಾದ ನಿಯಮಾವಳಿ.
02.44 ಇಲ್ಲಿ ನಾವು ಥಂಡರ್ ಬರ್ಡ್ ಎನ್ನುವ ವಿಷಯವನ್ನು ಹೊಂದಿರುವ ಎಲ್ಲಾ ಮೇಲ್ ಗಳನ್ನು Important Mails ಫೋಲ್ಡರ್ ಗೆ ವರ್ಗಾಯಿಸೋಣ.
02.52 ಎಡ ಫಲಕದಿಂದ ಅನ್ನು STUSERONE@gmail dot com ಆರಿಸಿ..
02.58 Advanced Features ಅಡಿಯಲ್ಲಿನ , Manage message filters ಅನ್ನು ಕ್ಲಿಕ್ ಮಾಡಿ.
03.03 Message Filters ಡಯಲಾಗ್ ಬಾಕ್ಸ್ ಕಾಣಿಸುತ್ತದೆ.. New ಎನ್ನುವ ಟ್ಯಾಬ್ ಅನ್ನು ಕ್ಲಿಕ್ ಮಾಡಿ.
03.09 Filter Rules ಡಯಲಾಗ್ ಬಾಕ್ಸ್ ಕಾಣಿಸುತ್ತದೆ,
03.12 Filter name ಫೀಲ್ಡ್ ನಲ್ಲಿ Thunderbird ಎನ್ನುವ ಸಬ್ಜೆಕ್ಟ್ ಅನ್ನು ನಮೂದಿಸಿ.
03.16 ಮತ್ತೊಮ್ಮೆ ಫಿಲ್ಟರ್ ಅನ್ನು ಸೆಟ್ ಮಾಡಲು ಡೀಫಾಲ್ಟ್ ಸೆಟ್ಟಿಂಗ್ ಅನ್ನು ಬಳಸೋಣ.
03.21 Match all of the following ಎಂಬ ಆಪ್ಷನ್ ಡೀಫಾಲ್ಟ್ ಆಗಿಯೇ ಸೆಲೆಕ್ಟ್ ಆಗಿದೆ.
03.26 Sabject ಮತ್ತು contains ಕೂಡ ಡೀಫಾಲ್ಟ್ ನಿಂದ ಆರಿಸಲ್ಪಟ್ಟಿವೆ.
03.30 ಮುಂದಿನ ಕ್ಷೇತ್ರ ದಲ್ಲಿ (field) Thunderbird ಎಂದು ಟೈಪ್ ಮಾಡಿ.
03.33 ನಂತರ, Perform these actions ಫೀಲ್ಡ್ ನ ಅಡಿಯಲ್ಲಿ, Move Message to ಎಂದು ಆಪ್ಷನ್ ಅನ್ನು ಬದಲಿಸೋಣ.
03.41 ಪಕ್ಕದ ಕೆಳಮುಖದ ಚಿನ್ಹೆಯನ್ನು ಕ್ಲಿಕ್ ಮಾಡಿ, ಬ್ರೌಸ್ ಮಾಡಿ ಮತ್ತು Important Mails ಫೋಲ್ಡರ್ ಅನ್ನು ಸೆಲೆಕ್ಟ್ ಮಾಡಿ. OK ಅನ್ನು ಕ್ಲಿಕ್ ಮಾಡಿ.
03.49 Message Filters ಡಯಲಾಗ್ ಬಾಕ್ಸ್ ನಲ್ಲಿ ಫಿಲ್ಟರ್ ಆದ ಮೆಸೇಜ್ ಕಾಣಿಸುತ್ತದೆ. Run Now ಅನ್ನು ಕ್ಲಿಕ್ ಮಾಡಿ.
03.58 ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ. Important Mails ಫೋಲ್ಡರ್ ಅನ್ನು ಕ್ಲಿಕ್ ಮಾಡಿ.
04.04 Thunderbird ಎಂಬ ಸಬ್ಜೆಕ್ಟ್ ನೊಂದಿಗಿರುವ ಎಲ್ಲಾ ಮೇಲ್ ಗಳು ಈ ಫೋಲ್ದರ್ ಗೆ ವರ್ಗಾಯಿತವಾಗಿರುದನ್ನು ಗಮನಿಸಿ.
04.12 ಥಂಡರ್ ಬರ್ಡ್ ಅನ್ನು ಉಪಯೋಗಿಸಿ ಮಲ್ಟಿಪಲ್ ಈ-ಮೇಲ್ ಅಕೌಂಟ್ ಗಳನ್ನು ನಿರ್ವಹಿಸಬಹುದು.
04.15 ಹೀಗೆಂದರೆ ನೀವು ಥಂಡರ್ ಬರ್ಡ ಅನ್ನು ಬಳಸಿ ಮೆಸೇಜ್ ಗಳನ್ನು ಪಡೆಯಬಹುದು , ಕಳುಹಿಸಬಹುದು ಹಾಗು ಜೀಮೇಲ್ ಅಲ್ಲದೆ ಯಾಹೂ ಮುಂತಾದ ಅಕೌಂಟ್ ಗಳಲ್ಲಿ ಕೂಡ ಮೇಲ್ ಗಳನ್ನು ನಿರ್ವಹಿಸಬಹುದು.
04.26 ನಿಮಗೆ ಈಗಾಗಲೇ ತಿಳಿದಿರುವಂತೆ ಜೀಮೇಲ್ ಅಕೌಂಟ್ ಗಳು ಸ್ವಯಂಚಾಲಿತವಾಗಿ ಥಂಡರ್ ಬರ್ಡ್ ನಲ್ಲಿ ಕಾನ್ಫಿಗರ್ ಆಗುತ್ತವೆ.
04.31 ಬೇರೆ ಅಕೌಂಟ್ ಗಳನ್ನು ನಾವು ಕೃತವಾಗಿ ಕಾನ್ಫಿಗರ್ ಮಾಡಬೇಕಾಗುತ್ತದೆ.
04.35 STUSERTWO@yahoo dot in ಎನ್ನುವ ಯಾಹೂ ಅಕೌಂಟ್ ಅನ್ನು ಥಂಡರ್ ಬರ್ಡ್ ಅನ್ನು ಬಳಸಿ ಕಾನ್ಫಿಗರ್ ಮಾಡೋಣ. .
04.44 ಇಲ್ಲಿ ಈಗಾಗಲೇ ಯಾಹೂ ಅಕೌಂಟ್ ನಲ್ಲಿ POP ಅನ್ನು ಸಮರ್ಥಗೊಳಿಸಲಾಗಿದೆ..
04.48 ಇದನ್ನು ಮಾಡುವುದು ಹೇಗೆ? ಮೊದಲು ಯಾಹೂ ಅಕೌಂಟ್ ಗೆ ಲಾಗ್ ಇನ್ ಅಗೋಣ.
04.54 ಹೊಸ ಬ್ರೌಸರ್ ಅನ್ನು ಓಪನ್ ಮಾಡಿ ಅಡ್ಡ್ರೆಸ್ ಬಾರ್ ನಲ್ಲಿ www.yahoo.in ಎಂದು ಟೈಪ್ ಮಾಡಿ.
05.02 STUSERTWO at yahoo.in ಎಂಬ ಯೂಸರ್ ನೇಮ್ ಮತ್ತು ಪಾಸ್ ವರ್ಡ್ ಅನ್ನು ನಮೂದಿಸಿ.
05.11 ಮೇಲಿನ ಎಡ ಬದಿಯ ಮೂಲೆಯಿಂದ, Options ಮತ್ತು Mail Options ಅನ್ನು ಕ್ಲಿಕ್ ಮಾಡಿ.
05.16 ಎಡ ಫಲಕದಿಂದ POP & Forwarding ಅನ್ನು ಕ್ಲಿಕ್ ಮಾಡಿ.
05.21 Access Yahoo Mail via POP ಅನ್ನು ಆರಿಸಿ.
05.24 Close the tab ಅನ್ನು ಕ್ಲಿಕ್ ಮಾಡಿ.
05.28 ಬದಲಾವಣೆಗಳನ್ನು ಸೇವ್ ಮಾಡಲು ಮೆಸೇಜ್ ನೊಂದಿಗಿರುವ ಒಂದು ಡಯಲಾಗ್ ಬಾಕ್ಸ್ ಕಾಣಿಸುತ್ತದೆ. save ಅನ್ನು ಕ್ಲಿಕ್ ಮಾಡಿ.
05.33 ಈಗ ಯಾಹೂವಿನಿಂದ ಲಾಗ್ ಔಟ್ ಆಗೋಣ ಮತ್ತು ಬ್ರೌಸರ್ ಅನ್ನು ಕ್ಲೋಸ್ ಮಾಡೋಣ.
05.39 ಈಗ ಬಲ ಫಲಕದಿಂದ, Accounts ನ ಅಡಿಯಲ್ಲಿನ, Create New Account ಅನ್ನು ಕ್ಲಿಕ್ ಮಾಡೊಣ.
05.45 Mail Account Setup ಡಯಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ.
05.49 ಈಗ USERTWO ಎಂಬ ಹೆಸರನ್ನು ನಮೂದಿಸೋಣ.
05.53 ನಂತರ Email address ನಲ್ಲಿ STUSERTWO@YAHOO.IN ಎಂಬ ಯಾಹೂ ಐ.ಡಿ ಅನ್ನು ನಮೂದಿಸಿ.
06.03 ನಂತರ್ ಪಾಸ್ ವರ್ಡ್ ಅನ್ನು ಟೈಪ್ ಮಾಡಿ. Continue ಅನ್ನು ಕ್ಲಿಕ್ ಮಾಡಿ.
06.10 Mail Account Setup ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
06.13 ಅಲ್ಲಿರುವ incoming ಸರ್ವರ್ ನೇಮ್ ಫೀಲ್ಡ್ ನಲ್ಲಿ POP3 ಅನ್ನು ಸೆಲೆಕ್ಟ್ ಮಾಡಿ ಮತ್ತು server hostname ಎಂಬಲ್ಲಿ pop dot mail dot yahoo dot com ಎಂದು ನಮೂದಿಸಿ.
06.26 ನಮಗೆ ಇಂಟರ್ ನೆಟ್ ಕನೆಕ್ಷೆನ್ ಇಲ್ಲದಾಗಲೂ ಮೇಲ್ ಗಳನ್ನು ಪರಿಶೀಲಿಸಲು POP3 ಅನ್ನು ಸಮರ್ಥಗೊಳೀಸಿದ್ದೇವೆ. ಹಾಗಾಗಿ ಎಲ್ಲಾ ಮೇಲ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳಿ.
06.35 incoming ಫೀಲ್ಡ್ ನಲ್ಲಿ,
06.37 port ಮಾಡಲು, 110 ಎಂಬ ಯಾಹೂ ಅಕೌಂಟ್ ನ port ಸಂಖ್ಯೆಯನ್ನು ನಮೂದಿಸಿ.
06.43 SSL ಡ್ರಾಪ್ ಡೌನ್ ನಲ್ಲಿ STARTTLS ಅನ್ನು ಸೆಲೆಕ್ಟ್ ಮಾಡಿ.
06.48 Authentication ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ ಮತ್ತು Normal password ಅನ್ನು ಸೆಲೆಕ್ಟ್ ಮಾಡಿ.
06.53 Outgoing ಫೀಲ್ಡ್ ನಲ್ಲಿ,
06.55 SMTP ಎಂಬ ಸರ್ವರ್ ನೇಮ್ ಅನ್ನು ಸೆಲೆಕ್ಟ್ ಮಾಡಿ ಮತ್ತು smtp.mail.yahoo.com ಎಂಬ sarver host name ಅನ್ನು ನಮೂದಿಸಿ.
07.05 port(ಪೊರ್ಟ್) ಮಾಡಲು, 465 ಎಂಬ ಯಾಹೂ ಅಕೌಂಟ್ ನ port ಸಂಖ್ಯೆಯನ್ನು ನಮೂದಿಸಿ.
07.12 SSL ಡ್ರಾಪ್ ಡೌನ್ ನಲ್ಲಿ SSL/TLS ಅನ್ನು ಸೆಲೆಕ್ಟ್ ಮಾಡಿ.
07.17 Authentication ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ ಮತ್ತು Normal password ಅನ್ನು ಸೆಲೆಕ್ಟ್ ಮಾಡಿ.
07.23 username ಫೀಲ್ಡ್ ನಲ್ಲಿ STUSERTWO ಅನ್ನು ನಮೂದಿಸಿ.
07.28 Create Account ಬಟನ್ ಸಮರ್ಥವಾಗಿದೆ.
07.32 Create Account ಅನ್ನು ಕ್ಲಿಕ್ ಮಾಡಿ.
07.34 ಯಾಹೂ ಅಕೌಂಟ್ ಕಾನ್ಫಿಗರ್ ಆಗಿದೆ.
07.37 ನಿಮ್ಮ ಇಂಟರ್ ನೆಟ್ ಕನೆಕ್ಷನ್ ಆಧಾರಿಸಿ ಈ ಪ್ರಕ್ರಿಯೆ ಕೆಲ ಕಾಲವನ್ನು ತೆಗೆದುಕೊಳ್ಳುತದೆ.
07.42 ಥಂಡರ್ ಬರ್ಡ್ ವಿಂಡೋವಿನ ಬಲ ಫಲಕದಲ್ಲಿ ಯಾಹೂ ಅಕೌಂಟ್ ಕಾಣಿಸಿತ್ತಿರುವುದನ್ನು ಗಮನಿಸಿ.
07.48 Inbox ನ ಮೇಲೆ ಕ್ಲಿಕ್ ಮಾಡಿ.
07.50 ಯಾಹೂ ಅಕೌಂಟ್ ನಲ್ಲಿರುವ ಎಲ್ಲಾ ಮೇಲ್ ಗಳು ಇಲ್ಲಿ ಡೌನ್ ಲೋಡ್ ಆಗಿರುತ್ತವೆ.
07.55 ನೀವು ಥಂಡರ್ ಬರ್ಡ್ ಅನ್ನು ಬಳಸಿ ಯಾಹೂ ಮತ್ತು ಜೀಮೇಲ್ ಅಕೌಂಟ್ ನಿಂದ ಪಡೆದಿರುವ ಎಲ್ಲಾ ಮೆಲ್ ಗಳನ್ನು ನೋಡುವುದರೊಂದಿಗೆ,
08.01 ಒಂದೇ ಕೆಲಸದ ಮೂಲಕ 2 ಅಕೌಂಟ್ ಗಳನ್ನು ಕೂಡ ನಿರ್ವಹಿಸಬಹುದು!
08.05 ಈಗ ಥಂಡರ್ ಬರ್ಡ್ ನಲ್ಲಿನ ಈ-ಮೇಲ್ ಅಕೌಂಟ್ ಗಳಿಗೆ ಲಭ್ಯವಿರುವ preference settings ಅನ್ನು ಗಮನಿಸಿ,
08.13 ನೀವು
08.14 ಜೀಮೆಲ್ ಅಕೌಂಟ್ ನಲ್ಲಿ ಸಂಗ್ರಹವಾಗಿರುವ, ಥಂಡರ್ ಬರ್ಡ್ ನ ಮೂಲಕ ಕಳುಹಿಸಿರುವ ಮೇಲ್ ಗಳ ನಕಲು ಪ್ರತಿ (copy)ಯನ್ನು ಪಡೆಯಲು ,
08.20 ರೀಪ್ಲಾಯ್(reply) ಮಾಡುವಾಗ ಮೂಲ (original) ಮೆಸೇಜ್ ಅನ್ನು ಕೋಟ್ (Quote) ಮಾಡಲು,
08.24 ಜಂಕ್ ಮೆಸೇಜ್ ಅನ್ನು ಗುರುತಿಸಲು,
08.26 ಕಂಪ್ಯೂಟರ್ ಡಿಸ್ಕ್ ನಲ್ಲಿ ಅವಕಾಶವಿಲ್ಲದಿದ್ದಲ್ಲಿ ಕೆಲ ನಿರ್ದಿಷ್ಟ ಮೆಸೇಜ್ ಗಳನ್ನು ಡೌನ್ ಲೋಡ್ ಮಾಡದಿರಲು ಬಯಸಿದಾದಲ್ಲಿ,
08. 34 ಎಡ ಫಲಕದಿಂದ ಜೀಮೇಲ್ ಅಕೌಂಟ್ ಅನ್ನು ಸೆಲೆಕ್ಟ್ ಮಾಡಿ.
08.38 Thunderbird Mail ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
08.42 ಬಲ ಫಲಕದಿಂದ, Accounts ನ ಅಡಿಯಲ್ಲಿ, View Settings for this account ಅನ್ನು ಕ್ಲಿಕ್ ಮಾಡಿ.
08.47 Account Settings ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
08.50 ಎಡ ಫಲಕದಿಂದ ಪುನಃ ಜೀಮೇಲ್ ಅಕೌಂಟ್ ಅನ್ನು ಕ್ಲಿಕ್ ಮಾಡಿ. Server Settings ನ ಮೇಲೆ ಕ್ಲಿಕ್ ಮಾಡಿ.
08.58 Server Settings ಗಳು ಬಲ ಫಲಕದಲ್ಲಿ ಕಾಣಿಸುತ್ತವೆ.
09.02 Check for new messages every ನ ಚೆಕ್ ಬಾಕ್ಸ್ ನಲ್ಲಿ 20 ಎಂದು ನಮೂದಿಸಿ.
09.08 ಈಗ ಥಂಡರ್ ಬರ್ಡ್ ಪ್ರತಿ 20 ನಿಮಿಷಗಳಿಗೊಮ್ಮೆ ಮೆಸೇಜ್ ಗಳ ಹುಡುಕಾಟವನ್ನು ಮಾಡುತ್ತದೆ.
09.12 Empty Trash on Exit ಬಾಕ್ಸ್ ಅನ್ನು ಪರಿಶೀಲಿಸಿ.
09.15 Trash ಫೊಲ್ಡರ್ ನಲ್ಲಿರುವ ಎಲ್ಲಾ ಮೆಸೇಜ್ ಗಳು ಥಂಡರ್ ಬರ್ಡ್ ನಿಂದ ಎಕ್ಸಿಟ್ ಆಗಬೇಕಾದರೆ ಡಿಲೀಟ್ ಆಗುತ್ತವೆ.
09.22 ಇದೇ ರೀತಿಯಲ್ಲಿ ನೀವು ಸರ್ವರ್ ಸೆಟ್ಟಿಂಗ್ ಗಳನ್ನು ವ್ಯವಸ್ಥಿತ (customize) ಗೊಳಿಸಬಹುದು.
09.27 ಇದೇ ರೀತಿಯಲ್ಲಿ ಈ ಕೆಳಗಿನ ಕೆಲಸಗಳಿಗೆ ನಾವು ಆಯ್ಕೆಗಳನ್ನು (options) ಗೊತ್ತುಪಡಿಸಬಹುದು :
09.30 ಮೇಲ್ ನ ನಕಲು ಪ್ರತಿ (copies) ಗಳನ್ನು ರಚಿಸಬಹುದು,
09.33 ಡ್ರಾಫ್ಟ್ ಮೇಲ್ ಗಳನ್ನು ಸೇವ್ ಮಾಡಬಹುದು,
09.35 ಮೇಲ್ ಗಳು ಸೇವ್ ಆಗಿರುವ ಸ್ಥಳವನ್ನು ಬದಲಿಸಬಹುದು.
09.39 ಎಡ ಫಲಕದಿಂದ, Copies & Folders ಅನ್ನು ಕ್ಲಿಕ್ ಮಾಡಿ.
09.44 ಬಲ ಫಲಕದಲ್ಲಿ Copies & Folders ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
09.49 ಡೀಫಾಲ್ಟ್ ಆಪ್ಷನ್ ಗಳನ್ನು ಬದಲಿಸಬೇಡಿ.
09.53 Place a copy in ಮತ್ತು Sent folder on ಈ ಎರಡು ಆಪ್ಶನ್ ಗಳು ಈಗಾಗಲೇ ಸೆಲೆಕ್ಟ್ ಆಗಿರುವುದನ್ನು ಗಮಿನಿಸಿ.
10.00 disk space ಅನ್ನು ಸೇವ್ ಮಾಡಲು ಸಂಬಂಧಿಸಿದ ಆಪ್ಷನ್ ಗಳನ್ನು ಗೊತ್ತುಪಡಿಸಲು, ಎಡ ಫಲಕದಿಂದ Disc Space ಅನ್ನು ಸೆಲೆಕ್ಟ್ ಮಾಡಿ.
10.08 ಈಗ ಬಲ ಫಲಕದಲ್ಲಿ, To save disc space, do not download ಎಂಬ ಆಪ್ಷನ್ ಅನ್ನು ನೋಡಬಹುದು.
10.16 Messages larger than ಬಾಕ್ಸ್ ಅನ್ನು ಪರಿಶೀಲಿಸಿ.
10.19 KB ಕ್ಷೇತ್ರದಲ್ಲಿ 60 ಎಂದು ನಮೂದಿಸಿ.
10.24 ಥಂಡರ್ ಬರ್ಡ್ 60KB ಗಿಂತ ಜಾಸ್ತಿಯಿರುವ ಮೆಸೇಜ್ ಗಳನ್ನು ಡೌನ್ ಲೋಡ್ ಮಾಡುವುದಿಲ್ಲ.
10.30 ಥಂಡರ್ ಬರ್ಡ್ ನ ಇನ್ನೊಂದು ಉಪಯುಕ್ತವಾದ ವೈಶಿಷ್ಟ್ಯತೆ ಎಂದರೆ ಅನುಪಯುಕ್ತ (ಜಂಕ್) ಮೆಸೇಜ್ ಗಳನ್ನು ಗುರುತಿಸುವುದು.
10.35 ನೀವು ಥಂಡರ್ ಬರ್ಡ್ ಗೆ ಅನುಪಯುಕ್ತ (ಜಂಕ್) ಮತ್ತು ಉಪಯುಕ್ತ (ನಾನ್ ಜಂಕ್) ಮೆಸೇಜ್ ಗಳನ್ನು ಗುರುತಿಸುವ ತರಬೇತಿಯನ್ನು ಕೊಡಬಹುದು.
10.41 ಅದನ್ನು ಮಾಡಲು ಮೊದಲು Junk ಸೆಟ್ಟಿಂಗ್ ಗಳನ್ನು ಗೊತ್ತುಪಡಿಸಿ ಮತ್ತು ಮೇಲ್ ಗಳನ್ನು “ junk “ ಮತ್ತು “ non junk” ಎಂದು ಗುರುತಿಸಿ.
10.48 ಮೊದಲು, ಕೃತಕವಾಗಿ Junk ಮೇಲ್ ಗಳನ್ನು
10.52 ಪ್ರತಿ ಮೇಲ್ ಗೆ Junk Mail ಬಟನ್ ಅನ್ನು ಕ್ಲಿಕ್ ಮಾಡುವ ಮೂಲಕ ಗುರುತಿಸಿ.
10.56 ನಿಮ್ಮ ಆಯ್ಕೆಗಳನ್ನು ಆಧಾರಿಸಿ,
10.59 ಥಂಡರ್ ಬರ್ಡ್ ಸ್ವತಃ “junk” ಮೇಲ್ ಗಳನ್ನು ಗುರುತಿಸುತ್ತದೆ,
11.03 ಮತ್ತು Junk ಫೋಲ್ಡರ್ ಗೆ ವರ್ಗಾಯಿಸುತ್ತದೆ.
11.07 In the Account Settings ಡಯಲಾಗ್ ಬಾಕ್ಸ್ ನ ಎಡ ಫಲಕದಿಂದ ಅನ್ನು Junk Settings ಕ್ಲಿಕ್ ಮಾಡಿ.
11.13 ಬಲ ಫಲಕದಲ್ಲಿ Junk Settings ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
11.18 Enable adaptive junk mail controls for this account ಬಾಕ್ಸ್ ಡೀಫಾಲ್ಟ್ ನಿಂದಲೇ ಪರಿಶೀಲಿಸಲ್ಪಟ್ಟಿರುವುದನ್ನು ಗಮನಿಸಿ.
11.27 Do not mark mail as junk if the sender is in list ನ ಅಡಿಯಲ್ಲಿರುವ ಎಲ್ಲಾ ಆಪ್ಷನ್ ಗಳನ್ನು ಪರಿಶೀಲಿಸಿ.
11.35 Move new junk message to ಕ್ಷೇತ್ರವನ್ನು( field) ಸೆಲೆಕ್ಟ್ ಮಾಡಿ ಮತ್ತು Junk folder on ಆಪ್ಷನ್ ಅನ್ನು ಸೆಲೆಕ್ಟ್ ಮಾಡಿ. OK ಅನ್ನು ಕ್ಲಿಕ್ ಮಾಡಿ.
11.44 Inbox ನ ಮೇಲೆ ಕ್ಲಿಕ್ ಮಾಡಿ ಮತ್ತು ಮೊದಲ ಮೇಲ್ ಅನ್ನು ಸೆಲೆಕ್ಟ್ ಮಾಡಿ.
11.48 ಕೆಳಗಿನ ಫಲಕದಲ್ಲಿ ಮೇಲ್ ನ ಎಲ್ಲಾ ವಿಷಯಗಳು ಕಾಣಿಸುತ್ತವೆ.
11.52 Junk ಐಕಾನ್ ಅನ್ನು ಕ್ಲಿಕ್ ಮಾಡಿ.
11.54 ಹೆಡ್ದರ್ ನಲ್ಲಿ Junk Mail ಎಂದು ಕಾಣಿಸುತ್ತಿರುವುದನ್ನು ಗಮನಿಸಿ.
11.58 ಇದೇ ರೀತಿಯಲ್ಲಿ ಇತರ ಆಯ್ಕೆಗಳನ್ನು ಕೂಡ ಗೊತ್ತುಪಡಿಸಬಹುದು!
12.03 ಥಂಡರ್ ಬರ್ಡ್ ನಲ್ಲಿ ಕಾನ್ಫಿಗರ್ ಆಗಿರುವ ಮೇಲ್ ಅನ್ನು ಡಿಲೀಟ್ ಮಾಡಬಹುದೇ? ಹೌದು, ಮಾಡಬಹುದು
12.10 ಎಡ ಫಲಕದಿಂದ, STUSERONE@gmail dot com ಎಂಬ ಅಕೌಂಟ್ ಅನ್ನು ಆಯ್ಕೆ ಮಾಡಿ.
12.16 ಬಲ ಫಲಕದಿಂದ, Accounts ನ ಅಡಿಯಲ್ಲಿನ View Setting s for this account ಅನ್ನು ಸೆಲೆಕ್ಟ್ ಮಾಡಿ.
12.21 Account Settings ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
12.25 ಕೆಳಗಿನ ಎಡ ಮೂಲೆಯಲ್ಲಿ Account Actions ಅನ್ನು ಕ್ಲಿಕ್ ಮಾಡಿ, ನಂತರ Remove Account ಅನ್ನು ಕ್ಲಿಕ್ ಮಾಡಿ.
12.32 ಒಂದು ಎಚ್ಚರಿಸುವ (ವಾರ್ನಿಂಗ್) ಮೆಸೇಜ್ ಕಾಣಿಸುತ್ತದೆ.
12.35 OK ಯ ಮೇಲೆ ಕ್ಲಿಕ್ ಮಾಡಿದರೆ, ಅಕೌಂಟ್ ಡಿಲೀಟ್ ಅಗುತ್ತದೆ.
12.39 ಆದರೆ ಈ ಟ್ಯುಟೋರಿಯಲ್ ನ ಸಲುವಾಗಿ ನಾವೀಗ ಈ ಅಕೌಂಟ್ ಅನ್ನು ಡಿಲೀಟ್ ಮಾಡುವುದು ಬೇಡ.
12.45 ಹಾಗಾಗಿ Cancel ಅನ್ನು ಕ್ಲಿಕ್ ಮಾಡಿ.
12.47 ಈ ಡಯಲಾಗ್ ಬಾಕ್ಸ್ ಅನ್ನು ಕ್ಲೊಸ್ ಮಾಡೋಣ.
12.51 ನೆನಪಿಡಿ, ನಾವು ಯಾವ ಈ-ಮೇಲ್ ಅಕೌಂಟ್ ಅನ್ನು ಡಿಲೀಟ್ ಮಾಡುತ್ತೇವೋ,
12.53 ಆ ಈ-ಮೇಲ್ ಅಕೌಂಟ್ ಗೆ ಸಂಬಂಧಿಸಿದ
12.56 ಎಲ್ಲಾ ಫೋಲ್ಡರ್ ಮತ್ತು ಮೇಲ್ ಗಳು
12.58 ಥಂಡರ್ ಬರ್ಡ್ ನಿಂದ ಡಿಲೀಟ್ ಅಗುತ್ತವೆ.
13.00 ಅದಾದ ನಂತರವೂ ಕೂಡ ಅದರ ವಿವರಣೆ ಗಳು ಮೋಜಿಲಾ ಥಂಡರ್ ಬರ್ಡ್ (Mozilla Thunderbird)ವಿಂಡೊವಿನ ಎಡ ಫಲಕದಲ್ಲಿ ಕಾಣಿಸಿಕೊಳ್ಳಬಹುದು.
13.06 ಆದರೆ ಪುನಃ ಲಾಗ್ ಇನ್ ಆಗುವಾಗ ಅವು ಕಾಣಿಸಿಕೊಳ್ಳುವುದಿಲ್ಲ.
13.12 ಇಲ್ಲಿಗೆ Mozilla Thunderbird 10.0.2 ನ ಮೇಲಿನ ಈ ಟ್ಯುಟೋರಿಯಲ್ ಮುಕ್ತಾಯವಾಗುತ್ತದೆ.
13.18 ಈ ಟ್ಯುಟೋರಿಯಲ್ ನಲ್ಲಿ ನಾವು
13.20 ಈಮೇಲ್ ಅಕೌಂಟ್ ಗೆ ಹೊಸ ಫೋಲ್ಡರ್ ಅನ್ನು ಸೇರಿಸುವುದನ್ನು,
13.24 ಮೆಸೇಜ್ ಅನ್ನು ಹುಡಕಲು ಅಡ್ವಾನ್ಸ್ದ್ ಫಿಲ್ಟರ್ ಗಳನ್ನು(advanced filters) ಸೆಟ್ ಮಾಡಲು,
13.28 ಮೆಸೇಜ್ ಫಿಲ್ಟರ್ ಗಳನ್ನು ನಿರ್ವಹಿಸಲು ಕಲಿತಿದ್ದೇವೆ.
13.30 ಇದರೊಂದಿಗೆ ನಾವು:
13.32 ಕೃತಕವಾಗಿ (manually) ಯಾಹೂ (Yahoo) ಅಕೌಂಟ್ ಗಳನ್ನು ಸಂರಚಿಸಲು(Configure),
13.35 ಮಲ್ಟಿಪಲ್ ಈಮೇಲ್ ಅಕೌಂಟ್ ಗಳನ್ನು ನಿರ್ವಹಿಸಲು,
13.38 ಮೇಲ್ ಅಕೌಂಟ್ ನ ಅಕೌಂಟ್ ಸೆಟ್ಟಿಂಗ್ ಗಳನ್ನು ಬದಲಿಸಲು,
13.40 ಈಮೇಲ್ ಅಕೌಂಟ್ ಅನ್ನು ಅಳಿಸಲು (Delete) ಕಲಿತಿದ್ದೇವೆ.
13.44 ಇಲ್ಲಿ ನಿಮಗೊಂದು ಅಸೈನ್ ಮೆಂಟ್ ಕೊಡಲಾಗಿದೆ.
13.46 ಒಂದು ಈ-ಮೇಲ್ ಅಕೌಂಟ್ ಅನ್ನು ಕೃತಕವಾಗಿ ರಚಿಸಿ.
13.49 ಅಕೌಂಟ್ ಸೆಟ್ಟಿಂಗ್ ಅನ್ನು ಬದಲಾಯಿಸಿ.
13.52 archive ಮೆಸೇಜ್ ಗೆ ಪ್ರಿಫರೆನ್ಸ್(ಆಯ್ಕೆಗಳನ್ನು) ಅನ್ನು ಸೆಟ್ ಮಾಡಿ (ಗೊತ್ತುಪಡಿಸಿ).
13.56 ಜಂಕ್ ಸೆಟ್ಟಿಂಗ್ ಗೆ ಆಯ್ಕೆ (ಪ್ರಿಫರೆನ್ಸ್) ಅನ್ನು ಬದಲಾಯಿಸಿ.
14.00 ಒಂದು ಈ-ಮೇಲ್ ಅಕೌಂಟ್ ಅನ್ನು ಡಿಲೀಟ್ ಮಾಡಿ.
14.02 ಈ ಕೆಳಗಿನ ಲಿಂಕ್ ಗಳನ್ನು ಬಳಸಿ ವೀಡಿಯೋಗಳನ್ನು ನೋಡಿ ,
14.05 ಅಲ್ಲಿ ಸ್ಪೋಕನ್ ಟ್ಯುಟೋರಿಯಲ್ ನ ಸಾರಾಂಶವು ಲಭ್ಯವಾಗುತ್ತದೆ.
14.09 ನಿಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ.
14.13 ಈ ಪಾಠವನ್ನಾಧರಿಸಿ ಸ್ಫೋಕನ್ ಟ್ಯುಟೋರಿಯಲ್ ನ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.
14.15 ಯಾರು ಆನ್¬-ಲೈನ್ ಪರೀಕ್ಷೆಯಲ್ಲಿ ಉತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
14.22 ಹೆಚ್ಚಿನ ಮಾಹಿತಿಗಾಗಿ, contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
14.29 ಈ ಪಾಠವು Talk to a Teacher project ಎಂಬ ಪರಿಯೋಜನೆಯ ಭಾಗವಾಗಿದೆ.
14.33 ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
14.40 ಈ ಮಿಶನ್ ನ ಬಗೆಗಿನ ಹೆಚ್ಚಿನ ಮಾಹಿತಿಯು spoken hyphen tutorial dot org slash NMEICT hyphen Intro ದಲ್ಲಿ ಲಭ್ಯ.
14.51 ಈ ಟ್ಯುಟೋರಿಯಲ್ ನ ಅನುವಾದಕ ಪ್ರಜ್ವಲ ಮತ್ತು ಪ್ರವಾಚಕ ಐ.ಐ.ಟಿ ಬಾಂಬೆಯಿಂದ ವಾಸುದೇವ ಧನ್ಯವಾದಗಳು.

Contributors and Content Editors

PoojaMoolya, Vasudeva ahitanal